ಕರ್ಕಾಟಕ ಮಾಸದ ಸಮಯದಲ್ಲಿ ಎಂದರೆ ಮಳೆಗಾಲದ ಆರಂಭದಲ್ಲಿ ಮನೆ ಮನೆಗೆ ಬಂದು ಕುಣಿದು ಆರಾಧನೆ ಪಡೆವ ದೈವಗಳು ಇವರು.ಈ ದೈವಗಳನ್ನು ( ತೆಯ್ಯಂ) ಹತ್ತು ಹನ್ನೆರಡು ವರ್ಷದ ಹುಡುಗರು ಕಟ್ಟುತ್ತಾರೆ
ಮೊದಲಿಗೆ ಆದಿ ವೇದನ್ ಮನೆಮನೆಗೆ ಬರುತ್ತಾನೆ ನಂತರ ವೇದತಿ ದೈವ ಬರುತ್ತದೆ ನಂತರ ಗಳಿಂಚನ್ ತೆಯ್ಯಂ ಬರುತ್ತದೆ .
ಈ ಮೂರೂ ದೈವಗಳನ್ನು ಬೇರೆ ಬೇರೆ ಸಮುದಾಯದವರು ಕಟ್ಟುತ್ತಾರೆ.ಆದಿ ವೇದನ್ ತೆಯ್ಯಂ ಅನ್ನು ಮಲಯಾರ್ ಸಮುದಾಯದ ಜನರು ಕಟ್ಟುತ್ತಾರೆ.ವೇದತಿ ತೆಯ್ಯಂ ಅನ್ನು ವಣ್ಣನ್ ಸಮುದಾಯದ ಜನರು ಕಟ್ಟುತ್ತಾರೆ. ಗಳಿಂಚನ್ ದೈವವನ್ನು ಕೋಪಾಳ ಸಮುದಾಯದ ಜನರು ಕಟ್ಟುತ್ತಾರೆ .
ಮಳೆಗಾಲದ ಆರಂಭದಲ್ಲಿ ಮನೆ ಮನೆಗೆ ಬಂದು ಕುಣಿದು ದುರಿತಗಳನ್ನು ದೂರ ಮಾಡುತ್ತವೆ.
ಈ ದೈವಗಳ ಮೂಲ ಪುರಾಣ ಕಥೆಯಲ್ಲಿದೆ.ಮಹಾಭಾರತದಲ್ಲಿ ಅರ್ಜುನ ಪಾಶುಪತಾಸ್ತ್ರ ಪಡೆಯುವುದಕ್ಕಾಗಿ ಘೋರವಾದ ತಪಸ್ಸು ಮಾಡುತ್ತಾನೆ.ಅವನನ್ನು ಪರೀಕ್ಷಿಸುವ ಸಲುವಾಗಿ ಶಿವ ಪಾರ್ವತಿಯರು ಬೇಡರ ರೂಪದಲ್ಲಿ ಬರುತ್ತಾರೆ.ಶಿವನ ಗಣವಾದ ಮೂಕಾಸುರ ಮತ್ತು ಅರ್ಜುನ ಏಕಕಾಲದಲ್ಲಿ ಒಂದು ಹಂದಿಗೆ ಬಾಣ ಪ್ರಯೋಗ ಮಾಡುತ್ತಾರೆ.ಇದರಿಂದಾಗಿ ಅರ್ಜುನ ಮತ್ತು ಶಿವನ ನಡುವೆ ಹೋರಾಟವಾಗುತ್ತದೆ.ಕೊನೆಯಲ್ಲಿ ಕೃಷ್ಣ ಅರ್ಜುನನಿಗೆ ಬಂದಾತ ಶಿವನೆಂದು ತಿಳಿಸುತ್ತಾನೆಆಗ ಅರ್ಜುನ ಬೇಡ ರೂಪಿ ಶಿವನಿಗೆ ಶರಣಾಗುತ್ತಾನೆ.ಹೀಗೆ ಬೇಡ,ಬೇಡತಿಯರ ರೂಪದ ಶಿವ ಪಾರ್ವತಿಯರನ್ನು ಆದಿವೇಡನ್ ಮತ್ತು ವೇಡತಿ ಎಂಬ ಹೆಸರಿನ ದೈವವಾಗಿ ಆರಾಧನೆ ಮಾಡುತ್ತಾರೆ.ಅರ್ಜುನನ್ನು ಗಳಿಂಚನ್ ತೆಯ್ಯಂ ಎಂದು ಕಟ್ಟಿ ಆರಾಧನೆ ಮಾಡುತ್ತಾರೆ.

No comments:
Post a Comment