Tuesday, 30 May 2017

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 361-368ಪುಲಿಯೂರ್ ಕಾಳಿ ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

ಮಲೆಯಾಳ ತೆಯ್ಯಂ ಗಳಲ್ಲಿ ಹೆಚ್ಚಿನ ದೈವಗಳಿಗೂ ಪುರಾಣ ಮೂಲದ ಕಥಾನಕ ಗಳು ಸೇರಿಕೊಂಡಿವೆ .ಅಂತೆಯೇ ಕರಿಂಖಾಳಿ ಕರಿಂತಿರಿ ನಾಯರ್ ಹುಲಿ ದೈವಗಳ ಕಥಾನಕ ದಲ್ಲಯೂ ಶಿವ ಪಾರ್ವತಿಯರ ಕತೆ ಇದೆ.
ಕೋಲತ್ತು ನಾಡಿನ ಪಶ್ಚಿಮ ಘಟ್ಟ ಪ್ರದೇಶ ಕ್ಕೆ ಬ್ರಾಂದವನ ಎಂದು ಕರೆಯುತ್ತಿದ್ದರು.ಅದು ಶಿವನ ದಕ್ಷಿಣ ದ ಕೈಲಾಸಗಿರಿ ಎಂದು ಭಾವಿಸಲಾಗಿತ್ತು.ಒಂದು ದಿನ ಕಾಡಿನಲ್ಲಿ ಗಂಡು ಹೆಣ್ಣು ಹುಲಿಗಳ ರತಿಯಾಟ ನೋಡಿದ ಶಿವ ಪಾರ್ವತಿಯರಯ ಗಂಡು ಹೆಣ್ಣು ಹುಲಿಗಳ ರೂಪು ಧರಿಸಿ ರಮಿಸಿದರು.
ಆಗಿನ ಹುಲಿ ರೂಪಿನ ಪಾರ್ವತಿ ದೇವಿಯು ಪುಳ್ಳಿಕರಿಂಕಾಳಿ ಭಗವತಿ ಎಂಬ ಹೆಸರಿನಲ್ಲಿ ದೈವವಾಗಿ ತೆಯ್ಯಂ ಕಟ್ಟಿನಲ್ಲಿ ಆರಾಧನೆ ಹೊಂದುತ್ತಾಳೆ.
ಹುಲಿ ರೂಪಿನ ಪಾರ್ವತಿ ದೇವಿಯು " ಪುಲ್ಲೂರ್ಣನ್,ಕಾಳಪುಲಿಯನ್,ಪುಲಿಮಾರುತನ್,ಮೊರಪುಲಿಯನ್ ಎಂಬ ಐದು ಹುಲಿಗಳಿಗೆ ಜನ್ಮ ನೀಡುತ್ತಾಳೆ.ಆಗ ವಿಷ್ಣು ವು ಹೆಣ್ಣು ಹುಲಿ ರೂಪು ಧರಿಸಿ ಅವರ ಆರೈಕೆ ಮಾಡುತ್ತಾನೆ ವಿಷ್ಣುವಿನ ಹೆಣ್ಣು ಹುಲಿ ರೂಪನ್ನು ಪುಲಿಯೂರ್ ಕಾಳಿ ಎಂದು ಕರೆದು ಆರಾಧಿಸುತ್ತಸರೆ
ಆ ಕಾಲದಲ್ಲಿ ರಾಮಪುರಂ ಪ್ರದೇಶವನ್ನು ಕೂರುಂಬ್ರಾಂದಿ ತಂಬಿರಾನ್ ಎಂಬ ಅರಸ ಆಳ್ವಿಕೆ ಮಾಡುತ್ತಾ ಇದ್ದನು .ಕರಿಂದಿರಿ  ಕಣ್ಣನ್ ನಾಯರ್  ಎಂಬ ವೀರ ಆತನ ಮಂತ್ರಿ ಮತ್ತು ಸೇನಾನಿ ಆಗಿದ್ದನು.ಈ ಐದು ಹುಲಿಗಳು ಪುರುಷ ರೂಪು ಧರಿಸಿ ತಂಬುರಾನ್ ಅರಮನೆಗೆ ಬಂದು ತಮಗೆ ಬಾಳೆಲೆ ಇಡುವಷ್ಟು  ಜಾಗವನ್ನು ಕೇಳಿದರು.ಆಗ ಬಾಣದ ಮೊಳೆ ಇರುವಷ್ಟು ಜಾಗವನ್ನು ಕೊಡಲಾಗದು ಎಂದು ಅರಸನ ಮಂತ್ರಿ ಕರಿಂತಿರಿ ನಾಯರ್ ಹೇಳುತ್ತಾನೆ .ನಮಗೆ ಐವರಿಗೆ ಜಾಗ ನೀಡದಿದ್ದರೆ ಕೂರುಬ್ರಾಂದಿ ಅರಸನಿಗೆ ನೆಮ್ಮದಿಯಿಂದ ಅಮೃತ ಭೋಜನ ಮಾಡಲು ಬಿಡಲಾರೆವು ಎಂದು ಹೇಳಿ ಹಿಂತಿರುಗುತ್ತಾರೆ.
ಅರಸನ ಕೋಟೊಯೊಳಗೆ ಏಳು ಗೋಶಾಲೆಗಳು ಇದ್ದವು.ಒಂದು ಸೋಮವಾರದಂದು ಸಂಧ್ಯಾ ಸಮಯದಲ್ಲಿ ಐದು ಹುಲಿ ಮರಿಗಳ
 ಗೋಶಾಲೆಗೆ ನುಗ್ಗಿ ಹಸುಗಳನ್ನು ತಿಂದವು.ಮರುದಿನವೂ ಹೀಗೇ ಆಯಿತು.
ಮೂರನೇ ದಿನ‌ಅರಸನ ಮಂಚದ ಬಳಿ ಹಾಕಿದ್ದ ಗೋದಾವರಿ ಎಂಬ ಅಪರೂಪದ ಹಸುವನ್ನು ಕೊಂದು ತಿಂದವು.ಇದರಿಂದ ಅರಸ ಹಾಗೂ ಅವನ ಪರಿವಾರದವರು ಚಿಂತಿತರಾದರು.
ಆಗ ಕರೀಂದಿರಿ ನಾಯರ್ ಹುಲಿಗಳನ್ನು ಹೇಗಾದರೂ ಕೊಲ್ಲಬೇಕು ಎಂದು ತೀರ್ಮಾನಿಸಿದನು.
ಅವನು ಹುಲಿಗಳು ಬರುವ ದಾರಿಯಲ್ಲಿ ತಡೆಯನ್ನು ನಿರ್ಮಿಸಿ ಎಲ್ಲಾ ವಿಧದ ಆಯುಧಗಳನ್ನು ತರಿಸಿ ಬೇಟೆಗಾಗಿ ಅಡಗಿ ಕುಳಿತನು.ಹುಲಿಗಳು ಬರುತ್ತಲೇ ಬೆಡಿಯಿಂದ ಗುಂಡು ಹಾರಿಸಿದನು.ಗುಂಡುಗನ್ನು ಹುಲಿಗಳು ಆಣಿಗಳಾಗಿಸಿ ತಡೆದು ನಿಲ್ಲಿಸಿದವು.ಬಿಲ್ಲಿಗೆ ಬಾಣ ಹೂಡಿದಾಗ ಗೆದ್ದಲು ಹಿಡಿದು ತುಂಡಾಯಿತು.ಖಡ್ಗ ಎತ್ತಲು ಹೊರಟಾಗ ಕೈ ಭಾರವಾಗಿ ಅಲುಗಾಡಲಿಲ್ಲ ಹೇಗೆ ಕರೀಂದಿರಿ ಕಣ್ಣನ್ ನಾಯರ್ ಗೆ ಹುಲಿಗಳನ್ನು ಕೊಲ್ಲಲಾಗಲಿಲ್ಲ ಆಗ ಅವನಿಗೆ ಹುಲಿಗಳ ಕಾರಣಿಕ ಅರ್ಥವಾಯಿತು.ಹುಲಿಗಳು ಆತನನ್ನು ಕೊಂದು ತಮ್ಮ ಬಳಗಕ್ಕೆ ಸೇರಿಸಿಕೊಂಡವು.
ಮಂತ್ರಿಯನ್ನು ಹುಡುಕುತ್ತಾ ಬಂದ ಅರಸ ಹುಲಿಗಳ ನಿಜ ರೂಪು ಕಂಡು ರೋಮಾಂಚನಗೊಂಡನು.ಹುಲಿಗಳೆಲ್ಲಾ ಅದೇ ರೂಪಿನ ದೈವಗಳೆಂದೂ ಕರೀಂದಿರಿ ಕಣ್ಣನ್ ನಾಯರ್ ಕೂಡ ದೈವವಾದುದು ಅವನಿಗೆ ಅರಿವಾಯಿತು.ಮುಂದೆ ಬಂದು ನಮಸ್ಕರಿಸಿ ನಾನುತಿಳಿಯದೆ ತಪ್ಪು ಮಾಡಿದೆ ಕಗಷಮಿಸ ಬೇಕೆಂದು ಬೇಡಿದನು.ಅರಸನಿಗೆ ಅನುಗ್ರಹ ಮಾಡಿದ ದೈವಗಳು ನಾವಿಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಕ ಆದರೂ ಪ್ರತಿವರ್ಷ ನಮ್ಮೆಲ್ಲರನ್ನು ಕಟ್ಟಿಸಿ ಆಡಿ ತೃಪ್ತಿ ಗೊಳಿಸಬೇಕೆಂದು ಹೇಳಿ ರಾಮಪುರದಿಂದ ಮುನ್ನಡೆದವು.
ಕೋಲತ್ತುನಾಡಿನ ಮೆಕ್ಕಾಳಕುಂಠಂ ಮಧುವನಂ,ಕೀಕ್ಕಾಳಕುಂಠಂ ಮಧುವನಂ,ಮಂಜ್ಯಟ್ಪಾಲ್ ಮಧುವನಂ,ನರಿ ಮುಙುಂ ಮಧವನಂ,ತೊಳ್ಳಾರ್ ವೇಲಿ,ಕುರುಂಬ್ರಾಂದಿ ಕೋಟೆ ಮೊದಲಾದೆಡೆ ಕಾವು ಮುಂಡ್ಯೆಗಳಲ್ಲಿ ನೆಲೆಯಾಗಿ ಎಲ್ಲೆಡೆ ಪ್ರಸರಣಗೊಂಡವು.
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಹೇಳುವುದಾದರೆ ಹುಲಿಗಳ ಕಾಟ ತಾಳಲಾಗದೆ ಅವನ್ನು ಬೇಟೆಯಾಡಲು ಹೋದ ವೀರ ಮಂತ್ರಿ ಅವುಗಳಿಗೆ ಬಲಿಯಾಗುತ್ತಾನೆ ಹುಲಿಗಳಿಂದ ಪಾರಾಗಲು ಅವುಗಳನ್ನು ಅರಸು ಆರಾಧನೆ ಮಾಡುತ್ತಾನೆ. ಜೊತೆಗೆ ದುರಂತವನ್ನಪ್ಪಿದ ಕರೀಂದಿರಿ ಕಣ್ಣನ್ ನಾಯರ್ ಕೂಡ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ. ಇದಕ್ಕೆ ಕಾರಣವಾಗಿ ಹುಲಿಗಳ ಹುಟ್ಟಿಗೆ ಪುರಾಣ ದೇವತೆಗಳ ಕಥಾನಕ ಗಳು ಸೇರ್ಪಡೆಗೊಂಡಿವೆ.© ಡಾ ಲಕ್ಷ್ಮೀ ಜಿ ಪ್ರಸಾದ

ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು - ಕೇಳು ಮಾ್ತರ್ ಅಗಲ್ಪಾಡಿ 

No comments:

Post a Comment