Monday, 15 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 352-353 ಪೊಸಮಹರಾಯ ಮತ್ತು ಮಾಡ್ಲಾಯಿ © ಡಾ ಲಕ್ಷ್ಮೀ ಜಿ ಪ್ರಸಾದ

ಮೂಡಬಿದ್ರೆಯಿಂದ ಸುಮಾರು ಎಂಟು ಕಿಲೋ ಮೀಟರ್ ದೂರದಲ್ಲಿ ಇರುವೈಲು ಎಂಬ ಊರು ಇದೆ .ಮೂಲತಃ ದೇವಸ ಸಂಕೇಸ ಎಂಬ ಎರಡು ಬೈಲುಗಳು ಸೇರಿ ಎರಡು ಬೈಲು ಎಂಬರ್ಥ ದಲ್ಲಿ ಇರುವೈಲು ಎಂಬ ಹೆಸರು ಬಂದಿದೆ .ಇಲ್ಲಿ ಮಾಡ್ಲಾಯ ಮತ್ತು ಪೊಸ ಮಹರಾಯ ಎಂಬ ಎರಡು ಅಪರೂಪದ ದೈವಗಳಿಗೆ ಆರಾಧನೆ ಇದೆ .ಈ ಬಗ್ಗೆ ಪುರಾಣ ಮೂಲದ ಕಥಾನಕವನ್ನು ಇರುವೈಲಿನ ಸಂತೋಷ್ ಅವರು ನೀಡಿದ್ದಾರೆ .ಆ ಊರಾನ್ನು ವಜ್ರಾಸುರ ಎಂಬ ಹೆಸರಿನ ಕೆಟ್ಟ ಅರಸನೊಬ್ಬ ಆಳ್ವಿಕೆ ಮಾಡುತ್ತಾ ಪ್ರಜೆಗಳನ್ನು ಹಿಂಸಿಸುತ್ತಾ ಇದ್ದ .ಆತ ಗಂಡು ಹೆಣ್ಣು ಗಳಿಂದ ಮರಣವಿಲ್ಲದಂತೆ ತಪಸ್ಸು ಮಾಡಿ ವರವನ್ನು ಪಡೆದಿದ್ದು ಆತನನ್ನು ಎದುರಿಸುವುದು ಅಸಾಧ್ಯ ವಾಗಿತ್ತು. ಹಾಗಾಗಿ ನೊಂದ ಪ್ರಜೆಗಳೆಲ್ಲ ಊರಿನ ದುರ್ಗಾ ದೇವಿಗೆ ಮೊರೆಯಿತ್ತಾಗ ದಯಾಮಯಿಯಾದ ಆಕೆ ಗಂಡೂ ಅಲ್ಲದ ಹೆಣ್ಣೂ ಅಲ್ಕದ ಒಂದು ಶಕ್ತಿಯನ್ನು ಸೃಷ್ಟಿ ಮಾಡಿ ವಜ್ರಾಸುರನಿಗೆ ಬುದ್ಧಿ ಕಲಿಸಲು ಹೇಳುತ್ತಾಳೆ. ವಜ್ರ ಅಸುರ ಮತ್ತು ಮಾಡ್ಲಾಯನ ಜೊತೆ ದೀರ್ಘ ಕಾಲ ಹೋರಾಟ ಮಡೆದು ವಜ್ರಾಸುರ ಸಾವಿನ ಸಮೀಪ ತಲುಪಿದಾಗ ಸೋತು ಶರಣಾಗುತ್ತಾನೆ .ಆಗ ಅವನನ್ನು ಕ್ಷಮಿಸಿದ ಮಾಡ್ಲಾಯಿ ಆತನಿಗೆ ಫಾಲ್ಗುಣಿ ನದಿಯಲ್ಲಿ ಮಿಂದು ಶುದ್ಧನಾಗಿ ಬರಲು ತಿಳಿಸುತ್ತದೆ
ಅಂತೆಯೇ ಆತ ಅಲ್ಲಿ ಸ್ನಾನ ಮಾಡಿ ಬರುವಾಗ ಮಾನವ ರೂಪು ಪಡೆದು ಹೊಸ ಮಹರಾಯ ನೆಂಬ ಹೆಸರು ಪಡೆದು ಬರುತ್ತಾನೆ ಕಾಲಾಂತರದಲ್ಲಿ ಇವರಿಬ್ಬರೂ ದೈವದ ನೆಲೆಯಲ್ಲಿ ಆರಾಧನಾ ಪಡೆಯುತ್ತಾರೆ ಪೊಸಮಹರಾಯನಿಗೆ ಮಣಿಮಂಚದಲ್ಲಿ ನೆಲೆ ಇದೆ ಪೊಸಮಹರಾಯ ಎಂಬ ಗುಡ್ಡೆ ಇದ್ದು ಅಲ್ಲಿಯೂ ಆತನಿಗೆ ಆರಾಧನೆ ಇದೆ ಮಾಡ್ಲಾಯಿಗೆ ಕಟ್ಟೆ ಇದೆ ಇವರಿಬ್ಬರಿಗೂ ದೇವಿಯ ಸನ್ನಿಧಿಯಲ್ಲಿ ಆರಾಧನೆ ಇದೆಜಾತ್ರೆ ಸಮಯದಲ್ಲಿ ಮಾಡ್ಲಾಯಿ  ಮತ್ತು ದೇವಿಯರ ಅಪರೂಪದ ಭೇಟಿ ಇದೆ.ಆಗ  ಮಾಡ್ಲಾಯಿಗೆ  ಸಾವಿರ ಹಾಳೆಯ ಅಣಿ ಸಿಂಗಾರವಿದೆ
ಚಿತ್ರದ ಕೃಪೆ Buaty of Tulunadu screen shot
ಇರುವೈಲು ಬಗ್ಗೆ ಯೂ ಒಂದು ಐತಿಹ್ಯ ಪ್ರಚಲಿತವಿದೆ
ದೇಸ ಗುಡ್ಡದ ಮೇಲೆ ದೇವಿಯ ಆರಾಧನಾ ಸ್ಥಾನವಿತ್ತು .ಗುಡ್ಡದ ಬುಡದಿಂದ ನೀರು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಬೇಕಿತ್ತು. ಒಂದು ದೇವಿಯ ಅನನ್ಯ ಭಕ್ತರಾದ ಅಲ್ಲಿನ ಅರ್ಚಕ ರಾಮ ಮೊಗರಾಯರು ದೇವಿ ಕೆಳಗೆ ಇರುತ್ತಿದ್ದರೆ ನಾನು ಎರಡು ಕೊಡಪಾನ ನೀರು ಹೆಚ್ಚು ಅಭಿಷೇಕ ಮಾಡುತ್ತಿದ್ದೆ ಎಂದು ಮನಸಿನಲ್ಲಿ ಹೇಳಿಕೊಳ್ಳುತ್ತಾರೆ .ಅದೇ  ಊರಿನ ಚೌಟರಸರು ಆ ಪರಿಸರಕ್ಕೆ  ಬರುತ್ತಾರೆ .ಆಗ ಸಂಜೆಯಾಗುತ್ಹೊತದೆ ತ್ತು ಕಂತಿದಾಗ ಅರ್ಚಕರು ಈ ರಾತ್ರಿ ವೇಳೆಯಲ್ಲಿ ಸಂಚಾರ ಅಪಾಯಕಾರಿ ನೀವು ನಮ್ಮ ದೇವಾಲಯದಲ್ಲಿ ಉಳಿದುಕೊಳ್ಳಿ ಎಂದು ಭಿನ್ನಹ ಮಾಡುತ್ತಾರೆ .ಅಂತೆಯೇ ಅವರು ಗುಡ್ಡದ ಮೇಲಿನ ದುರ್ಗಾದೇವಿ ಯ ದೇವಾಲಯ ದಲ್ಲಿ ಉಳಿದುಕೊಂಡು ಊಟ ಮಾಡಿ ನಿದ್ದೆ ಮಾಡುತ್ತಾರೆ .ಅಂದು ಈರ್ವರ ಕನಸಿನಲ್ಲಿ ದೇವಿ ಕಾಣಿಸಿಕೊಂಡು ನಾನು ಬೆಟ್ಟದ ಮೇಲಿನಿಂದ ಕೆಳಗೆ ನೆಲೆಯಾಗುತ್ತೇನೆ ಹುಲಿ ಮತ್ತು ಹಸು ಒಟ್ಟಿಗೆ ನೀರು ಕುಡಿಯುವ ಮೇಯುವ ಸ್ಥಳದಲ್ಲಿ ಸ್ಥಾನ‌ಕಟ್ಟಿ ಆರಾಧನೆ ಮಾಡಿ ಎಂದು ಹೇಳುತ್ತಾಳೆ. ಇಬ್ಬರು ಕನಸಿನಿನಿಂದ ಎದ್ದು ಗಾಭರಿಯಿಂದ ತಮ್ಮ‌ಕನಸಿನಲ್ಲಿ ತಾಯಿ ಕಾಣಿಸಿಕೊಂಡ ಬಗ್ಗೆ ವಿಚಾರ ವಿನಿಮಯ ಮಾಡಿ‌ಕೊಳ್ಳುತ್ತಸರೆ ಬೆಳಕು ಹರಿದಾಗ ಜನರೆಲ್ಲ ಒಂದು ಕಡೆ ಆಚ್ಚರಿಯಿಂದ ಒಂದು ಹಸು‌ಮತ್ತು ಹುಲಿ ಒಂದು ಮರದ ಅಡಿಯಲ್ಲಿ ಕೊಳದ ನೀರು ಕುಡಿಯುತ್ತಾ ಮೇಯುವುದನ್ನು ನೋಡುತ್ತಾ ಇರುತ್ತಾರೆ ಅರಸರೂ ಹೋಗಿ ನೋಡುತ್ತಾರೆ ತಮ್ಮ ಕನಸಿನಲ್ಲಿ ದೇವಿ ಆದೇಶ ನೀಡಿದಂತೆ ಅಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ ಕಟ್ಟುತ್ತಾರೆ ಜೊತೆಗೆ ಮಾಡ್ಲಾಯ ಮತ್ತು ಪೊಸಮಹರಾಯ ದೈಗಳಿಗೂ ಸ್ಥಾನ ನೀಡಿ ಆರಾಧನೆ ಮಾಡುತ್ತಾರೆ .
ಪೊಸಮಹರಾಯ ನೆಂದರೆ ಹೊಸ ರಾಜ ಎಂದು ಅರ್ಥ ಯುದ್ದದಲ್ಲಿ ಸೋತ ಮೇಲೆ ಹಳೆಯ ರಾಜ ಸೋರು ಬುದ್ಧಿ ತಂದು‌ಕೊಂಡು ಹೊಸ ಮನುಷ್ಯ ನಾಗಿ ಒಳ್ಳೆಯ ವ್ಯಕ್ತಿ ಯಾಗಿ ಸಜ್ಜನಿಕೆಯಿಂದ ಆಡಳತ  ನಡೆಸಿದ ಕಾರಣ ಆತನಿಗೆ ಆ ಹೆಸರು ಬಂದಿರಬಹಿದು ಅಥವಾ ಯುದ್ದದಲ್ಲಿ ಆತ ಸೋತು ಆತನನ್ನು ಗೆದ್ದವ ಆಡಳಿತ ನಡೆಸಿರಬಹುದು ಆತನ ಹೆಸರು ಗೊತ್ತಿಲ್ಲದೆ ಇದ್ದಾಗ ಆತನನ್ನು ಜನರು ಪೊಸ ಮಹರಾಯ ಎಂದರೆ ಹೊಸಮಹಾರಾಜ ಎಂದು ಕರೆದಿರ ಬಹುದು .ಪೊಸ ಮಹಯಾಯ ಕಾಲಾಂತರದಲ್ಲಿ ಪೊಸಮರಾಯ ಆಗಿದೆ .ಈ  ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದು ಈ ಬಗ್ಗೆ ಮಾಹಿತಿ ನೀಡಿದ ಸಂತೋಷ ಪುಚ್ಛೇರು ಮತ್ತು ಈ ದ.ಹಿಂದೆ ಈ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದ ಶೇಖರ್ ( ಹೆಸರು ಗೊಂದಲವಾಗಿದೆ ತಪ್ಪಿದ್ದರೆ ಕ್ಷಮಿಸಿ) ಮತ್ತು‌ಮಾಹಿತಿ ಸಂಗ್ರಹಕ್ಕಾಗಿ ಸಹಾಯ ಮಾಡಿದ ಸತ್ಯನಾರಾಯಣ ಹೆಗ್ಡೆ ಯವರಿಗೆ ಧನ್ಯವಾದಗಳು 

2 comments:

 1. 1. sankesha matthu devesha 2 oorugalu, not bailu...
  2. Vajrasura mathu Swarnasura yembudu 'Sri Iruvail Kshetra Mahathme"yalli baruva 2 Kalpanika Purana Vyakthigalu. Devara Moolada bagge innu spashtathe illa.
  3. Posamarayanu Gramakashaka Daivavagiyu Madlayi Kshetra Rakshaka Daivavagiyu nelesiddare.
  4. Igiri Nandini yemba bhagthigeetheyalli baruva Igiriyu Iruvailu gramadalle iddu indigu Bangargudde yendu prachalithadallide. Iruvailu Duragaparameshwarigu Nandinigu Kateel Duragaparameshwarigu nigooda sambanda ide.

  ReplyDelete
 2. ಮಾಹಿತಿಗಾಗಿ ಧನ್ಯವಾದಗಳು

  ReplyDelete