Tuesday 13 March 2018

‌ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 432 ಕೋಟ್ರಗುತ್ತಿನ ಬಬ್ಬು ದೈವ © ಡಾ.ಲಕ್ಷ್ಮೀ ಜಿ ಪ್ರಸಾದ


ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 432 ಕೋಟ್ರಗುತ್ತಿನ ಬಬ್ಬು ದೈವ © ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನ ಪ್ರಸಿದ್ಧ ದೈವ ಕೋಟೆದ ಬಬ್ಬು ಮತ್ತು ಕೋಟ್ರಗುತ್ತಿನ ಬಬ್ಬು ದೈವಗಳು ಬೆರೆ ಬೇರೆಬೇರೆ ದೈವಗಳು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರ ಪ್ರದೇಶದ ಅಂಬಲ ಮೊಗರು ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವಿದೆ. ಇಲ್ಲಿ ಒಂದು ಅಪರೂಪದ ದೈವಕ್ಕೆ ಆರಾಧನೆ ಇದೆ.
ಹಿಂದೆ ತುಂಡರಸರ ಆಳ್ವಿಕೆ ಇದ್ದ ಕಾಲದಲ್ಲಿ ಬಬ್ಬು ಎಂಬ ಹೆಸರಿನ ದಲಿತ ಸಮುದಾಯದ ಯುವಕ ಅರಸರ ಎತ್ತುಗಳನ್ನು ನೋಡಿಕೊಳ್ಳುವ ಉಳುಮೆ ಮಾಡುವ ಕೆಲಸವನ್ನು ಮಾಡುತ್ತಾ ಇದ್ದನು.
ಒಂದು ದಿನ ಉಳುಮೆ ಮಾಡಲು ಇತ್ತು.ಆದರೂ ಬಬ್ಬು ಮರೆತು ಎತ್ತುಗಳನ್ನು ಗುಡ್ಡೆಗೆ ಮೇಯಲು ಬಿಡುತ್ತಾನೆ.
ಆಗ ಕೋಪಗೊಂಡ ಅರಸು ಆತನ ಹೆಗಲಿಗೆ ನೇಗಿಲು ಕಟ್ಟಿ ಉಳುಮೆ ಮಾಡಿಸುತ್ತಾನೆ.ಆಗ ಆ ಯುವಕ ಹಿಂಸೆ ತಾಳಲಾಗದೆ ಮಣ್ಣನ್ನು ಕಚ್ಚಿ ಶಾಪ ಹಾಕಿ ಸಾಯುತ್ತಾನೆ. ಅದರ ಪರಿಣಾಮವಾಗಿ ಆ ಅರಸುವಿನ ಸಂತತಿ ನಿರ್ವಂಶವಾಗುತ್ತದೆ.
ಹೀಗೆ ಅರಸು ದೌರ್ಜನ್ಯಕ್ಕೆ ತುತ್ತಾಗಿ ಮರಣವನ್ನಪ್ಪಿದ ಬಬ್ಬು ಮುಂದೆ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
ಈ ದೈವಕ್ಕೆ ಅಂಬಲ ಮೊಗರು ಲಕ್ಷ್ಮೀ ನರಸಿಂಹ ದೇವಾಲಯದ ಆವರಣದಲ್ಲಿ ಒಂದು ಸಣ್ಣ ಕಲ್ಲು,ಗುಡಿ ಇದೆ.ಇಲ್ಲಿ ನಿತ್ಯ ಈತನಿಗೆ ನೈವೇದ್ಯ ನೀಡಿ ಆರಾಧನೆ ನಡೆಯುತ್ತದೆ.
ಪ್ರಸ್ತುತ ಈ ದೈವದ ಹೆಸರು ಅಲ್ಲಿನವರಿಗೆ ತಿಳಿಯದೆ ಹೋದ ಕಾರಣವೋ ಅಥವಾ ಇನ್ಯಾವುದೊ ಕಾರಣಕ್ಕೆ ಅಲ್ಲಿ ಆತನನ್ನು ಬ್ರಹ್ಮ ರಾಕ್ಷಸ ಎಂದು ಪರಿಗಣಿಸಿದ್ದಾರೆ.ಮತ್ತು ಬ್ರಾಹ್ಮಣ ಸ್ವರೂಪೇೆಭ್ಯಃ ಎಂದು ಪರಿಕಲ್ಪಿಸಿ  ು ಆರಾಧನೆ   ಮಾಡುತ್ತಾರೆ .ಆದರೆ ಬ್ರಾಹ್ಮಣ ದುರ್ಮರಣವನ್ನಪ್ಪಿದರೆ ಮಾತ್ರ ಬ್ರಹ್ಮ ರಾಕ್ಷಸನಾಗುತ್ತಾನೆ.
ಆದರೆ ಇಲ್ಲಿ ದುರಂತವನ್ನಪ್ಪಿದಾತ ದಲಿತ ಸಮುದಾಯದ ಯುವಕ.ಆತನ ಮೂಲ ಹೆಸರು ಬಬ್ಬು ಎಂದು. ಹಾಗಾಗಿ ಈ ದೈವದ ಹೆಸರು ಕೂಡ ಬಬ್ಬು ಎಂದೇ ಆಗಿರಬೇಕು.
ಬಬ್ಬು ಎಂಬ ಪ್ರಸಿದ್ಧ ದೈವ ಇರುವ ಕಾರಣದಿಂದ  ಈ ದೈವದ ಹೆಸರಿನ ಬಗ್ಗೆ ಗೊಂದಲವಾಗಿರಬಹುದು.ಹರೇಕಳ ಸಮೀಪದಲ್ಲಿ ಒಂದು ಅಪರೂಪದ ದೈವಕ್ಕೆ ಆರಾಧನೆ ಇರುವ ಬಗ್ಗೆ ಪದ್ಮನಾಭ ಅವರು ಎರಡು ವರ್ಷಗಳ ಹಿಂದೆಯೇ ತಿಳಿಸಿದ್ದರು.ಆದರೂ  ಆ ಕಡೆಗೆ ಹೋಗಿ ಅಧ್ಯಯನ ಮಾಡಲು ಅವಕಾಶವಾಗಿರಲಿಲ್ಲ.ಕಳೆದ ವಾರ ಇರಾ - ತಿರುವೈಲಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ನಾಗೇಶ್ ಅವರು ಅಹ್ವಾನಿಸಿದ್ದರು.
ಹಾಗೆ ಊರಿಗೆ ಹೋದವಳು ಮಂಗಳೂರಿನಿಂದ ಅಟೋ ಹಿಡಿದು  ತೊಕ್ಕೊಟ್ಟು ಮಾರ್ಗವಾಗಿ ಅಂಬಲ ಮೊಗರು ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಹೋದೆ.
ಅಲ್ಲಿ ನ  ಸೇವಾಸಮಿತಿ ಕಾರ್ಯದರ್ಶಿ ಗಳಾದ ದಿವಾಕರ್ ಅವರ ಮೂಲಕ ಅಲ್ಲಿನ ಅರ್ಚಕರಾದ ಶಂಕರನಾರಾಯಣ ಭಟ್ಟರನ್ನು ಸಂಪರ್ಕಿಸಿ ಮಾಹಿತಿಯನ್ನು ಸಂಗ್ರಹಿಸಿದೆ.
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಪದ್ಮನಾಭ,ದಿವಾಕರ್ ಹಾಗೂ ಶಂಕರನಾರಾಯಣ ಭಟ್ ಅವರಿಗೆ ಧನ್ಯವಾದಗಳು© ಡಾ.ಲಕ್ಷ್ಮೀ ಜಿ ಪ್ರಸಾದ

4 comments:

  1. Mam, it would be extremely useful for non-kannada speaking people like me to understand your Blogs if you also write in English.

    Its my humble request if you could do so.

    Thanks and Best Regards
    Abhishek

    ReplyDelete
  2. I am very keen to know about our culture but there aren't any material in English.

    ReplyDelete
    Replies
    1. Some articles written in English, I will try to write in English,Thanks for reading

      Delete
    2. Will try to write in English, some articles are in English in this blog Thanks

      Delete