ಇವತ್ತು ಬೆಳ್ಳಂಬೆಳಗ್ಗೆ ಒಂದು ನ್ಯೂಸ್ ಓದಿ ಮನಸ್ಸು ಕಲಕಿ ಹೋಯಿತು .ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಯಿತು !ದಿನ ನಿತ್ಯ ಇಂತ ವಿಚಾರ ಅಲ್ಲಿ ಇಲ್ಲಿ ನಡೆದದ್ದು ಓದ್ತಾನೆ ಇರ್ತೇವೆ .ದೆಹಲಿಯ ವಿದ್ಯಾರ್ಥಿನಿಯ ಪ್ರಕರಣದಿಂದಾಗಿ ಸ್ವಲ್ಪ ಪ್ರತಿಭಟನೆ ನಡೆಯಿತು.ತುಸು ಕಾನೂನು ಬಲ ಬಂತು ಕೂಡಾ ! ಆದರೆ ಅನ್ವಯ ಆಗಿದೆಯೇ ?ಬಲವಾದ ಕಾನೂನು ಬಂದ ನಂತರ ಕೂಡ ನಮ್ಮ ಸುತ್ತ ಮುತ್ತ ಇಂಥ ಘಟನೆಗಳು ನಡೆಯುತ್ತಲೇ ಇವೆ ಆದರೆ ಅಪರಾಧಿಯನ್ನು ಬಂಧಿಸಿದ್ದಾಗಲಿ ಶಿಕ್ಷಿಸಿದ್ದಾಗಲಿ ಎಲ್ಲೂ ಕಂಡು ಬರುವುದಿಲ್ಲ .ಸಮಾಜದಂತೆ ಕಾನುನು ರಕ್ಷಕರು ಕೂಡ ಪುರುಷರ ಪರವಾಗಿಯೇ ಇದ್ದಾರೆಯೇ? ಎಂಬ ಸಂಶಯ ನಂಗೆ ಬರುತ್ತಿದೆ .ಲೈಂಗಿಕ ಕಿರುಕುಳಗಳ ಅನೇಕ ಪ್ರಕರಣಗಳಲ್ಲಿ ಆರೋಪಿಯನ್ನು ಬಂದಿಸದೆ ಇದ್ದ ಬಗ್ಗೆ ಪ್ರತಿಭಟನೆ ನಡೆಸಿರುವ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಇತ್ತೀಚಿಗೆ ನಮ್ಮ ಕಾಲೇಜ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು.ಇಲ್ಲಿ ಕೂಡ ಪ್ರಸ್ತಾಪಿಸಿದ್ದು ಮಹಿಳಾ ದೌರ್ಜನ್ಯ ಕಾಯ್ದೆ ಬಗ್ಗೆ .ಆದರೆ ಹೇಳಿದ್ದು ಮಾತ್ರ ಸ್ತ್ರೀಯರು ಕಾನೂನು ದುರ್ಬಳಕೆ ಮಾಡುತ್ತಿದ್ದಾರೆ.ಕಾನೂನು ದುರ್ಬಳಕೆ ಮಾಡಿದರೆ ಶಿಕ್ಷೆ ಇದೆ ಎಂದು ಮಹಿಳೆಯರನ್ನು ಭಯ ಪಡಿಸುವಂತೆ ಇತ್ತು ಅಲ್ಲಿನ ಮಾತುಗಳು !ಮಹಿಳ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ದುರ್ಬಳಕೆ ಆದೀತು ಅನ್ನುವ ಭಯ ಯಾಕೆ ? ಏನೂ ತೊಂದರೆ ಕೊಡದ ದಾರಿ ಹೋಕರ ಮೇಲೆ ಯಾರಾದರು ದೂರು ನೀಡಲು ಸಾಧ್ಯವೇ ?!ಬೇರೆ ರೀತಿಯ ಕಿರುಕುಳಕ್ಕೆ ಈ ಕಾನೂನನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ .ಬೇರೆ ಯಾವುದಾದರು ರೀತಿಯಲ್ಲಿ ತಡೆಯಲಾರದ ತೊಂದರೆ ಕೊಟ್ಟಿರಿವುದು ಇದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ .ಅಂಥಹ ಸಂದರ್ಭದಲ್ಲಿ ಅವರ ಸಮಸ್ಯೆಯನ್ನು ನೋಡಿ ಕೊಂಡು ಸರಿಪಡಿಸಬೇಕೆ ಹೊರತು ದೂರು ಕೊಟ್ಟ ವರನ್ನೇ ಸಂಶಯಿಸುವ ಪ್ರವೃತ್ತಿ ದೂರವಾಗ ಬೇಕು.ಅತ್ಯಾಚಾರಿಗಳು ಚಿಕ್ಕಂದಿನಿಂದಲೇ ಹುಡುಗಿಯರನ್ನು ಚುಡಾಯಿಸುವ ,ಕಿರುಕುಳ ಕೊಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಯಾರೋ ಬರೆದದ್ದನ್ನು ಓದಿದ್ದು ನಂಗೆ ನೆನಪಾಗುತ್ತಿದೆ .ಅಂತಹ ಕಿರುಕುಳ ಕೊಟ್ಟ ಚುಆಯಿಸಿದ ಸಂದರ್ಭದಲ್ಲಿಯೇ ಅಂತಹವರಿಗೆ ಬಲವಾದ ಶಿಕ್ಷೆ ಆದರೆ ಅವರು ಅಷ್ಟು ಮುಂದುವರಿಯಲಿಕ್ಕಿಲ್ಲ !ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?ಅತ್ಯಾಚಾರಿಗಳಿಗೆ ಶಿಕ್ಷೆ ಆಗುವುದಿಲ್ಲ ಇನ್ನು ಲೈಂಗಿಕ ಕಿರುಕುಳ ನೀಡಿದವರಿಗೆ ಶಿಕ್ಷೆ ಬಹಳ ದೂರದ ಮಾತು .ಕಿರುಕುಳದ ಪ್ರಕರಣಗಳು ಹೆಚ್ಚಾಗಿ ದಾಖಲಾಗುವುದೇ ಇಲ್ಲ ದೂರು ನೀಡಿದರು ಸಕ್ಷಿ ಮತ್ತು ಮೊದಲೊಂದು ಕಾರಣಗಳಿಗೆ ಡ್ರಾಪ್ ಆಗುವುದೇ ಹೆಚ್ಚು !ಆದ್ದರಿಂದ ಇದಕ್ಕೆ ಪರಿಹಾರ ಏನು ?ನಾವು ಚಿಂತಿಸಬೇಕಾಗಿದೆ .ಮಣಿಪಾಲದ ಹುಡುಗಿಯನ್ನು ಎತ್ತೊಯ್ದ ಕ್ರೂರ ವ್ಯಾಘ್ರಗಳು ನಮ್ಮ ಮನೆಯಿಂದ ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗುವುದಿಲ್ಲ ಅಂತ ಏನು ಗ್ಯಾರಂಟಿ .ಈ ವ್ಯಾಘ್ರಗಳು ಗೊಮುಖವನ್ನು ಹೊಂದಿರುವದರಿಂದ ಇವರನ್ನು ಗುರುತಿಸುವುದು ಅಸಾಧ್ಯ ಆದ್ದರಿಂದ ಬಲವಾದ ಶಿಕ್ಷೆ ಮಾತ್ರ ಇದಕ್ಕೆ ಪರಿಹಾರ ಮತ್ತು ಎಳೆಯದರಲ್ಲಿಯೇ ಇಂತ ಪ್ರವೃತ್ತಿಗೆ ಕಡಿವಾಣ ಹಾಕುವ ಕಾರ್ಯ ಆಗಬೇಕು .ಬೆಕ್ಕಿನ ಕೊರಳಿಗೆ ದೈರ್ಯ ಮಾಡಿ ಗಂಟೆ ಕಟ್ಟ ಬೇಕು .!ಏನಂತೀರಿ ನೀವು ?!
No comments:
Post a Comment