Tuesday, 17 December 2013

ಬೈಲ ಮಾರಿ ನಲ್ಕೆ -ಒಂದು ಅಪೂರ್ವ ತುಳುಜನಪದ ಕುಣಿತ ©Dr.LAKSHMI G PRASAD


ಬೈಲ ಮಾರಿ ನಲಿಕೆ /phttps://www.facebook.com/photo.php?v=223987697726539&set=vb.100003459322515&type=3&theater
copy rights reserved (C)Dr.Lakshmi G Prasad

ho
- ಒಂದು ವಿಶಿಷ್ಟ ಜಾನಪದ ಕುಣಿತ

ತುಳುನಾಡೆಂದೇ ಜನಜನಿತವಾಗಿರುವ ಉಡುಪಿ, ಕಾಸರಗೋಡನ್ನು ಒಳಗೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳು ಜನಪದ ಸಾಹಿತ್ಯದ ನಿಧಿ.  ಇಲ್ಲಿ ಮಾದಿರ ನಲಿಕೆ, ಚೆನ್ನು ನಲಿಕೆ, ಕಂಗೀಲು, ಕರಂಗೋಲು, ಆಟಿ ಕಲೆಂಜ, ಸೋಣದ ಜೋಗಿ ಮೊದಲಾದ ಅನೇಕ ಜನಪದ ಕುಣಿತಗಳಿವೆ.  ಬೈಲ ಮಾರಿ ನಲಿಕೆ ಕೂಡಾ ಇಂತಹ ಒಂದು ತುಳು ಜನಪದ ಕುಣಿತ.  ಇದೊಂದು ವಿಶಿಷ್ಟ ಕುಣಿತ.

ಸುಗ್ಗಿ ಬೇಸಾಯದ ಸಮಯದಲ್ಲಿ ಮಾರಿ ಕಳೆಯಲು ಕೊರಗ ತನಿಯ ಮನೆ ಮನೆಗೆ ಬರುತ್ತಾನೆ.  ಬೈಲ ‘ಮಾರಿನು ಕೊಂಡೋಪೆ’ ಎಂದು ಹೇಳುವ ಕೊರಗ ತನಿಯ ಗದ್ದೆಯ ಮಾರಿಯನ್ನು ಕೊಂಡು ಹೋಗುತ್ತಾನೆ.

ಬೈಲ ಮಾರಿಯನ್ನು ಕೊಂಡು ಹೋಗಲು ಮನೆ ಮನೆಗೆ ಬರುವ ಕೊರಗ ತನಿಯ ಭೂತದ ಪಾತ್ರಧಾರಿ ಒಂದು ವಿಶಿಷ್ಟ ಹಾಡನ್ನು ಹೇಳಿಕೊಂಡು ಕುಣಿಯುತ್ತಾನೆ.  ಅವನೊಂದಿಗೆ ಬಂದ ಇನ್ನೊಬ್ಬಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಾನೆ.  ಈ ಕುಣಿತವನ್ನು ಬೈಲ ಮಾರಿ ನಲ್ಕೆ ಎಂದವರು ಹೇಳುತ್ತಾರೆ.  ಬೈಲ ಮಾರಿ ನಲಿಕೆ ಸುಗ್ಗಿ ಬೇಸಾಯದ ಸಂದರ್ಭದಲ್ಲಿ ಕುಣಿಯುವ ಕುಣಿತವಾಗಿದೆ.
ಇದು ಸುಳ್ಯ ತಾಲೂಕಿನ ಕೋಟೆ ಮುಂಡುಗಾರು, ನೆಟ್ಟಾರು ಚಾವಡಿ ಬಾಗಿಲು, ಮುರುಳ್ಯಗಳಲ್ಲಿ ಈಗ ಕೂಡಾ ಪ್ರಚಲಿತವಿದೆ.

ಆದರೆ ಈ ವಿಶಿಷ್ಟ ಕುಣಿತವು ಈ ತನಕ ಜಾನಪದ ವಿದ್ವಾಂಸರ ಗಮನಕ್ಕೆ ಬಾರದೆ ಇದ್ದುದರಿಂದ ಅಜ್ಞಾತವಾಗಿ ಉಳಿದಿದೆ. ಈ ಪರಿಸರದಲ್ಲಿ ಬತ್ತದ ಬೇಸಾಯವನ್ನು ಹೆಚ್ಚಿನವರು ನಿಲ್ಲಿಸಿರುವುದರಿಂದ ಸುಗ್ಗಿ ಬೇಸಾಯದ ಸಂದರ್ಭದಲ್ಲಿ ಮಾತ್ರ ಪ್ರಸ್ತುತಗೊಳ್ಳುವ ಈ ಕುಣಿತ ಇಂದು ಜನಪದರಿಂದ ದೂರವಾಗುತ್ತಿದೆ.

 ಪಾಜಪಳ್ಳದಲ್ಲಿರುವ ಬಾಬು ಅಜಿಲರ ಕುಟುಂಬದವರು ಈ ಕುಣಿತವನ್ನು ಪ್ರಸ್ತುತ ಪಡಿಸುತ್ತಾರೆ. ಈ ಕುಣಿತವು ಮೂಲತಃ ತುಂಬ ಹೊತ್ತಿನದಾಗಿದ್ದರೂ ಕೂಡಾ ಈಗ ಬೈಲ ಮಾರಿ ನಲಿಕೆಯ ಹಾಡಿನ ಮೊದಲ ಎರಡು ಸಾಲುಗಳನ್ನು ಮಾತ್ರ ಹೇಳಿ ನರ್ತಿಸುತ್ತಾರೆ.
ಶ್ರೀ ಕಾಂತು ಅಜಲರಿಂದ ನಾನು ಸಂಗ್ರಹಿಸಿದ    ಬೈಲ ಮಾರಿ ನಲಿಕೆಯ ಹಾಡು ಹೀಗಿದೆ. ಈ ಹಾಡನ್ನು ಅವರು ಕಬಿತೊ/ಪದೊ ಎಂದು  ಕರೆಯುತ್ತಾರೆ.
ಬೈಲ ಮಾರಿ ನಲಿಕೆಯ ಹಾಡು:-
ಈಯಿಲಾ ಬಲ್ಲಗ ಈಯಿ ಬಲ ದಿಕ್ಕನೆ
ಓ ಲೇಲೆ ಲೇಲೇ ಲಾ
ನಾಲುವೆರೆ ನಡುಟೆ ಗಿರಿ ಬಲ ದಿಕ್ಕನೆ
ಓ ಲೇಲೆ ಲೇಲೇ ಲಾ
ಆಕಾಸೊಟು ಅರಂತೋಡೆ ಭೂಮಿಟ್ ಬೈಕುಡೆ
ಓ ಲೇಲೆ ಲೇಲೇ ಲಾ
ಮೈರು ಕೆಲೆತ್ತುನನ್ ಕೇಂಡರೊಲ್ಲಾಯ
ಓ ಲೇಲೆ ಲೇಲೇ ಲಾ
ಆಯಿರೆ ಈಯಿರೆ ನೀರ್‍ಲಾ ಏರುಂಡುಗಾ
ಓ ಲೇಲೆ ಲೇಲೇ ಲಾ
ಬಾಣರೆ ಪೆÇಲ್ಲನ್ ಬೈಪೆ ನೋತುಂಡೆ
ಓ ಲೇಲೆ ಲೇಲೇ
ಗಾಣತ್ತೆರು ಕೈಯಿ ತಿನ್ಪುಂಡು ಕೆಬಿಲಾ ಪಂದುಜಿಗಾ
ಓ ಲೇಲೆ ಲೇಲೇ ಲಾ
ಕೈಪುಡ್ದಿಕ್ಕಾಲ್ ಪಜೆ ಮುಡೆಪುಂಡು ಕೈಲಾ ಪಂದುಜಿ
ಓ ಲೇಲೆ ಲೇಲೇ ಲಾ
ಕಾಂತಾರದ ಪದವುಡೆ ನಾಯಿ ಬರ್ಪುಂಡು
ಓ ಲೇಲೆ ಲೇಲೇ ಲಾ
ನಾಯಿ ಬರ್ಪುಂಡು ಮುಂಗುಲಿ ಪಾರ್‍ದು ಬದುಕೋನು
ಓ ಲೇಲೆ ಲೇಲೇ ಲಾ
ದಂಬೆಲಾ ಜಾರ್‍ಂಡ್ ದಂಬೆ ಜಾರ್‍ಂಡ್ ದಿಕ್ಕನೆ
ಓ ಲೇಲೆ ಲೇಲೇ ಲಾ
ಕಂಚಿ ದಂಬೆ ಜಾರುಂಡು ಬೈಲ್‍ಗೆಲಾ ಬೂರುಂಡೆ
ಓ ಲೇಲೆ ಲೇಲೇ ಲಾ

ಜೋಡುಲಾ ದೆಪೆÇ್ಪೀಡೆ ಜೋಡು ದೆಪ್ಪುಡು ದಿಕ್ಕನೆ
ಓ ಲೇಲೆ ಲೇಲೇ ಲಾ
ಜೋಡುನಾರ್ ಕಡಪ್ಪುನ ಜೋಡೂಲಾ ದೆಪೆÇ್ಪಡೇ
ಓ ಲೇಲೆ ಲೇಲೇ ಲಾ
ಕೋರಿ ತೂಯರ ಪೆÇೀಕಲ್ ಕೊಲಿಂದ ಮರ ಕೋರಿಗ್‍ಗ
ಓ ಲೇಲೆ ಲೇಲೇ ಲಾ
ಉತ್ತೊಡುಪ್ಪು ದೆಪೆÇ್ಪೀಡು ಕೋರಿಗುಲಾ ಪೆÇೀವೋಡೆ
ಓ ಲೇಲೆ ಲೇಲೇ ಲಾ
ಎನ್ನ ಉಳ್ಳಾಯ ಪಾಡಿನ ಸಣ್ಣ ಕಂಗು ಮಾಸಡಿ
ಓ ಲೇಲೆ ಲೇಲೇ ಲಾ
ಉತ್ತುಡುಪು ಉಳ್ಳಾಯೆಡ ಕೇಣೊಡೇ
ಓ ಲೇಲೆ ಲೇಲೇ ಲಾ
ಕೋರಿಗೆಂದ್ ಪೆÇೀವೋಡು ಕೊಕ್ಕಡದ ಕೋರಿಗಂದಮಲೆ
ಓ ಲೇಲೆ ಲೇಲೇ ಲಾ
ಉತ್ತೋಡುಪು ದೆಪೆÇ್ಪೀಡೇ ಕೋರಿಗುಲಾ ಪೆÇೀವೊಡೇ
ಓ ಲೇಲೆ ಲೇಲೇ ಲಾ
ಕಾಂತರ ಕದಿರೊಡು ಕಡುಪಾಡುನಂದಮಲೆ
ಓ ಲೇಲೆ ಲೇಲೇ ಲಾ
ಪುಚ್ಚೆ ಬೊಲುವಾಲುಡು ಮೀನ ಇತ್ತುಂಡೊಲ್ಲಾಯ
ಓ ಲೇಲೆ ಲೇಲೇ ಲಾ
ಚೀಪೆಕಳಿ ಗಂಗಸರ ಜೋರುಲಾ ಗುಡ್ಡೆಡೆಲಾ
ಓ ಲೇಲೆ ಲೇಲೇ ಲಾ
ಬೋರುಗುಡ್ಡೆ ಇರಂಗುಯೆನೇ ಜವ್ವನ್ ಜೇರುಳು
ಓ ಲೇಲೆ ಲೇಲೇ ಲಾ
ಕಳಿಪರಿ ಮುಟ್ಟಾಲೆ ಮಂಜಲ್‍ಲಾ ಒರಿಂಡುಗಾ
ಓ ಲೇಲೆ ಲೇಲೇ ಲಾ
ಕೊರುಂದ್ ಗದ್ದಾಗೋ ಕೊಪೆÇ್ಪಟೊಡೊರಿಂದ
ಓ ಲೇಲೆ ಲೇಲೇ ಲಾ
ಆಯೆ ಜೆರ್ಪುನ ಉಳಾಯಿ ಏನ್ ಜೆರ್ಪುನ ಪಿದಾಯಿ
ಓ ಲೇಲೆ ಲೇಲೇ ಲಾ
ನ್ಯಾಯ ಪಾತೆರುನೇನ್ ಬುಡುಪುಜಿ ಬೊನ್ಯತ ಗುಡ್ಡೆಡ್ತೆ
ಓ ಲೇಲೆ ಲೇಲೇ ಲಾ
ಉತ್ಯೆರುಲ್ಲೆಯೇ ಪಾಡುನ ಒಂಜಿಗೋನ್ ಬೆನ್ಪುನ
ಓ ಲೇಲೆ ಲೇಲೇ ಲಾ
ಕಣ್ಣಿರುತ್ತಣ್ಣ ಕಣ್ಣ್‍ಮಲ್ಲೆ ದೂಜಿಟ್‍ಲಾ ಕುತ್ತೊಂಡುಗಾ
ಓ ಲೇಲೆ ಲೇಲೇ ಲಾ
ಪುತ್ತೂರುತ್ತುಣ್ಣ ಮುಂಡ ಮಲ್ಲೆ ಬಾಜಿಟ್‍ಲಾ ಕೆತ್ತೊಡೆ
ಓ ಲೇಲೆ ಲೇಲೇ ಲಾ
ಕಾಂತುಶೆಟ್ಟಿ ದೂಮಶೆಟ್ಟಿ ಜಪ್ಪಲಾ ಪೆÇೀಪೆರಗಾ
ಓ ಲೇಲೆ ಲೇಲೇ ಲಾ
ಓಡೆಗ್ ಪೆÇೀಪಲೆ ಕುಂಞÂ ಮೊಡಂಡೂರು ದಿಕ್ಕಾಲೇ
ಓ ಲೇಲೆ ಲೇಲೇ ಲಾ

ಕನ್ನಡ ಅನುವಾದ:
ನೀನಾದರೂ ಬಾರೋ ಬಾ ದಿಕ್ಕನೇ (೧)   
ಓ ಲೇಲೆ ಲೇಲೇ ಲಾ
ನಾಲ್ಕು ಜನರ ನಡುವಿನಿಂದ ಗಿರಿ(?) ಬಾ ದಿಕ್ಕನೇ
ಓ ಲೇಲೆ ಲೇಲೇ ಲಾ
ಆಕಾಶದಲ್ಲಿ ಅರಮನೆಯಲ್ಲಿ ಭೂಮಿಯಲ್ಲಿ ಬೈಹುಲ್ಲಿನ ಮುಟ್ಟೆಯಲ್ಲಿ
ಓ ಲೇಲೆ ಲೇಲೇ ಲಾ
ನವಿಲು ಕೇಕೆ ಹಾಕಿದ್ದನ್ನು ಕೇಳಿದಿರಾ ಒಡೆಯ
ಓ ಲೇಲೆ ಲೇಲೇ ಲಾ
ಆ ಬದಿ ಈ ಬದಿ ನೀರಾದರೋ ಏರುತ್ತಿದೆಯಂತೆ
ಓ ಲೇಲೆ ಲೇಲೇ ಲಾ
ಬ್ರಾಹ್ಮಣರ ಪೆÇಲ್ಲನ್ ಬೈಪೇ(?) ಹೊಡೆಯಿತಲ್ಲ
ಓ ಲೇಲೆ ಲೇಲೇ ಲಾ
ಗಾಣದ ಕೋಣ ಪೈರು ತಿನ್ನುತ್ತದೆ ಕಿವಿಯೂ ಅಲುಗಾಡುತ್ತಿಲ್ಲ
ಓ ಲೇಲೆ ಲೇಲೇ ಲಾ
ಕೈಪುಡಿ ದಿಕ್ಕಾಲ್ದಿ (೨) ಚಾಪೆ ನೇಯುತ್ತಿದ್ದಾಳೆ ಕೈ ಅಲುಗಾಡುವುದಿಲ್ಲ 
ಓ ಲೇಲೆ ಲೇಲೇ ಲಾ

ಕಾಂತಾರದ ಪದವಿನಲ್ಲಿ (೩) ನಾಯಿ ಬರುತ್ತಿದೆ
ಓ ಲೇಲೆ ಲೇಲೇ ಲಾ
ನಾಯಿ ಬರುತ್ತದೆ ಮುಂಗುಸಿ ಓಡುತ್ತದೆ ಬದುಕಿಗೊಂಡು
ಓ ಲೇಲೆ ಲೇಲೇ ಲಾ
ಕೋರಿ ನೋಡಲು ಹೋಗಬೇಕು ಕೊಲಿಂದ್ ಮರ ಕೋರಿಗೆ(೪)
ಓ ಲೇಲೆ ಲೇಲೇ ಲಾ
ಉಡುವ ಉಡುಪು ತೆಗೆಯಬೇಕು ಕೋರಿಗೆ ಹೋಗಬೇಕು
ಓ ಲೇಲೆ ಲೇಲೇ ಲಾ
ನನ್ನ ಉಳ್ಳಾಯ ಉಟ್ಟ ಬಟ್ಟೆ
ಓ ಲೇಲೆ ಲೇಲ ಜಾನಪದ ಕರ್ನಾಟಕ, ಸಂಪುಟ-7, ಸಂಚಿಕೆ-2, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಲಾ
© ಡಾ.ಲಕ್ಷ್ಮೀ ಜಿ ಪ್ರಸಾದ
ಇದರ ರೆಕಾರ್ಡಿಂಗ್ ಗೆ ಪೂರ್ಣ ಸಹಕಾರವಿತ್ತ ಸುಬ್ರಹ್ಮಣ್ಯ ಭಟ್ ನೆಟ್ಟಾರು ಇವರಿಗೆ ಹೃತ್ಪೂರ್ವಕ ಕೃತಜ್ಞತೆಗಳು


Thursday, 5 December 2013

ಕಂಬಳ ಓಟದ ಅನಭಿಷಿಕ್ತ ರಾಜ –ನಾಗರಾಜ:ಡಾ.ಲಕ್ಷ್ಮೀ ಜಿ ಪ್ರಸಾದ


                                                   


ಒಂದು ಕೋಣ ತನ್ನನ್ನು ಮಗನಂತೆ ಪೊರೆದ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ ?ಆದರೆ ಇದು ನಿಜ !
1985ರಲ್ಲಿ ಹುಟ್ಟಿ ಜೂನ್ 6, 2009 ರ ವರೆಗೆ ಓಡುತ್ತಲೇ ಬದುಕಿದ ಕಂಬಳ ಓಟದ ರಾಜ ನಾಗರಾಜ ತನ್ನನ್ನು ಪೊರೆದ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಂದು ಕೊಟ್ಟಿದ್ದಾನೆ! .ನಾಗರಾಜನ ಒಡೆಯ ಪಯ್ಯೊಟ್ಟು ಸದಾಶಿವ ಸಾಲಿಯಾನ್ ಅವರಿಗೆ ಕ್ರೀಡಾ ವಿಭಾಗದಲ್ಲಿ  ರಾಜ್ಯೋತ್ಸವ ಪ್ರಶಸ್ತಿ -2013 ಲಭಿಸಿದೆ
1988 ರಲ್ಲಿ ಪಲ್ಯೊಟ್ಟು ಮನೆಗೆ ಸೇರಿದ ನಾಗರಾಜ ತನ್ನ ನಾಲ್ಕನೇ ವಯಸ್ಸಿನಿಂದ 500 ಕ್ಕೂ ಹೆಚ್ಚು ಬಾರಿ ಕಂಬಳ ಕೋಣಗಳ ಸ್ಪರ್ಧೆಯಲ್ಲಿ ಭಾಗವಹಿಸಿ 115 ಬಾರಿ ಗೆದ್ದು ಬಂಗಾರದ ಪದಕಗಳನ್ನು ಪಡೆದಿದ್ದಾನೆ.ಕಂಬಳ ಕೋಣಗಳ ಅನಭಿಷಿಕ್ತ ದೊರೆ ಈತ ಶರವೇಗದ ಸರದಾರ.ಇವನ ಓಟದ ವೇಗ 100 ಮೀಟರ್ 12 ಸೆಕೆಂಡ್ಸ್ (ಉಸೇನ್ ಬೋಲ್ಟ್ 100 ಮೀಟರ್ಸ್ 10 ಸೆಕೆಂಡ್ಸ್ ).ಕಂಬಳ ಓಟದಲ್ಲ್ಲಿ ಇವನ ರೆಕಾರ್ಡ್ ಇದು !ಈ ಕೋಣದ ಅದ್ಭುತ ಸಾಧನೆಯನ್ನು ಗೌರವಿಸಿದ ಕೇಂದ್ರ ಸರಕಾರದ ಅಂಚೆ ಇಲಾಖೆ  ಈತನ ಚಿತ್ರದೊಂದಿಗೆ ಅಂಚೆ ಚೀಟಿಯನ್ನುಕೂಡಾ ಹೊರ ತಂದಿದೆ .
                                                   
ನಾಗರಾಜ ಕಂಬಳ ಓಟದ ಕೋಣ ವಾಗಿದ್ದರೂ ಪಯ್ಯೊಟ್ಟು ಸದಾಶಿವ ಸಾಲ್ಯಾನರ ಮನೆಯಲ್ಲಿ ಮನೆ ಪ್ರೀತಿಯಿಂದ ಮಗನಂತೆ ಬೆಳೆದಿದೆ .24 ವರ್ಷ ಕಾಲ ಬದುಕಿದ ಈ ಕೋಣ ತನ್ನ ನಾಲ್ಕನೇ ವರ್ಷದಿಂದ 20 ವರ್ಷ ತನಕ 500 ಕ್ಕೂ ಹೆಚ್ಚು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನನ್ನು ಮಗನಂತೆ ಸಲಹಿದ ಒಡೆಯನಿಗೆ ಚಿನ್ನದ ಪದಕಗಳ ಸುರಿಮಳೆಯನ್ನೇ ತಂದು ಕೊಟ್ಟಿದ್ದಾನೆ.ಕಳೆದ 50 ವರ್ಷಗಳಿಂದ ಕಂಬಳ ಕ್ರೀಡೆಯಲ್ಲಿ ಪಯ್ಯೊಟ್ಟು ಮನೆತನ ಸಕ್ರಿಯವಾಗಿ ಭಾಗವಹಿಸಿದೆ.
ಕಳೆದ 20 ವರ್ಷಗಳಿಂದ ನಾಗರಾಜನ ಕಾರಣಕ್ಕೆ ಇನ್ನಷ್ಟು ಸ್ಪೂರ್ತಿಯಿಂದ ಭಾಗವಹಿಸಿ ಈ ಕ್ರೀಡೆಯನ್ನು ಪ್ರೋತ್ಸಹಿಸಿದ್ದಲ್ಲದೆ ನೂರಾ ಹದಿನೈದು ಪದಕಗಳನ್ನು ಗೆದ್ದಿದ್ದಾರೆ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಅವರು .ಈ ಕಾರಣಕ್ಕೆ ಅವರಿಗೆ ಈ ಭಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ 
 

ನಾಗರಾಜ ಈಗಿಲ್ಲವಾದರೂ ಆತನ ಕೀರ್ತಿ ಶಾಶ್ವತವಾಗಿದೆ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕೋಣ ನಾಗರಾಜನಿಗೂ ,ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪಡೆದ ನಾಗರಾಜನ ಒಡೆಯ ಪಯ್ಯೊಟ್ಟು ಸದಾಶಿವ ಸಾಲಿಯಾನ್ ಅವರಿಗೂ ಹಾರ್ದಿಕ ಅಭಿನಂದನೆಗಳು (ಮಾಹಿತಿ ಮತ್ತು ಚಿತ್ರ ಒದಗಿಸಿ ಕೊಟ್ಟವರು –ಶ್ರೀ ಮಧುಸೂದನ ಶೆಟ್ಟಿ ,ಮಂಗಳೂರು ಇವರಿಗೆ ಕೃತಜ್ಞತೆಗಳು )ಚಿತ್ರ ಕೃಪೆ: ರೋನ್ಸ್ ಬಂಟ್ವಾಳ ಇವರಿಗೂ ಹೃತ್ಪೂರ್ವಕ ಕೃತಜ್ಞತೆಗಳು 

 

https://fbcdn-sphotos-d-a.akamaihd.net/hphotos-ak-frc1/1453475_388948784569725_191844306_n.jpg

Thursday, 28 November 2013

ಚರಿತ್ರೆಯ ಗರ್ಭ:ಬೆಳ್ಳಾರೆಯ ಇತಿಹಾಸ ತಿಳಿಯುವುದೇ? ನನ್ನ ಸಂಶೋಧನಾ ಲೇಖನ ಗುರುವಾರ (28 -11-2013): ಕನ್ನಡ ಪ್ರಭ ಪತ್ರಿಕೆ




http://archives.kannadaprabha.com/pdf/epaper.asp?pdfdate=11%2F28%2F2013

ಸುಳ್ಯ ತಾಲೂಕಿನಲ್ಲಿ ಬೆಳ್ಳಾರೆ ಎನ್ನುವ ಗ್ರಾಮವೊಂದಿದೆ. ಇದು ಐತಿಹಾಸಿಕ ಹಿನ್ನೆಲೆ ಇರುವ ಊರು. ಇಲ್ಲಿನ ಇತಿಹಾಸ ಸ್ಥಳೀಯರಿಗೆ ಅಷ್ಟಾಗಿ ತಿಳಿದಿಲ್ಲವಾದರೂ, ಬೆಳ್ಳಾರೆ ಹಿಂದೆ 21 ಗ್ರಾಮಗಳನ್ನು ಒಳಗೊಂಡಿದ್ದ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಸಾಮಂತ ಬಲ್ಲಾಳ ಅರಸರು ಇದನ್ನು ಆಳುತ್ತಿದ್ದರು. ಆದರೆ ಇವರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ 'ಇದಮಿತ್ಥಂ' ಎನ್ನುವ ಮಾಹಿತಿ ಎಲ್ಲಿಯೂ ಇಲ್ಲ.

ಬೆಳ್ಳಾರೆ ಎನ್ನುವ ಹೆಸರು ಕೇಳಿದರೆ ಇತಿಹಾಸ ತಜ್ಞರ ಕಿವಿ ನೆಟ್ಟಗಾಗುತ್ತದೆ. ಇಲ್ಲಿನ ಇತಿಹಾಸವೇ ಹಾಗಿದೆ. ಕೆದಕುತ್ತ ಹೋದಂತೆ ಎಲ್ಲವೂ ಗೋಚರವಾಗುತ್ತವೆ, ಆದರೂ ಒಂಚೂರು ನಿಗೂಢತೆ ಉಳಿದುಕೊಂಡು ಬಿಡುತ್ತದೆ.

ಅಷ್ಟಕ್ಕೂ ಎಲ್ಲಿದೆ ಈ ಊರು? ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನಲ್ಲಿದೆ ಬೆಳ್ಳಾರೆ. ಒಂದು ಕಾಲದಲ್ಲಿ ಇದು ರಾಜಾಡಳಿತಕ್ಕೆ ಒಳಪಟ್ಟಿದ್ದ ಊರು ಎನ್ನುವುದನ್ನು ಇಲ್ಲಿನ ಸ್ಮಾರಕಗಳೇ ಹೇಳುತ್ತವೆ. ಆದರೆ ಇಲ್ಲಿನ ಸಾಮಂತರು ಯಾರ ಸಾಮಂತರಾಗಿದ್ದರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ.

ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತ ನಿರ್ಮಿಸಿದ್ದ ಕಂದಕಗಳ ಕುರುಹು ಬೆಳ್ಳಾರೆಯಲ್ಲಿ ಈಗಲೂ ಇವೆ. ಮಹಾಸತಿಕಲ್ಲು ಹಾಗೂ ಕಟ್ಟೆ ಇತ್ತೆಂದೂ, ಅದನ್ನು ಮಹಾಸತಿಕಟ್ಟೆ ಎಂದು ಕರೆಯಲಾಗುತ್ತಿದೆಂದೂ ಹೇಳಲಾಗುತ್ತದೆ. ಆದರೀಗ ಅಂತಹ ಯಾವುದೇ ಕುರುಹೂ ಇಲ್ಲ. ಆದರೆ, ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯಲ್ಲಿರುವ ಅಡ್ಯಂತಾಯ ಗುಡಿಯಲ್ಲಿ ಎರಡು ಮಾಸ್ತಿ ವಿಗ್ರಹಗಳು ಇವೆ. ಇದು ಕೂಡ ಕುತೂಹಲದ ಸಂಗತಿಯೇ.

ಬೀಡು ಮತ್ತು ಪಟ್ಟದ ಚಾವಡಿ

ಬೆಳ್ಳಾರೆಯನ್ನು ಜೈನ ಪಾಳೆಗಾರರು ಆಳಿದ್ದಕ್ಕೆ ಕುರುಹಾಗಿ ಬೆಳ್ಳಾರೆ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ಬೀಡಿನ ಕಾವಲುಗಾರರದ್ದು ಎನ್ನಲಾಗಿರುವ ಮಣ್ಣಿನ ಗುಡಿಸಲನ್ನು ಈಗಲೂ ಕಾಣಬಹುದು. ಬಲ್ಲಾಳರ ಬೀಡಿನ ವಾಯವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನದೈವ ಅಡ್ಯಂತಾಯ ಭೂತದ ಚಾವಡಿ ಇದೆ. ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು ಭೂತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಗಾರರಾದ ಬಲ್ಲಾಳ ಅರಸರ ಪಟ್ಟಾಭಿಷೇಕ ಇಲ್ಲಿಯೇ ನಡೆಯುತ್ತಿದೆಂದು ತಿಳಿದು ಬರುತ್ತದೆ.

ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನ ಅರಮನೆ, ಅದರ ಬಳಿಯೇ ಜೈನ ಬಸದಿ ಕೂಡ ಇತ್ತು. ಕೆಲವರ್ಷಗಳ ಹಿಂದಿನ ತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು. ಈಗ ನೆಲಸಮವಾಗಿ ಕುರುಹುಗಳೂ ಅಳಿಸಿ ಹೋಗಿವೆ. ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳಿದ್ದವು. ಈಗ ಅಂತಹ ಒಂದು ಕಲ್ಲು ಉಳಿದುಕೊಂಡಿದೆ. ಸರಕು ಸಾಗಣೆ ಎತ್ತಿನ ಬಂಡಿಗಳ ತಂಗುದಾಣವಾಗಿದ್ದ 'ಬಂಡಿ ಮಜಲು' ಎಂಬ ಬಯಲು ಪ್ರದೇಶ ಬೆಳ್ಳಾರೆ ಪೇಟೆಯಿಂದ ತುಸು ದೂರದಲ್ಲಿ ಈಗಲೂ ಇದೆ.

ನೈದಾಲಪಾಂಡಿ ಭೂತಾರಾಧನೆ

ಬೆಳ್ಳಾರೆ ಬೀಡಿನ ರಾಜರು ಯಾರಾಗಿದ್ದರೆಂಬ ಬಗ್ಗೆ ಮಾಹಿತಿ ಇಲ್ಲ. ಕಾರ್ಕಳದ ಬೈರರಸರಲ್ಲಿ ಕೊನೆಯವರಾದ ಪಾಂಡ್ಯರಾಯ ಬಲ್ಲಾಳನ ಅಧೀನದಲ್ಲಿ ಬೆಳ್ಳಾರೆಯ ಕೋಟೆ ಮತ್ತು ಬೀಡು ಇದ್ದ ಬಗ್ಗೆ ತುಸು ಮಾಹಿತಿ ಲಭ್ಯವಾಗಿದೆ. ಹೈದರಾಲಿಯ ಆಕ್ರಮಣದ ಅಥವಾ ಟಿಪ್ಪುವಿನ ದಾಳಿ ಸಂದರ್ಭದಲ್ಲಿ (ತುರುಕ ಪಡೆಗೆ ಎದುರಾಗಿ ಕಾದಾಡಲಾಗದೆ ) ಈತ ದುರಂತವನ್ನಪ್ಪಿರುವ ಬಗ್ಗೆ ಪಾಡ್ದನ ಒಂದರಲ್ಲಿ ಮಾಹಿತಿ ಇದ್ದ ಬಗ್ಗೆ ಅಧ್ಯಯನ ಕೃತಿಯಲ್ಲಿ ಇತಿಹಾಸಜ್ಞ ಡಾ. ಪಿ ಎನ್. ನರಸಿಂಹಮೂರ್ತಿ ಉಲ್ಲೇಖಿಸಿದ್ದಾರೆ.

ಬೆಳ್ಳಾರೆಯಿಂದ 25 ಕಿ.ಮೀ. ದೂರದ ಕಾಡಿನಲ್ಲಿರುವ ಅರೆಕಲ್ಲು ಎಂಬಲ್ಲಿ ಕೊಡಗಿನ ಗಾಳಿಬೀಡಿನ ಪಾಂಡೀರ ರಾಜವಂಶದವರು ಏಳು ವರ್ಷಗಳಿಗೆ ಒಮ್ಮೆ 'ನೈದಾಲ ಪಾಂಡಿ' ಎಂಬ ಭೂತಕ್ಕೆ ನೇಮ ನೀಡಿ ಆರಾಧನೆ ಸಲ್ಲಿಸುತ್ತಾರೆ. ಈ ಕೋಲದ ಸಂದರ್ಭದಲ್ಲಿ ಹಾಡುವ ಹಾಡಿನ ಪ್ರಕಾರ, ನೈದಾಲ ಪಾಂಡಿಯು ಬೆಳ್ಳಾರೆಯ ರಾಜಕುಮಾರ; ಗಾಳಿಬೀಡಿನಲ್ಲಿ ಈಗ ನೆಲೆಸಿರುವ ಪಾಂಡೀರ ರಾಜವಂಶದ ಮೂಲಪುರುಷ.

ಆತನ ಹೆಸರು ಕಾಸರಗೋಡು ಕಾಳಯ್ಯ. ಬೆಳ್ಳಾರೆಯನ್ನು ಶತ್ರುಗಳು ಆಕ್ರಮಿಸಿದಾಗ ತಪ್ಪಿಸಿಕೊಂಡು ಪೂಮಲೆ ಕಾಡಿನಲ್ಲಿ ಮಲೆಕುಡಿಯರ ಆಶ್ರಯ ಪಡೆಯುತ್ತಾನೆ. ಅಲ್ಲಿಗೆ ವನವಿಹಾರಕ್ಕೆ ಬಂದ ಈತ ಕೊಡಗಿನ ಅರಸರ ತಂಗಿ ಪ್ರೇಮಾಂಕುರವಾಗುತ್ತದೆ. ಮದುವೆಯ ಸಂದರ್ಭದಲ್ಲಿ ಲಿಂಗಾಯತನಾಗಿ ಮತಾಂತರ ಹೊಂದುತ್ತಾನೆ. ಹೀಗೆ ಎರಡು ವಂಶಗಳನ್ನು ಬೆಸೆದಿದ್ದರಿಂದ 'ನೈದಾಲ ಪಾಂಡಿ' ಎನ್ನುವ ಹೆಸರು ಪಡೆದ. ಪುನಃ ಬೆಳ್ಳಾರೆಯನ್ನು ಶತ್ರುಗಳು ಆಕ್ರಮಿಸಿದಾಗ ಅರೆಕಲ್ಲಿಗೆ ಬಂದು ಶಿವನಲ್ಲಿ ಐಕ್ಯನಾದ. ಇದು ಪಾಡ್ದನದ ಕಥೆ. ಮೂಲತಃ ಕೊಡವನಾಗಿದ್ದ ಕೊಡಗು ಅರಸರ ತಂಗಿ ದೇವಮ್ಮಾಜಿ ಗಂಡ ಚೆನ್ನಬಸವ ಕೂಡ ಮದುವೆ ಸಮಯದಲ್ಲಿ ಲಿಂಗಾಯಿತನಾದದ್ದು ಎನ್ನುವ ಇನ್ನೊಂದು ಕಥೆಯೂ ಸಿಗುತ್ತದೆ. ಹೀಗಾಗಿ ಚೆನ್ನಬಸವನೇ ನೈದಾಲ ಪಾಂಡಿಯಾಗಿ ಆರಾಧನೆಗೊಳ್ಳುತ್ತಿರುವ ಸಾಧ್ಯತೆಯೂ ಇದೆ.

ಆದಾಗ್ಯೂ ಬೆಳ್ಳಾರೆಯ ಕೊನೆಯ ರಾಜಕುಮಾರ ಯಾರು? ಈತನನ್ನು ಆಕ್ರಮಿಸಿದ ಶತ್ರುಗಳು ಯಾರು? ಅದು ಯಾವ ಕಾಲ? ಬೆಳ್ಳಾರೆಯ ಬೀಡಿನ ರಾಜರು ಯಾರು? ಇವೆಲ್ಲ ಇಂದಿಗೂ ನಿಗೂಢ ಸಂಗತಿಗಳೇ ಮತ್ತು ಅಧ್ಯಯನಕ್ಕೆ ಯೋಗ್ಯ ವಿಷಯಗಳೇ.

ಬೆಳ್ಳಾರೆ ಸಮೀಪ ಕೋಟೆ ಮುಂಡುಗಾರು ಬಳಿ ಪಾಂಡಿ ಪಾಲು ಎಂಬ ಸ್ಥಳ ಇದೆ. ಪಂಜ ಸಮೀಪ ಪಾಂಡಿ ಗದ್ದೆ ಎಂಬ ಪ್ರದೇಶ ಇದೆ. ಅರೆಕಲ್ಲಿನ ಸಮೀಪ ಪಾಂಡಿ ಮನೆ ಎಂಬ ಪ್ರದೇಶ ಇದೆ. ಇಲ್ಲೆಲ್ಲ ಪಾಂಡಿ ಅನ್ನುವ ಹೆಸರು ಯಾಕೆ ಬಂದಿದೆ ಎಂದು ತಿಳಿದಿಲ್ಲ. ಬಹುಶಃ ಇದು ನೈದಾಲ ಪಾಂಡಿಗೆ ಸಂಬಂಧಿಸಿದ್ದಿರಬಹುದು. ಈ ಬಗ್ಗೆ ಸಮಗ್ರ ಅಧ್ಯಯನ ನಡೆದರೆ ಬೆಳ್ಳಾರೆಯ ಅಜ್ಞಾತ ಇತಿಹಾಸಕ್ಕೊಂದು ಭದ್ರ ಬುನಾದಿ ಸಿಗಬಹುದು.

ಬೆಳ್ಳಾರೆಯ ಇತಿಹಾಸ

ಬನವಾಸಿಯ ಕದಂಬ ಚಂದ್ರವರ್ಮ, ನಂತರ ಕ್ರಿ.ಶ.1600ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಆಗ ಬೆಳ್ಳಾರೆ ಕೊಡಗು ಆಡಳಿತಕ್ಕೆ ಸೇರಿತ್ತು. 1775ರಲ್ಲಿ ಅಮರ ಸುಳ್ಯ ಮತ್ತು ಬೆಳ್ಳಾರೆಗಳನ್ನು ಹೈದರಾಲಿ ವಶಪಡಿಸಿಕೊಂಡನು. 1791ರಲ್ಲಿ ದೊಡ್ಡ ವೀರರಾಜೇಂದ್ರನು ಮತ್ತೆ ತನ್ನ ವಶಕ್ಕೆ ಪಡೆದ್ದನಾದರೂ 1792ರಲ್ಲಿ ಟಿಪ್ಪುಸುಲ್ತಾನನ ಮನವಿಯಂತೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟ ಬಗ್ಗೆ ದಾಖಲೆ ಇದೆ. ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ 37 ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದರು. ಕೊಡಗಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರನನ್ನು 1834ರಲ್ಲಿ ಬ್ರಿಟಿಷರು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ, ಪಂಜ ಸೀಮೆಯ 110 ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು.

ಬಂಗ್ಲೆ ಗುಡ್ಡ

ಬ್ರಿಟಿಷರ ವಿರುದ್ದದ ಹೋರಾಟ ಬೆಳ್ಳಾರೆಯಲ್ಲೂ ಆರಂಭವಾಯಿತು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳಲಾಯಿತು. 'ಬಂಗ್ಲೆ ಗುಡ್ಡೆ' ಎಂದು ಕರೆಯಲಾಗುವ ಕೋಟೆಯ ಮೇಲೆ ಖಜಾನೆ ಕಟ್ಟಡ ಇತ್ತು. ಈಗ ಅದು ವಿಲೇಜ್ ಆಫೀಸ್ ಆಗಿ ಪರಿವರ್ತನೆಗೊಂಡಿದೆ.

(
ಲೇಖಕಿ ಸಂಶೋಧಕಿಯಾಗಿದ್ದು, ಅವರ ವಿಸ್ತ್ರತ ಸಂಶೋಧನಾ ಲೇಖನದ ಸಂಕ್ಷಿಪ್ತ ರೂಪ)

-
ಡಾ. ಲಕ್ಷ್ಮಿ ಜಿ. ಪ್ರಸಾದ್