ಕನ್ನಡ ನಾಡಿನ ವೀರ ಮಹಿಳೆ ,ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ,
ಬೆಳಗಾವಿ ಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿ ಯಲಿ ಕ್ರಿ.ಶ.1779 ರಲ್ಲಿ
ಚನ್ನಮ್ಮ ಹುಟ್ಟಿದಳು ತಂದೆ
ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ
ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳುಕಿ
ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ
ಮಲ್ಲಸರ್ಜನ ಕಿರಿಯ ಹೆಂಡತಿ ಮಲ್ಲ ಸರ್ಜನ ಸಾವಿನ ನಂತರ ತಾನೆ ಕಿತ್ತೂರು ರಾಜ್ಯದ ಆಡಲಿತವನ್ನು ಮಾಡುತ್ತಾಳೆ .ಪ್ರಸ್ತುತ
ಕಿತ್ತೂರು ಬೆಳಗಾವಿ ಜಿಲ್ಲೆಗೆ ಸೇರಿಕೊಂಡಿದೆ . .ಪರದೇಶಿಗಳಾದ ಬ್ರಿಟಿಷರಿಗೆ ತಲೆಬಾಗಿ ತನ್ನ
ನಾಡನ್ನು ಒಪ್ಪಿಸಲು ಒಪ್ಪದೆ ತನ್ನ ನಾಡಿಗಾಗಿ ಬ್ರಿಟಿಷರ ವಿರುದ್ಧ ಸಮರವನ್ನು ಸಾರಿದ ದಿಟ್ಟತನವನ್ನು ತೋರಿ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡ ಧೀರ ಮಹಿಳೆ ರಾಣಿ ಚನ್ನಮ್ಮ .
ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆ, ಮನ್ರೋ ಹಾಗೂ
ಚಾಪ್ಲಿನನಿಗೆ ಅನುಸಂಧಾನಕ್ಕಾಗಿ ಪತ್ರ ಬರೆದಳು. ಆದರೆ ಬ್ರಿಟಿಷರು
ಕಿತ್ತೂರಿನ ಒಡೆತನವನ್ನೇ ಅಪೇಕ್ಷಿಸಿದಾಗ, ಚೆನ್ನಮ್ಮ
ಮುಂದಾಲೋಚನೆ ಮಾಡಿ ಮೊದಲಾದ ನೆರೆಯ ಸಂಸ್ಥಾನಗಳ
ಸಹಾಯ ಕೋರಿ ಪತ್ರ ವ್ಯವಹಾರ ಮಾಡಿದಳು.21
ಅಕ್ಟೋಬರ್ 1824 ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಇದಾಗಿ ಮೂರನೆಯ ದಿನ, ಅಂದರೆ
ಅಕ್ಟೋಬರ್ 23 ರಂದು ಕೋಟೆಯ ಮೇಲೆ
ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟನು. ಥಟ್ಟನೆ ತೆರೆದ ಕೋಟೆಯ
ಬಾಗಿಲಿನಿಂದ ಕಿತ್ತೂರಿನ ಸಾವಿರಾರು ವೀರರು ಸರದಾರ ಗುರುಸಿದ್ದಪ್ಪನವರ
ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು.
ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು
ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದನು, ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳುಗಳಾದರು. ದೇಶದ್ರೋಹಿಗಳಾದ ಕನ್ನೂರು
ವೀರಪ್ಪ, ಸರದಾರ ಮಲ್ಲಪ್ಪ ಮುಂತಾದವರೂ ಬಲಿಯಾದರು.
ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಪುನಃ ಪತ್ರವ್ಯವಹಾರ ನಡೆಯಿತು. 1824 ಡಿಸೆಂಬರ್ 2
ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಯಿತು. ಆದರೆ ಮಾತಿಗೆ ತಪ್ಪಿದ
ಬ್ರಿಟಿಷರು ಡಿಸೆಂಬರ್ 3 ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು
ಒಡೆಯಲು ಪ್ರಾರಂಭಿಸಿದರು
ಬ್ರಿಟಿಷರ ಆಮಿಷಕ್ಕೆ ಒಳಗಾಗಿ
ಕಿತ್ತೂರಿನ ವರೇ ಕೆಲವು ದ್ರೋಹಿಗಳು ಮದ್ದು ಗುಂಡುಗಳಿಗೆ ಸೆಗಣಿ ಮಣ್ಣು ಬೆರೆಸಿ ಇಟ್ಟ ಕಾರಣ
ಬ್ರಿಟಿಷರ ಸೈನ್ಯ ಬಂದಾಗ ತೋಪು ಸ್ಪೋಟಿಸಲಿಲ್ಲ.ಕೊವಿಗಳಿಂದ
ಗುಂಡು ಸಿಡಿಯಲಿಲ್ಲ ..ತನ್ನವರು ಮಾಡಿದ ಮೊಸದಿಂದಾಗಿ ಯುದ್ಧದಲ್ಲಿ ರಾಣಿ ಚನ್ನಮ್ಮ ಬ್ರಿಟಿಷರಿಗೆ
ಸೆರೆ ಸಿಕ್ಕು ಬೈಲ ಹೊಂಗಲದ ಸೆರೆಮನೆಯಲ್ಲಿ 2
ಫೆಬ್ರುವರಿ 1829 ರಂದು ಸಾವನ್ನಪ್ಪುತ್ತಾಳೆ .
ರಾಣಿ ಚನ್ನಮ್ಮನ ವೈಭವ
ಸಾಹಸಕ್ಕೆ ಸಾಕ್ಷಿಯಾಗಿ ಕಿತ್ತೂರಿನ ಅರಮನೆಯ ಅವಶೇಷಗಳು ,ಕೋಟೆ ,ಕೋಟೆಯನ್ನು ಸ್ಪೋಟಿಸಿ
ಬ್ರಿಟಿಷರು ಒಳನುಗ್ಗಿದ ಕೋಟೆಯ ಭಾಗ ಎಲ್ಲವೂ ಈಗ ಕೂಡ ಅಲ್ಲಿದೆ.ಅರಮನೆಯಲ್ಲಿದ್ದ ಒಂದು ಧ್ರುವ ವ
ನಕ್ಷತ್ರ ವೀಕ್ಷಣಾಲಯ ಕೂಡ ಈಗಲೂ ಅಲ್ಲಿದೆ .
ಎರಡು ವರ್ಷಗಳ ಹಿಂದೆ ಬೆಳಗಾವಿ ವಿಶ್ವ
ವಿದ್ಯಾಲಯದಲ್ಲಿನ ಅಸಿಸ್ಟೆಂಟ್ ಪ್ರೊಫೆಸ್ಸರ್ ಹುದ್ದೆಗೆ ಸಂದರ್ಶಕ್ಕೆ ಹೋಗಿದ್ದಾಗ ಅಲ್ಲಿಗೆ ಸಮೀಪದ
ಕಿತ್ತೂರು ಗೆ ಹೋಗಿ ರಾಣಿ ಚನ್ನಮ್ಮನ ಅರಮನೆಯ ಅವಶೇಷ ,ಕೋಟೆಗಳನ್ನು ನೋಡಿ ಚನ್ನಮ್ಮನ ಸಾಹಸವನ್ನು
ನೆನಪಿಸಿಕೊಂಡು ರೋಮಾಚಂಚನ ಗೊಂಡು ಬಂದಿದ್ದೆ
No comments:
Post a Comment