Monday, 15 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು354 ಚೆಂಬರ್ಪುನ್ನಾಯ©ಡಾ ಲಕ್ಷ್ಮೀ ಜಿ ಪ್ರಸಾದ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಕಾಣಿಯೂರು ಸಮೀಪಪ ಚೆಂಬರ್ಪು ಎನ್ನುವ ಊರಿದೆ.ಇಲ್ಲಿ ಚೆಂಬರ್ಪುನ್ನಾಯ ಎಂಬ ಹೆಸರಿನ ಒಂದು ಅಪರೂಪದ ದೈವಕ್ಕೆ ಆರಾಧನೆ ಇದೆ .
ತುಳುನಾಡ ನಲ್ಲಿ ಅನೇಕ ಬ್ರಾಹ್ಮಣರು ನಾನಾ ಕಾರಣಗಳಿಂದ ದೈವತ್ವ ಪಡೆದು ಆರಾಧನೆ ಹೊಂದಿದ್ದಾರೆ.ಅಂತೆಯೇ ಇಲ್ಲಿ ಕೂಡ ಓರ್ವ ಬ್ರಾಹ್ಮಣ ಅರ್ಚಕ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಒಂದು ದಿ ಕೆರೆಯಲ್ಲಿ ಸ್ನಾನ ಮಾಡಲು ಹೋದ ಆ ಬ್ರಾಹ್ಮಣ ಮಾಯವಾಗಿ ದೈವತ್ವ ಪಡೆದು ಚೆಂಬರ್ಪುನ್ನಾಯ ಎಂಬ ಹೆಸರಿನ ದೈವವಾಗಿ ಆ ಊರಿನಲ್ಲಿ ಆರಾಧನೆ ಪಡೆಯುತ್ತಾನೆ.ಓ ದೈವಕ್ಕೆ ಹಂದಿಯ‌ಮೊಗ ಇಡುತ್ತಾರೆ ಹಾಗಾಗಿ ಈತ ಪಂಜುರ್ಲಿ ದೈವದೊಂದಿಗೆ ಸಮೀಕರಣಗೊಂಡು ಆರಾಧಿಸಲ್ಪಡುವ ಸಾಧ್ಯತೆ ಇದೆ . ಈ ಬಗ್ಗೆ ಹೆಚ್ಚಿನ ಅಧ್ಯಯನ ದ ಅಗತ್ಯವಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ
ಮಾಹಿತಿ ನೀಡಿದ ಅನಿಲ್ ಹಾಗೂ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ರಾಮದಾಸ್ ಭಟ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 

No comments:

Post a Comment