Thursday 27 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು349 ಕೋರಚ್ಚನ್ ©ಡಾ ಲಕ್ಷ್ಮೀ ಜಿ ಪ್ರಸಾದ

ಕಾಸರಗೋಡು ಸುತ್ತಲಿನ ದೈವಾರಾಧನೆ ಯ ಭಾಷೆ ವೇಷ ಭೂಷಣ ಗಳಲ್ಲಿ ಭಿನ್ನತೆ ಇದೆ .ಆದರೆ ಇದು ಭೂತಾರಾಧನೆಯೇ ಹೊರತು ಬೇರೆ ಆರಾಧನಾ ಪದ್ಧತಿಯಲ್ಲ ಭೂತಾರಾಧನೆಯಲ್ಲಿಯೂ ಪ್ರಾದೇಶಿಕ ವೈವಿಧ್ಯತೆ ಕಾಣಿಸುತ್ತದೆ ಕಾಸರಗೋಡು ಸುತ್ತಲಿನ ಪರಿಸರದ ಭಾಷೆ ಮಲೆಯಾಳ ಹಾಗಾ್ಇ ದೈವಗಳ ಭಾಷೆಯೂ ಮಲೆಯಾಳವೇ ಆಗಿದೆ ಕಥಕ್ಕಳಿ ಹಾಗೂ ಇತರ ಕಲೆಗಳ ಪ್ರಭಾವದಿಂದಾಗಿ ವೇಷ ಭೂಷಣ ದಲ್ಲಿ ಭಿನ್ನತೆಗಳಿವೆ ಆದರೆ ಮೂಲ ಕಥಾನಕ ಗಳಲ ತುಂಬಾ ಸಾಮ್ಯತೆ ಇದೆ .
ದುರಂತ ಮತ್ತು ದೈವತ್ವ ತುಳುನಾಡಿನಲ್ಲಿ ಅಲ್ಲಲ್ಲಿ ಕಮಡುಬರುವ ವಿಶೇಷ ತೆಯಾಗಿದೆ .ಕೋಟಿ ಚೆನ್ನಯರು ನ್ನು ಅನುಸರಿಸಲು ಹೋಗಿ ಸುರಿಯ ಹಾಕಿ ಕೊಂಡ ಮುಸ್ಲಿಮ ಮಕ್ಕಳು ದುರಂತವನ್ನಪ್ಪಿ ನಂತರ ದೈವತ್ವ ಪಡೆದು ಆರಾಧನೆ ಹೊಂದುತ್ತಾರೆ ಅಂತೆಯೇ ಮಂಗಳೂರು ಶಕ್ತಿ ನಗರದ ಸಮೀದ ಜೋಕುಲ ಸ್ಥಾನದಲ್ಲಿ ಜುಮಾದಿ ದೈವಕ್ಕೆ ಕೋಳಿ ಬಲಿಕೊಡುವುದನ್ನು ಅನುಕರಿಸುವ ಇಬ್ಬರು ಮಕ್ಕಳು ಅದೇ ದೈವದ ಸಾನಿಧ್ಧ್ಯದಲ್ಲಿ ದೈವಿಕತೆ ಪಡೆದು ಆರಾಧನೆ ಹೊಂದುತ್ತಾರೆ
ಎರಡು ಮನೆಗಳ ಜನರ ನಡುವಿನ ಜಗಳ ಬಿಡಿಸಲು ಹೋಗಿ ಏಟು ತಿಂದ ಪೋಲೀಸ್ ಓರ್ವ ದೈವತ್ವ ಪಡೆದು ಪೋಲಿಸ್ ತೆಯ್ಯಂ ಆಗಿ ಆರಾಧನೆ ಹೊಂದುತ್ತಾನೆ
ಕೋರಚ್ಚನ್ ತೆಯ್ಯಂ ನ ಹಿನ್ನೆಲೆಯಲ್ಲಿ ಯೂ ಇಂತಹ ಒಂದು ದುರಂತ ಕಥನಕವಿದೆ
ವತನಾಟ್ ಕುಲವನ್ ದೈವವು ಕಂಡನಾರ್ ಕೇಳನ್ ಮೊದಲದ ತೆಯ್ಯಂ ಜೊತೆಗೆ ಕಣ್ಣುಋಉ ಕಡೆಗೆ ಬಂದು ಕೋಟೆಪ್ಪಾರ್ ತರವಾಡಿನಲ್ಲಿ ನೆಲೆಯಾಗುತ್ತದೆ ಅಲ್ಲಿ ಕೋಟೆಪ್ಪಾರ್ ತರವಾಡಿನಲ್ಲಿ ಕುಂಞಿ ಕೋರನ್ ಎಂಬಾತ ಬ ವಯನಾಟ್ ಕುಲವನ್ನು ದೈವದ ಪಾತ್ರಿಯಾಗಿ / ಬೆಳ್ಚಪ್ಪಾಡನಾಡಿ ಭಕ್ತಿಯಿಂದ  ದೈವಂ ಕಟ್ಟು ಉತ್ಸವವನ್ನು ಮಾಡಿ ಆರಾಧಿಸುತ್ತಾ ಇರುತ್ತಾರೆ .ಒಂದು ವರ್ಷ ಆರಾಧನೆ ಯಾಗುವಾಗ ದೈವಾವೇಶ ಬಂದಾಗ ದೈವದ ಕತ್ತಿ ತಾಗಿ ಆತನ ಮರಣ ಉಂಟಾಗುತ್ತದೆ ಆಗ ಕೋಟೆಪ್ಪಾರ್ ಮನೆಗೆ ಸೂತಕ ಬಂದು ತೆಯ್ಯಂ ಕಟ್ಟು ನಿಲ್ಲುವ ಸಂದರ್ಭ ಉಂಟಾಗುತ್ತದೆ ಆಗ ವಯನಾಟ್ ಕುಲವನ್ ತೆಯ್ಯಂ ವೆಳ್ಳಾಟವಾಗುತ್ದಾ ಇದ್ದು ಮನೆ ಮಂದಿ ಏನು‌ಮಾಡಬೇಕೆಂದು ದೈವದಲ್ಲಿ ಅರಿಕೆ ಮಾಡುತ್ತಾರೆ ಆಗ ದೈವ ಕುಂಞಿ ಕೋರನ್ ದೇಹವನ್ನು ತರವಾಡನ ಮನೆಯ ಒಳಗೆ ನಡು ಕೋಣೆಯಲ್ಲಿ ಮಲಗಿಸಲು ಹೇಳುತ್ತದೆ ಅಲ್ಲಿಂದ ದೈವ ಆತನ ಹೆಸರನ್ನು ಕರೆದಾಗ ಆತನಿಗೆ ಜೀವಕಳೆ ಬಂದು ಆತ ಓಗುಡುತ್ತಾನೆ ನಂತರ ದೈವಂಕಟ್ಟು ಮುಂದುವರಿಯುತ್ತದೆ ಉತ್ಸವದ ಕೊನೆಯಲ್ಲಿ ವಯನಾಟ್ ಕುಲವನ್ ದೈವ ಕುಂಞಿ ಕೋರನನ್ನು ತನ್ನ ಸೇಇಗೆಗೆ ಸೇರಿಸಿಕೊಳ್ಳುತ್ತದೆ ಅಲ್ಲಿಂದ ಮುಂದೆ ಆತನಿಗೆ ಅಲ್ಲಿ ಕೋರಚ್ಚನ್ ತೆಯ್ಯಂ ಆಗಿ ಆರಾಧನೆ ಹೊಂದುತ್ತಾನೆ  

ಮಾಹಿತಿ ನೀಡಿದ  ಹಾಗೂ ಫೋಟೋ ಒದಗಿಸಿ ಕೊಟ್ಟ ಮನೋಝ್ ಕುಂಬಳೆ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಗಳು ©ಡಾ ಲಕ್ಷ್ಮೀ ಜಿ ಪ್ರಸಾದ

No comments:

Post a Comment