Saturday 22 June 2013

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟ ಬೇಕು !

ಇವತ್ತು ಬೆಳ್ಳಂಬೆಳಗ್ಗೆ ಒಂದು ನ್ಯೂಸ್ ಓದಿ ಮನಸ್ಸು ಕಲಕಿ ಹೋಯಿತು .ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಯಿತು !ದಿನ ನಿತ್ಯ ಇಂತ ವಿಚಾರ ಅಲ್ಲಿ ಇಲ್ಲಿ ನಡೆದದ್ದು ಓದ್ತಾನೆ ಇರ್ತೇವೆ .ದೆಹಲಿಯ ವಿದ್ಯಾರ್ಥಿನಿಯ ಪ್ರಕರಣದಿಂದಾಗಿ ಸ್ವಲ್ಪ ಪ್ರತಿಭಟನೆ ನಡೆಯಿತು.ತುಸು ಕಾನೂನು ಬಲ ಬಂತು ಕೂಡಾ ! ಆದರೆ ಅನ್ವಯ ಆಗಿದೆಯೇ ?ಬಲವಾದ ಕಾನೂನು ಬಂದ ನಂತರ ಕೂಡ ನಮ್ಮ ಸುತ್ತ ಮುತ್ತ ಇಂಥ ಘಟನೆಗಳು ನಡೆಯುತ್ತಲೇ ಇವೆ ಆದರೆ ಅಪರಾಧಿಯನ್ನು ಬಂಧಿಸಿದ್ದಾಗಲಿ ಶಿಕ್ಷಿಸಿದ್ದಾಗಲಿ ಎಲ್ಲೂ ಕಂಡು ಬರುವುದಿಲ್ಲ .ಸಮಾಜದಂತೆ ಕಾನುನು ರಕ್ಷಕರು ಕೂಡ ಪುರುಷರ ಪರವಾಗಿಯೇ ಇದ್ದಾರೆಯೇ? ಎಂಬ ಸಂಶಯ ನಂಗೆ ಬರುತ್ತಿದೆ .ಲೈಂಗಿಕ ಕಿರುಕುಳಗಳ ಅನೇಕ ಪ್ರಕರಣಗಳಲ್ಲಿ ಆರೋಪಿಯನ್ನು ಬಂದಿಸದೆ ಇದ್ದ ಬಗ್ಗೆ  ಪ್ರತಿಭಟನೆ ನಡೆಸಿರುವ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಇತ್ತೀಚಿಗೆ ನಮ್ಮ ಕಾಲೇಜ್ ನಲ್ಲಿ ಕಾನೂನು  ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು.ಇಲ್ಲಿ ಕೂಡ ಪ್ರಸ್ತಾಪಿಸಿದ್ದು ಮಹಿಳಾ ದೌರ್ಜನ್ಯ ಕಾಯ್ದೆ ಬಗ್ಗೆ .ಆದರೆ ಹೇಳಿದ್ದು ಮಾತ್ರ ಸ್ತ್ರೀಯರು ಕಾನೂನು ದುರ್ಬಳಕೆ ಮಾಡುತ್ತಿದ್ದಾರೆ.ಕಾನೂನು ದುರ್ಬಳಕೆ ಮಾಡಿದರೆ ಶಿಕ್ಷೆ ಇದೆ ಎಂದು ಮಹಿಳೆಯರನ್ನು ಭಯ ಪಡಿಸುವಂತೆ ಇತ್ತು ಅಲ್ಲಿನ ಮಾತುಗಳು !ಮಹಿಳ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ  ದುರ್ಬಳಕೆ ಆದೀತು ಅನ್ನುವ   ಭಯ ಯಾಕೆ ? ಏನೂ ತೊಂದರೆ ಕೊಡದ ದಾರಿ ಹೋಕರ ಮೇಲೆ ಯಾರಾದರು ದೂರು ನೀಡಲು ಸಾಧ್ಯವೇ ?!ಬೇರೆ ರೀತಿಯ ಕಿರುಕುಳಕ್ಕೆ ಈ ಕಾನೂನನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ .ಬೇರೆ ಯಾವುದಾದರು ರೀತಿಯಲ್ಲಿ ತಡೆಯಲಾರದ ತೊಂದರೆ ಕೊಟ್ಟಿರಿವುದು  ಇದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ .ಅಂಥಹ ಸಂದರ್ಭದಲ್ಲಿ  ಅವರ ಸಮಸ್ಯೆಯನ್ನು ನೋಡಿ ಕೊಂಡು ಸರಿಪಡಿಸಬೇಕೆ ಹೊರತು ದೂರು ಕೊಟ್ಟ ವರನ್ನೇ ಸಂಶಯಿಸುವ ಪ್ರವೃತ್ತಿ ದೂರವಾಗ ಬೇಕು.ಅತ್ಯಾಚಾರಿಗಳು ಚಿಕ್ಕಂದಿನಿಂದಲೇ ಹುಡುಗಿಯರನ್ನು ಚುಡಾಯಿಸುವ ,ಕಿರುಕುಳ ಕೊಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಯಾರೋ ಬರೆದದ್ದನ್ನು ಓದಿದ್ದು ನಂಗೆ ನೆನಪಾಗುತ್ತಿದೆ .ಅಂತಹ ಕಿರುಕುಳ ಕೊಟ್ಟ ಚುಆಯಿಸಿದ ಸಂದರ್ಭದಲ್ಲಿಯೇ ಅಂತಹವರಿಗೆ ಬಲವಾದ ಶಿಕ್ಷೆ ಆದರೆ ಅವರು ಅಷ್ಟು ಮುಂದುವರಿಯಲಿಕ್ಕಿಲ್ಲ !ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?ಅತ್ಯಾಚಾರಿಗಳಿಗೆ ಶಿಕ್ಷೆ ಆಗುವುದಿಲ್ಲ ಇನ್ನು  ಲೈಂಗಿಕ ಕಿರುಕುಳ ನೀಡಿದವರಿಗೆ ಶಿಕ್ಷೆ ಬಹಳ ದೂರದ ಮಾತು .ಕಿರುಕುಳದ ಪ್ರಕರಣಗಳು  ಹೆಚ್ಚಾಗಿ ದಾಖಲಾಗುವುದೇ ಇಲ್ಲ ದೂರು ನೀಡಿದರು ಸಕ್ಷಿ ಮತ್ತು ಮೊದಲೊಂದು ಕಾರಣಗಳಿಗೆ ಡ್ರಾಪ್ ಆಗುವುದೇ ಹೆಚ್ಚು !ಆದ್ದರಿಂದ  ಇದಕ್ಕೆ ಪರಿಹಾರ ಏನು ?ನಾವು ಚಿಂತಿಸಬೇಕಾಗಿದೆ .ಮಣಿಪಾಲದ ಹುಡುಗಿಯನ್ನು ಎತ್ತೊಯ್ದ ಕ್ರೂರ ವ್ಯಾಘ್ರಗಳು ನಮ್ಮ ಮನೆಯಿಂದ ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗುವುದಿಲ್ಲ ಅಂತ ಏನು ಗ್ಯಾರಂಟಿ .ಈ ವ್ಯಾಘ್ರಗಳು ಗೊಮುಖವನ್ನು ಹೊಂದಿರುವದರಿಂದ ಇವರನ್ನು ಗುರುತಿಸುವುದು ಅಸಾಧ್ಯ ಆದ್ದರಿಂದ ಬಲವಾದ ಶಿಕ್ಷೆ ಮಾತ್ರ ಇದಕ್ಕೆ ಪರಿಹಾರ ಮತ್ತು ಎಳೆಯದರಲ್ಲಿಯೇ ಇಂತ ಪ್ರವೃತ್ತಿಗೆ ಕಡಿವಾಣ ಹಾಕುವ ಕಾರ್ಯ ಆಗಬೇಕು .ಬೆಕ್ಕಿನ ಕೊರಳಿಗೆ ದೈರ್ಯ ಮಾಡಿ ಗಂಟೆ ಕಟ್ಟ ಬೇಕು .!ಏನಂತೀರಿ ನೀವು ?!

Wednesday 5 June 2013

laxmiprasad:                                                  ...

laxmiprasad:       
                                          ...
:                                                           ೧   ನಮ್ಮ  ನೆಲ-ಜಲ  ಬೆಂಗಳೂರಿನ   ಮುಖ್ಯ ರಸ್ತೆಯ ಬದಿಯಲ್ಲಿ   ನಮ್ಮ ಮನೆ ಇದೆ.ಹಗಲು ರಾತ್ರಿ...

Sunday 26 May 2013

laxmi prasad: ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ

laxmi prasad: ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ:   ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ  ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗ ಳಲ್ಲಿ  ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ  ಅಮ್ಮ ಎಲ್ಲ ಅವರ ...

Friday 24 May 2013

ಗಿಳಿ ಬಾಗಿಲು : ಎಂಗಳ ಮಕ್ಕಳ ಭಾಷೆ

                               
ಎಂಗಳ ಭಾಷೆಲಿ  ಸಣ್ಣ  ಮಕ್ಕಳತ್ತರೆ ಮಾತನಾಡುವಗ ಬಳಸುವ ಪದಂಗ ಭಾರಿ ಚೆಂದ, ಆದರೆ  ಎಂಗಳ ನಿತ್ಯದ ಬಳಕೆಯ ಪದಂಗಳ ಬದಲಿನ್ಗೆ ಬೇರೆ ಪದಂಗ ಇದ್ದು .ಇದೆಂತಕೆ ಹೀಂಗೆ ? ದೊಡ್ಡೋರ ಮಾತಿಲಿ ಇಲ್ಲದ್ದೆ ಇಪ್ಪ  ಪದಂಗಳ ಮಕ್ಕೊಗೆನ್ತಕೆ ಹೇಳಿಕೊಡುದು ಹೇಳಿ ತುಂಬ ಸರ್ತಿ ಎನಗೆ ಅನ್ಸಿದ್ದು .ಮೂಲತ ಈ ಪದಂಗಗಳೇ   ಎಂಗಳ ಭಾಷೆಲಿ ಇದ್ದದಾದಿಕ್ಕ ?ಕಾಲ ಕ್ರಮೇಣ ದೊಡ್ಡೋರ  ಮಾತಿಲಿ ಈಗ ಇಪ್ಪ ಪದಂಗ ಸೇರಿಗೊಂಡವ ?ಹಾಂಗಾಗಿ ಮಕ್ಕಳತ್ತರೆ ಮಾತಾಡುವಾಗ ಮಾತ್ರ ಮೂಲ ಪದಂಗಳ ಬಳಕೆ ಹಾಂಗೆ ಒಳುತ್ತಾ?ಎನಗೆ ಗೊಂತಿಲ್ಲೆ .ಹೀಂಗೆ ಆದಿಪ್ಪ ಸಾಧ್ಯತೆ ಇದ್ದು .ಈ  ಸಾಧ್ಯತೆಯ ತೀರಾ  ಸಾರಾ ಸಗಟಾಗಿ ಅಲ್ಲಗಳವಲೆ  ಸಾದ್ಯ ಇಲ್ಲೆ ಆನು ಗಮನಿಸಿದ ಕೆಲವು   ಮಕ್ಕಳ ಭಾಷೆಯ ಪದಂಗ ಹೀಂಗೆ ಇದ್ದು 
ಉಜ್ಜಿ :
 ಕಿಚ್ಚಿಂಗೆ ಅಥವಾ ಬೆಶಿಗೆ ಉಜ್ಜಿ ಹೇಳುವ ಪದವ ಮಕ್ಕಳತ್ತರೆ ಮಾತನಾಡುವಗ ಬಳಸುತ್ತೆಯ .  ಕಿಚ್ಚಿನತ್ತರೆ /ಬೆ ಶಿ ಇಪ್ಪಲ್ಲಿಗೆ ಹೋಗಡ ಹೇಳುಲೆ ಉಜ್ಜಿ ಹತ್ತರೆ ಹೋಗಡಾ ಹೇಳಿ  ಎಂಗ ಹೇಳುತ್ತೆಯ .ಉಜ್ಜಿ ಹೇಳುದು ಉಷ್ಣ ಹೇಳುವ ಪದದ ಹವ್ಯಕ ತದ್ಭವ ರೂಪ ಆದಿಕ್ಕು .ಮಕ್ಕೊಗೆ ಉಷ್ಣ ಹೇಳಿ ಹೇಳುಲೆ ಕಷ್ಟ ಅಕ್ಕು ಹೇಳಿ ಉಜ್ಜಿ ಹೇಳುವ ಪದ ಬಳಕೆಗೆ ಬಂದಿಕ್ಕು .ಕಾಲ ಕ್ರಮೇಣ ದೊಡ್ಡೋರ ಮಾತಿಲಿ ಉಷ್ಣದ ಬದಲಿನ್ಗೆ ಬೆಶಿ  ಹೇಳುವ ಪದ ರೂಡಿಗೆ ಬಂದಿರೆಕ್ಕು .ಆದರೆ ಮಕ್ಕಳತ್ತರೆ ಮಾತನಾಡುವಗ  ಉಜ್ಜಿ ಹೇಳುದು ಹಾಂಗೆ ಒಳುದಿರೆಕ್ಕು .
ದೀಜಿ :
 ಎಂಗಳ ಮಕ್ಕಳ ಭಾಷೇಲಿ ನೀರಿಂಗೆ ದೀಜಿ ಹೇಳುವ ಪದ ರೂಡಿಲಿ ಇದ್ದು .ನೀರಿಂಗೆ ದೀಜಿ ಹೇಳುಲೆ ಎಂತ ಕಾರಣ ಇಕ್ಕು ಹೇಳಿ  ಎನಗೆ ತಲೆಗೆ ಹೊವುತ್ತಿಲ್ಲೆ . ಎಂಗಳ ಮಕ್ಕಳ ಬಾಷೆಲಿ   ಬಿಟ್ರೆ ಬೇರೆಲ್ಲಿಯೂ ನೀರಿಂಗೆ ದೀಜಿ ಹೇಳಿ ಇಪ್ಪದು ಎನಗೆ ಗೊಂತಿಲ್ಲೆ .ಇದರ ಮೂಲ ರೂಪ ಎಂತಾದಿಕ್ಕು ಹೇಳಿ ಎನಗೆ ಗೊಂತಾವುತ್ತಾ ಇಲ್ಲೆ .
ಜಾಯಿ :
ಹಾಲಿನ್ಗೆ ಎಂಗಳ ಮಕ್ಕಳ ಭಾಷೆಲಿ ಜಾಯಿ ಹೇಳಿ ಹೇಳುದು . ಹಾಲು ಹೇಳುವ ಪದ ಜಾಯಿ ಹೇಳಿ ಅಪ್ಪ ಸಾಧ್ಯತೆ ಇಲ್ಲೆ .ಕ್ಷೀರ ಹೇಳುವ ಪದ ಕೂಡ ಜಾಯಿ ಹೇಳಿ ಆಗಿಪ್ಪ ಸಾಧ್ಯತೆ ಕಮ್ಮಿ ಕಾಣುತ್ತು.ಎಂಗಳ ಭಾಷೆಲಿ ಹಾಲಿನ್ಗೆ  ಬೇರೆ ಎಂತಾದರು ಪದ ಇದ್ದಿಕ್ಕ ?ಇಲ್ಲದ್ದರೆ ಮಕ್ಕಳ ಭಾಷೇಲಿ ಮಾತ್ರ ಜಾಯಿ ಹೇಳುವ ಪದ ಹೇಂಗೆ ಬಂತು ? 
ದಾದೆ :
ಎಂಗಳ ಮಕ್ಕಳ ಭಾಷೆಲಿ ಮನುಗು /ಒರಗು ಹೇಳುದಕ್ಕೆ ದಾದೆ ಮಾಡು ಹೇಳುವ ಪದ ಇದ್ದು .ಇದರ ಮೂಲ ರೂಪ ಎಂತಾದಿಕ್ಕು ?ಅಥವಾ ದೊಡ್ದೊರುದೆ ಮನುಗುದಕ್ಕೆ ದಾದೆ ಹೇಳಿಯೇ ಹೇಳಿಗೊಂಡಿತ್ತಿದವ ?
ಚಾಬು : 
ಎರುಗು ,ಹಲ್ಲಿ ,ಹಾತೆ ,ಜೆರಳೆ ,ಮೊಂಟೆ ಮೊದಲಾದ್ದಕ್ಕೆ ಮಕ್ಕಳ ಭಾಷೇಲಿ ಚಾಬು ಹೇಳಿ  ಹೇಳುದು .ತುಂಬ ಸಣ್ಣ ಮಕ್ಕಳತ್ತರೆ ಎಲ್ಲದಕ್ಕೂ ಚಾಬು ಹೇಳಿಯೇ ಹೇಳುದು . ಮಕ್ಕ ರಜ್ಜ ದೊಡ್ಡಪ್ಪಗ ಎರುಗು ಚಾಬು ಹಲ್ಲಿ  ಚಾಬು ಇತ್ಯಾದಿ ಇನ್ನೊಂದು ಪದ ಸೇರ್ಸಿ ಹೇಳ್ತವು .ಹಾವಿಂಗೆ ಕೂಡ ಚಾಬು ಹೇಳಿಯೇ ಹೇಳುದು .ಬಹುಷ ಹಾವು ಹೇಳುವ ಪದವೇ  ಚಾಬು ಪದದ ಮೂಲ ರೂಪ ಆದಿಕ್ಕು ಹೇಳಿ ಎನಗೆ ಅನ್ಸುತ್ತು .ಇದಲ್ಲದೆ ಬೂಚು ,ತಾಚಿ ಮೊದಲಾಗಿ ಸುಮ್ಮಾರು ವಿಶಿಷ್ಟ ಪದಂಗಳ ಬಳಕೆ ಇದ್ದು .ದೊಡ್ಡೋರ ಮಾತಿಲಿ ಇಲ್ಲದ್ದ ಇಂತ  ಪದಂಗ ಮಕ್ಕಳ ಭಾಷೇಲಿ ಮಾತ್ರ ಹೆಂಗೆ ಬಂತು ?ತಿಳುದೋರು ಹೇಳಿದರೆ ಸಂತೋಷ 
ಇನ್ನೊಂದರಿ ಕಾಂಬ 
ನಮಸ್ಕಾರ - ಡಾ.ಲಕ್ಷ್ಮಿ ಜಿ ಪ್ರಸಾದ

Monday 20 May 2013

ಗಿಳಿ ಬಾಗಿಲು(ಹವ್ಯಕ ಅಂಕಣ ) - ಎಂಗಳ ಭಾಷೆ ರಜ್ಜ ಬೇರೆ

                                

.ಮೊನ್ನೆ ಫೇಸ್ ಬುಕ್ಕಿಲಿ  ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ  ತೆಂಕ ಬೈಲು (ಈಗ ಅವ  ದೇಲಂತ ಬೆಟ್ಟಿನ ದೊಡ್ಡ ಶಾಲೆ ಮಾಷ್ಟ್ರ ) ಹವ್ಯಕ ಭಾಷೆಲಿ ಬರೆ  ಓದುಲೆ  ಕೊಶಿ ಆವುತ್ತು ಹೇಳಿ ಸಲಹೆ ಕೊಟ್ಟ .ಸುಮಾರು ಸಮಯಂದ ಆನು ಹವ್ಯಕ ಭಾಷೇಲಿ ರಜ್ಜ ಏನಾರು ಎಂತಾದರು  ಬರೆಯಕ್ಕು ಹೇಳಿ  ಜಾನ್ಸಿಗೊಂಡು  ಇತ್ತಿದೆ.ಅದಕ್ಕೆ ಸೂರ್ಯ ನಾರಾಯಣನ ಮಾತು ಬಲ ಕೊಟ್ಟತ್ತು ಹಾಂಗಾಗಿ ಹವ್ಯಕ ಭಾಷೆಲಿ ಬರವಲೆ ಸುರು ಮಾಡಿದ್ದೆ 
  ಆನು ನಾಲ್ಕು  ವರ್ಷ  ಮೊದಲು ಬೆಳ್ಳಾರೆ ಗವರ್ಮೆಂಟು    ಕೋಲೇಜಿಲಿ   ಕನ್ನಡ ಲೆಕ್ಚರು ಕೆಲಸಕ್ಕೆ ಸೇರಿದ ಒಂದೆರಡು ದಿನಂಗಳಲ್ಲಿಯೇ ಅಲ್ಯನೋ(ಣ) ರ ಹವ್ಯಕ ಭಾಷೆಗೂ ಎಂಗಳ ಹವ್ಯಕ ಭಾಷೆಗೂ ತುಂಬಾ ವ್ಯತ್ಯಾಸ ಇದ್ದು ಹೇಳಿ ಎನಗೆ ಗೊಂತಾತು .ಅಲ್ಯನೋರ ಹವ್ಯಕ ಭಾಷೇಲಿ ಕನ್ನಡದ ಪದಂಗ ಜಾಸ್ತಿ ಇದ್ದು .ಅದರ ಮೂಡ್ಲಾಗಿ  (ಹವ್ಯಕ) ಭಾಷೆ ಹೇಳಿಹೇಳ್ತವು .ಅವು ಎನಗೆ ಹೇಳುದರ ಎನಿಗೆ ಹೇಳಿ ಹೇಳ್ತವು .ನಮ್ಮ ಉಂಡೆಯ ಅವು ಕಡುಬು  ಹೇಳಿ ಹೇಳ್ತವು .ಹೀಂಗೆ ತುಂಬಾ ಕಡೆ ಅವರ ಭಾಷೆ ನಮ್ಮ ಭಾಷೆಂದ ಬೇರೆ ತರ ಇದ್ದು.ಪಡ್ಲಾಗಿ ಭಾಷೆಲಿದೆ ರಜ್ಜ ಬೇರೆ ತರ ಇಪ್ಪ ಹವ್ಯಕ ಭಾಷೆಯ ಒಂದು ವಿಧ ಅಲ್ಲಿನ ಕೆಲವು ಕುಟುಂಬಗಳಲ್ಲಿ ಅಲ್ಲಿ ಇದ್ದು .ಹೋವುಕೆ ಬರುಕೆ ಇತ್ಯಾದಿ ಪದಂಗ ಅದರಲ್ಲಿ ಇದ್ದು .ಅದು ರಜ್ಜ  ಭೈರಂಗಳ ಕನ್ನಡ ಭಾಷೆಯ ಹಾಂಗೆ ಇದ್ದು .
ಉತ್ತರ ಕನ್ನಡದೋರ ಹವ್ಯಕ ಭಾಷೆಗೂ ಎಂಗಳ  ಭಾಷೆಗೂ ತುಂಬಾ ವ್ಯತ್ಯಾಸ ಇಪ್ಪದು ಎನಗೆ ಗೊಂತಿತ್ತು .ಬೆಳ್ಳಾರೆಗೆ ಹೋದ ಮೇಲೆ ಅಲ್ಯಣ ಮೂಡ್ಲಾಗಿ ಭಾಷೆ ಮತ್ತೆ ಅದರ ಇನ್ನೊಂದು ವಿಧ ಇಪ್ಪದು ಗೊಂತಾತು ಎನಗೆ .ಮತ್ತೆ ಕೊಡೆಯಾಲ ಕಾಸರಗೋಡು ವಿಟ್ಲ  ಪುತ್ತೂರು   ಮೊದಲಾದ ಜಾಗೆಗಳ ಹವ್ಯಕ ಭಾಷೆದೆ ಎಂಗಳ ಹವ್ಯಕ ಭಾಷೆ(ಕೋಳ್ಯೂರು ಸೀಮೆದು )ದೆ  ಒಂದೇ ರೀತಿ ಇಕ್ಕು ಹೇಳಿ  ಆನು  ಗ್ರೇಶಿತ್ತಿದೆ.ಆದರೆ ಒಪ್ಪಣ್ಣನ  ಒಪ್ಪಂಗೊ ಓದುತ್ತಾ ಇದ್ದಾಂಗೆ ಎಂಗಳ ಭಾಷೆಗೂ ಅಲ್ಲಿ ಇಪ್ಪ ಭಾಷೆಗೂ ತುಂಬ ವ್ಯತ್ಯಾಸ ಇಪ್ಪದರ ನೋಡಿ ಎಂಗಳ ಭಾಷೆ ರಜ್ಜ ಬೇರೆ ಹೇಳಿ ಗೊಂತಾತು ಎನಗೆ .ಅದರಲ್ಲಿ  ಒ ಕಾರದ ಬಳಕೆ ಹೆಚ್ಚು ಇದ್ದು .ಅಭಿನಂದನೆಗೊ ,ಒಪ್ಪಂಗೊ ಮಂತ್ರಂಗೊ ,ಗಾದೆಗೊ  ಇತ್ಯಾದಿ .ಎಂಗಳ ಭಾಷೆಲಿ ಇಂತ ಕಡೆ ಒ ಕಾರ ಇಲ್ಲೆ .ಅಭಿನಂದನೆಗ  ಗಾದೆಗ ,ಮಂತ್ರಗ ಹೇಳಿ ಇರ್ತು .        
ಮತ್ತೆ ಎಂಗಳ ಭಾಷೆಲಿ ಹೇತು  ,ಹೇದು ಹೇದರೆ  ಕೇಟವು  ಇಂತ ಪದಂಗ ಇಲ್ಲೆ ಇದರ ಬದಲು .ಹೇಳಿತ್ತು ,ಹೇಳಿ ,ಹೇಳಿದರೆ ಕೇಳಿದವು ಹೇಳಿ ಇದ್ದು 
ಆನು ಭಾಷಾ ತಜ್ಞೆ ಅಲ್ಲ . ಎನ್ನ ತಲೆಗೆ ಬಂದದರ ಇಲ್ಲಿ ಬರದ್ದೆ .ಇನ್ನು ಮುಂದಣ ದಿನಂಗಳಲ್ಲಿದೆ  ಎನಗೆ ಬರೆಯಕ್ಕು ಹೇಳಿ ಎನ್ಸಿದ್ದರ ಎಂಗಳ ಹವ್ಯಕ ಭಾಷೆಲಿ ಬರೆತ್ತೆ .ನಿಂಗ ಎಲ್ಲ ತಿಳುದೋರು ಹಂಸ ಕ್ಷೀರ ನ್ಯಾಯದ ಹಾಂಗೆ (ನೀರು ಸೇರ್ಸಿದ ಹಾಲಿನ ಹಂಸದ ಎದುರು ಮಡುಗಿದರೆ ಅದು ಹಾಲಿನ ಮಾತ್ರ ಕುಡುದು ನೀರಿನ ಹಾಂಗೆ ಬಿಡ್ತಡ !ಇದೊಂದು ಕವಿ ಸಮಯ ) ಒಳ್ಳೆದರ ಮಾತ್ರ ತೆಕ್ಕೊಂಡು ಬೆನ್ನು ಕಟ್ಟಕ್ಕು ಹೇಳಿ ಕೇಳಿಗೊಂಡಿದೆ
 ಇನ್ನೊಂದರಿ ಕಾಂಬ  ನಮಸ್ಕಾರ
- ಡಾ.ಲಕ್ಷ್ಮಿ ಜಿ ಪ್ರಸಾದ







Friday 17 May 2013

Wednesday 15 May 2013