Sunday, 16 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು348 ಮನವಾಟ್ಟಿ ಬೀಬಿ ©ಡಾ.ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನ ಭೂತಾರಾಧನೆಯಲ್ಲಿ ಸಾಮಾಜಿಕ ಸಾಮರಸ್ಯ ಹಾಸುಹೊಕ್ಕಾಗಿ ಬೆಳೆದು ಬಂದಿದೆ .ಇಲ್ಲಿ ಯಾರು ಯಾವಾಗ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ
ಇಲ್ಲಿ ಅನೇಕ ಕನ್ನಡಿಗರು ದೈವಗಳಾಗಿದ್ದಾರೆ ಜೈನರು ಮುಸ್ಲಿಮರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ
ಮನವಾಟ್ಟಿ ಬೀಬಿ ಕೂಡ ಇಂತಹ ಒಂದು ಅಪರೂಪದ ದೈವ .ಈ ದೈವ ವನ್ನು ಹಿಂದು ಮುಸ್ಲಿಮರು ಇಬ್ಬರೂ ಆರಾದಿಸುತ್ತಾರೆ ಹಿಂದುಗಳು ಮನವಾಟ್ಟಿ ಅಮ್ಮ ಎಂದು ಕರೆಯುತ್ತಾರೆ ಮುಸ್ಲಿಮರು ಮನವಾಟ್ಟಿ ಬೀಬಿ ಎಂದು ಕರೆಯುತ್ತಾರೆ
ಕಾಸರಗೋಡಿನ ಪೈಕ ಕಿನ್ನಿ ಮಾಣಿ ಪೂಮಾಣಿ ದೇವಸ್ಥಾನ ದಲ್ಲಿ ಒಂದು ಕಲ್ಲು ಹಾಕಿ ದೀಪ ಇಟ್ಟು ಮನವಾಟ್ಟಿ ದೈವವನ್ನು ಆರಾಧಿಸುತ್ತಾರೆ .ಅಲ್ಲಿಗೆ ಸಮೀಪದಲ್ಲಿ ಮುಸ್ಲಿಮರು ಮಸೀದಿ ಕಟ್ಟಿ ಮನವಾಟ್ಟಿ ಬೀಬಿ ಎಂದು ಆರಾಧಿಸುತ್ತಾರೆ ಅಲ್ಲಿ ಆಕೆಯದು ಎಂದು ಹೇಳಲಾಗುವ ಸಮಾದಿ/ ಗೋರಿ  ಇದೆ
ಈ ದೈವದ ಬಗ್ಗೆ ಅನೇಕ ರೀತಿಯ ಐತಿಹ್ಯ ಗಳು ಪ್ರಚಲಿತವಿವೆ .ಕಿನ್ನಿಮಾಣಿ ಪೂಮಾಣಿ ಬರುವಾಗ ಅವರ ತಂಗಿಯೂ ಜೊತೆಗೆ ಅಲ್ಲಿಗೆ ಬರುತ್ತಾಳೆ ನಡೆಯುತ್ತಾ ಬರುವಾಗ ಅವಳು ಸ್ವಲ್ಪ ಹಿಂದೆ ಉಳಿಯುತ್ತಾಳೆ ಆಗ ಅವಳನ್ನು ನೋಡಿ ಸುತ್ತ ಮುತ್ತ ಲಿನ ಜನ ಸುತ್ತುವರಿದು ಅವಳಿಗೆ ಮುಂದ ಬರಲು ಆಗುವುದಿಲ್ಲ ಉಳ್ಳಾಕುಲು ಹಿಂದ ತಿರುಗಿ ನೋಡುವಾಗ ಅವಳು ಕಣ್ಣೀರು ಹಾಕುತ್ತಾಳೆ .ಆಗ ಉಳ್ಳಾಕುಲು ಅವಳನ್ನು ಮಾಯ ಮಾಡಿ ಅಲ್ಲಿ ನೆಲೆಸು ಎಂದು ಅನುಗ್ರಹಿಸುತ್ತಾರೆ ಅಲ್ಲಿದ್ದ ಮುಸ್ಲಿಂ ಸಮುದಾಯದ ಜನರು ಅವಳಿಗೆ ಮಸೀದಿ ಕಟ್ಟಿ ಆರಾಧಿಸುತ್ತಾರೆ .ಹಿಂದುಗಳು ಕಲ್ಲು ಹಾಕಿ ಆರಾಧಿಸುತ್ತಾರೆ .ಇನ್ನೊಂದು ಐತಿಹ್ಯ ದ ಪ್ರಕಾರ  ಅಲ್ಲಿ ಸೊಪ್ಪು ಸೌದೆ ತರಲು ಹೋದ ಹೆಂಗಸರಿಗೆ ಓರ್ವ ಸುಂದರ ಹೆಣ್ಣು. ಮಗಳು ಕಾಣಿಸುತ್ತಾಳೆ ಅದು ಕೇಳಿ ಜನರು ಸೋಜಿಗದಿಂದ ಅವಳಾರು ಎಂದು ನೋಡಲು ಬಂದಾಗ ಅವಳು ಮಾಯವಾಗಿರುತ್ತಾಳೆ .ನಂತರ ಅವಳಿಗೆ ದೈವಿಕ ಶಕ್ತಿ ಲಭಿಸಿ ಜನರು ಅವಳನ್ನು ಆರಾಧಿಸಿದರು .ಮತ್ತೊಂದು ಐತಿಹ್ಯ ‌ಪ್ರಕಾರ ಆಕೆ ಓರ್ವ ಮದುಮಗಳು ಉಳ್ಳಾಕುಲು ಬರುವಾಗ ದಾರಿಯಲ್ಲಿ ಅವರನ್ನು ಹಿಂಬಾಲಿಸಿ ಬರುತ್ತಾಳೆ ನಂತರ ದೈವತ್ವ ಪಡೆದು ಆರಾಧನೆ ಹೊಂದುತ್ತಾಳೆ.ಅಲ್ಲಿ ಕಾಣಿಸಿಕೊಂಡ ಶಕ್ತಿ ಬ್ರಾಹ್ಮಣ ಮದುಮಗಳ ರೂಪ ದಲ್ಲಿ ಇದ್ದಳು ಅವಳು ಓರ್ವ ಬ್ರಾಹ್ಮಣ ಹುಡುಗಿ ಎಂದು ಐತಿಹ್ಯ ವಿದೆ
ಈ ದೈವಕ್ಕೆ  ನೆಲ್ಲಿಕುನ್ನುವಿನಲ್ಲಿ ಆರಾಧನೆ ಇದೆ ಆದರೆ ಇಲ್ಲಿ ಈ ದೈವವನ್ನು ಮಾನೆಚ್ಚಿ/ ಬ್ಯಾರ್ದಿ ಭೂತದ ಜೊತೆ ಸಮೀಕರಿಸಲಾಗಿದೆ .ಅಲ್ಲಿ ಆಕೆಯನ್ನು ಮಾನೆಚ್ಚಿ ಎಂದು ಕರೆದಿದ್ದಾರೆ .   ಮಾನೆಚ್ಚಿ ಮತ್ತು ಮನವಾಟ್ಟಿ ಬೀಬಿ ಬೇರೆ ಬೇರೆ ದೈವಗಳು ಇಲ್ಲಿ ಮನವಾಟ್ಟಿ ದೈವಕ್ಕೆ ಸಾಂಕೇತಿಕವಾಗಿ ವಾಗಿ  ಆರಾಧನೆ ಮಾಡಿ ಮಾನೆಚ್ಚಿ ಯ ಆರಾಧನೆ ಮಾಡುತ್ತಾರೆ ಮಾನೆಚ್ಚಿ ಮೂಲತಃ ಮುಸ್ಲಿಂ ‌ಮಹಿಳೆ ಬಬ್ಬರ್ಯ ಕೋಲವನ್ನು‌ ಹೆಂಗಸರು ನೋಡಬಾರದೆಂಬ ನಿಯಮವಿದೆ ಇದನ್ನು ಮೀರಿ ಬಬ್ಬರ್ಯ ಕೋಲ ವನ್ನು ನೋಡಿದ ಮುಸ್ಲಿಂ ‌ಮಹಿಳೆ ಮಾಯವಾಗಿ ಬಬ್ಬರ್ಯ ನ ಸೇರಿಗೆಗೆ ಸಂದು ಆರಾಧನೆ ಹೊಂದುತ್ತಾಳೆ .ಇಲ್ಲಿ ಈ ದೈವ ಮುಸ್ಲಿಮರ ನಮಾಜ್ ಪಾಟ್ ಬಾಂಕ್ ಮೊದಲಾದ ಸಂಪ್ರದಾಯಗಳ ಅಭಿನಯವನ್ನು ಮಾಡುತ್ತದೆ ಜೊತೆಗೆ ಹಾಸ್ಯಅಭಿವ್ಯಕ್ತಿ ಕೂಡ ಇದೆ ©ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ಶಿವರಾಮ ಪೈಕ,ಕುಂಞಿ ರಾಮ ಮಾಸ್ಟರ್ ಅವರಿಗೆ ಧನ್ಯವಾದಗಳು

4 comments:

  1. ನೆಲ್ಲಿಕುಂಜೆ ಈಗ ಮಳಯಾಳೀಕರಣಗೊಂಡು ನಲ್ಲಿಕುನ್ನು ಆಗಿದೆ
    ಹಾಗೆಯೇ ಪಿಲಿಕುoಜೆ, ಪoಜಿಗುಡ್ಎ

    ReplyDelete
  2. OK ಮಾಹಿತಿಗಾಗಿ ಧನ್ಯವಾದಗಳು

    ReplyDelete
  3. OK ಮಾಹಿತಿಗಾಗಿ ಧನ್ಯವಾದಗಳು

    ReplyDelete
  4. ಓಕೆ ಮಾಹಿತಿಗಾಗಿ ಧನ್ಯವಾದಗಳು

    ReplyDelete