Friday 5 May 2017

ನನ್ನ ಪ್ರಿಯ ವಾದ ಭೂತಾರಾಧನೆಯ ಅಧ್ಯಯನ ವನ್ನು ಬಿಟ್ಟು ಬಿಡಲೇ ©ಡಾ ಲಕ್ಷ್ಮೀ ಜಿ ಪ್ರಸಾದ

ನನ್ನ ಪ್ರಿಯವಾದ ಭೂತಾರಾಧನಾ ಕ್ಷೇತ್ರವನ್ನು ಬಿಟ್ಟು ಬಿಡಲೇ ?

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹಾಡು ಹಗಲಿನ ಹೊತ್ತಿನಲ್ಲಿ ಸಸೌಮಾ ಭಟ್ ಎಂಬ ಮುಗ್ಧ ಕಾಲೇಜ್ ಹುಡುಗಿಯನ್ನು ಪುತ್ತೂರು ಕಬಕ ಬಳಿ ದಾರುಣವಾಗಿ ಕೊಚ್ಚಿ ಕೊಲ್ಲಲಾಗಿತ್ತು! ಅದು ನನ್ನನ್ನು ದಿಗಿಲಿಗೀಡು ಮಾಡಿದ ಮೊದಲ ಪ್ರಕರಣ ,(ಆಗಷ್ಟೇ ನಮ್ಮ ಊರಿನಲ್ಲಿ ಹೆಣ್ಣು ಮಕ್ಕಳನ್ನು ಕಾಲೇಜ್ ಗೆ ಕಳುಹಿಸಲು ಆರಂಭ ಮಾಡಿದ್ದರು ,ಈ ಪ್ರಕರಣ ಹೆತ್ತವರನು ತಲ್ಲಣಕ್ಕೆ ಒಳಮಾಡಿತ್ತು ಈ ಪ್ರಕರಣದ ನಂತರ ಅನೇಕ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಹಿಂಜರಿದರು ,ಓದನ್ನು ನಿಲ್ಲಿಸಿ ಮದುವೆ ಮಾಡಿದರು!)

ಅಲ್ಲಿಂದ ನಂತರ ಅನೇಕ ಪ್ರಕರಣಗಳು ಇಂಥದ್ದು ನಡೆದವು ,ಉಜಿರೆಯ ಸೌಜನ್ಯ ,ಉಡುಪಿಯ ಕ್ಷಮಾ .ಶಿವಮೊಗ್ಗದ ಹುಡುಗಿ (ಹೆಸರು ನೆನಪಾಗುತ್ತಿಲ್ಲ )ದೆಹಲಿಯ ಹುಡುಗಿ ನಿರ್ಭಯ ,ಮೊನ್ನೆ ಮೊನ್ನಿನ ಕೇರಳದ ಹುಡುಗಿ ಜಿಷಾ ..ಹೀಗೆ ಈ ಪಟ್ಟಿ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತದೆ .

ಇವರೆಲ್ಲ ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಳಗಾದವರು ,ಇನ್ನು ಅದೃಷ್ಟವಶಾತ್ ಸಾಯದೆ ಉಳಿದ ಅನೇಕರು ಇದ್ದಾರೆ.ಇನ್ನು ಅತ್ಯಾಚಾರ ಯತ್ನ ಕ್ಕೆ ಒಳಗಾದವರು ಲೈಂಗಿಕ ಕಿರುಕುಳಕ್ಕೆ ಒಳಗಾದವರು ಅಸಂಖ್ಯಾತ ಮಂದಿ ಇದ್ದಾರೆ ,

ಅತ್ಯಾಚಾರ ಮಾಡಿ ಕೊಂದವರಿಗೆ ಶಿಕ್ಷೆ ಆಗುದಿಲ್ಲ ಇನ್ನು ಉಳಿದವರಿಗೆ ಏನು ಶಿಕ್ಷೆ ಆಗುತ್ತದೆ ?
ಮೊನ್ನೆ ಬೆಂಗಳೂರಿನಲ್ಲಿ ಅತ್ಯಾಚಾರ ಯತ್ನಿಸಿದ ಒಬ್ಬನ ಮೇಲೆ ಪೋಲಿಸ್ ರು ದುಡ್ಡಿನ ಆಮಿಷಕ್ಕೆ ಒಳಗಾಗಿ ಕೇಸ್ ದಾಖಲಿಸಲಿಲ್ಲ ,ಪಿಜಿ ಮಾಲೀಕ ತನ್ನ ಪಿಜಿ ಹೆಸರು ಹಾಳಾಗುತ್ತದೆ ಎಂಬ ಕಾರಣಕ್ಕೆ ಕೇಸ್ ದಾಖಲಿಸದಂತೆ ಲಂಚ ನೀಡಿದ್ದ !
ಕೇವಲ ಐದು ಸಾವಿರ ಕೊಟ್ಟರೆ ದೂರು ದಾಖಲು ಮಾಡುವುದಿಲ್ಲ ಹಾಗಾದರೆ ಐವತ್ತು ಸಾವಿರ ಕೊಟ್ಟರೆ ದೂರು ದಾಖಲು ಆಗಿದ್ದರೂ ಬಿ ರಿಪೋರ್ಟ್ ಕೊಡಲಾರರೆ?ಆರೋಪಿ ಬಚಾವಾಗಲು ಎಷ್ಟು ಬೇಕಾದರೂ ದುಡ್ಡು ಕೊಡುತ್ತಾನೆ !ದೂರು ಕೊಟ್ಟವರ ಕಡೆಯಿಂದ ದುಡ್ಡು ಬರುವುದಿಲ್ಲ !

ಇತ್ತೀಚಿಗೆ ಈ ರೀತಿಯ ಪ್ರಕರಣಗಳಲ್ಲಿ 42 % ಸುಳ್ಳು ದೂರು ಗಳು ಎಂದು ಓದಿದೆ .ಕೇವಲ ಐದು ಸಾವಿರ ರುಪಾಯಿಗೆ ದೂರು ದಾಖಲು ಮಾಡದೇ ಇರುವಾಗ ಕೊಟ್ಟ ದೂರನ್ನು ಸುಳ್ಳು ಮಾಡುವುದು ಏನು ಕಷ್ಟದ ವಿಚಾರ !
ಹೆಚ್ಚಿನ ಪ್ರಕರಣಗಳಲ್ಲಿ ದೂರು ಕೊಡುವುದೇ ಇಲ್ಲ ಮರ್ಯಾದೆ ಗೆ ಅಂಜಿ !ದೂರು ಕೊಟ್ಟರೂ ಅದನ್ನು ಸುಳ್ಳು ಎಂದು ಹೇಳಲು ಏನೂ ಕಷ್ಟವಿಲ್ಲ ,ಯಾರೂ ಇಲ್ಲದೆ ಹೊತ್ತು ನೋಡಿಕೊಂಡೆ ಇಂಥದ್ದು ಮಾಡುತ್ತಾರೆ ಒಂದೊಮ್ಮೆ ಸಾಕ್ಷಿಗಳು ಇದ್ದರೂ ಸಾಕ್ಷ್ಯ ನುಡಿಯುದಿಲ್ಲ ತಮಗೇಕೆ ಎಂದು !
ಅದಕ್ಕೆ ಸರಿಯಾಗಿ ತಪ್ಪೆಸಗಿದಾತ ಪಾರಾಗುವ ಸಲುವಾಗಿ ದುಡ್ಡನ್ನು ನೀರಿನಂತೆ ಚೆಲ್ಲಲು ಸಿದ್ಧವಾಗಿರುತ್ತಾನೆ !
ಮತ್ತೆ ಅಲ್ಲ್ಲಿ ಬಿ ರಿಪೋರ್ಟ್ ಕೊಟ್ಟು ಸುಳ್ಳು ದೂರು ಎಂದು ಹೇಳಲು ಅಡ್ಡಿ ಏನಿದೆ ?ಶಿಕ್ಷೆಯ ಭಯವೇ ಇಲ್ಲದಿರುವಾಗ ಇಂಥ ಪ್ರಕರಣಗಳು ನಿರಂತರ ನಡೆಯುತ್ತಲೇ ಇರುತ್ತವೆ !ರಾಜಕೀಯ ಪಕ್ಷಗಳು ಇಲ್ಲೆಲ್ಲಾ ರಾಜಕೀಯ ಮಾಡುತ್ತಾ ವೋಟು ರಾಜಕಾರಣ ಮಾಡುತ್ತವೆ ಹೊರತು ಈ ಪಿಡುಗನ್ನು ಸಮೂಲ ಕಿತ್ತು ಹಾಕಬೇಕೆಂಬ ದೃಢತೆ ಯಾರಿಗೂ ಇಲ್ಲ ಯಾಕೆಂದರೆ ಅತ್ಯಾಚಾರಕ್ಕೆ ಒಳಗಾಗುವವರು ,ಕಿರುಕುಳಕ್ಕೆ ಒಳಗಾಗುವವರು ಅವರ ಮಕ್ಕಳಲ್ಲವಲ್ಲ !ಯಾರೋ ಹೆತ್ತವರು ಸಾಕಿದ ಹೆಣ್ಣು ಮಕ್ಕಳಿಗೆ ಏನಾದರೇನಂತೆ !ತಮಗೆ ವೋಟು ಬಂದರೆ ಸಾಕು !ಅಷ್ಟೇ !

ಅದು ಏನೇ ಇರಲಿ !ದೆಹಲಿಯ ನಿರ್ಭಯ ಪ್ರಕರಣ ನಡೆದಾಗಲೇ ನಾನು ಅಂದುಕೊಂಡಿದ್ದೆ ಇನ್ನು ಮುಂದೆ ಭೂತ ಕೋಲ ರೆಕಾರ್ಡ್ ಗಾಗಿ ಎಲ್ಲೆಂದರಲ್ಲಿ ರಾತ್ರಿ ಹಗಲು ಸುತ್ತುವುದನ್ನು ಬಿಡಬೇಕು ಎಂದು ,ಹಾಗಾಗಿ ರಾತ್ರಿ ರೆಕಾರ್ಡಿಂಗ್ ಗೆ ಹೋಗುದನ್ನು ಹೆಚ್ಚುಕಡಿಮೆ ನಿಲ್ಲಿಸಿದ್ದೇನೆ ,ಇನ್ನು ಹಗಲಿನ ಹೊತ್ತಿನಲ್ಲಿ ಹೋಗುವ ಬಗೆಯೂ ಇನ್ನೊಮ್ಮೆ ಆಲೋಚಿಸುವ ಹಾಗೆ ಆಗುತ್ತಿದೆ !

ಕ್ಷೇತ್ರ ಕಾರ್ಯ ಆಧಾರಿತ ತುಳು ಶೋಧನೆಯ ಹಾದಿ ಬಿಟ್ಟು ಬಿಡಲೇ ?ಇಷ್ಟಕ್ಕೂ ನಾನು ಮಾಡಿದ್ದೇನು ಮಹಾ ಇದೆ !ಮಾಡಿದ್ದಕ್ಕೂ ಸಿಕ್ಕ ಮನ್ನಣೆ ಅಷ್ಟರಲ್ಲೇ ಇದೆ !

  ಕಥೆ ಹಾಗೂ ಲೇಖನ ಬರೆಯುವ ಹವ್ಯಾಸ ನನಗೂ ಇತ್ತು .ಆದರೆ ತುಳು ಶೋಧನೆಯಲ್ಲಿ ಮುಳುಗಿ ಇವೆರಡನ್ನು ನಾನು ನಿರ್ಲಕ್ಷಿಸಿದೆ ಬಹುಶ ಇದನ್ನೇ ನಾನು ಮುಂದುವರಿಸಿದ್ದರೆ ಒಳ್ಳೆಯದಿತ್ತೋ ಏನೋ ಎಂದು ನನಗೆ ಇತ್ತೀಚಿಗೆ ಅನಿಸತೊಡಗಿದೆ !ಯಾಕೆಂದರೆ ಕಥೆ ಲೇಖನಗಳನ್ನು ಮನೆಯೊಳಗೇ  ಫ್ಯಾನ್ ಅಡಿಯಲ್ಲಿ ಆರಾಮ ಕೂತು ಬರೆಯಬಹುದು.ಅದಕ್ಕೆ ಖರ್ಚು ಕೂಡ ಇಲ್ಲ ಮೆದುಳನ್ನು ಸ್ವಲ್ಪ ಖರ್ಚು ಮಾಡಿದರೆ ಸಾಕು ! .ಒಂದಷ್ಟು ಮಾಹಿತಿ ಸಂಗ್ರಹಕ್ಕೆ ಗ್ರಂಥಾಲಯಗಳಿಗೆ ಹೋಗಬೇಕಾಗುತ್ತದೆ ಆದರೆ ಅದನು ಹಗಲಿನ ವೇಳೆಯೇ ಮಾಡಬಹುದು !

   ಆದರೆ ಭೂತಾರಾಧನೆ ಕುರಿತಾದ ಕ್ಷೇತ್ರ ಕಾರ್ಯ ಆಧಾರಿತ ಕೆಲಸಕ್ಕೆ ತುಂಬಾ ಖರ್ಚು ಕೂಡ ಇದೆ ಇದು ಸಾಕಷ್ಟು ಪರಿಶ್ರಮವನ್ನು ಕೂಡ ಬೇಡುತ್ತದೆ .ಜೊತೆಗೆ ರಾತ್ರಿ ಹಗಲೆನ್ನದೆ ಅಪರಿಚಿತ ಪ್ರದೇಶಗಳಲ್ಲಿ ಏಕಾಂಗಿಯಾಗಿ ಓಡಾಡುದು ಇಂದಿನ ದಿನಗಳಲ್ಲಿ ಅಪಾಯಕಾರಿಯಾಗಿದೆ .
ಹಾಗಾಗಿ ಅನೇಕ ಬರಿ ಯೋಚಿಸಿದ್ದೇನೆ ಈ ಕ್ಷೇತ್ರವನ್ನು ಬಿಟ್ಟು ಬಿಡಬೇಕು ಎಂದು !ಆದರೂ ಇದು ಒಂದು ಮಾಯೆಯಾಗಿ ಕಾಡುತ್ತಿದೆ ನನ್ನ !ಬಿಡಬೇಕೆಂದರೂ ಬಿಡಲು ಸಾಧ್ಯವಾಗುತ್ತಿಲ್ಲ !
ಒಂದು ಹೊಸ ಭೂತದ ಹೆಸರು ಕೇಳಿದ ತಕ್ಷಣ ಅದರ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹ ಆಗುವ ತನಕ ಮನಸು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ !

ಇಷ್ಟರ ತನಕ ನಿರಂತರವಾಗಿ ಕೆಲಸ ಮಾಡಿದ ನನಗೆ ಏನೂ ಮಾಡದೇ ಇರಲು ನನ್ನಿಂದ ಸಾಧ್ಯವಾಗಲಾರದು ಅದಕ್ಕಾಗಿ ಕ್ಷೇತ್ರವನ್ನು ಬದಲಾಯಿಸಬೇಕೆನ್ದುಕೊಂಡಿದ್ದೇನೆ
ಮೊನ್ನೆ ಮೇ ಒಂದರಂದು ತಿಗಳಾರಿ -ತುಳು ಲಿಪಿ ಕಲಿಯುವಾಗಲೂ ನನ್ನ ಮನಸಿನಲ್ಲಿ ಇದೇ ವಿಚಾರ ಕೊರೆಯುತ್ತಿತ್ತು .ಇದನ್ನೇ ಸರಿಯಾಗಿ ಕಲಿತು ತಿಗಳಾರಿ -ತುಳು ಲಿಪಿಯಲ್ಲಿರುವ ಕೃತಿಗಳನ್ನು ಲಿಪ್ಯಂತರ ಮಾಡುವ ಹವ್ಯಾಸವನ್ನು ಮಾಡಿಕೊಳ್ಳಲೇ ಎಂದು ಆಲೋಚಿಸುತ್ತ ಇದ್ದೇನೆ
ಒಟ್ಟಿನಲ್ಲಿ ಇಂಥ ಒಂದೊಂದೇ  ಪ್ರಕರಣವನ್ನು ಕೇಳುವಾಗಲೂ ಆತಂಕ ಹೆಚ್ಚಾಗುತ್ತಲೇ ಇದೆ.ನನ್ನ ಪ್ರಿಯವಾದ ಭೂತಾರಾಧನ ಕ್ಷೇತ್ರವನ್ನು ಬಿಟ್ಟು ಬಿಡಲೇ ?ಬಿಟ್ಟು ನಾನು ನೆಮ್ಮದಿಯಿಂದ ಸಂತಸದಿಂದ ಇರಬಲ್ಲನೆ ?ಗೊತ್ತಿಲ್ಲ ಕಾಲಾಯ ತಸ್ಮೈ ನಮಃ
ಇಷ್ಟಕ್ಕೂ ಕ್ಷೇತ್ರಕಾರ್ಯಕ್ಕೆ ಹೋಗದ ಮಾತ್ರಕ್ಕೆ ನಮಗೆ ಭದ್ರತೆ ಇದೆಯಾ ?ಮನೆಯೊಳಗೇ ಬಂದು ಅತ್ಯಾಚಾರ ಮಡಿದ ಪ್ರಕರಣಗಳ ಬಗ್ಗೆ ಕೂಡ ಓದಿದ್ದೇನೆ !ಹಾಗಂತ ತಲೆ ಗಟ್ಟಿ ಇದೆ ಅಂತ ಬಂಡೆಕಲ್ಲಿಗೆ ಹೊಡೆದು ಕೊಳ್ಳುವುದು ಅಪಾಯವಲ್ಲವೇ ?
ನಾನು ಸ್ವಾಭಾವಿಕವಾಗಿಯೇ ಚಿಕ್ಕಂದಿನಿಂದಲೂ ಧೈರ್ಯಸ್ಥೆ ,ಸಾಮನ್ಯಕ್ಕೆಲ್ಲ ಹೆದರುವವಳು ಅಲ್ಲವೇ ಅಲ್ಲ ,ಆದರೂ ಈ ವಿಚಾರದಲ್ಲಿ ಮನಸು ಆತಂಕಕ್ಕೆ ಒಳಗಾಗುತ್ತಿದೆ ಆರು ತಿಂಗಳ ಹಸುಳೆಯಿಂದ ಹಿಡಿದು 80 ವರ್ಷದ ಅಜ್ಜಿ ತನಕದ ಎಲ್ಲ ವಯೋಮಾನದ ಹೆಂಗಸರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದಕ್ಕೆಲ್ಲ ಕೊನೆ ಎಂದು ?
ನನ್ನ ಅಧ್ಯಯನದಲ್ಲಿ ಸಿಕ್ಕ ಮಾಹಿತಿಯನ್ನು ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ನನಗೆ ಅದುವೇ ಭಾಗ್ಯ
http://laxmipras.blogspot.com

No comments:

Post a Comment