ನಿಮ್ಮನ್ನು ಕಾಲೆಳೆದವರಿಗೂ ಪುಸ್ತಕ ದಲ್ಲಿ ಸ್ಥಾನ ಕೊಟ್ಟಿದ್ದು ನಿಜವಾಗಿಯೂ ನಿಮ್ಮ ದೊಡ್ಡತನ- ಅಪೂರ್ವ ಕೋಲ್ಯ
ನಮಸ್ತೆ ಮೇಡಮ್ ಪುಸ್ತಕ ತಲುಪಿತು.. ಪುಸ್ತಕ ದಲ್ಲಿದ್ದ ನಿಮ್ಮಮನದಾಳದ ಮಾತುಗಳನ್ನು ಓದಿದೆ..
ನೀವು ಬರೆದ ಪುಸ್ತಕ ನನ್ನ ಗಮನ ಸೆಳೆಯಲು ನೀವು ಮಹಿಳೆ ಎನ್ನುವುದೇ ಆಗಿತ್ತು.ಕಾರಣ ಇಷ್ಟೆ ಹಳ್ಳಿಗಳಲ್ಲಿ ಒಂದು ರೀತಿಯ ಕಟ್ಟು ಪಾಡುಗಳಿವೆ. ಮಹಿಳೆಯರು ಕೆಲವು ಆಚರಣೆ ಗಳನ್ನು ಮಾಡಬಾರದು. ಮತ್ತು ಭಾಗವಹಿಸಬಾರದು ಎಂದು. ದೇವರ ವಿಚಾರಗಳಿಗಿಂತ ದೈವದ ವಿಚಾರಗಳಲ್ಲಿ ಇದು ಹೆಚ್ಚು. ಇಂತ ಕಟ್ಟುಪಾಡುಗಳ ನಡುವೆ ಈ ಸಂಶೋಧನೆಯ ಹಾದಿ ಖಂಡಿತ ಹೂವಿನ ಹಾದಿಯಾಗಿರುವುದಿಲ್ಲ ಎಂದು ಗೊತ್ತಿತ್ತು..
ನಿಮ್ಮ ಮನದಾಳದ ಮಾತುಗಳನ್ನು ಓದಿದಾಗ ಆ ಹಾದಿ ನಾನು ಅಂದುಕೊಂಡದ್ದಕ್ಕಿಂತಲೂ ಬಹಳ ಕಠಿಣ ವಾಗಿತ್ತು ಎಂಬುದು ಅರಿವಾಯಿತು.
ಛಲ ಬಿಡದ ನಿಮ್ಮ ಹೆಜ್ಜೆ ಎಲ್ಲಾ ಹೆಂಗಳೆಯರಿಗೂ ಸ್ಪೂರ್ತಿ... ವಾಹನದ ಹಿಂದಿದ್ದ ಬರವೊಂದನ್ನು ಓದಿದ್ದೆ "ಶತ್ರುಗಳ ಆಶೀರ್ವಾದ" ನಮ್ಮನ್ನು ಸದಾ ಬೆಂತಟ್ಟುವರೇ ಜೊತೆಯಲ್ಲಿದ್ದರೆ ನಮ್ಮ ಬೆಳವಣಿಗೆ ಯವುದೋ ಒಂದು ಹಂತದಲ್ಲಿ ನಿಂತು ಬಿಡುವ ಸಾಧ್ಯತೆ ಇರುತ್ತದೆ..
ಆದರೆ ನಮ್ಮನ್ನು ಕಾಲೆಳೆಯುವವರು ಇದ್ದರೆ ಒಂದಷ್ಟು ಹತಾಶರಾಗೋದು ಸಹಜ ಆದರೆ ಅದೇ ನಮ್ಮನ್ನು ಇನ್ನೂ ಬೆಳೆಯಲು ಇನ್ನೂ ನಮ್ಮನ್ನು ನಾವು ನಾವು ಹೆಚ್ಚು ಬೆಳೆಸಲು ಸಹಾಯ ಮಾಡುತ್ತದೆ ಅನ್ನೋದು ಸತ್ಯ..
ಅಪೂರ್ವ ಕೊಲ್ಯ
No comments:
Post a Comment