Friday, 14 April 2017

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 347 ಕೋಲು ಭಂಡಾರಿ ©ಡಾ.ಲಕ್ಷ್ಮೀ ಜಿ ಪ್ರಸಾದ



Copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ
 ಉಳ್ಳಾಕುಲು ನೇಮದ ಆರಂಭದಲ್ಲಿ ಒಂದು ಸೇರಿಗೆ ದೈವಕ್ಕೆ ಆರಾಧನೆ ಇರುತ್ತದೆ .ಆ ದೈವ ನಂತರ ಉಳ್ಳಾಕುಲು ನೇಮ ಆಗುವಾಗ ದೈವಕ್ಕೆ ಕೊಡೆ ಹಿಡಿಯುವ ಕೆಲಸವನ್ನು ಮಾಡುತ್ತದೆ .ಆ ದೈವವನ್ನು ಕೋಲು ಭಂಡಾರಿ ಎಂದು ಕರೆಯುತ್ತಾರೆ .
ಕೋಲು ಭಂಡಾರಿ ,ಕೋಲು ಮೇಸ್ತ್ರಿ ಎಂಬುದು ಒಂದು ಪ್ರಮುಖ ಹುದ್ದೆ .ಅರಮನೆ ಅಥವಾ ದೇವಾಲಯ ದ ಮೇಲುಸ್ತುವಾರಿ  ನೋಡಿಕೊಳ್ಳಲು ನೇಮಿಸುವ ಅಧಿಕಾರಿ ಈತ .
ತುಳುನಾಡಿನ ದೈವಗಳು ಮಣ್ಣಿನ ಸತ್ಯವನ್ನು ಎತ್ತಿ ಹಿಡಿಯುವ ಶಕ್ತಿಗಳು ಹಾಗಾಗಿ ಅಪ್ರಾಮಾಣಿಕತೆ ದ್ರೋಹ ವಂಚನೆಯನ್ನು ಸಹಿಸುವುದಿಲ್ಲ ,ದ್ರೋಹ ಎಸಗಿದವರನ್ನು ದೈವಗಳು ಮಾಯ ಮಾಡಿ ತನ್ನ ಸೇರಿಗೆ ಸೇರಿಸಿಕೊಳ್ಳುವ ವಿದ್ಯಮಾನ ಕೆಲವೆಡೆ ಕಂಡು ಬಂದಿದೆ ,ಶಿರಾಡಿ ದೈವಕ್ಕೆ ದ್ರೋಹ ಮಾಡಿದ ರುದ್ರಪ್ಪ ಗೌಡ ಎಂಬಾತನನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡಿದೆ ಸೇರಿಗೆ ದೈವವಾದ ರುದ್ರಪ್ಪ ಗೌಡ ಕಾಲಾಂತರದಲ್ಲಿ ಚಾಮುಂಡಿ ಯೊಂದಿಗೆ ಸಮಿಕರಣಗೊಂಡು ರುದ್ರ ಚಾಮುಂಡಿ ಯಾಗಿ ಆರಾಧನೆ ಪಡೆಯುತ್ತಾನೆ .ದೈವದ ಆಗ್ರಹಕ್ಕೆ  ತುತ್ತಾದ ಅರಬ್ ಖರ್ಜೂರ ವ್ಯಾಪಾರಿ ಮಾಯವಾಗಿ ಅರಬ್ ಭೂತವಾಗಿದ್ದಾನೆ .
ಅಂತೆಯೇ ಕೋಲು ಭಂಡಾರಿಯಾಗಿ ಕೆಲಸ ಮಾಡುತ್ತಿದ್ದ ಮಡಿವಾಳ ಸಮುದಾಯಕ್ಕೆ ಸೇರಿದ ವ್ಯಕ್ತಿ ದೈವಕ್ಕೆ ದ್ರೋಹ ಎಸಗುತ್ತಾನೆ .ಆಗ ಕೋಪಿಸಿಕೊಂಡ ಉಳ್ಳಾಕುಲು ದೈವ ಆತನನ್ನು ಮಾಯಕ ಮಾಡುತ್ತದೆ ಆಗ ತಪ್ಪಿ ಒಪ್ಪಿಕೊಂಡು ಭಕ್ತಿಯಿಂದ ಪ್ರಾರ್ಥನೆ ಮಾಡಲು ಆತನನ್ನು ತನ್ನ ಸೇರಿಗೆಗೆ ಸೇರಿಸಿಕೊಂಡು ಕೊಡೆ ಹಿಡಿಯುವ ಕಾಯಕವನ್ನು ಉಳ್ಳಾಕುಲು ದೈವ ನೀಡುತ್ತದೆ .ಆತ ಕೋಲು ಭಂಡಾರಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ .ಬೆದ್ರಡ್ಕದ ಬಂಡಿಯಲ್ಲಿ ಕೂಡ ಕೋಲು ಭಂಡಾರಿ ಯ ಪಾಪೆ ಇದೆ © ಡಾ ಲಕ್ಷ್ಮೀ ಜಿ ಪ್ರಸಾದ
Copy rights reserved©Dr Lakshmi G Prasad, Lecturer in Kannada ,Govt Pu college, Nelamangala Bangalore

No comments:

Post a Comment