ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ ಗ್ರಂಥ- ಶ್ರೀನಿಧಿ ರಾವ್
ಸಿಗಬೇಕಿರುವುದು ಸಿಕ್ಕೇ ಸಿಗುತ್ತದೆ. ಆಗಬೇಕಿರುವುದು ಆಗೇ ಆಗುತ್ತದೆ.
ಡಾ. ಲಕ್ಷ್ಮಿ ವಿ. ಅವರ ಐತಿಹಾಸಿಕ ಗ್ರಂಥದ ಕರಡು ಬರಹ ಓದುವ ಸೌಭಾಗ್ಯ ಮೊದಲಿಗೆ ದೇವರು ಕರುಣಿಸಿದ್ದು ಯಾಕಿರಬಹುದು ಅಂತ ಇನ್ನು ಯೋಚಿಸ್ತಾ ಇದ್ದೀನಿ.
ಗ್ರಂಥ ರೆಡಿ ಆಗಿ ಅವರಿಗೆ ಸಿಕ್ಕಾಗ ತುಂಬಾ ಖುಷಿ ಆಗಿತ್ತು. .. ಆದರೆ ಅಯ್ಯಾ.. ನಾನು ಪುಸ್ತಕ ಹಿಡಿದು ಓದಲು ಇನ್ನು ಎಷ್ಟು ಸಮಯ ಕಾಯಬೇಕು ಅನ್ನಿಸಿತ್ತು. ಯಾರು ಬರುವವರು ಇದ್ದಾರೆ? ಸ್ವಲ್ಪ ಯೋಚಿಸಿದೆ. ಒಂದೆರಡು ಹೆಸರು ತಲೆಗೆ ಬಂದ್ರೂ ಕೇಳೋಕೆ ಹೋಗಲಿಲ್ಲ.
ಮೊನ್ನೆ ಮಂಗಳವಾರ ಅಚಾನಕ್ಕಾಗಿ Jevitha Rodrigues ಜೊತೆ ಮಾತಾಡಿದಾಗ ಹೊಸ ಬೆಳಕು ಮೂಡಿ ಇವತ್ತು ಕೈಗೆ ಪುಸ್ತಕ ಸಿಕ್ಕಿತು. ಗ್ರಂಥವನ್ನು ಹೊತ್ತು ತಂದು ಕೊಟ್ಟ ಉಮಾಶಂಕರ್ ಅವರಿಗೆ ವಂದನೆಗಳು .
ನಿಜಕ್ಕೂ ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ ಗ್ರಂಥ.
ನಾನು ಲಕ್ಷ್ಮಿ ಅಕ್ಕ ಹೇಗೆ ಪರಿಚಯ ಆದೆವು. ನಮ್ಮ ಪರಿಚಯದ ಹಿಂದೆ ದೇವರು ಅದೆಂತಹ ಉನ್ನತವಾದ ಕಾರಣ ಇಟ್ಟಿದ್ದ. ಮೂಲತಃ ನಾನು ಸೋಮಾರಿ ಯಾವುದನ್ನು ತಾನಾಗಿ ಕೈಗೆ ತಗೊಂಡು ಮಾಡುವ ಕತೆ ಇಲ್ಲ. ಹೇಗೋ ಇದೊಂದು ಕಾರ್ಯ ನಾನು ನಂಬುವ ದೈವ ದೇವರು ಮಾಡಿಸಿದರು .
🙏🙏🙏
No comments:
Post a Comment