ತುಳುವರ ಭೂತಾರಾಧನೆ ಕೇವಲ ತುಳುನಾಡಿಗೆ ಸೀಮಿತವಲ್ಲ.ಚಿಕ್ಕಮಗಳೂರಿನ ಹಳ್ಳಿ ಬೈಲು ಕೊಪ್ಪ ಸಮೀಪ ಸುಮಾರು ಇನ್ನೂರು ವರ್ಷದ ಹಿಂದಿನ ಸಾನದ ಮನೆ ಇದೆ.ಭೂತಸ್ಥಾನದ ಮನೆ ಎಂಬುದೇ ಸಾನದ ಮನೆ ಎಂದಾಗಿರುತ್ತದೆ.ಈ ಮನೆಯ ಯುವಕರಾದ ರೂಪೇಶ್ ಪೂಜಾರಿಯವರು ಇಲ್ಲಿ ಆರಾಧನೆ ಆಗುವ ಒಂದು ಅಪರೂಪದ ದೈವದ ಬಗ್ಗೆ ತಿಳಿಸಿದ್ದಾರೆ.
ಇಲ್ಲಿ ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನ ಒಂದು ದೈವಕ್ಕೆ ಆರಾಧನೆ ಇದೆ.ಈ ದೈವ ಪಂಜುರ್ಲಿ ದೈವವಲ್ಲ.ಪಂಜುರ್ಲಿ ದೈವದ ಸೇರಿಗೆಗೆ ಸಂದ ಬ್ರಾಹ್ಮಣ.
ಆ ಸಾನದ ಮನೆಯ ಪಂಜುರ್ಲಿ ದೈವವನ್ನು ಓರ್ವ ಬ್ರಾಹ್ಮಣ ಅರ್ಚಕರು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ.ಕಾಲಾಂತರದಲ್ಲಿ ಅವರು ಮರಣವನ್ನಪ್ಪಿದ ನಂತರ ದೈವತ್ವ ಪಡೆದು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ.
ಅವರು ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾರೆ.
ಈ ದೈವಕ್ಕೆ ಸಸ್ಯಾಹಾರವನ್ನು ಎಡೆ ಇಡುತ್ತಾರೆ.ಇದು ಈ ದೈವದ ಬ್ರಾಹ್ಮಣ ಮೂಲವನ್ನು ಸೂಚಿಸುತ್ತದೆ.
ಮಾಹಿತಿ ನೀಡಿದ ರೂಪೇಶ್ ಅವರಿಗೆ ಕೃತಜ್ಞತೆಗಳು.

No comments:
Post a Comment