Friday, 26 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು357-358 ಮೂಡೊಟ್ಟುನ್ನಾರ್ ಮತ್ತು ಪಡ್ಡೊಟ್ಟುನ್ನಾರ್



ಮೂಡೊಟ್ಟುನ್ನಾರ್  ಮತ್ತು ಪಡ್ಡೊಟ್ಟುನ್ನಾರ್
ಈ ಎರಡು ದೈವಗಳ ಹೆಸರು ಕೂಡ ಈ ತನಕ ಎಲ್ಲೂ ದಾಖಲಾಗಿಲ್ಲ ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಿದವರು ಚಂದ್ರ ಶೇಖರ ಪೂಜಾರಿ ಅವರು .ಪುತ್ತೂರು ತಾಲೂಕಿಗೆ ಸೇರಿದ ಮಾಡತ್ತಾರು ಎಂಬ ಊರಿನಲ್ಲಿ ಈ ಎರಡು ದೈವಗಳ ನೆಲೆ ಇದೆ.ಮೂಡೊಟ್ನಾರು ಎಂದರೆ ಮೂಡು ದಿಕ್ಕಿನಲ್ಲಿ ಇರುವವರು ಎಂದು ಅರ್ಥ .ಅಂತೆಯೇ ಪಡ್ಡೊಟ್ನಾರ್ ಎಂದರೆ ಪಡುವಣ ದಿಕ್ಕಿನಲ್ಲಿ ಇರುವವರು ಎಂದರ್ಥ
ಇಲ್ಲಿ ಮೊದಲು ಒಂಬತ್ತು ದಿನಗಳ ಕಾಲ ಉತ್ಸವ ಮಡೆಯುತ್ತಿದ್ದಾಗ ಸಾಂತ್ಯ ಗುತ್ತಿನಿಂದ ಪಡ್ಡೊಟ್ಟುನ್ನಾರ್ ಮತ್ತು ಲೆಕ್ಕೇಸಿರಿ ದೈವಗಳ ಭಂಡಾರ ಧರಿ ಹಾಕಿ ಚಿಬಿಲಿ ಹಣತೆಯಲ್ಲಿ ಮಾಡತ್ತಾರು ತನಕ ಸಾಗುತ್ತಿತ್ತು ಎಂದು ಚಂದ್ರ ಶೇಖರ್ ಪೂಜಾರಿ ಅವರು ಹೇಳಿದ್ದಾರೆ .
ಮಾಡತ್ತಾರು ವಿನಲ್ಲಿ ಹಳೆಯ ಜೀರ್ಣಗೊಂಡ ಹಳೆಯ ಮಾಡವಿದೆ .ಇದು ಮೂಡೊಟ್ನಾರು ದೈವದ ಮಾಡ ಇದು ಹಳತಾಗಿ ಜೀರ್ಣಾವಸ್ಥೆಗೆ ತಲುಪಿದಾಗ ಸಾಂತ್ಯ ಗುತ್ತಿನಲ್ಲಿಯೂ ಪಡ್ಡೊಟ್ನಾರ್ ಕುರಿತಾದ ಮಾಹಿತಿ ಕಳೆದು ಹೋಯಿತು .ಚಂದ್ರ ಶೇಖರ್ ಅವರ ಹಿರಿಯರು ಈ ಬಗ್ಗೆ ಪ್ರಚಲಿತವಿರುವ ಒಂದು ಐತಿಹ್ಯವನ್ನು ತಿಳಿಸಿದ್ದಾರೆ .ಚಂದ್ರ ಶೇಖರ ಅವರ ಅಜ್ಜಿ ಸಾಂತ್ಯ ಗುತ್ತಿನ ಪಮ್ಮು ಬೈದ್ಯೆತಿ( ಪದ್ಮಾವತಿ) ಅವರು ನೀಡಿದ ಮಾಹಿತಿಯಂತೆ ಮೂಡೊಟ್ನಾರು ಮತ್ತು ಪಡ್ಡೊಟ್ನಾರ್ ನಲ್ಲಿ ನಿಂತವರು ಈರ್ವರು ಉಳ್ಳಾಲ್ತಿ ಯರು.ಇವರಿಬ್ಬರು ಅಕ್ಕ ತಂಗಿಯರು
ಹೌದು ಉಳ್ಳಾಲ್ತಿ ಎಂದರೆ ಒಂದು ದೈವವಲ್ಲ .ಉಳ್ಳಾಲ್ತಿ ಎಂಬ ಹೆಸರಿನಲ್ಲಿ ಅನೇಕ ದೈವಗಳಿಗೆ ಆರಾಧನೆ ಇದೆ .ಕೂಟತ್ತಜೆಯೆ ದೈಯಾರ್ ವಿಟ್ಲದ ಎಲ್ಯಕ್ಕ ಮಲ್ಲಕ್ಕ,ಇಚಲಂಗೋಡಿನ ಎಲ್ಯಕ್ಕೇರ್ ನೇಲ್ಯಕ್ಕೇರ್ ,ಧರ್ಮಸ್ಥಳ ದ ಕನ್ಯಾಕುಮಾರಿ ಪುತ್ತೂರಿನ ದಂಡ ನಾಯಕನ ಜೊತೆಗೆ ಅರಾಧನೆ ಇರುವ ಉಳ್ಳಾಲ್ತಿ ,ಇವರೆಲ್ಲರೂ ಉಳ್ಳಾಲ್ತಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ ಹೆಸರು ಒಂದೇ ಅದರೂ ಇವರು ಬೇರೆ ಬೇರೆ ಶಕ್ತಿ ಗಳು ಹಾಗೆಯೆ ಮೂಡ ಮತ್ತು ಪಡುವಣ ದಿಕ್ಕಿನಲ್ಲಿ ನಿಂತ ಈರ್ವರು ಒಡತಿಯರು ಇಲ್ಲಿ ಮೂಡೊಟ್ನಾರು  ಮತ್ತು ಪಡ್ಡೊಟ್ಟುನ್ನಾರ್ ಹೆಸರಿನಲ್ಲಿ ಆರಾಧನೆ ಹೊಂದಿರಬಹುದು ಪ್ರಸ್ತುತ ಸಾಂತ್ಯ ಜಗತ್ತಿನಲ್ಲಿ ಪಡ್ಡೊಟ್ನಾರ್ ಮೂರ್ತಿ ಇದ್ದು ಇದು ಕುದುರೆ ಏರಿ ಕುಳಿತು ಖಡ್ಗ ಮತ್ತು ಗುರಾಣಿ ಹಿಡಿದ ವನಿತೆಯ ರೂಪನ್ನು ಹೊಂದಿದೆ ಹಾಗಾಗಿ ಈ ದೈವ ಮೂಲತ ವೀರ ಅರಸಿಯಾಗಿರುವ ಸಾಧ್ಯತೆ ಇದೆ ಸಾಂತ್ಯ ಗುತ್ತಿನ ಹಿರಿಯ ಮಹಿಳೆ ಆಗಿದ್ದಿರುವ ಸಾಧ್ಯತೆ ಇದೆ. ಪಡ್ಡೊಟ್ನಾರ್ ಇವರ ತಂಗಿ ಆಗಿರುವ ಸಾಧ್ಯತೆ ಇದೆ ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಮಾಹಿತಿ  ಮತ್ತು ಚಿತ್ರ ಕೃಪೆ ಚಂದ್ರ ಶೇಖರ್ ಪೂಜಾರಿ .

No comments:

Post a Comment