Tuesday 13 March 2018

‌ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 432 ಕೋಟ್ರಗುತ್ತಿನ ಬಬ್ಬು ದೈವ © ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 432 ಕೋಟ್ರಗುತ್ತಿನ ಬಬ್ಬು ದೈವ © ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನ ಪ್ರಸಿದ್ಧ ದೈವ ಕೋಟೆದ ಬಬ್ಬು ಮತ್ತು ಕೋಟ್ರಗುತ್ತಿನ ಬಬ್ಬು ದೈವಗಳು ಬೆರೆ ಬೇರೆಬೇರೆ ದೈವಗಳು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರ ಪ್ರದೇಶದ ಅಂಬಲ ಮೊಗರು ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವಿದೆ. ಇಲ್ಲಿ ಒಂದು ಅಪರೂಪದ ದೈವಕ್ಕೆ ಆರಾಧನೆ ಇದೆ.
ಹಿಂದೆ ತುಂಡರಸರ ಆಳ್ವಿಕೆ ಇದ್ದ ಕಾಲದಲ್ಲಿ ಬಬ್ಬು ಎಂಬ ಹೆಸರಿನ ದಲಿತ ಸಮುದಾಯದ ಯುವಕ ಅರಸರ ಎತ್ತುಗಳನ್ನು ನೋಡಿಕೊಳ್ಳುವ ಉಳುಮೆ ಮಾಡುವ ಕೆಲಸವನ್ನು ಮಾಡುತ್ತಾ ಇದ್ದನು.
ಒಂದು ದಿನ ಉಳುಮೆ ಮಾಡಲು ಇತ್ತು.ಆದರೂ ಬಬ್ಬು ಮರೆತು ಎತ್ತುಗಳನ್ನು ಗುಡ್ಡೆಗೆ ಮೇಯಲು ಬಿಡುತ್ತಾನೆ.
ಆಗ ಕೋಪಗೊಂಡ ಅರಸು ಆತನ ಹೆಗಲಿಗೆ ನೇಗಿಲು ಕಟ್ಟಿ ಉಳುಮೆ ಮಾಡಿಸುತ್ತಾನೆ.ಆಗ ಆ ಯುವಕ ಹಿಂಸೆ ತಾಳಲಾಗದೆ ಮಣ್ಣನ್ನು ಕಚ್ಚಿ ಶಾಪ ಹಾಕಿ ಸಾಯುತ್ತಾನೆ. ಅದರ ಪರಿಣಾಮವಾಗಿ ಆ ಅರಸುವಿನ ಸಂತತಿ ನಿರ್ವಂಶವಾಗುತ್ತದೆ.
ಹೀಗೆ ಅರಸು ದೌರ್ಜನ್ಯಕ್ಕೆ ತುತ್ತಾಗಿ ಮರಣವನ್ನಪ್ಪಿದ ಬಬ್ಬು ಮುಂದೆ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
ಈ ದೈವಕ್ಕೆ ಅಂಬಲ ಮೊಗರು ಲಕ್ಷ್ಮೀ ನರಸಿಂಹ ದೇವಾಲಯದ ಆವರಣದಲ್ಲಿ ಒಂದು ಸಣ್ಣ ಕಲ್ಲು,ಗುಡಿ ಇದೆ.ಇಲ್ಲಿ ನಿತ್ಯ ಈತನಿಗೆ ನೈವೇದ್ಯ ನೀಡಿ ಆರಾಧನೆ ನಡೆಯುತ್ತದೆ.
ಪ್ರಸ್ತುತ ಈ ದೈವದ ಹೆಸರು ಅಲ್ಲಿನವರಿಗೆ ತಿಳಿಯದೆ ಹೋದ ಕಾರಣವೋ ಅಥವಾ ಇನ್ಯಾವುದೊ ಕಾರಣಕ್ಕೆ ಅಲ್ಲಿ ಆತನನ್ನು ಬ್ರಹ್ಮ ರಾಕ್ಷಸ ಎಂದು ಪರಿಗಣಿಸಿದ್ದಾರೆ.ಮತ್ತು ಬ್ರಾಹ್ಮಣ ಸ್ವರೂಪೇೆಭ್ಯಃ ಎಂದು ಪರಿಕಲ್ಪಿಸಿ  ು ಆರಾಧನೆ   ಮಾಡುತ್ತಾರೆ .ಆದರೆ ಬ್ರಾಹ್ಮಣ ದುರ್ಮರಣವನ್ನಪ್ಪಿದರೆ ಮಾತ್ರ ಬ್ರಹ್ಮ ರಾಕ್ಷಸನಾಗುತ್ತಾನೆ.
ಆದರೆ ಇಲ್ಲಿ ದುರಂತವನ್ನಪ್ಪಿದಾತ ದಲಿತ ಸಮುದಾಯದ ಯುವಕ.ಆತನ ಮೂಲ ಹೆಸರು ಬಬ್ಬು ಎಂದು. ಹಾಗಾಗಿ ಈ ದೈವದ ಹೆಸರು ಕೂಡ ಬಬ್ಬು ಎಂದೇ ಆಗಿರಬೇಕು.
ಬಬ್ಬು ಎಂಬ ಪ್ರಸಿದ್ಧ ದೈವ ಇರುವ ಕಾರಣದಿಂದ  ಈ ದೈವದ ಹೆಸರಿನ ಬಗ್ಗೆ ಗೊಂದಲವಾಗಿರಬಹುದು.ಹರೇಕಳ ಸಮೀಪದಲ್ಲಿ ಒಂದು ಅಪರೂಪದ ದೈವಕ್ಕೆ ಆರಾಧನೆ ಇರುವ ಬಗ್ಗೆ ಪದ್ಮನಾಭ ಅವರು ಎರಡು ವರ್ಷಗಳ ಹಿಂದೆಯೇ ತಿಳಿಸಿದ್ದರು.ಆದರೂ  ಆ ಕಡೆಗೆ ಹೋಗಿ ಅಧ್ಯಯನ ಮಾಡಲು ಅವಕಾಶವಾಗಿರಲಿಲ್ಲ.ಕಳೆದ ವಾರ ಇರಾ - ತಿರುವೈಲಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ನಾಗೇಶ್ ಅವರು ಅಹ್ವಾನಿಸಿದ್ದರು.
ಹಾಗೆ ಊರಿಗೆ ಹೋದವಳು ಮಂಗಳೂರಿನಿಂದ ಅಟೋ ಹಿಡಿದು  ತೊಕ್ಕೊಟ್ಟು ಮಾರ್ಗವಾಗಿ ಅಂಬಲ ಮೊಗರು ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಹೋದೆ.
ಅಲ್ಲಿ ನ  ಸೇವಾಸಮಿತಿ ಕಾರ್ಯದರ್ಶಿ ಗಳಾದ ದಿವಾಕರ್ ಅವರ ಮೂಲಕ ಅಲ್ಲಿನ ಅರ್ಚಕರಾದ ಶಂಕರನಾರಾಯಣ ಭಟ್ಟರನ್ನು ಸಂಪರ್ಕಿಸಿ ಮಾಹಿತಿಯನ್ನು ಸಂಗ್ರಹಿಸಿದೆ.
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಪದ್ಮನಾಭ,ದಿವಾಕರ್ ಹಾಗೂ ಶಂಕರನಾರಾಯಣ ಭಟ್ ಅವರಿಗೆ ಧನ್ಯವಾದಗಳು© ಡಾ.ಲಕ್ಷ್ಮೀ ಜಿ ಪ್ರಸಾದ

Sunday 4 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು - 431 ಕೇಚ ರಾವುತ © ಡಾ.ಲಕ್ಷ್ಮೀ ಜಿ ಪ್ರಸಾದ

ರೇವಂತ ದೈವದ ಮೂರ್ತಿ ಚಿತ್ರ ಕೃಪೆ ಡಾ.ಇಂದಿರಾ ಹೆಗಡೆ 
ತುಳುನಾಡಿನ  ಉಡುಪಿ ಕುಂದಾಪುರ ಬಾರಕೂರು ಮೊದಲಾದ ಕನ್ನಡ ಪರಿಸರಗಳಲ್ಲಿ ರಾವು ಕೇಚ ರಾವುತ ಎಂಬ ದೈವಕ್ಕೆ ಆರಾಧನೆ ಇದೆ ‌ಕೇಚ ರಾವುತ ಕುದುರೆ ಏರಿದ ಖಡ್ಗ ಹಿಡಿದ ವೀರನನ್ನು ದ್ಯೋತಿಸುವ ಮೂರ್ತಿ ಎಂದು ಡಾ.ಲೀಲಾಭಟ್ ಅವರು ಹೇಳಿದ್ದಾರೆ‌.ರಾವುತನಿಗೆ ಕೋಲ ಕೊಟ್ಟು ಆರಾಧನೆ ಮಾಡುವ ಪದ್ಧತಿ ಮುದ್ದುಮನೆಯಲ್ಲಿ ನಡೆಯುವ ಪಾಣರಾಟದಲ್ಲಿ ಇರುವ ಬಗ್ಗೆ ಲತಾ ಸಂತೋಷ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ‌
ಆದರೆ ಈತ ಯಾರೆಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .
ಬಾರಕೂರಿನ ಪಂಚಲಿಂಗೇಶ್ವರ ದೆವಾಲಯದ ಹಿಂಭಾಗದಲ್ಲಿ ರೇವಂತ ದೈವದ ಗುಡಿ ಇದೆ ಎಂದು ಡಾ.ಇಂದಿರಾ ಹೆಗಡೆಯವರು ತಿಳಿಸಿದ್ದಾರೆ.
ಇಲ್ಲಿನ ರೇವಂತ ದೈವದ ಮೂರ್ತಿ ಕುದುರೆ ಏರಿದ್ದು ಕೈಯಲ್ಲಿ ಖಡ್ಗ ಹಿಡಿದಿದೆ.ಈತ ಬಾರಕೂರಿನ ಕಾವಲುಗಾರ ದೈವ ಎಂಬ ಐತಿಹ್ಯ ಪ್ರಚಲಿತವಿದೆ‌.ರಾವುತ ಕೇಚ ರಾವುತ ರಾಹುತ ರೇವಂತ ಎಲ್ಲವೂ ಒಂದೇ ದೈವದ ಹೆಸರುಗಳಾಗಿವೆ .
ವಾಸ್ತವದಲ್ಲಿ ಕೂಡ ಈತ ಅರಮನೆ ಕಾಯುವ ವೀರನಾಗಿದ್ದು ಯಾವುದಾದರೂ ಕಾರಣಕ್ಕೆ ದುರಂತವನ್ನಪ್ಪಿ ಅಥವಾ ಸ್ವಾಮಿ ನಿಷ್ಠೆಯ ಕಾರಣಕ್ಕೆ ಮರಣಾನಂತರ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ
ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಭೂತನಾಗರ ನಡುವೆ - ಡಾ.ಲೀಲಾ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಡಾ.ಇಂದಿರಾ ಹೆಗಡೆ 

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಬಾರಕೂರಿನ ದೇವ ಪಾಂಡ್ಯ ಸಮುದ್ರದ ವ್ಯಾಪಾರಕ್ಕಾಗಿ ಹಡಗನ್ನು ನಿರ್ಮಾಣ ಮಡುತ್ತಾನೆ.ಹಡಗಿನ ನಿರ್ಮಾಣಕ್ಕಾಗಿ‌ಕಡಿದ ಒಂದು ಮರದಲ್ಲಿ ಕುಂಡೋದರ ಎಂಬ ಭೂತ ವಾಸವಾಗಿರುತ್ತದೆ.ತಾನು ಇದ್ದ ಮರವನ್ನು ಕಡಿದುದಕ್ಕಾಗಿ ದೈವ ಕೋಪಗೊಳ್ಳುತ್ತದೆ.
ಹಡಗನ್ನು ಎಷ್ಟು ಪ್ರಯತ್ನ ಮಾಡಿದರೂ ಸಮುದ್ರಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ.ಆಗ ಚಿಂತಿಸುತ್ತಾ ಕುಳಿತ ದೇವ ಪಾಂಡ್ಯನಲ್ಲಿ  ನರಬಲಿಯನ್ನು ಕೇಳುತ್ತದೆ .

ಆಗ ತನ್ನ ಏಳು ಜನ ಮಕ್ಕಳಲ್ಲಿ ಒಬ್ಬನ್ನು ಬಲಿಕೊಡಲು ಸಿಧ್ದನಾಗುತ್ತಾನೆ
ಅದಕ್ಕೆ ಒಪ್ಪದ ಅವನ ಮಡದಿ‌ಮಕ್ಕಳನ್ನು ಕಟ್ಟಿಕೊಂಡು ತಂದೆ ಮನೆಗೆ ಹೋಗುತ್ತಾಳೆ
ಅಣ್ಣನ ಕಷ್ಟ ನೋಡಿದ ತಂಗಿ ತನ್ನ ಒಬ್ಬನೇ ಒಬ್ಬ ಮಗನನ್ನು ಬಲಿ ಕೊಡಲು ಹೇಳುತ್ತಾಳೆ ಮೊದಲಿಗೆ ಒಪ್ಪದೇ ಇದ್ದರೂ ನಂತರ ಅವ ಬಲವಂತಕ್ಕೆ ಅಳಿಯ ಜಯಪಾಂಡ್ಯನನ್ನು ಬಲಿಕೊಡಲು ಸಿದ್ಧನಾಗುತ್ತಾನೆ.
ಆಗ ಕುಂಡೋದರ ದೈವ ನರಬಲಿ ಬೇಡ ಎರಡು ಹನಿ ರಕ್ತ ಸಾಕು ಎನ್ನುತ್ತದೆ ಹಾಗೆ ಜಯಪಾಂಡ್ಯನ ಕಿರುಬೆರಳಿ‌ಇಂದ ಎರಡು ಹನಿ ರಕ್ತ ಬಲಿ ಕೊಡುತ್ತಾರೆ.
ಹಡಗು ಸಮುದ್ರಕ್ಕೆ ಇಳಿದು ವ್ಯಾಪಾರದಲ್ಲಿ ದೆವ ಪಾಂಡ್ಯ ತುಂಬಾ ಲಾಭ ಗಳಿಸುತ್ತಾನೆ
 ಎಲ್ಲವನ್ನೂ ತನ್ನ  ತಂಗಿ ಮಗ ಅಳಿಯ ಜಯಪಾಂಡ್ಯನಿಗೆ ನೀಡುತ್ತಾನೆ
 ಅಲ್ಲಿಂದ ತುಳುನಾಡಿನಲ್ಲಿ ಅಳಿಯ ಕಟ್ಟು ಬಳಕೆಗೆ ಬಂತು
 ಕುಂಡೋದರ ಭೂತ ಒಲಿದ ಕಾರಣ ಜಯ ಪಾಂಡ್ಯ ನಿಗೆ ಭೂತಾಳ ಪಾಂಡ್ಯ ಎಂಬ ಹೆಸರು ಬಂತು
 ಕುಂಡೋದರ ದೈವ ಶಿವನ ಪ್ರಮಥ ಗಣ ಎಂಬ ನಂಬಿಕೆ ಇದೆ
ಕುಂಡೋದರ ದೈವಕ್ಕೆ ಕೋಲ ನೀಡಿ ಕೆಲವೆಡೆ ಆರಾಧಿಸುತ್ತಾರೆ
ಡಾ.ಗುರುರಾಜ ಭಟ್ ಅವರು ಜಯ ಪಾಂಡ್ಯ ಮಧುರೆಯ ರಾಜ ವಂಶದವನು.ಆತನ ತಂದೆ ಸೌಮ್ಯವೀರ ಪಾಂಡ್ಯ ತಾಯಿ ಸತ್ಯವತಿ.ಈಕೆ ದೇವ ಪಾಂಡ್ಯನ ತಂಗಿ ಎಂದು ಹೇಳಿದ್ದಾರೆ‌.ಜಯ ಪಾಂಡ್ಯನ ತಂದೆ ಸೌಮ್ಯ ವೀರ ಪಾಂಡ್ಯನು ಕುಂಡೋದರ ದೈವದ ಭಕ್ತನಾಗಿದ್ದನು.ಹಾಗಾಗಿ ದೈವ ಅವನ ಮಗ ಜಯ ಪಾಂಡ್ಯ ನನ್ನು ಅನುಗ್ರಹಿಸಿತು‌.ನರಬಲಿ ಬೇಡವೆಂದು ಹೇಳುತ್ತದೆ ಮತ್ತು ದೇವ ಪಾಂಡ್ಯ ನ ಎಲ್ಲ ಸಂಪತ್ತಿಗೆ ಜಯಪಾಂಡ್ಯನನ್ನು ಹಕ್ಕುದಾರನನ್ನಾಗಿಸಿ ಅಳಿಯ ಕಟ್ಟು ಪದ್ದತಿಯನ್ನು ಜಾರಿಗೆ ತರುವ ಹಾಗೆ ಮಾಡುತ್ತದೆ‌
"ಜಯ ಪಾಂಡ್ಯ/ಭೂತಾಳ ಪಾಂಡ್ಯನು ಕುಂಡೋದರ ದೈವದ ಸಹಾಯದಿಂದ ಸಿದ್ಧವರ್ಮನೆಂಬ ಅರಸನನ್ನು ಯುದ್ಧದಲ್ಲಿ ಸೋಲಿಸಿ ಬಾರಕೂರಿನ ಅರಸನಾದನು. ಇವನ ಸಂತತಿಯವರು ದೀರ್ಘಕಾಲ ಬಾ ರಕೂರಿನಲ್ಲಿ ಆಳ್ವಿಕೆ ಮಾಡುತ್ತಾರೆ ಇವನ ಕಾಲದಿಂದ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಜಾರಿಗೆ ಬರುತ್ತದೆ. ಮುಂದೆ ಕುಂಡೋದರ ಭೂತ ಶಿವನ ಸಭಗೆ ಹೋಗಿ ಶಿವನಿಂದ ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನವನ್ನು ಕೇಳಿ ಪಡೆದು ಆ ಸಿಂಹಾಸನದಲ್ಲಿ ಭೂತಾಳಪಾಂಡ್ಯನಿಗೆ ಪಟ್ಟ ಕಟ್ಟುತ್ತದೆ. (ಕ್ರಿ.ಶ. 77-148) ಹಾಗೂ ಮುಂದೆ ಜಯಪಾಂಡ್ಯನು ಅಳಿಯ ಕಟ್ಟು ಕಟ್ಟಲೆಗನ್ನು ರಚಿಸುತ್ತಾನೆ. (ಗುರುರಾಜ ಭಟ್ :ಬಾರಕೂರು ಪು.41-44) ಭೂತಾಳಪಾಂಡ್ಯನು ಕುಂಡೋದರನಿಗೆ ಗುಡಿಯೊಂದನ್ನುಕಟ್ಟಿಸಿದನು......” ಎಂದು ಡಾ.ಗುರುರಾಜ ಭಟ್ ಹೇಳಿದ್ದಾರೆ.

ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ. ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು. ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರರ್ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ‘ಬೆರ್ಮೆರ್’ ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ‘ಬ್ರಹ್ಮ’ನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ‘ಬೆರ್ಮೆರ್’ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ‘ಬೆರ್ಮೆರ್’ ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ‘ಬೆರ್ಮೆರ್’ ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.

ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಬಾರಕೂರು - ಡಾ.ಗುರುರಾಜ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಒಂದು ಅಧ್ಯಯನ © ಡಾ‌ಇಂದಿರಾ ಹೆಗಡೆ
http://tuluculture.blogspot.in/2014/11/blog-post_1.html?m=1
ಭೂತಾಳ ಪಾಂಡ್ಯನ ಕುರಿತಾದ ಪ್ರಚಲಿತ ಐತಿಹ್ಯಗಳು
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ- ಡಾ.ಲಕ್ಷ್ಮೀ ಜಿ ಪ್ರಸಾದ

http://laxmipras.blogspot.in/2018/03/430.html?m=1

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಕುಂಡೋದರ/ ಮಹಿಷಾಸುರ ದೈವ: ಚಿತ್ರ ಕೃಪೆ-©ಡಾ.ಇಂದಿರಾ ಹಗಡೆ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಬಾರಕೂರಿನ ದೇವ ಪಾಂಡ್ಯ ಸಮುದ್ರದ ವ್ಯಾಪಾರಕ್ಕಾಗಿ ಹಡಗನ್ನು ನಿರ್ಮಾಣ ಮಡುತ್ತಾನೆ.ಹಡಗಿನ ನಿರ್ಮಾಣಕ್ಕಾಗಿ‌ಕಡಿದ ಒಂದು ಮರದಲ್ಲಿ ಕುಂಡೋದರ ಎಂಬ ಭೂತ ವಾಸವಾಗಿರುತ್ತದೆ.ತಾನು ಇದ್ದ ಮರವನ್ನು ಕಡಿದುದಕ್ಕಾಗಿ ದೈವ ಕೋಪಗೊಳ್ಳುತ್ತದೆ.
ಹಡಗನ್ನು ಎಷ್ಟು ಪ್ರಯತ್ನ ಮಾಡಿದರೂ ಸಮುದ್ರಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ.ಆಗ ಚಿಂತಿಸುತ್ತಾ ಕುಳಿತ ದೇವ ಪಾಂಡ್ಯನಲ್ಲಿ  ನರಬಲಿಯನ್ನು ಕೇಳುತ್ತದೆ .

ಆಗ ತನ್ನ ಏಳು ಜನ ಮಕ್ಕಳಲ್ಲಿ ಒಬ್ಬನ್ನು ಬಲಿಕೊಡಲು ಸಿಧ್ದನಾಗುತ್ತಾನೆ
ಅದಕ್ಕೆ ಒಪ್ಪದ ಅವನ ಮಡದಿ‌ಮಕ್ಕಳನ್ನು ಕಟ್ಟಿಕೊಂಡು ತಂದೆ ಮನೆಗೆ ಹೋಗುತ್ತಾಳೆ
ಅಣ್ಣನ ಕಷ್ಟ ನೋಡಿದ ತಂಗಿ ತನ್ನ ಒಬ್ಬನೇ ಒಬ್ಬ ಮಗನನ್ನು ಬಲಿ ಕೊಡಲು ಹೇಳುತ್ತಾಳೆ ಮೊದಲಿಗೆ ಒಪ್ಪದೇ ಇದ್ದರೂ ನಂತರ ಅವ ಬಲವಂತಕ್ಕೆ ಅಳಿಯ ಜಯಪಾಂಡ್ಯನನ್ನು ಬಲಿಕೊಡಲು ಸಿದ್ಧನಾಗುತ್ತಾನೆ.
ಆಗ ಕುಂಡೋದರ ದೈವ ನರಬಲಿ ಬೇಡ ಎರಡು ಹನಿ ರಕ್ತ ಸಾಕು ಎನ್ನುತ್ತದೆ ಹಾಗೆ ಜಯಪಾಂಡ್ಯನ ಕಿರುಬೆರಳಿ‌ನಿಇಂದ ಎರಡು ಹನಿ ರಕ್ತ ಬಲಿ ಕೊಡುತ್ತಾರೆ.
ಹಡಗು ಸಮುದ್ರಕ್ಕೆ ಇಳಿದು ವ್ಯಾಪಾರದಲ್ಲಿ ದೆವ ಪಾಂಡ್ಯ ತುಂಬಾ ಲಾಭ ಗಳಿಸುತ್ತಾನೆ
 ಎಲ್ಲವನ್ನೂ ತನ್ನ  ತಂಗಿ ಮಗ ಅಳಿಯ ಜಯಪಾಂಡ್ಯನಿಗೆ ನೀಡುತ್ತಾನೆ
 ಅಲ್ಲಿಂದ ತುಳುನಾಡಿನಲ್ಲಿ ಅಳಿಯ ಕಟ್ಟು ಬಳಕೆಗೆ ಬಂತು © ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 ಕುಂಡೋದರ ಭೂತ ಒಲಿದ ಕಾರಣ ಜಯ ಪಾಂಡ್ಯ ನಿಗೆ ಭೂತಾಳ ಪಾಂಡ್ಯ ಎಂಬ ಹೆಸರು ಬಂತು
 ಕುಂಡೋದರ ದೈವ ಶಿವನ ಪ್ರಮಥ ಗಣ ಎಂಬ ನಂಬಿಕೆ ಇದೆ
ಈ ಕಥಾನಕಕ್ಕೆ ಹಲವು ಪಾಠಾಂತರಗಳಿವೆ ಆದರೂ ಮೂಲ ಆಶಯ / ಕಥೆ ಇದೇ ಅಗಿದೆ,ವಿವರಣೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ.

ಕುಂಡೋದರ ದೈವಕ್ಕೆ ಕೋಲ ನೀಡಿ ಕೆಲವೆಡೆ ಆರಾಧಿಸುತ್ತಾರೆ
ಡಾ.ಗುರುರಾಜ ಭಟ್ ಅವರು ಜಯ ಪಾಂಡ್ಯ ಮಧುರೆಯ ರಾಜ ವಂಶದವನು.ಆತನ ತಂದೆ ಸೌಮ್ಯವೀರ ಪಾಂಡ್ಯ ತಾಯಿ ಸತ್ಯವತಿ.ಈಕೆ ದೇವ ಪಾಂಡ್ಯನ ತಂಗಿ ಎಂದು ಹೇಳಿದ್ದಾರೆ‌.ಜಯ ಪಾಂಡ್ಯನ ತಂದೆ ಸೌಮ್ಯ ವೀರ ಪಾಂಡ್ಯನು ಕುಂಡೋದರ ದೈವದ ಭಕ್ತನಾಗಿದ್ದನು.ಹಾಗಾಗಿ ದೈವ ಅವನ ಮಗ ಜಯ ಪಾಂಡ್ಯ ನನ್ನು ಅನುಗ್ರಹಿಸಿತು‌.ನರಬಲಿ ಬೇಡವೆಂದು ಹೇಳುತ್ತದೆ ಮತ್ತು ದೇವ ಪಾಂಡ್ಯ ನ ಎಲ್ಲ ಸಂಪತ್ತಿಗೆ ಜಯಪಾಂಡ್ಯನನ್ನು ಹಕ್ಕುದಾರನನ್ನಾಗಿಸಿ ಅಳಿಯ ಕಟ್ಟು ಪದ್ದತಿಯನ್ನು ಜಾರಿಗೆ ತರುವ ಹಾಗೆ ಮಾಡುತ್ತದೆ‌
"ಜಯ ಪಾಂಡ್ಯ/ಭೂತಾಳ ಪಾಂಡ್ಯನು ಕುಂಡೋದರ ದೈವದ ಸಹಾಯದಿಂದ ಸಿದ್ಧವರ್ಮನೆಂಬ ಅರಸನನ್ನು ಯುದ್ಧದಲ್ಲಿ ಸೋಲಿಸಿ ಬಾರಕೂರಿನ ಅರಸನಾದನು. ಇವನ ಸಂತತಿಯವರು ದೀರ್ಘಕಾಲ ಬಾ ರಕೂರಿನಲ್ಲಿ ಆಳ್ವಿಕೆ ಮಾಡುತ್ತಾರೆ ಇವನ ಕಾಲದಿಂದ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಜಾರಿಗೆ ಬರುತ್ತದೆ. ಮುಂದೆ ಕುಂಡೋದರ ಭೂತ ಶಿವನ ಸಭಗೆ ಹೋಗಿ ಶಿವನಿಂದ ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನವನ್ನು ಕೇಳಿ ಪಡೆದು ಆ ಸಿಂಹಾಸನದಲ್ಲಿ ಭೂತಾಳಪಾಂಡ್ಯನಿಗೆ ಪಟ್ಟ ಕಟ್ಟುತ್ತದೆ. (ಕ್ರಿ.ಶ. 77-148) ಹಾಗೂ ಮುಂದೆ ಜಯಪಾಂಡ್ಯನು ಅಳಿಯ ಕಟ್ಟು ಕಟ್ಟಲೆಗನ್ನು ರಚಿಸುತ್ತಾನೆ. (ಗುರುರಾಜ ಭಟ್ :ಬಾರಕೂರು ಪು.41-44) ಭೂತಾಳಪಾಂಡ್ಯನು ಕುಂಡೋದರನಿಗೆ ಗುಡಿಯೊಂದನ್ನುಕಟ್ಟಿಸಿದನು......” ಎಂದು ಡಾ.ಗುರುರಾಜ ಭಟ್ ಹೇಳಿದ್ದಾರೆ.

ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ. ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು.© ಡಾ.ಲಕ್ಷ್ಮೀ ಜಿ ಪ್ರಸಾದ್ 
 ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರರ್ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ‘ಬೆರ್ಮೆರ್’ ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ‘ಬ್ರಹ್ಮ’ನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ‘ಬೆರ್ಮೆರ್’ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ‘ಬೆರ್ಮೆರ್’ ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ‘ಬೆರ್ಮೆರ್’ ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.

ಕುಂಡೋದರ ದೈವಕ್ಕೆ ಬಾರಕೂರಿನ ಸಿಂಹಾಸನ ಗುಡ್ಡದಲ್ಲಿ ಒಂದು ಗುಡಿ ಇದೆ .ಈ ಗುಡಿಯ ಬಗ್ಗೆ ಗುರುರಾಜ ಭಟ್ಟ್ ಅವರು“ಮಹಿಷಾಸುರ ದೇಗುಲದ ರೇವಂತ (ಕ್ರಿ.ಶ. 10-12ನೇ ಶತಕ) - ಇದೊಂದು ಮೂರು ಅಡಿ ಎತ್ತರದ ಶಿಲ್ಪ. ಕುದುರೆಯ ಮೇಲೆ ಸವಾರಿ ಮಾಡಿಕೊಂಡ ರೇವಂತನ ನಿರ್ದೇಶನವೂ ಕುದುರೆಯ ನಿರ್ದೇಶನವೂ ಚೈತನ್ಯ ಪೂರ್ಣವಾಗಿವೆ.  ಕುದುರೆಯ ಮುಂಗಾಲಿನ ಕೈಕೆಳಗೆ ಹುಲಿಯ ನಿರ್ದೇಶನವಿದೆ. ಕುಂಡೋದರ ಮತ್ತು ಭೂತಾಳ ಪಾಂಡ್ಯರಾಯನಿಗೆ ಸಂಬಂಧಿಸಿದ ಕತೆಗೂ ಈ ದೇಗುಲಕ್ಕೂ ಸಂಬಂಧವಿದೆ ಎಂದು ಪ್ರತೀತಿ. ಆದರೆ ಈ ಬಿಂಬವು ಜೈನ ಬ್ರಹ್ಮನಂತೆ ಕಂಡು ಬರುತ್ತದೆ. ಇಲ್ಲಿಯೇ ಮರದಿಂದ ಮಾಡಿದ ಪಂಚ ಮುಖ ನಂದಿಯೂ ಒಂದು ಕೋಡಿನಿಂದ ಕೂಡಿದ ನಂದಿಯೂ ಇವೆ. ಈ ದೇಗುಲವು ಈಗ ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡಿದೆ.” ( ಬಾರ್ಕೂರು ಪು. 34.)”  ಎಂದು ಹೇಳಿದ್ದಾರೆ.ಆದರೆ ರೇವಂತನ ಮೂರ್ತಿಗೂ ಮಹಿಷಾಸುರನ‌ಮೂರ್ತಿಗೂ ವ್ಯತ್ಯಾಸ ಇದೆ ಎಂದು ಡಾ.ಇಂದಿರಾ ಹೆಗಡೆಯವರು ಹೇಳಿದ್ದಾರೆ.

ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಬಾರಕೂರು - ಡಾ.ಗುರುರಾಜ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಒಂದು ಅಧ್ಯಯನ © ಡಾ‌.ಇಂದಿರಾ ಹೆಗಡೆ
http://tuluculture.blogspot.in/2014/11/blog-post_1.html?m=1
ಭೂತಾಳ ಪಾಂಡ್ಯನ ಕುರಿತಾದ ಪ್ರಚಲಿತ ಐತಿಹ್ಯಗಳು
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ- ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುವಿನಲ್ಲಿ ಕಾಜಿ ಎಂದರೆ ಬಳೆ ಎಂದರ್ಥ.ಇಲ್ಲಿ ಬಳೆ ಮಾರುವ ಮಹಿಳೆಯರು ಇದ್ದಾರೆ.ಇವರನ್ನು ಕಾಜಿಗಾರ್ತಿ ಎಂದು ತುಳುವಿನಲ್ಲಿ ಕರೆಯುತ್ತಾರೆ.
ಈ ದೈವದ ಹೆಸರೇ ಸೂಚಿಸುವಂತೆ ಇದು ಮೂಲತಃ ಮಾನವ ಮೂಲದ ದೈವತ.ಬಳೆಗಾರರ ಸಮುದಾಯದ ಮಹಿಳೆ.
ತುಳುನಾಡಿನಲ್ಲಿ ಯಾರಿಗೆ ಯಾವಾಗ ಯಾಕೆ ದೈವತಗವ ಸಿಗುತ್ತದೆ ಎಮಬುದಕ್ಕೆ ಇದಮಿತ್ಥಂ ಎಂದು ಹೇಳ ಬಹುದಾದ ಸಿದ್ಧ ಸೂತ್ರವಿಲ್ಲ.
ಅಪ್ರತಿಮ ಸಾಹಸ ಮೆರೆದ ಅತಿ ಮಾನುಷ ವ್ಯಕ್ತಿಗಳು ದೈವಗಳಾಗಿದ್ದಾರೆ.ಅಂತೆಯೇ ವರ್ಗ ಜಾತಿ ತಾರತಮ್ಯ ವನ್ನು ಪ್ರಶ್ನಿಸಿದವರು ಪ್ರಧಾನ ದೈವಗಳ ಕೋಪಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಇಂತಹ ಯಾವುದೇ ಕಾರಣ ಇಲ್ಲದೇ ಇರುವ ಸಾಮಾನ್ಯರು ಕೂಡ ಪ್ರಧಾನ ದೈವದ ದೃಷ್ಟಿ ತಾಗಿ ಮಾಯಕ ಹೊಂದಿ ಅದೇ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ. ಕಬಕ ಬೈಪ್ಪದವಿನಲ್ಲಿ ಅಣ್ಣಪ್ಪ ಪಂಜುರ್ಲಿಯ ದೃಷ್ಟಿ ಬಿದ್ದು ಮಲೆ ಕುಡಿಯರ ಎಳೆಯ ಹುಡುಗಿ ಕುಂಞಿ ಕೆರೆಗೆ ಸ್ನಾನಕ್ಕೆ ಹೋದವಳು ಮಾಯಕ ಹೊಂದಿ ಅಣ್ಣಪ್ಪ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.ಅದೇ ರೀತಿ ಹರಿಕೆ ತೀರಿಸಲು ಬಂದ ಸುಂದರ ಯುವತಿ ದಾರುವಿನ ಮೇಲೆ ದೃಷ್ಟಿ ಇಟ್ಟ ವರ್ನಾರ ಪಂಜುರ್ಲಿ ಆಕೆಯನ್ನು ಹಿಂಬಾಲಿಸಿ ಮಾಯಕ ಮಾಡಿ ತನ್ನ ಸೇರಿಗೆಗೆ ಸಮದಾಯ ಮಾಡಿಕೊಳ್ಳುತ್ತದೆ‌ ದಾರು ಮತ್ತು ಆಕೆಯ ತಮ್ಮ ಕುಂದಯ ಇಬ್ಬರೂ ಕೂಡ ವರ್ನಾರ ಮರ್ಲೆ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಹಾಗೆಯೇ ಕಾಜಿಗಾರ್ತಿ ದೈವದ ಹಿನ್ನೆಲೆಯಲ್ಲಿ ಕೂಡ ಇಂತಹದುದೇ ಕಥಾನಕ ಪ್ರಚಲಿತವಿದೆ.
ಕಲ್ಲಡ್ಕ ಸಮೀಪ ಲಕ್ಷ್ಮೀ ಕೆರೆ ಎಂಬ ಕೆರೆ ಇದೆ‌.ಇಲ್ಲಗೆ ಸಮೀಪದಲ್ಲಿ ಪಂಜುರ್ಲಿ ದೈವದ ಕೋಲ ಆಗುತ್ತಾ ಇರುತ್ತದೆ‌.ಆಗ ಕೆರೆ ಸಮೀಪದಲ್ಲಿ ಬಳೆ ಮಾರುತ್ತಾ ಓರ್ವ ಮಹಿಳೆ ಬರುತ್ತಾಳೆ.ಅ ಸಮಯದಲ್ಲಿ ಎದ್ದು ನಿಂತು ಪಂಜುರ್ಲಿ ದೈವ ಈ ಕಾಜಿಗಾರ್ತಿ ಮೇಲೆ ದೃಷ್ಟಿ ಇಡುತ್ತದೆ‌.ಆಗ ಅ ಬಳೆ ಮಾರುವ ಮಹಿಳೆ ಲಕ್ಷ್ಮೀ ಕೆರೆಯಲ್ಲಿ ಮಾಯಕ ಹೊಂದಿ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಕಾಜಿಗಾರ್ತಿ ದೈವವಾಗಿ ಆರಾಧನೆ ಪಡೆಯುತ್ತಾಳೆ.
 ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳು.ಲಕ್ಷ್ಮೀ ಕೆರೆಯಲ್ಲಿ ಮುಳುಗಿಯೊ ಇನ್ನೆನೋ ಆಗಿ ದುರಂತವನ್ನಪ್ಪಿದ ಸಮಯದಲ್ಲಿ ಪಂಜುರ್ಲಿ ದೈವದ ಕೋಲ ನಡೆಯುತ್ತಿದ್ದು ,ದೈವದ ಕಾರಣಿಕದಿಂದ ಅಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು.
ಮಾಹಿತಿ ನೀಡಿದ ನಿತೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ

Friday 2 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 428 ಕನ್ನಡ ಕಲ್ಕುಡ - ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 428 ಕನ್ನಡ ಕಲ್ಕುಡ - ಡಾ.ಲಕ್ಷ್ಮೀ ಜಿ ಪ್ರಸಾ
ತುಳುನಾಡಿನ ಭೂತಾರಾಧನೆ ಬಹಳ ವಿಶಿಷ್ಟವಾದುದು‌.ಒಂದೇ ಭೂತಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ. ಹಾಗೆಯೇ ಒಂದೇ ಹೆಸರಿನಲ್ಲಿ ಬೇರೆ ಬೇರೆ ಭೂತಗಳಿಗೂ ಆರಾಧನೆ ಇರುವುದು ನನ್ನ ಕ್ಷೇತ್ರಕಾರ್ಯದಲ್ಲಿ ಅನೇಕೆಡೆಗಳಲ್ಲಿ ಕಂಡುಬಂದಿದೆ.
ಉದಾಹರಣೆಗೆ ಐದು ಪುರುಷ ಭೂತಗಳ ಮಾಹಿತಿ ನನ್ನ ಅಧ್ಯಯನದಲ್ಲಿ ಸಿಕ್ಕಿದೆ.ಕನ್ನಡ ಯಾನೆ ಪುತುಷ ಭೂತ,ಜೋಗಿ ಪುರುಷ,ಗರೊಡಿಯ ಪುರುಷರಾಯ,ಕಾಂಬೋಡಿದ ಪುರ್ಸ ಬೂತ,ಬರಾಯ ಅರಮನೆಯ ಪುರುಷರಾಯ, ಇವೆಲ್ಲವೂ ಒಂದೇ ಹೆಸರನ್ನು ಹೊಂದಿದ್ದರೂ ಬೇರೆ ಬೇರೆ ಶಕ್ತಿಗಳಾಗಿವೆ.ಹಾಗೆಯೇ ಮಂಡೆಕಾರ ಕಲ್ಲುರ್ಟಿ ಮತ್ತು ಕಲ್ಲುರ್ಟಿ ಬೇರೆ ಬೇರೆ ದೈವಗಳಾಗಿವೆ‌.ಕಾರ್ಕಳದ ಬಾಹುಬಲಿ ವಿಗ್ರಹವನ್ನು ಕೆತ್ತಿದ,ಕಾರ್ಕಳದ ಭೈರವರಸನ ದೌರ್ಜನ್ಯಕ್ಕೆ ತುತ್ತಾಗಿ ಕೈ ಕಾಲುಗಳನ್ನು ಕಳೆದು ಕೊಂಡು ದುರಂತವನ್ನಪ್ಪಿದ ಬೀರು ಕಲ್ಕುಡ ಎಂಬ ಶಿಲ್ಪಿ ದೈವತ್ವ ಪಡೆದು ಕಲ್ಕುಡ ಎಂಬ ದೈವವಾಗಿ ಎಲ್ಲೆಡೆ ಆರಾಧನೆ ಇರುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಆದರೆ ಕಾರ್ಕಳ ಪೇಟೆಯ ಅನಂತ ಪದ್ಮನಾಭ ದೇವಾಲಯದಲ್ಲಿ ಕನ್ನಡ ಕಲ್ಕುಡ ಎಂಬ ಹೆಸರಿನ ದೈವವಿದೆ‌.ಕಲ್ಕುಡ ಎಂದರೆ ಕಲ್ಲು ಕುಟ್ಟುವ/ ಕೆತ್ತುವಾತ ಎಂದರ್ಥ ,ಶಿಲ್ಪಿಗಳಿಗೆ ತುಳುವಿನಲ್ಲಿ ಕಲ್ಕುಡ ಎನ್ನುತ್ತಾರೆ.
ಕನ್ನಡ ಕಲ್ಕುಡ ಎಂಬ ದೈವ ಮೂಲತಃ ಘಟ್ಟದ ಮೇಲಿನಿಂದ ವಿಜಯ ನಗರದ ಅರಸರು ಕಳುಹಿಸಿಕೊಟ್ಟ ಶಿಲ್ಪಿ ಇರಬೇಕು‌.ಆತನ ಹೆಸರು ಮರೆಯಾಗಿ ಆತ ಕನ್ನಡಿಗನಾದ್ದರಿಂದ ಆತ ದೈವತ್ವ ಪಡೆದಾಗ ಅವನ ಹೆಸರು ಕನ್ನಡ ಕಲ್ಕುಡ ಎಂದಾಗಿದೆ.
ಹರೀಶ್ ಕುಮಾರ್ ಕಾರ್ಕಳ ಅವರು ಕನ್ನಡ ಕಲ್ಕುಡ ದೈವದ ಬಗ್ಗೆ ಮಾಹಿತಿ ನೀಡಿ ಚಿತ್ರವನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ‌.
ವಿಜಯ ನಗರದ ಅರಸರು ರಕ್ಕಸ ತಂಗಡಿ ಯುದ್ಧದಲ್ಲಿ ಗೆದ್ದರೆ ಒಂದು ಅನಂತ ಪದ್ಮನಾಭ ದೇವಾಲಯವನ್ನು ಕಟ್ಟಿಸುವುದಾಗಿ ಹರಿಕೆ ಹೇಳಿಕೊಂಡಿದ್ದರು .ಅದಕ್ಕಾಗಿ ವಿಗ್ರಹವನ್ನು ಕೆತ್ತಲು ಓರ್ವ ಶಿಲ್ಪಿಯನ್ನು ಕಾರ್ಕಳದ ನೆಲ್ಲಿಕಾರಿಗೆ ಕಳಹಿಸಿ ವಿಗ್ರಹ ಕೆತ್ತಿಸಿದರು‌.ನೆಲ್ಲಿಕಾರಿನಲ್ಲಿ ಸಿಗುವ ಬರಹತ್ ಕಲ್ಲುಗಳು ವಿಗ್ರಹ ಕೆತ್ತನೆಗೆ ಬಹಲ ಸೂಕ್ತವಾಗಿವೆ‌.
ಆದರೆ ರಕ್ಕಸ ತಂಗಡಿ ಯುದ್ಧದಲ್ಲಿ ವಿಜಯ ನಗರದ ಅರಸರಿಗೆ ಸೋಲಾಗುತ್ತದೆ‌.ಹಾಗಾಗಿ ಆ ವಿಗ್ರಹವನ್ನು ಹರಿಯಪ್ಪನ ಕೆರೆಯಲ್ಲಿ ಅಡಗಿಸಿ ಇಡುತ್ತಾರೆ.
ಮುಂದೆ ಒಂದು ದಿನ ಕಾರಗಕಳಕ್ಕೆ ಶೃಂಗೇರಿಯ ಸ್ವಾಮಿಗಳು ಬರುತ್ತಾರೆ‌.ಅವರಿಗಾಗಿ ಅಲ್ಲಿ ಇದ್ದ ಬಸದಿಯಲ್ಲಿ ಈ  ಅನಂತ ಶಯನನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ‌.ಅದು ಮುಮದೆ ಅನಂತ ಪದ್ಮನಾಭ ದೆವಾಲಯವೆಮದು ಪ್ರಸಿದ್ಧಿ ಪಡೆಯುತ್ತದೆ ಬಸದಿಯನ್ನು ಮಾರ್ಪಡಿಸಿದ್ದು ತಿಳಿದ ಸ್ವಾಮೀಜಿಗಳು ಅಲ್ಲಿಯೇ ಸಮೀಪದಲ್ಲಿ ಒಂದು ಚತುರ್ಮುಖ ಬಸದಿ ನಿರ್ಮಾಣಮಾಡುವಂತೆ ತಿಳಿಸುತ್ತಾರೆ‌.
ಇಲ್ಲಿ ಅನಂತ ಶಯನನ ವಿಗ್ರಹವನ್ನು ಕೆತ್ತಿದ ಶಿಲ್ಪಿ ಮರಣಾನಂತರ ಕೂಡ ಅದನ್ನು ಕಾಯುತ್ತಿರುತ್ತಾನೆ‌.ಅದನ್ನು ಪ್ರತಿಷ್ಠಾಪಿಸಲು ತಂದಾಗ ಅವನು ಕೂಡ ಜೊತೆಯಲ್ಲಿ ಬರುತ್ತಾನೆ‌.ಅವನಿಗೆ ದೈವಿಕ ನೆಲೆಯಲ್ಲಿ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ಇಲ್ಲಿ ಪ್ರತಿವರ್ಷ ರಾಮನವಮಿಯಂದು ಸಣ್ಣ ಜಾತ್ರೆ ಅದರ ಮರುದಿನ ದೊಡ್ಡ ಜಾತ್ರೆ ನಡೆಯುತ್ತದೆ.
ಅದರ ಮರುದಿನ ಏಕಾದಶಿಯಂದು ಕನ್ನಡ ಕಲ್ಕುಡ ಮತ್ತು ಕುಕ್ಕಿನಂತಾಯ ದೈವಗಳಿಗೆ ಕೋಲ ಕೊಟ್ಟು ಆರಾಧನೆ ಮಾಡುತ್ತಾರೆ.
ಇಲ್ಲಿ ಕನ್ನಡ ಕಲ್ಕುಡ ಮೂಕ ಎಮದರೆ ಮಾತನಾಡದೆ ಇರುವ ದೈವ.ಇದರ ಬಗ್ಗೆ ಕೂಡ ಒಂದು ಐತಿಹ್ಯ ಇತುವ ಬಗ್ಗೆ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಅಲ್ಲಿ ಸಮೀಪದಲ್ಲಿ ಪದ್ಮಾವತಿ ದೇವಾಲಯವನ್ನು ನಿರ್ಮಾಣ ಮಾಡುವಾಗ ಕನ್ನಡ ಕಲ್ಕುಡ ದೈವ ತುಂಬಾ ಕಾಟ ಕೊಡುತ್ತಾನೆ‌ಆಗ ಅವರು ಮಂತ್ರವಾದಿಗಳನ್ನು ಕರೆಸಿ ದಿಗ್ಭಂಧನ ಮಾಡಿ ಕನ್ನಡ ಕಲ್ಕುಡ ಬಾಯಿತೆರೆಯದಂತೆ ಮಾಡುತ್ತಾರೆ
ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ.
ಫೋಟೋ ಮತ್ತು ಮಾಹಿತಿ ನೀಡಿದ ಹರೀಶ್ ಕುಮಾರ್ ಕಾರ್ಕಳ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು
- ಡಾ.ಲಕ್ಷ್ಮೀ ಜಿ ಪ್ರಸಾದ

Tuesday 27 February 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 427 ಕೀಳು ದೈವ- ಡಾ.ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಉತ್ತರಿಸುವುದು ಕಷ್ಟದ ವಿಚಾರ
ತುಳು‌ಮಲೆಯಾಳ ಕೊಡವ ಕನ್ನಡ ಪರಿಸರದ ದೈವಗಳ ಪಟ್ಟಿಯನ್ನು ನಾನು ಮಾಡಿದ್ದು 1526 ಹೆಸರುಗಳು ಸಿಕ್ಕಿವೆ ಇದರಲ್ಲಿನ 1435 ದೈವಗಳ ಹೆಸರಿನ  ಪಟ್ಟಿ ಅಣಿಅರದಳ ಸಿರಿ ಸಿಂಗಾರ ಕೃತಿಯಲ್ಲಿ ಪ್ರಕಟವಾಗಿದೆ.1526.ಕೂಡ ಅಂತಿಮವಲ್ಲ .
ಕ್ಷೇತ್ರಕಾರ್ಯಕ್ಕೆ ಹೋದಂತೆಲ್ಲಾ ಹೊಸ ಹೊಸ ಹೆಸರುಗಳು ಸಿಕ್ಕುತ್ತಾ ಇವೆ‌.
ಫೇಸ್ ಬುಕ್ ಮೂಲಕ ಪರಿಚಿತರಾದ  ರಾಜ್ಬೇ ಕೆ ಶೆಟ್ಟಿ ಳಂಜೆಯವರು ಅವರ ಪರಿಸರದಲ್ಲಿ ಆರಾಧನೆ ಆಗುವ ಕೀಳು ಎಂಬ ಹೆಸರಿನ ದೈವದ ಬಗ್ಗೆ ತಿಳಿಸಿದ್ದಾರೆ.
ಕೀಳು ಎಂದರೆ ಇಲ್ಲಿ ತುಚ್ಛ ಕೆಳಮಟ್ಟ ಎಂಬರ್ಥವಲ್ಲ.ಕೇಳು ,ಕೀಳು ಇತ್ಯಾದಿ ಹೆಸರುಗಳು ತುಳುನಾಡಿನಲ್ಲಿ ಇದ್ದವು.ಪ್ರಸ್ತುತ ಅವುಗಳ ಮೂಲ ಅರ್ಥ ಕಳೆದುಹೋಗಿದೆ.
ಕೀಳು ಎಂಬುದು ಹೆಬ್ರಿ ಬೇಳಂಜೆ ಪರಿಸರದ ಓರ್ವ ಮಹಿಳೆಯ ಹೆಸರು.ಈಕೆ ಆ ಪರಿಸರದಲ್ಲಿ ವಾಸವಿದ್ದ ಕೂಸಾಳು ಎಂಬ ಸಮುದಾಯಕ್ಕೆ ಸೇರಿದವಳು.ಯಾವುದೋ ಕಾರಣಕ್ಕೆ ಮಾಯಕ ಹೊಂದಿ ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾಳೆ.
ಮಾಹಿತಿ ನೀಡಿದ ರಾಜ್ ಕೆ ಶೆಟ್ಟಿ ಬೇಳಂಜೆಯವರಿಗೆ ಧನ್ಯವಾದಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ - ಡಾ.ಲಕ್ಷ್ಮೀ ಜಿ ಪ್ರಸಾದ