ಹೌದು ಸುಮಾರು 16 ವರ್ಷ ಮೊದಲು ಏಪ್ರಿಲ್ ತಿಂಗಳಿನ ಮೂರನೇ ಶುಕ್ರವಾರದಂದು ಮಂಗಳ ವಾರಪತ್ರಿಕೆಯ ಎರಡನೇ ಮುಖ ಪುಟದಲ್ಲಿ ಬಂದ ಕಲಿಸಿದೆ ಕಲಿತೆ ಅಂಕಣದ ನನ್ನ ಲೇಖನ ,ನಾನು ಇಲ್ಲಿ ಮೊದಲ ಬಾರಿಗೆ ನನ್ನ ಹೆಸರನ್ನು ಲಕ್ಷ್ಮೀ ಜಿ ಪ್ರಸಾದ ಸರವು ಎಂದು ಬದಲಾಯಿಸಿ ಹಾಕಿದ್ದೆ ಏನೋ ಕನಸಿನಿಂದ !
ಅದಕ್ಕೂ ಮೊದಲು ನನ್ನ ಒಂದು ಕಥೆ ಪ್ರಕಟವಾಗಿತ್ತು .ಅದರಲ್ಲಿ ನಾನು ನನ್ನ ನಿಜ ಹೆಸರನ್ನೇ ಲಕ್ಷ್ಮಿ ವಿ ಎಂದು ಹಾಕಿದ್ದೆ .ಜೊತೆಗೆ ಅದೇ ಸಮಯದಲ್ಲಿ ನನ್ನ ಸಂಸ್ಕೃತ ಎಂ ಎ ಫಲಿತಾಂಶ ಬಂದಿದ್ದು ಅದನ್ನು ನಮ್ಮ ಕಾಲೇಜ್ ನವರು ಫೋಟೋ ಒಂದಿಗೆ ಪತ್ರಿಕೆಯಲ್ಲಿ ಹಾಕಿದ್ದರು ಅಲ್ಲೆಲ್ಲ ನನ್ನ ಹೆಸರು ದಾಖಲೆಯಲ್ಲಿ ಇರುವಂತೆ ಲಕ್ಷ್ಮೀ ವಿ ಎಂದೇ ಹಾಕಿದ್ದರು !
ಇದಕ್ಕೆ ನಮ್ಮ ಊರಿನ ಅನೇಕ ಮಹಾನೀಯರಿಂದ ಕಾಮೆಂಟ್ಸ್ ಬಂದಿತ್ತು ಅವಳು ಮದುವೆ ಆದಮೇಲೂ ತಂದೆ ಮನೆಯ ಹೆಸರು /ಇನಿಶಿಯಲ್ ಹಾಕುತ್ತಿದ್ದಾಳೆ ಎಂದು !
ಅದಕ್ಕಾಗಿ ಈ ಸಮಸ್ಯೆಯೇ ಬೇಡ ಎಂದು ಈ ಬಾರಿ ಈ ಲೇಖನ ಕಳುಹಿಸುವಾಗ ಲಕ್ಷ್ಮೀ ಜಿ ಪ್ರಸಾದ ಸರವು ಎಂದು ನಮ್ಮ ಮನೆ ಹೆಸರು ಸೇರಿಸಿಯೇ ಹಾಕಿದ್ದೆ !ಪ್ರಕಟವಾದರೆ ನಮ್ಮ ಮನೆಯಲ್ಲಿ ಹಾಗೂ ಊರಿನವರು ಕುಶಿ ಪಟ್ಟು ಬೆಂಬಲಿಸಿಯಾರು ಎಮ ಕನಸಿನಲ್ಲಿ !!
ಅಂತೂ ಈ ಲೇಖನ ನನ್ನ ಫೋಟೋ ಒಂದಿಗೆ ಪ್ರಕಟವಾಯಿತು .ಮಂಗಳ ವಾರ ಪತ್ರಿಕೆಯನ್ನು ನಮ್ಮ ಉರಿನಲ್ಲಿ ತುಂಬಾ ಜನರು ಆಗ ಓದುತ್ತಿದ್ದರು .
ಈ ಲೇಖನ ಪ್ರಕಟವಾಗಿ ನಮ್ಮ ಕೈಗೆ ಸಿಕ್ಕ ಶುಕ್ರವಾರದ ದಿನ ನಮ್ಮ ಮನೆಯಲ್ಲಿ ದುರ್ಗಾ ಪೂಜೆ ಇತ್ತು !ಹಾಗಾಗಿ ನನ್ನ ಲೇಖನ ಓದಿದವರು ಈ ಬಗ್ಗೆ ಮೆಚ್ಚುಗೆ ಸೂಚಿಸಿಯಾರು ಎಂದು ಮನಸಿನಲ್ಲೇ ಮಂಡಿಗೆ ಮೇದಿದ್ದೆ ಕೂಡಾ !
ನಮ್ಮ ಮನೆಯಲ್ಲಿ ಕೂಡಾ ಪ್ರತಿ ಶುಕ್ರವಾರ ಮಂಗಳ ಪತ್ರಿಕೆಯನ್ನು ಎಳೆದಾಡಿಕೊಂಡು ಎಲ್ಲರೂ ಓದುತ್ತಿದ್ದರು !
ಆದರೆ ನನ್ನ ಲೇಖನ ಪ್ರಕಟವಾಗಿ ಬಂದ ಶುಕ್ರವಾರ ಆ ಪತ್ರಿಕೆ ಹೊರಗೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ !ಯಾರೂ ಓದಲೇ ಇಲ್ಲ !ನೋಡಿದವರೆಲ್ಲ ಅದನ್ನು ಅಲ್ಲೇ ಅಡಗಿಸಿ ಇತ್ತು ಬಿಡುತ್ತಿದ್ದರು !ಬೇರೆಯವರ ಕಣ್ಣಿಗೆ ಇನ್ನು ಬೀಳದೆ ಇರಲಿ ಎಂದು !
ಹೌದು ಆಗ ನಾನೂ ಕಲಿತೆ !ಇವರುಗಳಿಗೆ ನನ್ನ ಹೆಸರಿನದ್ದು ಸಮಸ್ಯೆ ಅಲ್ಲ !ಸೊಸೆಯಾಗಿ ಇರುವವಳು ಸ್ವಂತ ಅಸ್ತಿತ್ವವನ್ನು ಪಡೆಯುವುದೇ ನಮ್ಮ ಮನೆಯವರಿಗೆ ಸಂಬಂಧಿಕರಿಗೆ ಊರಿನವರಿಗೆ ಇಷ್ಟವಿಲ್ಲದ ವಿಚಾರ ಎಂದು !
ಮನೆ ಸೊಸೆ ರಾಂಕ್ ತೆಗೆದರೆ ,ಆಕೆಯ ಲೇಖನ ಬಂದರೆ ಅದನ್ನು ಕಂಡು ಕರುಬುವ ಮನಸ್ಥಿತಿ ಗೆ ಏನು ಹೇಳುವುದು ?ನನ್ನ ಪತಿ ಪ್ರಸಾದ ರ ನಿರಂತರ ಬೆಂಬಲ ಇಲ್ಲದೆ ಇರುತ್ತಿದ್ದರೆ ನನ್ನ ಪರಿಸ್ಥಿತಿ ಯಾವರುಗಳ ನಡುವೆ ಹೇಗಿರುತ್ತಿತ್ತು ಎಂದು ಊಹಿಸಲು ಕೂಡಾ ಭಯವಾಗುತ್ತದೆ
ಇದು 15 ವರ್ಷ ಹಿಂದಿನ ನಮ್ಮ ಹಳ್ಳಿಯ ಕಥೆ ಈಗಲೂ ಏನೂ ಸುಧಾರಣೆ ಆಗಿರುವುದು ನನಗಂತೂ ಗೊತ್ತಿಲ್ಲ !
ಇದನ್ನೆಲ್ಲಾ ನೋಡುವಾಗ ಹಳ್ಳಿ ಹುಡುಗರಿಗೆ ಹುಡುಗಿ ಕೊಡಲು ಹಿಂದೇಟು ಹಾಕುವ ಹೆತ್ತವರ ಭಯದಲ್ಲಿ ಒಂದಿನಿತು ವಾಸ್ತವತೆ ಸತ್ಯಾಂಶ ಇದೆ ಎಂದೆನಿಸುದಿಲ್ಲವೆ ?
—
No comments:
Post a Comment