Friday, 30 June 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 403-409 ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರರು © ಡಾ ಲಕ್ಷ್ಮೀ ಜಿ ಪ್ರಸಾದ

ಕೊಡಗಿನಲ್ಲಿ ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರ ದೈವಗಳ ಆರಾಧನೆ ಇದೆ .
ಕೇರಳದಲ್ಲಿ ಆರು ಜನ ಸಹೋದರರು ಮತ್ತು ಒಬ್ಬ ತಂಗಿ ಚಿನ್ನದ ಶಂಖದಲ್ಲಿ ಹುಟ್ಟುತ್ತಾರೆ. ಹಿರಿಯವನು ಕಾಂಞರಾಟಪ್ಪ  ಎರಡನೆಯವನು ತಿರುಚಂಬರಪ್ಪ ,ಮೂರನೆಯವನು ಬೇಂದ್ರು ಕೋಲಪ್ಪ ಎಂದೂ, ನಾಲ್ಕನೆಯವನು ಇಗ್ಗುತಪ್ಪ , ಐದನೆಯವನು ಪಾಲೂರಪ್ಪ  ಆರನೆಯವನು ತಿರುನೆಲ್ಲಿ ಪೆಮ್ಮಯ್ಯ ಎಇವರ ತಂಗಿ ತಂಗಮ್ಮ.ಇವರು ಬೇರೆ ಬೇರೆ ನಾಡಿಗೆ ಹೋಗುತ್ತಾ ಕೊಡಗಿಗೆ ಬರ್ತಾರೆ .ಪ್ರಯಾಣದ ವೇಳೆ ಒಂದು ಮಧ್ಯಾಹ್ನ ಎಲ್ಲರಿಗೂ ಹಸಿವೆಯಾಗುತ್ತದೆ.ಆಗ ತಂಗೆಮ್ಮ " ನಾನು ಬೆಂಕಿ ಇಲ್ಲದೆ ಅಡುಗೆ ಮಾಡುತ್ತೇನೆ.ನೀವೆಲ್ಲರೂ ಉಪ್ಪಿಲ್ಲದ ಅಡುಗೆ ಊಟ ಮಾಡಬೇಕು ಎಂದು ಹೇಳುತ್ತಾಳೆ.ಅಂತೆಯೇ ಅವಳು ತನ್ನ ಶಕ್ತಿಯಿಂದ ಬೆಂಕಿ ಇಲ್ಲದೆ ಅಡುಗೆ ಮಾಡುತ್ತಾಳೆ.ಆದರೆ ಅವಳ ಅಣ್ಣ ಪಾಲೂರಪ್ಪನಿಗೆ ಉಪ್ಪಿಲ್ಲದೆ ಊಟ ಮಾಡಲು ಸಾಧ್ಯವಾಗುವುದಿಲ್ಲ. ಅವನು " ಮಳೆಬರುವಾಗ ಹೀಗೆ ಆಲಿ ಕಲ್ಲು ಬೀಳುತ್ತದೆ" ಎಂದು ಹೇಳಿ ಅನ್ನವನ್ನು ಮೇಲೆ ಎಸೆಯುತ್ತಾನೆ.ಆಗ ಕೋಪಿಸಿಕೊಂಡ ತಂಗೆಮ್ಮ ತಾನು ಹಿಡಿದಿದ್ದ ಸೌಟಿನಲ್ಲಿ   ಪಾಲೂರಪ್ಪನ ಕೆನ್ನೆಗೆ ಹೊಡೆಯುತ್ತಾಳೆ.
ಇದರಿಂದ ಕೋಪಗೊಂಡ ಪಾಲೂರಪ್ಪ ಉಪಾಯವಾಗಿ ಅವಳನ್ನು ಸೋಲಿಸಬೇಕೆಂದು ಆಲೋಚಿಸಿ ಒಂದು ವ್ಯೂಹವನ್ನು ಹೆಣೆಯುತ್ತಾನೆ.
ಊಟದ ನಂತರ ಎಲ್ಲರೂ ಎಲೆ ಅಡಕೆ ಹಾಕುತ್ತಾರೆ. ಆಗ ಪಾಲೂರಪ್ಪ ಯಾರದು ಹೆಚ್ಚು ಕೆಂಪಾಗಿದೆ ನೋಡೋಣ ಎಂದು ಕೈಗೆ ಉಗಿದು ಹಿಂದೆ ಎಸೆದು ಮತ್ತೆ ನುಂಗಿದಂತೆ ಅಭಿನಯ ಮಾಡುತ್ತಾನೆ. ಇವನ ಕುಟಿಲವರಿಯದ ತಂಗೆಮ್ಮ ವೀಳ್ಯದೆಲೆ ಯನ್ನು ಕೈಗೆ ಉಗಿದು ಮತ್ತೆ ಅದನ್ನು ಬಾಯಿಗೆ ಹಾಕಿ ನುಂಗುತ್ತಾಳೆ.ಆಗ ಪಾಲೂರಪ್ಪ " ಇವಳು ಎಂಜೆಲು ತಿಂದಿದ್ದಾಳೆ.ಹಾಗೆ ಜಾತಿ ಭ್ರಷ್ಟಳಾದಳು.ಇವಳು ಮುಂದಕ್ಕೆ ನಮ್ಮ ಜೊತೆ ಬರಬಾರದು ಎಂದು ಹೇಳುತ್ತಾನೆ.ಇದರಿಂದ ನೊಂದ ಇಗ್ಗುತಪ್ಪ ತಂಗಿ ತನಗೆ ಕಾಣುವಂತೆ ಇರಲಿ ಎಂದು ಒಂದು ಬಾಣ ಬಿಡುತ್ತಾನೆ .ಅದು ಪೊನ್ನಂಗಾಲ ನದಿಯ ದಡದ ಕಾಡಿನಲ್ಲಿ ಒಂದು ಮಾವಿನ ಮರದ ಮೇಲೆ ಬೀಳುತ್ತದೆ.ತಂಗೆಮ್ಮ ಒಂದು ಕೊಕ್ಕರೆಯ ರೂಪು ತಳೆದು ಅಲ್ಲಿಗೆ ಸಮೀಪದ ಕರ್ತಂಡ ಕುಟುಂಬಕ್ಕೆ ಸೇರಿದ ಗದ್ದೆಯಲ್ಲಿ ಕುಳಿತುಕೊಳ್ಳುತ್ತಾಳೆ.ಅಲ್ಲಿಗೆ ಬಂದಕರ್ತಂಡ ಕುಟುಂಬದ ಹಿರಿಯರೊಬ್ಬರು ಕೊಕ್ಕರೆ ಯ ಮೇಲೆ ತಮ್ಮ ಕೈಯಲ್ಲಿರುವ ಬುಟ್ಟಿಯನ್ನು ಕವುಚಿ ಹಾಕುತ್ತಾರೆ. ಆಗ ಅದು ಕಲ್ಲಾಗಿ ಬದಲಾಗತ್ತದೆ.ಅತನ ಮೇಲೆ ತಂಗೆಮ್ಮ ದೈವ ಬಂದು ನುಡಿ ಕೊಡುತ್ತದೆ. ಪೊನ್ನಂಗಾಲದಲ್ಲಿ ನೆಲೆಸಿದ ಕಾರಣ ಅವಳು ಪೊನ್ನಂಗಾಲತಮ್ಮೆ ಎಂದು ಹೆಸರು ಪಡೆದು ಆರಾಧನೆ ಪಡೆಯುತ್ತಾಳೆ .ಅವಳ ಸಹೋದರರು ಕೂಡ ದೈವಿಕ ಶಕ್ತಿ ಪಡೆದು ಆರಾಧನೆ ಪಡೆಯುತ್ತಾರೆ.

Wednesday, 28 June 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ಭೂತಗಳು 401-402ಕಲಿಯಾಟ ಅಜ್ಜಪ್ಪ,ಕಾಟಾಳ ಬೊಲ್ತು,

ಕೊಡವರು ಕೂಡ ಅನೇಕ ಭೂತಗಳ ಆರಾಧನೆಯನ್ನು ಮಾಡುತ್ತಾರೆ.ಕೊಡವರು ಪೊನ್ನಂಗಾಲತಮ್ಮೆ,ಕಲಿಯಾಟ ಅಜ್ಜಪ್ಪ,ಕಾಟಾಳ ಬೊಲ್ತು ಮೊದಲಾದ ದೈವಗಳಿಗೆ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.ದುರಂತ ಮತ್ತು ದೈವತ್ವ ಭೂತಾರಾಧನೆಯಲ್ಲಿ ಕಂಡುಬರುವ ವಿಶಿಷ್ಟ ವಿದ್ಯಮಾನ.
ಕಲಿಯಾಟ ಅಜ್ಜಪ್ಪ ಕೂಡ ಮಾನವ ಮೂಲದ ದೈವವಾಗಿದ್ದು ದುರಂತವನ್ನಪ್ಪ ನಂತರ ದೈವವಾಗಿ ಆರಾಧನೆ ಪಡೆಯುವ ಶಕ್ತಿಯಾಗಿದೆ.
ಈತನ ಮೂಲ ಹೆಸರು ಕಲಿಯಾಟ ಪೊನ್ನಪ್ಪ. ಈತ ಕೊಡವರ ಆರಾಧ್ಯ ದೈವ ಇಗ್ಗುತಪ್ಪನ ಅನುಗ್ರಹದಿಂದ ಜನ್ಮ ಪಡೆದವನು.ಈತನ ತಾಯಿಗೆ ಕನಸಿನಲ್ಲಿ ಇಗ್ಗುತಪ್ಪ ಕಾಣಿಸಿಕೊಂಡು ದೈವಿಕ ಶಕ್ತಿ ಇರುವ ಮಗು ಜನಿಸುತ್ತದೆ ಎಂದು ಅಭಯ ನೀಡಿತೆಂದು ಕಲಿಯಾಟ ಅಜ್ಜಪ್ಪ ಭೂತದ ಹಾಡಿನಲ್ಲಿ ಹೇಳಿದೆ.
ಕಲಿಯಾಟ ಪೊನ್ನಪ್ಪ ಐದು ವರ್ಷ ದ ಮಗುವಾಗಿದ್ದಾಗಲೇ ಹರೆಯದ ವಯಸ್ಸಿನ ಬೆಳವಣಿಗೆ ಹೊಂದಿದ್ದನು ಹತ್ತು ವರ್ಷ ವಾಗುವಾಗುವಷ್ಟರಲ್ಲಿ ಪೂರ್ಣ ಬೆಳವಣಿಗೆ ಹೊಂದುತ್ತಾನೆ.ಅವನು ಹತ್ತು ವಿಶಿಷ್ಟ ಶಕ್ತಿಗಳನ್ನು ಒಲಿಸಿಕೊಂಡಿದ್ದು ಮಾಂತ್ರಿಕ ಶಕ್ತಿಯನ್ನು ಪಡೆದಿದ್ದನು.ಅವನಂತೆಯೇ ಮಾಂತ್ರಿ ಶಕ್ತಿ ಹೊಂದಿದ್ದ ಕಾಟಾಳ ಬೊಲ್ತು ಎಂಬ ಯುವಕನ ಸ್ನೇಹ ಹೊಂದಿದ್ದನು.ಇವರಿಬ್ಬರು ಎಲ್ಲೆಡೆ ಸಂಚರಿಸಿ ತಮ್ಮ ಶಕ್ತಿಯಿಂದ ಜನರ ಮೆಚ್ಚುಗೆ ಪಡೆದಿದ್ದರು.ಇದು ಕಲಿಯಾಟ ಪೊನ್ನಪ್ಪ ನ ತಂದೆಗೆ ಇಷ್ಟವಾಗಲಿಲ್ಲ ಹಾಗಾಗಿ ಇವರು ಮನೆ ಬಿಟ್ಟು ಹೊರಟರು.ಬೇರಡ ಬೇರೆ ಊರು ಸುತ್ತಿ ಕೊನೆಗೆ ಕಾವೇರಿಯಮ್ಮನ ಮಡಿಲಾದ ಕೊಡಗಿನಲ್ಲಿ ನೆಲೆಸುತ್ತಾರೆ.ಒಬ್ಬ ತುಂಡರಸ ಇವರ ಸ್ನೇಹವನ್ನು ಬಯಸಿ ಚಿನ್ನದ ಕಡಗವನ್ನು ಕಳುಹಿಸಿ ಕೊಡುತ್ತಾನೆ. ಕಲಿಯಾಟ ಅಜ್ಜಪ್ಪ ಅವನ ಸ್ನೇಹವನ್ನು ಸ್ವೀಕರಿಸದೆ ಕಡಗವನ್ನು ಹಿಂದೆ ಕಳುಹಿಸುತ್ತಾನೆ. ಇದರಿಂದ ಕೋಪಗೊಂಡ ಅರಸ ತನ್ನ ಸೈನಿಕರ ಮೂಲಕ ಇವರ ಮೇಲೆ ಆಕ್ರಮಣ ಮಾಡಿತ್ತಾನೆ.ಆಗ ಕೊಡಗಿನ ಹಾಲೇರಿ ವಂಶದ ಅರಸ ಕುಟ್ಟಪಾಲೆ ಮಾಯಿಲ ಎಂಬ ಸೇನಾನಾಯಕನ ನೇತೃತ್ವದಲ್ಲಿ ಕಲಿಯಾಟ ಪೊನ್ನಪ್ಪ ನಿಗೆ ಸಹಾಯ ಮಾಡುತ್ತಾನೆ ಜೊತೆಗೆ ತಮ್ಮ ಮಾಂತ್ರಿ ಶಕ್ತಿಯಿಂದ ಇವರು ಪಾರಾಗುತ್ತಾರೆ.
ಮುಂದೆ ಒಂದು ದಿನ ಕುಟ್ಟಿರಿಂಜೆತ್ತಿ ಮೂಲ/ ತರವಾಡು ಮನೆಗೆ ಕಲಿಯಾಟ ಪೊನ್ನಪ್ಪ ಬರುತ್ತಾನೆ. ಆಗ ಆ ತುಂಡರಸ ಕಿಕಾಂಡ ಮನೆಯ ವೃದ್ದ ಮಹಿಳೆಗೆ ಹೇಳಿ ಕೊಟ್ಟು ವಿಷಪ್ರಾಶನ ಮಾಡಿಸುತ್ತಾನೆ.ಇದೇ ಸಮಯದಲ್ಲಿ ಆ ಮಹಿಳೆ ತುಂಡರಸನ ಸೈನಿಕರಿಗೆ ಮಾಹಿತಿ ಕೊಡುತ್ತಾಳೆ. ಅವರು ಪೊನ್ನಪ್ಪ ನ ತಲೆ ಕಡಿಯುತ್ತಾರೆ.ಇದು ತಿಳಿದ ಆತನ ಒಡನಾಡಿ ಕಾಟಾಳ ಬೊಲ್ತು ಕೂಡ ಪ್ರಾಣ ತ್ಯಜಿಸುತ್ತಾನೆ.ಇವರಿಬ್ಬರೂ ದೈವಿಕ ಶಕ್ತಿ ಪಡೆದು ಭೂತಗಳಾಗುತ್ತಾರೆ .ಅ ತುಂಡರಸ ಇವರನ್ನು ಮತ್ರವಾದಿಗಳ ಸಹಾಯದಿಂದ ಒಂದು ಕಲ್ಲಿನಲ್ಲಿ ಕಟ್ಟಿ ಹಾಕುತ್ತಾರೆ ಆಗ ಕುಟ್ಟ ಪಾಲೆ ಮಾಯಿಲ ಅವರನ್ನು ದಿಗ್ಭಂಧನದಿಂದ ಬಿಡಿಸುತ್ತಾನೆ.ಮುಂದೆ ಪೊನ್ನಪ್ಪ ಕಲಿಯಾಟ ಅಜ್ಜಪ್ಪ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ ಅವನ ಜೊತೆಗೆ ಕಾಟಾಳ ಬೊಲ್ತು ವಿಗೂ ಕೋಲ ನೀಡಿ ಆರಾಧನೆ ಮಾಡುತ್ತಾರೆ.© ಡಾ ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ
 ,ವಿಜಯ ಕರ್ನಾಟಕ ಕೊಡಗು ಎಡಿಷನ್ ನಲ್ಲಿ ಪ್ರಕಟವಾದ ಕೊಡವ ಭಾಷೆಯ ಬರಹ ಮತ್ತು ಸ್ನೇಹಿತೆ ವಿದ್ಯಾ ಬಾಯ್ದೆರೆಯಾಗಿ ನೀಡಿದ ಮಾಹಿತಿ

Monday, 26 June 2017

ಸಾವಿರೊಂದು ಗುರಿಯೆಢಗೆ ತುಳುನಾಡ ದೈವಗಳು 400 ಮದಿಮಾಲ್ ದೈವ

ಮದಿಮಾಲ್ ಎಂಬ ಹೆಸರಿನ ಅನೇಕ ದೈವಗಳಿವೆ ಉಳ್ಳಾಕುಲುಗಳ ತಂಗಿ ಮದಿಮಾಲ್ ದೈವವಿದೆ .ತನ್ನಿಮಾನಿಗ ದೈವದ ಸೇರಿಗೆಗೆ ಸಂದಿರುವ ಒಂದು ಮದಿಮಾಲ್ ದೈವವಿದೆ .ದುರ್ಗಿ ಮದಿಮಾಲ್ ಮತ್ತು ನುರ್ಗಿ ಮದಿಮಾಲ್ ಎಂಬ ಹೆಸರಿನ ಎರಡು ದೈವಗಳಿವೆ
ಕಾಸರಗೋಡಿನ ನೆಲ್ಲಿಕುಂಜದಲ್ಲಿ ಕೋಮಾರು ಚಾಮುಂಡಿ ದೈವದ ಅರಾಧನೆಯ ಆರಂಭದಲ್ಲಿ ಒಂದು ಮದಿಮಾಲ್ ದೈವಕ್ಕೆ ಆರಾಧನೆ ಇದೆ ಅಲ್ಲಿ ಹೇಳುವ ಪಾಡ್ದನ ದ ಪ್ರಕಾರ ಈ ದೈವ ಓರ್ವ ಬ್ರಾಹ್ಮಣ ಹುಡುಗಿ ಕೋಮರಾಯನ ಹಿಂದೆ ಬಂದವಳು ಈಕೆ
ತನ್ನ ಹಿಂದೆ ಬಂದ ಅ ಹುಡುಗಿಯನ್ನು ಮಾಯಮಾಡಿ ತನ್ನ ಸೇರಿಗೆಗೆ ಕೋಮರಾಯ ದೈವ ಸೇರಿಸಿ ಕೊಳ್ಳುತ್ತದೆ. ಕೋಮರಾಯನ ಆರಾಧನೆ ಗೆ ಮೊದಲು ಈ ದೈವಕ್ಕೆ ಕೋಲಕೊಟ್ಟು ಆರಾಧಿಸುತ್ತಾರೆ.

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 399 ಗಂಡಗಣಗಳು © ಡಾ ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಭೂತಗಳ ಅರಾಧನೆ ನೂರೊಂದು ಮಲೆ ದೈವಗಳ ಅರಾಧನೆ ಜಾಲಾಟ ಮೊದಲಾದ ಅನೇಕ ದಿನಗಳ ಕಾಲ ನಡೆಯುವ ಸಮೂಹ ಆರಾಧನೆ ಯಲ್ಲಿ ಗಂಡಗಣಗಳಿಗೆ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಗಂಡ ಗಣಗಳು ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ಎಳನೀರು ಬಾಳೆಗೊನೆಗಳನ್ನು ಕಿತ್ತು ತರುವ ಸಂಪ್ರದಾಯವಿದೆ .ಇದು ಹಿಂದಿನ ಕಾಲದಲ್ಲಿ ಅರಸರುಗಳು ಅಕ್ಕ ಪಕ್ಕದ ರಾಕ್ಯಗಳಿಗೆ ಹೋಗಿ ಕೊಳ್ಳೆ ಹೊಡೆಯುತ್ತಿದ್ದುದರ ಸೂಚಕವಾಗಿದೆ.
ಗಂಡ ಗಣಗಳು ಮೂಲತಃ ಸೈನಿಕರು ಅಗಿದ್ದಾರೆ.ಉಳ್ಳಾಕುಲು ದೈವತ್ವ ಪಡೆದಾಗ ಉಳ್ಳಾಕುಲು ಪಾಳಯದಲ್ಲಿದ್ದ ಸೈನಿಕರೂ ದೈವತ್ವ ಪಡೆದು ಗಂಡ ಗಣಗಳು ಎಂಬ ಹೆಸರಿನ ದೈವಗಳಾಗಿ ಅರಾಧನೆ ಪಡೆಯುತ್ತಾರೆ .ಸಾವಿರದೊಂದು ಗಂಡಗಣಗಳಿವೆ ಎಂಬ ನಂಬಿಕೆ ಇದೆ .

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 398 ಡೆಂಜಿ ಪುಕ್ಕೆ © ಡಾ ಲಕ್ಷ್ಮೀ ಜಿ ಪ್ರಸಾದ್

ಕಲ್ಲಡ್ಕ ಸಮೀಪದ ಕೊಳ್ಕೇರಿಯಲ್ಲಿ ಸಾವಿರದೊಂದು ಭೂತಗಳ ಆರಾಧನೆ ಇದೆ .ಅಲ್ಲಿ ಆರಾಧನೆ ಇರುವ ದೈವಗಳಲ್ಲಿ ಡೆಂಜಿ ಪುಕ್ಕೆ ಎಂಬ ಹೆಸರಿನ ದೈವವಿದೆ ಎಂಬ ಬಗ್ಗೆ ರುಕ್ಮಯ ಅಜಲರು ತಿಳಿಸಿದ್ದಾರೆ .ಅಜ್ಜಿ ಭೂತ ತನ್ನ ಮಕ್ಕಳನ್ನು ಕರೆದುಕೊಂಡು ಡೆಂಜಿ ಹಿಡಿಯಲು ಬರುವ ಬಗ್ಗೆ ಅಜ್ಜಿ ಭೂತದ ಪಾಡ್ದನ ದಲ್ಲಿ ಮಾಹಿತಿ ಇದೆ .ಹೀಗೆ ಅಜ್ಜಿ ಜೊತೆ ಬರುವ ದೈವವೆ ಡೆಂಜಿ ಪುಕ್ಕೆ .ಗಂಡ ಗಣಕುಲು ಜೊತೆಗೆ ಈ ದೈವಕ್ಕೂ ಸಾಂಕೇತಿಕವಾಗಿ ಕೋಲ ಕೊಟ್ಟು ಅರಾಧಿಸುತ್ತಾರೆ.ಕೆಲವೆಡೆ ಗಣಗಳಿಗೆ ಡೆಂಜಿಯ ಅಡುಗೆ ಮಾಡಿ ಬಡಿಸುವ ಪದ್ಧತಿ ಇದೆ .
ಡೆಂಜಿಯ ಅಡುಗೆ ಮಾಡಿ ಬಡಿಸುವುದು ಮೂಲತಃ ಆತ ಡೆಂಜಿ ಹಿಡಿಯುತ್ತಿದ್ದುದರ ಸಂಕೇತವಾಗಿದೆ .

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 397 ನುರ್ಗಿ ಮದಿಮಾಲ್ ©ಡಾ.ಲಕ್ಷ್ಮೀ ಜಿ ಪ್ರಸಾದ

ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.ಇವನ್ನು ಮೀರಿದವರಿಗೆ ದುರಂತ ಶತಸಿದ್ದವಾಗಿತ್ತು.ತುಳುನಾಡಿನ ಭೂತಾರಾಧನೆಯಲ್ಲಿಯೂ ಅನೇಕ ವಿಧಿ ನಿಷೇಧಗಳಿವೆ ಇವನ್ನು ಉಲ್ಲಂಘಿಸಿದ ಅನೇಕರು ದೈವಗಳ ಆಗ್ರಹಕ್ಕೆ ತುತ್ತಾಗಿ ಮಾಯಕವಾಗಿದ್ದಾರೆ.ಅಂತಹವರಲ್ಲಿ ಕೆಲವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಹೊಂದಿದ್ದಾರೆ.
ನುರ್ಗಿ ಮದಿಮಾಲ್ ಕೂಡ ಇಂತಹ ಒಂದು ದೈವ.ಉಳ್ಳಾಕುಲು ನೇಮವನ್ನು ಸ್ತೀಯರು ನೋಡಬಾರದು ಎಂಬ ನಿಷೇಧವಿತ್ತು.ಓರ್ವ ಯುವತಿ ಇದನ್ನು ಮೀರಿ ಹಲಸಿನ ಮರದ ಎಡೆಯಿಂದ ಉಳ್ಳಾಕುಲು ನೇಮವನ್ನು ನೋಡುತ್ತಾಳೆ.ಆಗ ದೈವ ಕೋಪಿಸಿಕೊಂಡು ಅವಳನ್ನು ಮಾಯ ಮಾಡುತ್ತದೆ .ಹೀಗೆ ಮಾಯವಾದ ಅವಳು ದೈವತ್ವ ಪಡೆದು ನುರ್ಗಿ ಮದಿಮಾಲ್ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾಳೆ. ನುಗ್ಗಿ ನೋಡಿದವಳು ಎಂಬ ಅರ್ಥದಲ್ಲಿ ನುರ್ಗಿ ಮದಿಮಾಲ್ ಎಂಬ ಹೆಸರು ಬಂದಿದೆ © ಡಾ.ಲಕ್ಷ್ಮೀ ಜಿ ಪ್ರಸಾದ 

Saturday, 10 June 2017

ಸಾವಿರದೊಂದು ಗುರಿಯೆಡೆಗೆ 396 ಪುಲಿ ಮರಂಞ ತೊಂಡಚ್ಚನ್

ತೊಂಡಚ್ಚನ್ ಎಂದರೆ ಹಿರಿಯ ಎಂದು ಅರ್ಥ.ಈ ದೈವ ಮಾನವ ಮೂಲದ ದೈವತ .ಕಾರಿ ಕುರಿಕ್ಕಳ್ ಎಂಬ ವ್ಯಕ್ತಿ ಅರಸು ದೌರ್ಜನ್ಯ ಕ್ಕೆ ತುತ್ತಾಗಿ ದೈವತ್ವ ಪಡೆದು ಆರಾಧನೆ ಒಢಯುತ್ತಾನೆ.ಈ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಮಾಹಿತಿ ಸಂಗ್ರಹಿಸಿ ಬರೆದಿದ್ದಾರೆ.
ಪಯ್ಯನ್ನೂರಿನ ಒಂದು ಗ್ರಾಮದ ಒಡೆತನವನ್ನು ಕುಂಞಂಬು ನಾಯರ್ ಗೆ ಇತ್ತು.ನಾಯರ್ ನ ಕೃಷಿ ಕಾರ್ಯಗಳ ಸಹಾಯಕ್ಕಾಗಿ ಆತ ಸರಿಯಾದ ಜನರನ್ನು ಹುಡುಕುತ್ತಾ ಇರುತ್ತಾನೆ.
ಒಂದು ದಿನ ಕನಸಿನಲ್ಲಿ ಆತನಿಗೆ ತಿರುವರ್ ಕಾಟ್ ಭಗವತಿ ಉತ್ಸವಕ್ಕೆ ಹೋಗಲು ಪ್ರೇರಣೆ ಆಯಿತು .ಅದರಂತೆ ಅಲ್ಲಿಗೆ ಹೋದಾಗ ಕುಂಞಿ ಕರಿಂಬಮ್ ಮತ್ತು ವಿರುತಿ ಎಂಬ ಒಉಲಯನ್ ದಂಪತಗಳ  ಪರಿಚಯ ವಾಗಿ ಅವರನ್ನು ಕೃಷಿ ಕಾರ್ಯಕ್ಕಾಗಿ ಕರೆತರುತ್ತಾನೆ.
ಅವರಿಗೆ ಒಂದು ಗಂಡು ಮಗು ಹುಟ್ಟುತ್ತದೆ ಅದಕ್ಕೆ ಕಾರಿ ಎಂದು ಹೆಸರಿಟ್ಟು ಸಾಕುತ್ತಾರೆ. ವಿದ್ಯಾಭ್ಯಾಸ ನೀಡುತ್ತಾರೆ ಅವನಿಗೆ ಕಳರಿ ವಿದ್ಯೆಯಲ್ಲಿ ಹೆಚ್ಚು ಆಸಕ್ತಿ ಇತ್ತು .ಆದರೆ ಆ ಕಾಲದಲ್ಲಿ ಪುಲಯನ್ ಸಮುದಾಯದವರಿಗೆ ಕಳರಿಯ ಒಳಗೆ ಪ್ರವೇಶ ಇರಲಿಲ್ಲ. ಹಾಗಾಗಿ ಕುಂಞಂಬು ನಾಯರನು ಆತನ ಹೆಸರನ್ನು ಬದಲಾಯಿಸಿ ಅವನಿಗೆ ತನ್ನ ಹೆಸರು ಮತ್ತು ವಿಟು ( ಕುಟುಂಬ) ನಾಮಧೇಯ ನೀಡಿ ಕಳರಿಯಲ್ಲಿ ಕಲಿಯಲು ಅವಕಾಶ ಮಾಡಿ ಕೊಡುತ್ತಾನೆ.
ಅಳ್ಳಡ ನಾಡಿನ ರಾಜನಿಗೆ ಮತಿಭ್ರಮಣೆ ಉಂಟಾಗಿ ಅರಾಜಕತೆ ಉಂಟಾಯಿತು. ಯಾರಿಂದಲೂ ಅವನ ಮೈ ಮೇಲೆ ಆವಾಹಿಸಿದ್ದ ದುಷ್ಟ ಶಕ್ತಿ ಗಳನ್ನು ದೂರ ಮಾಡಲು ಸಾಧ್ಯವಾಗಲಿಲ್ಲ .ಆಗ ಕಾರಿ ಕುರಿಕ್ಕಳ್ ಬಗ್ಗೆ ತಿಳಿದ ಅಳ್ಳಡ ರಾಜನ ಸೋದರ ಮಾವಂದಿರು ಓಲೆ / ಪತ್ರ ಬರೆದು ಅರಮನೆಗೆ ಬರುವಂತೆ ಕರೆ ಹೇಳಿ ಕಳುಹಿಸಿದರು.ಆರಂಭದಲ್ಲಿ ಒಪ್ಪದೆ ಇದ್ದರೂ  ಒತ್ತಾಯ ಮಾಡಿ ರಾಜನ ರೋಗವನ್ನು ಗುಣ ಪಡಿಸಿದರೆ ಆರು ಗ್ರಾಮ ಕೊಡುತ್ತೇವೆ ಎಂದು ಹೇಳಿದಾಗ ಒಪ್ಪಿ ಅರಮನೆಗೆ ಹೋಗಿ ರಾಜನ ರೋಗವನ್ನು ಗುಣ ಪಡಿಸಿದನು
ಆದರೆ ನಂತರ ಕಾರಿ ಕುರಿಕ್ಕಳ್ ಗೆ ಆರು ಗ್ರಾಮಗಳನ್ನು ನೀಡಲು ರಾಜನ ಸಹೋದರರು ಒಪ್ಪದೆ ಹುಲಿ ಹಾಲು ಮತ್ತು ಉಗುರು ತಂದು ಕೊಡಬೇಕು ಎಂದು ಹೇಳುತ್ತಾರೆ.
.ಅವನು ಮನೆಗೆ ಬಂದು ತಾನು ಹುಲಿ ರೂಪು ಧರಿಸಿ ರಾತ್ರಿ ಬರುತ್ತೇನೆ. ಆಗ ಮುಖಕ್ಕೆ ಅಕ್ಕಿ ತೊಳೆದ ನೀರನ್ನು ಹಾಕಿ ಪೊರಕೆಯಲ್ಲಿ‌ ಮುಖಕ್ಕೆ ಹೊಡಯ ಬೇಕು ಎಂದು ಹೇಳುತ್ತಾನೆ.ಆಗ ತಾನು ಮತ್ತೆ ಮಾನವ ರೂಪು ತಳೆಯುತ್ತೇನೆ ಎಂದು ಹೇಳುತ್ತಾನೆ. ನಂತರ ಹುಲಿ ರೂಪು ತಳೆದು ಕಾಡಿಗೆ ಹೋಗಿ ಹುಲಿ ಹಾಲು ಮತ್ತು ಉಗುರನ್ನು ತಂದು ಮನೆಗೆ ಬರುತ್ತಾನೆ. ಹುಲಿ ರೂಪದಲ್ಲಿ ಬಂದ ಅವನನ್ನು ನೋಡಿ ಹೆದರಿದ ಅವನ ಮಡದಿ ಮೊದಲು ಹೇಳಿರುವುದನ್ನು ಮರೆತು ಬಾಗಿಲು ಹಾಕುತ್ತಾಳೆ.ಆಗ ಬೇರೆ ದಾರಿ ಕಾಣದ ಹುಲಿ ಮಾಡು ಏರಿ ಒಳಗೆ ಹೋಗಿ ಹೆಂಡತಿ ಮಕ್ಕಳನ್ನು ತಿಂದು ಪಾತಾಳಕ್ಕೆ ಇಳಿದಯ ಹೋಯಿತು.
ಇತ್ತ ಆಳ್ಳಡ ರಾಜನಿಗೆ ಮತ್ತೆ ಹುಚ್ಚು ಹಿಡಿಯಿತು .ಜ್ಯೋತಿಷಿಗಳನ್ನು ಕರೆಸಿ ನೋಡಿದಾಗ ಕಾರಿ ಕುರಿಕ್ಕಳ್ ದೈವವಾದ ಬಗ್ಗೆ ತಿಳಿಯುತ್ತದೆ. ನಂತರ ಅವನನ್ನು ಪುಲಿಮರಂಞ ತೊಂಡಚ್ಚನ್ ಎಂಬ ಹೆಸರಿನಲ್ಲಿ ಕೋಲ‌ ಕಟ್ಟಿ ಆರಾಧನೆ ಮಾಡಿದರು.

Thursday, 8 June 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 395 ಹನುಮಂತ ಕೋಲ ©ಡಾ ಲಕ್ಷ್ಮೀ ಜಿ ಪ್ರಸಾದcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ ಸುಮಾರು ೨೦ ವರ್ಷ ಮೊದಲೇ ಹನುಮಂತ  ಭೂತದ ಹೆಸರನ್ನು ನಾನು ಎಲ್ಲೋ ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದೆ ಎಲ್ಲಿ ಯಾವ  ಪುಸ್ತಕ ಎಂದು ಈಗ ನೆನಪಾಗುತ್ತಾ ಇಲ್ಲ .ಅಂದಿನಿಂದ ನಂಗೆ ಹನುಮಂತ ಭೂತ ವನ್ನು ನೋಡಬೇಕು ಎಂಬ ಕುತೂಹಲ ಇತ್ತು .ಮುಂದೆ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಕ್ಕಾಗಿ ಅನೇಕ ಪ್ರದೇಶಗಳಲ್ಲಿ ಕಂಬಳ ಮತ್ತು ಕಂಬಳ ಕೋರಿ ನೇಮಗಳನ್ನು ರೆಕಾರ್ಡ್ ಮಾಡುತ್ತಾ ಇದ್ದೆ .ಇದೆ ಸಂದರ್ಭದಲ್ಲಿ ಡಾ. ಇಂದಿರಾ ಹೆಗಡೆಯವರ “ಬಂಟರು ಒಂದು ಸಮಾಜೋ ಸಾಸ್ಕೃತಿಕ ಅಧ್ಯಯನ “ಎಂಬ ಸಂಶೋಧನಾತ್ಮಕ ಕೃತಿಯಲ್ಲಿ ಇಳನ್ತಾಜೆಯಲ್ಲಿ ಹನುಮಂತನಿಗೆ ಕೋಲ ನೀಡಿ ಆರಾಧಿಸುತ್ತಾರೆ ಎಂಬುದನ್ನು ಓದಿ ನಂಗೆ ಹನುಮಂತನ ಕೋಲ ನೋಡಲೇ ಬೇಕೆಂಬ ಆಸೆ ಆಯಿತು. ಜೊತೆಗೆ ಅದನ್ನು ರೆಕಾರ್ಡ್ ಮಾಡಿ ಆ ಬಗ್ಗೆ ವಿಶ್ಲೇಷಿಸಿ  ನನ್ನ ಸಂಪ್ರಬಂಧದಲ್ಲಿ ಸೇರಿಸಿದರೆ ಸಂಪ್ರಬಂಧದ ತೂಕ ಹೆಚ್ಚಾಗುತ್ತದೆ ! ಆದ್ದರಿಂದ ಇರನ್ತಾಜೆ ಎಂಬ ಪ್ರದೇಶ ಎಲ್ಲಿದೆ ಎಂದು ವಿಚಾರಿಸತೊಡಗಿದೆ .ಪುತ್ತುರಿನಲ್ಲಿರುವ ನಮ್ಮ ಹತ್ತಿರದ ನೆಂಟರಾದ ಜಿ ಕೆ ಪ್ರಸನ್ನ ಅವರು ಇಳನ್ತಾಜೆಯ ದಿವಾಕರ ರೈ ಅವರ ಸಂಪರ್ಕ ಸಂಖ್ಯೆಯನ್ನು ಸಂಪಾದಿಸಿ ಕೊಟ್ಟರು .ನಾನು ದಿವಾಕರ ರೈ ಅವರನ್ನು ಸಂಪರ್ಕಿಸಿದಾಗ ಅವರು ಹನುಮಂತನ ನೇಮ ಅಲ್ಲಿ ಆಗುತ್ತಿದ್ದುದನ್ನು ಹೇಳಿ ಅನೇಕ ವರ್ಷಗಳಿಂದ ಈ ನೇಮ ನಿಂತು ಹೋಗಿದೆ, ಈ ವರ್ಷ ಹನುಮಂತನ ಗುಡಿ ಕಟ್ಟಿ ಜೀರ್ಣೋದ್ದಾರ ಮಾಡುತ್ತಾರೆ .ಆಗ ಕಂಬಳ ಕೋರಿ ಸಮಯದಲ್ಲಿ ಹನುಮಂತನಿಗೆ ಹಿಂದಿನ ಸಂಪ್ರದಾಯದಂತೆ ನೇಮ ನೀಡಿ ಆರಾಧಿಸುತ್ತಾರೆ ಎಂದು ಮಾಹಿತಿ ನೀಡಿದರು.ಇದಾಗಿ ಸುಮಾರು ೨ ವರ್ಷ ಕಳೆದುವು. ಇಳನ್ತಾಜೆಯಲ್ಲ್ಲಿ ಹನುಮಂತನ ಕೋಲ ನಡೆಯುವ ಬಗ್ಗೆ ಮಾಹಿತಿ ಏನು ಬರಲಿಲ್ಲ .ಇಷ್ಟಾಗುವಾಗ ನನ್ನ ಪಿ ಎಚ್ ಡಿ ಮಹಾ ಪ್ರಬಂಧವನ್ನು ಹಂಪಿ ವಿಶ್ವ  ವಿದ್ಯಾಲಯಕ್ಕೆ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರ ಬಂತು. ಹಾಗಾಗಿ ಇಳನ್ತಾಜೆಯಲಿ ಹನುಮಂತನಿಗೆ ನೇಮ ಇರುವುದನ್ನು ಉಲ್ಲೇಖ ಮಾತ್ರ ಮಾಡಿ ನನ್ನ ಪ್ರಬಂಧವನ್ನು        ಯುನಿವೆರ್ಸಿಟಿಗೆ ಸಲ್ಲಿಸಿದೆ .ಅದೇ ಸಮಯದಲ್ಲಿ ನಾನು ಪ್ರವೇಶ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೆ  ಆಯ್ಕೆಯಾಗಿ ಕನ್ನಡ ಉಪನ್ಯಾಸಕಿಯಾಗಿ ಬೆಳ್ಳಾರೆಗೆ ಬಂದೆ .ಇಲ್ಲಿ ಸೇರಿದ ತುಸು ಸಮಯಕ್ಕೆ ನಮಗೆ ಹಾಸನದಲ್ಲಿ ತರಬೇತಿ ಕಾರ್ಯಾಗಾರವೊಂದನ್ನು ಆಯೋಜಿಸಿದ್ದು ಅದರಲ್ಲಿ ಭಾಗವಹಿಸಲು ನಾನು ಅಲ್ಲಿಗೆ ಹೋದೆ .ಅದೇ ದಿನ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷರಾಗಿದ್ದ ಪಾಲ್ತಾಡಿ ರಾಮಕೃಷ್ಣ ಆಚಾರ್ ಫೋನ್ ಮಾಡಿ “ನವೆಂಬೆರ್ ೧ ರಂದು ಇಳನ್ತಾಜೆಯಯಲ್ಲಿ ಹನುಮಂತನ ನೇಮ ಇದೆ. ಅಲ್ಲಿ ತುಳು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದೇವೆ ಮುಖ್ಯ ಅತಿಥಿಯಾಗಿ ಬನ್ನಿ” ಎಂದು ಆಹ್ವಾನಿಸಿದರು . ಆದರೆ ನಾನು ತರಬೇತಿ ಕರ್ಯಾಗಾರದಲ್ಲಿದ್ದ ಕಾರಣ ಈ ಕಾರ್ಯಕ್ರಮಕ್ಕೆ ಬರಲು ನಮ್ಮ ತರಬೇತಿ ಸಂಯೋಜಕರ ಅನುಮತಿ ಬೇಕಾಗಿತ್ತು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ . ಆದ್ದರಿಂದ “ನನಗೆ ಬರಲು ಸಾಧ್ಯವಿಲ್ಲ” ಎಂದು ತಿಳಿಸಿದೆ. ಜೊತೆಗೆ ನನ್ನ ಸ್ನೇಹಿತರೊಬ್ಬರು ಹನುಮಂತನ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಬಗ್ಗೆ ತಿಳಿಸಿದೆ .ನನ್ನ ಸೂಚನೆಯಂತೆ ಆ ಬಗ್ಗೆ ಅಧ್ಯಯನ ಮಾಡಿದ  ಬೆಂಗಳೂರಿನ ವಿಜಯ ಕಾಲೇಜ್ ಕನ್ನಡ ಉಪನ್ಯಾಸಕರಾದ ಮಂಜುನಾಥ್ ಅವರನ್ನೇ ಮುಖ್ಯ ಅತಿಥಿಯಾಗಿ  ಆಹ್ವಾನಿಸಿದರು . ಆದರೆ “ಹನುಮಂತನ ನೇಮ ನೋಡಲು ನಂಗೆ ಸಾಧ್ಯವಾಗುತ್ತಾ ಇಲ್ಲವಲ್ಲ” ಎಂಬ ನೋವು ತುಂಬಾ ಕಾಡುತ್ತಿತ್ತು! .ಎಷ್ಟೋ ಸಮಯದಿಂದ ಹನುಮಂತನ ಕೋಲ ರೆಕಾರ್ಡ್ ಮಾಡಬೇಕೆಂದು ಕಾದಿದ್ದೆ . copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಅಂತು ಕೋಲ ಏರ್ಪಡಾದಾಗ ನಂಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ನನ್ನನ್ನು  ಹಗಲು ರಾತ್ರಿ ಕಾಡುತ್ತಿತ್ತು . ನಾನು ಆ ದೇವರಿಗೆ ಕೈ ಮುಗಿದು ಪ್ರಾರ್ಥಿಸಿದೆ .ಆಶ್ಚರ್ಯ ! ನೇಮಕ್ಕೆ ಎರಡು ದಿವಸ ಮೊದಲು ನಮ್ಮ ತರಬೇತಿಯ ರಾಜ್ಯ ಸಂಯೋಜಕರಾದ ಶ್ರೀ ಗೋಪಣ್ಣ ಅವರು ನಮ್ಮ ಹಾಸನದ ಕೇಂದ್ರಕ್ಕೆ ಬಂದಿದ್ದು ನನ್ನನ್ನು ಕರೆದು ನಿಮಗೆ ಏನೋ ರಿಸರ್ಚ್ ರೆಕಾರ್ಡ್ ಮಾಡುವುದಕ್ಕೆ ಹೋಗ ಬೇಕಾಗಿದೆಯೇ ?ಎಂದು ವಿಚಾರಿಸಿದರು !ಹೌದೆಂದು ಹೇಳಿ ವಿಷಯ ತಿಳಿಸಿದೆ. ಅದು ಕೂಡ ಅಧ್ಯಯನವೇ ಹೋಗಿ ಬನ್ನಿ ಎಂದು ನಂಗೆ ಹೋಗಿ ಬರಲು ಅವರು ಅನುಮತಿ ನೀಡಿದರು!ಅವರಿಗೆ ಅಕಸ್ಮಾತ್ ಆಗಿ ಭೇಟಿ ಆಗಿದ್ದ ಮಂಜುನಾಥ್ ಅವರು ವಿಷಯ ತಿಳಿಸಿದ್ದರಂತೆ !ಅಂತು ಇಂತೂ ನಾನು ಹನುಮಂತನ ಕೋಲವನ್ನು ರೆಕಾರ್ಡ್ ಮಾಡಿದೆ .ಅಂದಿನ ವೇದಿಕೆಯಲ್ಲಿ ನನಗೆ ಗೊತ್ತಿರುವ ವಿಚಾರವನ್ನು ಹಂಚಿಕೊಂಡೆ.ಹನುಮಂತ ಪೌರಾಣಿಕ ದೇವತೆಯಾಗಿ ಪ್ರಸಿದ್ಧನಾಗಿದ್ದಾನೆ .ಆದರೆ ಜನಪದ ದೈವವಾಗಿಯೂ ಆತನಿಗೆ ಎಲ್ಲೆಡೆ ಆರಾಧನೆ ಇದೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


      ರಾಮನ ಬಂಟ ಹನುಮಂತನ ಕಥೆಯನ್ನು ಕೇಳದೆ ಇರುವವರು ಅಪರೂಪ .ರಾಮಾಯಣದಲ್ಲಿ ರಾಮನಿಗೆ ಸುಗ್ರೀವನ ಸಖ್ಯವನ್ನು ಮಾಡಿಸಿದಾತ ಈತ .ಮುಂದೆ ಸಮುದ್ರಾ ಲಂಘನ ಮಾಡಿ ಲಂಕೆಗೆ ಹೋಗಿ ಸೀತೆಯನ್ನು ಪತ್ತೆ ಹಚ್ಚಿ ಬಂದು ರಾಮನಿಗೆ ಸುದ್ದಿ ಕೊಡುವವನು ಹನುಮಂತ .ಸಮುದ್ರಕ್ಕೆ ಸೇತುವೆ ಕಟ್ಟುವಲ್ಲಿ ಈತನ ಪಾತ್ರ ಬಹಳ ಮಹತ್ವದ್ದು .ರಾಮ ರಾವಣರ ಯುದ್ಧದ ಸಂದರ್ಭದಲ್ಲಿ ಮೂರ್ಛೆ ಹೋದ ಲಕ್ಷ್ಮ ಣ ನನ್ನು ಹಿಮಾಲಯಕ್ಕೆ ಹೋಗಿ ಸಂಜೀವನಿ ಬೆಟ್ಟವನ್ನು ಹೊತ್ತು ತಂದು ಬದುಕಿಸುವ ಮಹತ್ಕಾರ್ಯ ಮಾಡಿದವನು ಹನುಮಂತ .ಮುಂದೆ ತ್ರೇತಾ ಯುಗದಲ್ಲೂ ಶರಸೇತು ನಿರ್ಮಾಣ ಹಾಗೂ ಸೌಗಂಧಿಕಾ ಪುಷ್ಪ ತರುವ ಸಂದರ್ಭಗಳಲ್ಲಿ ಹನುಮಂತನ ಶಕ್ತಿಯನ್ನು ನಾವು ಮನಗಾಣುತ್ತೇವೆ .ಇಲ್ಲೆಲ್ಲಾ ಹನುಮಂತ ಪುರಾಣ ಮೂಲ ದೇವತೆಯಾಗಿ ಕಂಡು ಬರುತ್ತಾನೆ . ಅಂಜನಾದೇವಿ ಎಂಬಾಕೆಯ ಮಗನಾದ್ದರಿಂದ ಹನುಮಂತನಿಗ. ಆಂಜನೇಯ’ ಎಂಬ ಹೆಸರು ಬಂತು.  ಅಂಜನಾದೇವಿ ಕುರುಡಿ. ಗಿಡದ ಕೆಳಗೆ ಕೈ ತೆರೆದು ಕುಳಿತುಕೈಯಲ್ಲಿ ಬಿದ್ದುದನ್ನು ಸ್ವೀಕರಿಸುತ್ತಿದ್ದಳು.ಆಕಾಶಯಾನವಲ್ಲಿದ್ದ ವಾಯುದೇವನು ಉಗುಳಲುಅದು ಅಂಜನಾದೇವಿಯ ಕೈಯಲ್ಲಿ ಬಿದ್ದಿತು. ಅದನ್ನೇ ಸೇವಿಸಿದಳು. ಅದರಿಂದ ಗರ್ಭ ನಿಂತು ಮಾರುತಿ ಜನಿಸಿದನುಎಂಬ ಜನಪದ ನಂಬಿಕೆ ಕೂಡ ಪ್ರಚಲಿತವಿದೆ  ಆದರೆ ಅಂಜನ’ ಎಂದರೆ ಬಯಕೆಗಪ್ಪ’ ಎಂಬ ಅರ್ಥವಿದೆ. ಹನುಮಂತನ ಮೂರ್ತಿಗೆ ಎಣ್ಣೆ ಸವರಿಜಿಗುಟಾದ ಕಪ್ಪು ಮಸಿ ಮೆತ್ತಿಕೊಂಡಿರುತ್ತದೆ. ಅವನಿಗೆ ಹರಕೆ. ಹೊತ್ತುಪ್ರಸಾದವೆಂದು ಈ ಕಪ್ಪು ಸಂಕೇತಗಳು ಬಳಕೆಯಾಗುತ್ತವೆ. ಕರಿಯದಾರಕಪ್ಪು ಮಸಿಕರಿಯಮಣಿಗಳುಕಣ್ಣಿನ ಕಾಡಿಗೆಹನುಮಂತನ ಮೂರ್ತಿ ಇರುವ ಕಪ್ಪು ಬಿಲ್ಲೆ-ಇತ್ಯಾದಿಗಳು. ಹೀಗೆ ತಮ್ಮ ಬಯಕೆಯನ್ನು ಈಡೇರಿಸುವ ಈ ಕಪ್ಪು ನಿಶಾನೆಯ ದೇವರನ್ನು ಆಂಜನೇಯ’ ಅಂದರೆ-ಬಯಕೆಗಪ್ಪುಳ್ಳವನು’-ಎಂಬರ್ಥ ಬರುವಂತೆ ಹೆಸರಿಟ್ಟು ಕರೆದಿರಲೂ ಬಹುದಾಗಿದೆ. ರೂಢಿಯಲ್ಲಿ ಕರಿಹನುಮ’ ಎಂಬ ಮಾತೂ ಕೇಳುತ್ತೇವೆ.


ಈತ ಗಾಳಿದೇವರು-ಮರುತನಿಗೆ ಹುಟ್ಟಿದುದರಿಂದ ಮಾರುತಿ ’ ಎಂಬ ಹೆಸರು ಬಂದಿದೆ ಎನ್ನಲಾತ್ತದೆ. ಆದರೆ ಈತನಲ್ಲಿ ಅಂತರಿಕ್ಷದಲ್ಲಿ ಹಾರಾಡುವ ವಿಲಕ್ಷಣ ಶಕ್ತಿ ಇರುವುದೆಂದು ಕಲ್ಪನೆಯಿರುವುದರಿಂದ ಮಾರುತಿಎಂಬ ಹೆಸರು ಬಂದಿರಲೂ ಸಾಧ್ಯವಿದೆ.ಆದರೆ ನಿಜವಾಗಿಯೂ ಹನುಮಂತ ಪುರಾಣ ಮೂಲ ದೇವತೆಯೇ ?ಎಂಬುದೊಂದು ಪ್ರಶ್ನೆ .ಯಾಕೆಂದರೆ ಹನುಮಂತನ ಆರಾಧನೆ /ಮಂಗನ ಆರಾಧನೆ ಜಗತ್ತಿನ ಹಲವೆಡೆಗಳಲ್ಲಿ ಕಂಡು ಬರುತ್ತದೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


 ಟಾಗೊ  ಮತ್ತು ಆಫ್ರೀಕಾಗಳ ಕೆಲವು ಹಳ್ಳಿಗಳ ಜನರು ಹನುಮಂತ(ಮಂಗ ?) ದೇವರಿಗೆ ದಿನಾಲು ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮ್ಮ ಬಯಕೆ ಈಡೇರುತ್ತದೆಂದು ಅವರು ನಂಬುತ್ತಾರೆ. ಕುನಾಮರು ಮತ್ತು ಬಾರಿ  ಜನಗಳು ಕೂಡ ಹನುಮಂತನನ್ನು ಪೂಜಿಸುತ್ತಾರೆ.ಹನುಮಂತನು ಬಹು ಪೂರ್ವಕಾಲದಿಂದಲೆ ಸಂತಾನವನ್ನು ನೀಡುವ  ಕೊಡುವ ದೇವರೆಂದು ಎಂದು ಜನಪದರು ನಂಬಿ ಆರಾಧಿಸುತ್ತಾರೆ . ಈ  ನಂಬುಗೆ ಜಾವಾ ದೇಶದ ಜನಾಂಗಗಳಲ್ಲೂ ಇದೆಯೆಂದು ತಿಳಿದು ಬರುತ್ತದೆ. ನಮ್ಮಲ್ಲಿ-ನಡುರಾತ್ರಿ ಬೆತ್ತಲೆಯಾಗಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದರೆಮಕ್ಕಳಾಗತ್ತವೆ ಎಂಬ ಜನಪದ ನಂಬಿಕೆಯಿದೆ:


 ಒಬ್ಬ ರಾಣಿ ಬಂಜೆಯಾಗಿರುತ್ತಾಳೆ .ಬಂಜೆ ಹೆಂಡತಿ ತನಗೆ ಬೇಡ ಎಂದು ರಾಜ  ಆಕೆಯನ್ನು ಊರ ಹೊರಗೆ ಮನೆ ಕಟ್ಟಿ ಇಡುತ್ತಾನೆ. ರಾನಿಗೊನು ಮಂಗ ಸಹಾಯ ಮಾಡುತ್ತದೆ ಸಹಾಯಕ ಮಂಗವು-ರಾಣಿ ಗರ್ಭಿಣಿ ಯಾಗಿದ್ದಾಳೆಂದು  ಸುದ್ದಿ ಹರಡಿಸುತ್ತದೆ  ಒಂಬತ್ತು ತಿಂಗಳಾದ ನಂತರ ಕೂಸಿನ ಜಡೆ ತೆಗೆಯಲು ಪರಸಿ ಹೊರಡುತ್ತದೆ. ಕಣಕದ ಗೊಂಬೆಯೊಂದನ್ನು ನಿರ್ಮಿಸಿಕುಂಚಿಗೆಯಲ್ಲಿ ಸುತ್ತಿಕೊಂಡು ಮಂಗವೂ ಹೊರಡುತ್ತದೆ. ಮುಂದೆಒಂದುಹನುಮಂತನ ಗುಡಿಯಲ್ಲಿ ಮೂರುತಿಯ ಮುಂದೆ ಗೊಂಬೆಯಿಟ್ಟು ತಾನು ಬಹಿರ್ದೆಸೆಗೆ ಹೋಗಿ ಬರುವವರೆಗೆ ಗೊಂಬೆಯನ್ನು ನಿಗಾಮಾಡಲು ಹನುಮಂತನಿಗೆ ತಾಕೀತು ಮಾಡಿ ಹೋಗುತ್ತದೆ. ತಿರುಗಿ ಬರುವುದರಲ್ಲಿ ಗೊಂಬೆ ಕಾಣದೆಹನುಮಂತನೇ ನುಂಗಿರಬಹುದೆಂದುಅವನ ಮೇಲೆ ಅಪಾದನೆ ಹೊರಿಸಿ ತನ್ನಕೂಸು ತನಗೆ ಕೊಡದಿದ್ದರೆ ಹೊಸಲನ್ನು ಮುಖಕ್ಕೆ ಬಳಿಯುವದಾಗಿ ಹೆದರಿಸುತ್ತದೆ.ಹನುಮಂತನು ಹೆದರಿ-ಜೀವವಿರುವ ಕೂಸನ್ನೇ ಉಗುಳುತ್ತಾನೆ ಅಥವಾ ಅವನು ಉಗುಳಿದ ಉಗುಳೇ ಕೂಸಾಗಿ ಮಾರ್ಪಾಡುತ್ತದೆ.ಎಂದು  ಒಂದು ಜಾನಪದ ಕಥೆಯಲ್ಲಿ ಹೇಳಿದೆ.  ಒಬ್ಬಳು ತನಗೆ ಗಂಡುಮಗು ಜನಿಸಿದರೆ ಅಪ್ಪಳ ತುಪ್ಪಳಏರಿಸುವದಾಗಿ ಹನುಮಂತನಿಗೆ ಹರಕೆ ಹೊರುತ್ತಾಳೆ. ಅವಳಿಗೆ ಗಂಡು ಮಗು ಜನಿಸುತ್ತದೆ.ಎಂಬ ಕಥೆ ಕೂಡ ಪ್ರಚಲಿತವಿದೆ


ಹನುಮಂತ ಶನಿಯನ್ನು ಗೆದ್ದವನು : ಶನಿಯು ಎಲ್ಲ ದೇವರುಗಳನ್ನು ಕಾಡಿಗೆ‌ದ್ದು ನಾಳೆ ತನ್ನಲ್ಲಿಗೆ ಬರುವುದಾಗಿ ಹನುಮಂತನಿಗೆ ಸೂಚನೆ ಕೊಡುತ್ತಾನೆ. ಮರುದಿನ ಆತನ ತಲೆಯ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಹನುಮಂತನು ತನ್ನ ಬಾಲದಿಂದ ಗುಡ್ಡವನ್ನೇ ಎತ್ತಿ ಸಾವಕಾಶವಾಗಿ ಶನಿಯ ತಲೆಯ ಮೇಲೆ ಇಡುತ್ತಾನೆ. ಗುಡ್ಡದ ಭಾರವನ್ನು ತಾಳದ ಶನಿ ಹನುಮಂತನಿಗೆ ಶರುಣು ಬರುತ್ತಾನೆ. ಹನುಮಂತನು ತನಗೆತನ್ನ ಭಕ್ತರಿಗೆ ಕಾಡಬಾರದೆಂಬ ಕರಾರಿನ ಮೇಲೆ ಶನಿಯನ್ನು ಬಿಟ್ಟು ಬಿಡುತ್ತಾನೆ.ಆದ್ದರಿಂದ ಹನುಮಂತನ ಪೂಜೆ ಮಾಡಿದರೆ ಶನಿಯ ಕಾಟ ಇರುವುದಿಲ್ಲ ಎಂದು ಜನಪದರು ನಂಬುತ್ತಾರೆ . ಹೆಣ್ಣಮಕ್ಕಳು ಹನುಮಪ್ಪನಿಗೆ ಪೂಜೆ ಮಾಡಿದರೆ ಬೇಗ ಮದುವೆ  ಆಗುತ್ತದೆ ಎಂದು ನಂಬಿ ಆರಾಧಿಸುತ್ತಾರೆ . : ಸೋದರಳಿಯ ಅಥವಾ ಸೋದರ ಸೊಸೆಗೆ ಮೊದಲಿಗೆ ಮೇಲಿನ ಹಲ್ಲು ಹೊರಟರೆ-ಹನುಮಂತನ ಗುಡಿಯಲ್ಲಿ ಒಂದು ಆಚರಣೆ ನಡೆಯುತ್ತದೆ. ಸೋದರ ಮಾವನು ಮೇಲಿನ ಹಲ್ಲು ಹೊರಟ ಕೂಸಿಗಾಗಿ ಅಂಗಿಟೊಪ್ಪಿಗೆ ಅಲ್ಲದೆ ಒಂದು ಸಣ್ಣ ಬೆಳ್ಳಿ ಬಟ್ಟಲನ್ನು ಒಯ್ಯುತ್ತಾನೆ. ಗುಡಿಯ ಬಾಗಿಲಿಗೆ ಪರದೆ ಹಾಕುತ್ತಾರೆ. ಮಗು ಒಳಗೆ ಇರುತ್ತದೆ. ಸೋದರಮಾವ ಹೊರಗಿರುತ್ತಾನೆ. ಪೂಜಾರಿ-ಸೋದರಮಾವನ ತಂದ ಬೆಳ್ಳಿ ಬಟ್ಟಲಿನಿಂದ ಮಗುವಿನ ಹಲ್ಲಿಗೆ ಗೀರಿ ರಕ್ತ ತೆಗೆದು ತಂದು ಸೋದರಮಾವನ ಹಣೆಗೆ ಹಚ್ಚುತ್ತಾನೆ. ನಂತರ ಕೂಸಿನ ಮುಖ ನೋಡುತ್ತಾನೆ. ಅಲ್ಲಿಯವರೆಗೆ ಅಂಥ ಮಗುವಿನ ಮುಖ ಸೋದರಮಾವ ನೋಡಬಾರದು ಎಂಬ ನಂಬಿಕೆಯಿದೆ. ಇನ್ನು ಯಾವುದೇ ಶುಭ ಕಾರ್ಯಕ್ಕೆ ಬೀಗರು ಊರಿಗೆ ಬಂದರೆ ಮೊದಲು ಇಳಿದುಕೊಳ್ಳುವುದು ಹನುಮಂತನ ಗುಡಿಯಲ್ಲಿ ಅಲ್ಲಿಂದ ಅವರಿಗೆ ಮೆರವಣಿಗೆಯಲ್ಲಿ ಕರೆತರುತ್ತಾರೆ. ಮದುವೆಗೆ ಬಂದ ಬೀಗರಂತೂ ಹನುಮನ ಗುಡಿಯಲ್ಲಿ ಇಳಿಯಲೇ ಬೇಕು. ಅಲ್ಲಿಯೇ ಬೀಗರ ಬೇಟಿ ನಡೆಯುವುದು. ಹೀಗೆ ಹನುಮಂತನು ನಮ್ಮ ದಿನನಿತ್ಯದ ಜೀವನ-ಸಂಸ್ಕೃತಿಯೊಂದಿಗೆ ತನ್ನ ಸಂಬಂಧವನ್ನು ನಿರಂತರವಾಗಿ ಗಟ್ಟಿಗೊಳಿಸಿಕೊಳ್ಳುತ್ತಲೇ ಇದ್ದಾನೆ ಎಂದು ವೀರಣ್ಣ ದಂಡೆ ಅಭಿಪ್ರಾಯ ಪಟ್ಟಿದ್ದಾರೆ . ಚಳಿ ಬನ್ನಿಗಿಡದಲ್ಲಿ ವಾಸವಾಗಿರುತ್ತದೆ. ದಸರೆಗೆ ಬನ್ನಿಮುಡಿದು ಬರುವವರೊಂದಿಗೆ ಹನುಮಂತನ ಗುಡಿಗೆ ಬರುತ್ತದೆ. ಅಲ್ಲಿಯೇ ದೀಪಾವಳಿಯ ವರೆಗೆ ಕುಳಿತಿದ್ದುದೀಪಾವಳಿ ಪಾಡ್ಯದ ನಸುಕಿನಲ್ಲಿ ಅಗಸನು ಊರಲ್ಲಿ ಆರುತಿ ಬೆಳಗಲು ಬರುವುದಕ್ಕಿಂತ ಮುಂಚೆ ಹನುಮಂತನಿಗೆ ಆರುತಿ ಬೆಳಗಿ ಬರುತ್ತಾನೆ. ಚಳಿಯು ಈ ಅಗಸನ ಕಂಬಳಿಯಲ್ಲಿ ಕುಳಿತುಕೊಂಡು ಮನೆ ಮನೆ ಸೇರುತ್ತದೆ-ಎಂಬ ನಂಬಿಕೆಯಿದೆ. ಹಿಂದುಗಳು ಅನೇಕ ಪ್ರಾಣಿಲಾಂಛನ ಹೊತ್ತ ದೇವರುಗಳನ್ನು ಪೂಜಿಸುತ್ತಾರೆ. ಹನುಮಂತಗಣೇಶನಾಗ ಇತ್ಯಾದಿ. ಇಂಥವುಗಳಲ್ಲಿ ಅತಿ ಪ್ರಮುಖ ಹಾಗೂ ಪ್ರಾಚೀನನೆಂದರೆ ಹನುಮಂತ ದೇವರು. ಅವನ ದೊಡ್ಡಸ್ತಿಕೆಯನ್ನು ನಂತರ ಭಕ್ತಿ ಪಂಥದಲ್ಲಿ-ಮಧ್ಯಕಾಲೀನ ಹಿಂದೂ ಧರ್ಮದಲ್ಲಿ ಕಾಣಿಸಲಾಗಿದೆ. ಅವನನ್ನು ರಾಮನ ಸೇವಕನಂತೆ ಬಣ್ಣಿಸಲಾಗಿದೆ. ಆದರೆ ಭಾರತದಾದ್ಯಂತ ಜನಪದರ ನಂಬಿಕೆ ಯಂತೆ ಅವನು ಕೇವಲ ಒಬ್ಬ ಸೇವಕನಾಗಿಭಕ್ತನಾಗಿ ಕಾಣುವುದಕ್ಕಿಂತ ಹೆಚ್ಚಿಗೆಬಂಜೆಗೆ ಮಕ್ಕಳು ಕೊಡುವ ದೇವರಾಗಿ ಕಾಣುತ್ತಾನೆcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


 ವೈದಿಕರು ರಾಮಾಯಣದಲ್ಲಿ ಹನುಮಂತನನ್ನು ರಾಮನ ಕೇವಲ ಭಕ್ತನನ್ನಾಗಿಸ್ವಾಮಿಕಾರ್ಯ ನಿರ್ವಹಿಸಲು ಕಂಕಣಬದ್ಧನಾಗಿ ನಿಂತ ಸೇವಕನನ್ನಾಗಿ ಚಿತ್ರಿಸುತ್ತಾರೆ. ಹಾಗೆಯೇ ವೀರಶೈವರು ಹನುಮಂತನ ಲಿಂಗಧಾರಣ ಪ್ರಸಂಗವನ್ನು ನಿರೂಪಿಸುತ್ತಾರೆ. ಏನೆಲ್ಲ ಸೇವೆ ಮಾಡಿದರೂ ತಾನು ಬಯಸಿದ ಅನುಗ್ರಹವನ್ನು ರಾಮನಿಂದ ಕೊಡಲಾಗಲಿಲ್ಲವೆಂಬ ನಿರಾಶೆಯಿಂದ ಹನುಮಂತನು ವೀರಭದ್ರನಿಂದಲಿಂಗದೀಕ್ಷೆ ಪಡೆದು ಮುಕ್ತಿ ಹೊಂದಿದನೆಂದು ವೀರಶೈವ ಪುರಾಣಗಳು ವರ್ಣಿಸುತ್ತವೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಇಲ್ಲಿ ರಾಮನನ್ನು ಕಡೆಗಣಿಸಿತಮ್ಮ ದೇವರಿಂದ ಹನುಮಂತನಿಗೆ ದೀಕ್ಷೆ ಕೊಡಿಸಿಅವನನ್ನು ತಮ್ಮ ದೇವರ ಬಳಗದಲ್ಲಿ ಕೂರಿಸಲು ವೀರಶೈವರು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಇನ್ನು ಇಸ್ಲಾಂ ಕಟ್ಟು ಕಥೆಗಳನ್ನು ನೋಡಿದರೆಅವರು-ಮೌಲಾಲಿಯಿಂದ ಹನುಮಂತನು ಸೋಲನ್ನುನುಭವಿಸಿದ ಕಥೆಯನ್ನು ಬಣ್ಣಿಸುತ್ತಾರೆ. ಈ ಬಗ್ಗೆ ”ನನಗೆ ದೊರೆತ ಒಂದು ರಿವಾಯತ ಹಾಡಿನ ಸಾರಾಂಶ ಹೀಗಿದೆ: ಹನುಮಂತನು ಎರಡು ಗುಡ್ಡಗಳ ಮಧ್ಯವಾಸವಾಗಿಬೈಗು-ಬೆಳಗು ತಾಲೀಮ ಮಾಡುತ್ತಿದ್ದನು. ಶಕ್ತಿಯಲ್ಲಿ ತನ್ನ ಸಮನಾದವರು ಯಾರೂ ಇಲ್ಲವೆಂದು ಗರ್ವಪಡುತ್ತಿದ್ದನು. ಒಂದು ದಿನ ಮೌಲಾಲಿ ತಿರುಗಾಡುತ್ತ ಆ ಗುಡ್ಡದೆಡೆಗೆ ಬರುವನು. ಹನುಮಂತನ ಪರಿಚಯವಾಗುವುದು. ತಾನು ಮೌಲಾಲಿಯನ್ನು ಮೀರಿಸಲೆಂದೆ ಇಷ್ಟೆಲ್ಲ ಶ್ರಮ ಪಡುತ್ತಿರುವುದಾಗಿ ಹನುಮಂತನು ಹೇಳುವನು. ಆಗ ಮೌಲಾಲಿಯುತಾನು ಮೌಲಾಲಿಯ ಸೇವಕನೆಂದೂಮೊದಲು ತನ್ನೊಂದಿಗೆ ಗೆದ್ದು ನಂತರ ಮೌಲಾಲಿಯೊಂದಿಗೆ ಕುಸ್ತಿಯಾಡಬಹುದೆಂದೂ ಹೇಳುವನು. ಇಬ್ಬರಿಗೂ ಕುಸ್ತಿ ಪ್ರಾರಂಭವಾಗುತ್ತದೆ. ಮೌಲಾಲಿಯು ಹನುಮಂತನ ಕಪಾಳಕ್ಕೆ ಏಟುಕೊಡುತ್ತಾನೆ.ತತ್ಪಣಾಮವಾಗಿ ಅವನ ಮುಸುಡಿ ಊದಿಕೊಳ್ಳುತ್ತದೆ.ಮುಖ ಎಡಕ್ಕೆ ತಿರುಗಿಕೊಳ್ಳುತ್ತದೆ. ಹನುಮಂತ ಮೌಲಾಲಿಗೆ ಶರಣು ಹೋಗುತ್ತಾನೆ. ಈ ಮೇಲಿನ ವಿವರಗಳನ್ನು ಗಮನಿಸುವಾಗ  ಬ್ರಾಹ್ಮಣರುವೀರಶೈವರು ಮತ್ತು ಮುಸ್ಲಿಮರು ಹನುಮಂತನು ನನ್ನ ತನ್ನವನೆಂದುಖೊಟ್ಟಿ ಸಾಕ್ಷಿಗಳನ್ನು ನಿರ್ಮಿಸಿಅವನ ಚರಿತ್ರೆಯನ್ನು ಮಸುಕುಗೊಳಿಸಿದ್ದಾರೆ. ತಮ್ಮ ತಮ್ಮ ದೇವರ ಅಡಿಗಳಲ್ಲಿ ಹಾಕಿಸೇವಕನೆಂದು ಬಣ್ಣಿಸಲು ಹೆಣಗಾಡಿದ್ದಾರೆ ಎಂಬುದು ನಮಗೆ ಹೊಳೆಯುತ್ತದೆ. ಆದುದರಿಂದ ಹನುಮಂತನ ನಿಜವಾದ ವೃತ್ತಾಂತ ಬೇರೆ ಏನೋ ಇದ್ದುಅವನು ರಾಮನಿಗಾಗಲಿವೀರಭದ್ರನಿಗಾಗಲಿ ಇಲ್ಲವೆ ಮೌಲಾರಿಗಾಗಲಿ ಸಂಬಂಧಿಸಿದವನಿರಲಿಕ್ಕಿಲ್ಲ ಎಂಬ ಅನುಮಾನ ಬರುತ್ತದೆ. ಹೀಗಿರುವುದರಿಂದ ಹನುಮಂತನು ಈ ಮೂವರಿಗೂ ಸಂಬಂಧಿಸಿರದೆಇವರೆಲ್ಲರಿಗಿಂತ ಪೂರ್ವದಲ್ಲಿ ಯಾವುದೋ ಜನಾಂಗದಿಂದ ಪೂಜೆಗೊಳ್ಳುತ್ತಲಿರುವ ಪ್ರಬಲ ದೇವರಾಗಿದ್ದಾನೆಂದು ತೋರುತ್ತದೆ. ನಂತರ ತಮ್ಮ ತಮ್ಮ ದೇವರ ಪ್ರಾಬಲ್ಯಪ್ರಸಾರ ಹೆಚ್ಚಿಸಲು-ಹನುಮಂತನನ್ನು ಅನ್ಯಾಯಕ್ಕೊಳಮಾಡಿದ್ದಾರೆಅತ್ತಿತ್ತ ಎಳೆದಾಡಿದ್ದಾರೆಂದು ಅನಿಸುತ್ತದೆ “ಎಂದು ವೀರಣ್ಣ ದಂಡೆಯವರು ಅಭಿಪ್ರಾಯ ಪಟ್ಟಿದ್ದಾರೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


ಅವನು ಒಕ್ಕಲಿಗರಿಂದ ಪೂಜೆಗೊಳ್ಳುವ ದೈವವಾಗಿಅವರ ಬೆಳೆಯನ್ನು ಕಾಪಾಡುವ ದೈವವಾಗಿ ತೋರುತ್ತಾನೆ ಎಂದು ವೀರಣ್ಣ ದಂಡೆ ಅಭಿಪ್ರಾಯ ಪಡುತ್ತಾರೆ .ಹನುಮಂತನು ಉಳುವವರ ದೇವನಾಗಿದ್ದುಅವರ ಫಲ ಕಾಪಾಡುವ ದೈವವಾಗಿದ್ದಾನೆ ಎಂದು ಜನಪದರು ನಂಬುತ್ತಾರೆ .ಒಕ್ಕಲಿಗರು ಹನುಮಂತನನ್ನು ಕರಿಬಂಟ ಎಂದು ಕರೆದು ಆರಾಧಿಸುತ್ತಾರೆ


 ಮದನ ಮನಗಿಸಬೇಕು ಮಂಡಲ ಬರಿಬೇಕು


ಸುತ್ತ ಕರಿಬಂಟ ಕಟ್ಟಬೇಕು


ಒಕ್ಕಲಿಗರು ಜೋಳದ ರಾಶಿಯ ಸಮಯದಲ್ಲಿ ಹಂತಿ ಮುಗಿದುಮದನ ಮನಗಿಸಿದ ನಂತರಜೋಳದ ರವದಿಯನ್ನು ಸುಟ್ಟುಆ ಕರುಕಿನಿಂದ ಕಣದಲ್ಲಿ ಮಂಡಲ ಬರೆಯುತ್ತಾರೆ. ಅರ್ಧಚಂದ್ರಾಕೃತಿಯ ಹಾಗೂ ’+’ ಈ ಚಿನ್ಹೆಯ ಗುರುತು ಹಾಕುತ್ತಾರೆ. ಇದನ್ನು ಕರಿಬಂಟ’ ಎಂದು ಕರೆಯುತ್ತಾರೆ. ಕರಿಹನುಮ ನಿನ್ನ ರೂಪ ಬರದೇವು ಬಂಡಿಯ

ಮ್ಯಾಲ

ಸಗರ ಶಾಪುರದ ಕರಿಹನುಮ ನಿನನಾಮ


ಬರದೇವು ನಮ್ಮ ಕಣದಾಗ


ಎಂಬ ನಡಿ ಅದಕ್ಕೆ ಸಾಕ್ಷಿಯಾಗಿಯೂ ಇದೆ. ದುಷ್ಟಶಕ್ತಿಯನ್ನು ಸಂಹಾರ ಮಾಡುವವನೂಚೆಲುವನ್ನು ಕೆಡದಂತೆ ಕಾಪಾಡುವವನೂಬಲವನ್ನೂ ಫಲವನ್ನೂ ಕೊಡುವವನೂ ಆದ ಹನುಮಂತನ ಮೇಲೆ ನಂಬುಗೆ ಇಟ್ಟ ಜನಅವನನ್ನು ತಮ್ಮ ಕಣದಲ್ಲಿ ಸಂಕೇತ ತಂದು ಜವಾಬುದಾರಿಯನ್ನು ಹೊರಿಸಿದರುಎಂದು ವೀರಣ್ಣ ದಂಡೆ ಹೇಳಿದ್ದಾರೆ .


ಹನುಮಂತನಿಗೆ ಕೋಳಿ ಹಾಗು ಕುರಿಗಳ ಬಲಿ ಕೊಟ್ಟು ಆರಾಧಿಸುವ ಪದ್ಧತಿ ಕೂಡ ಜನಪದರಲ್ಲಿ ಇದೆ ಎಂದು ಮಂಜುನಾಥ್  ಅವರು ತಿಳಿಸಿದ್ದಾರೆ .ಹನುಮಂತ ಮೈಯಲ್ಲಿ ಬಂದು ಆದೇಶ ಕೊಡುತ್ತಾನೆ ಎಂದು ಜನ ನಂಬುತ್ತಾರೆ.ತುಳು ನಾಡಿನಲ್ಲಿ ಹನುಮಂತನ ಆರಾಧನೆ ರಾಮನ ಬಂಟ ,ಶಕ್ತಿಯನ್ನು ನೀಡುವಾತ ಭಯವನ್ನು ದೂರಮಾಡುವ ದೇವರು ಎಂಬ ಪರಿಕಲ್ಪನೆ ಇದೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


.ಆದರೂ ಪುತ್ತೂರು ತಾಲೂಕಿನ ಇಳನ್ತಾಜೆಯಲ್ಲಿ ಹನುಮಂತನಿಗೆ ವೈದಿಕ ಪರಿಕಲ್ಪನೆಗೆ ಭಿನ್ನವಾಗಿ ಹನುಮಂತನನ್ನು ಭೂತವಾಗಿ ಪರಿಗಣಿಸಿ ಹನುಮಂತನಿಗೆ ಕೋಲ ನೀಡಿ ಆರಾಧಿಸುವ ಪದ್ದತಿ ಬಳಕೆಯಲ್ಲಿದೆ .


 ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ. ಭಯವನ್ನುಂಟು ಮಾಡುವ ಹುಲಿಹಂದಿಸರ್ಪ ಮೊದಲಾದ ಪ್ರಾಣಿಗಳು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತವೆ. ಪಿಲಿ ಭೂತಪಂಜುರ್ಲಿನಾಗಭೂತ ಮೊದಲಾದ ದೈವಗಳು ಪ್ರಾಣಿ ಮೂಲ ದೈವಗಳಾಗಿವೆ. ಅನೇಕ ಪುರಾಣ ಮೂಲ ದೈವಗಳಿಗೂ ಇಲ್ಲಿ ಆರಾಧನೆ ಇದೆ. ಚಾಮುಂಡಿವಿಷ್ಣುಮೂರ್ತಿಗುಳಿಗ ಮೊದಲಾದ ದೈವಗಳಿಗೆ ಪುರಾಣ ಕತೆಗಳ ಸಂಬಂಧವಿದೆ. ಅಸಹಜ ಮರಣವನ್ನಪ್ಪಿದ ಅಮಾನುಷ ವೀರರು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುವುದು ಸಾಮಾನ್ಯವಾದ ವಿಚಾರವೇ ಆಗಿದೆ. ವರ್ಣ ತಾರತಮ್ಯವನ್ನು ಪ್ರಶ್ನಿಸಿರುವ ಮೂಲದ ಮಾಣಿ ಬಬ್ಬು ಹಾಗೂ ಕೊರಗರ ಹೈದ ತನಿಯ ಉರವ ಹಾಗೂ ಕೊರಗ ತನಿಯ ದೈವಗಳಾಗಿ ಆರಾಧಿಸಲ್ಪಡುತ್ತಿದ್ದಾರೆ. ಕೋಟಿ-ಚೆನ್ನಯಮುಗೇರ್ಲುಕೋಟೆದ ಬಬ್ಬು ಕುಂಟಲ್ದಾಯಕನ್ನಡ ಬೀರ ಮೊದಲಾದ ಅನೇಕ ದೈವಗಳು ಜನಸಾಮಾನ್ಯರಾಗಿ ಹುಟ್ಟಿ ಬದುಕಿ ದುರಂತವನ್ನಪ್ಪಿ ದೈವತ್ವಕ್ಕೇರಿದ ದೈವಗಳಾಗಿವೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


ಪ್ರಧಾನ ದೈವಗಳಿಗೆ ಪಾಡ್ದನವಿರುತ್ತದೆ. ಪ್ರಧಾನ ದೈವಗಳೊಂದಿಗೆ ಅನೇಕ ಪರಿವಾರ ದೈವಗಳಿಗೆ ಆರಾಧನೆ ಇರುತ್ತದೆ. ಪರಿವಾರ ದೈವಗಳಿಗೆ ಪ್ರತ್ಯೇಕವಾದ ಪಾಡ್ದನಗಳು ಇರುವುದಿಲ್ಲ. ಕನ್ನಡ ಬೀರಪೆÇೀತಾಳಬಂಟಪುದಕುಲೆ ಪೆರ್ಗಡೆ ಮೊದಲಾದ ಸೇರಿಗೆಯ ದೈವಗಳ ಪಾಡ್ದನವಾಗಲೀಹಿನ್ನೆಲೆಯಾಗಲೀ ಲಭ್ಯವಾಗುವುದಿಲ್ಲ. ಸೇರಿಗೆಯ ದೈವಗಳು ಸಾಮಾನ್ಯವಾಗಿ ಮಾತನಾಡುವುದಿಲ್ಲ. ಈ ದೈವಗಳಿಗೆ ಕಟ್ಟು ಕಟ್ಟಳೆಯಂತೆ ಸಂಕ್ಷಿಪ್ತ ರೂಪದಲ್ಲಿ ಆರಾಧನೆ ಇರುತ್ತದೆ. ಸೇರಿಗೆಯ ದೈವಗಳಿಗೆ ದರ್ಶನವಾಗಲೀಅಣಿಯಾಗಲೀಗಗ್ಗರದೆಚ್ಚಿಯಾಗಲೀ ಇರುವುದಿಲ್ಲ. ವೇಷ ಭೂಷಣ ಕೂಡ ಸರಳವಾಗಿರುತ್ತದೆ. ಇಂಥಹ ಸೇರಿಗೆಯ ದೈವಗಳು ಹೆಚ್ಚಾಗಿ ಮನುಷ್ಯ ಮೂಲದ ಲಕ್ಷಣವನ್ನು ತೋರುತ್ತದೆ.


ಇಳನ್ತಾಜೆಯ  ಹನುಮಂತ ಭೂತಕ್ಕೆ ಇಂತಹ ಸೇರಿಗೆ ದೈವದ  ಲಕ್ಷಣ ಇದೆ.ಆದರೆ ಇಲ್ಲಿ ಹನುಮಂತ ಸೇರಿಗೆ ದೈವವಲ್ಲ . ಈತ ಇಲ್ಲಿ ಪ್ರಧಾನ ದೈವ . ಆದರೂ  ಇತರ ದೈವಗಳಿಗಿಂತ ಭಿನ್ನ. ತುಳುನಾಡಿನ  ಎಲ್ಲ ದೈವಗಳಿಗಿಂತ ವಿಶಿಷ್ಟವಾದ ದೈವ ಹನುಮಂತ ಅಥವಾ ಆಂಜನೇಯ ಸ್ವಾಮಿ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕೌಡಿಚ್ಚಾರು ಸಮೀಪದ ಇಳಂತಾಜೆಯಲ್ಲಿ ಹನುಮಂತನಿಗೆ ನೇಮ ಅಥವಾ ಕೋಲದ ರೂಪದಲ್ಲಿ ಆರಾಧನೆ ನಡೆಯುತ್ತಿದೆ. ಹದಿನಾಲ್ಕು ವರ್ಷಗಳ ಹಿಂದೆ ಈ ಆರಾಧನೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಆದರೆ 2009ರ ನವೆಂಬರ ತಿಂಗಳಿನ ಮೊದಲ ದಿನಾಂಕದಂದು ಹನುಮಂತನ ಕೋಲವು ಇಳಂತಾಜೆ ಪ್ರಮೋದ ರೈ ಹಾಗೂ ಅವರ ಸಹೋದರರ ಸಹಭಾಗಿತ್ವದಲ್ಲಿ ಇಳಂತಾಜೆಯಲ್ಲಿ ಪುನಃ ಆರಂಭವಾಗಿರುವುದು ತುಳುನಾಡಿನ ಸೌಭಾಗ್ಯವೇ ಸರಿ.ನಾನು ಅಂದು ಅಲ್ಲಿಗೆ ಹೋಗಿ ಹನುಮಂತನ ನೇಮವನ್ನು ರೆಕಾರ್ಡ್ ಮಾಡಿದೆ !ಇಲ್ಲಿ ಇಳನ್ತಾಜೆ ಕುಟುಂಬದ ಪ್ರಮೋದ್ ಕುಮಾರ ರೈ ,ಸುಧಾಕರ ರೈ ,ದಿವಾಕರ ರೈ ಮೊದಲಾದವರು ನಂಗೆ ಪೂರ್ಣ ಸಹಕಾರ ಇತ್ತದ್ದನ್ನು ನಾನು ಎಂದಿಗೂ ಮರೆಯಲಾರೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


 ಹನುಮಂತನಿಗೆ ಭೂತದ ರೂಪದಲ್ಲಿ ಆರಾಧನೆ ಇಳನ್ತಾಜೆ ಯಲ್ಲಿ ಮಾತ್ರ ಇದೆ ಎಂದು ನಾನು ಭಾವಿಸಿದ್ದೆ .ಆದರೆ ಇತ್ತೀಚಿಗೆ ಕಳಸದಲ್ಲಿ ಕೂಡ ಶ್ರೀ ವೀರ ಹನುಮಂತ ದೈವಕ್ಕೆ ನೇಮೋತ್ಸವ ಇದೆ ಎಂದು ತಿಳಿದು ಬಂತು ಆದರೆ ಹನುಮಂತ ಭೂತದ ಆರಾಧನೆ ಇತರ ಭೂತಗಳಿಗಿಂತ ತುಸು ಭಿನ್ನ ವಾಗಿ ಇದೆ . ಹನುಮಂತ ಮೈಮೇಲೆ ಬಂದು ಆವೇಶಗೊಂಡು ನುಡಿಕೊಡುವ ಸಂಪ್ರದಾಯ ಕರ್ನಾಟಕದ ಅನೇಕೆಡೆಗಳಲ್ಲಿ ಪ್ರಚಲಿತವಿದೆ. ಆದರೆ ಇಳಂತಾಜೆಯ ಆಂಜನೇಯ ನೇಮದಲ್ಲಿ ಹನುಮಂತ ಮೌನಿ. ಇತರ ದೈವಗಳಂತೆ ಆವೇಶವಿಲ್ಲ. ಸಿರಿ ಮುಡಿ ಇರುವುದಿಲ್ಲ. ತೆಂಗಿನ ತಿರಿಯ ಅಲಂಕಾರವಿಲ್ಲ. ಗಗ್ಗರವಿಲ್ಲ. ಅಣಿ ಇಲ್ಲ. ಆಯುಧವೂ ಇಲ್ಲ.


ಹನುಮಂತನ ನೇಮವನ್ನು ನಡೆಸುವ ಮನೆಯ ಯಜಮಾನ ಮತ್ತು ಭೂತ ಕಟ್ಟುವ ವ್ಯಕ್ತಿ  ೧೫ ದಿನಗಳ ಕಾಲ ಕಾಲ ವ್ರತಾಚರಣೆಯ ವಿಧಿ ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ  ಹನುಮಂತ ಭೂvವನ್ನು ಕಟ್ಟುವ À ಮಾಧ್ಯಮನಿಗೆ ಹಿಂದಿನ ದಿವಸವೇ ಕಲಶ ಸ್ನಾನವಿರುತ್ತದೆ.ಕೊಭೂತದ ಕೋಲ ಡ ಹಿಂದಿನ ದಿವಸ ಊರಿನ ದೇವಸ್ಥಾನದಲ್ಲ್ಲಿ ಕಲಶ ಸ್ನಾನ ಮಾಡಿ ಬಳಿಕ ಹನುಮಂತ ಭೂತದ ಗುಡಿಗೆ ಬಂದು ನಮಸ್ಕಾರ ಮಾಡಿ ,ಕೋಲ ನೀಡುವ ಮನೆಯ ಹಿರಿಯರ ಪಾದಕ್ಕೆ ವಂದಿಸಿ ಅವರಾನತಿ ಪಡೆದು ಫಲಾಹಾರ ಸ್ವೀಕರಿಸುವ ವಿಧಿ ಇದೆ  ಕಲಶ ಸ್ನಾನದ ನಂತರ ಈತ ಸಂಪೂರ್ಣ ಮೌನವ್ರತವನ್ನು ಆಚರಿಸಬೇಕಾಗುತ್ತದೆ. ಆರಾಧನೆ ನಡೆಸುವ ಮನೆಯ ಯಜಮಾನ ಕೂಡ ಮೌನ ವ್ರತವನ್ನು ಪಾಲಿಸಬೇಕಾಗುತ್ತದೆ.  ಹನುಮಂತ ಭೂತ ಮಾಧ್ಯಮ ಕಲಶ ಸ್ನಾನದ ನಂತರ  ಮನೆಯ ಯಜಮಾನನ ಗದ್ದೆಯ ಸಮೀಪದ ತೊರೆಯೊಂದರ ಸಮೀಪದ ಕಲ್ಲಿನಲ್ಲಿ ಹಸಿ ಮಡಲಿನ ಮೇಲೆ ಮೌನವಾಗಿ ಕುಳಿತಿರ ಬೇಕು  .ಭೂತದ ವೇಷ ಕಟ್ಟುವುದು ಕೂಡ ಇಲ್ಲಿಯೇ . copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದತಲೆಗೊಂದು ನೆರೆತ ಕೂದಲಿನ ಅಲಂಕಾರಸೊಂಟಕ್ಕೊಂದು ಬಾಲಮೈಗೆ ಕಪ್ಪು ಬಣ್ಣ ಹಚ್ಚಿಅನೇಕ ಬಿಳಿ ಚುಟ್ಟಿಗಳನ್ನು ಇಡುವಲ್ಲಿಗೆ ಹನುಮಂತ ದೈವದ ಅಲಂಕಾರ ಪೂರ್ಣವಾಗುತ್ತದೆ. ಮೈಮೇಲೆ ಅನೇಕ ಬಿಳಿ ಚುಟ್ಟಿಗಳಿರುವ ಕಾರಣದಿಂದಲೋ ಏನೋ ಈತನನ್ನು ಇಲ್ಲಿ ಸಾರ ಪುಳ್ಳಿದಾರ್’ ಎಂದೇ ಕರೆಯುತ್ತಾರೆ. ತುಳುನಾಡಿನ ದೈವಗಳು ಭೂತದ ಕೋಲದ ಕೊನೆಯಲ್ಲಿ ಭಕ್ತರಿಗೆ ಅರಸಿನ ನೀಡಿ ಅಭಯದ ನುಡಿ ಕೊಡುತ್ತವೆ .ಆದರೆ ಹನುಮಂತ ಭೂತ ಇಲ್ಲಿ ಅಭಯವನ್ನು ಸಂಜ್ಞೆಯ ಮೂಲಕ ನೀಡುತ್ತದೆ .ಈತನಿಗೆ ಸೀಯಾಳ ,ಬಾಲೆ ಹಣ್ಣುಗಳನ್ನು ಆವಾರ (ನೈವೇದ್ಯ ) ನೀಡುತ್ತಾರೆ . ಹನುಮಂತ ಭೂತಕ್ಕೆ ಬಂದ ಹರಿಕೆಯ ವಸ್ತುಗಳಾದ ಅಡಿಕೆಯ ಗೊನೆ ಬಾಳೆಗೊನೆ ಸೀಯಾಳ ಮೊದಲಾದವುಗಳನ್ನು ತಲೆಯ ಮೇಲಿನಿಂದ ಹಿಂಭಾಗಕ್ಕೆ ಎಸೆಯುತ್ತಾರೆ .ಈ ಭೂತಕ್ಕೆ ಪಾಡ್ದನ ಹೇಳುವುದಿಲ್ಲ ಆದ್ದರಿಂದ ಹನುಮಂತ ಭೂತದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ .ಹನುಮಂತ ಭೂತ ಕಟ್ಟಿದ ವ್ಯಕ್ತಿ ಗದ್ದೆಗೆ ಬಾಗಿರುವ ಮರವೊಂದನ್ನು ಏರಿ ಅಲ್ಲಿಂದ ಎಲೆಗಳನ್ನು ಕಿತ್ತು ಹಾಕುವ ಸಂಪ್ರದಾಯ ಇಲ್ಲಿದೆ .ಆಂಜನೇಯ ಸ್ವಾಮಿ/ಹನುಮಂತ ಭೂತ ಎಷ್ಟು ಎಲೆಗಳನ್ನು ಕಿಟ್ಟು ಹಾಕುತ್ತದೆಯೋ ಅಷ್ಟು ಪ್ರಮಾಣದ ಬತ್ತ ಬೆಳೆಯುತ್ತದೆ ಎಂಬ ನಂಬಿಕೆ ಇದೆ .ಹನುಮಂತ ಕೋಲ ನಡೆಸುವ ಇಳನ್ತಾಜೆ ಕುಟುಂಬದವರಿಗೆ ಹನುಮಂತ  ಕುಲ ದೈವವಲ್ಲ. ಪಿಲಿ(ಹುಲಿ) ಭೂತ ಇವರ ಕುಲ ದೈವ .ಆದರು ಇವರು ಹನುಮನ್ತನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಾರೆ copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ


ಈ ದೈವವನ್ನು ಹನುಮಂತ ಅಥವಾ ಆಂಜನೇಯ ಎಂದು ಹೇಳುವ ಬದಲು ಸಾರಪುಳ್ಳಿದಾರ್’ ಎಂದು ಕರೆಯುವುದು ತುಸು ಗಮನಾರ್ಹವಾದ ವಿಚಾರವಾಗಿದೆ.


ಈ ದೈವ ನಿಜವಾಗಿಯೂ ರಾಮಾಯಣದಲ್ಲಿ ಉಕ್ತವಾದ ಹನುಮಂತನೆಯೆ?ಅಥವಾ ಜನಪದರ ದೈವತವೆಈತ ಪುರಾಣ ಮೂಲ ದೈವವಾಗಿದ್ದರೆ ಇತರ ಪುರಾಣ ಮೂಲ ದೈವಗಳಂತೆ ವೈಭವದ ವೇಷ ಭೂಷಾದಿಗಳನ್ನುಆಚರಣೆಗಳನ್ನೇಕೆ ಹೊಂದಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಳಂತಾಜೆ ಕುಟುಂಬದ ಕುಲದೈವ ಪಿಲಿ ಭೂತ ಆಗಿದ್ದರೂ ಕೂಡ ಆಂಜನೇಯನನ್ನು ಆರಾಧಿಸುತ್ತಾರೆ. ತುಳುನಾಡಿನಲ್ಲಿ ಯಾವ ಕುಟುಂಬಕ್ಕೂ ಆಂಜನೇಯ ಕುಲದೈವವಲ್ಲ. ಪುರಾಣೋಕ್ತ ಹನುಮಂತ ಉತ್ತಮ ವಾಗ್ಮಿಕೆಲವೆಡೆಗಳಲ್ಲಿ ಹನುಮಂತ ಮೈಯಲ್ಲಿ ಬಂದು ನುಡಿ ಕೊಡುವ ಸಂಪ್ರದಾಯ ಪ್ರಚಲಿತವಿದೆ. ಹನುಮಂತನಿಗೆ ಪುಳ್ಳಿಗಳು ಕೂಡ ಇಲ್ಲ. ಆದರೆ ಇಲ್ಲಿಯ ಹನುಮಂತ ಬಂಟ ದೈವದಂತೆ ಮೌನಿ. ಈತನಿಗೆ ಮೈ ತುಂಬ ಪುಳ್ಳಿಗಳ ಚಿತ್ತಾರವಿದೆ. ಈ ದೈವದ ವೇಷ ಭೂಷಣಗಳು ಮಾನವ ಮೂಲದ ಕೆಳ ವರ್ಗದಲ್ಲಿ ಹುಟ್ಟಿ ದೈವತ್ವಕ್ಕೇರಿದ ದೈವಗಳನ್ನು ಹೋಲುತ್ತದೆ. ಈ ದೈವವು ಪೂಕರೆ ಕಂಬಳದ ಗದ್ದೆಯ ಬದಿಯಲ್ಲಿರುವ ಮರವೊಂದನ್ನು ಹತ್ತಿ ರೆಂಬೆಗಳನ್ನು ಎಲೆಗಳನ್ನು ಕಿತ್ತು ಹಾಕುವ ಸಂಪ್ರದಾಯ ಇಲ್ಲಿ ಪ್ರಚಲಿತವಿದೆ. ಈ ಕಾರ್ಯವು ಮೂಲದ ಕೆಲಸಗಾರನ ಕಾರ್ಯವಾಗಿದ್ದು ಈ ದೈವ ಮೂಲದ ಕೆಲಸಗಾರನನ್ನು ನೆನಪಿಸುತ್ತದೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಈಜೋ ಮಂಜೊಟ್ಟಿ ಪಾಡ್ದನ ಹಾಗೂ ಕಂಬಳಗಳ ಐತಿಹ್ಯಗಳಲ್ಲಿ ಮೂಲದ ಮಾಣಿ ಇಳಿಯಬಾರದ ಸತ್ಯದ ಕಂಬಳಕ್ಕೆ ಇಳಿದು ಮಾಯವಾಗಿ ದೈವತ್ವಕ್ಕೇರುವ ಕಥಾನಕವಿದೆ. ಅಂತೆಯೇ ಇರಂತಾಜೆಯಲ್ಲಿ ಕೂಡ ಅಂಥಹದ್ದು ಏನಾದರೂ ಸಂಭವಿಸಿರಬಹುದೇಮೂಲದ ಕೆಲಸಗಾರ ಮರದಿಂದ ಸೊಪ್ಪು ಕಡಿಯುವಾಗ ಬಿದ್ದು ಅಥವಾ ಇನ್ನೇನಾದರೂ ಕಾರಣಕ್ಕೆ ದುರಂತವನ್ನಪ್ಪಿ ದೈವತ್ವಕ್ಕೇರಿರಬಹುದೇಮರಹತ್ತಿ ಎಲೆಗಳನ್ನು ಕೀಳುವ ಕಾರಣ ಆ ದೈವವನ್ನು ಹನುಮಂತನೆಂದು ಪರಿಭಾವಿಸಿರುವ ಸಾಧ್ಯತೆ ಇಲ್ಲದಿಲ್ಲ..ಅಥವಾ ಇತರೆಡೆಗಳಲ್ಲಿ ಹನುಮಂತ ಜನಪದ ದೇವತೆಯಾಗಿರುವಂತೆ ಇಲ್ಲಿ ಕೂಡ ಈತ ತುಳು ಜನಪದ ಸಂಪ್ರದಾಯದಂತೆ ಭೂತದ ರೂಪದಲ್ಲಿ ಆರಾಧಿಸಲ್ಪಡುತ್ತಿರಬಹುದು copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

ಓ ಗಾಳಿಗಪ್ಪಾ ಪೋಪುಂದೋ ಗಾಳಿದ ಇಲ್ಲೂ (ಗೋಳಿದ ಗೆಲ್ಲೂ )


ಓ ಜಾಲುದಪ್ಪಾ ನೈಪ್ಪುಲೇ ಜಾಲುದಾ ದಿಕ್ಕ


ಕನ್ನಡ ಅನುವಾದ :


ಓ ಗಾಳಿಗಪ್ಪ ಹೋಗುತ್ತದೆ ಗಾಳಿಯ ಮನೆಗೆ (ಗೋಳಿಯ ಗೆಲ್ಲಿಗೆ )


ಓ ಅಂಗಳದವನು ಕುಣಿಯಿರಿ ಅಂಗಳದ ದಿಕ್ಕ


ಎಂಬ ಉರಲ್ ತುಳುವರಲಿ ಪ್ರಸಿದ್ಧವಿದೆ. ಇಲ್ಲಿ ಹೇಳುವ ಗಾಳಿಗಪ್ಪ ದೇವರು ಯಾರೆಂದು ತಿಳಿದಿಲ್ಲ ಬಹುಶ ಹನುಮಂತನೇ ಗಾಳಿಗಪ್ಪ ಇರುವ ಸಾಧ್ಯತೆ ಇದೆ ..ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ಜಂಗ ಬಂಟ ಎಂಬ ವಿಶಿಷ್ಟ ಭೂತದ ಆರಾಧನೆ ಇದೆ .ಈತನನ್ನು ಕೂಡ ಹನುಮಂತನ ಅವತಾರ ಎಂದು ಜನರು ನಂಬುತ್ತಾರೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಏನೇ ಆದರು ಇಲ್ಲಿ ಹನುಮಂತ ಭೂತ ಗದ್ದೆಯ ಬೆಳೆಯ ರಕ್ಷಣೆ ಮಾಡುವ ದೈವ .ಜನರಿಗೆ ರಕ್ಷಣೆಯನ್ನು ಕೊಡುವ ಪ್ರಿಯ  ದೈವತವಾಗಿ ಆರಾಧಿಸಲ್ಪಡುತ್ತಾನೆ .ಕಳಸದಲ್ಲಿ ಶ್ರೀ ವೀರ ಹನುಮಂತ ದೈವಕ್ಕೆ ನೇಮೋತ್ಸವ ಇದೆ ಎಂಬ ಮಾಹಿತಿ ಫೇಸ್ ಬುಕ್ (ಧರ್ಮ ದೈವ )ಮೂಲಕ ಸಿಕ್ಕಿದೆಆಧಾರ ಗ್ರಂಥಗಳು

ಗ್ರಾಮ ದೇವತೆಗಳು - ಪ್ರೊ. ವೀರಣ್ಣ ದಂಡೆ 

ತುಳುನಾಡಿನ ಅಪೂರ್ವ ಭೂತಗಳು - ಡಾ ಲಕ್ಷ್ಮೀ ಜಿ ಪ್ರಸಾದ

ಭೂತಗಳ ಅದ್ಭುತ ಜಗತ್ತು - ಡಾ ಲಕ್ಷ್ಮೀ ಜಿ ಪ್ರಸಾದ

ತುಂಡು ಭೂತಗಳು - ಡಾ ಲಕ್ಷ್ಮೀ ಜಿ ಪ್ರಸಾದTuesday, 6 June 2017

ಸಾವಿರದೊಂದು ಗುರಿಯೆಡೆಗೆ 394 ಕುಂಞಿ ರಾಮ ಕುರಿಕ್ಕಳ್ © ಡಾ ಲಕ್ಷ್ಮೀ ಜಿ ಪ್ರಸಾದ

ಕುಂಞಿ ರಾಮ ಕುರಿಕ್ಕಳ್ ದೈವವನ್ನು ಕೋಲತ್ತು ನಾಡಿನಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.ಅನೇಕರು ಅರಸು ದೌರ್ಜನ್ಯ ಕ್ಕೆ ಈಡಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಪಡೆದು ದೈವಗಳಾಗಿ ನೆಲೆ ನಿಂತು ಆರಾಧನೆ ಪಡೆದಿದ್ದಾರೆ .ಬಿರ್ಮಣ ಬೈದ್ಯ/ ಕರಿಮಲೆ ಜುಮಾದಿ, ಕಲ್ಲುರ್ಟಿ ಕಲ್ಕುಡ ಮೊದಲಾದವರು ಅರಸು ದೌರ್ಜನ್ಯದಿಂದ ದುರಂತವನ್ನಪ್ಪಿ ದೈವತ್ವ ಪಡೆದ ದೈವಗಳು.ಇದೇ ರೀತಿ ಕುಂಞಿ ರಾಮನ್ ಎಂಬ ವ್ಯಕ್ತಿ  ಅರಸು ದೌರ್ಜನ್ಯ ಕ್ಕೆ ಈಡಾಗಿ ದುರಂತವನ್ನಪ್ಪಿ ಕದೈವತ್ವ ಪಡೆದು ಕುರಿಕ್ಕಳ್ ದೈವ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಈ ದೈವದ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಮಾಹಿತಿ ಸಂಗ್ರಹಿಸಿ ಬರೆದಿದ್ದಾರೆ.

ಕೋಲತ್ತು ನಾಡಿನ ಕೂಟಾಳಿಕರ ಎಂಬಲ್ಲಿ ಅನೇಕ ಯೋಗಿ ( ಚೋಯಿ) ಸಮುದಾಯದವರ ಮನೆಗಳಿದ್ದವು.ಅವರಲ್ಲಿ ಒಬ್ಬಾತ ಕುಂಞಿ ರಾಮ ಎಂಬಾತನು ಕಳರಿ,ಆತ್ಮ ವಿದ್ಯೆ,ವಿಷ ನಿವಾರಣ,ಮೊದಲಾದ ಅನೇಕ ವಿದ್ಯೆಗಳನ್ನು ಕಲಿತು ಕುರಿಕ್ಕಳ್ ಎಂಬ ಗೌರವವನ್ನು ಪಡೆದಿದ್ದನು.
ಆ ಸಮಯದಲ್ಲಿ ಕೋಲತ್ತು ನಾಡಿನ ಅರಸನಿಗೆ ದುಷ್ಟ ಶಕ್ತಿ ಗಳ ಉಪದ್ರದಿಂದ ಮನೋರೋಗ ಉಂಟಾಯಿತು .ಅನೇಕ ವೈದ್ಯರು ಮಂತ್ರವಾದಿಗಳು ಯತ್ನಿಸಿದರೂ ಅವನ ರೋಗ ಗುಣವಾಗಲಿಲ್ಲ .ಆಗ ಕುಂಞಿರಾಮನನ್ನು ಅರಮನೆಗೆ ಕರೆಸಿದರು.ರಾಜನನ್ನು ಬಾಧಿಸುತ್ತಾ ಇದ್ದ ದುಷ್ಟ ಶಕ್ತಿಗಳನ್ನು ದೂರ ಮಾಡಿ ಅವನನ್ನು ಕುಂಞಿ ರಾಮ ಕಾಪಾಡಿದನು.ರಾಜನು ಅವನಿಗೆ ಪಟ್ಟೆ ಶಾಲು ಹೊದೆಸಿ ಕೈಗೆ ಬಂಗಾರದ ಬಳೆ ತೊಡಿಸಿ ಗೌರವಿಸಿದನು
ಆದರೆ ನಂತರ ಅವನ ಮನಸಿನಲ್ಲಿ ಕುಂಞಿ ರಾಮ ನ ಬಗ್ಗೆ ಮತ್ಸರ ಉಂಟಾಯಿತು.ಇಂತಹ ಚತುರನನ್ನು ಹೀಗೆ ಬಿಟ್ಟರೆ ಮುಂದೆ ತನನ್ನು ಮೀರಿಸಿಯಾನು ಎಂದು ಭಾವಿಸಿದನು.ರಾಜ‌ಮರ್ಯಾದೆಯಿಂದ ಸಾಗುತ್ತಿದ್ದ ಆತನನ್ನು ರಾಜನ ಆಜ್ಞೆ ಯಂತೆ ರಾಜ ಭಟರು, ಕೂಟಾಳಿಕರ ದೇವಸ್ಥಾನದ ಬಳಿ ಬಂದಾಗ ಇರಿದು ಕೊಂದರು.
ಅರಸು ದೌರ್ಜನ್ಯ ದಿಂದ ದುರಂತವನ್ನಪ್ಪಿದ ಕುಂಞಿ ರಾಮ ನು ದೈವತ್ವ ಪಡೆಯುತ್ತಾನೆ.
ಅರಮನೆಯ ಪರಿವಾರದ ಒಬ್ಬನ ಮೈಯಲ್ಲಿ ದೈವಾವೇಶವು ಬಂದು ರಾಜನು ಕುಂಞಿ ರಾಮ ನನ್ನು ಕೊಂದ ಅನ್ಯಾಯಕ್ಕೆ ,ಆದ ಪರಿಣಾಮಕ್ಕೆ ಪ್ರತಿಯಾಗಿ ಆತನಿಗೆ ಕೋಲ‌ಕೊಟ್ಟು ಆರಾಧನೆ ಮಾಡಬೇಕೆಂದು ನುಡಿಯಾಯಿತು.ಅಂತೆಯೇ ಕುಂಞಿ ರಾಮ ಕುರಿಕ್ಕಳ್ ದೈವವನ್ನು ಕೋಲ ಕಟ್ಟಿ ಆರಾಧಿಸಲು ಆರಂಭಿಸಿದರು.
ಈ ದೈವವನ್ನು ಪುಲಯರು,ಮಾವಿಲರು,ಚಿಂಗತ್ತಾನರು,ವಾಣಾನ್ ರು ಮತ್ತು ಕೆಲವೆಡೆ ವಣ್ಣಾನ್ ಸಮುದಾಯದವರು ಕಟ್ಟುತ್ತಾರೆ ಎಂದು ಕೇಳು‌ ಮಾಸ್ತರ್ ಅಗಲ್ಪಾಡಿ ಹೇಳಿದ್ದಾರೆ.
ಆಧಾರ ಗ್ರಂಥ ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

Monday, 5 June 2017

ಸಾವಿರದೊಂದು ಗುರಿಯೆಡೆಗೆ393 ವೆಳ್ಳು ಕುರಿಕ್ಕಳ್ ದೈವ ©ಡಾ ಲಕ್ಷ್ಮೀ ಜಿ ಪ್ರಸಾದ

ಭೂತಾರಾಧನೆ ಬಹಳ ವಿಶಿಷ್ಟವಾದ ಆರಾಧನಾ ರಂಗಭೂಮಿ .ಇಲ್ಲಿ ಯಾರಿಗೆ ಯಾಕೆ ಯಾವಾಗ ಹೇಗೆ ದೈವತ್ವ ಸಿಗುತ್ತದೆ ಎಂಬ ಬಗ್ಗೆ ಒಂದು ಸಿದ್ಧ ಸೂತ್ರವಿಲ್ಲ.ಅಸಾಧಾರಣ ಸಾಹಸ ಮೆರೆದ ವೀರರಂತೆ ಸಾಮನ್ಯ ಜನರು ಕೂಡ ದೈವತ್ವ ಪಡೆದು ಆರಾಧನೆ ಹೊಂದುತ್ತಾರೆ.
ಇಂತಹ ಒಂದು ದೈವತ ವೆಳ್ಳುಕುರಿಕ್ಕಳ್
ಈ ದೈವದ ಬಗೆಗಿನ ಐತಿಹ್ಯ ವನ್ನು ಕೇಳು ಮಾಸ್ತರ್ ಅಗಲ್ಪಾಡಿ ಸಂಗ್ರಹಿಸಿದ್ದು ತಮ್ಮ ಕೇರಳ ತೆಯ್ಯಂ ಕೃತಿಯಲ್ಲಿ ನೀಡಿದ್ದಾರೆ.
ಆಳ್ಳಡ ನಾಡಿನಲ್ಲಿ ಮಾಲೊಪ್ಪಾಡಿ ಎಂಬ ಈಳವ ಸಮುದಾಯದ ಮಹಿಳೆ ಇದ್ದಳು.ಅವಳಿಗೆ ಒಂದು ಹೆಣ್ಣು ‌ಮಗು ಹುಟ್ಟಿ ವರ್ಷವಾಗುಷ್ಟರಲ್ಲಿ ಅವಳ ಗಂಡ ಮರಣವನ್ನಪ್ಪುತ್ತಾನೆ.ಹಾಗಾಗಿ‌ ಮಾಲೊಪ್ಪಾಡಿ ಕೃಷಿ ಕಾರ್ಯ ಮಾಡಿಕೊಂಡು ಬದುಕುತ್ತಿದ್ದಳು.ತಾನು ಕೆಲಸಕ್ಕೆ ಹೋಗುವಾಗ ತನ್ನ ಮಗಳನ್ನು ಅವಳ‌ಮನೆ ಪಕ್ಕದ ನಾಯರ್ ಸಮುದಾಯದ ಮನೆಯಲ್ಲಿ ಬಿಟ್ಟು ಹೋಯ ಉತ್ತಿದ್ದಳು.
ಒಂದು ದಿನ ಅವಳು ಕೂಲಿ‌ ಕೆಲಸಕ್ಕೆ ಹೋಗುವಾಗ ಅವಳ ಮಗಳು ಅವಳನ್ನು ಹಿಂಬಾಲಿಸಿ ಹೋಗುತ್ತಾಳೆ.ಇದು ಮಾಲೊಪ್ಪಾಡಿ ಗಮನಕ್ಕೆ ಬಂದಿರಲಿಲ್ಲ. ಹುಡುಗಿದಾರಿ ತಪ್ಪಿ ಕಲ್ಲೇನ್ಎಂಬ ಪುಲಯನ್ ಸಮುದಾಯಕ್ಕೆ ಸೇರಿದ ಮನೆಗೆ ಹೋಗಿ ಅಲ್ಲಿನ ಮಕ್ಕಳೊಂದಿಗೆ ಆಟವಾಡುತ್ತಾಳೆ.ಅವರು ಕೊಟ್ಟ ಊಟ ತಿಂಡಿಯನ್ನು ತಿನ್ನುತ್ತಾಳೆ.
ಸಂಜೆ ಮಾಲೊಪ್ಪಾಡಿ ‌ಮನೆಗೆ ಬಂದಾಗ ಮಗಳು ತಪ್ಪಿ ಹೋದ ವಿಚಾರ ತಿಳಿಯುತ್ತದೆ ಎಲ್ಲರೂ ಮಗುವನ್ನು ಹುಡುಕಾಡುತ್ತಾರೆ .ಅವಳು ಕಲ್ಲೇನ್ ಪುಲಯರ ಮನೆಯಲ್ಲಿ ಊಟ ತಿಂಡಿಯನ್ನು ಮಾಡುವುದನ್ನು ನೋಡುತ್ತಾರೆ.ಆ ಕಾಲದಲ್ಲಿ ‌ಮೇಲ್ವರ್ಗದವರು ಪುಲಯನರ ಮನೆಗಳಿಗೆ ಹೋಗುತ್ತಾ ಇರಲಿಲ್ಲ ಅವರನ್ನು ಮುಟ್ಟುತ್ತಾ ಇರಲಿಲ್ಲ. ಪುಲಯನರ ಮನೆಯಲ್ಲಿ ಉಂಡ ಬಾಲಕಿಯನ್ನು ಮನೆಗೆ ಕರೆತಂದರೆ ಮಾಲೊಪ್ಪಾಡಿ ಗೆ ಜಾತಿಯಿಂದ ಬಹಿಷ್ಕಾರ ಹಾಕಲು ನಿರ್ಧರಿಸಿದರು
ಮತ್ತು ಮೇಲ್ಜಾತಿಗೆ ಸೇರಿದ ಮಗುವಿಗೆ ಆಹಾರ ಕೊಟ್ಟ ತಪ್ಪಿಗೆ ಕಲ್ಲೇನ್ ಅನ್ನು ಶಿಕ್ಷಿಸಲು ಮುಂದಾದರು .ಆಗ ಅವನು ಆ ಹೆಣ್ಣು ‌ಮಗುವನ್ನು ತಾನೇ ಸಾಕುತ್ತೇನೆ ಎಂದು ತಿಳಿಸಿ ಅದನ್ನು ಸಾಕುತ್ತಾನೆ.
ಅವಳು ದೊಡ್ಡವಳಾದಾಗ ತನ್ನ ಅಳಿಯನಿಗೆ ಕೊಟ್ಟು ಮದುವೆ ಮಾಡುತ್ತಾನೆ.ಅವರಿಗೆ ಓರ್ವ ಸತ್ಪುತ್ರ ಜನಿಸುತ್ತಾನೆ.ಅವನಿಗೆ ವೆಳ್ಳುವಿರುತನ್ ಎಂದು ಹೆಸರಿಟ್ಟು ಕರೆಯುತ್ತಾರೆ. ಅವನು ಎಲ್ಲ ವಿದ್ಯೆಗಳನ್ನೂ ಕಲಿತು ಮಾಂತ್ರಕನಾಗಿ ಜನರಿಗೆ ಸಹಾಯ ಮಾಡುತ್ತಾಇದ್ದುಜನರಿಂದ ಕುರಿಕ್ಕಳ್ ಎಂದು ಕರೆಸಿಕೊಂಡನು.
ಆಳ್ಳಡ ರಾಜನಿಗೆ‌ ಮತಿ ಭ್ರಮಣೆಯಾದಾಗ ಅದನ್ನು ಯಾರಿಗೂ ಗುಣಪಡಿಸಲಾಗದೆ ಕೊನೆಗೆ ಅವನನ್ನು ಹಿಡಿದ ನೀಚ ಶಕ್ತಿಗಳನ್ನು ಓಡಿಸಿ ವೆಳ್ಳು ವಿರುತನು ಗುಣಪಡಿಸುತ್ತಾನೆ.ಅನಂತರ ಅವನು ಸಮೃದ್ಧ ವಾಗಿ ದೀರ್ಘ ಕಾಲ ಬಾಳಿ ನಂತರ ಸಾಯುತ್ತಾನೆ.ಅವನ ಮರಣದ ಏಳನೆಯ ದಿನ ಆಳ್ಳಡನಾಡು ಅರಮನೆಯಲ್ಲಿ ನಿಮಿತ್ತಗಳು ಕಾಣಿಸಿಕೊಂಡು ವೆಳ್ಳು ಕುರಿಕ್ಕಳ್ ದೈವತ್ವ ಪಡೆದ ಬಗ್ಗೆ ತಿಳಿದು ಬರುತ್ತದೆ. ನಂತರ ಅವನಿಗೆ ಕೋಲ ನೀಡಿ ಆರಾಧನೆ ಮಾಡುತ್ತಾರೆ.
ಆಧಾರ ಗ್ರಂಥ ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

Sunday, 4 June 2017

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ಹೆಚ್ಚಿನ ವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ ಹಾಗಾಗಿ ಬ್ಲಾಗ್ ಬರಹವನ್ನು ಕಾಪಿ ಮಾಡಿ ಹಾಕಿರುವೆ

ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ಎಂಬ ಸತ್ಯವನ್ನು  ಮುಚ್ಚಿಟ್ಡು ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ  .

ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿ ಗೆ ಇಲ್ಲಿ ಓದಿ

ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ

ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ‌ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು  ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು  ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ  ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ   ಆದರೆ ಪ್ರಸ್ತುತ  ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ  ಯಾಕೆಂದರೆ ಇದರಲ್ಲಿ ತುಳು ಭಾಷೆಯಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ಇದರಿಂದಾಗಿ ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ

ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನ‌ಕೆಲವು ಬ್ರಾಹ್ಮಣ ಸಮುದಾಯಗಳು  ತಂಜಾವೂರು ಕಂಚಿಯ  ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ ವಾಗುತ್ತದೆ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ  ಇಲ್ಲ ಇದರಲ್ಲಿ  ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯ ಏಳು ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ  ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಆದರೆ ಇದು ತುಲು ಭಾಷೆಯ ಲಿಪಿ ಅಲ್ಲ
ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ

1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು  ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು

2, ಈ ಲಿಪಿಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳಾಗಿವೆ  ಕೇವಲ ಏಳು‌ ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ

3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ  ತುಳುವಿನ ಎಲ್ಲ ಅಕ್ಷರಗಳು ಇಲ್ಲ ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ

4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ

5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು

6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ

7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು‌ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11  ಇದರಲ್ಲಿ  ಉಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ   ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆ ಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು  ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ  ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
 13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಏಳು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಏಳು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಏಳು ಮಾತ್ರ ಒಂದೊಮ್ಮೆ ಇದು ತುಳು ಭಾಷೆ ಬರೆಯಲು ಬಳಕೆಗೆ ಇದ್ದಿದ್ದರೆ  ಲಿಪಿ ಆಗಿರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ  ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು  ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ  ಈ ಲಿಪಿಯಲ್ತುಲಿ ಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ  ಎಂದು ಹೇಳಬಹುದು .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ  ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

17 ಈ ಎಲ್ಲಾ ಆಧಾರಗಳು  ತಿಗಳಾರಿ ಮತ್ತು ತುಲು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ  ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ‌ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಯಲ್ಲಿ ಸಿಕ್ಕಿವೆ ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು  ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ

20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ   ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು ಆದರೆ  ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾ್ಉವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಳು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ  ©ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ  ವಿದ್ಯಾ ಅವರಿಗೆ  ನೀಡಿದ ಸೂಚನೆಗಳು--
Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)

ಸಾವಿರದೊಂದು ಗುರಿಯೆಡೆಗೆ 392 ಪೆರುಂಬಳಯಚ್ಚನ್ ದೈವ ©ಡಾ ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ 392 ಪೆರುಂಬಳಯಚ್ಚನ್ ದೈವ ©ಡಾ ಲಕ್ಷ್ಮೀ ಜಿ ಪ್ರಸಾದ

ಪೆರುಂಬುಯ ಎಂದರೆ ಹೊಳೆಯಲ್ಲಿ ಮುಳುಗಿ ದುರಂತವನ್ನಪ್ಪಿದ ವಳ್ಳುವ ಸಮುದಸಯದ ಯುವಕ ದೈವತ್ವ ಪಡೆದು ಆರಾಧನೆ ಪಡೆಯುವ ಕಥಾನಕ ಈ ದೈವದ ತೋತ್ರಂಪಾಟ್ಟ್/ ಪಾಡ್ದನದಲ್ಲಿದೆ.
ದಕ್ಷಿಣ ‌ಮಲಬಸರ್ ಪ್ರದೇಶದಲ್ಲಿ ಕಂಕಾಳ ದೇವನ್ ಮತ್ತು ದಾರಿಕೇಶ್ವರಿ ಎಂಬ ವಣ್ಣಾನ್ ಸಮುದಾಯದ ದಂಪತಿಗಳು ಇದ್ದರು.ದೀರ್ಘ ಕಾಲ ಸಂತತಿ ಇಲ್ಲದೆ ಇರಲು ಮಹಾ ವಿಷ್ಣು ವನ್ನು ಆರಾಧಿಸಿ ಒಬ್ಬ . ಮಗನನ್ನು ಪಡೆಯುತ್ತಾರೆ
ಅವನಿಗೆ ವಿದ್ಯಾಭ್ಯಾಸ ಮಾಡಿಸಿದರು.ದೊಡ್ಡವನಾದಾಗ ಅವನಿಗೆ ದೂರದೂರಿಗೆ ಹೋಗಿ ವ್ಯಾಪಾರ ಮಾಡುವ ಆಸೆ ಉಂಟಾಯಿತು.ತನ್ನ ಮಾವನ ಬಳಿಗೆ ಹೋಗಿ ಎರಡು ಎತ್ತುಗಳನ್ನು ಪಡೆದು ಅದರ‌ಮೇಲೆ ಸರಕುಗಳನ್ನು ಹೇರಿ ಐದು ಮಂದಿ ಸಂಗಡಿಗರ ಜೊತೆ ದೂರದ ಊರಿಗೆ ಹೋದನು. ಕೊನೆಗೆ ಅವರೆಲ್ಲರೂ ಮಾನಂತವಾಡಿಯ ತಿರುನೆಲ್ಲಿ ಎಂಬ ಊರಿಗೆ ತಲುಪಿದರು .ಅಲ್ಲಿನ ಪೆರುಮಾಳ್ ದೇವತಿಗೆ ಕಾಣಿಕೆ ಸಲ್ಲಿಸದೆ ಇರುವ ಕಾರಣ ಉಂಟಾದ ದೇವರ ಕೋಪದಿಂದ ಎತ್ತುಗಳು ಕಲ್ಲಾದವು.ಇದರಿಂದಾಗಿ ಚಿಂತಿತಾರಾಗಿ ಆರು ಜನರು ಹುಚ್ಚರಂತೆ ಊರೂರು ಅಲೆದರು.ಒಂದು ಹೊಳೆ / ಪೆರುಂಬಯ ವನ್ನು ದಾಡುವಾಗ ಅವೆಲ್ಲರೂ ನೀರಿನಲ್ಲಿ ಮುಳುಗಿ ಸಾಯುತ್ತಾರೆ. ಅವರಲ್ಲಿ ಅ ವಳ್ಳುವನ್ ಯುವಕ ದೈವತ್ವ ಪಡೆದು ಪರುಂಬಳಯಚ್ಚನ್ ದೈವವಾಗಿ ಆರಾಧನೆ ಪಡೆಯುತ್ತಾನೆ. ಈಗ ವಳ್ಳವಸಮುದಾಯದವನಾದ ಕಾರಣ ಈ ಸಮುದಾಯದ ಧರ್ಮ ದೈವವಾಗಿದ್ದಾನೆ 
ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

ಸಾವಿರದೊಂದು ಗುರಿಯೆಡೆಗೆ 390-391 ಎಂಬ್ರಾನ್ ದೇವ ಮತ್ತು ಐಪ್ಪಳ್ಳಿ ದೈವಗಳು© ಡಾ ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ 390-391 ಎಂಬ್ರಾನ್ ದೇವ ಮತ್ತು ಐಪ್ಪಳ್ಳಿ ದೈವಗಳು© ಡಾ ಲಕ್ಷ್ಮೀ ಜಿ ಪ್ರಸಾದ

ಎಂಬ್ರಾನ್‌ಮತ್ತು ಐಪ್ಪಳ್ಳಿ ದೈವಗಳು ಮೂಲತಃ ಮಾನವರಾಗಿದ್ದು ಅರಸು ದೌರ್ಜನ್ಯ ಕ್ಕೆ ತುತ್ತಾಗಿ ದುರಂತವನ್ನಪ್ಪಿ ದೈವತ್ವ ಪಡೆವರಾಗಿದ್ದಾರೆ.
ಕೋಲತ್ತು ನಾಡಿನಲ್ಲಿ ಚಾಲಾಡ್ ತರ ಎಂಬ ಗ್ರಾಮದ ಅಧಿಕಾರ ಆಯಿಕೊಠಾರವೆಂಬ ನಂಬೂದಿರಿ ಮನೆತನಕ್ಕೆ ಇತ್ತು.ಅವನ ಕೃಷಿ ಕೆಲಸದ ಸಹಾಯಕರಾಗಿ ಪುಲಯನ್ ಸಮುದಾಯದವರು ಇದ್ದರು.ಅವರಲ್ಲಿ ಪಿತ್ತಾರಿ ಎಂಬ ಬಾಲಕ ತಂದೆ ತಾಯಿಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡು ನಂಬೂದಿರಿ ಯ ಆಶ್ರಯದಲ್ಲಿ ಬೆಳೆದನು.ಮನೆಯ ಹಸುಗಳನ್ನು ಮೇಯಿಸುತ್ತಾ ,ಇಡೀ ಬಯಲಿನ ಕೃಷಿ ಕಾರ್ಯಗಳನ್ನು ನೋಡಿಕೊಳ್ಳುತ್ತಾ ಇದ್ದನು
ಒಂದು ದಿನ ಜೋರಾಗಿ ಮಳೆ ಸುರಿದು ನೆರೆ ಬಂದು ಗದ್ದೆ ತೋಟವೆಲ್ಲಾ ಮುಳುಗಿ ಹೋಯಿತು.ಪಿತ್ತಾರಿಯು ಗದ್ದೆ ನೋಡಲು ಬಂದು ಕಟ್ಟಪ್ಪುಣಿಯಲ್ಲಿ ಎರಡು ಏಡಿಗಳು ಇರುವುದನ್ನು ನೋಡಿ ಅದನ್ನು ಹಿಡಿಯಲು ಯತ್ನ ಮಾಡುತ್ತಾನೆ.
ಆ ಸಮಯದಲ್ಲಿ ನೆರೆಯನ್ನು ನೋಡಲು ಬಂದ ಕೋಲತ್ತು ನಾಡಿನ ಅರಸ ಅಲ್ಲಿ ಗೆ ಬರುತ್ತಾನೆ. ಅದನ್ನು ಪಿತ್ತಾರಿ ಗಮನಿಸುವುದಿಲ್ಲ. ದಾರಿ ಕೊಡದ ಅವನ ಮೇಲೆ ಕೋಪಗೊಂಡ ಅರಸ ಕೋವಿಯಿಂದ ಗುಂಡು ಹಾರಿಸಿ ಕೊಲ್ಲುತ್ತಾನೆ. ಗುಂಡಿನ ಧ್ವನಿ ಕೇಳಿ ಪಿತ್ತಾರಿಯ ತಾಯಿ ಓಡಿ ಬರುತ್ತಾಳೆ. ನಂಬೂದಿರಿ ಯೂ ಬರುತ್ತಾನೆ ನಂಬೂದಿರಿಯನ್ನು ಅರಸ ಗುಂಡು ಹಾರಿಸಿ‌ಕೊಲ್ಲುತ್ತಾನೆ.ಎಂಬ್ರಾಂದಿ/ ನಂಬೂದಿರಿಯ ತಾಯಿ ಬಂದು ನಂಬೂದಿರಿ ಶವವನ್ನು ಪಟ್ಟೆ  ವಸ್ತ್ರ ್ರದಿಂದ ಪಿತ್ತಾರಿ ಶವವನ್ನು ಬಿಳಿ ವಸ್ತ್ರ ದಿಂದ   ಮುಚ್ಚಿ ತೆಗೆಯ ಹೊರಟಾಗ ಶವಗಳನ್ನು ನೆಲದಿಂದ ‌ಮೇಲೆತ್ತಲು ಸಾಧ್ಯವಾಗುವುದಿಲ್ಲ.ಎರಡು ಶವಗಳನ್ನು ಪಟ್ಟೆ/ ರೇಷ್ಮೆ ಬಟ್ಟೆಯಿಂದ ಮುಚ್ಚಿದಾಗ ಸಾಧ್ಯವಾಯಿತು. ಇಬ್ಬರನ್ನೂ ಒಂದೇ ಸ್ಥಳದಲ್ಲಿ ಸಂಸ್ಕಾರ ಮಾಡಿದರು 
ನಂತರ ಕೋಲತ್ತು ನಾಡಿನ ರಾಜನ ಅರಮನೆಯಲ್ಲಿ ನಾನಾ ವಿಧವಾದ ಕಷ್ಟ ನಷ್ಟ ಉಂಟಾಯಿತು ಅರಮನೆ ಜನರಿಗೆಲ್ಲ ಹುಚ್ಚು ಹಿಡಿಯಿತು ಆಗ ಜೋತಿಷಿಗಳನ್ನು ಕರೆಸಿ ಕೇಳಲು ಇವರಿಬ್ಬರೂ ದೈವತ್ವ ಪಡೆದಿರುವ ವಿಚಾರ ತಿಳಿಯುತ್ತದೆ ನಂಬೂದಿರಿಯ ಚಿನ್ನದ ವಿಗ್ರಹ ವನ್ನು ಮಾಡಿ ಗುಡಿಯಲ್ಲಿ ಪೂಜಿಸಿದರು‌.ಪಿತ್ತಾರಿಗೆ  ಕೋಲ ಕೊಟ್ಟು ಆರಾಧಿಸಿದರು. ನಂಬೂದಿರಿಯ ವೃದ್ಧ ತಾಯಿಯು ಪಿತ್ತಾರಿಗೆ ಐಪ್ಪಳ್ಳಿ ತೆಯ್ಯಂ ಎಂದೂ,ನಂಬೂದಿರಿಗೆ ಎಂಬ್ರಾನ್ ದೇವನೆಂದೂ ಹೆಸರು ಹೇಳಿ‌ ಕರೆದಳು .ಹೀಗೆ ಐಪ್ಪಳ್ಳಿ ತೆಯ್ಯಂ ಪುಲಯನ್ ಸಮುದಸಯದವರ ಆರಾಧ್ಯ ದೈವವಾಯಿತು
ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

ಸಾವಿರದೊಂದು ಗುರಿಯೆಡೆಗೆ 389 ಮರುತಿಯೋಡನ್ ಕುರಿಕ್ಕಳ್ ತೆಯ್ಯಂ © ಡಾ ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ 389 ಮರುತಿಯೋಡನ್ ಕುರಿಕ್ಕಳ್ ತೆಯ್ಯಂ © ಡಾ ಲಕ್ಷ್ಮೀ ಜಿ ಪ್ರಸಾದ

ಮರುತಿಯೋಡನ್ ಕುರಿಕ್ಕಳ್ ಪುಲಯನ್ ಸಮುದಾಯದವರಿಂದ ಆರಾಧನೆ ಪಡೆಯುವ ಪ್ರಸಿದ್ಧ ದೈವವಾಗಿದೆ.
ಚೇಲೇರಿ ರಾಜನ ರಾಜ್ಯದಲ್ಲಿ ಪುಂತಿಲ್ಲಂ ನಾಡುವಾಳಿ( ತಂಬುರಾನ್) ದೊಡ್ಡ ಕೃಷಿಕನಾಗಿದ್ದನು.ಅವನ ಕೃಷಿ ಕಾರ್ಯಕ್ಕೆ ಸಾಕಷ್ಟು ಜನರು ಸಿಗದೆ ಇದ್ದಾಗ ಅವನು ಚೇಲೇರಿ ಅರಮನೆಗೆ ಹೋಗಿ ಅಲ್ಲಿಂದ ಕುಂಞಿ ವಿರುತನ್ ಎಂಬ ಬಾಲಕನನ್ನು ದುಡ್ಡು ಕೊಟ್ಟು ಮನೆಗೆ ಕರೆತಂದನು.ಅವನಿಗೆ ಯೋಗ್ಯ ವಿದ್ಯಾಭ್ಯಾಸ ಕೊಡಿಸಿ ಪ್ರೀತಿಯಿಂದ ಬೆಳೆಸಿದನು.ಮಂತ್ರ ವಿದ್ಯೆಯನ್ನು ಕಲಿಸಿದ ಕಾರಣ ಅವನು ದೊಡ್ಡ ಮಂತ್ರವಾದಿಯೂ ಆದನು.
ಪುಂತಿಂಲ್ಲಂ ನ ಕೃಷಿ ಕೆಲಸಗಳನ್ನು ವಿರುತನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು .ಅವನನ್ನು ಆ ಕುಟುಂಬದ ಸೊಸೆಯಾದ ಚೆರಿಯ ಕುಟ್ಟಿ ಅಕ್ಕಮ್ಮ ಎಂಬ ವಳು ಮೋಹಿಸಿದಳು.ಅವಳು ವಿರುತನನ್ನು ಸ್ನಾಡ ಘಟ್ಟದಲ್ಲಿ ಭೇಟಿಯಾದಳು.ತನಗೆ ಆಶ್ರಯ ನೀಡಿ ವಿದ್ಯೆ ಕೊಡಿಸಿ ಬೆಳೆಸಿದ ಒಡೆಯನಿಗೆ ದ್ರೋಹ ಮಾಡಲು ಮನಸಿಲ್ಲದೆ ವಿರುತನು ಅಲ್ಲಿಂದ ತಪ್ಪಿಸಿಕೊಂಡು ಹೋದನು.
ಒಂದು ದಿನ ಅವನು ಕಾಡಿಗೆ ಹೋದಾಗ ಅವನನ್ನು ಹಿಂಬಾಲಿಸಿದಳು.ಆಗಲೂ ಅವನು ಬೇರೆ ದಾರಿ ಹಿಡಿದು ತಪ್ಪಿಸಿಕೊಂಡು ಬಂದನು .ಆಗ ನಿರಾಶೆ ಗೊಂಡ ಚೆರಿಯ ಕುಟ್ಟಿಯು ತಾನು ಹೂ ಕೊಯ್ಯುತ್ತಾ ಒರುವಾಗ ತನ್ನನ್ನು ಬಲಾತ್ಕಾರ ಮಾಡಲು ಯತ್ನ ಸಿದ ಎಂದು ಸುಳ್ಳು ಹೇಳಿ ತನ್ನ ಮಾವಂದಿರನ್ನು ನಂಬಿಸುತ್ತಾಳೆ.
ಭತ್ತ ಕೊಯ್ಯುವ ಸಮಯದಲ್ಲಿ ಆತನನ್ನು ವಶೀಕರಿಸಲು ಯತ್ನ ಮಾಡುತ್ತಾಳೆ .ಆದರೆ ಆಗಲೂ ಆತ ಉಪಾಯದಿಂದ ಪಾರಾಗುತ್ತಾನೆ.ನಂತರ ಪುಂತಿಲ್ಲಂ ಅವನಲ್ಲಿ ಭತ್ತ ಅಳೆಯಲು ಹೇಳುತ್ತಾನೆ.ಮೊದಲೇ ಅಲ್ಲಿ ಸಂಚು ಮಾಡಿ ಭತ್ತ ಅಳೆಯುತಿ್ತರುವಾಗ ಅವನಿಗೆ ಸುಳ್ಳು ಲೆಕ್ಕ ಹೇಳಿದರು.ಇದರಿಂದ ಕೋಪಗೊಂಡ ವಿರುತ ಭತ್ತ ಅಳೆಯುವ ಪಾತ್ರವನ್ನು ದೂರ ಬಿಸಾಡಿದನು.ನಾಯರ್ ಮಾರ್ ನು ಆತನ ಆಯುಧಗಳನ್ನು ಅಪಹರಿಸಿದನು.ತನ್ನನ್ನು ಇವರು ಹೇಗಾದರೂ ಮಾಡಿ‌ಕೊಲ್ಲುತ್ತಾರೆ ಎಂದು ತಿಳಿದ ಅವನು ತನ್ನನ್ನು ಕೊಲ್ಲುವುದಾದರೆ ತೊಳೂರ ಮರುವ ಮರದ ಗೆಲ್ಲಿಗೆ ನೇತು ಹಾಕಿ ತೋಳು,ಕೈ ಮತ್ತು ನೆತ್ತಿಯಲ್ಲಿರುವ ಉರುಕ್ಕು/ ತಾಯಿತವನ್ನು ತೆಗೆಯಬೇಕು ಎಂದು ಹೇಳಿದನು ಅದರಂತೆಯೆ ಅವನನ್ನು ಕೊಂದರು.
ವಿರುತನ ಮರಣಾನಂತರ ಪುಂತಿಲ್ಲಂ ಮನೆಯೊಳಗೆ ನಾನಾ ವಿಧವಾದ ಕಷ್ಟ ನಷ್ಟಗಳು ಉಂಟಾದವು ತಂಬುರಾನ್ ಗೆ ಹುಚ್ಚು ಹಿಡಿಯಿತು. ಇದನ್ನು ಜೋತಿಷಿಗಳನ್ನು ಕರೆಯಿಸಿ ಪ್ರಶ್ನೆ ಯಲ್ಲಿ ನೋಡಿಸಿದಾಗ ವಿರುತನಿಗೆ ದೈವತ್ವ ಸಿಕಿದ್ದು ಆತನ ಕೋಪದಿಂದ ಹೀಗೆ ಆಗುತ್ತಿದ್ದು ಆತನನ್ನು ಆರಾಧಿಸಿ ಸಂಪ್ರೀತ ಗೊಳಿಸಬೇಕೆಂದು ತಿಳಿದು ಬರುತ್ತದೆ.ಹಾಗೆ ಆ ಮನೆಯವರು ವಿರುತನಿಗೆ ಕೋಲ ಕಟ್ಟಿ ಆರಾಧನೆ ಮಾಡಲು ಆರಂಭಿಸಿದರು. ಮರುವ ಮರಕ್ಕೆ ನೇತು ಹಾಕಿ ಕೊಂದಿರುವ ಕಾರಣ ಆತನನ್ನು ಮರುತಿಯೋಡನ್ ಎಂದು ಕರೆದು ಆರಾಧನೆ ಮಾಡುತ್ತಾರೆ.
ಆಧಾರ ಗ್ರಂಥ- ಕೇರಳ ತೆಯ್ಯಂ ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

ಸಾವಿರದೊಂದು ಗುರಿಯೆಡೆಗೆ 387-88 ಪನಯಾರ್ ಮತ್ತು ಸಂಪ್ರದಾಯಂ ನಾಯರ್ ತೆಯ್ಯಂ © ಡಾ ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ 387-88 ಪನಯಾರ್ ಮತ್ತು ಸಂಪ್ರದಾಯಂ ನಾಯರ್  ತೆಯ್ಯಂ © ಡಾ ಲಕ್ಷ್ಮೀ ಜಿ ಪ್ರಸಾದ

ಪನಯಾರ್ ಮತ್ತು ಸಂಪ್ರದಾಯಂ ದೈವಗಳು ಪುಲಯರ್ ಸಮುದಾಯದಿಂದ ಆರಾಧನೆ ಪಡೆಯುವ ಶಕ್ತಿಗಳು.
ಕೋಲತ್ತು ನಾಡಿನ ಚೇಲಕ್ಕಾಟ್ ನಲ್ಲಿ ನಾಯರ್ ನಾಡುವಾಳಿ ಇದ್ದನು.ಅವನು ದೈವ ಭಕ್ತನೂ ಸದ್ಗುಣಗಳಿಂದ ಕೂಡಿದ ಆಚಾರವಂತನಾಗಿದ್ದು ಅವನನ್ನು ಜನರು ಸಂಪ್ರದಾಯಂ ನಾಯರ್ ಎಂದು ಕರೆಯುತ್ತಾ ಇದ್ದರು.
ಪನಯಾರ್ ಎಂಬ ಹೆಸರಿನ ಪುಲಯನ್ಸಮುದಾಯದ   ವೀರ ಯುವಕ ಸಂಪ್ರದಾಯಂ ನಾಯರನ ಕೃಷಿಕೆಲಸಗಳನ್ನು ನೋಡಿಕೊಳ್ಳುವ ಕಾರ್ಯಸ್ಥನಾಗಿದ್ದನು.ಅನ್ಯೋನ್ಯತೆಯಿಂದಿದ್ದ ಇವರಿಬ್ಬರೂ ಮರಣಾನಂತರ ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಒಂದು ದಿನ ಇವರಿಬ್ಬರೂ ಪಯ್ಯಾವೂರು ಕ್ಷೇತ್ರ ದರ್ಶನ ಮಾಡಿ ಹಿಂತಿರುಗುತ್ತಾ ದಾರಿ ನಡುವೆ ವಿಶ್ರಾಂತಿ ಗಾಗಿ ಕುಳಿತು ಎಲೆ ಅಡಿಕೆ ತಿನ್ನಲು ಹೊರಟರು.ಆಗ ಅವರು ಅಡಿಕೆ ತಾರದೆ ಇರುವುದು ಗೊತ್ತಾಯಿತು. ಆಗ ನಾಯರ್ ನು ತನ್ನ ಮಂತ್ರ ವಿದ್ಯೆಯಿಂದ ಅಡಿಕೆ ಮರವೊಂದನ್ನು ಸೃಷ್ಟಿ ಮಾಡಿ್ನು .ಪನಯಾರ್ ಮರ ಬಗ್ಗಿಸಿ ಅಡಿಕೆ ಕೊಯ್ದನು.
ನಂತರ ಅಲ್ಲಿಂದ ಹೊರಟಾಗ ಅವರು ವಿಶ್ರಮಿಸಿದ್ದ ಮಲಯಾಟೂರ್ ಕುರಿಕ್ಕಳ್ ಮನೆತನದವರ ಆರಾಧನಾ ಮೂರ್ತಿಗಳ ಅವಾಸ ಸ್ಥಾನದಲ್ಲಿ ಇದ್ದ ದೈವಗಳು ನಾಯರ್ ನ ಓಲೆಯ ಕಡೆಯಲ್ಲಿ ಸೇರಿಕೊಂಡರು. ಮನೆಗೆ ಹಿಂತಿರುಗಿದ ನಾಯರ್ ಕೊಡೆ ಮತ್ತು ಊರುಗೋಲನ್ನು ದೇವರ ಕೋಣೆಯಲ್ಲಿ ಇರಿಸಿದನು.ಅವನ ಮನೆಯಲ್ಲಿ ಅನೇಕ ಕೆಟ್ಟ ಶಕುನಗಳು ಕಾಣಿಸಿಕೊಂಡವು.ಆಗ ಪ್ರಶ್ನೆ ಇಟ್ಟು ನೋಡಿದಾಗ ದೈವಗಳು ಬಂದಿರುವುದು ತಿಳಿದು ಅವುಗಳಿಗೆ ಪ್ರತ್ಯೇಕ ಸ್ಥಾನ ಕಟ್ಟಿಸಿ ಕೋಲ ಕೊಟ್ಟು ಆರಾಧನೆ ಮಾಡಿದರು.ಈ ದೈವಗಳಿಗೆ ಪನಯಾರ್ ಪುಲಯನ್ ಕೋಲ ಕಟ್ಟಿ ಆಡಿಸುತ್ತಾ ಇದ್ದನು.ಇದರಿಂದಾಗಿ ಈ ಎರಡು ಕುಟುಂಬಗಳು ಅಭಿವೃದ್ಧಿ ಹೊಂದಿದವು.
ಪನಯಾರ್ ‌ಮತ್ತು ಸಂಪ್ರದಾಯಂ ನಾಯರ್ ಮರಣಾನಂತರ ಈ ದೈವಗಳಿಗೆ ಸರಿಯಾಗಿ ಆರಾಧನೆ ನಡೆಯಲಿಲ್ಲ. ಆಗ ಎರಡೂ ಮನೆಗಳಲ್ಲಿ ಅನೇಕ ಕಷ್ಟ ನಷ್ಟಗಳು ಉಂಟಾದವು.ಆಗ ಅವರು ಮತ್ತೆ ಆ ದೈವಗಳ ಆರಾಧನೆ ಪ್ರಾರಂಬಿಸಿದರು.ಆ ದೈವಗಳೊಡನೆ ದೈವಿಕತೆ ಪಡೆದು ತೆಯ್ಯಂ ಗಳಾದ ಪನಯಾರ್ ಮತ್ತು ಸಂಪ್ರದಾಯಂ ನಾಯರ್ ರನ್ನೂ ಕೋಲ ಕಟ್ಟಿ ಆರಾಧನೆ ಮಾಡಿದರು.ಆನಂತರ ಪುಲಯನ್ ಮತ್ತು ನಾಯರ್ ಎರಡೂ ಕುಟುಂಬ ದವರು ಈ ಎರಡು ದೈವಗಳಿಗೆ ಒಟ್ಟಿಗೆ ಕೋಲ ಕೊಟ್ಟು ಆರಾಧಿಸುವ ಕ್ರಮ ಆರಂಭವಾಯಿತು.
ಆಧಾರ ಗ್ರಂಥ- ಕೇರಳ ತೆಯ್ಯಂ- ಲೇಖಕರು ಕೇಳು ಮಾಸ್ತರ್ ಅಗಲ್ಪಾಡಿ

Saturday, 3 June 2017

ಸಾವಿರದೊಂದು ಗುರಿಯೆಡೆಗೆ 385-386 ಮೂಲಂಪೆತ್ತಮ್ಮ © ಡಾ ಲಕ್ಷ್ಮೀ ಜಿ ಪ್ರಸಾದ

ಮೂಲಂ ಪೆತ್ತಮ್ಮ ಮೂಲತಃ  ಮೂಲ ನಕ್ಷತ್ರದಲ್ಲಿ ಹುಟ್ಟಿದ ಓರ್ವ ಬ್ರಾಹ್ಮಣ ಮಹಿಳೆ.ಅವಳ ನಿಜವಾದ ಹೆಸರು ಪಾರ್ವತಿ ಕುಟ್ಟಿ ಎಂದು.ಅದನ್ನು ಹ್ರಸ್ವ ಮಾಡಿ ಪಾರು ಕುಟ್ಟಿ ಪಾಡು ಕುಟ್ಟಿ ಎಂದು ಕರೆಯುತ್ತಿದ್ದರು.ಅವಳು ಮೂಲಾ ನಕ್ಷತ್ರದಲ್ಲಿ ಜನಿಸಿದ ಕಾರಣ ಅವಳಿಗೆ ಮೂಲಂ ಪೆತ್ತಮ್ಮ ಎಂದು ಕೂಡ ಕರೆಯುತ್ತಿದ್ದರು.
ಕಣ್ಣೂರಿನಲ್ಲಿ ಹರಿಯುವ ವಳ ಪಟ್ಟಣಂ ಎಂಬ ನದಿಯ ದಡದಲ್ಲಿ ಆಯಿಪ್ಪುಯಿ ಎಂಬ ಗ್ರಾಮವಿದೆ. ಅಲ್ಲಿ ಒಂದು ಮಂತ್ರ ತಂತ್ರಗಳನ್ನು ತಿಳಿದಿರುವ ಅಯ್ಯಂಕರಮನ ನಂಬೂದಿರಿ ಎಂಬ ಸಿರಿವಂತ ಬ್ರಾಹ್ಮಣ ಕುಟುಂಬವಿತ್ತು.ಕಾಲಾಂತರದಲ್ಲಿ ಈ ಕುಟುಂಬ ಸಂತಾನವಿಲ್ಲದೆ ನಶಿಸುತ್ತಾ ಕೊನೆಗೆ ಒಂದು  ವಯಸ್ಸಾದ ಬ್ರಾಹ್ಮಣ ದಂಪತಿಗಳು ಮಾತ
 ಅಲ್ಲಿ ಉಳಿಯುತ್ತಾರೆ. ಆ ಅಯ್ಯಂಕರಿ ನಂಬೂದಿರಿ ಬ್ರಾಹ್ಮಣ ನ ಮಡದಿ ಪಾರು ಕುಟ್ಟಿ ಅಮ್ಮ.ಅವಳು ಒಳ್ಳೆಯ ಗುಣದವಳಾಗಿದ್ದು ಶಿವ ಭಕ್ತೆಯಾಗಿದ್ದಳು.ಸಂತಾನಕ್ಕಾಗಿ ಅನವರತ ಶಿವನನ್ನು ಬೇಡಿಕೊಳ್ಳುತ್ತಾ ಇದ್ದಳು.
ಒಂದು ದಿನ ರಾತ್ರ ಒಂದು ಕನಸನ್ನು ಕಾಣುತ್ತಾಳೆ.
ಕೈಲಾಸದಲ್ಲಿ ಶಿವ ಪಾರ್ವತಿಯವರು ಲಾಸ್ಯವಾಡುತ್ತಾ ಇರುತ್ತಾರೆ. ಎಲ್ಲಾ ದೇವತೆಗಳು ಅಲ್ಲಿ ಕುಳಿತಿದ್ದರು.ಪಾರು ಕುಟ್ಟಿ/ ಮೂಲಂಪೆತ್ತಮ್ಮ ಕೂಡ ಅಲ್ಲಿ ಕುಳಿತಿದ್ದಳು.ಆಗ ಅವಳ ಮಡಿಲಲ್ಲಿ ಒಂದು ಮಗು ಬಂದು ಕುಳಿತಿತು.ಆ ಮಗುವನ್ನು ಹಿಡಿದೆತ್ತಿ ಅಪ್ಪಿ  ಕೊಳ್ಳುವಾಗ ನಿದ್ರೆಯಿಂದ ಎಚ್ಚರವಾಗುತ್ತದೆ.
ಆ ದಿನ ನದೀ ತೀರಕ್ಕೆ ಹೋದಾಗ ಪಾರು ಕುಟ್ಟಿಗೆ ನೀರಿನಲ್ಲಿ ತೇಲಿ ಬಂದ ಒಂದು ಮಗು ಸಿಗುತ್ತದೆ. ತಮಗೆ ದೇವರು ಕರುಣಿಸಿದ ಮಗು ಎಂದು ತಿಳಿದು ಮನೆಗೆ ಕರೆ ತರುತ್ತಾಳೆ.
ಆ ಬ್ರಾಹ್ಮಣ ದಂಪತಿಗಳು ಮಗುವಿಗೆ ಅಯ್ಯಂಕರ ಉಣ್ಣಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕುತ್ತಾರೆ .ಆ ಮಗು ದಷ್ಷಟ ಪುಷ್ಷ್ಟವಾಗಿ ಬೆಳೆದು ಹೊಳೆಯತ್ತಾ ಇದ್ದ ಕಾರಣ ಅದನ್ನು ಎಲ್ಲರೂ ಮುತ್ತಪ್ಪನ್ ( ಮುತ್ತಿನ ಹಾಗೆ ಹೊಳೆಯುಔನು) ಎಂದು ಕರೆಯುತ್ತಾರೆ.
ತಂದೆ ತಾಯಿಯರು ಸಾತ್ವಿಕ ಬ್ರಾಹ್ಮಣರು ಆಗಿದ್ದರೂ ಈ ಬಾಲಕ ಹಾಗಿರಲಿಲ್ಲ.
ಚಿಕ್ಕಂದಿನಿಂದಲೇ ಬ್ರಾಹ್ಮಣೇತರ ಕೆಳವರ್ಗದ ಜನರ ಸಹವಾಸ ಮಾಡಿ ಅವರಂತೆಯೇ ಕಳ್ಳು ಮಾಂಸಾಹಾರ ಅಭ್ಯಾಸ ಮಾಡಿಕೊಂಡಿದ್ದನು .ಜನರು ಇದನ್ನು ಆಡಿ ಕೊಂಡಾಗ ಅಯ್ಯಂಕರ ಬ್ರಾಹ್ಮಣ ಕೋಪಗೊಂಡು ತನ್ನ ಮಡದಿಯನ್ನು ಬೈಯುತ್ತಿದ್ದಳು.
ಅವನು ಮಾಂಸ ಸೇವನೆ ಮಾಡುವ ಕಾರಣ ಬ್ರಾಹ್ಮಣರು ಎಲ್ಲಾ ಅಯ್ಯಂಕರ್ ಮನೆಗೆ ಬಂದು ಅವನನ್ನು ಮನೆ ಬಿಟ್ಟು ಓಡಿಸಬೇಕು ಇಲ್ಲವಾದರೆ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುತ್ತದೆ ಎಂದು ತಿಳಿಸಿದರು.
 ಒಂದು ದಿನ ಬೇಟೆ ಯಾಡಿ ಮಾಂಸ ತಿಂದು ಕಳ್ಳು ಕುಡಿದು‌ಮನೆಗೆ ಬಂದಾಗ ತಂದೆ ಜೋರು ಮಾಡುತ್ತಾರೆ.ತಾಯಿ ಅಳುತ್ತಾ ಕುಳಿತಿದ್ದುದನ್ನು ನೋಡಿ ಅವನಿಗೆ ಸಿಟ್ಟು ಬಂದು ತಾನು ಮನೆ ಬಿಟ್ಟು ಹೋಗುತ್ತೇನೆ ಮಲೆನಾಡಿಗೆ ಹೋಗುತ್ತೇನೆ ಎಂದಾಗ ತಂದೆ  ಅಡ್ಡಿ ಮಾಡಲಿಲ್ಲ.  ತಾಯಿ ದುಃಖಿಸುತ್ತಾ ಇರಲು ಅವಳನ್ನು ಮುತ್ತಪ್ಪನ್ ಸಮಾಧಾನ ಮಾಡಿದನು.ಪಾರು ಕುಟ್ಟಿಯು ಅವನಿಗೆ ಕಟ್ಟಿ ಕೊಳ್ಳಲು ಪೊಯ್ ಕಣ್ಣು/ ಬೆಳ್ಳಿ ಕಣ್ಣು ನೀಡಿ ಕುನ್ನತ್ತೂರು ಪಾಡಿ ಮಲೆಯಲ್ಲಿ ಬೇಟೆಯಾಡಿಕೊಂಡಿರು ಎಂದು ಹೇಳುತ್ತಾಳೆ. ಪುತ್ರ ಶೋಕದಿಂದ ಅವಳು ಸಾಯುತ್ತಾಳೆ.ಅವಳ ಆತ್ಮ ಕುನ್ನತ್ತೂರು ಪಾಡಿಗೆ ಬಂದು ಮೂಲ ಶಿವಾಂಶದಲ್ಲಿ ಲೀನವಾಗುತ್ತದ .ಮುಂದೆ ಅವಳು ದೈವತ್ವ ಪಡೆದು ಮುತ್ತಪ್ಪನ್ ಜೊತೆ ಆರಾಧನೆ ಪಡೆಯುತ್ತಾಳೆ.
ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕ ದೃಷ್ಟಿಯಿಂದ ಅಲೋಚಿಸಿದಾಗ ತಾಯಿ ಮಗ ಇಬ್ಬರದೂ ದುರಂತ ಮತ್ತು ದೈವತ್ವ ಎಂದು ಸ್ಪಷ್ಟವಾಗಿ ಕಾಣುತ್ತದೆ. ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಗಳಿಗೆ ಒಂದು ಅನಾಥ ಮಗು ಸಿಕ್ಕಿ ಅದನ್ನು ದತ್ತು ಸ್ವೀಕರಿಸಿ ಸಾಕಿರಬಹುದು.ಆ ಬಾಲಕ ಸಮಾಜದಲ್ಲಿ ಇದ್ದ ವಿಧಿ ನಿಷೇಧಗಳನ್ನು ಮೀರಿ ಬ್ರಾಹ್ಮಣ ರಿಗೆ ಉಚಿತವಲ್ಲದೆ ಇದ್ದು ಮಾಂಸ ಭಕ್ಷಣೆ ಹಾಗೂ ಕಳ್ಳನ್ನು ಕುಡಿಯುತ್ತಿದ್ದನು.ವಿಧಿ ನಿಷೇಧಗಳು ಅದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.ಇದನ್ನು ‌ಮೀರಿದ ಮುತ್ತಪ್ಪನ್ ಅನ್ನು ಶಿಕ್ಷಿಸಿ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಆತ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಅವನನ್ನು ಸಾಕಿದ ತಾಯಿ ಪುತ್ರ ಶೋಕದಿಂದ ಸಾವನ್ನಪ್ಪಿ ಅವಳೂ ದೈವತ್ವವನ್ನು ಪಡೆದು ಮುತ್ತಪ್ಪನ್ ಜೊತಡ ಆರಾಧನೆ ಪಡೆಯುತ್ತಾಳೆ.
ಇವರಿಬ್ಬರಿಗೆ ನಂಬೂದಿರಿ ಬ್ರಾಹ್ಮಣ ಮನೆಗಳಲ್ಲಿ ನಿತ್ಯ ದೀಪ ಇಟ್ಟು ಆರಾಧನೆ ಇದೆ.ಮಲೆ ಮುತ್ತಪ್ಪನ  ಕಳಿಯಾಟದಲ್ಲಿ ಪಾರು ಕುಟ್ಟಿ ಅಮ್ಮ ನಿಗೆ ಮೂಲಂಪೆತ್ತಮ್ಮ ಎಂಬ ಹೆಸರಿನಲ್ಲಿ ತೆಯ್ಯಂ ಕಟ್ಟಿ ಆರಾಧನೆ ಮಾಡುತ್ತಾರೆ.ಮಕ್ಕಳಿಗೆ ಅನ್ನ ಪ್ರಾಶನವನ್ನು ಮುತ್ತಪ್ಪನ್ ದೈವದ ಕೈಯಲ್ಲಿ ಮಾಡಿಸುತ್ತಾರೆ.ಆಗ ಮಕ್ಕಳನ್ನು ಎತ್ತಿ ಮೊಲೆಯುಣಿಸುವ ಅಭಿನಯವನ್ನು ಮೂಲಂಪೆತ್ತಮ್ಮ ದೈವ ಮಾಡುತ್ತದೆ. ಇದು ಆಕೆ ತನ್ನ ಮಗ ಮುತ್ತಪ್ಪನ್ ಅನ್ನು ಪ್ರೀತಿಯಿಂದ ಸಾಕಿ ಸಲಹಿದ ಸಂಕೇತವಾಗಿದೆ.
ಈ ದೈವಕ್ಕೆ ಬಿದಿರಿನ ಸಲಾಕೆ ಮತ್ರು ನಾರುಗಳಿಂದ ಗೋಪುರಾಕೃತಿ ನಿರ್ಮಿಸಿ ಅದಕ್ಕೆ ಮರಬಾಳೆಯ ಎಲೆಗಳನ್ನು ಸಿಕ್ಕಿಸಿ ತಿರುಮುಡಿಯನ್ನು ತಯಾರಿಸಿ ಕಟ್ಟುತ್ತಾರೆ. ಮೂಲಂಪೆತ್ತಮ್ಮನನ್ನು ಭಗವತಿ ಎಂದು ಕರೆಯುತ್ತಾರೆ. ವಣ್ಣಾನ್ ಸಮುದಾಯದ ಒಂದು ಉಪ ಪಂಗಡದವರು ಮೂಲಂಪೆತ್ತಮ್ಮ ತೆಯ್ಯಂ ಕಟ್ಟುತ್ತಾರೆ.
ಆಧಾರ ಗ್ರಂಥ - ಕೇರಳ ತೆಯ್ಯಂ - ಕೇಳು ಮಾಸ್ತರ್ ಅಗಲ್ಪಾಡಿ