ಕುಲೆ ಭೂತಗಳು ತುಳುನಾಡಿನ ವಿಶಿಷ್ಠ ದೈವತಗಳು.ಗತಿಸಿದ ಹಿರಿಯರ ಆತ್ಮಗಳನ್ನು ಕುಲೆ ಎಂದು ಕರೆಯುತ್ತಾರೆ. ಕುಲೆಗಳಿಗೆ ಆಹಾರ ನೀಡಿ ತೃಪ್ತಿ ಪಡಿಸುವ ಸಂಪ್ರದಾಯವಿದೆ.ಕೆಲವು ಕುಲೆಗಳಿಗೆ ಭೂತದ ನೆಲೆಯಲ್ಲಿ ಆರಾಧನೆ ಇದೆ.ಬ್ರಾಣ ಕುಲೆ,ಕುಲೆ ಮಾಣಿಗ,ಕುಲೆ ಬಂಟೆತ್ತಿ,ಜತೆ ಕುಲೆ ಬೊಲ್ಲೆ ,ಗುರು ಕಾರ್ನೂರು ಮೊದಲಾದ ಕುಲೆ ಭೂತಗಳಿಗೆ ತುಳುನಾಡಿನಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ನೆರಿಯದ ಒಂದು ಕುಟುಂಬದಲ್ಲಿ ಅಜ್ಜಿ ಕುಲೆ ಎಂಬ ಒಂದು ದೈವಕ್ಕೆ ಕೋಲ ನೀಡಿ ಆರಾಧನೆ ಮಾಡುತ್ತಾರೆ.ಈ ಅಜ್ಜಿ ನೆರಿಯದ ಬ್ರಾಹ್ಮಣ ಕುಟುಂಬದ ಹಿರಿಯ ಮಹಿಳೆ. ಈಕೆ ವಿಧವೆಯಾಗಿದ್ದು ಸದಾ ಕಾಲ ಅವರ ಮನೆಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ್ದರು.ಅವರು ಒಂದು ಬಾರಿ ಕೂಡ ಗ್ರಾಮವನ್ನು ಬಿಟ್ಟು ಹೊರಗೆ ಹೋಗಿರಲಿಲ್ಲ.ಈ ಹಿರಿಯ ಮಹಿಳೆ ದೈವವಾಗಿ ನೆಲೆ ನಿಂತಿರುವ ಬಗ್ಗೆ ಒಂದು ನಿದರ್ಶನ ದ ಮೂಲಕ ತಿಳಿದು ಬರುತ್ತದೆ.
ಸುಮಾರು ಇನ್ನೂರು ಇನ್ನೂರೈವತ್ತು ವರ್ಷಗಳ ಹಿಂದೆ ನಡೆದ ಘಟನೆ ಇದು.
ಒಂದು ದಿನ ಊರಿಗೆ ದರೋಡೆಕೋರರ ತಂಡ ಬರುತ್ತಿದೆ ಎಂದು ತಿಳಿದು ಮನೆ ಮಂದಿ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ನದಿ ದಾಟಿ ಊರು ಬಿಡುತ್ತಾರೆ. ಆಗ ಗಡಿಬಿಡಿಯಲ್ಲಿ ಮನೆಯ ಒಬ್ಬ ಕೆಲಸಗಾರ ಉಳಿದು ಬಿಡುತ್ತಾನೆ. ಅವನು ಒಂದು ಹಲಸಿನ ಮರ ಏರಿ ಕುಳಿತು ಕೊಳ್ಳುತ್ತಾನೆ.ಅಷ್ಟರಲ್ಲಿ ದರೋಡೆಕೋರರ ಗುಂಪು ಮನೆಯನ್ನು ದರೋಡೆ ಮಾಡಲು ಬರುತ್ತದೆ. ಆಗ ಮನೆಯ ಒಳಗಿನಿಂದ ಮದುವೆ ಮನೆಯ ರೀತಿಯ ಸದ್ದು ಗದ್ದಲ ಕೇಳಿಸುತ್ತದೆ. ಅದನ್ನು ಕೇಳಿದ ದರೋಡೆಕೋರರ ತಂಡ ತಬ್ಬಿಬ್ಬಾಗಿ ದರೋಡೆಯ ಯೋಚನೆ ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ.ಆ ಮನೆಯ ಛಾವಣಿಯ ಮೇಲೆ ಓರ್ವ ಕೆಂಪು ಬಟ್ಟೆ ಉಟ್ಟ ಮಹಿಳೆಯನ್ನು ಹಲಸಿನ ಮರ ಏರಿದ ಕೆಲಸಗಾರ ನೋಡುತ್ತಾನೆ. ಆ ಮಹಿಳೆಯೇ ದರೋಡೆಕೋರರು ದೂರ ಹೋಗುವಂತೆ ಮಾಡಿದ್ದಾಳೆ ಎಂದು ಅವನಿಗೆ ತಿಳಿಯುತ್ತದೆ.
ಕೆಲದಿನಗಳ ನಂತರ ಮನೆ ಮಂದಿ ಹಿಂದೆ ಬಂದಾಗ ಈ ವಿಚಾರವನ್ನು ಆತ ಹೇಳುತ್ತಾನೆ. ಆ ಮನೆಯ ಗತಿಸಿದ ಹಿರಿಯ ಮಹಿಳೆಯೇ ದೈವವಾಗಿ ಮನೆಯ ರಕ್ಷಣೆ ಮಾಡಿದ್ದಾರೆಂದು ಆತ ಹೇಳಿದಾಗ ಆರಂಭದಲ್ಲಿ ಮನೆಯವರು ಒಪ್ಪುವುದಿಲ್ಲ. ನಂತರ ಈ ಬಗ್ಗೆ ಪ್ರಶ್ನೆ ಇಟ್ಟು ಕೇಳಿದಾಗ ಗತಿಸಿದ ಹಿರಿಯ ಮಹಿಳೆ ಕುಲೆ ಭೂತವಾಗಿದ್ದಾರೆ ಎಂದು ತಿಳಿದು ಬರುತ್ತದೆ.
ಅನಂತರ ಅಲ್ಲಿ ಆ ಶಕ್ತಿಯನ್ನು ಅಜ್ಜಿ ಕುಲೆ ಎಂದು ಕರೆದು ಕೋಲ ನೀಡಿ ಆರಾಧನೆ ಮಾಡಲು ಆರಂಭಿಸಿದರು.
ಅರ್ಕುಲದಲ್ಲಿ ಪಂಜುರ್ಲಿ ದೈವ ದೊಡನೆ ಒಂದು ಅಜ್ಜಿ ಹೆಸರಿನ ಭೂತಕ್ಕೆ ಆರಾಧನೆ ಇದೆ. ಆದರೆ ನೆರಿಯ ಕುಟುಂಬದ ಅಜ್ಜಿ ಕುಲೆ ಮತ್ತು ಅರ್ಕುಳದ ಅಜ್ಜಿ ಭೂತದ ವೇಷಭೂಷಣ ಗಳಲ್ಲಿ ವ್ಯತ್ಯಾಸವಿದೆ.ನೆರಿಯದ ಅಜ್ಜಿ ಕುಲೆ ಭೂತಕ್ಕೆ ಬ್ರಾಹ್ಮಣ ವಿಧವೆಯಂತೆ ಕೆಂಪು ಬಣ್ಣದ ಸೀರೆಯ ಹೊದಿಕೆಯ ಅಲಂಕಾರವಿದೆ.ಅರ್ಕುಳದ ಅಜ್ಜಿ ಭೂತಕ್ಕೆ ಬಿಳಿಬಣ್ಣದ ಸೀರೆ ಇದೆ ಮತ್ತು ಇಲ್ಲಿನ ಅಲಂಕಾರ ಎಳೆಯ ವಯಸ್ಸಿನ ಹುಡುಗಿಯ ಸ್ವರೂಪವನ್ನು ದ್ಯೋತಿಸುತ್ತದೆ.ಹೆಸರು ಅಜ್ಜಿ ಎಂದು ಇದ್ದಾರೆ ಈ ದೈವ ಮೂಲತಃ ಚಿಕ್ಕ ಹುಡುಗಿಯೇ ಇದ್ದಿರಬಹುದು. ಹಾಗಾಗಿ ನೆರಿಯದ ಅಜ್ಜಿಕುಲೆ ಮತ್ತು ಅರ್ಕುಳದ ಅಜ್ಜಿ ಭೂತ ಬೇರೆಬೇರೆ ಆಗಿರಬಹುದು. ಅರ್ಕುಳದ ಅಜ್ಜಿ ದೈವದ ಬಗ್ಗೆ ಮಾಹಿತಿ ಇದ್ದವರು ತಿಳಿಸಬೆಕಾಗಿ ಕೋರಿಕೆ
(- ಅಜ್ಜಿ ಕುಲೆ ಕುರಿತಾದ ಮಾಹಿತಿಯ ಮೂಲ https://bhutasofmemory.wordpress.com/memories-and-a-bhuta-present
ಈ ಬ್ಲಾಗ್ ಯಾರದೆಂದು ತಿಳಿದಿಲ್ಲ)