Saturday 27 August 2016

Ali bhuta -symbol of Hindu-Muslim harmony (C)Dr Lakshmi G Prasad


Ali bhuta worship and Hindu-Muslim harmony
copy rights reserved (C)Dr Lakshmi G Prasad

A Muslim woman informing her grievances with `Ali Bhoota` and seeking blessings during annual Jathra Mahotsava

In Tulu tradition, there is no fixed path to become a bhuta or daiva. Most of the bhutas are basically humans who — blessed with extraordinary powers or having done remarkable work, like questioning social evils — transform into bhutas after death. Ordinary people can also become a bhuta, if they happen to be blessed by their bhuta.
The Tulu word bhuta may be orginated from Sanskrit word ‘putam’, which means purified. In Hindu mythology, Lord Vishnu is also referred as ‘putam’. So, one interpretation could be that over centuries the word ‘putam’ changed into ‘puto’, then to ‘buto’, and finally become ‘bhuta’.
copy rights reserved (C)Dr Lakshmi G Prasad
A Muslim family along with Hindu family members at the premises of Bhagavathi Ali Chamundi Kshetra in Arikady during the annual celebration
There could be another possibility. Since most of the bhutas are humans who lived in olden times or past (bhuta kaalam), at some point in time people chose to refer to them as bhutas.
The myths and legends involving bhutas often relate to local heroes and heroines, with some songs reflecting certain episodes from local history. Divinity of these heroes has been attributed by the society. One such bhuta is Ali, who is worshipped by many on the coast.
copy rights reserved (C)Dr Lakshmi G Prasad


`Ali Bhoota` ​during Nemotsava 
After roaming for a long time, Ali, a Muslim, arrives in Paresthanam, a place near Arikady-Kumble, Kasaragodu district, looking for a job and a place to live. Unaware of Ali being a sorcerer and a womaniser, a person from the Billava community in the village provides shelter to Ali.
Soon, Ali begins to harass women in the village. With his magic, he casts a spell on several women and brings them under his control. One of his victims is a beautiful woman named Deyi, who is residing in the host’s house.
After having spurned by Deyi, Ali casts a spell on her and takes control of her. Her honour having been violated, the woman ends her
copy rights reserved (C)Dr Lakshmi G Prasad

life. Ali’s depravity grows but villagers are helpless to stop him, as he is protected by a talisman with magical powers.
So the villagers pray to Goddess Mantra Devata, who then takes form as a beautiful woman. One day, Ali notices her bathing in the river and he becomes fixated with her beauty. Knowing that the talisman protected Ali, the goddess asks him to join her but only after removing the talisman, a condition to which Ali immediately agrees.
Ali steps into the river without his talisman and is killed by the goddess. Later, the goddess turns Ali into a bhuta.
Today, Ali bhuta is widely worshipped in Tulunadu, and has become a symbol of Hindu-Muslim harmony.
Article published in Bfirst.in
copy rights reserved copy rights reserved (C)Dr Lakshmi G Prasad
Author:
Dr Lakshmi G Prasad is a well-known Tulu folklorist. The author holds PG degrees in Kannada, Sanskrit, and Hindi as well as doctorates from Hampi Kannada University and Dravidian University. Currently, she teaches Kannada at Government PU College in Nelamangala.

Tuesday 9 August 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 321 ಸನ್ಯಾಸಿ ಮಂತ್ರ ದೇವತೆ (c)ಡಾ.ಲಕ್ಷ್ಮೀ ಜಿ ಪ್ರಸಾದ



ಅಕ್ಕಾ ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ ನಿಮಗೆ ಬದುಕುದಕ್ಕಿಂತ ಸಾವು ಹೆಚ್ಚು ನೆಮ್ಮದಿ ಕೊಡುವುದಾದಾರೆ ಸಾಯಿರಿ ನಿಮಗೆ ಹೇಳುವಷ್ಟು ದೊಡ್ಡ ವರಲ್ಲ ಡೊಡ್ಡವರಿಗೆ ಬರುವ ಸಮಸ್ಯೆಗಳು ದೊಡ್ಡವೇ ಏನೋ ? ನಮಗೆ ಈ ಬಗ್ಗೆ ಗೊತ್ತಿಲ್ಲ ಆದರೆ ನೀವು ನಮ್ಮ ತುಳುನಾಡಿನ ಸಾವಿರದೊಂದು ಭೂತ. ದೈವಗಳ ಬಗ್ಗೆ ನಮಗೆ ತಿಳಿಸುತ್ತೀರಿ ಎಂದು ಪ್ರತಿ ದಿನ ನಿಮ್ಮ ಲೇಖನ ವನ್ನು ಎದುರು ನಾವು ಸಾವಿರಾರು ಮಂದಿ ಕಾಯುತ್ತಿರುತ್ತೇವೆ, ಕಳೆದು ಹೋದ ‌ಮಾಹಿತಿಗಳನ್ನು ಹುಡುಕಿ ಬರೆದೇ ತೀರುತ್ತೀರಿ ಎಂಬ ನಂಬಿಕೆಯಿಂದ ಹಾಗಾಗಿ ಸಾಯುದೇ ಅದರೆ ಸಾವಿರದೊಂದು ಗುರಿ ತಲುಪಿದ ನಂತರ ಆ ಬಗ್ಗೆ ಯೋಚಿಸಿ ಎಂದು ನನಗೆ ಮೆಸೇಜ್ ಕಳುಹಿಸಿದವರು ಶ್ರೀಕಾಂತ್ ಶೆಟ್ಟಿ ಇದೇ ರೀತಿಯ ಭಾವ ಇರುವ ಸಂದೇಶಗಳನ್ನು ಕಳುಹಿಸಿದವರು ನೂರಾರು ಮಂದಿ ನಿಮ್ಮೆಲ್ಲರ ಅಭಿಮಾನ ನಂಬಿಕೆ ಪ್ರೀತಿ ವಿಶ್ವಾಸಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ ಬಹುಶ ಸಾವಿರದ ಒಂದು ದೈವಗಳ ಬಗ್ಗೆ ಮಾಹಿತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಸಿಕ್ಕರೂ ಸಿಗಬಹುದು ಅದರೆ ಕಳೆದ ಹದಿನೈದು ಹದಿನಾರು ವರ್ಷಗಳ ಅಧ್ಯಯನ ದಲ್ಲಿ ನನಗೆ ಒಟ್ಟಾರೆ ಯಾಗಿ ಸುಮಾರು ನಾನ್ನೂರು ದೈವಗಳ ಮಾಹಿತಿ ಸಿಕ್ಕಿದೆ ಇದರಲ್ಲಿ ಈ ಹಿಂದೆ ಅದ್ಯಯನ ಮಾಡಿದ ಹಿರಿಯ ಕಿರಿಯ ಸಂಶೋಧಕರು ಮಾಹಿತಿ ಸಂಗ್ರಹಿಸಿದ ಸುಮಾರು ನೂರು ನೂರ ಹತ್ತು ದೈವಗಳ ಮಾಹಿತಿಯೂ ಸೇರಿದೆ ಹಾಗಾಗಿ ಒಂದೊಮ್ಮೆ ಸಾವಿರದೊಂದರ ಗುರಿ ಮುಟ್ಟ ಬೇಕಿದ್ದರೆ ನನಗೆ ಕನಿಷ್ಠ ಇನ್ನೂ ಇಪ್ಪತ್ತೈದು ಮೂವತ್ತು ವರ್ಷಗಳು ಬೇಕು ಜೊತೆಗೆ ನಿಮ್ಮೆಲ್ಲರ ಬೆಂಬಲವು ಬೇಕು ನೀವೆಲ್ಲ ನನ್ನ ಮೇಲೆ ಇಟ್ಟ ಭರವಸೆಯ ನ್ನು ಉಳಿಸಿಕೊಳ್ಳುವ ಯತ್ನ ಮಾಡುವೆ ಜೊತೆಗೆ ನನಗಾದ ಅನ್ಯಾಯದ ವಿರುದ್ಧ ವೂ ಹೋರಾಡುವೆ ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಬೆಂಬಲ ಕೋರುವೆ
ಎಲ್ಲೂ ಧೃತಿಗೆಡದೆ,ಯಶಸ್ಸು ನೀಡುವಂತೆ ,ಸಾವಿರದೊಂದು ಗುರಿ ತಲುಪುವಂತೆ ಕೃಪೆ ತೋರಲು ದೈವಗಳಲ್ಲೇ ಕೈ ಮುಗಿದು ಪ್ರಾರ್ಥಿಸಿ ಇಂದು ಮತ್ತೆ ಬರೆಯಲು ಕೂತಿರುವೆ ತುಳುನಾಡ ದೈವಗಳು 321 ಸನ್ಯಾಸಿ ಮಂತ್ರ ದೇವತೆ (c)ಡಾ.ಲಕ್ಷ್ಮೀ ಜಿ ಪ್ರಸಾದ


ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆಯೆಂದು ಹೇಳುವುದು ತುಂಬಾ ಕಷ್ಟದ ವಿಚಾರ ,ಇಲ್ಲಿ ಕೆಲವು ದೈವಗಳು

 
                         ಚಿತ್ರ ಕೃಪೆ :ಪ್ರವೀಣ್ ಸಾಲಿಯಾನ್
ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ,ಅಂತೆಯೇ ಇನ್ನು ಕೆಲವು ಬೇರೆ ಬೇರೆ ದೈವಗಳು ಒಂದು ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ.ಉದಾಹರಣೆಗೆ ಹೇಳುವುದಾದರೆ ರಕ್ತ ಚಾಮುಂಡಿ ಕೆರೆ ಚಾಮುಂಡಿ ಗುಡ ಚಾಮುಂಡಿ ರುದ್ರ ಚಾಮುಂಡಿಅಗ್ನಿ ಚಾಮುಂಡಿ ಗುಳಿಗರ ಹೆಸರು ಚಾಮುಂಡಿ ಎಂದು ಇರುವುದಾದರೂ ಇವು ಬೇರೆ ಬೇರೆಯೇ ಶಕ್ತಿಗಳು 'ರುದ್ರ ಚಾಮುಂಡಿ ನೆತ್ತೆರ್ ಚಾಮುಂಡಿಗುಡ ಚಾಮುಂಡಿಗಳು ಸ್ತ್ರೀ ದೈವತಗಳಲ್ಲ,ಮೂಲತ ಇವರು ಪುರುಷರು ಕಾರಣಾಂತರಗಳಿಂದ ಪ್ರಧಾನ ದೈವ ಚಾಮುಂಡಿಯ ಸನ್ನಿಧಿಗೆ ಸೇರಿ ಚಾಮುಂಡಿ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ  (c)ಡಾ.ಲಕ್ಷ್ಮೀ ಜಿ ಪ್ರಸಾದ .
ಅಂತೆಯೇ ಪುರುಷ ಭೂತ ಎಂಬ ಹೆಸರಿನಲ್ಲಿ ಈಗಾಗಲೇ ನಾಲ್ಕು ಬೇರೆ ಬೇರೆ ದೈವಗಳಿಗೆ ಆರಾಧನೆ ಇರುವುದು ಸ್ಪಷ್ಟವಾಗಿ ತಿಳಿದು ಬಂದಿದೆ /ಬಬ್ಬರ್ಯ ಎಂಬ ಹೆಸರಿನ ಎರಡು ದೈವಗಳು ಇರುವುದು ತಿಳಿದು ಬಂದಿದೆ
ಹಾಗೆಯೇ ಸನ್ಯಾಸಿ ಗುಳಿಗ ಎಂಬ ಹೆಸರಿನ ದೈವಕ್ಕೆ ಆರಾಧನೆ ಇರುವ ಬಗೆ ಈ ಹಿಂದೆ ಬರೆದಿದ್ದೆ ಗುಳಿಗನ ಸನ್ನಿಧಿಗೆ ಸೇರಿದ ಓರ್ವ ಸನ್ಯಾಸಿ ಈತ ಗುಳಿಗನ ಸೇರಿಗೆ ದೈವವಾಗಿ ಆರಾಧನೆ ಪಡೆಯುತ್ತಾನೆ .
ಅದೇ ಸಂದರ್ಭದಲ್ಲಿ ಸನ್ಯಾಸಿ ಮಂತ್ರ ದೇವತೆ ಎಂಬ ದೈವಕ್ಕೆ ಆರಾಧನೆ ಇರುವುದು ತಿಳಿಯಿತು ಮಾಹಿತಿ ಸಿಕ್ಕಿರಲಿಲ್ಲ ಹೆಚ್ಚಿನ ಮಾಹಿತಿ ಈಗಲೂ ಸಿಕ್ಕಿಲ್ಲ
ರಾಮ ಎಂಬ ಹೆಸರಿನ ನಾಥ ಸಂಪ್ರದಾಯಕ್ಕೆ ಸೇರಿದ ಒಬ್ಬ ಸನ್ಯಾಸಿ ಇದ್ದರು ಅವರನ್ನು ರಾಮ ಸನ್ಯಾಸಿ ಎಂದು ಕರೆಯುತ್ತಿದ್ದರು .ನಾಥ ಸಂಪ್ರದಾಯದ ಜೋಗಿಗಳಂತೆ ಅವರು ಜೋಳಿಗೆ ಹಿಡಿದು ಸನ್ಯಾಸಿಯಾಗಿ ಊರೂರು ಅಲೆದು ಬದುಕುತ್ತಿದ್ದರು  (c)ಡಾ.ಲಕ್ಷ್ಮೀ ಜಿ ಪ್ರಸಾದ
ಅವರು ಮಂತ್ರ ದೇವತೆಯ ಅನನ್ಯ ಭಕ್ತರಾಗಿದ್ದರು ಹಾಗಾಗಿ ಕಾಲಾಂತರದಲ್ಲಿ ಮಂತ್ರ ದೇವತೆ ಅವರ  ಭಕ್ತಿಗೆ ಒಲಿದು ಅವರನ್ನು ನ್ನು ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ ನಂತರ ದೈವತ್ವ ಪಡೆದು ಸನ್ಯಾಸಿ ಮಂತ್ರ ದೇವತೆ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ
ಈ ಸನ್ಯಾಸಿ ದತ್ತಾತ್ರೇಯ ಪೀಠದ ಸಾಧು ಎಂಬ ಅಭಿಪ್ರಾಯ ಕೂಡ ಇದೆ


ಸನ್ಯಾಸಿ ಮಂತ್ರ ದೇವತೆಗೆ ಕೋಲ ಕೊಡುವಾಗ ಭೂತ ಮಾಧ್ಯಮರು ಕೆಲವೆಡೆ ಸನ್ಯಾಸಿ ವೇಷ ಭೂಷಣವನ್ನು ಹಾಕುತ್ತಾರೆ.ಕೆಲವೆಡೆ ಮಂತ್ರ ದೇವತೆಯ ವೇಷ ಭೂಷಣವೇ ಇರುತ್ತದೆ
ಈ ಬಗ್ಗೆ ಹೆಚ್ಚ್ಚಿನ ಅಧ್ಯಯನಕ್ಕೆ ಅವಕಾಶವಿದೆ

Thursday 2 June 2016

ನಾಡೋಜ ಡಾ.ಅಮೃತ ಸೋಮೇಶ್ವರರ ರಚನೆಗಳು



 ನಾಡೋಜ ಡಾ.ಅಮೃತ ಸೋಮೇಶ್ವರರ ರಚನೆಗಳು-ಸಾಗರಂ ಸಾಗರೋಪಮಂ ಅಂತೆಯೇ ಅಮೃತಂ ಅಮೃತೋಪಮಂ ,ದೈತ್ಯ ಪ್ರತಿಭೆಗೆ ನಮೋ ನಮಃ



ಕಥಾ ಸಂಕಲನ
1 ಎಲೆಗಿಳಿ(1957)
2 ರುದ್ರ ಶಿಲೆ ಸಾಕ್ಷಿ (1970)
3 ಕೆಂಪು ನೆನಪು(1988)
4ಮಾನವತೆ ಗೆದ್ದಾಗ ಮತ್ತು ಇತರ ಕಥೆಗಳು (1995)
ಕವನ ಸಂಕಲನಗಳು
5 ವನಮಾಲೆ (1975)
6 ಭ್ರಮಣ (1974)
7 ಜ್ಯೋತಿ ದರ್ಶನವಾಯಿತು (1989)
8 ಉಪ್ಪು ಗಾಳಿ (1992)ಕರೆ ಗಾಳಿ
ಕಾದಂಬರಿ
9 ತೀರದ ತೆರೆ
ರೇಡಿಯೋ ರೂಪಕಗಳು
10 ವಿಶ್ವ ರೂಪ
11 ಮದನಗ
12 ಪೆರಿಂಜ ಗುತ್ತು ದೇವ ಪೂಂಜೆ
13 ಕೋಟಿ ಚೆನ್ನಯ
ನಾಟಕಗಳು
14 ಕೋಟಿ ಚೆನ್ನಯ
15 ವೀರ ರಾಣಿ ಅಬ್ಬಕ್ಕ ದೇವಿ
16 ಗೊಂದೊಳು
ತುಳು ನಾಟಕಗಳು
17 ತುಳು ನಾಟಕ ಸಂಪುಟ
18 ಪುತ್ತೋರ್ದ ಪುತ್ತೊಲಿ(1984)
19 ತುಳುನಾಡ ಕಲ್ಕುಡೆ
20 ಆಟೋ ಮುಗಿಂಡ್
21 ಪ್ರೇಮ ಸಂವಾದ
22 ಕೊಡಿ ಮರ
24 ರಾಯ ರಾವುತೆ ((1982)
25 ಉಳ್ಳಾಲೊದ ರಾಣಿ ಅಬ್ಬಕ್ಕಾ ದೇವಿ
26 ಜೋಕುಮಾರ ಸ್ವಾಮಿ (ಅನುವಾದ)
27 ಬಡವನ ಮಡದಿ ಸುಂದರಿಯಾದರೆ ..
ತುಳು ಕವನ ಸಂಕಲನಗಳು
28 ತಂಬಿಲ
29 ರಂಗ ಗೀತ
ತುಳು ಭಾವ ಗೀತೆಗಳು
30 ಪನ್ನೀರ್
31 ಹಿಂಗಾರ
32 ಆಟಿ ಕಳೆಂಜ
ತುಳು ಭಕ್ತಿ ಗೀತೆಗಳು
33 ಮಾಯೊದ ಪುರಲ್
34 ಮಲೆತ ತುಡರ್
35ಕ್ಷೇತ್ರ ದರ್ಶನ
36 ಸುಗಿಪು ಮದಿಪು
37 ರಂಗನ್ ತೂಯನದೇ
38 ಪೂ ಪೂಜನ
39 ಪೂ ಪರುಂದ್
ಪಾಡ್ದನ ಸಂಗ್ರಹ - ತುಳು ಜಾನಪದ
40 ಬೀರು ಲೆಮಿಂಕಯ (ಫಿನ್ ಲ್ಯಾಂಡ್ ಜಾನಪದ ಮಹಾ ಕಾವ್ಯ –ಕಲೇವಲದ  ತುಳು ಅನುವಾದ )
41 ಬಾಮ ಕುಮಾರ ಸಂಧಿ
42 ತುಳು ಪಾಡ್ದನ ಸಂಪುಟ
43 ತುಳು ಸಂಸ್ಕೃತಿಯ ಮುಂದಿನ ಶೋಧನೆ
44 ತುಳು ಜಾನಪದ ಕೆಲವು ನೋಟಗಳು
45 ತುಳು ಪಾಡ್ದನದ ಕಥೆಗಳು
46 ಅವಿಲು
46 ಬಾಮ ಕುಮಾರ ಸಂಧಿ ಕಥೆ
47 ಕೊರಗರು
48 ತುಳು ಬದುಕು
49 ಪೊಸ ಗಾದೆಲು(ಸ್ವತಂತ್ರ ಗಾದೆಗಳು )
50 ತೆರಿನಾಯನ ಪಾತೆರ (ಸರ್ವಜ್ಞನ ವಚನಗಳು ತುಳು ಅನುವಾದ )
ಯಕ್ಷಗಾನ ವಿಮರ್ಶೆ –ಕೃತಿಗಳು
51 ಯಕ್ಷಗಾನ ಹೆಜ್ಜೆ ಗುರುತುಗಳು
52 ಯಕ್ಷಾಂದೋಳ
54 ಯಕ್ಷತರು
ಜನಾಂಗ ಅಧ್ಯಯನ
55 ಕೊರಗರು
ವ್ಯಕ್ತಿ ಚಿತ್ರ
56 ಬಡೆಕ್ಕಿಲ ವೆಂಕಟರಮಣ ಭಟ್ಟರ ಜೀವನ ಮತ್ತು ಕೃತಿಗಳು
 57 ಮಹಾ  ಚೇತನಗಳು
ಸಂಪಾದನಾ ಗ್ರಂಥಗಳು
58 ಸುಂದರ ಕಾಂಡ
59 ಅಬ್ಬಕ್ಕ ಸಂಕಥನ
60 ವಜ್ರ ಕುಸುಮ
61 ಯಕ್ಷ ಗಂಗೋತ್ರಿ
ಸಹ ಸಂಪಾದನೆ 
62 ನಾಟ್ಯ ಮೋಹನ
63 ಅಮ್ಮೆಂಬಳ ಅರುವತ್ತು
64 ಉಲ್ಲಾಳ ಇತಿ ಆದಿ
ಶಬ್ದ ಕೋಶ
65 ಮೋಯಮಲಯಾಳ ಶಬ್ದ ಕೋಶ
66 ಅಪಾರ್ಥಿನೀ (ಕುಚೋದ್ಯ ಕೋಶ )
ನವ ಸಾಕ್ಷರರಿಗಾಗಿ ರಚಿಸಿದ ಕೃತಿಗಳು
67 ಕಲ್ಲುರ್ಟಿ ಕಲ್ಕುಡ
68 ಉತ್ಸವಗಳು
69 ಯಕ್ಷಗಾನ
ಸಂಸ್ಕೃತಿ ಚಿಂತನ
70 ಭಗವತಿ ಆರಾಧನೆ
71 ಜಿಜ್ಞಾಸೆಯ ತುಣುಕುಗಳು (ವೈಚಾರಿಕ)
72 ದೀಪದ ಕೆಳಗೆ (ಅಂಕಣ ಬರಹ ಸಂಕಲನ )
73 ಹೃದಯದ ವಚನಗಳು (ವಚನ ಸಾಹಿತ್ಯ )
ಯಕ್ಷಗಾನ ಪ್ರಸಂಗಗಳು ಮತ್ತು ಕೃತಿಗಳು
74 ಯಕ್ಷಗಾನ ಕೃತಿ ಸಂಪುಟ
75 ಸಹಸ್ರ ಕವಚ ಮೋಕ್ಷ
76 ಕಾಯ ಕಲ್ಪ
77 ಅಮರ ವಾಹಿನಿ
78 ತ್ರಿಪುರ ಮಥನ
77 ಮಹಾ ಕಲಿ ಮಗಧೇಂದ್ರ
78 ವಂಶ ವಾಹಿನಿ
79 ಮಹಾ ಶೂರ ಭೌಮಾಸುರ
80 ಚಾಲುಕ್ಯ ಚಕ್ರೇಶ್ವರ
81 ಅಂಧಕ ಮೋಕ್ಷ
82 ಪುತ್ತೂರ್ದ ಮುತ್ತು
83 ಚಕ್ರವರ್ತಿ ದಶರಥ
84 ಆದಿ ಕವಿ ವಾಲ್ಮೀಕಿ
85 ಚಂದ್ರ ಮತೀ ಸ್ವಯಂವರ
86 ಭುವನ ಭಾಗ್ಯ
87 ಘೋರ ಮಾರಕ
88 ಅರುಣ ಸಾರಥ್ಯ ಮತ್ತು ಇತರ ಯಕ್ಷಗಾನಗಳು
89 ಛಾಯಾವತರಣ ಮತ್ತು  ಪ್ರಸಂಗಗಳು
90 ನಿಸರ್ಗ ವಿಜಯ
91 ಸಹನಾ ಸಂದೇಶ
92 ಸತ್ಯನಾಪುರದ ಸಿರಿ
93 ರುಧಿರ ಮೋಹಿನಿ
94 ಏಕ ಶೃಂಗಿ
95 ಅಂಗುಲಿ ಮಾಲಾ
96 ಮದಿರಾಸುರ ದರ್ಶನ
97 ಮಹಾ ದಾನಿ ಬಲಿಯೇಂದ್ರ
98 ಸಪ್ತ ಮಾತೃಕೆಯರು
99 ಶ್ರೀ ಭಗವತಿ ಚರಿತ
100 ಸಂಗ್ಯಾ ಬಾಳ್ಯಾ
101 ಅಮರ ಶಿಲ್ಪಿ ಕಲ್ಕುಡ
ಯಕ್ಷಗಾನ ಧ್ವನಿ ಸುರುಳಿಗಳು
102 ಪೌಂಡ್ರಕ ವಾಸುದೇವ
103 ಶಬ್ದ ವೇದಿ 
104 ಆಚಾರ್ಯ ವಿಶ್ವ ರೂಪ
105 ತ್ರಿಪುರ ಮಥನ
106 ಮಹಾ ಶೂರ ಭೌಮಾಸುರ
107 ದಂಭ ದಮನ
108 ಗುರು ತೇಜ
109 ಅಂಧಕ ಮೋಕ್ಷ
110 ಘೋರ ಮಾರಕ
111 ಆದಿ ಕವಿ ವಾಲ್ಮೀಕಿ
112 ವೀರ ಕಲ್ಕುಡ
113ಕಾಯ ಕಲ್ಪ
114 ಗಂಗಾವತರಣ
115 ಭುವನದ ಭಾಗ್ಯ
116 ವಾತಾಪಿ ಜೀರ್ಣೋಭವ
117 ವಂಶ ವಾಹಿನಿ
118 ಚಂದ್ರಮತೀ ಸ್ವಯಂವರ
119 ಪಾದುಕಾ  ಪ್ರದಾನ –ತುಳು ಯಕ್ಷಗಾನ
ಧ್ವನಿ ಸುರುಳಿಗಳು –ಭಕ್ತಿ ಗೀತೆಗಳು
120 ಶ್ರೀ ಭಗವತಿ ಭಕ್ತಿ ಗೀತೆಗಳು
121 ಧರ್ಮ ಜ್ಯೋತಿ
122 ಶರಣು ಶಬರೀಶ
123 ಕದಳೀವನ
124 ಗೀತ ಜ್ಯೋತಿ
125 ಪ್ರಮೋದ ಪ್ರಸಾದ
126 ಶ್ರೀ ನಾರಾಯಣ ಗುರು ಸ್ತಪನಾಂಜಲಿ
127 ಶ್ರೀ ಭಗವತಿ ಭಕ್ತಿ ಕುಸುಮಾಂಜಲಿ
128 ಶ್ರೀ ವೈಷ್ಣೋ ದೇವಿ ದಿವ್ಯಾಂಜಲಿ


ಸಾಹಿತ್ಯ ವಿಮರ್ಶೆ
129 ಶ್ರೀ ಜೆಪಿ ರಾಜ ರತ್ನಂ ಅವರ ಕವಿತೆಗಳು
130 ನಂದಳಿಕೆಯ ನಂದಾದೀಪ
131 ಅರಿವಿನ ಹರಿಕಾರರು
132 ಸಿಂಗಾರ ಗಾದೆಗಳು (ಸ್ವತಂತ್ರ ಗಾದೆಗಳು )
ನೃತ್ಯ ರೂಪಕಗಳು
133 ಸಪ್ತ ಮಾತೃಕೆಯರು
134 ಬಲಿ ಚಕ್ರವರ್ತಿ
135ನಿಸರ್ಗ ವಿಜಯ
136 ಸಂಭವಾಮಿ ಯುಗೇ ಯುಗೇ
137 ಸಹನಾ ಸಂದೇಶ
138 ನಾಟ್ಯ ವೇದ
139 ಕರ್ಣ ಗಾಥಾ
140 ಚಲದಂಕೆ ಅಂಬೆ
141 ಭರತ ಗಾಥಾ
142 ಸತ್ಯನಾಪುರದ ಸಿರಿ
143 ಏಳುವೆರ್ ದೆಯ್ಯಾರ್
144 ತುಳುವಾಲ ಬಲಿಯೇಂದ್ರ
145 ದೀಪಗಳು 
146ಕೆಂಪು ನೆನಪು
ಇನ್ನೂ ಅನೇಕ ಕೃತಿಗಳಿವೆ ಎಲ್ಲದರ ಹೆಸರನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ –ಡಾ.ಲಕ್ಷ್ಮೀ ಜಿ ಪ್ರಸಾದ
+++

Monday 23 May 2016

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -309 ಗಣಪತಿ ಕೋಲ (c)ಡಾ.ಲಕ್ಷ್ಮೀ ಜಿ ಪ್ರಸಾದ


                    
ಗಣಪತಿಯಾರ್ ತೆಯ್ಯಂ/ ಗಣಪತಿ ಕೋಲ© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಹೆಚ್ಚಿನ ಮಾಹಿತಿಗೆ ಲೇಖಕಿಯ ಮಾಯ ಮತ್ತು ಜೋಗದ ಬೆಳಕಿನಲ್ಲಿ   ಕರಾವಳಿಯ ಸಾವಿರದೊಂದು ದೈವಗಳು ಗ್ರಂಥವನ್ನು ನೋಡಬಹುದು 
 
ಕೇರಳದ ದಕ್ಷಿಣ ಭಾಗದಲ್ಲಿ ಕೋಲಂ ತುಳ್ಳಲ್ ಎಂಬ ಆರಾಧನಾ ಸಂಪ್ರದಾಯವಿದೆ .ಇದನ್ನು ಭಗವತಿ ದೇವಾಲಯಗಳಲ್ಲಿ ಮಾಡುತ್ತಾರೆ . ಪಡೆಯಣಿ ಎಂಬ ವೀರ ಆರಾಧನೆಯ ಸಂದರ್ಭದಲ್ಲಿ  ಆಚರಿಸುತ್ತಾರೆ .ಜೊತೆಗೆ ಮನೆಯಲ್ಲಿ ಕೂಡ ಕೆಲವು ದುಷ್ಟ ಶಕ್ತಿಗಳ ನಿವಾರಣೆಗಾಗಿ ಕೂಡ ಮಾಡುತ್ತಾರೆ 
 ಪಡೆ ಎಂದರೆ ಸೈನಿಕ ಕ್ಷಾತ್ರ ವೀರ ಎಂದರ್ಥ .ಇಲ್ಲಿ ವೀರ ಆರಾಧನೆಯೇ ಭೂತಾರಾಧನೆ ಯ ರೀತಿಯಲ್ಲಿ ಅಭಿವ್ಯಕ್ತಿಸುತ್ತಾರೆ .ಇಲ್ಲಿನ ವೀರರು ದೈವತ್ವ ಪಡೆದು ಆರಾಧಿಸಲ್ಪಡುವ ರೀತಿ ಇದು© ಡಾ.ಲಕ್ಷ್ಮೀ ಜಿ ಪ್ರಸಾದ್ 

ಕೋಲಂ ತುಳ್ಳಲ್ ನಲ್ಲಿ ವಿವಿಧ ಯಕ್ಷಿಗಳು,ದೈವಗಳು  ಆರಾಧನೆ ಪಡೆಯುತ್ತಾರೆ .ಮರುತಯಕ್ಷಿ ,ಅಂತರ್ಯಕ್ಷಿ,ಸುಂದರ ಯಕ್ಷಿ,ಆರಕ್ಕಿ ಯಕ್ಷಿ,ಕಾಲ ಯಕ್ಷಿ,ಮಾಯ ಯಕ್ಷಿ,ಅಂಬರ ಯಕ್ಷಿ ,ಪಕ್ಷಿ ಯಕ್ಷಿ,ಕಾಳಮತಂ,ಪುಲಿಮತನ್,ವಟಿಮದನ್,ರಕ್ತ ಚಾಮುಂಡಿ ಅಪಸ್ಮಾರ ಯಕ್ಷಿ ದೇವತ,ಭೈರವಿ ಕಾಲನ್ ಮಂಗಳ ಭೈರವಿ ಯಕ್ಷಿ ಮೊದಲಾದ ಶಕ್ತಿಗಳಿಗೆ ಆರಾಧನೆ ಇದೆ .ಇದು ಪ್ರಧಾನವಾಗಿ ಕಾಳಿಯ ಆರಾಧನೆ ,ದಾರುಕ ವಧೆಯ ನಂತರವೂ ಶಾಂತವಾಗದ ದೇವಿಯನ್ನು  ಭದ್ರಕಾಳಿ ಕೋಲ ನೀಡಿ  ಶಾಂತವಾಗಿಸಿ ಆರಾಧಿಸುತ್ತಾರೆ.ಜೊತೆಗೆ 
ಇಲ್ಲಿ ಅನೇಕ ಯಕ್ಷ ಯಕ್ಷಿಯರ ಗಂಧರ್ವರ ಆರಾಧನೆ ಇದೆ
ಇಲ್ಲಿನ ಯಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ
ಈ ಶಕ್ತಿಗಳ ಜೊತೆ ಒಂದು ವಿಶಿಷ್ಟ ಕೋಲ ಇದೆ .ಅದುವೇ ಗಣಪತಿ ಕೋಲ 

ಗಣಪತಿಯ ಆರಾಧನೆಯನ್ನು ಮೊದಲು ಮಾಡುವ ಸಂಪ್ರದಾಯ ಎಲ್ಲೆಡೆ ಇದೆ .ಯಾವುದೇ ಕೆಲಸದ ಆರಂಭದಲ್ಲಿ ಆರಾಧನೆಯ ಸಂದರ್ಭದಲ್ಲಿ ಕೂಡ ಗಣಪತಿಗೆ ಆರಾಧನೆ ಇರುತ್ತದೆ 

ಅಂತೆಯೇ ಕೋಲಂ ತುಳ್ಳಲ್ ಆರಂಭದಲ್ಲಿ ವಿಘ್ನ ವಿನಾಶಕನ ಪೂಜೆ ಇರುವುದು ಸಹಜ.
ಆದರೆ ಇಲ್ಲಿ ಗಣಪತಿ ಗೆ ಕೋಲ ಕೊಟ್ಟು ಆರಾಧಿಸುತ್ತಾರೆ .ಹಾಗಾಗಿ ಮೊದಲುಕುಣಿಯುವ ಅಭಿವ್ಯಕ್ತಿಸುವ ಕೋಲವನ್ನು ಗಣಪತಿ ಕೋಲ ಎನ್ನುತ್ತಾರೆ ಎಂಬ ಅಭಿಪ್ರಾಯವೂ ಇದೆ.ಆದರೆ  ಕೋಲ ಕಟ್ಟಿಯೇ ಇಲ್ಲಿ ಗಣಪತಿ ಗೆ ಆರಾಧನೆ ಇದೆ .ಬೇರೆ ಯಕ್ಷಿ ಯಾರ ವೇಷ ಭೂಷಣ ಗಳಲ್ಲಿಯೇ ಗಣಪತಿಗೆ ಸಾಂಕೇತಿಕವಾಗಿ ಕೋಲ ಕೊಡುವ ಪದ್ಧತಿಯೂ ಇದೆ .ಬೇರೆ ಬೇರೆ ಯಕ್ಷಿ ಹಾಗೂ ಶಕ್ತಿಗಳು ಕುಣಿದು ಗಣಪತಿಯನ್ನು ಆರಾಧಿಸುತ್ತಾ ಕೋಲ ನೀಡುವ ಪದ್ಧತಿ ಕೂಡ ಇದೆ © ಡಾ.ಲಕ್ಷ್ಮೀ ಜಿ‌ ಪ್ರಸಾದ್ 

ತುಳುವರಲ್ಲಿ ಗಣಪತಿಯ ಕುರಿತಾದ ಪರಿಕಲ್ಪನೆ ಪುರಾಣ ಕಥೆಗಿಂತ ತುಸು ಭಿನ್ನವಾಗಿದೆ.ಇಲ್ಲಿ ಗಣಪತಿ ಪಾರ್ವತಿಯ ಮಗನಲ್ಲ . ಈಶ್ವರ ದೇವರಿಗೆ ಹೂ ಕೊಯ್ದು ತರುವ ಹುಡುಗ ಒಂದು ದಿನ ಒಂದು ಕಿಸ್ಕಾರ ಹೂವನ್ನು ಬೆನ್ನು ಹತ್ತುತ್ತಾ ಮಿತ್ತು ಸಿರಿಗಳ ಲೋಕಕ್ಕೆ ಹೋಗುತ್ತಾನೆ ಅಲ್ಲಿ ಕಿರಿಯ ಸಿರಿ ಮೈಸಗೆಯನ್ನು ನೋಡಿ ಅವಳ ಅಪಾರ ಸೌಂದರ್ಯವನ್ನು ನೋಡಿ ಮೂರ್ಚೆ ತಪ್ಪಿ ಬೀಳುತ್ತಾನೆ.ಅವನನ್ನು ನೀರು ಹಾಕಿ ಎಬ್ಬಿಸಿ ಈ ಕಡೆ ನರ ಮನುಷ್ಯರು ಬರಬಾರದೆಂದು ಎಚ್ಚರಿಸಿ ಕಳುಹಿಸುತ್ತಾಳೆ ಅವಳು .ತಡವಾಗಿ ಬಂದುದಕ್ಕೆ ಕಾರಣವನ್ನು ಕೇಳಿದಾಗ ಈಶ್ವರ ದೇವರಿಗೆ ಮೈಸಗೆಯ ವಿಚಾರ ತಿಳಿಯುತ್ತದೆ .ಅವಳೆಡೆಗೆ ಹೋಗಿ ಅವಳನ್ನು ತನ್ನೊಂದಿಗೆ ಕರೆತರುತ್ತಾನೆ ಹೀಗೆ ಈಶ್ವರ ದೇವರು ಮತ್ತು ಮೈಸಗೆಗೆ ಹುಟ್ಟುವ ಮಗು ಗಣಪತಿ .ಈತನಿಗೆ ಬಾಮ ಕುಮಾರ ಎಂದು ಹೆಸರು ಇದು ತುಳುವರ ಗಣಪತಿಯ ಪರಿಕಲ್ಪನೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 

ಆದರೆ ಗಣಪತಿ ಯನ್ನು ಭೂತ ಕಟ್ಟಿ ಆರಾಧಿಸುವ ಪದ್ಧತಿ ಇಲ್ಲ ತುಳುನಾಡಿನಲ್ಲಿ ಇಲ್ಲ‌ ಆದರೆ ಧೂಮಾವತಿ ರಕ್ತೇಶ್ವರಿ ,ಗುಳಿಗ ,ವಾಲಿ,ಸುಗ್ರೀವ ಮೊದಲಾದ ಪುರಾಣ ಮೂಲ ಶಕ್ತಿಗಳಿಗೆ ಭೂತದ ನೆಲೆಯಲ್ಲಿಕೋಲ ನೀಡಿ ಆರಾಧಿಸುತ್ತಾರೆ .

ಕೋಲದ ರೂಪದಲ್ಲಿಯೇ ದೇವತಾ ಆರಾಧನೆ ಪ್ರಚಲಿತ ವಿರುವ ಪ್ರದೇಶಗಳಲ್ಲಿ ಪುರಾಣ ಮೂಲದ ದೇವತೆಗಳನ್ನು  ಭೂತದ ನೆಲೆಯಲ್ಲಿಯೇ ಆರಾಧಿಸುವುದು ಸಹಜವೇ ಆಗಿದೆ 
ಅಂತೆ ಕೇರಳದ ಕೆಲವೆಡೆ  ಇತರ ದೇವತೆ ದೈವಗಳಿಗೆ ಕೋಲ ನೀಡಿ ಆರಾಧಿಸುವಂತೆ  ಗಣಪತಿಗೆ ಕೋಲ ನೀಡಿ ಆರಾಧಿಸುವ ಸಂಪ್ರದಾಯ ಬಳಕೆಗೆ ಬಂದಿದೆ.ಪಡೆಯಣಿ ಎಂಬ ಕೋಲ ಸ್ವರೂಪದ ಆರಾಧನೆ ಇರುವಲ್ಲಿ ಗಣಪತಿಯಾರ್ ತೆಯ್ಯಂ ಗೆ ಕೋಲ ಕಟ್ಟಿ ಆರಾಧನೆ ಇದೆ.ಆದರೆ ಇತರ ದೈವಗಳ ವೇಷ ಭೂಷಣಗಳಲ್ಲಿ ಸಾಂಕೇತಿಕವಾಗಿ ಕಟ್ಟು ಕಟ್ಟಲೆ ಕೋಲ ನೀಡಿ  ಆರಾಧನೆ ಮಾಡುತ್ತಾರೆ© ಡಾ.ಲಕ್ಷ್ಮೀ ಜಿ ಪ್ರಸಾದ್ 
ಈ ಬಗ್ಗೆ ಹೆಚ್ಚ್ಚಿನ ಅಧ್ಯಯನದ ಅಗತ್ಯವಿದೆ 



                  


Sunday 1 May 2016

ಕೈಬರಹ ಕೆಟ್ಟದಾಗಿ ಇದ್ದರೂ ಲಾಭವಾಗುತ್ತದೆ !-ಡಾ.ಲಕ್ಷ್ಮೀ ಜಿ ಪ್ರಸಾದ



ಕೈಬರಹ ಸುಂದರವಾಗಿದ್ದರೆ ನಮಗೆ ವಿದ್ಯಾರ್ಥಿಗಳಾಗಿದ್ದಾಗ ಒಳ್ಳೆ ಅಂಕಗಳು ಲಭಿಸುತ್ತವೆ ,ಪತ್ರ ಗಿತ್ರ ಬರೆಯಬೇಕಾದರೆ ಅವರ ಸಹಾಯವನ್ನು ಜನರು  ಕೇಳುತ್ತಾರೆ ಹಾಗಾಗಿ ಸುಂದರ ಕೈ ಬರಹ ಇರುವವರಿಗೆ ಸದಾ ಬೇಡಿಕೆ ಇರುತ್ತದೆ !ಒಳ್ಳೆಯ ಸ್ಥಾನಮಾನ ಸಿಗುತ್ತದೆ ,ಆದರೆ ಅಕ್ಷರ ಕೆಟ್ಟದಾಗಿರೋದರಿಂದ ಕೂಡ ಕೆಲವೊಮ್ಮೆ ಬೆನಿಫಿಟ್ ಗಳು ಸಿಗುವುದು ಉಂಟು !ಅದು ಹೇಗೆ ಗೊತ್ತಾ ?ತಿಳಿಯಲು ಕುತೂಹಲ  ಇದ್ದರೆ ಇದನ್ನು ಓದಿ 

ನಿನ್ನೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು .ಪ,ಗೋ ಅವರ ಮಗ ಪದ್ಯಾಣ ರಾಮಚಂದ್ರ ,ಹಾಗೂ ಏಕಮ್ ಪ್ರಕಾಶನದ ರಂಗ ಸ್ವಾಮಿ ಮೂಕನಹಳ್ಳಿ ಯವರು ನನಗೆ ತುಂಬಾ ಆತ್ಮೀಯರೂ ಆಗಿದ್ದು ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ .ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ .ಅಲ್ಲಿ ಹೋದಾಗ ಕೇ ಪಿ ರಾಜಗೋಪಾಲ ಕನ್ಯಾನ ಅಲ್ಲಿಗೆ ಬರುವವರಿದ್ದು ಅವರಿಗೆ ಒಂದು ಅಭಿನಂದನೆ ಕೂಡ ಏರ್ಪಡಿಸಿರುವುದು ತಿಳಿಯಿತು .

ರಾಜಗೋಪಾಲ ಕನ್ಯಾನ ಅವರು ಕಲೆ ಸಾಹಿತ್ಯ ಅಭಿಮಾನಿಯಾಗಿದ್ದು ,1995ರಲ್ಲಿ ಪ.ಗೋ ಅವರುಹೊಸದಿಗಂತ ಪತ್ರಿಕೆಗೆ ಬರೆದ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ,ಪಗೋ ಕುರಿತು ವಿಶಿಷ್ಟ ಸೃಷ್ಟಿಗಳ ಲೋಕದಲ್ಲಿ ಎಂಬ ಕೃತಿಯನ್ನು 2005ರಲ್ಲಿ ಬೆಳಕಿಗೆ ತಂದಿದ್ದರು .ಅದಕ್ಕಾಗಿ ಪಗೋ ಮಗ ಪದ್ಯಾಣ ರಾಮಚಂದ್ರ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದರು .ಆದರೆ ಪದ್ಯಾಣ ರಾಮಚಂದ್ರ ಹಾಗೂ ಏಕಮ್ ಪ್ರಕಾಶನದ ರಂಗಸ್ವಾಮಿ ಮೂಕನಹಳ್ಳಿ ಅವರಿಗೆ ರಾಜಗೋಪಾಲ ಕೆಪಿ ಅವರ ಪರಿಚಯವಿರಲಿಲ್ಲ ,ನನಗೆ ರಾಜಗೋಪಾಲ ಕನ್ಯಾನ ತುಂಬಾ ಅತ್ಮೀಯರಾಗಿರುವುದು ಪದ್ಯಾಣ ರಾಮಚಂದ್ರ ಅವರಿಗೆ ಗೊತ್ತಿತ್ತು ಹಾಗಾಗಿ ಅವರ ಪರಿಚಯವನ್ನು ಬರೆದುಕೊಡಲು ತಿಳಿಸಿದರು .ಹಾಗೆ ರಾಜಗೋಪಾಲ ಕನ್ಯಾನ ಅವರ ಸಂಕ್ಷಿಪ್ತ ಪರಿಚಯ ಬರೆದುಕೊಟ್ಟೆ .ಅದನ್ನು ಅವರು ರಂಗ ಸ್ವಾಮಿ ಮೂಕನ ಹಳ್ಳಿ ಅವರಿಗೆ ಕೊಟ್ಟರು 
ಅವರಿಗೆ ಅದನ್ನು ನೋಡುತ್ತಲೇ ತಲೆಬಿಸಿ ಆಯಿತು ಅದನ್ನು ಓದುವುದು ಹೇಗೆ ಅಂತ !ಅಷ್ಟು ಸುಂದರವಾಗಿದೆ ನನ್ನ ಕೈಬರಹ !ಮೊದಲೇ ನನ್ನ ಕೈಬರಹ ಕೆಟ್ಟದಾಗಿದೆ ಅದಕೆ ಸರಿಯಾಗಿ ನಿನ್ನೆ ಕನ್ನಡಕ ತೆಗೆದುಕೊಂಡು ಹೋಗಲು ಮರೆತಿದ್ದೆ.ಬೇರೆ !ಹಾಗಾಗಿ ನನ್ನ ಅಕ್ಷರ ತೀರ ಅಧ್ವಾನವಾಗಿತ್ತು.ಅದನ್ನು ರಂಗಸ್ವಾಮಿ ಯವರಿಗೆ ಬಿಡಿ ನನಗೆ ಕೂಡ ಓದಲು ಕಷ್ಟಕರವೇ ಆಗಿತ್ತು !ಹಾಗಿರುವಾಗ ಅವರ ಅವಸ್ಥೆಯನ್ನು ಎಂತ ಹೇಳುದು !
ಆಗ ಅವರು ಅದನ್ನು ನನಗೆ ಕೊಟ್ಟು "ಕೆಪಿ ರಾಜಗೋಪಾಲ ಕನ್ಯಾನ ಅವರನ್ನು ನೀವೇ ಪರಿಚಯಿಸಿ "ಎಂದು ನನಗೆ ಹೇಳಿನನ್ನ ಕೈಬರಹ ಓದುವ ಗಂಡಾಂತರದಿಂದ ಪಾರಾದರು ! .
ನನಗೆ ತುಂಬಾ ಖುಷಿ ಆಯ್ತು !ಯಾಕೆಂದರೆ ಕೇ ಪಿ ರಾಜಗೋಪಾಲ ಕನ್ಯಾನ ಅವರು ನನಗೆ ತುಂಬಾ ಆತ್ಮೀಯರು ,ನನ್ನ ಸಂಶೋಧನಾ ಕೃತಿಗಳ ಪ್ರಕಟಣೆಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟವರು ಅವರು .ನಾನು ಹವ್ಯಕ ಭಾಷೆಯಲ್ಲಿ ನಾಟಕ ಬರೆದ ಮೊದಲ ಮಹಿಳೆ ಎಂಬುದನ್ನು ನನಗೆ ತಿಳಿಸಿದವರೂ ಕೂಡ ಅವರೇ .ಎಲ್ಲೋ ಮೂಲೆಯಲ್ಲಿ ಇದ್ದ ನನ್ನ ಸುಬ್ಬಿಇಂಗ್ಲಿಷ್ ಕಲ್ತದು ಎಂಬ ನಾನು ಏಳನೇ ತರಗತಿಯಲ್ಲಿ ಬರೆದಿದ್ದ ನಾಟಕ  ಮಹಿಳೆ ಬರೆದ ಮೊದಲ ನಾಟಕ ,ಆ ಮಹಿಳೆ ನಾನೇ ಎಂಬುದನ್ನು ತಿಳಿಸಿ ಆ ನಾಟಕ ಬೆಳಕಿಗೆ ಬರಲು ಕಾರಣರಾದವರು ಅವರು .ನನ್ನಂತೆ ಅನೇಕರಿಗೆ ಅಪಾರ ಬೆಂಬಲ ನೀಡಿ ಪ್ರೋತ್ಸಾಹಿಸಿದವರು .ನೂರಕ್ಕೂ ಹೆಚ್ಚು ಎಲೆಮರೆಯ ಕಾಯಿಗಳಂತೆ ಇದ್ದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸಿದವರು ಅವರು .
ಹಾಗಾಗಿ ಅವರ ಪರಿಚಯವನ್ನು ಸಭೆಗೆ ಮಾಡಿಕೊಡುವುದು ನನಗೆ ಇಷ್ಟದ ವಿಚಾರವೇ ಆಗಿತ್ತು .ನನ್ನ ಕೆಟ್ಟ ಕೈ ಬರಹ ನನಗೆ ಆ ಅವಕಾಶವನ್ನು ತಂದು ಕೊಟ್ಟಿತು !ಈಗ ಗೊತ್ತಾಗಿರಬಹುದು ನಿಮಗೆ  ಅಕ್ಷರ ಚೆನ್ನಗಿಲ್ಲದೆ ಇದ್ರೂ ಲಾಭ ಇದೆ ಅಂತ!

Friday 29 April 2016

ಸಾವಿರದೊಂದು ಗುರಿಯೆಡೆಗೆ:306 ತುಳುನಾಡ ದೈವಗಳು -ಪೋಲಿಸ್ ತೆಯ್ಯಂ -ಡಾ.ಲಕ್ಷ್ಮೀ ಜಿ ಪ್ರಸಾದ






 ಚಿತ್ರ ಕೃಪೆ :kcn ಮತ್ತು ಮನೋಜ್ ಕುಂಬ್ಳೆ

ತುಳುವರ ಭೂತಾರಾಧನೆ ಒಂದು ಅನನ್ಯ ಸಂಸ್ಕೃತಿ ,ಇಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ .ಅದಕ್ಕೆ ಜಾತಿ ಧರ್ಮ ದೇಶದ ಗಡಿ ಕೂಡ ಇಲ್ಲ
ಅನೇಕ ಅಧಿಕಾರಿಗಳು ಕೂಡ ಇಲ್ಲಿ ದೈವತ್ವ ಪಡೆದಿರುವುದು ಅಲ್ಲಲ್ಲಿ ಕಂಡು ಬಂರುತ್ತದೆ .ಮಂಜೇಶ್ವರ ದ ಮೀಯ ಪದವು  ಸಮೀಪದ ಪೊಳ್ಳ ಕಜೆ ಎಂಬಲ್ಲಿ ಬ್ರಿಟಿಶ್ ಸುಭೇದಾರನೊಬ್ಬ ದೈವತ್ವ ಪಡೆದು ಕನ್ನಡ ಬೀರ ಎಂಬ ದೈವವಾಗಿ ನೆಲೆ ನಿಂತಿದ್ದಾನೆ ,
ಅಂತೆಯೇ ಉಡುಪಿ -ಕಾಪಿನಲ್ಲಿ ಗುರಿಕ್ಕಾರ ಸೇನವ ಪಟೇಲ ,ಪೋಲಿಸ್ ,ಕಳ್ಳ ಭೂತಗಳಿಗೆ ಆರಾಧನೆ ಇದೆ ,
ಕಾಸರಗೋಡು ಪರಿಸರದಲ್ಲಿ ಒಂದು ಪೋಲಿಸ್ ಭೂತಕ್ಕೆ ಆರಾಧನೆ ಇದೆ .ಇದು ಮಲಯಾಳ ಪರಿಸರದಲ್ಲಿ ಆರಾಧನೆ ಗೊಳ್ಳುತ್ತಿದ್ದು ಈ ದೈವವನ್ನು ಪೋಲಿಸ್ ತೆಯ್ಯಂ ಎಂದು ಕರೆದಿದ್ದಾರೆ ತುಳುವರ ದೈವ  ಪದ ಮಲಯಾಳದಲ್ಲಿ ತೆಯ್ಯಂ ಎಂದು ಬಳಕೆಯಾಗುತ್ತದೆ ,
ಕಾಸರಗೋಡು ಸಮೀಪದಲ್ಲಿರುವ ಪದನ್ನಕ್ಕಡ್ ಪಾನುಕ್ತಾಯತ್ ತರವಾಡು ಕುಟುಂಬದಲ್ಲಿ ಕರಿ ಚಾಮುಂಡಿ ದೈವದ ಆರಾಧನೆ ಸಮಯದಲ್ಲಿ ಪೋಲಿಸ್ ತೆಯ್ಯಂ ಗೆ ಆರಾಧನೆ ಮಾಡುತ್ತಾರೆ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಈ ಮನೆತನಕ್ಕೆ ಸೇರಿದ ಹಿರಿಯರಾದ ಎಡಚೇರಿ ಕಾರ್ನವೆರ್ ಕರಿಚಾಮುಂಡಿ ದೈವದ ಕಳಿಯಾಟ (ಮಲಯಾಳದಲ್ಲಿ ಭಗವತಿ ಹಾಗು ಇತರ ದೈವಗಳಿಗೆ ನಡೆಸುವ ವೈಭವದ ಕೋಲ /ನೇಮದ ಒಂದು ಪ್ರಕಾರ  ಕಳಿಯಾಟ   ) ನೋಡಲು ಹೋಗುತ್ತಾರೆ .ಅಲ್ಲಿನ ಭಕ್ತಿ ವೈಭವವನ್ನು ನೋಡಿ ಅವರು "ತಮ್ಮ ತರವಾಡಿನಲ್ಲಿ ಕೂಡ ಇಂಥಹ ಒಂದು ಕಳಿಯಾಟ ಉತ್ಸವ ನಡೆಯಬೇಕು ಎಂದು ಕರಿ ಚಾಮುಂಡಿ ದೈವದಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ .
ಅಲ್ಲಿಂದ ದೈವಗಳ ಅನುಗ್ರಹ ಪಡೆದು ತಮ್ಮ ಮನೆಗೆ ಹಿಂದಿರುಗುತ್ತಾರೆ .
ಹಿಂತಿರುಗಿ ಬರುವ ದಾರಿಯಲ್ಲಿ ನಾಯನ್ಮಾರೆರ್ ನಡುವೆ ಯಾವುದೊ ಕಾರಣಕ್ಕೆ ವಿವಾದ ಉಂಟಾಗಿ ಹೊಡೆದಾಟ ಆಗುತ್ತದೆ .ಅದನ್ನು ಬಿಡಿಸಲೆಂದು ಬಂದ ಪೋಲಿಸ್ ಒಬ್ಬಾತನಿಗೆ ಕತ್ತಿಯ ಏಟು ಬಿದ್ದು ಆಟ ನೆಲದಲ್ಲಿ ಬಿದ್ದು ಹೊರಳಾಡುತ್ತಿರುತ್ತಾನೆ.ಅವನನ್ನು ತನ್ನ ಮಡಿಲಲ್ಲಿ ಮಲಗಿಸಿ ನೀರು ಕುಡಿಸಿ ಉಪಚಾರ ಮಾಡುತಾರೆ ದಯಾಳುವಾದ ಎಡಚೇರಿ ಕಾರ್ನವೆರ್.ಅವರು ನೀಡಿದ ನೀರನು ಕುಡಿದು ಆ ಪೋಲಿಸ್ ಅಲ್ಲಿಯೇ ಸಾವನ್ನಪ್ಪುತ್ತಾನೆ.
ಅಲ್ಲಿನದ ಅವರು ತಮ್ಮ ತರವಾಡು  ಮನೆಗೆ ಬರುತ್ತಾರೆ.
ಅಲ್ಲಿ ಅವರಿಗೆ ಕರಿಚಾಮುಂಡಿ ದೈವದ ಸಾನ್ನಿಧ್ಯ ದ ಅರಿವಾಗುತ್ತದೆ.ಜೊತೆಗೆ ಪೋಲಿಸ್ ಕೂಡ ದೈವತ್ವ ಪಡೆದು ದೈವವಾಗಿ ಕರಿಚಮುಂಡಿ ಸೇರಿಗೆಯಲ್ಲಿರುವುದು ಅವರಿಗೆ ತಿಳಿದು ಬರುತ್ತದೆ .
ಅವರು  ಕರಿಚಾಮುಂದಿಗೆ ಕಳಿಯಾಟ ಮೂಲಕ ಆರಧಿಸುವಾಗ ಪೋಲಿಸ್ ತೆಯ್ಯಂ ಗೆ ಕೂಡ ಕೋಲ ಕೊಟ್ಟು ಆರಾಧಿಸುತ್ತಾರೆ.
ಮುಂದೆ ಅವರ ಕುಟುಂಬದವರು ಈ ಪರಂಪರೆಯನ್ನು ಮುಂದುವರಿಸಿದರು
ಪೋಲಿಸ್ ತೆಯ್ಯಂ ತನ್ನ ಮೂಲ ವೃತ್ತಿಗೆ ಅನುಗುಣವಾಗಿ ಬೀಡಿ ಸೇದಿದವರನ್ನು ಹಿಡಿದು ಶಿಕ್ಷಿಸುವುದು ,ಜನ ಗುಂಪು  ಸೇರಿದಾಗ ಅವರನ್ನುಚದುರಿಸಿ  ಓಡಿಸಿ ದೂರ ಮಾಡುವುದೇ ಮೊದಲಾದ ಅಭಿನಯವನ್ನು ಮಾಡುತ್ತದೆ ,ಪೂರ್ತಿಯಾಗಿ ಪೋಲಿಸ್ ra ವೇಷ ಭೂಷಣ ಈ ದೈವಕ್ಕೆ ಇರುತ್ತದೆcopy rights reserved  - -ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ .kasaragodunews internet portal
http://kasaragodchannel.com/%E0%B4%AA%E0%B5%8B%E0%B4%B2%E0%B5%80%E0%B4%B8%E0%B5%8D-%E0%B4%A4%E0%B5%86%E0%B4%AF%E0%B5%8D%E0%B4%AF%E0%B4%82-%E0%B4%85%E0%B4%B0%E0%B4%99%E0%B5%8D%E0%B4%99%E0%B4%BF%E0%B4%B2%E0%B5%86%E0%B4%A4%E0%B5%8D/

ಕನ್ನಡಕ್ಕೆ ಸಂಗ್ರಹಾನುವಾದ ಮಾಡಿ ಕೊಟ್ಟ ಶ್ರೀ ಶಂಕರ್ ಕುಂಜತ್ತೂರು ಇವರಿಗೆ ಕೃತಜ್ಞತೆಗಳು