Friday, 26 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು: 356 ಕನ್ಯಾಕುಮಾರಿ/ ಉಳ್ಳಾಲ್ತಿ ©ಡಾ ಲಕ್ಷ್ಮೀ ಜಿ ಪ್ರಸಾದ




ಉಳ್ಳಾಲ್ತಿ ಎಂಬ ಒಂದು ಹೆಸರಿನಲ್ಲಿ ಅನೇಕ ದೈವಗಳಿಗೆ ಆರಾಧನೆ ಇದೆ.ಉಳ್ಳಾಲ್ತಿ ಎಂದರೆ ಒಡತಿ ಎಂದು ಅರ್ಥ. ಬೀಡಿನ ಒಡತಿಯನ್ನು ಉಳ್ಳಾಲ್ತಿ ಎಂದು ಕರೆಯುತ್ತಾ ಇದ್ದರು. ವಿಟ್ಲದ ಎಲ್ಯಕ್ಕ ಮಲ್ಲಕ್ಕೆ,ಕೂಟತ್ತಜೆಯ ದೈಯಾರ್,ಉಳ್ಳಾಕುಲುಗಳ ತಂಗಿ ಆಗಿರುವ ಉಳ್ಳಾಲ್ತಿ, ಧರ್ಮಸ್ಥಳದ ಕನ್ಯಾಕುಮಾರಿ ,ಅನಂತಾಡಿ ಕೇಪಿನ ಕೆಳಿಂಜದ ಉಳ್ಳಾಲ್ತಿ ಯರು ಹೀಗೆ ಅನೇಕ ಶಕ್ತಿ ಗಳಿಗೆ  ಉಳ್ಳಾಲ್ತಿ ಎಂಬ  ಒಂದು ಹೆಸರಿನಲ್ಲಿ ಆರಾಧನೆ ಇದೆ .ಧರ್ಮಸ್ಥಳ ದಲ್ಲಿ  ಕನ್ಯಾ ಕುಮಾರಿ ಎಂಬ ಹೆಸರಿನಲ್ಲಿ ಒಂದು ಉಳ್ಳಾಲ್ತಿ ದೈವಕ್ಕೆ ಆರಾಧನೆ ಇದೆ. ಪ್ರಸ್ತುತ ಉಳ್ಳಾಲ್ತಿ ಯನ್ನು ಪಾರ್ವತಿ ದೇವಿಯ ರೂಪ ಎಂದು ಪರಿಗಣಿಸುತ್ತಿದ್ದಾರೆ ಅದು ಪುರಾಣದ ಪ್ರಭಾವ ದಿಂದಾಗಿ ಇಂತಹ ಪರಿಕಲ್ಪನೆ ಉಂಟಾಗಿದೆ .ಧರ್ಮಸ್ಥಳ ದಲ್ಲಿ ಆರಾಧನೆ ಗೊಳ್ಳುವ ಉಳ್ಳಾಲ್ತಿ ಪಾಡ್ದನ ದಲ್ಲಿ ಆಕೆ ಮಾನವ ಮೂಲದ ಕಥಾನಕ ವಿದೆ .ಒಂದು ಬೀಡು ಬೀಡಿನ ಹೆಸರು ಇಲ್ಲಿ ತಿಳಿದು ಬರುವುದಿಲ್ಲ .ಆ ಬೀಡಿನ ಕನ್ಯೆ ಒಬ್ಬಳಿಗರ ಹದಿನಾರು ವರ್ಷ ತುಂಬುತ್ತದೆ .ಆಕೆಯನ್ನು ಜಾರಾಳ್ವನಿಗೆ ಕೊಟ್ಟು ಮದುವೆ ಮಾಡಬೇಕೆಂದು ತೀರ್ಮಾನಿಸುತ್ತಾರೆ ಮದುವೆ ನಿಶ್ಚಿತ ಆಗುತ್ತದೆ ಆಗ ಹುಡುಗಿಗೆ ಅಲಂಕರಿಸಲು ಬೇಕಾದ ಒಡವೆ ವೇಷಭೂಷಣ ಗಳನ್ನು ಜಾರ್ ಪುರೈ ಬೀಡಿನಿಂದ ಎಂದರೆ ಜಾರಾಳ್ವನ ಕೈಯಿಂದಲೇ ಕೇಳಿ ತರಲು ತೀರ್ಮಾನಿಸುತ್ತಾರೆ .ಅಲ್ಲಿಗೆ ಯಾರು ಹೋಗಿ ಒಡವೆಗಳನ್ನು ತರವುದು ಎಂದು ಯೋಚಿಸಿದಾಗ ಮದುಮಗಳ ತಂಗಿ ದಾರಕ್ಕ ಹಾಗೂ ಮದುಮಗಳ ಅಕ್ಕ ಅಬ್ಬಯ ಇದ್ದಾರೆ ಎಂದು ತಿಳಿಯುತ್ತದೆ  ಇವರಲ್ಲಿ  ಅಕ್ಕ ಅಬ್ಬಯ ಜಾರ್ ಪುರೈ ಬೀಡಿಗೆ ಹೋಗಿ ಮದುಮಗಳಿಗೆ ಬೇಕಾದ ಒಡವೆಗಳನ್ನು ತರಲಿ ಎಂದು ಹಿರಿಯರು ಹೇಳುತ್ತಾರೆ. ಅವಳು ಹಿರಿಯರು ಹೇಳಿದಂತೆ ಜಾರಾಳ್ವನ ಬೀಡಿಗೆ ಹೊರಡುತ್ತಾಳೆ ಅವನ ಬೀಡಿನ ಬಳಿ ದೊಡ್ಡ ತಡಮ್ಮೆ ಇರುತ್ತದೆ ಅದನ್ನು ದಾಟಿ ಒಳಗೆ ಬಂದು ಜಾರಾಳ್ವ ಎಂದು ಮೂರು ಬಾರಿ ಕರೆಯುತ್ತಾಳೆ.ಆಗ ಜಾರಾಳ್ವ ಬಂದ ಕಾರಣ ಕೇಳಿ ಒಡವೆ ವಸ್ತುಗಳನ್ನು ಕೊಟ್ಟು ಕಳುಹಿಸುತ್ತಾನೆ .ಲಗ್ನ ದ ದಿನ ಕನ್ಯೆಯ ಬೀಡಿಗೆ ಬರುತ್ತಾನೆ ಅಲ್ಲಿ ಕನ್ಯೆಯನ್ನು ಎಲ್ಲ ಆಭರಣಗಳನ್ನು ಹಾಕಿ ಸಿಂಗಾರ ಮಾಡಿರುತ್ತಾರೆ. ಜಾರಾಳ್ವ ಅಲ್ಲಿಗೆ ಬಂದ ಹೊತ್ತಿನಲ್ಲಿ ಕನ್ಯೆಯನ್ನು ಯೋಗ್ಯಲ್ಲ ಬೀಡಿನ ಬಾಗ್ಯೊಲ್ಲ ಸಿರಿ ಚಾವಡಿ ಯಿಂದ ಯಾರೋ ಕರೆದ ಹಾಗೆ ಧ್ವನಿ ಕೇಳಿಸುತ್ತದೆ ಹಾಗೆ ಅಲಂಕಾರ ಗೊಂಡ ಮದುಮಗಳು ಆ ಸಿರಿ ಚಾವಡಿಗೆ ಹೋಗುತ್ತಾಳೆ ಅಲ್ಲಿ ಮಾಯಕ ಹೊಂದಿ ದೈವತ್ವ ಪಡೆದು ಆರಾಧನೆ ಹೊಂದುತ್ತಾಳೆ .
ಮಾಯಕ ಹೊಂದಿ ದೈವವಾಗಿ ನಿಂತ ಅವಳು ಬೀಡಿನ ಬಲ್ಲಾಳನಲ್ಲಿ ನನಗೆ ವರ್ಷಕ್ಕೊಮ್ಮೆ  ಸುಗ್ಗಿ ಸಂಕ್ರಮಣಕ್ಕೆ   ನೇಮ ಕೊಟ್ಟು ಆರಾಧನೆ ಮಾಡಬೇಕೆಂದು ಕೇಳುತ್ತಾಳೆ
ಅಲ್ಲಿಂದ ಉಳ್ಳಾಲ್ತಿ ಹೆಸರಿನಲ್ಲಿ ಪ್ರಸರಣಗೊಂಡು ಅನೇಕೆಡೆಗಳಲ್ಲಿ ಆರಾಧನೆ ಪಡೆಯುತ್ತಾಳೆ.
ಪುರಾಣದ ಕನ್ಯಾ ಕುಮಾರಿ ದೇವತೆಯ ಕಥಾನಕ ದಲ್ಲೂ ಕನ್ಯಾ ಕುಮಾರಿ ಮದುಮಗಳ ರೂಪದಲ್ಲಿ ಶಿವನನ್ನು ಕಾಯುತ್ತಾ ಇರುತ್ತಾಳೆ .ಬೆಳಗಾಗುವ ಮೊದಲು ಈಶ್ವರ ದೇವರು ಬರುವುದಿಲ್ಲ ಹಾಗಾಗಿ ಆಕೆ ಕನ್ಯೆಯಾಗಿಯೇ ಉಳಿಯುತ್ತಾಳೆ
ಇಲ್ಲಿನ ಬೀಡಿನಲ್ಲಿ ಕೂಡ ಅಲಂಕಾರ ವಾದ ಮದುಮಗಳು ಮದುವೆಗೆ ಮೊದಲೇ ಯೋಗ್ಯಲ್ಲ ಬೀಡಿನ ಸಿರಿ ಚಾವಡಿಯಲ್ಲಿ ಮಾಯಕವಾಗಿ ದೈವತ್ವ ಪಡೆದು ಆರಾಧನೆ ಹೊಂದುತ್ತಾಳೆ ಹಾಗಾಗಿ ಆಕೆಯನ್ನು ಕನ್ಯಾ ಕುಮಾರಿ ಎಂದು ಕರೆದು ಆರಾಧನೆ ಮಾಡುವ ಸಂಪ್ರದಾಯ ಬಂದಿರಬೇಕು
ಆಧಾರ ಕಣಜ - ಪರವ ಸಂಸ್ಕೃತಿ ಯಲ್ಲಿ ಮಹಿಳೆ 

No comments:

Post a Comment