Friday, 26 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 355 ತಪ್ಪೇದಿ © ಡಾ ಲಕ್ಷ್ಮೀ ಜಿ ಪ್ರಸಾದ

ತುಳುನಾಡ ಭೂತಾರಾಧನೆ ಬಹಳ‌ ವಿಶಿಷ್ಠವಾದ ಆರಾಧನಾ ರಂಗಭೂಮಿ. ಇಲ್ಲಿ ಅನೇಕ ಪ್ರಧಾನ ದೈವಗಳ ಸೇರಿಗೆಗೆ ಸಂದಿರುವ ಅನೇಕ ಉಪ ದೈವಗಳಿಗೂ ಆರಾಧನೆ ಇದೆ.ಪ್ರಧಾನ ದೈವಗಳ ವೇಷಭೂಷಣ ಪುಟ್ಟು ಪುರಪ್ಪುಗಳು ಪುರಾಣದ ದೇವತೆಗಳ ಹಾಗೂ ಆಧುನಿಕ ಯಕ್ಷಗಾನ ವೇಷಭೂಷಣ ಗಳ‌ಪ್ರಭಾವದಿಂದಾಗಿ ಮೂಲ ರೂಪ ವನ್ನು ಕಳೆದುಕೊಳ್ಳುತ್ತಿವೆ
ಪ್ರದಾನ ದೈವಗಳ ಮೂಲ ಪಾಡ್ದನ ಗಳೇ ಮರೆಯಾಗುತ್ತಿವೆ ಇಂತಿರುವಾಗ ಸೇರಿಗೆ ದೈವಗಳ ಬಗ್ಗೆ ಮಾಹಿತಿ ಬಹಳ ಕಷ್ಟದ ವಿಚಾರವಾಗಿದೆ .
ಕೆಲ ವರ್ಷಗಳ ಮೊದಲು ಕಲ್ಲಡ್ಕ ಉಮೇಶ್ ಪ್ರಭು ಅವರ ಮನೆಯಲ್ಲಿ ನಡೆಯವ ಸಾವಿರದೊಂದು ಭೂತಗಳ ನೇಮಕ್ಕೆ ಹೋಗಿದ್ದಾಗ ಒಂದು ಮಾಹಿತಿ ನೀಡಿದ್ದರು. ಪಾರ್ತಿ ದೇವಿ ಸೊಪ್ಪು ತರುವ ಹೆಂಗಸಿನ ರೂಪಿನಲ್ಲಿ ಬಂದು ತಪ್ಪೇದಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾಳೆ ಎಂದು ಅವರು ಹೇಳಿದ್ದರು.ಆದರೆ ಎಲ್ಲಿ ಯಾವ ರೀತಿ ಆರಾಧನೆ ಎಂದು ಆಗ ಮಾಹಿತಿ ಸಿಕ್ಕಿರಲಿಲ್ಲ. ನಿನ್ನೆ ಸೋಮಶೇಖರ್ ರಾವ್ ಅವರು ತಪ್ಪೇದಿ ದೈವದ ಹಿನ್ನೆಲೆ ಕುರಿತಾದ ಮಾಹಿತಿಯನ್ನು ನೀಡಿದರು
ಬಜ್ಪೆ ಪರಿಸರದ ಗಂಡಬೆಟ್ಟು ಗುತ್ತಿಗೆ ಸಂಬಂಧಿಸಿದ ಉಮಾಮಹೇಶ್ವರ ದೇವಾಲಯ ಇದೆ ಅಲ್ಲೊಗೆ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಪೋರ್ಕೋಡಿ ಗುತ್ತಿಗೆ ಸಂಬಂಧಿಸಿದ   ಸೋಮನಾಥ ದೇವಾಲಯ ವಿದೆ .ಇಲ್ಲಿ ‌ಮೊದಲು ಶಿವಲಿಂಗ ಇರಲಿಲ್ಲ ವಂತೆ ಹಾಗಾಗಿ ಉಮಾ ಮಹೇಶ್ವರ ದೇವಾಲಯದಿಂದ ತಂದರಂತೆ
ಆಗ ಪಾರ್ವತಿ ದೇವಿ ದಲಿತ ಮಹಿಳೆಯ ರೂಪ ಧರಿಸಿ ತಪ್ಪೇದಿ ಎಂಬ ದೈವವಾಗಿ ನೆಲೆಸುತ್ತಾಳೆ ಗಂಡ ಬೆಟ್ಟು ಗುತ್ತಿನ ಚಾವಡಿಯ ಒಳಭಾಗದಲ್ಲಿ ತಪ್ಪೇದಿ ದೈವಕ್ಕೆ ಅರಾಧನೆ ಇದೆ
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಿಂದ ವಿಶ್ಲೇಷಣೆ ಮಾಡಿದಾಗ ತಪ್ಪೇದಿ ಮೂಲತಃ ದಲಿತ ಸಮುದಾಯಕ್ಕೆ ಸೇರಿದ ಮಹಿಳೆ. ಹಟ್ಟಿಗೆ ,ತೋಟ ಗದ್ದೆಗೆ ಬೇಕಾದ ಸೊಪ್ಪನ್ನು ಕಾಡಿನಿಂದ ಹೆರೆದು ತರುವ ಕೆಲಸ ಮಾಡುತ್ತಾ ಇದ್ದ ಕಾರಣ ಆ ಮಹಿಳೆಗೆ ತಪ್ಪು( ಸೊಪ್ಪು) ತರುವವಳು ಎಂಬ ಅರ್ಥ ದಲ್ಲಿ ತಪ್ಪೇದಿ ಎಂಬ ಹೆಸರು ಬಂದಿರಬೇಕು.ಯಾವುದೋ ಕಾರಣಕ್ಕೆ ಆಕೆ ದೈವತ್ವ ಪಡೆದು ಗಂಡಬೆಟ್ಟು ಗುತ್ತಿನಲ್ಲಿ ಆರಾಧನೆ ಪಡೆಯುತ್ತಾಳೆ .ಆ ದೈವದ ಮೂಲ ಕಥಾನಕ ಕಳೆದು ಹೋಗಿ ಪುರಾಣ ದೇವತೆಗಳ ಪ್ರಭಾವದಿಂದಾಗಿ ಆಕೆ ಪಾರ್ವತಿಯ ರೂಪ ಎಂದು ಕರೆದು ಆರಾಧನೆ ಮಾಡುತ್ತಿರಬಹುದು ಈ ಬಗ್ಗೆ ಹೆಚ್ಚಿನ ಅಧ್ಯಯನ ದ ಅಗತ್ಯವಿದೆ
ಮಾಹಿತಿ ನೊಡಿದ ಸೋಮಶೇಖರ್ ಹಾಗೂ ಉಮೇಶ್ ಪ್ರಭುಗಳಿಗೆ ಹೃತ್ಪೂರ್ವಕ ಧನ್ಯವಾದಗಳು 

No comments:

Post a Comment