Thursday, 4 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 351 ತಿಪ್ಪೀ ಸಾಬ್ ದೈವ ©ಡಾ ಲಕ್ಷ್ಮೀ ಜಿ ಪ್ರಸಾದ

ತುಳುನಾಡ ಭೂತಗಳ ಆರಾಧನೆ ಬಹಳ ವಿಶಿಷ್ಠವಾದ ಆಚರಣಾ ಸಂಪ್ರದಾಯ.ಇದಕ್ಕೆ ಜಾತಿ ಧರ್ಮ ಗಡಿಯಿಲ್ಲ .ಎಲ್ಲ ಜಾತಿ ವರ್ಗದ ಜನರು ಇಲ್ಲಿನ ಮಣ್ಣಿನ ಸತ್ಯಗಳೇದು ಕರೆಸಿಕೊಳ್ಳುವ ದೈವಗಳನ್ನು ಆರಾಧಿಸುತ್ತಾರೆ .
ಇಲ್ಲಿ ಅನೇಕ ಬ್ರಾಹ್ಮಣರು ,ಮುಸ್ಲಿಮರು, ದಲಿತರು ,ತುಳುವರು ,ಅಧಿಕಾರಿಗಳು,ಅರಸ ಅರಸಿಯರು,ಕನ್ನಡಿಗರು,ಸಾಮಾನ್ಯ ಜನರು ದೈವತ್ವ ಪಡೆದು ಇಲ್ಲಿ ಆರಾಧನೆ ಪಡೆಯುತ್ತಾರೆ.
ಇಂತಹದೇ
 ಒಂದು ಅಪರೂಪದ ದೈವ ತಿಪ್ಪೀಸಾಬ್ ದೈವ .
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮಿಪದ ನರಿಮೊಗ್ರು ಎಂಬಲ್ಲಿ ತಿಪ್ಪೀಸಾಬ್ ದೈವದ ಸಾನ್ನಿಧ್ಯವಿದೆ .ಮೂಲತಃ ಈತ ಓರ್ವ ಮುಸ್ಲಿಂ ವ್ಯಾಪಾರಿ ಶ್ರಮಜೀವಿ.ಆತ ತೆಂಗಿನಕಾಯಿಯ ಚಿಪ್ಪಿನಿಂದ ಸೌಟುಗಳನ್ನು ತಯಾರಿ ಮಾಡಿ ಮನೆ ಮನೆಗೆ ಹೋಗಿ‌ ಮಾರಾಟ ಮಾಡಿ ಬದುಕುತ್ತಾ ಇದ್ದ ಜನೋಪಯೋಗಿ ವ್ಯಕ್ತಿ ಯಾಗಿದ್ದ ಮುಸ್ಲಿಂ ವ್ಯಾಪಾರಿ .
ಆತನ ಮರಣಾನಂತರ ಆತನಿಗೆ ದೈವತ್ವ ಪಡೆಯುತ್ತಾನೆ.  ಆತನ ಸಮಾಧಿಗೆ ಹೋಗಿ ತಾವು ಸ್ವೀಕರಿಸುವ ಕಳ್ಳು‌ಮೊಟ್ಟೆ ಇತ್ಯಾದಿಗಳನ್ನು ಅರ್ಪಿಸಿ ಆರಾಧನೆ ಮಾಡುತ್ತಾರೆ. ಆತ ತೆಂಗಿನ ಚಿಪ್ಪಿಯಿಂದ  / ಗೆರಟೆಯಿಂದ ಸೌಟು ತಯಾರಿಸಿ ಮಾರುವ ಕಾರಣ ಆತನನ್ನು ಚಿಪ್ಪೀ ಸಾಬ್  ತಿಪ್ಪೀಸಾಬ್ ಎಂದು ಕರೆಯುತ್ತಾ ಇದ್ದರು .ಹಾಗಾಗಿ ಆ ದೈವಕ್ಕೆ ತಿಪ್ಪೀಸಾಬ್  ಎಂದೇ ಕರೆಯುತ್ತಾರೆ .
ಮಾಹಿತಿ ನೀಡಿದ ಗಿರೀಶ್ ಭಾರದ್ವಾಜ್ ಅವರಿಗೆ ಧನ್ಯವಾದಗಳು © ಡಾ ಲಕ್ಷ್ಮೀ ಜಿ ಪ್ರಸಾದ 

No comments:

Post a Comment