ಐವೆರ್ ಬಂಟೆರ್ ನೇಮ ಚಿತ್ರ ಕೃಪೆ :ಪರಶುರಾಮ ಸೃಷ್ಟಿ
ತುಳುನಾಡಿನಾದ್ಯಂತ ಅಲ್ಲಲ್ಲಿ ಐವೆರ್ ಬಂಟೆರ್ ಎಂಬ ದೈವಗಳಿಗೆ ಆರಾಧನೆ ನಡೆಯುತ್ತದೆ .ಐವೆರ್ ಎಂದರೆ ಐದು ಜನ ಎಂದು ಅರ್ಥ ಆದರೆ ಐವೆರ್ ಬಂಟೆರ್ ದೈವಗಳ ಆರಾಧನೆಯಲ್ಲಿ ಒಂದು ದೈವಕ್ಕೆ ಮಾತ್ರ ಆರಾಧನೆ ಇರುತ್ತದೆ ಇದರ ಒಂದಿಗೆ ಇನ್ನೊಂದಕ್ಕೂ ಸಾಂಕೇತಿಕವಾಗಿ ಆರಾಧನೆ ಇರುತ್ತದೆ ಆದರೆ ಐದು ಎಂಬಸಂಖ್ಯೆಗೆ ಅನುಗುಣವಾಗಿ ಐದು ಶಕ್ತಿಗಳ ಆರಾಧನೆ ಇರುವುದಿಲ್ಲ .ಇಲ್ಲಿ ಎರಡು ಶಕ್ತಿಗಳಿಗೆ ಮಾತ್ರ ಆರಾಧನೆ ಇರುತ್ತದೆ.
ನನಗೆ ಇದು ಅಯ್ಯೆರ್ ಬಂಟೆರ್ ಇರಬಹುದೋ ಏನೋ ಎಂಬ ಸಂದೇಹ ಕಾಡುತ್ತಿತ್ತು .ಹಿಂದಿನ ಕಾಲದಲ್ಲಿ ಜೈನರು ಬ್ರಾಹಮನರನ್ನು ಅಯ್ಯ ಎಂದು ಕರೆಯುತ್ತಿದ್ದರು.ಹಾಗಾಗಿ ಇವರು ಬ್ರಾಹ್ಮಣ ಮೂಲ ದೈವಗಳು ಇರಬಹುದು ಎಂದು ನನಗೆ ಅನಿಸಿತ್ತು ಆದರೆ ಈ ಬಗ್ಗೆ ಮಾಹಿತಿ ಸಿಗದ ಕಾರಣ ಏನೊಂದೂ ನಿರ್ಣಯಕ್ಕೆ ಬರುವುದು ಕಷ್ಟ ಸಾಧ್ಯವಾಗಿತ್ತು copy rights reserved.(c)ಡಾ.ಲಕ್ಷ್ಮೀ ಜಿ ಪ್ರಸಾದ
ಕೆಲ ತಿಂಗಳ ಹಿಂದೆ ಕಡಂಬಾರು ವಿಷ್ಣುಮೂರ್ತಿ ದೇವಾಲಯಕ್ಕೆ ಹೋಗಿದ್ದೆ .ಅಲ್ಲಿ ಸೂರ್ಯ ನಾರಾಯಣ ಅಯ್ಯರು ಮಾತಿಗೆ ಸಿಕ್ಕರು.ಅವರು ಕೆಲವು ಮಾಹಿತಿಯನ್ನು ನೀಡಿದರು .ದೇವಸ್ಥಾನದ ಎದುರುಬದಿಯಲ್ಲಿ ಎರಡು ಹಾಸುಗಲ್ಲಿನ ಮಾದರಿಯ ಕಲ್ಲುಗಳಿವೆ ಅವು ಅಯ್ಯರ್ ಬಂಟರ ಕಲ್ಲುಗಳು .ಅಲ್ಲಿ ಸಂಕ್ರಮಣಕ್ಕೆ ಹಾಗೂ ಪರ್ವ ದಿನಗಳಲ್ಲಿ ಆ ಎರಡು ದೈವಗಳಿಗೆ ತಂಬಿಲ ಮಾಡುತ್ತಾರೆ .
ಆ ಎರಡುಅಯ್ಯರ್ ಬಂಟರ್ ದೈವಗಳು ಮೂಲತಃ ಕಡಂಬಾರು ಅಯ್ಯರ ಕುಟುಂಬದ ಹಿರಿಯರು .ಕದಂಬ ಅರಸರ ಸಾಮಂತರಾಗಿ ಅಲ್ಲಿ ಜೈನ ಬಲ್ಲಾಳರು ಆಳ್ವಿಕೆ ನಡೆಸುತ್ತಿದ್ದರು .ಆಗಕದಂಬ ಅರಸರು ಕಟ್ಟಿಸಿದ ದೇವಾಲಯದ ಅರ್ಚನೆ ಹಾಗೂ ಉಸ್ತುವಾರಿಗಾಗಿ ಒಂದು ಬ್ರಾಹ್ಮ ಕುಟುಂಬವನ್ನು ನೇಮಿಸಿದ್ದರು .ಆ ಬ್ರಾಹ್ಮಣ ಕುಟುಂಬದವರನ್ನು ಜೈನ ಅರಸುಗಳು ಅಯ್ಯ ಎಂದು ಕರೆಯುತ್ತಿದ್ದರು.copy rights reserved.(c)ಡಾ.ಲಕ್ಷ್ಮೀ ಜಿ ಪ್ರಸಾದ
ಆ ಕುಟುಂಬದ ಹಿರಿಯರಲ್ಲಿ ಇಬ್ಬರು ವೀರರು ಆಗಿದ್ದರು ಅವರು ಜೈನ ಬಲ್ಲಾಳ ಅರಸುವಿನ ಸೇನಾಪತಿಗಳು ಆಗಿದ್ದು ಅವರ ಬಲ ಗೈ ಯಂತೆ ಇದ್ದರು .ಯುದ್ಧದಲ್ಲಿ ವಿಜಯವನ್ನು ತಂದುಕೊಟ್ಟಿದ್ದರು .
ಮುಂದೆ ಅವರು ದೈವತ್ವ ಪಡೆದು ಅಯ್ಯರ್ ಬಂಟರ್ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ.ಬಂಟ ಎಂದರೆ ವೀರ ಎಂಬ ಅರ್ಥವೂ ಇದೆ .ಬಹುಶ ಬ್ರಾಹ್ಮಣ ವೀರರು ಎಂಬರ್ಥದಲ್ಲಿ ಅಯ್ಯರ್ ಬಂಟೆರ್ ಎಂಬ ಪದ ಬಳಕೆಗೆ ಬಂದಿರಬೇಕು .ಕಾಲಾಂತರದಲ್ಲಿ ಅದು ಐವೆರ್ ಬಂಟರ್ >ಬಂಟೆರ್ ಆಗಿದೆ.
ಕದಂಬರು ಆಳಿದಊರು ಎಂಬರ್ಥದಲ್ಲಿ ಕಡಂಬಾರು ಪದ ಬಳಕೆಗೆ ಬಂದಿದೆ ಎಂಬ ಐತಿಹ್ಯ ಪ್ರಚಲಿತವಿದೆ ಈ ಬಗ್ಗೆ ಹೆಚ್ಚಿನ ಅಧ್ಯಯದ ಅಗತ್ಯವಿದೆ copy rights reserved.(c)ಡಾ.ಲಕ್ಷ್ಮೀ ಜಿ ಪ್ರಸಾದ