Friday, 14 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 346 ಮುಗೇರ ಕಾಳು ©ಡಾ.ಲಕ್ಷ್ಮೀ ಜಿ ಪ್ರಸಾದ

ಎರಡು ತಿಂಗಳ ಹಿಂದೆ ಶಕ್ತಿ ನಗರದ ಜೋಕುಲ ಸಾನ ಕಾಂತಾಬಾರೆ ಬೂದಾಬಾರೆಯರ ಕ್ಷೇತ್ರ, ಕಾರ್ನಾಡು,ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯ ಮಾಡಿ ಹಿಂತಿರುಗುವಾಗ ಮಂಗಳೂರು ಜೆಪ್ಪಿನ ಮುಗರು ಸಮೀಪದ ಮುಗೇರ ಪಡ್ಪಿನಲ್ಲಿ ನಡೆಯುವ ಮುಗೇರ ದೈವಗಳ ನೇಮಕ್ಕೆ ಹೋಗಿದ್ದೆ .ಅಲ್ಲಿ ಮುಗೇರ ಕಾಳು ಎಂಬ ಈ ತನಕ ಹೆಸರು ಕೂಡ ದಾಖಲಾಗದ ಅಪರೂಪದ ದೈವಕ್ಕೆ ಆರಾಧನೆ ಇರುವ ಬಗ್ಗೆ ಪ್ರಕಾಶ್ ಮಾರ್ಪಾಡಿ ಅವರು ತಿಳಿಸಿದ್ದರು
ನಾವು ಅಲ್ಲಿಗೆ ತಲುಪುವಾಗ ರಾತ್ರಿ ಎರಡೂವರೆ ಗಂಟೆ ಆಗಿತ್ತು ಮುಗೇರ ಕಾಳು ದೈವದ ನೇಮ ಅಗುತ್ತಾ ಇತ್ತು .ಮುಖಕ್ಕೆ ನಸು ನೀಲಿ ಬಣ್ಣ ಹಚ್ಚಿದ ಮಹಿಳೆಯ ಸರಳ ವೇಷಭೂಷಣ ಈ ದೈವಕ್ಕೆ ಇದೆ .
ಮುಗೇರ ಪಡ್ಪಿನಲ್ಲಿ ಮುಗೇರ ಸಮುದಾಯಕ್ಕೆ ಸೇರಿದ ಕಾಳು ಎಂಬ ಹೆಸರಿನ ಮಹಿಳೆಯೊಬ್ಬರು ಮಾಂಕಾಳಿ ದೈವದ ಅನನ್ಯ ಭಕ್ತೆಯಾಗಿದ್ದರು ಅಲ್ಲಿ ಮಾಂಕಾಳಿ ಯನ್ನು ಆರಾಧನೆಯನ್ನು ಆರಂಭಿಸಿದವರು ಅವರು .
ಮಾಂಕಾಳಿಯನ್ನು ಅನವರತ ಆರಾಧನೆ ‌ಮಾಡಿದ ಕಾಳು ನಂತರ ಅದೇ ದೈವದ ಸೇರಿಗೆ ಸಂದು ಮುಗೇರ ಕಾಳು ಎಂಬ ಹೆಸರಿನ ದೈವವಾಗಿ ನೆಲೆ ನಿಲ್ಲುತ್ತಾಳೆ .
ಪ್ರಧಾನ ದೈವದ ಆರಾಧಕರು,ದೈವದ ಆರಾಧನೆ ಯನ್ನು ಅ ಪರಿಸರದಲ್ಲಿ ಆರಂಬಿಸಿದ ಮೊದಲಿಗರು ಅದೇ ದೈವದ ಸೇರಿಗೆಗೆ ಸಂದು ದೈವವಾಗಿ ನೆಲೆ ನಿಲ್ಲುವ ವಿದ್ಯಮನ ತುಳುನಾಡಿನ ಹಲವೆಡೆ ಕಾಣಿಸಿಕೊಂಡಿದೆ .ವೀರ ಭದ್ರನನ್ನು ಅರಾಧಿಸಿದ ಅಡ್ಕತ್ತಾಯ ಹಿರಿಯಡಕದಲ್ಲಿ ದೈವವಾಗಿದ್ದಾನೆ .ರಕ್ತೇಶ್ವರಿ ಯನ್ನು  ಆರಾಧನೆ ಮಾಡಿದ ಅಕ್ಕಚ್ಚು ಎಂಬ ಜೈವ ಅರಸಿ ದೈವವಾಗಿದ್ದಾಳೆ .ವೈದ್ಯನಾಥ ದೈವವನ್ನು ಸುಜೀರ್ ನಲ್ಲಿ ಆರಾಧನೆ ‌ಮಾಡಿದ ಜಾನು ನಾಯ್ಕ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ
ಅಂತೆಯೇ ಮುಗೇರ ಪಡ್ಪಿನಲ್ಲಿ ಮಾಂಕಾಳಿಯನ್ನು ಆರಾಧಿಸಿದ ಮುಗೇರ ಸಮುದಾಯದ ಮಹಿಳೆ ಮುಗೇರ ಕಾಳು ಎಂಬ ಹೆಸರಿನಲ್ಲಿ  ದೈವತ್ವ ಪಡೆದು  ಆರಾಧಿಸಲ್ಪಡುತ್ತಿದ್ದಾಳೆ.
ಮಾಹಿತಿ

No comments:

Post a Comment