Friday, 28 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು350 ತಂತ್ರಿಗಣ©ಡಾ ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನಲ್ಲಿ ದೈವತ್ವ ಪಡೆದು ಆರಾಧನೆ ಹೊಂದುವುದು ಒಂದು ವಿಶಿಷ್ಠವಾದ ವಿದ್ಯಮಾನ.ಇಲ್ಲಿ ದೈವತ್ವ ಪಡೆಯುವುದಕ್ಕೆ ಜಾತಿ ಧರ್ಮ ದ ಗಡಿಯಿಲ್ಲ ಇಲ್ಲಿ ಅನೇಕ ಮುಸ್ಲಿಮರು, ಜೈನರು ದೈವತ್ವ ಪಡೆದು ಆರಾಧನೆ ಹೊಂದುತ್ತಿದ್ದಾರೆ
ತುಳುನಾಡ ಬ್ರಾಹ್ಮಣರು ಹೊರಗಿನಿಂದ ಬಂದವರು ಇಲ್ಲಿಯ ಮೂಲ ನಿವಾಸಿಗಳಲ್ಲ .ಆದಾಗ್ಯೂ ಇಲ್ಲಿ ನಂಬುವ ಮಣ್ಣಿನ ಸತ್ಯಗಳನ್ನು ನಂಬಿ ಗೌರವಿಸಿ ಬ್ರಾಹ್ಮಣರು ಆರಾಧನೆ ಮಾಡುತ್ತಾ ಬಂದಿದ್ದಾರೆ. ಇಲ್ಲಿ ಅನೇಕ ಬ್ರಾಹ್ಮಣರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಾ ಇದ್ದಾರೆ .ಕಚ್ಚೆ ಭಟ್ಟ,ಕಾನಲ್ತಾಯ,ಅಜ್ಜೆರ್ ಭಟ್ಟ್ರು,ಮಂಡೆಕ್ಕರ ಕಲ್ಲುರ್ಟಿ, ಬ್ರಾಣ ಭೂತ,ಮಾಣಿ ಭೂತ ,ಭಟ್ಟ ಭೂತ,ಕಾರಿಂಜೆತ್ತಾಯ,ಅಡ್ಕತ್ತಾಯ ಮೊದಲಾದವರು ಬ್ರಾಹ್ಮಣ ಮೂಲದ ದೈವತಗಳು.ಹಾಗೆಯೇ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶ್ರೀ ಮದನಂತೇಶ್ವರ ದೇವಾಲಯದಲ್ಲಿ ತಂತ್ರಿ ಗಣಗಳು ಎಂಬ ಹೆಸರಿನ ನಲ್ಲಿ ಮೂರು ಶಕ್ತಿ ಗಳಿಗೆ ಆರಾಧನೆ ಇದೆ .ಈ ದೇವಾಲಯದ ಗೊಪುರದ ಮೇಲೆ ಕುಳಿತು ಮೂರು ಜನ ಬ್ರಾಹ್ಮಣ ಮಂತ್ರವಾದಿ ಗಳು ಮಾಟ ಮಂತ್ರಗಳನ್ನು ಮಾಡಿ ಜನರನ್ನು ಕಾಡುತ್ತಿದ್ದರು .ಇದರಿಂದಾಗಿ ಕೋಪಗೊಂಡ ಅನಂತೇಶ್ವರ ಸ್ವಾಮಿಯು ಅವರನ್ನು ಅಲ್ಲಿ ಮಾಯ ಮಾಡಿ ಅವರಿಗೊಂದು ಅಲ್ಲಿ ನೆಲೆಯನ್ನು ಕೊಡುತ್ತಾನೆ .ಅಲ್ಲಿ ಪ್ರವೇಶ ದ್ವಾರದ ಬಳಿ ಇವರಿಗೆ ಮೂರು ಕಲ್ಲುಗಳನ್ನು ಹಾಕಿ ಆರಾಧನೆ ಮಾಡುತ್ತಾರೆ .ಇವರಿಗೆ ಕೋಲ ಕೊಟ್ಟು ಆರಾಧನೆ ಮಾಡುವ ಪದ್ದತಿ ಇಲ್ಲವೆಂದು ಅಲ್ಲಿನ ಅರ್ಚಕರು ತಿಳಿಸಿದ್ದಾರೆ .ದೇವರ ನೈವೇದ್ಯವನ್ನು ಅವರ ಕಲ್ಹಾಲುಗಳ ಮೇಲೆ ಹಾಕಿ ಆರಾಧನೆ ನಡೆಯುತ್ತದೆ .
ಬಹುಶಃ ಸಾವಿರದೊಂದು ಭೂತಗಳ ಸಮೂಹ ಆರಾಧನೆ ಯಲ್ಲಿ ಗಣಗಳಿಗೆಂದು ಸಾಂಕೇತಿಕವಾಗಿ ಕೋಲ ನೀಡುತ್ತಾರೆ ಅವರಲ್ಲಿ ಇವರಿಗೂ ಆರಾಧನೆ ಇದ್ದಿರುವ ಸಾಧ್ಯತೆ ಇದೆ
ಮಾಹಿತಿ ನೀಡಿದ ಮದನಂತೇಶ್ವರ ದೇವಾಲಯ ದ ಅರ್ಚಕರಾದ ಆಚಾರ್ ಅವರಿಗೆ ಮತ್ತು ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ದೇವಾಲಯದ ಆಡಳಿತ ಮಂಡಳಿ ಮೊಕ್ತೇಶರರಾದ ಅನಂತ ಕಾಮತ್ ಅವರಿಗೆ ಧನ್ಯವಾದಗಳು

No comments:

Post a Comment