Tuesday, 30 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು: 360 ಕಂಡನಾರ ಕೇಳನ್ ©ಡಾ ಲಕ್ಷ್ಮೀ ಜಿ ಪ್ರಸಾದ


ವಯನಾಟ್ ಕುಲವನ್ ದೈವದ ಸೇರಿಗೆಗೆ ಸಂದ ದೈವ ಕಂಡನಾರ ಕೇಳನ್. ವಯನಾಟ್ ಕುಲವನ್ ಜೊತೆಗೆ ಅರಾಧನೆ ಇರುತ್ತದೆ .
ವಯನಾಡ್ ಕುಲವನ್ ತನ್ನನ್ನು ಆರಾಧಿಸಿದ ಕಣ್ಣನಿಗೆ ಅಭಯ ನೀಡಿ ಬೇರೆಡೆಗೆ ಸಂಚಾರ ಮಾಡುತ್ತದೆ.ಹಾಗೆ ಸಂಚರಿಸುತ್ತಾ ಚೆಮ್ಮರತಿ ಎಂಬ ಮಹಿಳೆಯ ಬಳಿ ಹೋಗಿ ಕಳ್ಳು ಕೇಳುತ್ತದೆ .ಮಧು ಪಾತ್ರೆಯಲ್ಲಿ ಆಕೆಯ ಮಗ ಕಂಡನ್ ಗೆ ಸಾಕಾಗುವಷ್ಟು ಮಾತ್ರ ಮಧು ಇರುತ್ತದೆ
ಹಾಗಾಗಿಯೇ ಅವಳು ಇಲ್ಲವೆಂದು ಸುಳ್ಳು ಹೇಳುತ್ತಾಳೆ. ಮಣ್ಣನ್ನು ಸುಟ್ಟು ಕೃಷಿಗೆ ಸಜ್ಜು ಮಾಡಲು ಹೋದ ಅವಳ ಮಗ ಕಂಡನ್ ಮನೆಗೆ ಬಂದು ನೋಡುವಾಗ ಕಳ್ಳಿನ ಪಾತ್ರೆ ಬರಿದಾಗಿರುತ್ತದೆ .
ಆಗ ಆತ ತಾಯಿಯಲ್ಲಿ ಇಲ್ಲಿಗೆ ಯಾರು ಬಂದಿದ್ದರು ? ಎಂದು ಕೇಳಿದಾಗ ದೂರದಲ್ಲಿ ಸಾಗುತ್ತಿದ್ದ ಕುಲವನ್ ಅನ್ನು ತೋರಿಸುತ್ತಾಳೆ.ಆಗ ಅ ವೃದ್ಧನ ರೂಪಿನ ವಯನಾಟ್ ಕುಲವನ್ ಅನ್ನು ತೊಂಡಚ್ಚಾ ಎಂದು ಕರೆದು ಹಿಂಬಾಲಿಸುತ್ತಾನೆ .ಅವನ ಮನವೊಲಿಸಿ ಹಿಂದೆ ಕರೆತರುತ್ತಾನೆ.ಹಿಂದೆ ಬಂದಾಗ ಮಧು ಪಾತ್ರೆ ತುಂಬಾ ಕಳ್ಳು ತುಂಬಿರುತ್ತದೆ.ಅದರಿಂದಾಗಿ ಆತನ ಮಹಿಮೆ ತಿಳಿದು ಬೇಟೆಯಾಡಿ ತಂದಿದ್ದ ಜಿಂಕೆ ಮಾಂಸವನ್ನು ನೀಡಿ ಮಧು ನೀಡಿ ಸತ್ಕರಿಸುತ್ತಾನೆ .
ಅನಂತರ ಕಾಡು ಸುಟ್ಟು ಮಣ್ಣು ಹದ ಮಾಡಲು ಕಂಡನ್ಹೋ ಹೋಗುತ್ತಾನೆ.ಅವನಿಗೆ ಗೊತ್ತಾಗದಂತೆ ಅವನನ್ನು ಹಿಂಬಾಲಿಸಿದ ವಯನಾಟ್ ಕುಲವನ್ ಸುತ್ತಲೂ ಬೆಂಕಿ ಹರಡುತ್ತಾನೆ.ತನ್ನ ಸುತ್ತ ಹಬ್ಬಿದ ಬೆಂಕಿಯಿಂದ ಪಾರಾಗಲು ಅವನು ದೊಡ್ಡದಾದ ಕರಿನೆಲ್ಲಿಕಾಯಿ ಮರವನ್ನು ಏರಿ ಕುಳಿತುಕೊಳ್ಳುತ್ತಾನೆ.ಇವನನ್ನು ಹಿಂಬಾಲಿಸಿ ಮರವೇರಿದ ಕಾಳಿಯನ್ ಮೊದಲಾದ ಸರ್ಪಗಳು ಅವನನ್ನು ಕಚ್ಚಿ ಕೆಳಗೆ ಬೀಳಿಸಿದವು.ಆಗ ಬೆಂಕಿಯಲ್ಲಿ ಬಿದ್ದು ಶುದ್ಧನಾದ ಕಂಡನ್ ಕಂಡನಾರ್ ಕೇಳನ್ ಎಂಬ ದೈವವಾಗಿ ಆರಾಧನೆ ಪಡೆಯುತ್ತಾನೆ.
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಲ್ಲಿ ಅಲೋಚಿಸಿದಾಗ ಇಲ್ಲಿ ಕೂಡ ಕಾಡಿನ ಬೆಂಕಿಗೆ ತುತ್ತಾಗಿ ದುರಂತವನ್ನಪ್ಪಿದ ಕಂಡನ್ ದೈವತ್ವ ಪಡೆದು ಅರಾಧನೆ ಹೊಂದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ .ಅವನ ದುರಂತ ಕಥಾನಕ ಕ್ಕೆ ವಯನಾಟ್ ಕುಲವನ್ ದೈವದ ಕಾರಣಿಕ ಸೇರಿ ಅಲೌಕಿಕ ಕಥಾನಕ ಸೃಷ್ಟಿಯಾಗಿದೆ
ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ
ಈ ದೈವದ ಕುರಿತಾಗಿ ಇನ್ನೊಂದು ರೀತಿಯ ಐತಿಹ್ಯ ಪ್ರಚಲಿತವಿದೆ. ಅದರ ಪ್ರಕಾರ ಕಂಡನಾರ್ ಕೇಳನ್ ಮೂಲತಃ ಓರ್ವ ಬೇಟೆಗಾರ.ಒಮ್ಮೆ ಇದ್ದಿಲಿನ ರಾಶಿಗಾಗಿ ಕಾಡಿಗೆ ಬೆಂಕಿ ಕೊಡುತ್ತಾನೆ.ಆದರೆ ಅವನ ನಿರೀಕ್ಷೆ ಮೀರಿ ಬೆಂಕಿ‌ ಹರಡುತ್ತದೆ.ಅದರಿಂದ ಪಾರಾಗಲು ಒಂದು ಮರವನ್ನು ಏರುತ್ತಾನೆ.ಅವನು‌ಮರ ಏರುವ ಮೊದಲೇ ಎರಡು ಹಾವುಗಳು ಬೆಂಕಿಯ ಕಾವಿಗೆ ನೊಂದು ಮರ ಹತ್ತಿದ್ದವು .ಕಂಡನಾರ ಕೇಲನ್ ಮರ ಹತ್ತಿದಾಗ ಆತನನ್ನು ಕಚ್ಚಿ ಪ್ರತೀಕಾರ ಮಾಡುತ್ತವೆ
ಅವನು ವಿಷವೇರಿ ಸತ್ತು ಮರದಿಂದ ಕೆಳಗೆ ಬೀಳುತ್ತಾನೆ.ಬೆಂಕಿಯ ಕಾವಿಗೆ ಬಳಲಿದ್ದ ಹಾವುಗಳು ಕೂಡ ಸತ್ತು ಅವನ ದೇಹದ ಮೇಲೆ ಬೀಳುತ್ತವೆ. (c)ಡಾ,ಲಕ್ಷ್ಮೀ ಜಿ ಪ್ರಸಾದ
ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದ ಶಿವ ಪಾರ್ವತಿ ಯರು ಇದನ್ನು ನೋಡುತ್ತಾರೆ ಕರುಣೆ ಉಕ್ಕಿ ಬಂದ ಪಾರ್ವತಿ ದೇವಿ ಇವರನ್ನು ಬದುಕಿಸುವಂತೆ ಶಿವನಲ್ಲಿ ಕೇಳಿಕೊಳ್ಳುತ್ತಾಳೆ.ಶಿವ ಅದನ್ನು ಒಪ್ಪದೇ ಇದ್ದರೂ ಅವನಿಗೆ ದೈವತ್ವ ನೀಡಿ ಆರಾಧನೆ ಹೊಂದುವಂತೆ ಕರುಣಿಸುತ್ತಾನೆ .ನಂತರ ಕಂಡನಾರ್ ಕೇಳನ್ ದೈವ/ತೆಯ್ಯಂ ಆಗಿ ಆರಾಧನೆ ಪಡೆಯುತ್ತಾನೆ.  (c)ಡಾ,ಲಕ್ಷ್ಮೀ ಜಿ ಪ್ರಸಾದ
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಆಲೋಚಿಸುವುದಾದರೆ ಬೇಟೆಗಾರನೊಬ್ಬ ಕಾಡ್ಗಿಚ್ಚಿಗೆ ಸಿಲುಕಿ ದುರಂತ ವನ್ನು ಹೊಂದಿದ್ದು ಕಾಲಾಂತರದಲ್ಲಿ ದೈವತ್ವ ಪಡೆದು ಆರಾಧನೆ ಹೊಂದಿರುವ ವಿದ್ಯಮಾನವಿದು
ಮಾಹಿತಿ ಮೂಲ
ಶ್ರೀಜಿತ್ ನಂಬಿಯಾರ್ 

No comments:

Post a Comment