ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 339-40 ಪಟ್ಟದ ಮುಗೇರ ಮತ್ತು ಬಡಜ ದೈವಗಳು ©ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ದಿನಗಳ ನಂತರ ತುಳುನಾಡ ದೈವಗಳ ಸರಣಿ ಮುಂದುವರಿಸುತ್ತಿರುವೆ .ಕಾಸರಗೋಡು ಜಿಲ್ಲೆಯ ಹೊಸಂಗಡಿ ಮೀಯಪದವು ರಸ್ತೆಯಲ್ಲಿ ಮೂಡಂಬೈಲು ಬಳಿ ಸ್ವಲ್ಪ ಒಳಗೆ ಪಟ್ಟದ ಮುಗರು ಎಂಬ ಗುತ್ತಿನ ಮನೆ ಇದೆ ಪಟ್ಟಾಭಿಷೇಕ ವಾದ ಮುಗೇರ ನಾಯಕನ ಹೆಸರಿನಿಂದಾಗಿ ಈ ಗುತ್ತಿಗೆ ಪಟ್ಟದ ಮುಗರು ಎಂಬ ಹೆಸರು ಬಂದಿದೆ .ಇಲಗಲಿ ಪಟ್ಟವಾದ ಮುಗೇರ ಸಮುದಾಯದ ಇಬ್ಬರು ದೈವತ್ವ ಪಡೆದು ಆರಾಧನೆ ಹೊಂದುತ್ತಿದ್ದಾರೆ .ಇವರಲ್ಲಿ ಹಿರಿಯಾತನ ಹೆಸರು ಬಡಜ ಎಂದು .ಈತ ಈಗಿನ ಬಡಾಜೆ ಪರಿಸರದಲ್ಲಿ ನೆಲೆ ನಿಂತು ಆಡಳಿತ ನಡೆಸಿದ್ದಾನೆ ಈತನ ಹೆಸರಿನ ಕಾರಣಕ್ಕೆ ಆ ಪರಿಸರಕ್ಕೆ ಬಡಾಜೆ ಎಂದು ಹೆಸರು ಬಂತು ಎಂದು ಸ್ಥಳ ಐತಿಹ್ಯ ಪ್ರಚಲಿತವಿದೆ
ಇವರು ಮುಗೇರ ಸಮುದಾಯಕ್ಕೆ ಸೇರಿದ್ದು ತಮ್ಮ ನಿಗೆ ಈಗಿನ ಪಟ್ಟದ ಮುಗೇರು ಎಂಬಲ್ಲಿ ಪಟ್ಟಾಭಿಷೇಕ ವಾಯಿತು .
ಈ ಪರಿಸರವನ್ನು ಆಳುತ್ತಿದ್ದ ಮಂಜೇಶ್ವರದ ಬಂಗ ಅರಸರ ಮೇಲೆ ಶತ್ರುಗಳು ದಾಳಿ ಮಾಡಿದಾಗ ಯುದ್ದದಲ್ಲಿ ಸೋಲುವ ಹಂತ ತಲುಪುತ್ತದೆ .ಈಗಿನ ಪಟ್ಟದ ಮುಗರುಪರಿಸರದಲ್ಲಿ ಅರುವತ್ತು ಎಪ್ಪತ್ತು ಮುಗೇರರ ಮನೆಗಳಿದ್ದವು ಇವರೆ ಬಿಲ್ಜಾಣರಾಗಿದ್ದು ವೀರರಾಗಿದ್ದರು .ಬಂಗರಸ ಇವರ ಸಹಾಯ ಯಾಚಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರೆ ನಿಮಗೆ ಮೂವತ್ತನಾಲ್ಕು ಗ್ರಾಮಗಳನ್ನು ನೀಡುತ್ತೇನೆ ಎಂದು ವಾಗ್ದಾನ ಮಾಡುತ್ತಾನೆ ..ಈ ಮುಗೇರ ಸಹೋದರರು ಯುದ್ದವನ್ನು ಗೆದ್ದು ಕೊಡುತ್ತಾರೆ ಹಾಗೆ ಬಂಗರಸ ಮುವತ್ತನಾಲ್ಕು ಗ್ರಾಮಗಳ ಒಂದು ಮಾಗಣೆಯನ್ನು ಇವರಿಗೆ ಕೊಡುತ್ತಾನೆ . ಹೀಗೆ ಮಾಗಣೆಯ ಹಕ್ಕನ್ನು ಪಡೆದು ಆಡಳಿತ ನಡೆಸುವ ಸಂದರ್ಭದಲ್ಲಿ ಬ್ರಾಹ್ಮಣ ಹುಡುಗಿಯೊಬ್ಬಳನ್ನು ತನಗೆ ಮದುವೆ ಮಾಡಿ ಕೊಡಬೇಕು ಎಂದು ಪಟ್ಟವಾದ ಮುಗೇರ ನಾಯಕ ಬಲವಂತ ಮಾಡುತ್ತಾನೆ .ಆಗ ಅ ಬ್ರಾಹ್ಮಣ ಹುಡುಗಿಯ ಸಂಬಂಧಿಕರು ಅವನನ್ನು ಉಪಾಯವಾಗಿ ಉಪ್ಪಳ ಸಮೀಪದ ಕೋರಿಕ್ಕೋಡು ಎಂಬ ಕಾಡಿಗೆ ಕರೆದು ಕೊಂಡು ಹೋಗಿ ಕೊಲ್ಲುತ್ತಾರೆ ಹೀಗೆ ಅಸಮಾನ್ಯ ಸಾಹಸ ಮೆರೆದು ಪಟಮಾಗಣೆಯ ಅಧಿಕಾರ ವನ್ನು ಪಡೆದು ಪಟ್ಟವಾದ ಮುಗೇರ ನಾಯಕ ದುರಂತವನ್ನಪ್ಪುತ್ತಾನೆ .ದುರಂತಮತ್ತು ದೈವತ್ವ ತುಳುನಾಡಿನ ವಿಶಿಷ್ಟ ಸಂಸ್ಕೃತಿ.ಅಂತೆಯೇ ಪಟ್ಟದ ಮುಗೇರ ಹಾಗೂ ಆತನ ಸಹೋದರ ಬಡಜ ದೈವಗಳಾಗಿ ಆರಾಧನೆ ಹೊಂದುತ್ತಾರೆ ©ಡಾ.ಲಕ್ಷ್ಮೀ ಜಿಪ್ರಸಾದ .ಪಟ್ಟದ ಮುಗರು ಪಾಡಾಂಗಾರೆ ಭಗವತಿಗೆ ನೇಮವಾಗುವಾಗ ಈ ಎರಡು ದೈವಗಳಿಗೆ ಸಾಂಕೇತಿಕವಾಗಿ ಆರಾಧನೆ ಮಾಡುತ್ತಾರೆ
ಇನ್ನೊಂದು ಪ್ರಚಲಿತ ಐತಿಹ್ಯ ಪ್ರಕಾರ ಮಯೂರವರ್ಮ ಕುಂಬಳೆಗೆ ಬಂದಾಗ ಆತನ ಮಗಳು ಸುಶೀಲೆ ಅಸ್ವಸ್ಥಳಾಗುತ್ತಾಳೆ.ಅವಲಿಗೆ ಚಿಕಿತ್ಸೆ ನೀಡಿ ಗುಣ ಪಡಿಸಿದ ಬ್ರಾಹ್ಮಣ ನಿಗೆ ಅವಳನ್ನು ಕೊಟ್ಟು ಮದುವೆಮಾಡಿ ಒಂದು ಮಾಗಣೆಯನ್ನು ಕೊಡುತ್ತಾನೆ .ಅವಳ ಮಗ ಜಯಸಿಂಹ ವೀರ ಧೀರನಾಗಿದ್ದು ಕುಂಬಳೆಯಲ್ಲಿ ಅರಮನೆ ಕಟ್ಟಿ ಸುತ್ತು ಮುತ್ತಲಿನ ಪ್ರದೇಶ ವನ್ನು ವಶಪಡಿಸಿಕೊಂಡು ಆಡಳಿತ ನಡೆಸುತ್ತಾನೆ .ಒಂದು ದಿನ ಬೇಟೆಯಾಡುವಾಗ ಆತ ಬಿಟ್ಟ ಬಾಣ ತಪ್ಪಿ ಬ್ರಾಹ್ಮಣ ನೊಬ್ಬನಿಗೆ ತಗುಲಿ ಅತ ಪ್ರಾಣಬಿಡುತ್ತಾನೆ ಇದರಿಂದ ನೊಂದ ಜಯಸಿಂಹ ರಾಜ್ಯ ಬಿಟ್ಟು ಹೊರಗಡೆ ಇರುತ್ತಾನೆ
ಆಗ ಸ್ಥಳೀಯ ನಾದ ಮುಗೇರನೊಬ್ಬ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡು ಪಟ್ಟವಾಗುತ್ತಾನೆ .ಪ್ರಜೆಗಳನ್ನು ಹಿಂಸಿಸುತ್ತಾನೆ ಆಗ ಶಂಕರ ಭಟ್ಟ ಎಂಬ ಬ್ರಾಹ್ಮಣ ದೇವಿಯನ್ನು ಪ್ರಾರ್ಥನೆ ಮಾಡಿದಾಗ ದುಂಬಿಗಳು ಬಂದು ಆಕ್ರಮಣ ಮಾಡುತ್ತವೆ ಕೋರಿಕ್ಕಾರು ಎಂಬ ಸಮೀಪದ ಕಾಡಿನಲ್ಲಿ ಮಾರಣ ಹೋಮ ನಡೆದು ಮುಗೇರ ನಾಯಕ ಹತನಾಗುತ್ತಾನೆ .ಬಡಜ ಈತನ ಸಮೀಪದ ಸಂಬಂಧಿ ಎಂದು ಈ ಐತಿಹ್ಯ ವು ತಿಳಿಸುತ್ತದೆ .
ಆದರೆ ಈ ಐತಿಹ್ಯ ಗಳ
ಕೇವಲ ಕಟ್ಟು ಕಥೆಯಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಪಟ್ಟದ ಮುಗರಿನಲ್ಲಿ ಇರುವ ಅರಮನೆಯ ಕುರುಹುಗಳು ಇವೆ ಅರಮನೆ ಇದೆ ನ್ಯಾಯ ತೀರ್ಮಾನ ಮಾಡುತ್ತಿದ್ದ ಚಾವಡಿ ಅಲ್ಲಿದೆ .ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ©ಡಾ.ಲಕ್ಷ್ಮೀ ಜಿ ಪ್ರಸಾದ

ಮಾಹಿತಿ ನೀಡಿದ ಯೋಗೀಶ್ ,ಗೋಪಾಲ ಕೃಷ್ಣ ಭಟ್ ಅರಂತಾಡಿ, ರಾಮಪ್ಪ ಆಳ್ವ ,ರತ್ನಮ್ಮ ಪಟ್ಟದ ಮುಗರು ಗುತ್ತು ಇವರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು
ನಿಮ್ಮ ಮಾಹಿತಿಗೆ ಧನ್ಯವಾದಗಳು
ReplyDeleteಓದಿ ಬೆಂಬಲಿಸಿದ ನಿಮಗೆ ಧನ್ಯವಾದಗಳು
ReplyDeleteMahithigagi dhanyavadhagalu madom
ReplyDelete