Monday 17 April 2017

ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ - ಡಾ.ಲಕ್ಷ್ಮೀ ಜಿ ಪ್ರಸಾದ

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ

ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ,ಫೋನ್ ಮೂಲಕ ವಾಟ್ಸಪ್ ಕೇಳುವ ಎಲ್ಲರಿಗೆ ಉತ್ತರಿಸಲು ಸಮಯದ ಸಮಸ್ಯೆ ಉಂಟಾಗಿದೆ ಅಲ್ಲದೆ  ಹೆಚ್ಚಿನ ವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ .ಹಾಗಾಗಿ ಬ್ಲಾಗ್ ಬರಹವನ್ನು  ಪೂರ್ಣವಾಗಿ ಕಾಪಿ ಮಾಡಿ ಹಾಕಿರುವೆ ,ಓದಿ ಇಷ್ಟ ವಾದರೆ ಬೇರೆಡೆ ಹಂಚಿರಿ

ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ಎಂಬ ಸತ್ಯವನ್ನು  ಮುಚ್ಚಿಟ್ಡು ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ  .

ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿ ಗೆ ಇಲ್ಲಿ ಓದಿ

ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ

ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ‌ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು  ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು  ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ  ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ   ಆದರೆ  ಇದು ಪ್ರಸ್ತುತ ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ ಇದರಲ್ಲಿ ತುಳು ಭಾಷೆಯಲ್ಲಿರುವ ಹ್ರಸ್ವ. ಎಒಗಳು ಇಲ್ಲ ಆದ್ದರಿಂದಾಗಿ  ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ

ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನ‌ಕೆಲವು ಬ್ರಾಹ್ಮಣ ಸಮುದಾಯಗಳು  ತಂಜಾವೂರು ಕಂಚಿಯ  ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ  ಅಕ್ಷರಗಳು ಇಲ್ಲ ಮತ್ತು ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯ ಏಳು ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ  ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು

ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ

1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು  ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು

2 ಈ ಲಿಪಿ ಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚಿನ ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳು ಆಗಿವೆ,ಕೇವಲ ಏಳು‌ ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ

3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ ತತುಳುವಿನ ಎಲ್ಲ ಅಕ್ಷಗಳು‌ಇಲ್ಲ  ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ

4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ

5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು

6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ

7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು‌ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11 ಇದರಲ್ಲಿ ತುಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ ಮತ್ತು ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆ ಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು  ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ  ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಏಳು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಏಳು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಏಳು ಮಾತ್ರ ಒಂದೊಮ್ಮೆ ಇದುರಲ್ಲಿ ತುಳು ಭಾಷೆಯ  ಬರವಣಿಗೆ ಇರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ  ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು  ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ ತುಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ ಬರವಣಿಗೆ ಇಲ್ಲದೆ ಇದ್ದಾಗ ಲಿಪಿ ಇರುವ ಸಾಧ್ಯತೆ ಇಲ್ಲವೇ ಇಲ್ಲ .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ  ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

17 ಈ ಎಲ್ಲಾ ಆಧಾರಗಳು  ತಿಗಳಾರಿ ಮತ್ತು ತುಲು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ  ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ‌ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಗಳಲ್ಲೂ ಸಿಕ್ಕಿವೆ ತುಳು ಬ್ರಾಹ್ಮಣರ ಬರೆದವುಗಳೂ ಇವೆ  ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು  ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ

20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ   ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು.
ಆದರೆ  ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಲು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ  ©ಡಾ.ಲಕ್ಷ್ಮೀ ಜಿ ಪ್ರಸಾದ
(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ  ವಿದ್ಯಾ ಅವರಿಗೆ  ನೀಡಿದ ಸೂಚನೆಗಳು--
Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)











Thursday 13 April 2017

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 343 ಕರಣಿಕ ದೈವ ©ಡಾ.ಲಕ್ಷ್ಮೀ ಜಿ ಪ್ರಸಾದ

ದೈವತ್ವ ಪಡೆದು ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ.ಇಲ್ಲಿ ಯಾರು ಯಾವಾಗ ಯಾಗೆ ಹೇಗೆ ದೈವತ್ವ ಪಡೆಯುತ್ತಾರೆಂದು ಹೇಳುವುದಕ್ಕೆ ಇದಮಿತ್ಥಂ ಎಂಬ ಸಿದ್ದಾಂತವಿಲ್ಲ.
ಸಾಮಾನ್ಯವಾಗಿ ಮಾನವರಾಗಿ ಹುಟ್ಟಿ ಅತಿ ಮಾನುಷ ಸಾಹಸ‌ಮೆರೆದವರು ,ಅನ್ಯಾಯವನ್ನು ಪ್ರಶ್ನಿಸಿದವರು ವಿಧಿ ನಿಷೇಧ ಗಳನ್ನು ಮೀರಿ ದುರಂತವನ್ನಪ್ಪಿದವರು ದೈವತ್ವ ಪಡೆದು ದೈವಗಳಾಗಿ ನೆಲೆ ನಿಂತು ಆರಾಧನೆ ಪಡೆಯುತ್ತಾರೆ .ಪ್ರಧಾನ ಭೂತಗಳ ಅನುಗ್ರಹಕ್ಕೆ ಪಾತ್ರರಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವುದು ಅನೇಕ ಕಡೆಗಳಲ್ಲಿ ಕಾಣಿಸುತ್ತದೆ.ಅಂತೆಯೇ ದೈವಕ್ಕೆ ದ್ರೋಹ ಮಾಡಿ ದುರಂತವನ್ನಪ್ಪಿದವರೂ ಅದೇ ದೈವದ ಸೇರಿಗೆಗೆ ಸಂದು ದೈವಗಳಾಗಿ ನೆಲೆ ನಿಂತಿರುವ ವಿಶಿಷ್ಟ ವಿದ್ಯಮಾನ ಕೆಲವೆಡೆ ನಡೆದಿರುವುದು ಕಂಡು ಬರುತ್ತಿದೆ .
ಕಾರ್ಯಸ್ಥನ್ / ಕರಣಿಕ ದೈವ ಕೂಡಾ ಈ ರೀತಿಯಲ್ಲಿ ದೈವತ್ವ ಪಡೆದ ಶಕ್ತಿ .
ಕಾರ್ಯಸ್ಥನ ಮೂಲತಃ ನಂಬೂದಿರಿ ಬ್ರಾಹ್ಮಣ.ದೈವಸ್ಥಾನದಲ್ಲಿ ಕರಣಿಕನಾಗಿ ಕೆಲಸ ಮಾಡುತ್ತಿರುತ್ತಾನೆ .ಒಂದು ದಿನ ಸುಳ್ಳು ಲೆಕ್ಕ ಬರೆದು ವಂಚನೆ ಮಾಡುತ್ತಾನೆ .ಆಗ ದೈವವು‌ ಮುನಿದು ಆತನನ್ನು ಮಾಯ ಮಾಡುತ್ತದೆ.ನಂತರ ಆತ ದೈವದ ಸೇರಿಗೆಗೆ ಸಂದು ಕರಣಿಕ/ ಕಾರ್ಯಸ್ಥನ್ ದೈವವಾಗಿ ಆರಾಧನೆ ಪಡೆಯುತ್ತಾನೆ ಆ ದೈವ ತೆಂಗಿನ ಒಲಿಯಲ್ಲಿ ಲೆಕ್ಕ  ಬರೆಯುವ ಅಭಿನಯವನ್ನು ಮಾಡುತ್ತಿದ್ದು ಆತ ಮೂಲತಃ ಕರಣಿಕನಾಗಿದ್ದು ಅತನ ವೃತ್ತಿಯನ್ನು ಸೂಚಿಸುತ್ತದೆ .ಈ ದೈವಕ್ಕೆ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಆರಾಧನೆ ಇದೆ ವೇಟಕರಿಮುಗನ್ ದೈವದ ಜೊತೆ ಆರಾಧನೆ ಇದೆ ©ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ಶ್ರೀಮತಿ ಪ್ರೇಮಲತಾ ಹಾಗೂ ಸುಕ್ಅತ ಫೋಟೋ ನೀಡಿದ ಮನೋಜ್ ಕುಂಬಳೆ ಅ
ವರಿಗೆ ಹೃತ್ಪೂರ್ವಕ ಧನ್ಯವಾದಗಳು 

ಸಾವಿರದೊಂದು ಗುರಿಯೆಡೆಗೆ 341-342 ಕರೊಟ್ಟಿ ಮತ್ತು ಕುಂಮಲುನ್ನಿ © ಡಾ.ಲಕ್ಷ್ಮೀ ಜಿ ಪ್ರಸಾದ



ತುಳುನಾಡಿನ ದೈವಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದಾರೆ.ಕೋಟಿ ಚೆನ್ನಯರು,ಮುದ್ದ ಕಳಲ,ಬಸ್ತಿ ನಾಯಕ, ತಿಮ್ಮಣ್ಣ ನಾಯಕ,ಬಚ್ಚನಾಯಕ ಕೋಟಿನಾಯಕ,ಕೋಟೆದ ಬಬ್ಬು,ಕೊರಗತನಿಯ ಮೊದಲಾದವರು ಅಸಾಧಾರಣ ಸಾಹಸ ಮೆರೆದು ಕಾಲಾಂತರದಲ್ಲಿ ದೈವತ್ವ ಪಡೆದ ಐತಿಹಾಸಿಕ ಪುರುಷರೇ ಆಗಿದ್ದಾರೆ .ಇಂತಹ ಮಾನವ ಮೂಲ ದೈವಗಳಲ್ಲಿ ಅನೇಕ ಬ್ರಾಹ್ಮಣ ಮೂಲದ ವ್ಯಕ್ತಿಗಳು ಇದ್ದಾರೆ.ಬ್ರಾಹ್ಮಣತಿ ಭೂತ,ಮುಕಾಂಬಿ ಗುಳಿಗ,ಕೆರೆ ಚಾಮುಂಡಿ, ಮುಂಡೆ ಬ್ರಾಂದಿ,ಇಲ್ಲತ್ತಮ್ಮ ಕುಮಾರಿ,ನಾರಳತ್ತಾಯ,ಕಾರಿಂಜೆತ್ತಾಯ,ಅಡ್ಕತ್ತಾಯ ,ನಾರಾಯಣ ಮಾಣಿಲು,ಅಯ್ಯರ ಕೋಲ ಮೊದಲಾದವರು ಬ್ರಾಹ್ಮಣ ಮೂಲದ ದೈವಗಳು.
ಒಂದು ಕುಂದ ನಲವತ್ತು ಭೂತಗಳು,ನೂರೊಂದು ಮಲೆ ಭೂತಗಳು ,ಸಾವಿರದೊಂದು ಭೂತಗಳು ಮೊದಲಾಗಿ ಸಮೂಹ ಆರಾಧನೆ ನಡೆಯುವಲ್ಲಿ ನಡು ನಡುವೆ ಹಾಸ್ಯವನ್ನು ಅಭಿವ್ಯಕ್ತಿ ಮಾಡಿ ನಗಿಸುವ ವಿದೂಷಕ ನನ್ನು ಹೋಲುವ ದೈವಗಳಿವೆ ನಾರಾಯಣ ಮಾಣಿಲು,ಎರು ಶೆಟ್ಟಿ ,ಬ್ರಾಣ ಭೂತ ಮತ್ತು ಮಾಣಿ ಭೂತ ಅಯ್ಯರ ಕೋಲ ಮೊದಲಾದವುಗಳಲ್ಲಿ ಹಾಸ್ಯವಿದೆ .ಇದು‌ ಮಲೆಯಾಳ ಪರಂಪರೆಯ ಭೂತಾರಾಧನೆ ತೆಯ್ಯಂ ನಲ್ಲಿ ಕೂಡ ಇದೆ ಪೀಯಾಯಿ ತೆಯ್ಯಂ ಹಾಸ್ಯಕ್ಕೆ ಪ್ರಸಿದ್ಧಿ ಪಡೆದಿದೆ.
ಇದೇ ರೀತಿ ಕೆಲವೆಡೆ ಕರೊಟ್ಟಿ ಮತ್ತು ಕುಮ್ಮುಲುನ್ನಿ ಎಂಬ ಎರಡು ಬ್ರಾಹ್ಮಣ ತೆಯ್ಯಂ ಗಳಿಗೆ ಆರಾಧನೆ ಇರುವ ಬಗ್ಗೆ ಮನೋಜ್ ಕುಂಬಳೆ ಅವರು ಮಾಹಿತಿ ನೀಡಿದ್ದಾರೆ..ಬ್ರಾಹ್ಮಣನೊಬ್ಬ ಹಾಸ್ಯ ಮಾಡಿಕೊಂಡು ಊಟ ಮಾಡುವ ಅಭಿನಯವನ್ನು ಕುಮ್ಮುಲುನ್ನಿ ದೈವ ಮಾಡುತ್ತದೆ .ಊಟ ಕೇಳಿಕೊಂಡು ಬರುವ ಅಭಿನಯವನ್ನು ಕರೊಟ್ಟಿ ದೈವ ಮಾಡುತ್ತದೆ .ಈ ದೈವಗಳ ವೇಷ ಭೂಷಣ ಬ್ರಾಹ್ಮಣ ರನ್ನು ಹೋಲುತ್ತದೆ .ಅವರಾಡುವ ಮಾತು ಕೂಡ ಮಲೆಯಾಳ ಬ್ರಾಹ್ಮಣರ ಆಡು ಭಾಷೆ ಎಂದು ಮನೋಜ್ ಅವರು ತಿಳಿಸಿದ್ದಾರೆ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 339-40 ಪಟ್ಟದ ಮುಗೇರ ಮತ್ತು ಬಡಜ ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 339-40 ಪಟ್ಟದ ಮುಗೇರ ಮತ್ತು ಬಡಜ ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ದಿನಗಳ ನಂತರ ತುಳುನಾಡ ದೈವಗಳ ಸರಣಿ ಮುಂದುವರಿಸುತ್ತಿರುವೆ .ಕಾಸರಗೋಡು ಜಿಲ್ಲೆಯ ಹೊಸಂಗಡಿ ಮೀಯಪದವು ರಸ್ತೆಯಲ್ಲಿ ಮೂಡಂಬೈಲು ಬಳಿ ಸ್ವಲ್ಪ ಒಳಗೆ ಪಟ್ಟದ ಮುಗರು ಎಂಬ ಗುತ್ತಿನ ಮನೆ ಇದೆ ಪಟ್ಟಾಭಿಷೇಕ ವಾದ ಮುಗೇರ ನಾಯಕನ ಹೆಸರಿನಿಂದಾಗಿ ಈ ಗುತ್ತಿಗೆ ಪಟ್ಟದ ಮುಗರು ಎಂಬ ಹೆಸರು ಬಂದಿದೆ .ಇಲಗಲಿ ಪಟ್ಟವಾದ ಮುಗೇರ ಸಮುದಾಯದ ಇಬ್ಬರು ದೈವತ್ವ ಪಡೆದು ಆರಾಧನೆ ಹೊಂದುತ್ತಿದ್ದಾರೆ .ಇವರಲ್ಲಿ ಹಿರಿಯಾತನ ಹೆಸರು ಬಡಜ ಎಂದು .ಈತ ಈಗಿನ ಬಡಾಜೆ ಪರಿಸರದಲ್ಲಿ ನೆಲೆ ನಿಂತು ಆಡಳಿತ ನಡೆಸಿದ್ದಾನೆ ಈತನ ಹೆಸರಿನ ಕಾರಣಕ್ಕೆ ಆ ಪರಿಸರಕ್ಕೆ ಬಡಾಜೆ ಎಂದು ಹೆಸರು ಬಂತು ಎಂದು ಸ್ಥಳ ಐತಿಹ್ಯ ಪ್ರಚಲಿತವಿದೆ
ಇವರು ಮುಗೇರ ಸಮುದಾಯಕ್ಕೆ ಸೇರಿದ್ದು ತಮ್ಮ ನಿಗೆ ಈಗಿನ ಪಟ್ಟದ ಮುಗೇರು ಎಂಬಲ್ಲಿ ಪಟ್ಟಾಭಿಷೇಕ ವಾಯಿತು .
ಈ ಪರಿಸರವನ್ನು ಆಳುತ್ತಿದ್ದ ಮಂಜೇಶ್ವರದ ಬಂಗ ಅರಸರ ಮೇಲೆ ಶತ್ರುಗಳು ದಾಳಿ ಮಾಡಿದಾಗ ಯುದ್ದದಲ್ಲಿ ಸೋಲುವ ಹಂತ ತಲುಪುತ್ತದೆ .ಈಗಿನ ಪಟ್ಟದ ಮುಗರು‌ಪರಿಸರದಲ್ಲಿ ಅರುವತ್ತು ಎಪ್ಪತ್ತು ಮುಗೇರರ ಮನೆಗಳಿದ್ದವು ಇವರೆ ಬಿಲ್ಜಾಣರಾಗಿದ್ದು ವೀರರಾಗಿದ್ದರು .ಬಂಗರಸ ಇವರ ಸಹಾಯ ಯಾಚಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರೆ ನಿಮಗೆ ಮೂವತ್ತನಾಲ್ಕು ಗ್ರಾಮಗಳನ್ನು ನೀಡುತ್ತೇನೆ ಎಂದು ವಾಗ್ದಾನ ಮಾಡುತ್ತಾನೆ ..ಈ ಮುಗೇರ ಸಹೋದರರು ಯುದ್ದವನ್ನು ಗೆದ್ದು ಕೊಡುತ್ತಾರೆ ಹಾಗೆ ಬಂಗರಸ ಮುವತ್ತನಾಲ್ಕು ಗ್ರಾಮಗಳ ಒಂದು ‌ಮಾಗಣೆಯನ್ನು ಇವರಿಗೆ ಕೊಡುತ್ತಾನೆ . ಹೀಗೆ ಮಾಗಣೆಯ ಹಕ್ಕನ್ನು ಪಡೆದು ಆಡಳಿತ ನಡೆಸುವ ಸಂದರ್ಭದಲ್ಲಿ ಬ್ರಾಹ್ಮಣ ಹುಡುಗಿಯೊಬ್ಬಳನ್ನು ತನಗೆ ಮದುವೆ ಮಾಡಿ ಕೊಡಬೇಕು ಎಂದು ಪಟ್ಟವಾದ ಮುಗೇರ ನಾಯಕ ಬಲವಂತ ಮಾಡುತ್ತಾನೆ .ಆಗ ಅ ಬ್ರಾಹ್ಮಣ ಹುಡುಗಿಯ ಸಂಬಂಧಿಕರು ಅವನನ್ನು ಉಪಾಯವಾಗಿ ಉಪ್ಪಳ ಸಮೀಪದ ಕೋರಿಕ್ಕೋಡು ಎಂಬ ಕಾಡಿಗೆ ಕರೆದು ಕೊಂಡು ಹೋಗಿ ಕೊಲ್ಲುತ್ತಾರೆ ಹೀಗೆ ಅಸಮಾನ್ಯ ಸಾಹಸ ಮೆರೆದು ಪಟಮಾಗಣೆಯ ಅಧಿಕಾರ ವನ್ನು ಪಡೆದು ಪಟ್ಟವಾದ ಮುಗೇರ ನಾಯಕ ದುರಂತವನ್ನಪ್ಪುತ್ತಾನೆ .ದುರಂತ‌ಮತ್ತು ದೈವತ್ವ ತುಳುನಾಡಿನ ವಿಶಿಷ್ಟ ಸಂಸ್ಕೃತಿ.ಅಂತೆಯೇ ಪಟ್ಟದ ಮುಗೇರ ಹಾಗೂ ಆತನ ಸಹೋದರ ಬಡಜ ದೈವಗಳಾಗಿ ಆರಾಧನೆ ಹೊಂದುತ್ತಾರೆ ©ಡಾ.ಲಕ್ಷ್ಮೀ ಜಿ‌ಪ್ರಸಾದ .ಪಟ್ಟದ ಮುಗರು ಪಾಡಾಂಗಾರೆ ಭಗವತಿಗೆ ನೇಮವಾಗುವಾಗ ಈ ಎರಡು ದೈವಗಳಿಗೆ ಸಾಂಕೇತಿಕವಾಗಿ ಆರಾಧನೆ ಮಾಡುತ್ತಾರೆ
ಇನ್ನೊಂದು ಪ್ರಚಲಿತ ಐತಿಹ್ಯ ಪ್ರಕಾರ ಮಯೂರವರ್ಮ ಕುಂಬಳೆಗೆ ಬಂದಾಗ ಆತನ ಮಗಳು ಸುಶೀಲೆ ಅಸ್ವಸ್ಥಳಾಗುತ್ತಾಳೆ.ಅವಲಿಗೆ ಚಿಕಿತ್ಸೆ ನೀಡಿ ಗುಣ ಪಡಿಸಿದ ಬ್ರಾಹ್ಮಣ ನಿಗೆ ಅವಳನ್ನು ಕೊಟ್ಟು ‌ಮದುವೆ‌ಮಾಡಿ ಒಂದು ಮಾಗಣೆಯನ್ನು ಕೊಡುತ್ತಾನೆ .ಅವಳ ಮಗ ಜಯಸಿಂಹ ವೀರ ಧೀರನಾಗಿದ್ದು ಕುಂಬಳೆಯಲ್ಲಿ ಅರಮನೆ ಕಟ್ಟಿ ಸುತ್ತು ಮುತ್ತಲಿನ ಪ್ರದೇಶ ವನ್ನು ವಶಪಡಿಸಿಕೊಂಡು ಆಡಳಿತ ನಡೆಸುತ್ತಾನೆ .ಒಂದು ದಿನ ಬೇಟೆಯಾಡುವಾಗ ಆತ ಬಿಟ್ಟ ಬಾಣ ತಪ್ಪಿ ಬ್ರಾಹ್ಮಣ ನೊಬ್ಬನಿಗೆ ತಗುಲಿ ಅತ ಪ್ರಾಣಬಿಡುತ್ತಾನೆ ಇದರಿಂದ ನೊಂದ ಜಯಸಿಂಹ ರಾಜ್ಯ ಬಿಟ್ಟು ಹೊರಗಡೆ ಇರುತ್ತಾನೆ
 ಆಗ ಸ್ಥಳೀಯ ನಾದ ಮುಗೇರನೊಬ್ಬ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡು ಪಟ್ಟವಾಗುತ್ತಾನೆ .ಪ್ರಜೆಗಳನ್ನು ಹಿಂಸಿಸುತ್ತಾನೆ ಆಗ ಶಂಕರ ಭಟ್ಟ ಎಂಬ ಬ್ರಾಹ್ಮಣ ದೇವಿಯನ್ನು ಪ್ರಾರ್ಥನೆ ಮಾಡಿದಾಗ ದುಂಬಿಗಳು ಬಂದು ಆಕ್ರಮಣ ಮಾಡುತ್ತವೆ ಕೋರಿಕ್ಕಾರು ಎಂಬ ಸಮೀಪದ ಕಾಡಿನಲ್ಲಿ ‌ಮಾರಣ ಹೋಮ‌ ನಡೆದು ಮುಗೇರ ನಾಯಕ ಹತನಾಗುತ್ತಾನೆ .ಬಡಜ ಈತನ ಸಮೀಪದ ಸಂಬಂಧಿ ಎಂದು ಈ ಐತಿಹ್ಯ ವು ತಿಳಿಸುತ್ತದೆ .
ಆದರೆ ಈ ಐತಿಹ್ಯ ಗಳ
 ಕೇವಲ ಕಟ್ಟು ಕಥೆಯಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಪಟ್ಟದ ಮುಗರಿನಲ್ಲಿ ಇರುವ ಅರಮನೆಯ ಕುರುಹುಗಳು ಇವೆ ಅರಮನೆ ಇದೆ ನ್ಯಾಯ ತೀರ್ಮಾನ ಮಾಡುತ್ತಿದ್ದ ಚಾವಡಿ ಅಲ್ಲಿದೆ .ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ©ಡಾ.ಲಕ್ಷ್ಮೀ ಜಿ ಪ್ರಸಾದ


ಮಾಹಿತಿ ನೀಡಿದ ಯೋಗೀಶ್ ,ಗೋಪಾಲ ಕೃಷ್ಣ   ಭಟ್  ಅರಂತಾಡಿ, ರಾಮಪ್ಪ ಆಳ್ವ ,ರತ್ನಮ್ಮ ಪಟ್ಟದ ಮುಗರು ಗುತ್ತು ಇವರುಗಳಿಗೆ ಹೃತ್ಪೂರ್ವಕ   ಧನ್ಯವಾದಗಳು 

Monday 20 March 2017

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು-

. "ವೈದಿಕೇತರ ತುಳುವರ ಪರಿಕಲ್ಪನೆಯಲ್ಲಿ ಸತ್ತ ತರುವಾಯದ ಜಗತ್ತಿನಲ್ಲಿ ಕುಲೆ ಮತ್ತು ಪ್ರೇತಾತ್ಮರು ಒಂದೆ ಅಲ್ಲ. ಅವರ ಪ್ರಕಾರ ಸತ್ತವರು ಸಂಸಾರ ಕರ್ಮಗಳಿಂದ ಸಂಸ್ಕರಿಸಲ್ಪಡದಿದ್ದರೆ ಅವರು ಪ್ರೇತಾತ್ಮರು. ಸಂಸ್ಕರಿಸಲ್ಪಟ್ಟು ಸದ್ಗತಿ ಹೊಂದಿದರೂ ಕೂಡಾ ಅವರು ನಮ್ಮೊಂದಿಗಿದ್ದು ನಮ್ಮ ಸಕಲಕ್ಕೂ ಕಾರಣಕರ್ತರಾಗಿರುವ ಆ ಹಿರಿಯರು ಗುರುಕಾರ್ಣೂರರು ಅಥವಾ ಕುಲೆಗಳಾಗಿರುತ್ತಾರೆ. ಇವರಿಗೆ ವಾರ್ಷಿಕಾವರ್ತನದಲ್ಲಿ ಅಗೆಲು ಕೊಟ್ಟು ಆರಾಧಿಸುವ ಕ್ರಮ, ದೈವಾರಾಧನೆಯ ಉಪಾಂಗವಾಗಿ ಪ್ರತ್ಯೇಕವಿದೆ." ಎಂದು ಡಾ| ಪೂವಪ್ಪ ಕಣಿಯೂರು ಹೇಳಿದ್ದಾರೆ. (ಮೌಖಿಕ ಸಂಕಥನ ೨೦೦೯, ತರಂಗಿಣಿ ಪ್ರಕಾಶನ ಸುಳ್ಯ, ಪುಟ ೫೮, ಡಾ| ಪೂವಪ್ಪ ಕಣಿಯೂರು).
ತುಂಡು ಭೂತಗಳ ಕುರಿತು ಚರ್ಚಿಸುತ್ತಾ "ಉಡುಗೆ ತೊಡುಗೆ ಕ್ರಿಯೆ ಇತ್ಯಾದಿಗಳನು ಲಕ್ಷಿಸಿದರೆ ತುಂಡು ಭೂತಗಳಲ್ಲಿ ಕೆಲವು ಭೂತಗಳೆಂಬ ಸ್ಥಾನಮಾನಕ್ಕೆ ಏರದೆ ಇನ್ನೂ ಕುಲೆ'ಯ ಸ್ಥಿತಿಯಲ್ಲಿ ಇರುವಂತೆ ತೋರುತ್ತದೆ. ಪ್ರೇತಾರಾಧನೆಗೂ ಭೂತಾರಾಧನೆಗೂ ಸಂಬಂಧವಿದ್ದು ಅನೇಕ ಭೂತಗಳು ಕುಲೆ'ಯ ಸ್ಥಿತಿಯನ್ನು ದಾಟಿದ ಬಳಿಕವೇ ಭೂತತ್ವವನ್ನು ಹೊಂದಿರುವುದಾಗಿದೆ. ಇಂದು ಭೂತಗಳ ವಿಕಾಸಪಥದ ಒಂದು ಅವಸ್ಥೆಯೂ ಅಹುದು. ಕೆಲವು ಕುಲೆಗಳು ಭೂತಸ್ಥಿತಿಗೆ ದಾಟದೆ ಇನ್ನೂ ಕುಲೆಯ ರೂಪದಲ್ಲೆ ಕಾಣಿಸಿಕೊಳ್ಳುತ್ತದೆ. ಕುಲೆಮಾಣಿಗ, ಕುಲೆ ಬಂಟೆತ್ತಿ, ಜತೆಕುಲೆ, ಬ್ರಾಣ ಕುಲೆ, ಗುರು ಕಾರ್ನೂರು ಮೊದಲಾದ ಕುಲೆಗಳು ಪರಿಷ್ಕೃತ ಪ್ರೇತಗಳೇ ಆಗಿವೆ' ಎಂದು ಡಾ|| ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.ಕೆಲೆವಡೆ ಪ್ರೇತ ಕೋಲ ಎಂಬ ಆರಾಧನ ಪದ್ಧತಿ ಪ್ರಚಲಿತವಿದೆ .

 ಗತಿಸಿದ ಹಿರಿಯ ಆತ್ಮಗಳನ್ನು ಕಾರ್ಣವೆರ್, ಕಾರ್ನವೆರ್, ಕಾರ್ನೂರು ಎಂದು ಕರೆಯುತ್ತಾರೆ. ವರ್ಷಕ್ಕೊಮ್ಮೆ ಈ ಹಿರಿಯ ಆತ್ಮಗಳಿಗೆ ಎಡೆ ಹಾಕಿ ಬಡಿಸುವ ಮೂಲಕ ಆರಾಧಿಸುವ ಪದ್ಧತಿ ತುಳುನಾಡಿನಲ್ಲಿದೆ. ಗೌಡ ಜನಾಂಗದವರು ಆರಾಧಿಸಲ್ಪಡುವ ಹಿರಿಯರ ಆತ್ಮವನ್ನು ಗುರು ಕಾರ್ನೂರು' ಎಂದು ಕರೆಯುತ್ತಾರೆ. ಗುರು ಕಾರ್ನೂರರಿಗೆ ಅಗೆಲು ಬಡಿಸುವುದು ಮಾತ್ರವಲ್ಲದೆ ನೇಮ ನೀಡಿ ಆರಾಧಿಸುವ ಪದ್ಧತಿ ಕೂಡ ಪ್ರಚಲಿತವಿದೆ. ಗುರುಕಾರ್ನೂರು ಭೂತದ ವೇಷಭೂಷಣ ಮಾನವ ಸಹಜ ಅಲಂಕಾರವನ್ನು ಹೋಲುತ್ತದೆ. ಮುಖಕ್ಕೆ ಬಿಳಿ ಬಣ್ಣ, ಹಣೆಗೊಂದು ಕುಂಕುಮದ ಬೊಟ್ಟು, ಮೈಗೆ ಕೆಂಪು ಪಟ್ಟೆಯ ಉತ್ತರೀಯ ಹಾಗೂ ಬಿಳಿ ಬಟ್ಟೆಯ ಕಚ್ಚೆ ಇರುತ್ತದೆ. ಕಾಲಿಗೆ ಗಗ್ಗರ ಕಟ್ಟುತ್ತಾರೆ.

Tuesday 29 November 2016

ತುಳು ನಾಡಿನ ಕಂಬಳ -ಪ್ರಾಚೀನತೆ ಮತ್ತು ಐತಿಹ್ಯಗಳು(c)ಡಾ.ಲಕ್ಷ್ಮೀ ಜಿ ಪ್ರಸಾದ



   
                             Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ                           ಚಿತ್ರ ಕೃಪೆ -ಶ್ರೀ ಮಧುಸೂದನ ಶೆಟ್ಟಿ

ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಬಳ ವಿಶಿಷ್ಟವಾದುದು. ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳದ  ವಿಚಾರ. ಸಾಮಾನ್ಯವಾಗಿ ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .ನಾನು ಚಿಕ್ಕಂದಿನಲ್ಲೇ ಕಂಬಳವನ್ನು ನೋಡಿದ್ದೆ .ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ  Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ.ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ . ವಂಡಾರು ಕಂಬಳ ,ಪುತ್ತೂರು ದೇವರ ಕಂಬಳ ,ಕದ್ರಿ ಕಂಬಳ ,ಕೊಕ್ಕಡದ ಕಂಬಳ ಮೊದಲಾದ ಕಂಬಳಗಳ ಉಲ್ಲೇಖ ಅನೇಕ ತುಳು ಜಾನಪದ ಹಾಡುಗಳಲ್ಲಿ ದೊರೆಯುತ್ತದೆ ಅನೇಕ ಶಾಸನಗಳಲ್ಲೂ ಕಂಬಳದ ಉಲ್ಲೇಖಗಳಿವೆ  .ತುಳು ನಾಡಿನಲ್ಲಿ ಕಂಬಳದ ಆಚರಣೆ ಸುಮಾರು ೮೦೦-೯೦೦  ವರ್ಷಗಳ ಹಿಂದಿನಿಂದಲೇ ನಡೆದುಕೊಂಡು  ಬಂದಿದೆ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
.1. ಕಂಬಳದ ಪ್ರಾಚೀನತೆ
. ತುಳುನಾಡಿನ ಕಂಬಳ ಹಾಗೂ ಕಂಬಳ ಗದ್ದೆಗಳ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ. 
ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಉಲ್ಲೇಖವಿದೆ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದುಎಂದು ಇದರಲ್ಲಿ ಉಲ್ಲೇಖವಿದೆ.1 ಇದರ ಕಾಲ ಕ್ರಿ.ಶ.1200 (ಶಕ ವರ್ಷ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ.ಹನ್ನೆರಡನೆಯ ಶತಮಾನದಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಶಾಸನದ ಹೇಳಿಕೆ ಸಮರ್ಥಿಸುತ್ತದೆ. ಇದರಿಂದ ಕಂಬಳ ಕನಿಷ್ಠ ಎಂಟುನೂರು ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆಎಂದು ಉಲ್ಲೇಖವಿದೆ.2 ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ.3 ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆಎಂದಿದೆ.4 ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರುಎಂದಿದೆ.5 ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆಎಂದು ಉಲ್ಲೇಖವಿದೆ.6 ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿಎಂದು ಉಲ್ಲೇಖಿಸಿದೆ.7 ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದುಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ.87.2. ಕಂಬಳ ಪದದ ನಿಷ್ಪತ್ತಿ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಉದಾ: ಇಡಾ>ಇಳಾ, ಮಾಡ>ಮಾಳ ತುಳುಕನ್ನಡದಲ್ಲಿ, ಉದಾ: ಕುಂಬಳ>ಕುಂಬುಡ, ಕೆಂಪು ಕುಂಬಳ>ಕೆಂಬುಡೆ. ಅದೇ ರೀತಿ ಎರಡನೇ ಪದದ ಮೊದಲ ಅಕ್ಷರ ಲುಪ್ತವಾಗುವುದು ಕೂಡ ಸಾಮಾನ್ಯ. ಉದಾ: ಗೆಜ್ಜೆ+ಕತ್ತಿ>ಗೆಜ್ಜೆತ್ತಿ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.
.3. ಕಂಬಳದ ಮಹತ್ವ Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಕಂಬಳಎಂದರೆ ಕೋಣಗಳ ಓಟದ ಸ್ಪರ್ಧೆಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ.
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.10
4. ಮೌಖಿಕ ಪರಂಪರೆ ಹಾಗೂ ಐತಿಹ್ಯಗಳು
ಅನೇಕ ತುಳು ಪಾಡ್ದನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳಿವೆ. ಕಂಬಳಕ್ಕೆ ಸಂಬಂಧಿಸಿದಂತೆ ಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಧೂಮಾವತಿ ದೈವದ ಪಾಡ್ದನದಲ್ಲಿ ಗಿಡಾವು ಗೋಣ ಕಂಜಿಲುಎಂದು ಕಂಬಳದಲ್ಲಿ ಓಡಿಸುವ ಕೋಣಗಳ ಬಗ್ಗೆ ವಿವರಣೆ ಇದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ. ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಪೂಕರೆ ಕಂಬದ ವಿಚಾರದಲ್ಲಿ ಯುದ್ಧವಾಗುತ್ತಿದ್ದಿರುವಂತೆ ತೋರುತ್ತದೆ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಒಂದನ್ನು ಸುಂದರ ಕೇನಾಜೆಯವರು ಸಂಗ್ರಹಿಸಿದ್ದಾರೆ.
        ಉರಲ್ (ತುಳು)
ನಮೊನ ಉಲ್ಲಾಯ ದಂಡ್‍ಗು ಪೋತೆರ್
ದಂಡ್‍ಡ್ದ್ ಬನ್ನಗ ಗಿಂಡೆದ ನೀರು
ಕುಡ್ಪುಡು ಕಾಯಿ
ಬಟ್ಟಲ್ಡ್ ಪೇರು
ಕೊರೈಡ್ ಸುಣ್ಣೋ
ಬಂಡಿಡ್ ಪೂಕರೆ
ಕೊಂಡೊದು ಬರ್ವೆರೆ ಉಲ್ಲಾಯೆ
ಆಯೆರ್‍ಗ್ ಪೋನಗ ಆಜಿಕಟ್ಟು ಬಡು
ಈಯೆರೆಗ್ ಬನ್ನಗ ಮೂಜಿಕಟ್ಟು ಬಡು
ಕಂಪಕಂಡೊಡು ಗುಂಪು ಬಲಿಪಡ
ಪೊಯ್ಯಕಂಡೊಡು ಪೊಯ್ಯ ಬಲಿಪಡ
ಮೆಲ್ಲಪೋ ಮೆಲ್ಲ ಬಲ
                       ಓ ... ಓ ... ಓ...
ಕನ್ನಡ ಅನುವಾದ
ನಮ್ಮ ಯಜಮಾನರು ದಂಡಿಗೆ ಹೋಗಿದ್ದಾರೆ
ದಂಡಿನಿಂದ ಬರುವಾಗ ಗಿಂಡೆಯಲ್ಲಿ ನೀರು
ಎಸರು ತಟ್ಟೆಯಲ್ಲಿ ಕಾಯಿ
ಬಟ್ಟಲಿನಲ್ಲಿ ಹಾಲು
ಮರಿಗೆಯಲ್ಲಿ ಸುಣ್ಣ
ಬಂಡಿಯಲ್ಲಿ ಪೂಕರೆ
ತೆಗೆದುಕೊಂಡು ಬರುತ್ತಾರೆ
ಆ ಕಡೆ ಹೋಗುವಾಗ ಆರು ಕಟ್ಟು ಬೆತ್ತ
ಈ ಕಡೆ ಬರುವಾಗ ಮೂರು ಕಟ್ಟು ಬೆತ್ತ
ಕೆಸರುಗದ್ದೆಯಲ್ಲಿ ಗುಂಪು ಓಡಬೇಡ
ಹೊಯ್ಗೆ ಗದ್ದೆಯಲ್ಲಿ ಹೊಯ್ಯೋ (?) ಓಡಬೇಡ
ಮೆಲ್ಲಗೆ ಹೋಗು ಮೆಲ್ಲಗೆ ಬಾ
ಓ .... ಓ .... ಓ ....
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ
ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ಅಗೋಳಿ ಮಂಜಣ್ಣಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಐತಿಹ್ಯವಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಗ್ರಾಮಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದಕಥೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರುದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ಧತಿ ಬಂತು ಎಂಬ ಐತಿಹ್ಯವಿದೆ. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ.  Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಪೂಕರೆ ಕಂಬಳದ ಹಿಂದಿನ ದಿವಸವೇ ಊರವರು ನೆಂಟರಿಷ್ಟರು ಬಂದಿರುತ್ತಾರೆ. ರಾತ್ರಿ ಮಲಗಿದಾಗ ನೆಂಟರ ಹುಡುಗರಲ್ಲಿ ಇಬ್ಬರ ಕಾಲಿಗೆ ಬಳ್ಳಿ ಕಟ್ಟುತ್ತಿದ್ದರು. ಕಾಲಿಗೆ ಬಳ್ಳಿ ಕಟ್ಟಿರುವ ಹುಡುಗರಿಬ್ಬರನ್ನು ಎತ್ತಿ ತೆಗೆದುಕೊಂಡು ಹೋಗಿ ಕಂಬಳ ಗದ್ದೆಯ ಸಮೀಪದ ಬಾವಿಗೆ ಹಾಕುತ್ತಿದ್ದರು. ಒಂದು ವರ್ಷ ತನ್ನ ಕಾಲಿಗೆ ಕಟ್ಟಿದ್ದ ಬಳ್ಳಿಯನ್ನು ಬಿಚ್ಚಿ ಆ ಮನೆಯ ಯಜಮಾನನ ಮಗನ ಕಾಲಿಗೆ ಒಬ್ಬ ಹುಡುಗ ಕಟ್ಟುತ್ತಾನೆ. ರಾತ್ರಿಯಲ್ಲಿ ಇದು ತಿಳಿಯದ ಕೆಲಸದವರು ಬಳ್ಳಿ ಕಟ್ಟಿದ್ದ ಯಜಮಾನನ ಮಗನನ್ನೇ ಹೊತ್ತುಕೊಂಡು ಹೋಗಿ ಬಾವಿಗೆ ಹಾಕುತ್ತಾರೆ. ಮರುದಿವಸ ಬೆಳಗ್ಗೆ ಮನೆಯ ಯಜಮಾನನಿಗೆ ಈ ವಿಚಾರ ಗೊತ್ತಾಗುತ್ತದೆ. ಅಂದಿನಿಂದ ನರಬಲಿಯ ಬದಲು ಕೋಳಿಯನ್ನು ಬಲಿ ಕೊಡುತ್ತಿದ್ದರು ಎಂಬ ಐತಿಹ್ಯವಿದೆ. ಈಗ ಸಾಂಕೇತಿಕವಾಗಿ ಕುರ್ದಿನೀರನ್ನು ಗದ್ದೆಗೆ ಎರೆಯುತ್ತಾರೆ. ಆ ಬಾವಿಯ ಮೇಲೆ ಕಲ್ಲಿನ ಚಪ್ಪಡಿಯನ್ನು ಎಳೆದಿದ್ದಾರೆ. ಆ ಬಾವಿಯನ್ನೇ ಸಿರಿಗಳ ಬಾವಿಎಂದು ಕರೆಯುತ್ತಾರೆ. ಕಂಬಳಗಳಲ್ಲಿ ಅತಿದೊಡ್ಡ ಕಂಬಳ ಗದ್ದೆ ಇದಾಗಿದೆ. ಎರಡು ಮೂರು ದಶಕಗಳ ಹಿಂದೆ ಇಲ್ಲಿ ವಾರಗಟ್ಟಲೆ ಕೋಣಗಳ ಓಟದ ಸ್ಪರ್ಧೆ ನಡೆಯುತ್ತಿತ್ತು. ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ. Cpy rights reserved (c)ಡಾ.ಲಕ್ನ್ಮೀ  ಜಿ‌ಪ್ರಸಾದ

Sunday 20 November 2016

ಭೂತಾರಾಧನೆಗೊಂದು ಸಮೃದ್ಧ ಬ್ಲಾಗ್ --ಭೂತಗಳ ಅದ್ಭುತ‌ ಜಗತ್ತು - ಪುನೀತ್ ಸಿದ್ಧ ಕಟ್ಟೆ

ಪುನೀತ್‌ ಎಂ.ಸಿದ್ದಕಟ್ಟೆ ತುಳುನಾಡಿನ ಸಂಸ್ಕೃತಿ ಮಾಹಿತಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಮಾಹಿತಿ ಸಿಗುವುದು ಬಹು ಕಡಿಮೆ. ಈ ಕೊರತೆ ನೀಗಿಸಲು ಭೂತಾರಾಧನೆಯ ಅದ್ಭುತ ಜಗತ್ತಿನ ಬ್ಲಾಗ್‌ ತುಳು ಸಂಸ್ಕೃತಿಯಲ್ಲಿನ ಸಾಕಷ್ಟು ವಿಚಾರ ಅನಾವರಣಗೊಳಿಸಿದೆ. ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ 2 ಡಾಕ್ಟರೇಟ್‌ ಪಡೆದ ಡಾ.ಲಕ್ಷ್ಮೀ ಜಿ.ಪ್ರಸಾದ್‌ ಈ ಅತ್ಯಪರೂಪದ ಬ್ಲಾಗ್‌ನ ರೂವಾರಿ. ಹಲವು ವರ್ಷಗಳಿಂದ ತುಳು ನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 590 ಬರಹÜ ಬ್ಲಾಗ್‌ನಲ್ಲಿವೆ. ಈ ಸಂಶೋಧನಾ ಬ್ಲಾಗ್‌ ಜನಪ್ರಿಯವಾಗಿದ್ದು, ತುಳುನಾಡಿನ ಜನತೆಗೆ ಮಾತ್ರ ಸೀಮಿತವಾಗಿಲ್ಲ. ದೇಶ-ವಿದೇಶಗಳ 1.70 ಲಕ್ಷ ಕ್ಕಿಂತ ಹೆಚ್ಚಿನ ಬ್ಲಾಗ್‌ ಓದುಗರನ್ನು ಹೊಂದಿದೆ!. ಇಂಗ್ಲಿಷ್‌ನಲ್ಲೂ ಮಾಹಿತಿ: ಭೂತಾರಾಧನೆಯ ಉಪಯುಕ್ತ ಮಾಹಿತಿಯೊಂದಿಗೆ ಸಂಬಂಧಿಸಿದ ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಮಾಹಿತಿ ಪಡೆದಿದ್ದಾರೆ. ಅನೇಕ ಕನ್ನಡೇತರ ವಿದ್ವಾಂಸರ, ಜನರ ಕೋರಿಕೆಯಂತೆ ಇತ್ತೀಚೆಗೆ ತುಳುನಾಡಿನ ಭೂತಾರಾಧನೆ ಕುರಿತ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಕೂಡ ಆರಂಭಿಸಿದ್ದಾರೆ. ಡಾ.ಲಕ್ಷ್ಮಿ ಜಿ.ಪ್ರಸಾದ್‌ ಸಂಶೋಧನೆಯಲ್ಲಿ ಕಂಡುಕೊಂಡ ಅಪರೂಪದ ವಿಚಾರಗಳನ್ನು ಜನಸಾಮಾನ್ಯರಿಗೂ ಭೂತಗಳ ಅದ್ಭುತ ಜಗತ್ತು ಬ್ಲಾಗ್‌ ಮೂಲಕ ತಿಳಿಸುವಂತೆ ಮಾಡುತ್ತಿದ್ದು, ಭೂತಾರಾಧನೆಯಲ್ಲಿ ಅಡಕವಾಗಿರುವ ಇತಿಹಾಸದ ಎಳೆಗಳನ್ನು ಪತ್ತೆ ಮಾಡಿದ್ದಾರೆ. ಈ ತನಕ ಗೊತ್ತಿರದ 400ಕ್ಕೂ ಹೆಚ್ಚಿನ ದೈವಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತಹ ಹಲವಾರು ವಿಚಾರಗಳು ಬ್ಲಾಗ್‌ನಲ್ಲಿದೆ. ತುಳುನಾಡಿನ ಸಂಸ್ಕೃತಿ ಖಜಾನೆ: ಡಾ. ಲಕ್ಷ್ಮೀ ಜಿ.ಪ್ರಸಾದ್‌ ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಇವರ ಸುಮಾರು 20ಕ್ಕೂ ಅಧಿಕ ಪ್ರಕಟಿತ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷ ಣಿಕ,ವೈಚಾರಿಕ, ಸಂಶೋಧನ್ಮಾಕ ಬರಹಗಳು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬ್ಲಾಗ್‌ ಬರಹಗಳು ಕನ್ನಡ, ಇಂಗ್ಲಿಷ್‌ನಲ್ಲಿವೆ. 590 ಲೇಖನಗಳಿವೆ. ಕನ್ನಡ ಜನಪ್ರಿಯ ಬ್ಲಾಗ್‌ಗಳಲ್ಲಿ ಮುಂಚೂಣಿಯಲ್ಲಿದೆ. ಮಹಿಳೆಯರ ಬದುಕು, ಜಾನಪದ, ನಾನಾ ಭಾಷೆ ಸಾಹಿತ್ಯಗಳ ಬರಹಗಳೂ ಇದೆ. ಈ ಬ್ಲಾಗ್‌ ಮೂಲಕ ತುಳುನಾಡಿನ ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ಹಲವಾರು ವಿಚಾರ ಪಡೆಯಬಹುದು. ಬ್ಲಾಗ್‌ ಬರಹಗಳು ತನ್ನದೇ ಆದ ಓದುಗರನ್ನು ಹೊಂದಿದೆ. -ಡಾ. ಲಕ್ಷ್ಮೀ ಜಿ.ಪ್ರಸಾದ್‌