Tuesday, 30 May 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು371 ಕಣ್ಣಗಿ ಭಗವತಿ© ಡಾ ಲಕ್ಷ್ಮೀ ಜಿ ಪ್ರಸಾದ

ಅರಸು ದೌರ್ಜನ್ಯಕ್ಕೆ ಸಾಕ್ಷಿ ಯಾಗಿ ನಿಲ್ಲುವ ಕಣ್ಣಗಿಯ ಕಥೆ ತಮಿಳು ಸಂಘಂ ಸಾಹಿತ್ಯದ ಶಿಲಪ್ಪದಿಕಾರಂ ನಲ್ಲಿ ಕೂಡ ಸೂಕ್ಷ್ಮ ವಾಗಿ ಉಲ್ಲೇಖ ಗೊಂಡಿದೆ ಎಂದು ಕೇಳು ಮಾಸ್ತರ್ ಅಗಲ್ಪಾಡಿ ಹೇಳಿದ್ದಾರೆ.ಕೇರಳದ ತೃಶೂರ್ ಜಿಲ್ಲೆಯ ಕೊಡುಂಗಲ್ಲೂರು ಭದ್ರ ಕಾಳಿ ದೈವದ ತೋತ್ತಂಪಾಟ್ ನಲ್ಲಿ ಈ ಬಗ್ಗೆ ವಿವರಣೆ ಇದೆ.
ಈ ದೂವ ಮೂಲತಃ ಕಣ್ಣಗಿ ಎನ್ನುವ ಮಹಿಳೆ.ಹಿಂದೆ ತಮಿಳುನಾಡನ್ನು ಚೇರ ವಂಶದ ರಾಜನು ಆಳುತ್ತಿದ್ದನು.ಮಧುರಾನಗರ ಅದರ ರಾಜಧಾನಿ ಯಾಗಿತ್ತು.ಅಲ್ಲಿ ಕಾವೇರಿ ಪುರ ಎಂಬ ಪಟ್ಟಣವಿತ್ತು.ಅಲ್ಲಿ ಓರ್ವ ಶ್ರೀ ಮಂತ ವರ್ತಕನಿದ್ದು ಅವನಿಗೆ  ಕೋವಳನ್ ಎಂಬ ಹೆಸರಿನ ಮಗನಿದ್ದನು.ಇನ್ನೊಬ್ಬ ವರ್ತಕನಿಗೆ ಕಣ್ಣಗಿ ಎಂಬ ಮಗಳಿದ್ದಳು.
ಕಣ್ಣಗಿ ಮತ್ತು ಕೋವಳನ್ ವಿವಾಹವನ್ನು ಹಿರಿಯರು ನೆರವೇರಿಸಿದ್ದು ಅವರು ಸುಖವಾಗಿದ್ದರು.
ಸ್ವಲ್ಪ ಕಾಲದ ನಂತರ ಕೋವಳನ್ ಮಾಧವಿ ಎಂಬ ವೇಶ್ಯೆ ಯ ಸಹವಾಸದಿಂದ ಕೆಡುತ್ತಾನೆ .ತನ್ನ ಆಸ್ತಿ ಶ್ರೀ ಮಂತಿಕೆ ಎಲ್ಲವನ್ನೂ ಕಳೆದುಕೊಂಡನು.ಬಡವನಾದ ಮೇಲೆ ವೇಶ್ಯೆಯ ಸಖ್ಯವೂ ದೂರವಾಯಿತು.
ತಾನು ಮಾಡಿದ ತಪ್ಪು ಕೆಲಸಕ್ಕೆ ಪಶ್ಚಾತ್ತಾಪ ಪಟ್ಟು ಮನೆಗೆ ಬಂದು ಕಣ್ಣಗಿಯಲ್ಲಿ ಕ್ಷಮೆ ಕೇಳಿದನು .ಕಣ್ಣಗಿ  ಗಂಡನ ತಪ್ಪನ್ನು ಕ್ಷಮಿಸಿ ಅವನೊಡನೆ ಚೆನ್ನಾಗಿ ಬಾಳುತ್ತಾ ಇದ್ದನು.ಆದರೆ ಕೋವಳನ್ ನ ವ್ಯಾಪಾರ ದಿನೆ ದಿನೇ ಇಳಿಮುಖವಾಗ ತೊಡಗಿತು.ಚಿಂತೆ ಮಾಡುತ್ತಾ ಕುಳಿತ ಅವನ ಬಳಿ ಬಂದ ಕಣ್ಣಗಿ ತನ್ನ ಕಾಲಿನ ಎರಡು ಚಿನ್ನದ ಕಡಗಗಳನ್ನು ತಂದು ಕೊಟ್ಟು ಇದನ್ನು ಮಾರಾಟಮಾಡಿ ಬಂದ ದುಡ್ಡಿನಲ್ಲಿ ವ್ಯಾಪಾರ ಮಾಡಿ ಆದ ನಷ್ಟ ವನ್ನು ಸರಿ ದೂಗಿಸೋಣ ಎಂದು ಹೇಳುತ್ತಾಳೆ.
ಕೋವಳನು ಕಣ್ಣಗಿಯ ಗಗ್ಗರ/ ಕಾಲಿನ ಕಡಗವನ್ನು ಮಧುರೆಗೆ ಬಂದು ಒಬ್ಬ ಅಕ್ಕಸಾಲಿಗೆ ತೋರಿಸಿ ಅದರ ಬೆಲೆ ಕಟ್ಟಿ ಕೊಡುವಂತೆ ಕೇಳುತ್ತಾನೆ.ಅದೇ ಸಮಯದಲ್ಲಿ ಅಲ್ಲಿನ ಅರಸನ ಮಡದಿಯ ಕಾಲ್ಗಡಗ ಕಳ್ಳತನವಾಗಿತ್ತು .ಅದನ್ನು ಆ ಅಕ್ಕಸಾಲಿಯು ಕದ್ದಿದ್ದನು.ಅರಸನು ಕಳ್ಳನನ್ನು ಹುಡುಕುತ್ತಾ ಇದ್ದರು.ಕಣ್ಣಗಿಯ ಕಡಗಗಳು ರಾಣಿಯ ಕಡಗಗಳ ಹಾಗೆ ಇದ್ದವು.
ತಾನು ಬಚಾವಾಗುವ ಸಲುವಾಗಿ ಅಕ್ಕಸಾಲಿ ಒಂದು ಉಪಾಯವನ್ನು ಮಾಡಿದನು.ಕೋವಳನಲ್ಲಿ " ನೀನು ನನ್ನ ಮನೆಗೆ ಬಾ ಅಲ್ಲಿ ಇದನ್ನು ಪರೀಕ್ಷೆ ಮಾಡಿ‌ಮೌಲ್ಯ ತಿಳಿಸುತ್ತೇನೆ ಎಂದು ಮನೆಗೆ ಕರೆತಂದನು.
ಇತ್ತ ಗುಪ್ತವಾಗಿ ಅರಸಿಯ ಕಡಗಗಳು ಸಿಕ್ಕಿವೆ ಎಂದು ರಾಜನಿಗೆ ಹೇಳಿ ಕಳುಹಿಸುತ್ತಾನೆ.
ರಾಜ ಭಟರು ಬಂದು ಕೋವಳನ್ನು ರಾಜನೆಡೆಗೆ ಕರೆದುಕೊಂಡು ಹೋಗುತ್ತಾರೆ. ರಾಜನು ವಿಚಾರಣೆ ನಡೆಸದೆ ಹಾಗೆಯೇ ಗಲ್ಲಿಗೇರಿಸಿದನು.
ಈ ಸುದ್ದಿ ಕಣ್ಣಗಿಗೆ ತಿಳಿದು ದುಃಖ ಉಕ್ಕಿಬಂತು.ಜೊತೆಗೆ ರಾಜನು ಮಾಡಿದ ಅನ್ಯಾಯ ಕಂಡು ಕೋಪದಿಂದ ಮಧುರೆ ಗೆ ಬಂದು ರಾಜ ಸಭೆಗೆ ಬಂದು " ಮಹಾರಾಜ ನಿರ್ದೋಷಿಯಾಗಿದ್ದ ನನ್ನ ಗಂಡನನ್ನು ಯಾಕೆ ಗಲ್ಲಿಗೇರಿಸಿದೆ ? ಎಂದು ಪ್ರಶ್ನಿಸುತ್ತಾಳೆ.ಆಗ ಅರಸ ಆತನು ರಾಣಿಯ ಕಡಗಗಳನ್ನು ಕಳ್ಳತನ ಮಾಡಿದ್ದ ಎಂದು ಉತ್ತರಿಸುತ್ತಾನೆ."ಅವು ರಾಣಿಯ ಕಡಗಗಳೇ ಎಂದು ಹೇಗೆ ನಿರ್ಣ ಮಾಡುವಿ? ಎಂದು ಅರಸನಲ್ಲಿ ಅವಳು ಪ್ರಶ್ನೆ ಮಾಡಿದಾಗ ಅದರ ಒಳಗಡೆ ಅಮೂಲ್ಯ ವಾದ ಮುತ್ತುಗಳಿವೆ ಎಂದು ರಾಜನು ಹೇಳುತ್ತಾನೆ.ಹಾಗಾದರೆ ಕಡಗಗಳನ್ನು ತರಿಸು ಪರೀಕ್ಷೆ ಮಾಡೋಣ ಎಂದು ಕಣ್ಣಗಿ ಹೇಳಿದಾಗ ಅ ಕಡಗಗಳನ್ನು ತರಿಸಿ ಅರಸನು ಅವಳ ಕೈಗೆ ನೀಡುತ್ತಾನೆ. ಅವನ್ನು ನೋಡುತ್ತಲೇ ಕೋವಳನ್ ನೆನಪಿಗೆ ಬಂದು ದುಃಖ ಉಕ್ಕೇರಿ ಬಂತು .ಕೋಪದಿಂದ ಆ ಕಡಗಗಳನ್ನು ನೆಲಕ್ಕೆ ಬಡಿದಳು .ಕಡಗ ಮುರಿದು ಅದರ ಒಳಗಿನಿಂದ ಮಾಣಿಕ್ಯಗಳು ಉದುರಿದವು.ಅದನ್ನು ನೋಡಿ ರಾಜನು ಹೌಹಾರಿದನು .ರಾಜನ‌ಮಡದಿಯ ಕಡಗಗಳ ಒಳಗೆ ಮುತ್ತುಗಳು ಇದ್ದವು.ಇವುಗಳ ಒಳಗೆ ಮಾಣಿಕ್ಯಗಳು ಇದ್ದ ಕಾರಣ ಅವು ಅರಸಿಯ ಕಡಗಗಳು ಅಲ್ಲವೆಂದು ಸ್ಪಷ್ಟವಾಗಿ ತಿಳಿಯಿತು.ಅರಸನು ಕಣ್ಣಗಿಯಲ್ಲಿ ಕ್ಷಮೆ ಕೇಳಿದನು ಆದರೆ ಕಣ್ಣಗಿಯ ಕೋಪ ಆರಲಿಲ್ಲ.ಮಧುರೆ ಪಟ್ಟಣ ಉರಿದು ಹೋಗುವಂತೆ ಶಾಪ ನೀಡಿದಳು.ಅರಮನೆ ಸೇರಿದಂತೆ ಪಟ್ಟಣ ಬೆಂಕಿ ಹಿಡಿದು ಉರಿದು ಭಸ್ಮವಾಯಿತು.ಆಗ ಊರಿನ ಅಧಿ ದೇವತೆ ಮೀನಾಕ್ಷಿ ದೇವಿ ಕಾಣಿಸಿಕೊಂಡು ನಿನ್ನ ಗಂಡನನ್ನು ಬದುಕಿಸಿ ಕೊಡುತ್ತೇನೆ ಶಾಪ ಹಿಂತೆದುಕೋ.ಇಂದಿಗೆ ಹದಿನಾಲ್ಕು ದಿನಗಳ ನಂತರ ವೈಹೈ ನದೀ ತೀರಕ್ಕೆ ಬಾ ಅಲ್ಲಿ ನಿನ್ನ ಗಂಡನನ್ನು ನೋಡುವೆ  ಎಂದು ಹೇಳಿ ಕೋವಳನ್ ಅನ್ನು ಬದುಕಿಸಿ‌ಕೊಡುತ್ತಾಳೆ.ಹದಿನಾಲ್ಕನೆ ದಿನ ನದೀ ತೀರದಲ್ಲಿ ಕೋವಳನ್ ಅವಳಿಗೆ ಕಾಣಿಸಿದನು.ಓಡಿ ಹೋಗಿ ಅವನನ್ನು ತಬ್ಬಿಕೊಂಡಳು.ಶಾಪ ಗ್ರಸ್ತ ಯಕ್ಷ ಕೋವಳನಾಗಿ ಜನಿಸಿದ್ದನು.ಶಾಪ‌ಮುಕ್ತಿಯಾದ ಅವನು ತನ್ನ ಮೂಲ ಸ್ಥಾನಕ್ಕೆ ತೆರಳಿದಾಗ ಕಣ್ಣಗಿ ದೇಶಾಟನೆಗೆ ತೀರ್ಮಾನ ಮಾಡಿದಳು.
ಚೇರ ರಾಜ ಮತ್ತು ಪ್ರಜೆಗಳು ಅವಳಿಗೆ ಒಂದು ದೇವಾಲಯ ಕಟ್ಟಿ ಆರಾಧಿಸಿದರು ಆದರೂ ಅವಳು ಶಾಂತಳಾಗಲಿಲ್ಲ .ಅವಳು ದೈವತ್ವ ಪಡೆದು ಭದ್ರಕಾಳಿ ರೂಪು ಧರಿಸಿ ಮೊದಲಿಗೆ ಅಕ್ಕಸಾಲಿಯನ್ನು ಕೊಂದಳು.ನಂತರ ಆ ಅರಸನನ್ನು ಕೊಂದಳು ನಂತರ ಕೋಡಂಗಲ್ಲೂರಿಗೆ ಬಂದಳು.ಅಲ್ಲಿಯ ಅರಮನೆಯಲ್ಲಿ ಯೂ ಅನೇಕ ದುರ್ಘಟನೆ ಗಳು‌ನಡೆದಾಗ ಜ್ಯೋತಿಷಿಗಳನ್ನು ಕರೆಸಿ ಕೇಳಿದಾಗ ಕಣ್ಣಗಿ ಭದ್ರ ಕಾಳಿಯಾಗಿ ಆವಿರ್ಭವಿಸಿ ಬಂದ ವಿಚಾರ ಕಂಡು ಬರುತ್ತದೆ .ಅವಳನ್ನು ಶಾಂತಳಾಗಿಸಲು ಅವರು ಪ್ರಾರ್ಥನೆ ಮಾಡಿ ಆರಾಧಿಸುತ್ತಾರೆ‌.
ಮುಂದೆ ಯತಿ ಬ್ರಾಹ್ಮಣರ ಪ್ರಾರ್ಥನೆಗೆ ಒಲಿದ ಅವಳು ತನ್ನ ಅಸುರೀ ಶಕ್ತಿ ಯನ್ನು ಪ್ರಸರಣಕ್ಕೆ ಕಳಹಿಸಿ ತಾನು ದೈವೀ ಸಾತ್ವಿಕ ಶಕ್ರಿಯಾಗಿ ಕೋಡಂಗಲ್ಲೂರಿನಲ್ಲಿ ನೆಲೆಸಿದಳು.
ಮುಂದೆ ಅನೇಕೆಡೆಗಳಲ್ಲಿ ಭದ್ರ ಕಾಳಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ
ಇಲ್ಲಿ ಕೂಡ ಕಣ್ಣಗಿಯ ದುರಂತ ಮತ್ತು ದೈವತ್ವ ಮೂಲ ಕಥಾನಕ ವಾಗಿದೆ .ಅರಸು ದೌರ್ಜನ್ಯ ಕ್ಕೆ ಈಡಾಗಿ ಕೋವಳನ್ ಸತ್ತಾಗ ದುರಂತವನ್ನಪ್ಪುವ ಕಣ್ಣಗಿ ಕಾಲಾಂತರದಲ್ಲಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾಳೆ.
ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

No comments:

Post a Comment