Wednesday, 31 May 2017

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು : 372 ಪೆರಿಯಾಟ್ ಕಂಡನ್

ಯಾರಿಗೆ ಯಾವಾಗ ಯಾಕೆ ಹೇಗೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ ಅಸಾಮಾನ್ಯ ಸಾಹಸ ಮೆರೆದವರೂ ಸಾಮಾನ್ಯ ಜನರೂ,ಎಲ್ಲ ಜಾತಿ ವರ್ಗದ ಜನರೂ ಕಾರಣಾಂತರಗಳಿಂದ ದೈತ್ವ ಪಡೆದು ಆರಾಧನೆ ಪಡೆದಿದ್ದಾರೆ.
ಪೆರಿಯಾಟ್ ಕಂಡನ್ ಇಂತಹ ಒಂದು ವಿಶಿಷ್ಟ ದೈವ .ಮಿತ್ತೂರು ನಾಯರ್ ದೈವಗಳೆಂದು ಪ್ರಸಿಧ್ಧ ವಾದ ಚಾತು ಮತ್ತು ಚಂದುಗಳ ಕುರಿತಾದ ಒಂದು ಐತಿಹ್ಯ ದಲ್ಲಿ " ನಾಡಿನ ಮಾದ ಮಂಗಲದಲ್ಲಿ ಒಂದು ನಾಯರ್ ಮನೆತನಕ್ಕೆ ಕೋಲತ್ತಿರಿ ರಾಜನ ಸೇನಾಪತ್ಯದ ಅಧಿಕಾರವಿತ್ತು ಆದರೆ ಆ ಕುಟುಂಬದಲ್ಲಿ ಗಂಡು ಸಂತಾನವಿಲ್ಲದೆ ಕೊರಗುತ್ತಾ ಇದ್ದರು.ತುಳೂರ್ ವನದ ಕಳರಿ ಗುರುಗಳೊಬ್ಬರು ಮಾದಮಂಗಲ ಕ್ಕೆ ಬಂದಿದ್ದಾಗ ಅವರ ದುಃಖವು ತಿಳಿದು ಆ ಮನೆತನದ ಯುವತಿಯನ್ನು ಮದುವೆಯಾದರು ಅವಳು ಚಾತು ಚಂದು ಎಂಬ ಎರಡು ಗಂಡುಮಕ್ಕಳನ್ನು ಹಡೆದಳು.ಗುರುಗಳು ತೆರಳುವಾಗ ಈ ಹುಡುಗರು ದೊಡ್ಡವರಾದಾಗ ಅವರನ್ನು ತುಳೂರ್ವನದ ಭಗವತಿ ಸೇವೆಗೆ ಬಿಟ್ಟರೆ ಎಲ್ಲರಿಗೂ ಗಂಡು ಸಂತಾನವಾಗುತ್ತದೆ ಎಂದು ನುಡಿದರು.
ಅವರ ಮಾತಿನಂತೆ ಚಂದು ಮತ್ತು ಚಾತು ಹದಿನೆಂಟು ವಯಸ್ಸಿನ ವರಾದಾಗ ಅವರನ್ನು ತುಳೂರ್ವನಕ್ಕೆ ಕಳಹಿಸಿಕೊಟ್ಟರು
ಅವರು ಹೋಗುವಾಗ ತಮ್ಮ ಜೊತೆ ತಮ್ಮ ಸಹಪಾಠಯಾಗಿರುವ ಕಂಡನ್ ಎಂಬ ಮಣಿಯಾಣಿ ದಮುದಾಯಕ್ಕೆ ಸೇರಿದ ಯುವಕನನ್ನು ಕರೆದುಕೊಂಡು ಹೋದರು.ದಾರಿ ನಡುವೆ ಬಾಲಕ್ಕಡಕ್ಕತ್ ಎಂಬ ತರವಾಡು ಮನೆಯಲ್ಲಿ ಉಳಿದುಕೊಳ್ಳುತ್ತಾರೆ.ಆ ತರವಾಡು ಬೀಡಿನ ಹಿರಿಯ ಮಹಿಳೆ ಬಾಲಕ್ಕಡಗತ್ತಮ್ಮಳ ಕೋರಿಕೆಯಂತೆ ಆ ಮಣಿಯಾಣಿ ಯುವಕನು ಆ ಮನೆತನದ ಮೇಲಾಳಾಗಿ ನಿಂತು ಆ ಮನೆಯ ಹುಡುಗಿಯನ್ನು ಮದುವೆಯಾಗಿ ಅಲ್ಲಿಯೇ ಉಳಿದನು .ಅವನಿಂದಾಗಿ ಆ ಕುಟುಂಬ ಸಮೃದ್ಧ ವಾಯಿತು.ನಂತರ ಆತ ಪೆರಿಯಾಟ್ ಕಂಡನ್ ಎಂಬ ಹೆಸರಿನ ಮೂಲಕ ಪ್ರಸಿದ್ಧಿ ಪಡೆದು ನಾನಾ ರೀತಿಯ ಕಾರಣಿಕಗಳನ್ನು ತೋರಿಸುತ್ತಾನೆ .ಇತ್ತ ಚಂದು ಚಾತುಗಳು ದೈವತ್ವ ಪಡೆದಂತೆ ಅವರ ಸಹಪಾಠಿ ಯಾಗಿದ್ದ ಕಂಡನ್ ಕೂಡ ದೈವತ್ವ ಪಡೆದು ಪೆರಿಯಾಟ್ ಕಂಡನ್ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ ಎಂದು ಕೇಳು ಮಾಸ್ತರ್ ಅಗಲ್ಪಾಡಿ ಹೇಳಿದ್ದಾರ
ಆಧಾರ ಗ್ರಂಥ - ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ 

No comments:

Post a Comment