ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 416 ಪುರುಷರಾಯ© ಡಾ.ಲಕ್ಷ್ಮೀ ಜಿ ಪ್ರಸಾದ
ಪುರುಷ ಎಂಬ ಹೆಸರಿನಲ್ಲಿ ಕಾಂಬೋಡಿದ ಪುರ್ಸ ಭೂತ,ಜೋಗಿ ಪುರುಷ,ಕನ್ನಡ ಯಾನೆ ಪುರುಷ ಭೂತ, ಗರೋಡಿಯ ಪುರುಷರಾಯ ಎಂಬ ನಾಲ್ಕು ದೈವಗಳ ಆರಾಧನೆ ಇರುವ ಬಗ್ಗೆ ನಾನು ಈಗಾಗಲೇ ಬ್ಲಾಗ್ ನಲ್ಲಿ ಬರೆದಿದ್ದೇನೆ.copy rights reserved© Dr Lakshmi g prasad
ಬರಾಯ ಅರಮನೆಗೆ ಸಂಬಂಧಿಸಿದ ಒಂದು ಪುರುಷರಾಯ ಎಂಬ ದೈವದ ಬಗ್ಗೆ ವೇಣೂರು ಅಳದಂಗಡಿಯ ತಿಮ್ಮಣ್ಣ ಅಜಿಲ ಅರಸುಗಳ 24 ನೇ ವಾರಸುದಾರರಾಗಿರುವ ತಿಮ್ಮಣ್ಣಾಜಿಲ ಅರಸು ( ಡಾ.ಪದ್ಮ ಪ್ರಸಾದ್ ) ಅವರು ಮಾಹಿತಿ ನೀಡಿದ್ದಾರೆ.
ವೇಣೂರು ತಿಮ್ಮಣ್ಣಾಜಿಲ ಅರಸುಗಳ ನಾಲ್ಕು ಅರಮನೆಗಳಲ್ಲಿ ಬರಾಯ ಕೂಡ ಒಂದು.
ಈ ಬರಾಯ ಅರಮನೆಯಲ್ಲಿ ಹಿಂದೆ ಓರ್ವ ದೈವ ಭಕ್ತರಾದ ರಾಣಿ ಇದ್ದರು.ಒಂದು ದಿನ ಅರಮನೆಗೆ ಒಬ್ಬ ಸನ್ಯಾಸಿ ಬಂದು ಭಿಕ್ಷೆ ಕೇಳುತ್ತಾನೆ. ಆಗ ರಾಣಿ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಸೌತೆಕಾಯಿ ಯನ್ನು ಭಿಕ್ಷೆಯಾಗಿ ನೀಡುತ್ತಾರೆ. ಇಷ್ಟು ದೊಡ್ಡ ಅರಮನೆಯವರು ಇದನ್ನು ದಾನ ನೀಡುವುದಾ ಎಂದು ಆತ ಕೋಪದಿಂದ ಅದನ್ನು ಒದೆದು ಬಿಸಾಡಿ ಹೋಗುತ್ತಾನೆ.ಆಗ ರಾಣಿ ಇದು ನಂಬಿದ ಸತ್ಯಗಳಿಗೆ ಒಪ್ಪಿಗೆ ಆಗುವುದಾದರೆ ಆಗಲಿ ಎಂದು ಹೇಳುತ್ತಾರೆ.
ಆ ಸನ್ಯಾಸಿ ಅರಮನೆಯಿಂದ ಹೋಗುವ ದಾರಿಯಲ್ಲಿ ಒಂದು ಕಲ್ಲಿನ ಸಂಕ ದಾಟುವಾಗ ,ಸಂಕ ಮುರಿದು ಕೆಳಗೆ ಬಿದ್ದು ,ಸೊಂಟ ಮುರಿಯುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಅರಮನೆಗೆ ಬಟ್ಟೆ ತಂದು ಕೊಡಲು ಬರುವಾಗ ಅರಮನೆಯ ಮಡಿವಾಳ ಇವನನ್ನು ನೋಡುತ್ತಾನೆ.ಬಟ್ಟೆಗಳನ್ನು ಕೊಟ್ಟು ಹಿಂದೆ ಹೋಗುವಾಗ ಈ ಸನ್ಯಾಸಿ ಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸುಶ್ರೂಶೆ ಮಾಡುತ್ತಾನೆ.ಆದರೆ ಅವನಿಗೆ ತುಂಬಾ ಏಟಾಗಿರುತ್ತದೆ.ಅವನು ಸಾಯುವ ಹಂತಕ್ಕೆ ಬಂದಾಗ ಇದು ಸತ್ಯದ ಮಣ್ಣು, ನಾನು ಸತ್ತು ಇಲ್ಲಿ ದೈವವಾಗಿ ಎದ್ದು ನಿಲ್ಲುತ್ತೇನೆ.ಆದರೆ ನಾನು ಆವಾರ ಸ್ವೀಕರಿಸುವ ಮೊದಲು ನೀನು ಆಹಾರ ಸ್ವೀಕರಿಸಬೇಕು ಹೇಳಿ ಸಾಯುತ್ತಾನೆ.ನಂತರ ಪುರುಷರಾಯ ದೈವವಾಗಿ ಅಲ್ಲಿ ಆರಾಧನೆ ಪಡೆಯುತ್ತಾನೆ.ಈಗ ಕೂಡ. ಈ ದೈವಕ್ಕೆ ಆವಾರ ಕೊಡುವ ಮೊದಲಿಗೆ ಆ ಮಡಿವಾಳನ ವಂಶದ ಒಬ್ಬನಿಗೆ ಬದಿಯಲ್ಲಿ ಒಂದು ಬಟ್ಟೆ ಹಾಸಿ ಕುಳ್ಳಿರಿಸಿ ಆಹಾರ ನೀಡುವ ಪದ್ದತಿ ಇದೆ.
ಈ ದೈವಕ್ಕೆ ಮುಖಕ್ಕೆ ಕೆಂಪುಬಣ್ಣವನ್ನು ಹಚ್ಚುತ್ತಾರೆ. ತಲೆಗೆ ಒಂದು ಚವರಿ ಇರುತ್ತದೆ.ತೆಂಗಿನ ತಿರಿಯ ಅಲಂಕಾರವಿರುವುದಿಲ್ಲ .ಗಗ್ಗರ ಕಟ್ಟುತ್ತಾರೆ. ಉಳಿದಂತೆ ಮಾನವ ಸಹಜ ಅಲಂಕಾರ ಇರುತ್ತದೆ.ಈತನಿಗೆ ಒಂದು ಬೆತ್ತ ಆಯುಧವಾಗಿದೆ.ಇದನ್ನು ಅರಸರು ಚಾವಡಿ ನಾಯಕರ ಕೈಗೆ ಕೊಟ್ಟಿರುತ್ತಾರೆ. ಅದನ್ನು ಅವರು ತಂದು ಪುರುಷರಾಯ ದೈವಕ್ಕೆ ನೀಡುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ತಿಮ್ಮಣ್ಣಾಜಿಲ ಅರಸರಿಗೆ( ಡಾ.ಪದ್ಮಪ್ರಸಾದ) ಹೃತ್ಪೂರ್ವಕ ಕೃತಜ್ಞತೆಗಳು
Super
ReplyDeleteಧನ್ಯವಾದಗಳು
Delete