ತುಳುನಾಡಿನಲ್ಲಿ ಅನೇಕ ಮಹಿಳೆಯರು ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾರೆ.ಅವರಲ್ಲಿ ಕೆಲವರು ತಮ್ಮ ವಿಶೇಷ ಕಾರ್ಯದಿಂದಾಗಿ ದೈವತ್ವ ಪಡೆದಿದ್ದಾರೆ.ಇಲ್ಲತ್ತಮ್ಮ ಕುಮಾರಿ ಓರ್ವ ವೈದ್ಯೆ.ಕಾಡಿಗೆ ಹೋಗಿ ಗಿಡಮೂಲಿಕೆಗಳನ್ನು ತಂದು ಜನರ ರೋಗಗಳಿಗೆ ಔಷಧ ತಯಾರಿಸಿ ನೀಡುತ್ತಾ ಇದ್ದ ಬ್ರಾಹ್ಮಣ ಮಹಿಳೆ.ಒಂದು ದಿನ ಕಾಡಿಗೆ ಹೋದವರು ಅಲ್ಲೇ ಮಾಯವಾಗುತ್ತಾರೆ.ನಂತರ ದೈವತ್ವ ಪಡೆದ ಆರಾಧನೆ ಪಡೆಯುತ್ತಾರೆ.
ಹೀಗೆಯೇ ಕಣ್ಣೂರಿನ ಪಾಪ್ಪಿಸ್ಸೇರಿ ಪರಿಸರದಲ್ಲಿ ಓರ್ವ ಮುಸ್ಲಿಂ ಮಹಿಳೆ ಇದ್ದರು.ಅವರು ವಿಷ ವೈದ್ಯದಲ್ಲಿ ಪರಿಣತೆಯಾಗಿದ್ದರು.ಹಾವು ಕಡಿದು ವಿಷವೇರಿದ ನೂರಾರು ಮಂದಿಯನ್ನು ಔಷಧ ನೀಡಿ ಬದುಕಿಸಿದ್ದರು.ಅವರು ಮರಣ ಹೊಂದಿದ ಮೇಲೆ ದೈವತ್ವ ಪಡೆಯುತ್ತಾರೆ. ಕಣ್ಣೂರು ಸುತ್ರ ಮುತ್ತೀ ದೈವವನ್ನು ಬೀವಿ/ ಬೀಬಿ ತೆಯ್ಯಂ ಎಂಬ ಹೆಸರಿನಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ