Saturday, 14 October 2023

ಕರಿಯ ಕನ್ಯಾ ಮದನು ಪಾಡ್ದನ( ಕನ್ನಡ ಅನುವಾದ) ಡಾ.ಲಕ್ಷ್ಮೀ ಜಿ ಪ್ರಸಾದ್

 


ಶಾರದಾ ಜಿ ಬಂಗೇರರು ಹಾಡಿದ ಕರಿಯ ಕನ್ಯಾ ಮದನು ಎಂಬ ತುಳು ಪಾಡ್ದನದ ಕನ್ನಡ ಅನುವಾದ - ಡಾ.ಲಕ್ಷ್ಮೀ ಜಿ ಪ್ರಸಾದ್ 



ಡೆನ್ನ ಡೆನ್ನ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ

ಏಳು ಜನ ಕಬೇರರು೧ 

 ಏಳು ಜನ ಕಬೇರರಿಗೆ

ಒಬ್ಬಳೇ ಅವಳು ತಂಗಿಯAತಯೆ 

 ಕರಿಯ ಕನ್ಯಾ ಮದನು

ಯಾರಮ್ಮ ಮದನು ಯಾರು ಮಗ ಮದನು

ಒಂದೆರಡು ಬಂಗಾರವಲ್ಲ ಸಾವಿರ ಗಟ್ಟಲೆ ಬಂಗಾರ

ಬೇರೆ ಒಡವೆ ಬೇಕೆ ಏನು ಬೇಕೆಂದು ಕೇಳಿದರು

ತಂದೆ ತಾಯಿ ಇಲ್ಲದ ಮಗುವನ್ನು

ಬಾರಿ ಕೊಂಡಾಟದಿAದ ಸಾಕಿದ್ದಾರೆ 

 ಏಳು ಜನ ಕಬೇರುರ

ಡೆನ್ನ ಡೆನ್ನ ಡೆನ್ನಾನಾ ಓಯೆ ಓಯೇ ಡೆನ್ನ ಡೆನ್ನ ಡೆನ್ನಾನಾ

ಏಳು ಜನ ಕಬೇರರು ಏಳು ಏಳು ವಿಧ

ಬಂಗಾರು ಹಾಕಿ ಮತ್ತೂ ಕೇಳುವರು 

 ಅಣ್ಣಂದಿರು ಏಳು ಜನ ಕಬೇರರು

ಏನೆಲ್ಲ ತಂದಿದ್ದೀರಿ ಅಣ್ಣ ನನಗೇನೂ ಆಸೆ ಇಲ್ಲ

ಚೊಚ್ಚಿಲ ಬಸುರಿ ಆದ ಕರಿಯ ಕನ್ಯಾ ಮದನು

ಅಣ್ಣಂದಿರನ್ನು ಕರೆದು ಹೇಳುವಳು 

 ತಲೆಗೂದಲಿಗೆ ಮುತ್ತು ಪೋಣಿಸಬೇಕು

ಎಂದು ಆಸೆ ಇದೆ ಎಂದು ಹೇಳುವಳಪ್ಪ 

 ಕರಿಯ ಕನ್ಯಾ ಮದನು

ಯಾರಪ್ಪ ಅಣ್ಣಂದಿರಿ ನಿನ್ನ ಅತ್ತಿಗೆಯಂದಿರು ಇದ್ದಾರಲ್ಲ

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಮಗಳೆ ಕೇಳು ಅರ‍್ಹೇಗೆ ನೋಡುವರು ನಿನ್ನನ್ನು

ಅರ‍್ಹೇಗೆ ನೋಡುವರು ನಿನ್ನನ್ನು ಹಾಗೆಯೇ ನೋಡು ಎಂದು

ಹೇಳಿ ಏಳು ಕಡಲಿನ ಹೊರಗೆ ಹೋಗುವರು

ಏಳು ಜನ ಕಬೇರರು 

 ಮುತ್ತನ್ನು ತಂದರು ಏಳು ಜನ ಕಬೇರರು

ಮುತ್ತನ್ನು ಪೋಣಿಸಿದರು ಏಳು ಜನ

ಒಂದು ತಲೆ ಕೂದಲಿಗೆ ಒಂದು ಮುತ್ತಿನಂತೆ

ಏಳು ಜನ ಪೋಣಿಸಿದಾಗ ತಲೆ ತುಂಬ ಮುತ್ತು ಆಯಿತು

ಬಯಕೆ ಸಮ್ಮಾನ ಆಗಿ ಹೊಳೆಯನ್ನು ದಾಟಿ

ಹೋಗಬೇಕು ಮಗಳನ್ನು ಕರೆದುಕೊಂಡು ಆ ಕಾಲದಲ್ಲಿ

ಒಂದು ಹೊಳೆಯನ್ನು ದಾಟಿ ಆದಾಗ 

 ಕದ್ರಿಗೆ ಬಂದು ಮುಟ್ಟುತ್ತದೆ

ಆ ಹೊತ್ತಿಗೆ ಯಾರಮ್ಮ ತಂಗಿ 

 ನೀರು ಬಾಯಾರಿಕೆಗೆ ಕುಡಿಯಮ್ಮ

ಹಸಿವಿಗೆ ಊಟ ಮಾಡಬೇಕು 

 ಏನು ನಾವು ಮಾಡುವುದೆಂದು ಹೇಳಿದರು

ಅಣ್ಣಂದಿರು ಏಳು ಜನ ಕಬೇರರು 

 ಆ ಹೊತ್ತಿಗೆ ಅತ್ತಿತ್ತ ನೋಡುವರು

ಒಬ್ಬ ಹೊಗಿ ಅಕ್ಕಿ ತರುತ್ತಾನೆ 

 ಒಬ್ಬ ಹೋಗಿ ಬೆಂಕಿ ತರುತ್ತಾನೆ

ಒಬ್ಬ ಹಓಗಿ ನೀರು ತರುತ್ತಾನೆ 

 ಏಳು ಜನ ಸೇರಿ ಏಳು ವಸ್ತು ತಂದರು

ಒAದು ಗೋಳಿ ಮರದ ಬುಡದಲ್ಲಿ 

 ಒಂದು ಕಲ್ಲಿನ ಒಲೆಯನ್ನು ನೋಡಿ

ಮೂರು ಕಲ್ಲು ಜೋಡಿಸಿ ಇಟ್ಟು 

 ಒಂದು ಸೇರು ಅಕ್ಕಿ ಬೇಯಲು ಇಟ್ಟು

ಬೇಯಿಸಿ ಚಟ್ನಿಯನ್ನು ಅರೆದು 

 ನಾವು ಕದಿರೆಯ ನಾವು ಕೆರೆಗೆ ಹೋಗಿ

ಸ್ನಾನ ಮಾಡಿ ಬರುವೆವು ತಂಗಿ ಎಂದು

ಹೇಳಿದರಪ್ಪ ಕಬೇರರು ಏಳು ಜನ ಕಬೇರರು

ಆ ಹೊತ್ತಿಗೆ ನೀರಿಗೆ ಹೋಗಿ ಇನ್ನು

ಕದಿರೆಯ ಏಳು ಕೆರೆಯಲ್ಲಿ ಸ್ನಾನ ಮಾಡಿ

ಶುದ್ಧ ಮುದ್ರಿಕೆಯಾಗಿ ನಾವು ಊರಿಗೆ ಹೋಗೋಣ

ತಂಗಿಯ ಹೆರಿಗೆ ಸುಸೂತ್ರವಾಗಿ 

 ಸುಖವಾಗಿರಲೆಂದು ನೆನೆಸಿಕೊಂಡು

ಹಣ್ಣುಕಾಯಿ ಮಾಡಿಸಿ ಬರುವ ಎಂದು

ಹೋಗುವರಪ್ಪ ಕಬೇರರು ಏಳು ಜನ ಅಣ್ಣಂದಿರು

ಹೋಗುವಾಗ ಕಾಣುತ್ತದೆಯಲ್ಲಿ ತೆಂಗಿನ ತೆಪ್ಪಂಗಾಯ

ಅಡಕೆಯ ಜೂಜು ಗುಬ್ಬಿಗಳ ನಾಟಕ

ವೇಶ್ಯೆಯರ ಮೇಳ ಉಂಟAತೆ ಅದನ್ನು ಹೀಗೆ ನೋಡುವಾಗ

ಗಂಡಸರು ಹೋಗುವ ಜಾಗವೆಂದು ಹೋಗುವರಪ್ಪಾ

ಅಣ್ಣಂದಿರು ಏಳು ಜನ ಕಬೇರರು 

 ಅಷ್ಟು ಮಾತು ಕೇಳುವರು ಅಣ್ಣಂದಿರು

ನಾವು ಗಂಡು ಗಂಡಸರಲ್ವ ಹೋಗುವ

ತಮ್ಮಂದಿರೆ ಎಂದು ತೆಂಗಿನ ಕಆಯಿ ತೆಪ್ಪಂಗಾಯಿ

ಅದರಲ್ಲಿಯೂ ಮೇಲಾದರು ಅಡಿಕೆಯ ಜೂಜಿಗೆ

ಹೋದರು ಅದರಲ್ಲಿಯೂ ಗೆಲುವನ್ನು ಪಡೆದರು

ವೇಶ್ಯೆಯರ ಮೇಳಕ್ಕೆ ಹೋದರು

ಅದರಲ್ಲಿಯೂ ಅವರದೇ ಮೇಲುಗೈ ಆಯಿತು

ಗುಬ್ಬಿಗಲ ನಾಟಕಕ್ಕೆ ಹೋದರು 

 ಅದರಲ್ಲಿಯೂ ಗೆಲುವನ್ನು ಪಡೆದರು

ಯಾರಯ್ಯ ಅವರು ಏಳುಜನ ಹುಡುಗರೆಂದು

ಕೇಳಿದರು ಬಂಗೇರರು ಕದಿರೆಯ ಬಂಗೇರರು

ಕೆಲಸದವರನ್ನು ಸಿಪಾಯಿಗಳನ್ನು ಕರೆಸಿದರು

ಅವರನ್ನು ಕೈಕಾಲು ಕಟ್ಟಿ ಹಾಕಿರಿ

ಅವರನ್ನು ಕೊಂಡು ಹೋಗಿ ನೀವು ಸೆರೆಮನೆಯಲ್ಲಿಡಿ

ಎಂದು ಹೇಳಿದರು ಕದಿರೆಯ ಬಂಗೇರರು

ಕೈ ಕಾಲನ್ನು ಕಟ್ಟಿ ಸಂಕೋಲೆ ಬಿಗಿದು

ತೆಗೆದುಕೊಂಡು ಹೊಗಿ ಅವರನ್ನು ಏಳು ಗುಮಡದ

ಒಳಗೆ ಹಾಕುವರು ಏಳುಜನ ಅಣ್ಣಂದಿರನ್ನು

ಕಾದು ಕಾದು ಕತ್ತಲೆ ಆಗುವಾಗ ಅಣ್ಣಂದಿರು

ಕಾಣಿಸುವುದಿಲ್ಲವೆAದು ಬಹಳ ವೇಸರದಲ್ಲಿ

ಕೆರೆಯ ಬದಿಗೆ ಮಡಲಿನ ಬದಿಯಲ್ಲಿ

ಕದಿರೆಯ ದಾರಿಯಲ್ಲಿ ಬಂತು ನಿಂತಳು

ಯಾರಮ್ಮ ನೀವು ಕೇಳಿರಿ ಎಂದಾಗ 

 ಅಣ್ಣಂದಿರು ಏಳು ಜನ ಕಬೇರರು

ಎಲ್ಲಿಗೆ ಹೋಗುವರೆಂದು ಹೇಳಿದರೆ ಕೇಳುವಾಗ

ತೆಂಗಿನ ತೆಪ್ಪಂಗಾಯ ಅಡಿಕೆಯ ಜೂಜು

ಆಟವನ್ನು ಆಡಿದರು ಅದರಲ್ಲಿ ಎಲ್ಲ ಗೆದ್ದರೆಂದು

ಅವರನ್ನು ಸಂಕೋಲೆ ಬಿಗಿದು ಕತ್ತಲೆಯ

ಮನೆಗೆ ಹಾಕಿದ್ದಾರೆಂದು ಹೇಳುವರು ಹುಡುಗರು

ಅಷ್ಟು ಮಾತನ್ನು ಕೇಳುವಳು

ಅಯ್ಯಯ್ಯೋ ದೇವರೆ ಉಳೊ ಉಳೊ ದೇವರೆ

ಅಳುವಳು ಬಸುರಿ ಹೆಂಗಸು ನಾನು ಎಲ್ಲಿಗೆ

ಹೋಗುವುದೆಂದು ಬಹಳ ದೊಡ್ಡ ಬೇಸರದಲ್ಲಿ

ಬರುವಳು ಮಗಳು ಅವಳು ಕರಿಯ ಕನ್ಯಾ ಮದನು

ಡೆನ್ನಾನಾ ಡೆನ್ನಾನ ಬಂಗೇರೆ ನನ್ನ ಒಂದು ಅಣ್ಣನವರನ್ನು

ಬಿಡಿರಿ ಬಂಗೇರರೆ ನಿಮಗೆ 

 ಏನು ಬೇಕು ನಾವು ಕೊಡುವೆವು ಅಣ್ಣನವರೆಂದು

ಕೈ ಕಾಲು ಹಿಡಿಯುವಳು ಅಡ್ಡ ನೀಟ ಬಿದುದ

ಬಸುರಿ ಹೆಣ್ಣು ಅವಳು ಬೇಡಿಕೊಂಡಳು

ಕರಿಯ ಕನ್ಯಾ ಮದನು 

 ಆ ಹೊತ್ತಿಗೆ ಹೇಳುವರು

ಯಾರಯ್ಯ ಕೆಲಸದವರೆ ಅವಳು ಎಂಥದ್ದು

ಹಕ್ಕಿಯ ಹಾಗೆ ಚೊರೆ ಚೊರೆ ಹೇಳುವುದು

ಕೊರಳಿಗೆ ಕೈ ಹಾಕಿ ನೂಕಿರಿ ಎಂದು ಹೇಳಿದನು

ಅವನು ಕದಿರೆಯ ಬಂಗೇರ

ಅಷ್ಟೊAದು ಮಾತನ್ನು ಕೇಳಿದಳು ಮಗಳು ಅವಳು

ಯಾರಯ್ಯ ಬಂಗೇರ ಬಿಡುವುದಾದರೆ ಬಿಡು

ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗುವಾದರು

ನಿನ್ನ ಏಳುಪ್ಪರಿಗೆ ಮನೆಯನ್ನು 

 ಬೀಳಿಸದೆ ಬಿಡಲಾರೆ ಎಂದು

ನನ್ನ ಅಣ್ಣಂದಿರನ್ನು ಬಿಡಿಸಿಕೊಂಡು ಬರುವ

ನನ್ನ ಮಗ ಬಂದು ಎಂದು ಹೇಳಿ

ಮಣ್ಣು ಮುಟ್ಟಿ ಆಣೆ ಕೊಡುವಳು ಮಗಳು

ಅವಳು ಕರಿಯ ಕನ್ಯಾ ಮದನು

ಇಳಿದುಕೊಂಡು ಬಂದು ಆನೆಕಲ್ಲು ಹತ್ತುವಾಗ

ಮೇಲೆ ಮೇಲೆ ನೋವು ಬಂದು ಅಯ್ಯಯ್ಯೋ

ದೇವರೆ ನನ್ನ ಅಣ್ಣನವರು

ಯಾರು ಇಲ್ಲ ಎಲ್ಲಿಗೆ ಹೋಗಲಿ ನಾನು ಎಂದು 

ಒಂದು ಮಡಿಕೆಯಲ್ಲಿ ಅನ್ನ ಬೇಯಿಸಿ

ಗೋಳಿಮರದ ಜಂತಿಗೆ ಕಟ್ಟಿ ಯಾವಾಗ

ನನ್ನ ಅಣ್ಣನವರು ಏಳು ಜನ ಸೇರಿ

ಎಂಟು ಆಗುತ್ತದೆ ನನ್ನ ಹೊಟ್ಟೆಯಲ್ಲಿರುವ ಮಗು ಸೇರಿ

ಒಂಬತ್ತು ಜನ ಸೇರಿ ಊಟ ಮಾಡುವ ಕಾಲದ ತನಕ

ಬಿಸಿಯಾಗಿಯೇ ಇರಬೇಕು ಎಂದು ಜಂತಿಗೆ ಕಟ್ಟಿ

ನಾರಾಯಣ ದೇವರಿಗೆ ಸೂರ್ಯಚಂದ್ರ ದೇವರಿಗೆ

ಆಣೆ ಕಟ್ಟಿ ಇಡುವಳು ಕರಿಯ ಕನ್ಯಾಮದನು

ಡೆನ್ನಾ ಡೆನ್ನಾ ಡೆನ್ನಾನಾಗೆ ಉಡು ಉಡೋ ನೋವು ಬಂದಿತು

ಮುAಡಿ೨ಯ ಬುಡದಲ್ಲಿ ಕುಳಿತು ಕೊಳ್ಳುವಳೆ ಮಗಳೆ

ಮೇಲೆ ಮೇಲೆ ನೋವು ಬಂದು ಗಂಡು ಮಗುವನ್ನು

ಹೆರಿಗೆಯ ನೋವಿನಲ್ಲಿ ಹೆರುವಳಪ್ಪಾ ಮಗಳು

ಒಂದು ತೆಕಲ್ಕಿಯ೩ ಎಲೆ ಕೊಂಡು ತಂದು ಮಗುವನ್ನು

ಮಲಗಿಸಿ ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರೆಂದು ಹೇಳಿ

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಕಡಲಿನಲ್ಲಿ ಬಿಡುವಳಪ್ಪ ಕರಿಯ ಕನ್ಯಾಮದನು

ಸುತ್ತಿದ ಸೀರೆ ಹರಿದು ಹೋಗುತ್ತದೆ ತೆಕ್ಕಿಯೆಲೆ ಕಟ್ಟಿಕೊಂಡು

ಸೊAಟದ ಸುತ್ತ ತೆಕ್ಕಿಯೆಲೆ ಕಟ್ಟಿಕೊಂಡು

ಮಾನವನ್ನು ಮುಚ್ಚಿಕೊಂಡು ಮುಂಡೇವಿನ೪ ಪೊದರಿಯಲ್ಲಿ

ಕಾಲವನ್ನು ಕಳೆದುಕೊಂಡು ಇರುವಳು

ಮಗಳು ಕರಿಯ ಕನ್ಯಾಮದನು

ಏಳೇಳು ಹದಿನಾಲ್ಕು ವರ್ಷಗಳು ಹಾಗೆ ಕಾಲ ಕಳೆದು

ಕಾಡಿನಲ್ಲಿ ವಾಸವಾಗಿ ಇರಲು ಒಂದು 

ಕಾಡು ಮನುಷ್ಯ ಉಂಟೆAದು ಊರು ತುಂಬ

ಸುದ್ದಿ ಆಗಿಕೊಂಡು ಇರುವ ಕಾಲದಲ್ಲಿ

ಮಗುವಿಗೆ ಇಪ್ಪತ್ತು ವರ್ಷ ಪ್ರಾಯ ತುಂಬಿ

ಬರುತ್ತದೆ ಕರಿಯ ಕನ್ಯಾಮದನುವಿನ ಮಗನಿಗೆ

ಊರಿನಲ್ಲಿ ದೊಡ್ಡ ಅರಸುವಿಗೆ ಏಳು ಉಪ್ಪರಿಗೆ

ಮೇಲೆ ಕುಳಿತುಕೊಳ್ಳುವ ಅರಸುವಿಗೆ ಮಕ್ಕಳು

ಇಲ್ಲದೆ ಇರುವ ಕಾಲದಲ್ಲಿ ಮೀನು ಹಿಡಿಯುವ

ಮೀನು ಹಿಡಿಯುವ ಮರಕ್ಕಾಲರ೫ ಬಲೆಗೆ ಬಿದ್ದ

ಮಗುವನ್ನು ತೆಗೆದುಕೊಂಡು ಬಾರಿ ಚಂದದಲ್ಲಿ

ಸಾಕಿ ಅರಸುವಿನ ಮನೆಯಲ್ಲಿ ಬಿಡುವರು

ಮರಕ್ಕಾಲರು ಮೀನಿನ ಮರಕ್ಕಾಲರು

ಆ ಹೊತ್ತು ಆಗುವಾಗ ನಂದಾವರದ ಅರಸು

ಕೇಳುವಾಗ ಮಗುವಾದರೂ ದೊಡ್ಡವನಾಗಲು

ಅವನನ್ನು ಕರೆದುಕೊಂಡು ಕಾಡಿಗೆ ಹೋಗುತ್ತಾರೆ

ಕಾಡಿನಲ್ಲಿ ಬೇಟೆಯಾಡುವಾಗ ಒಂದು ಕಾಡು ಮನುಷ್ಯ

ಇದೆ ಎಂದು ಕಾಣಿಸುತ್ತದೆ ಕರಿಯ ಕನ್ಯಾಮದನು

ಅತ್ತಿತ್ತ ನೋಡುವಾಗ ಮಗನನ್ನು ನೋಡುವಾಗ

ಗಂಡನ ನೆನಪಾಗಿ ಸೂರ್ಯಚಂದ್ರ ದೇವರಂತೆ

ಬೆಳೆದ ಮಗ ಯಾರೆಂದು ನೆನೆಯುತ್ತಾಳೆ

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಮಗಳು ಅವಳು ಕರಿಯ ಕನ್ಯಾಮದನು

ಹಿಡಿದ ಬಿಲ್ಲು ಬಾಣವನ್ನು ಕೆಳಗೆ ಹಾಕು ಮಗ

ನಿನ್ನ ತಾಯಿ ಅವಳು ಎಂದು ಮೀನನ್ನು

ಹಿಡಿಯುವ ಮರಕ್ಕಾಲ ಹೇಳುವಾಗ 

 ಭಾರಿ ದೊಡ್ಡ ಆಶ್ಚರ್ಯದಲ್ಲಿ

ಓಡಿ ಬಂದು ಅಪ್ಪಿಕೊಂಡು ಬಂದು ಏನು ಆಯಿತು

ತಾಯಿಯವರೆಂದು ಕೇಳುವಳಪ್ಪ ಮಗ ಅಲ್ಲಿ

ಗಂಡು ಮಗು ಕೇಳುವಾಗ ನೀನು ಯಾರು ಅರಸು ಮಗ

ಇಲ್ಲಿಗೆ ಯಾಕೆ ಬಂದೆ ನಾನು ಯಾರು

ತಾಯಿ ಎಂದು ನಿನಗೆ ಹೇಗೆ ಗೊತ್ತಾಯಿತ್ತೆಂದು

ಕೇಳುವಳು ಕರಿಯ ಕನ್ಯಾಮದನು

ಇಲ್ಲಿ ತಾಯಿಯವರೆ ನೀವು ತೇಲಿ ಬಿಟ್ಟ ನನ್ನನ್ನು

ಮಗುವನ್ನು ತಂದವರು ನಿಮ್ಮನ್ನು ನೋಡಿದ ಜನರು ಹೇಳಿದ್ದಾರೆ

ನಿಮಗೆ ಈ ಕಷ್ಟ ಯಾರಿಂದ ಬಂತೆAದು ಹೇಳಿರಿ ತಾಯಿ

ಒಂದು ಗಂಟೆ ಹೋಗುವುದರೊಳಗೆ ಏಳು ಗಂಟೆಯ

ಒಳಗೆ ನಾನು ನನ್ನ ಏಳು ಮಾವಂದಿರನ್ನು

ಬಿಡಿಸಿಗೊAಡು ಬರುವೆನೆಂದು ಹೇಳುವನು

ಗಂಡು ಹುಡುಗ ಹೇಳಿದಾಗ 

 ಯಾರಪ್ಪ ಮಗನೆ ಕುಮಾರ ಈಗ

ಅಷ್ಟು ದೊಡ್ಡ ಅರಮನೆಯನ್ನು 

 ನೀನ್ಹೇಗೆ ಗೆಲ್ಲುವೆ ಎಂದು ಕೇಳಿದಾಗ

ನಾನು ನಿಮಗೆ ಹುಟ್ಟಿದ ಮಗ ಆದರೆ ನೀವು

ಹೆತ್ತ ಮಗ ಆದರೆ ಸೂರ್ಯಚಂದ್ರ ಆಣೆ ಇಟ್ಟು

ನನ್ನನ್ನು ನೀರಿಗೆ ಬಿಡುವಾಗ ನನಗೆ ಸತ್ಯದ

ಕಳೆ ಉಂಟಾಯಿತು ತಾಯಿಯವರೆ ಕದಿರೆಯ ಆನೆಯನ್ನು

ಹತ್ತುವ ಎಂದು ಹೇಳುವನು ಮಗ

ಯಾರಯ್ಯ ಬಂಗೇರ ಆವತ್ತಿನ ಕಾಲದಲ್ಲಿ

ನನ್ನ ಅಣ್ಣಂದಿರನ್ನು ಕತ್ತಲೆಯ ಮನೆಯಲ್ಲಿ

ಸಂಕೋಲೆಯಲ್ಲಿ ಸುತ್ತಿ ಕುಳ್ಳಿರಿಸಿದೆಯಲ್ಲ

ಈವತ್ತಾದರೂ ಬಿಡು ಎಂದು ಹೇಳುವಾಗ

ಹೋಗಿತ್ತೀಯಾ ಇಲ್ವ ನಿನ್ನನ್ನು ಕೈ ಕಾಲು ಕಟ್ಟಿ ಹಾಕಬೇಕೆ ಎಂದು


ಕೇಳುತ್ತಾನೆ ಅವನು ಕದಿರೆಯ ಬಂಗೇರ

ಆ ಹೊತ್ತು ಆಗುವಾಗ ಉಪ್ಪರಿಗೆಯನ್ನು ಹೊತ್ತಿಸಿ

ಮಾಳಿಗೆಯ ಮನೆಗೆ ಬರುವಾಗ 

 ಏಳು ಮಾಳಿಗೆ ಉರಿದು ಭಸ್ಮವಾಯಿತು

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಏಳು ಜನ ಮಾವಂದಿರನ್ನು ಬಿಡಿಸಿಕೊಂಡು ಬರುವನೆ ಮಗ

ಒಬ್ಬ ಮಗ ಕುಮಾರ ಕರಿಯ ಕನ್ಯಾ ಮದನುವಿನ

ಯಾರಮ್ಮಾ ಮದನು ಇದು ಯಾರು ಹುಡುಗನೆಂದು

ಕೇಳುವಾಗ ನಿಮ್ಮ ಅಳಿಯ ಅಣ್ಣಂದಿರೆ ಇಷ್ಟು ವರ್ಷ ಎಲ್ಲೋ

ಹುಟ್ಟಿ ಎಲ್ಲೋ ಬೆಳೆದು ರಾಜನ ಮಗ ಆಗಿದ್ದ

ಇವತ್ತು ಆಗುವಾಗ ನನ್ನ ಮಗ ಕುಮಾರ ಎಂದು ಗೊತ್ತಾಯಿತು

ಇನ್ನು ನಾವು ಹೋಗಿ ಅಂದು ಮಾಡಿದ ಊಟ ಮಾಡುವ

ಅದನ್ನು ಊಟ ಮಾಡಿ ಕಬೇರಂದ ಊರಿಗೆ

ಹೋಗುವ ಎಂದು ಹೇಳುವರಪ್ಪ ಕಬೇರರು

ಏಳು ಜನ ಕಬೇರರು ಕರಿಯ ಕನ್ಯಾ ಮದನು

© ಡಾ‌.ಲಕ್ಷ್ಮೀ ಜಿ ಪ್ರಸಾದ್ 

Friday, 13 October 2023

ಅಪರೂಪದ ಚಾಮುಂಡಿ ಪಾಡ್ದನ - ಡಾ.ಲಕ್ಷ್ಮೀ ಜಿ ಪ್ರಸಾದ್

 ಚಾಮುಂಡಿ ಪಾಡ್ದನ ಸಂ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಹಾಡಿದವರು ಶಾರದಾ ಜಿ ಬಂಗೇರ

ಇದು ತುಳು ಭಾಷೆಯಲ್ಲಿದೆ.ನಾನು ಶಾರದಾ ಜಿ ಬಂಗೇರರಿಂದ ಅವರಿಗೆ ತಿಳಿದ ಎಲ್ಲ ಪಾಡ್ದನಗಳನ್ನು  ರೆಕಾರ್ಡ್ ಮಾಡಿ ಅನುವಾದಿಸಿ ವಿಶ್ಲೇಷಿಸಿ ಶಾರದಾ ಜಿ ಬಂಗೇರರ ಮೌಖಿಕ ಸಂಕಥನ ಎಂಬ ಪುಸ್ತಕ ರಚಿಸಿದ್ದು ಪ್ರಚೇತ ಬುಕ್ ಹೌಸ್ ಪ್ರಕಟಿಸಿದೆ

ಆ ಪುಸ್ತಕದ ಆಯ್ದ ಭಾಗ ಇದು copy rights reserved © ಡಾ‌.ಲಕ್ಷ್ಮೀ ಜಿ ಪ್ರಸಾದ್


 ಚಾಮುಂಡಿ ಪಾಡ್ದನ- (ಸಂ ) ಡಾ.ಲಕ್ಷ್ಮೀ ಜಿ ಪ್ರಸಾದ್ ,ಹಾಡಿದವರು ಶಾರದಾ ಜಿ ಬಂಗೇರ 

 


ಡೆನ್ನಾನಾ ಡೆನ್ನಾನಾ ಡೆನ್ನಾಡೆನ್ನಾನಾ

ಓಯೇ ಡೆನ್ನಾನ ಡೆನ್ನಾನ ಡೆನ್ನಾಡೆನ್ನಾನಾ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಓ ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಭೀಮುರಾಯರ ಮಣ್ಣಿನಲ್ಲಿ

ಬೆಳಗಿನ ಜಾವದಲ್ಲಿ ಎದ್ದರು

ಭೀಮುರಾಯರು ಭಟ್ಟರು ಒಡೆಯರು ( ಸಂ) ಡಾ.ಲಕ್ಷ್ಮೀ ಜಿ ಪ್ರಸಾದ್ 

ಕೈಕಾಲು ಮುಖ ತೊಳೆದು

ಭೀಮುರಾಯರು ಭಟ್ಟರು ಒಡೆಯರು

ಮಡಿತುಂಬು ಇಡುವ ಕೋಣೆಗೆ ಹೋದರು

ಭೀಮಗರಾಯರು ಭಟ್ಟರು ಒಡೆಯರು

ತುಂಡು ತೆಗೆದು ಸೊಂಟಕ್ಕೆ ಮಡಿಬಟ್ಟೆ

ಸುತ್ತಿಕೊಂಡರು ಭೀಮುರಾಯರು ಭಟ್ಟರು

ಸಂಪಿಗೆ ಸುರಗೆ ತೋಟದಲ್ಲಿ

ಭೀಮುರಾಯರ ಮಣ್ಣಿನಲ್ಲಿ

ಮುತ್ತು ತಾವರೆಯ ಕೆರೆಯಲ್ಲಿ

ಕೈಕಾಲು ಮುಖ ತೊಳೆದುಕೊಂಡು ಹೋಗುವರು

ಅವರು ಭೀಮುರಾಯರ ಭಟ್ಟರು ಒಡೆಯರು

ಬಿಳಿಯ ತಾವರೆಯ ಹೂವಾಗಿ

ನಲಿದುಕೊಂಡು ನಗಾಡಿಕೊಂಡು ಬರುವುದಲ್ಲಿ

ಬಿಳಿಯ ತಾವರೆಯ ಹೂವೊಂದು

ಆ ಹೊತ್ತಿಗೆ ಸೆರಗು ಒಡ್ಡಿದರು

ಆ ಹೊತ್ತಿಗೆ ಸೆರಗು ಒಡ್ಡಿದರು

ಅವರು ಭೀಮುರಾಯರು ಭಟ್ಟರು ಒಡೆಯರು

ನಲಿಯುತ್ತಾ ನಗುತ್ತಾ ಬರುವುದು

ಬಿಳಿಯ ತಾವರೆಯ ಹೂವೊಂದು

ಉಟ್ಟಮಡಿ ವಸ್ತç ಅಂಗವಸ್ತçವನ್ನು ಒಡ್ಡಿದಾಗ

ಬಂದು ಬೀಳುವುದು ಬಿಳಿಯ ತಾವರೆಯ ಹೂವು

ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ

ಬೆಳೆದು ಅರಳುವುದು ನೋಡಿದಾಗ

ಬಾರಿ ದೊಡ್ಡ ಸೋಜಿಗವೇ ಕಾಣಿಸುತ್ತದೆ ( ಸಂ) ಡಾ.ಲಕ್ಷ್ಮೀ ಜಿ ಪ್ರಸಾದ್ 

ಭೀಮುರಾಯರು ಬಂದರAತೆ

ಹಿಡಿದುಕೊAಡು ಅಂಗವಸ್ತçವನ್ನು ಕೊಡುವರು

ಚಾವಡಿ ನಡುಮನೆಗೆ ಬಂದು

ದೇವರ ಗುಂಡದ ಹೊಸಿಲಿನಲ್ಲಿ

ಇಡುವಾಗ ಕಾಣಿಸುತ್ತದೆ

ಪೂರ್ವದಲ್ಲಿ ಸೂರ್ಯ

ಹುಟ್ಟಿದಂತೇ ಕಾಣುತ್ತದೆ

ಬಿಳಿಯ ತಾವರೆಯ ಹೂವಾಗಿ

ಒಳಗಿನ ಸುತ್ತಿಗೆ ಹೋಗುವರು

ಭೀಮುರಾಯರು ಭಟ್ಟರು ಒಡೆಯರು

ದೇವರ ತಲೆಯಲ್ಲಿ ಇರಿಸುವರು

ಭೀಮುರಾಯರು ಭಟ್ಟರು ಒಡೆಯರು

ಅಡ್ಡ ಜಾರಿ ಬೀಳುತ್ತದೆ.

ಬಿಳಿಯ ತಾವೆಯ ಹೂವು ಅದು

ಆರು ಎಸಲು ಮೂರು ಕುಸುಮ ಬೀಳುವಾಗ

ನಡುವಿನಲ್ಲಿ ಮಗು ಆಳುವ ಶಬ್ದ ಕೇಳುವುದು

ಆ ಕಡೆ ಈ ಕಡೆ ನೋಡುವರು ಭೀಮುರಾಯರು ಭಟ್ಟರು

ಗಿಂಡಿಯ ನೀರು ತಳಿಯುವಾಗ

ಒಂದು ಬಿಳಿಯ ತಾವರೆಯ ಹೂವಿನಲ್ಲಿ

ಒಂದು ಮಗು ಉಂಟಾಯಿÄತ

ಕುಟುAಬ ಸಂಸಾರ ಇಲ್ಲದ

ಮನೆಯಲ್ಲಿ ಮಗು ಆಳುವ ಧ್ವನಿ ಕೇಳುತ್ತದೆ

ಎಂದರು ಭೀಮುರಾಯರು ಭಟ್ಟರು ಒಡೆಯರು

ಏನು ಹೆಸರು ಇಡುವುದು ಎಂದು ಕೇಳುವಾಗ

ಹೇಳಿದರು ಅವರು ಆರು ಎಸಳು ಮೂರು ಕುಸುಮದಲ್ಲಿ

ಉದ್ಭವವಾದ ದೇವಿ ಅವರೇ

ಚಾಮುಂಡಿ ಎಂದು ಹೆಸರು ಇಟ್ಟರು.-  ಡಾ‌.ಲಕ್ಷ್ಮೀ ಜಿ‌ ಪ್ರಸಾದ್ 

ಕೆರೆ ಚಾಮುಂಡಿ - ಡಾ.ಲಕ್ಷ್ಮೀ ಜಿ ಪ್ರಸಾದ್


 ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ. ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. 

ಕರೆಯಲ್ಲಿ ಉದ್ಭವಿಸಿದ ಕಾರಣ ಕೆರೆ ಚಾಮುಂಡಿ ಎಂದು ಕರೆಯುತ್ತಾರೆ

ಮೂಲ ಚಾಮುಂಡಿ ಇದೇ ದೈವ  ಎಂದು ನನ್ನ ಅಭಿಪ್ರಾಯ 

ಈ  ಪಾಡ್ದನದಲ್ಲಿ ಎಡದಲ್ಲಿ ಎಡಮಲೆಬಲದಲ್ಲಿ ಬಲಮಲೆನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮುರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮುರಾಯ ಭಟ್ಟರು ಸ್ನಾನಕ್ಕೆಂದು ಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿ ಒಂದು ಬಿಳಿಯ ತಾವರೆ ಹೂ ಭೀಮುರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದು ದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣುಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684

ಮುಂದೆ ದಾಯಾದಿಯಾಗಿರುವ ಗಣಪತಿ ಭಟ್ಟ ಎಂಬಾತ ಚಾಮುಂಡಿಗೆ ದ್ರೋಹ ಮಾಡ್ತಾನೆ ಆಗ ಕತ್ತಲೆಕಾನದ ಗುಳಿಗ ಆತನನ್ನು ಸಂಹಾರ ಮಾಡುತ್ತದೆ.

ದ್ರೋಹವೆಸಗಿ ದರಂತವನ್ನಪ್ಪಿದ ಗಣಪತಿ ಭಟ್ಟ ಎಂಬ ಬ್ರಾಹ್ಮಣ ಚಾಮುಂಡಿ ದೈವದ ಸೇರಿಗೆಗೆ ಸಂದು ಜತ್ತಿಂಗ/ ಜಟ್ಟಿಗ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ© ಡಾ.ಲಕ್ಷ್ಮೀ ಜಿ ಪ್ರಸಾದ್ 

ಹೆಚ್ಚಿನ ಮಾಹಿತಿ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿದೆ  



ಚಾಮುಂಡಿ ಪಾಡ್ದನ 

ಹಾಡಿದವರು ಶಾರದಾ ಜಿ ಬಂಗೇರ

ಇದು ತುಳು ಭಾಷೆಯಲ್ಲಿದೆ.ನಾನು ಶಾರದಾ ಜಿ ಬಂಗೇರರಿಂದ ಅವರಿಗೆ ತಿಳಿದ ಎಲ್ಲ ಪಾಡ್ದನಗಳನ್ನು  ರೆಕಾರ್ಡ್ ಮಾಡಿ ಅನುವಾದಿಸಿ ವಿಶ್ಲೇಷಿಸಿ ಶಾರದಾ ಜಿ ಬಂಗೇರರ ಮೌಖಿಕ ಸಂಕಥನ ಎಂಬ ಪುಸ್ತಕ ರಚಿಸಿದ್ದು ಪ್ರಚೇತ ಬುಕ್ ಹೌಸ್ ಪ್ರಕಟಿಸಿದೆ

ಆ ಪುಸ್ತಕದ ಆಯ್ದ ಭಾಗ ಇದು copy rights reserved © ಡಾ‌.ಲಕ್ಷ್ಮೀ ಜಿ ಪ್ರಸಾದ್


 ಚಾಮುಂಡಿ ಪಾಡ್ದನ

 


ಡೆನ್ನಾನಾ ಡೆನ್ನಾನಾ ಡೆನ್ನಾಡೆನ್ನಾನಾ

ಓಯೇ ಡೆನ್ನಾನ ಡೆನ್ನಾನ ಡೆನ್ನಾಡೆನ್ನಾನಾ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಓ ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಭೀಮುರಾಯರ ಮಣ್ಣಿನಲ್ಲಿ

ಬೆಳಗಿನ ಜಾವದಲ್ಲಿ ಎದ್ದರು

ಭೀಮುರಾಯರು ಭಟ್ಟರು ಒಡೆಯರು

ಕೈಕಾಲು ಮುಖ ತೊಳೆದು

ಭೀಮುರಾಯರು ಭಟ್ಟರು ಒಡೆಯರು

ಮಡಿತುಂಬು ಇಡುವ ಕೋಣೆಗೆ ಹೋದರು

ಭೀಮಗರಾಯರು ಭಟ್ಟರು ಒಡೆಯರು

ತುಂಡು ತೆಗೆದು ಸೊಂಟಕ್ಕೆ ಮಡಿಬಟ್ಟೆ

ಸುತ್ತಿಕೊಂಡರು ಭೀಮುರಾಯರು ಭಟ್ಟರು

ಸಂಪಿಗೆ ಸುರಗೆ ತೋಟದಲ್ಲಿ

ಭೀಮುರಾಯರ ಮಣ್ಣಿನಲ್ಲಿ

ಮುತ್ತು ತಾವರೆಯ ಕೆರೆಯಲ್ಲಿ

ಕೈಕಾಲು ಮುಖ ತೊಳೆದುಕೊಂಡು ಹೋಗುವರು

ಅವರು ಭೀಮುರಾಯರ ಭಟ್ಟರು ಒಡೆಯರು

ಬಿಳಿಯ ತಾವರೆಯ ಹೂವಾಗಿ

ನಲಿದುಕೊಂಡು ನಗಾಡಿಕೊಂಡು ಬರುವುದಲ್ಲಿ

ಬಿಳಿಯ ತಾವರೆಯ ಹೂವೊಂದು

ಆ ಹೊತ್ತಿಗೆ ಸೆರಗು ಒಡ್ಡಿದರು

ಆ ಹೊತ್ತಿಗೆ ಸೆರಗು ಒಡ್ಡಿದರು

ಅವರು ಭೀಮುರಾಯರು ಭಟ್ಟರು ಒಡೆಯರು

ನಲಿಯುತ್ತಾ ನಗುತ್ತಾ ಬರುವುದು

ಬಿಳಿಯ ತಾವರೆಯ ಹೂವೊಂದು

ಉಟ್ಟಮಡಿ ವಸ್ತç ಅಂಗವಸ್ತçವನ್ನು ಒಡ್ಡಿದಾಗ

ಬಂದು ಬೀಳುವುದು ಬಿಳಿಯ ತಾವರೆಯ ಹೂವು

ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ

ಬೆಳೆದು ಅರಳುವುದು ನೋಡಿದಾಗ

ಬಾರಿ ದೊಡ್ಡ ಸೋಜಿಗವೇ ಕಾಣಿಸುತ್ತದೆ

ಭೀಮುರಾಯರು ಬಂದರAತೆ

ಹಿಡಿದುಕೊAಡು ಅಂಗವಸ್ತçವನ್ನು ಕೊಡುವರು

ಚಾವಡಿ ನಡುಮನೆಗೆ ಬಂದು

ದೇವರ ಗುಂಡದ ಹೊಸಿಲಿನಲ್ಲಿ

ಇಡುವಾಗ ಕಾಣಿಸುತ್ತದೆ

ಪೂರ್ವದಲ್ಲಿ ಸೂರ್ಯ

ಹುಟ್ಟಿದಂತೇ ಕಾಣುತ್ತದೆ

ಬಿಳಿಯ ತಾವರೆಯ ಹೂವಾಗಿ

ಒಳಗಿನ ಸುತ್ತಿಗೆ ಹೋಗುವರು

ಭೀಮುರಾಯರು ಭಟ್ಟರು ಒಡೆಯರು

ದೇವರ ತಲೆಯಲ್ಲಿ ಇರಿಸುವರು

ಭೀಮುರಾಯರು ಭಟ್ಟರು ಒಡೆಯರು

ಅಡ್ಡ ಜಾರಿ ಬೀಳುತ್ತದೆ.

ಬಿಳಿಯ ತಾವೆಯ ಹೂವು ಅದು

ಆರು ಎಸಲು ಮೂರು ಕುಸುಮ ಬೀಳುವಾಗ

ನಡುವಿನಲ್ಲಿ ಮಗು ಆಳುವ ಶಬ್ದ ಕೇಳುವುದು

ಆ ಕಡೆ ಈ ಕಡೆ ನೋಡುವರು ಭೀಮುರಾಯರು ಭಟ್ಟರು

ಗಿಂಡಿಯ ನೀರು ತಳಿಯುವಾಗ

ಒಂದು ಬಿಳಿಯ ತಾವರೆಯ ಹೂವಿನಲ್ಲಿ

ಒಂದು ಮಗು ಉಂಟಾಯಿÄತ

ಕುಟುAಬ ಸಂಸಾರ ಇಲ್ಲದ

ಮನೆಯಲ್ಲಿ ಮಗು ಆಳುವ ಧ್ವನಿ ಕೇಳುತ್ತದೆ

ಎಂದರು ಭೀಮುರಾಯರು ಭಟ್ಟರು ಒಡೆಯರು

ಏನು ಹೆಸರು ಇಡುವುದು ಎಂದು ಕೇಳುವಾಗ

ಹೇಳಿದರು ಅವರು ಆರು ಎಸಳು ಮೂರು ಕುಸುಮದಲ್ಲಿ

ಉದ್ಭವವಾದ ದೇವಿ ಅವರೇ

ಚಾಮುಂಡಿ ಎಂದು ಹೆಸರು ಇಟ್ಟರು.-  ಡಾ‌.ಲಕ್ಷ್ಮೀ ಜಿ‌ ಪ್ರಸಾದ್ 

Thursday, 12 October 2023

ಅಪರೂಪದ ಪಾಡ್ದನ : ಕರಿಯ ಕನ್ಯಾ ಮದನು © ಡಾ.ಲಕ್ಷ್ಮೀ ಜಿ ಪ್ರಸಾದ್

 ಕರಿಯ ಕನ್ಯಾ ಮದನು 

ಹೇಳಿದವರು : ಶ್ರೀಮತಿ ಶಾರದಾ ಜಿ. ಬಂಗೇರ

ರೆಕಾರ್ಡಿಂಗ್,ಲಿಪ್ಯಂತರ,ಅನುವಾದ ,ವಿಶ್ಲೇಷಣೆ ,ಸಾಂಸ್ಕೃತಿಕ ಪದ ಕೋಶ - ಡಾ.ಲಕ್ಷ್ಮೀ ಜಿ ಪ್ರಸಾದ

copy rights reserved © ಡಾ‌ಲಕ್ಷ್ಮೀ ಜಿ ಪ್ರಸಾದ್ 

 ಪಾಡ್ದನಗಳು ಹೆಸರಿರಿಸಿಕೊಂಡು ಬೆಳೆದು ಬರುವುದಿಲ್ಲ.ಹಾಗಾಗಿ ಪಾಡ್ದನಗಾರರಿಗೆ ಹಾಡುವುದು ಗೊತ್ತಿರುತ್ತದೆಯೇ ಹೊರತು ಅದರ ಹೆಸರು ,ಅದರಲ್ಲಿನ ಪಾರಿಭಾಷಿಕ ಪದಗಳ ಅರ್ಥ ,ಬಾಯ್ದೆರೆಯಾಗಿ ಬರುವಾಗ ಬದಲಾಗುವ ಅಪಭ್ರಂಶಗೊಂಡ ಪದಗಳು ಮೂಲ ರೂಪ ಗೊತ್ತಿರುವುದಿಲ್ಲ.ನಾವದನ್ನು ಅಧ್ಯಯನ ಮಾಡಿ‌ಲಿಪ್ಯಂತರ ಮಾಡುವಾಗ ಸರಿ ಪಡಿಸಬೇಕಾಗುತ್ತದೆ.ಪಾಡ್ದನ ಲಿಪ್ತಂಯರ ಬಹು ಪರಿಶ್ರಮ ಬೇಡುವ ಕಾರ್ಯ..ಪಾಡ್ದನಗಾರರು ಹಾಡಿದ ಒಂದೊಂದೇ ಸಾಲನ್ನು ಮತ್ತೆ ಮತ್ತೆ ಹಾಕಿ ಕೇಳುತ್ತಾ ಬರೆಯುತ್ತಾ ಸಾಗಬೇಕು.ಅಪಭ್ರಂಶಗೊಂಡ ಪದಗಳ ಮೂಲ ಹುಡುಕಿ ಸರಿಯಾದ ರೂಪ ಹಾಕಬೇಕು‌.ಒಮ್ಮೆ ಲಿಪ್ಯಂತರವಾದ ನಂತರ ಅನುವಾದದ ಕೆಲಸ ಮಾಡಬೇಕು.ಇದಕ್ಕೂ ಬಹಲ ತಾಳ್ಮೆ ಬೇಕು.ನಂತರ ಪಾರಿಬಾಷಿಕ ಪದಗಳಿಗೆ ಟಿಪ್ಪಣಿ ಕೊಡಬೇಕು.ಕೊನೆಗೆ ಸಾಂಸ್ಕೃತಿನ ಪದಕೋಶ ತಯಾರಿಸಿ ಹಾಕಬೇಕು.ಹಾಗಾಗಿಯೇ ,ಯಾರೂ ಕೂಡ ಪಾಡ್ದನ ಸಂಗ್ರಹದ ಕೆಲಸಕ್ಕೆ ಮುಂದಾಗುವುದಿಲ್ಲ.ತುಳುವರಲ್ಲಿ ಇನ್ನೂ ಕೂಡ ಸಂಗ್ರಹವಾಗದ ಅನೇಕ ಪಾಡ್ದನಗಳಿವೆ

ನಾನು ಸಂಗ್ರಹಿಸಿದ ಪಾಡ್ದನಗಳು ಈ ತನಕ ಎಲ್ಲೂ ರೆಕಾರ್ಡ್ ಆಗಿಲ್ಲ.ಇನ್ನು ಲಿಪ್ಯಂತರ ಅನುವಾದ ವಿಶ್ಲೇಷಣೆ ಎಲ್ಲಿಂದ?.

ನಾನು ಹವ್ಯಾಸಿಯಾಗಿ ಸುಮಾರು ನೂರರಷ್ಟು ಪಾಡ್ದನಗಳನ್ನು ತುಳು ಜನಪದ ಕವಿತೆಗಳನ್ನು ಕಲಾವಿದರಿಗೆ ಸಂಭಾವನೆ ನೀಡಿ ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅನುವಾದಿಸಿ ವಿಶ್ಲೇಷಿಸಿದ್ದು ಮೂವತ್ತರಷ್ಟು ಪಾಡ್ದನಗಳನ್ನು ನೂರರಷ್ಟು ಕವಿತೆಗಳನ್ನು ಪ್ರಕಟಿಸಿದ್ದೇನೆ..

ಖರೀದಿಸಿ ಓದಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ..

ತುಳು ಭಾಷೆ ಸಂಸ್ಕೃತಿ ಎಂದು ಬಾಯಲ್ಲಿ ಹೇಳುವ ಜನರಲ್ಲಿ ಹೆಚ್ಚಿನವರದು ತೋರಿಕೆಯ ಅಭಿಮಾನ ಹಾಗಾಗಿ ಕೊಂಡುಕೊಂಡು ಓದುವವರಿಲ್ಲ..ಉಚಿತವಾಗಿ ಸಿಕ್ಕರಾದರೂ ಓದುವವರೋ ನೋಡಬೇಕು..


ಈ ಪಾಡ್ದನಕ್ಕೆ ಹೆಸರಿರಿಸಿದವಳು ನಾನೇ..ಕಥಾ ನಾಯಕಿಯ ಹೆಸರನ್ನು ಇಟ್ಟು ಪಾಡ್ದನವನ್ನು ಗುರುತಿಸಲು ಸುಲಭ ಮಾಡಿದ್ದೇನೆ.

ಕರಿಯ ಕನ್ಯಾ ಮದನು 

ಡಾ.ಲಕ್ಷ್ಮೀ ಜಿ ಪ್ರಸಾದ ರ ಪಾಡ್ದನ ಸಂಪುಟದಿಂದ ಆಯ್ದ ಭಾಗ 

.

ಕರಿಯ ಕನ್ಯಾ ಮದನು

ಚೆನ್ನ ಚೆನ್ನ ಡೆನ್ನಾನಾ ಡೆನ್ನ ಡೆನ್ನ ಡೆನಾ ಏಳು ಜನ ಕಬೇರೆರು / ಏಳು ಜನ ಕಬೇರೆರೆಗು ಸಿದ್ದಿ ಆಳು ಸಂಗಟಿಗೆ / ಕರಿಯ ಕನ್ಯಾ ಮದನು ವಿರಮಾ ಮದನು ಏರ್ ಮಗ ಮದನು ಜಂಜೀ ರಡ್ಡು ಬಂಗಾರತ್ತು ಸಾವಿರಗಟ್ಟೆ ಬಂಗಾರು ದೋಡ ಪಡೆಯಿ ದಾಯ್ತಾ ಬೋಡುಂದು ಕೇಂಡೇರು ಅಪ್ಪ ಅಮ್ಮ ಇಜ್ಜಂದಿ ಬಾಲೆನು / ಬಾರಿ ಮೋಕೆಡು ಸಾಂಕುದೆರು.

ಏಳು ಜನ ಕಬೇರೆರು ಡೆನ್ನ ಡೆನ್ನ ಡೆನ್ನಾನಾ ಓಯೇ ಓಯೇ ಚೆನ್ನಾ ಡೆನ್ನಾ ಏಳು ಜನ ಕಬೇರೆರು ಏಳು ಏಳು ಬಗೆ ಬಂಗಾರು ಪಾಡಿ ಬುಕ್ಕಲ ಕೇಣುವೇರು ದಾದ ಆಸೆ ಉಂಡು ಮಗಾಂದು ಕೇಂಡೇರಪ್ಪ ಪಲಾಯಳು ಏಳು ಜನ ಕಬೇರರು ದಾಲ ಮಾತ ಕೊಣತ್ತಾರು ಅಣ್ಣ ಎಂಕು ದಾದಾ ಆಸೆ ಆಂಡಲ ಎಂಕು ತರೆಕ್ಕು ಮುತ್ತು ಸುರಿವೊಡೊಂದು ಆಸೆ ಉಂಡು

ಕಡೀಲು ಬಂಜಿನಾಳು ಆತಿನ ಕರಿಯ ಕನ್ಯಾಮದನು ಪಳಯಳಡ ಲೆತ್ತುದು ಪಣ್ಹಾಳಪ್ಪ / ಕರಿಯ ಕನ್ಯಾ ಮದನು


ಮೈತ್ತಿದಿಯಾಳು ಉಳ್ಳಾಗತ್ತ ಮಗ ಕೇಲ ಆಕುಳಂಬ ಶೂಪರು ನಿನ್ನನು ಕುಂಭ ಕೂಸರು ನಿನ್ನನ್ನು ಅಂಚಲ ತೂಲಂದು ಪಂಡುದು ಏಳು ಕಡಲ ವಿದಾಯಿಗು ನೋವರು - ಏಳುಜನ ಕಬೇರೆರು / ಮುತ್ತುಲಾ ಕೊಣತ್ತೇರು ಏಳು ಜನ ಕಬೇರೆರು ಮುತ್ತುನಲ, ಸುಂಕೇರು ಏಳು ಜನ ಕಬೇರೆರು ಒಂದೆ ತರಕೂಜಲುಗು ಒಂಜಿ ಮುತ್ತುಂದು ಏಳು ಜನ ಸುರಿನಾಗ ತಲೆ ನಿಲಿಕ್ಕೆ ಮುತ್ತುಲ ಆ೦ಡುಗೆ - ಬಯಕೆ ಬಲಾನ ಆತುದು ಸುದೆಲ್ಲಾ ಕಡತ್ತುದು ನೋವೊಡು ಮಗಳೆನು ಲೆತ್ತೊಂದು ಅವಾಂಡಾ ಕಾಲೊಡು ಒಂಜಿ ಸುದನು ಕಡತ್ತುದು ಮೂಜಿ ಸುಧೆ ಕಡತ್ತೇರು ಏಳನೆ ಸುದೆ ಕಡತ್ತುದು ಆನಗ / ಕದಿರಗು ಬತ್ತುದು ಎತ್ತುಂಡುಯಾ ಅತುಲ ಪೊರ್ತುಗು ಎರಮ್ಯಾ ಸಂಗಡಿ ಬಾಜೆಲು ಅಂಗಾರನೆ ಪಲ್ಲೆಯ / ಬಡವುಗು ಒಣಸು ಮತ್ತೊಡು ಆತುಲ ಪೊರ್ತುಗು 

ಅಂಚಿ ಇಂಚಿ ತೂಪೆರು 

ಓರಿ ಷೋಯೇ ಅರಿ ಕೊಣತ್ತೆ / 

ಒರಿ ಪೋಯೇ ಸೂ ಕೊಣತ್ತೆ 

ಒರಿ ಪೋಯೇ ನೀರು ಕೊಣತ್ತೆ 

ಏಳು ಜನ ಸೇರುದು ಏಳು ಬಗ್ಗೆ ಕೊಣತ್ತೇರು ಒಂಜೀಲ ಗೋಳಿದ ಮುದೆಲುಡೆ 

/ ಒಂಜಿ ಕಲ್ಲುದ ದಿಕ್ಕಲು ತೂದು ಮೂಜಿ ಕಲ್ಲು ಜೋಡಾದು / 

ಒಂಜಿ ಸೇರು ಅರಿತ ಗಂಜಿ ದೀದು ಬೈಪಾದು ಚಟ್ಟಿನಿನು ಕಡೆದು / 

ಎಂಕುಳು ಕದಿರದ ಕೆರೆ ಪೋದು ತಾಳಿ, ಮೀಯೊಂದು ಬಾಮ್ಮಾ ಸಂಗಡಿ ಬಾವೆಂದು ಪಂಡೇರಪ್ಪ ಕಬೇರರು ಏಳು ಜನ ಕಬೇರರು

ದಾನೆ ನಮ್ ಮನ್ಸುವೊಂದು ಪಂಡೇರು ಪಳಯಳು ಏಳು ಜನ ಕಬೇರೆರು

ಒರಿ ಪೋಯೇ ತಾರಾಯಿ ಕಣತ್ತೆ 

ನನ್ನ ಒರಿ ಪೋಯೇ ಕಲ್ಲು ಕೊಣತ್ತೆ

ರು

ಆತುಲ ಪೊರ್ತುಗು ನೀರುಗು ಪೋದು ನನ

ಮೀದುಲ ಸುದ್ದೂಲ

ಮುದಿಕೆ ಆದು ನನ್ನೊಂಜಿ ಊರುಗು ಪೋಯಿ

ಸಂಗದಿನ ಪದು ಪದುಮಾನ ಸೋದುಲ

ಸುಖಟ್ಟು ಉಗ್ಗೂಡೊಂದು ನೆನೆತೊಂದು

ಹಣ್ಣುಕಾಯಿ ಮತ್ತೊಂಡು ಬರ್ಕಂದು

ಸೋಪೇರಪ್ಪ ಕಬೇರರು ಏಳು ಜನ ಕಬೇರೆರು ಪಳಯಲು

ಸೋನಾಗ ತೋಜುಂಡವಳು ತಾರಾಯಿದ ತಪ್ಪಂಗಾಯಿ

ಬಟ್ಟೆಯಿದ ಜೂಜುನೆ ಗುಬ್ಬಿಳೆ ನಾಟಕಗೆ

ಸೂಳೆಲ ಮೇಳ ಉಂಡುಗೆ ಅಯಿನಿಂಚಾ ತೂನಾಗಲ

ಅನ್ನೋವು ತೂಪಿ ಜಾಗಾಂದು ಪೋಪೇರಪ್ಪ

ನಮ ಅಣು ಆಸ್ಟೋವತ್ತ ಮಗ ಪೋಯಿಯಾ ಮೆಗಿಯನಾಕೈಗು ಪಂಡುದು ತಾರಾಯಿದಾ ತೆಪ್ಪಂಗಾಯಿ ಅಯಿಟ್ಟುಲಾ ಮೇಲಾಯರು / ಸೂಳೇಲೆ ಮೇಳಗು ಪೋಯೆ ಡೆನ ಅಯಿಟ್ಟುಲಾ ಮೇಲಾಯರು / ಗುಬ್ಬಿಳ ನಾಟಕಗು ಪೋಯೇರು ಆಯಿಟ್ಟುಲಾ ಮೇಲಾಯರು / ಏರ್‌ಯಾ ಅಕುಳು ಏಳು ಜನ ಕೇಂಡೇರು ಬಂಗೇರು ಕದಿರೆದ ಬಂಗೇರು

ಪಳಯಾಳು ಏಳು ಜನ ಪಳಯಳು


ಬೇಲೆದಾಕುಳೆನು ಸಿಪಾಯಿದಕುಳೆನು ಲೆಪ್ಪಾದರು ಅಕುಳೆನ ಕೈಕಾರು ಕಟ್ಟುದು ಪಾಡುಲೆ ಕೊಂಡೋದು ಪೋಲೇ ನಿಕ್ಕು ಕಾರಾಗೃಹಡು ದೀಲೇಂದು ಪಣ್ಣೀರು ಕದಿರೆದ ಬಂಗೇರ

ಕೈಕಾರುನು ಕಟ್ಟುದುಲ ಸಂಕಲೆ ಬಿಗುತ್ತುದುಲ ಕೊಂಡೋದು 

ಅಕುಲೆನು ಏಳು ಗುಂಡದ ಒಳಯಿ ಪಾಡುವರು ಏಳು ಜನ ಪಳಯಳನು ಕಾತುದು ಕಾತುದುಲ ಕತ್ತಲೆ ಆನಾಗಲ ಪಳೆಯಳು ತೋಜುಜೇರುಂದು ಬಾರಿ ಬೇಜಾರುಡು ಕೆರೆ ಬದಿಕ್ಕು ಬನ್ನಾಗಾದ ಕಡಲುದ ಬರಿಟ್ಟು ಕದಿರೆದ ಅದೆಟ್ಟು


ಕೊಟ್ಟು ಗೊದ್ದಿಯೆರು ಅಯಿಟ್ಟು ಪೂರಾ ಗಂದರಂದು ಚಾರು ಸಂಶೋಲೆ ಬಿಗುತ್ತುದು ಕತ್ತಲಿದ

ಅಯೋ ದೇವರೆನ ಉಳೋ ಉಳೋ ದೇವರೆನ ತೋಟಿಗೆ ಬಂಜಿನಾಳು ಯಾನು ಓಡೆಗು ಶ್ರೀನಂದು ಬಾರಿ ಮಲ್ಲ ಬೇಜಾರೊಡು

ಎಂಚಿನ ಬೋಡು ಎಂಕುಳು ಕೊಲ್ದಾಯೆ ಅಣ್ಣೀರೆಂದು - ಕೈಕಾರು ಪತ್ತೊಂಡಾಳು ಅಡ್ಡ ನೀಟ ಬೂರುದುಲ

ಅತು ಮೊರ್ತುಗು ಪಂಡೇರು / 

ಏರ್‌ಯ ಕೆಲಸದಾಕುಳೆ ಆಳು ಎಂಚಿನ ಪಕ್ಕಿದ ಲೆಕ್ಕ

 ಜೊರೆ ಚೊರೆ ಪಣ್ಣನೆಯ ಕಕ್ಕಿಲುಡು ಕೈ ಪಾಡು ನೂಕುಲೆಂದು ಪಂಡೆನಾಯೆ  ಕದಿರೆದ ಬಂಗೇರ

ಏರ್‌ಯ ಬಂಗೇರ ಬುಡ್ಡಾಂಪ ಬುಡುಲಯ ಬುಡ್ಡಾಂಡ ಎನ್ನ ಬಂಜಿಡುಪ್ಪಿ ಬಾಲೆಡಾಂಡ

ಎನ್ನಾಡ ಪಳಯಳೆನು ಬುಡ್ಡಾವೆಂದು ಬರುವೆ ಎನ್ನ ಮಗೆ ಬತ್ತುದು ಪಂಡುದು

• ನಂಗಾಯ ಬಡೆಯಿದ ಜೂಜುಲನ ನಾನು ಮಗಳಾಳು ಕರಿಯ ಕನ್ಯಾ ಮದನು


 ಡೆನ್ಮಾನಾ ಡೆನ್ನಾನ ಬಂಗೇರೆ ಎನ್ನ ಒಂಜಿ ಅಣ್ಣನಾಕುಳನು ಬುಡುಲೆಯೇ ಬಂಗೇರೇಂದು ಈರೇಗು ಬಂದನಾಳು ಮೊಣ್ಣೆ ಆಳು ನಲ್ಲೊಂದಾಳೆ / ಕರಿಯ ಕನ್ಯಾ ಮದಳು ಆತುಲನೆ ಪಾತೆರೊನು ಕೇಂಡಾಳೆ ಮಗಳು ಆಳು ನಿನ್ನ ಏಳುಪ್ಪರಿಗೆ ಇಲ್ಲುಗುಲ / ಬಿಚ್ಚಾವಂದೆ ಕುಳ್ಳಾಯೆಂದು ಮಣ್ಣು ಮುಟ್ಟುದು ಆಣೆ ಕೊರುವಾಳೆ ಮಗಳು ಆಳು ಕರಿಯ ಕನ್ಯಾ ಮದನು

ಉಂಡು ಉಡು ಬೇನೆ ಬತ್ತುಂಡು ಅಯ್ಯಯ್ಯೋ ದೇವರೆ ಎನ್ನಾಂಡಲ ಅನುಕುಲು ಒಂಜಿ ಕುದುಪ್ಪ ಗಂಜಿ ಮುತ್ತುದು ಗೋಳಿದ ಜಂತಿಗು ಕಟ್ಟುದು ಏನಿಗಾಂಡ ಎನ್ನ ಅಣ್ಣನಕುಲು ಏಳು ಜನ ಯಾರು ಸೇರು ಎಣ್ಣ ಆಪನ ಎನ್ನ ಬಂಜಿಡುಪ್ಪಿ ಬಾಲೆ ಸೇರುಂಡ ಒಂರ್ಬಜನ ಸೇರುದು ಉಣ್ಣಿನ ಕಾಲ ಮುಟ್ಟ ಬೆಟ್ಟೋನೇ ಉಪ್ಪೋಡೊಂದು ಜಯೇಡು ಕಟ್ಟುದುಲ ನಾರಾಯಣ ದೇವೆರೆಗು ಸೂರ್ಯ ಚಂದ್ರದೇವರ ಆಜ ಕಟ್ಟುದು ದೀಪಾಳಾಳು ಕರಿಯ ಕನ್ಯಾಮದನು ಡನ್ನಾ ಡೆನ್ನಾ ಡೆನ್ನಾನಾಗೆ ಉಡು ಉಡೋ ಬೇರೆ ಒತ್ತುಂಡು ಮುಂಡಿದ ಪುದೆಲುಗು ಕುಳ್ಳಾಳಪ್ಪ ಮಗಳು ಉಡು ಉಡೋ ಬೇನೆ ಬತ್ತುದು ಆಣುಬಾಲೆ ಪೆದು ಪೆದುಮಾನ ಪೋಪಾಳಪ್ಪ ಮಗಳಾಳು ಒಂಜೀಲ ತೆಕ್ಕಿದ ಇರೆ ಕೊಣತ್ತುದು ಬಾಲೆನು ಜೆಪ್ಪುಡಾದು ಓಳು ಈ ಸೇರೊಡು / ಆಡೆಗೆ ಸೇರುಲಾಂದು ಪ ಕಡಲುಡು ಬುಡ್ವಾಳಪ್ಪ ಕರಿಯ ಕನ್ಯಾ ಮದನು ರಾ ತುತ್ತಿ ಸೀರೆ ಪರಿದು ಪೋಪುಂಡು ತೆಕ್ಕಿದಿರೆ ಕಟ್ಟೋಣುದು ಸೊಂಟ ಸುತ್ತಾ ತೆಕ್ಕಿದಿರೆ ಕಟ್ಟೋಣದು ಮಾನೋನು ಮುಟ್ಟೋಣುದು ಮುಂಡೇವುದ ಬಲ್ಲೇಡು ಕಾಲೋನೇ ಕಳೆಯೋಣುದು ಉಪ್ಪುವಾಳು ಮಗಳು ಕರಿಯ ಕನ್ಯಾ ಮದನು ಏಳೇಳು ಪದಿನಾಲು ವರ್ಸೊನೇ ಅಂಚಾನೇ ಕಾಲ ದೆತ್ತುದು


ಕಾಡುಡೇ ವಾಸವಾದು ಒಂಜಿಲ ಕಾಡ ನರಮಾನಿ ಉಂಡೊಂದು ಊರುಪೂರ ಸುದ್ದಿಲ ಆವೊಂದು ಉಪ್ಪುನ ಕಾಲೊಗು

ಹಾಗೆ ಇರುವ ವರ್ಷ ಪ್ರಾಯಲ ಬಂದೇದು  ಕರಿಯ ಕನ್ಯಾ ಮದನುನ ಬಾಲೆಗು  ಮಲ್ಲ ಅರಸುನ ಏಳು ಉಪ್ಪರಿಗೆ - ಮಿತ್ತುಡು ಎಳ್ಳುನ ಅರಸುಗು ಜೋಕುಲು ಬಾಲೆಳು ಇಜ್ಜಾಂದೆ ಉಪ್ಪುನ ಕಾಲೊಡು ಮೀನುನು ಮತ್ತುನ ಮೀನು ಸತ್ತುನ ಮರಕ್ಕಾಲೆರೆನ ಬಲಕು ಬೂರುನ ಬಾನು ಕೊಂಡೋದು ಬಾರೀ ಮೊಗ್ಗುಡು ಹಾಕುದು ಅರಸುನ ಇಲ್ಲಡೆ ಬುಟ್ಟೇರು ಮರಕಾಲರು ಮೀನು ಪತ್ತುನ ಮರಕ್ಕಾರು ಅತುಲ ಮೂರ್ತ ಅನಾಗ ನಂದಾವರದ ಅರಸು ಕೇನೊಡೇ ಬಾಲೆಂಡ ಮಲ್ಲೇ ಅದು ಆಯನುಲಾ ಲೆತ್ತೊಂಡುದು ಕಾಡುಗು ಪೋಪೆರುವೆ ಕಾಡುದ ಬೇಟೆ ದೇರಾಗ ಒಂಜೀಲ ಕಾಡು ಮನುಷ್ಯ ಉಂಡೂಂದು ತೋಜುಂಡುಗೆ ಕರಿಯ ಕನ್ಯಾ ಮದನುಲ ಅಂಚಿ ಇಂಚಿ ತೂನಾಗಲ ಬಾಲೆನು ತೂನಗ ಕಂಡನ್ಯನ ನೆ೦ಪಾನಗ ಸೂರ್ಯ ಚಂದ್ರ ದೇವೆರೆಲೆಕ್ಕ ಬುಳೆತ್ತಿನ ಬಾಲೆ ಏರೆಂದು ನೆನಪ್ಪಾಳಪ್ಪಾ ಮಗಳಾಳು ಕರಿಯ ಕನ್ಯಾ ಮದನು ಪತ್ತಿನ ಬಿಲ್ಲುಲ ಬಾಣನು ತಿತ್ತುಲ ಪಾಡುಲ ಮಗ ನಿನ್ನಾಂಡ ಅಪ್ಪೇನವುಂದು ಮೀನುನ ಬೀಸುನೊಂಜಿ ಮರಕ್ಕಾಲೆ ಪಣ್ಣಾಗದೆ / ಬಾರಿ ಮಲ್ಲ ವಿಸ್ಮಯಡೋ ಪಾರು ಬತ್ತು ತಕ್ಕುದು ಪತ್ತುದು ದಾನೆ ಆಂಡು ಅಪ್ಸರೆಂದು ಕೇಣುಂಡಪ್ಪ ಬಾಲೆ ಅವುಳು ಅಣು ಬಾಲೆ ಕೇಣ್ಣಾಗ ಈ ಏರ್ ಅರಸು ಮಗ ಈಡೆಗು ದಾಯೆಗು ಬತ್ತಾಂದು ಯಾನ್ ಅಪ್ಪೇಂದುಲ ನಿಕ್ಕು ಎಂಚ ಗೊತ್ತುಂದು ಕೇಣ್ಯಾಳು

ಕರಿಯ ಕನ್ಯಾ ಮದನು ಇಜ್ಜಿಯೇ ಅಪೇರೇ ಈ‌ ಬುಡೈನೆನು ತೂದು ಎನನು


ನು ಎನ್ನ ಏಳು ಜನ ಸಮಾಲೆಳೆದು ಅವು ಬಲ್ಲ ಅರಮನೆನು ಈ ಎಂಚ ಗೆಲ್ತಾಂದು ಕೇಣ್ಣಾಗ ಯಾರು ಈರೆಗೆ ಮುಟ್ಟಿ ಮಗೆ ಅಂಡ ಸದ್ದಿ ಮಗ ಅಂದಾಂಡ ಸೂರ್ಯ ಚಂದ್ರ ಆಜ ದೀದು ಎನ್ನನು ನೀರುಗು ಬುಡುನಾಗ ಎಂಕುಲ ಸತ್ಯದ ಕಾಲ ಅತುಂಡು ಅಪೇರೆಂದು ಕದಿರೆದ ಆನೆನೆ ಬಡಗ ಲೆಂದುದು ಪಂಡು ಬಾಲೆ ಒರಿ ಮಗೆ ಕುಮಾರೆ ನಿರ್‌ಯಾ ಬಂಗೇರ ಆನಿದ ಕಾಲೊಡುಲ ಎನ್ನನಾ ಪಳೆಯಳೆನು ಕತ್ತಲೆದ ಇಲ್ಲುಡು ಏರಮ್ಯಾ ಮದನು ಇಂದ್ ಏರು ಬಾಲೆಂದು ಕೇಣ್ಣಾಗ ನಿಲ್ಲಿನ ಅರವತ್ತೆ ಅಣ್ಣನಾಕೆ ಈತು ವರ್ಷ ಓಳ್ಳಾ ಪುಟ್ಟುದು ಓಳಾಂಡಾ ಬುಳೆತ್ತಿದು ರಾಜೆ ಮಗೆ ಆದುತ್ತೆ

ಸಂಕೋಲೆಡು ಹೊಡುದು ಕುಳ್ಳಾದನೆ /ಇನಿ ಆಂಡಾ ಬುಡಲಂದು ಸೋಪಾನ ಇಜ್ಯ ನಿನ್ನನು ಕೈಕಾರು ಕಟ್ಟುದು ಪಾಡೊಡಾಂದು ಕೇಣುವ ಆಯೆ ಕದಿರೆದ ಬಂಗೇರೆ ಅತುಲ ಪೊರ್ತು ಅನಾಗ ಚಪ್ಪರಿಗೆನೆ ಗೊತ್ತಾದುಲ

ಉಪ್ಪರಿಗೆದ ಇಲ್ಲುಗು ಬರುನಗ ಏಳು ಮಾಲಿಗೆ ಹೊತ್ತುದಲ ಸುಡು ಸೂಕರ ಆಪುಂಡುಲ ಏಳು ಜನ ಸತ್ಕಾಲೆಳೆನು ಬುತ್ಪಾವೊಂದು ಬದ್ದೇನೆ ಮಗೆ ಒರಿ ಮಗೆ ಕುಮಾರೆನೆ ಕರಿಯ ಕನ್ಯಾ ಮದನುನ

ಇನಿಗು ಆನಗ ಎನ್ನ ಮಗೆ ಕುಮಾರೆಂದು ಊರುಗು ಷೋಯಿಂದು ಪರಪ್ಪ ಕಬೇರೇರು ಏಳು ಜನ ಕುಬೇರೆರು ಕರಿಯ ಕನ್ಯಾಮದನು


Tuesday, 10 October 2023

ಸೇಮಿಕಲ್ಲ ಪಂಜುರ್ಲಿ‌: ಡಾ.ಲಕ್ಷ್ಮೀ ಜಿ ಪ್ರಸಾದ್

ರಾವಳಿಯ ಸಾವಿರದೊಂದು  ದೈವಗಳು :ಸೇಮಿ ಕಲ್ಲ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

                                                ಚಿತ್ರ ಕೃಪೆ :ಧರ್ಮ ದೈವ
ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .
© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 
ಹೀಗೆ ಸಿರಿಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

No comments:

Monday, 9 October 2023

ಕರಾವಳಿಯ ಸಾವಿರದೊಂದು ದೈವಗಳು- ಪಿಲಿಚಾಮುಂಡಿ/ ವ್ಯಾಘ್ರ ಚಾಮುಂಡಿ- ಡಾ.ಲಕ್ಷ್ಮೀ ಜಿ ಪ್ರಸಾದ್

 


ಪಿಲಿಚಾಮುಂಡಿ - ಡಾ.ಲಕ್ಷ್ಮೀ ಜಿ ಪ್ರಸಾದ್ 


                 ಪಿಲಿಚಾಮುಂಡಿ ಭೂತವನ್ನು ದುರ್ಗೆಯ ಅಂಶ ಎನ್ನುವ ದೃಷ್ಟಿಯಿಂದ ಜುಮಾದಿಗೆ ಸಮಾನವಾದುದು ಎಂದು ಭಾವಿಸಿದ್ದಾರೆ” ಎಂದು ವಿವೇಕ ರೈ ಹೇಳುತ್ತಾರೆ. ಹುಲಿಯನ್ನೇರಿ ಯುದ್ಧ ಮಾಡಿ ಚಂಡಮುಂಡರನ್ನು ಸಂಹಾರ ಮಾಡಿರುವ ಶಕ್ತಿಸ್ವರೂಪಿಗೆ ದೇವಿಯನ್ನು ಚಾಮುಂಡಿಚಾಮುಂಡೇಶ್ವರಿ ಎಂದು ಕರೆಯುತ್ತಾರೆ. ಆದರೆ ಹುಲಿಯನ್ನೇ ಕುಲದೈವವಾಗಿರಿಸಿಕೊಂಡ ಜನಾಂಗಗಳ ಆರಾಧನೆಗೆ ಪೌರಾಣಿಕ ಕಲ್ಪನೆ ಸೇರಿ ಅದು ಪಿಲಿಚಾಮುಂಡಿ ಭೂತವಾಗಿರಬಹುದು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಪಿಲಿಚಾಮುಂಡಿಯ ಉಗಮಕ್ಕೆ ಸಂಬಂಧಿಸಿದ ಪಾಡ್ದನಗಳು ಲಭ್ಯವಿಲ್ಲ. ಆದರೆ ಅದರ ಪ್ರಸರಣವನ್ನುಮಹಿಮೆಯನ್ನು ಹೇಳುವ ಪಾಡ್ದನಗಳಿವೆ. ಪಾಡ್ದನಗಳ ಪ್ರಕಾರ ಮಂಜುಪೂಂಜನು ಕಳ್ಳರಿಂದ ರಕ್ಷಣೆ ಪಡೆಯುವುದಕ್ಕಾಗಿ ಪಿಲಿಚಾಮುಂಡಿ ಭೂತವನ್ನು ತರುತ್ತಾನೆ. ಆದರೆ ತಮ್ಮ ಕುಲದೈವವಾದ ಪಿಲಿಚಾಮುಂಡಿಯನ್ನು ಹಣದ ಆಸೆಯಿಂದ ಬಾಳೊಳಿಯವರು ಮಂಜುಪೂಂಜನಿಗೆ ಕೊಡುತ್ತಾರೆ. ಆದ್ದರಿಂದ ಮಂಜುಪೂಂಜನಿಗೆ ಅದು ನಾನಾವಿಧವಾದ ತೊಂದರೆಗಳನ್ನು ಉಂಟುಮಾಡುತ್ತದೆ. ನಂತರ ಸ್ಥಾನವನ್ನು ಕೇಳಿ ಪಡೆದು ನೆಲೆ ನಿಲ್ಲುತ್ತದೆ. ಪಿಲಿಚಾಮುಂಡಿ ಖಡ್ಗವನ್ನು ಕೇಳಿ ಪಡೆಯುತ್ತದೆ. ಪಿಲಿಚಾಮುಂಡಿ ಭೂತದ ಆಯುಧ ಖಡ್ಗವೇ ಆಗಿದೆ. ಇನ್ನೊಂದು ಪಾಡ್ದನದ ಪ್ರಕಾರ ಓಬಾದೇಶಿ ಎನ್ನುವವರು ನೆಕರೆಯ ಕೈಯಿಂದ ವೀಳ್ಯದೆಲೆಯಲ್ಲಿ ಮಂತ್ರಿಸಿದ ಪಿಲಿಚಾಮುಂಡಿ ಭೂತವನ್ನು ತರುತ್ತಾರೆ. ಆದರೆ ಅದರ ಶಕ್ತಿಯನ್ನು ತಡೆಯಲು ಸಾಧ್ಯವಾಗದೆಕೋಲಬಲಿ ನೀಡಿ ಅದನ್ನು ಶಾಂತಗೊಳಿಸುತ್ತಾರೆ. ಜೈನರಲ್ಲಿ ಚಾಮುಂಡಾ’ ಎಂಬ ಹೆಸರಿನ ಯಕ್ಷಿಯ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ಕರಾವಳಿಯ ಸಾವಿರದೊಂದು ದೈವಗಳು :ಪಾರ್ಥಂಪಾಡಿ( ಜಟಾಧಾರಿ) ದೈವ- ಡಾ.ಲಕ್ಷ್ಮೀ ಜಿ ಪ್ರಸಾದ್

 

ಚಿತ್ರ : ಅಂತರ್ಜಾಲ 
ಪಾರ್ಥಂಪಾಡಿ( ಜಟಾಧಾರಿ) ದೈವ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಪಾರ್ಥಂಪಾಡಿ (ಜಟಾಧಾರಿ) ದೈವ ವಿಟ್ಲ ಅರಸರ ಅರಮನೆಯ ಪಟ್ಟದ ದೈವ. ಮೂಲತಃ ಓರ್ವ ವೀರ ಪುರುಷ .ಈತ ವಿಟ್ಲ ಅರಸರೊಬ್ಬರನ್ನು  ಬಂಧನದಿಂದ ಬಿಡಿಸಿ ಸ್ವತಂತ್ರಗೊಳಿಸಿದ ವೀರ ಎಂಬ ಐತಿಹ್ಯವನ್ನು ಹಿರಿಯರಾದ ಕುಂಡ ನಲಿಕೆಯವರು ತುಂಬಾ ಸಮಯದ ಹಿಂದೆ ತಿಳಿಸಿದ್ದರು

 ವಿಟ್ಲ ಅರಸರ ಚಾವಡಿಯ ಪಟ್ಟದ ದೈವದ ಮೂಲ ಹೆಸರು ಪಾರ್ಥಂಪಾಡಿ ದೈವ.ವಿಟ್ಲ ಅರಮನೆಯ ಚಾವಡಿಗೆ ಪಾರ್ಥಂಪಾಡಿ ಚಾವಡಿ ಎಂಬ ಹೆಸರಿದ್ದ ಬಗ್ವೆ ಇತಿಹಾಸದಲ್ಲಿ ಉಲ್ಲೇಖಗಳಿವೆ.ಇದನ್ನು ಜಟಾಧಾರಿ ಎಂದೂ ಕರೆಯುತ್ತಾರೆ 

ಯಾವ ವಿಟ್ಲದ ಅರಸರು ಬಂಧನಕ್ಕೊಳಗಾಗಿದ್ದರು ? ಯಾಕೆ ? ಅವರನ್ನು ಬಂಧನದಿಂದ ಬಿಡಿಸಿದ ವೀರ ಯಾರು ಎಂಬ ಬಗ್ಗೆ ಮಾಹಿತಿ ಹುಡುಕುತ್ತಾ ಇದ್ದಾಗ ಕೆಂಡ ಸಂಪಿಗೆಯಲ್ಲಿ ಡಾ.ಜನಾರ್ಧನ ಭಟ್ ಅವರು ಬರೆಯುತ್ತಿದ್ದ ಓಬೀರಾಯನ ಕಥೆಗಳು ಅಂಕಣದಲ್ಲಿ ಬೇಕಲ ರಾಮನಾಯಕರ ಒಂದು ಕಥೆ ಸಿಕ್ಕಿತು.ಇದು ಇತಿಹಾಸ ಆಧಾರಿತ ಕಥಾನಕವಾಗಿದೆ.

ಪುಣಚ ಗ್ರಾಮದ ದೊಡ್ಡ ಮನೆ ಈಶ್ವರಯ್ಯನವರು ಇಲ್ಲಿನ ಮೂಲ ಪುರುಷ.ಇವರು ಮೊದಲು ವಿಟ್ಲ ಅರಸರಬಗ್ಗೆ ಅತೀವ ಪ್ರೀತಿ ಗೌರವ ಉಳ್ಳವರಾಗಿದ್ದರು..ಇವರ ಬಗ್ಗೆ ಬೇಕಲ ರಾಮನಾಯಕರು "

ಅಂದಿನ ಇಟ್ಟಲ ಹೆಗ್ಗಡೆಗೆ ಅವನಲ್ಲಿ ತುಂಬ ಸ್ನೇಹ ವಿಶ್ವಾಸ. ಗಂಡುಡೆಯುಟ್ಟು ದೊಡ್ಡ ಮುಂಡಾಸನವನ್ನು ಸುತ್ತಿ ಬಿಳಿಯ ಬಗಲು ಕಸೆಯ ನಿಲುವಂಗಿ, ಜರತಾರಿ ಅಂಗರೇಖು ತೊಟ್ಟು ಬಿಗಿದ ಪಟ್ಟಿದಟ್ಟಿಯಲ್ಲಿ ಬೆಳ್ಳಿ ಹಿಡಿಯ ನೀಳ್ಗತ್ತಿಯನ್ನು ಸಿಕ್ಕಿಸಿಕೊಂಡು ಐವತ್ತರ ಹರಯದ ಆ ವೀರನು ಓಲಗದಲ್ಲಿ ಸುಳಿದನೆಂದರೆ ಅವನ ಗಂಡುಗಾಡಿಯಿಂದ ಪಾರ್ಥಂಪಾಡಿ ಚಾವಡಿಯೆಲ್ಲ ಬೆಳಗುತ್ತಿತ್ತು.ಎಂದಿದ್ದಾರೆ.

© ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ,ಲೇ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684:

ಊರಿನ ಎಲ್ಲ ಕೂಟ ಸ್ಥಾನ ಪಂಚಾಯತಿಗಳಿಗೆಲ್ಲ ಅವನೇ ಅಗ್ರಣಿ. ಅವನ ಮಾತಿಗೆ ಇದಿರಿಲ್ಲ. ಸೀಮೆಯ ಸಾವಿರದೈನೂರು ಆಳಿಗೆ ಅವನಲ್ಲಿ ಅಂಥ ಆದರಾಭಿಮಾನ. ಜಾತ್ರೆ, ಸಮಾರಾಧನೆ, ಅಯನ, ಕಂಬಳಗಳಿಗೆ ಹಣ ಸೂರೆಗುಡುತ್ತಿದ್ದನು. ಅವನ ಆ ದೊಡ್ಡ ಮನೆಗೆ ಹಸಿವಿನಿಂದ ಹೋದವರು ಬರಿ ಹೊಟ್ಟೆಯಲ್ಲಿ ಬಂದುದಿಲ್ಲ. ಸಹಾಯ ಬೇಡಲು ಹೋದವರು ಬರಿಗೈಯಲ್ಲಿ ಮರಳಿದುದಿಲ್ಲ. ಇತಿಗಳಿಗೆಲ್ಲ ಅವನೇ ಮೊಕ್ತೇಸರ. ಶುಭ ಶೋಭನಗಳಿಗೆ ಅವನಿಗೆ ಓಲಗದ ಹೇಳಿಕೆ. ಮದುವೆ ಮುಂಜಿಗಳಲ್ಲಿ ಅವನ ಮನೆಗೆ ಮೊದಲು ಸೇಸೆಯ ಮರ್ಯಾದೆ. ಅವನು ಹೋದಲ್ಲೆಲ್ಲ ಅವನಿಗೆ ಮೂರು ಮಣೆಯ ಮನ್ನಣೆ – ಒಂದು ಅವನ ಖಡ್ಗಕ್ಕೆ. ಒಂದು ಮುಂಡಾಸು ಇರಿಸುವುದಕ್ಕೆ, ಒಂದು ಅವನ ಆಸನಕ್ಕೆ. ಎಲ್ಲಿ ಹೋದರೂ ಅವನ ಮಾತುಕತೆ ನಡೆಯುತ್ತಿತ್ತು. ನಡೆದು ನಡೆದು ಅದು ಇಕ್ಕೇರಿಯ ಹೊನ್ನಾಗಿತ್ತು." ಎಂದು ರಾಮನಸಯಕರು ಈಶ್ವರಯ್ಯನ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ

ವಿಟ್ಲ ಅರಸರು ಇಕ್ಕೇರಿಯ ಸಾಮಂತರಾಗಿದ್ದ ಕಾಲವದು.ಆಗ ಇಕ್ಕೇರಿಯ ಅರಸರು ಈಶ್ವರಯ್ಯನ ಸೌರ್ಯ ಸಾಹಸ ಧೀಮಂತಿಕೆಯನ್ನು ನೋಡಿ ತಮ್ಮ ಸೇನೆಯ ದಳವಾಯಿಯನ್ನಾಗಿ ಮಾಡಿದರು© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಈ ಬಗ್ಗೆ ಬೇಕಲ ರಾಮನಾಯಕರು "

ಕ್ರಿ.ಶ. 1715ರಲ್ಲಿ ಕೆಳದಿಯಲ್ಲಿ ಎರಡನೇ ಸೋಮಶೇಖರ ನಾಯಕನು ಪಟ್ಟವೇರಿ ಪರಮ ಪ್ರಸಿದ್ಧಿಯನ್ನು ಪಡೆದಿದ್ದನು. ನೆಗಳ್ತೆವೆತ್ತ ಶಿವಪ್ಪನಾಯಕನು ಚಂದ್ರಗಿರಿ, ಬೇರ, ಚಿತ್ತಾರಿ ಕೋಟೆಗಳನ್ನು ಬಲ್ಪಗೈಸಿ ನೀಲೇಶ್ವರದವರೆಗೆ ಗಡಿಯನ್ನೊತ್ತಿ ತೊಲಗದ ಕಂಬವನ್ನು ನಿಲ್ಲಿಸಿದ್ದರೂ ಆ ಪ್ರದೇಶದ ಹಿಡಿತವಿನ್ನೂ ಬೇರುಗೊಂಡಿರಲಿಲ್ಲ. ಎಡಬಲದ ಮಲೆಯಾಳಿಗಳು ಆಗಾಗ ಗುಲ್ಲೆಬ್ಬಿಸುತ್ತಿದ್ದರು. ಒಮ್ಮೆ ಕೋಲತ್ತರಸ ರವಿವರ್ಮರಾಜನು ಕುಹಕೋಪಾಯಗಳಿಂದ ಕುಂಬಳೆಯರಸನನ್ನು ಕೂಡಿಕೊಂಡು ನಾಯಿಮಾರ, ಮಾಪಿಳ್ಳೆ ಮೊದಲಾದ ಮಲೆಯಾಳಿ ಜನರ ಪಡೆಯೊಂದಿಗೆ ಬಲವೆತ್ತಿ ಬಂದು ಚಂದ್ರಗಿರಿ ಕೋಟೆಯನ್ನು ಲಗ್ಗೆಯಿಟ್ಟನು. ಪರಿಸರದ ಊರು ಕೇರಿಗಳನ್ನು ಕೊಳ್ಳೆಹೊಡೆದನು. ತಿರುಕಣ್ಣೂರು ತಿರೂರು ಕೋವಿಲಗಳನ್ನು ಸುಲಿದು ಊರಿಗೆ ಕಿಚ್ಚಿಟ್ಟನು. (ಹಾಗೆ ಸುಟ್ಟು ಕರಿಪುಡಿಯಾದ ಭಾಗವು ಈಗಲೂ ಕರಿಪೇಡಿಯೆಂದು ಕರೆಯಲ್ಪಡುತ್ತಿದೆ.) ಇದನ್ನು ಕಂಡು ಸೋಮಶೇಖರ ನಾಯಕನು ಕೆರಳಿ ಮಲೆತು ಮಾರ್ಮಲೆವ ಮಲೆಯಾಳಿಗಳನ್ನು ಹತ್ತಿಕ್ಕುವುದಕ್ಕಾಗಿ ಚಂದ್ರಗಿರಿ ಕೋಟೆಗೆ ಬಲ್ದಂಡನ್ನು ಕಳುಹಿಸಿದನು. ಆ ಕನ್ನಡ ಸೇನೆಯು ಮುನಿದೆತ್ತಿ ಬಂದು ಭೋಂಕನೆ ಬರಸಿಡಿಲಂತೆರಗಿ ಅರಿಪಡೆಯನ್ನು ತರಿದು ತೂರಿ ದೆಸೆಗೆಡಿಸಿತು. ಕೋಲತ್ತರಸನು ಕೈಯೂರಿ ಕೈದುವನಿಕ್ಕಿ ಕೈ ಮುಗಿದು ಮುತ್ತಿಗೆ ಕಿತ್ತು ಕಾಲ್ತೆಗೆದನು. ಕುಂಬಳೆಯರಸನು ಸೆರೆಸಿಕ್ಕಿ ವೇಣುಪುರ ಕೋಟೆಯಲ್ಲಿ ಬಂಧಿತನಾದನು. ಈ ಭೀಕರ ಯುದ್ಧದಲ್ಲಿ ಈಶ್ವರಯ್ಯನ ಪಟುತರ ಭುಜ ಬಲವು ಬೆಳಕಿಗೆ ಬಂತು.

ಸೋಮಶೇಖರ ನಾಯಕನು ಮಲೆಯಾಳಿಗಳನ್ನು ಹಿಮ್ಮೆಟ್ಟಿಸಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತೆಂಕನಾಡ ಗಡಿಯನ್ನು ಇನ್ನೂ ಮುಂದೊತ್ತಬೇಕೆಂದು ಸೇನೆಯನ್ನಟ್ಟಿದನು. ಆ ಮಹಾಸೈನ್ಯವು ಚಿತ್ತಾರಿ ಕೋಟೆಯಲ್ಲಿ ಪಾಳೆಯ ಬಿಟ್ಟು (ನಡೆ) ತಳಿಗೋಂಟೆಯನ್ನು ನಡೆಸುತ್ತ ಜಂತ್ರದ ಒಡ್ಡವಣೆಯ ಚಳಕದಿಂದ ಒತ್ತೊತ್ತಿ ಮುಂದುವರಿಯುತ್ತ ಇದಿರಾಂತವರನ್ನು ತಳ್ತಿರಿಯುತ್ತ ಉರವಣೆಯಿಂದ ಕಾದಿ ಶತ್ರುಗಳನ್ನು ನೆಲೆಗೆಡಿಸಿ ಅಲವತ್ತನಾಡು ನೀಲೇಶ್ವರಗಳನ್ನು ಹಾಯ್ದು ಪೆರಂಪುಯ ನದಿಯ ವರೆಗೆ ನುಗ್ಗಿ – ಆ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. © ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಸೋಮಶೇಖರ ನಾಯಕನು ಕಾಂಞಂಗಾಡಿನಲ್ಲಿ ‘ಹೊಸದುರ್ಗ’ವನ್ನು ಕಟ್ಟಿಸಿ ಫೌಜನ್ನಿಟ್ಟು ಭದ್ರಪಡಿಸಿದನು. ಈ ಮಹಾ ಕಾಳಗದಲ್ಲಿ ಈಶ್ವರಯ್ಯನ ಪರಾಕ್ರಮಕ್ಕೆ ಕಲಶವಿಟ್ಟಿತು. ಅವನ ಅದಟು, ಆರ್ಪು, ಅಂಗವಣೆಗಳನ್ನು ಕಂಡು ಬಾರಕೂರು ಸೂರಪ್ಪಯ್ಯನೇ ಮೊದಲಾದ ಚಮೂಪತಿಗಳು ಶಹಭಾಸ್ ಎಂದರು. ಶತ್ರು ಸೈನ್ಯವು ಬೆರಗಾಯಿತು. ಸೋಮಶೇಖರ ನಾಯಕನು ಸ್ವತಹ ಅವನ ರಣವಿಕ್ರಮದ ಆಯತಿಕೆಯನ್ನು ಕೊಂಡಾಡಿ ಅವನನ್ನು ದಳವಾಯಿ ಪದವಿಗೇರಿಸಿ ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದನು." ಎಂದು ಬಣ್ಣಿಸಿದ್ದಾರೆ

ಆ ಸಮಯದಲ್ಲಿ ದೋರ್ದಂಡ ವಿದಾಯ ಶ್ರುತ ಪ್ರತಾಪ’ ಎಂಬ ಬಿರುದಿಗೆ ಪಾತ್ರರಾಗಿದ್ದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಪ್ರಜಾನುರಾಗಿಯಾಗಿ ರಾಜ್ಯವನ್ನಾಳುತ್ತಿದ್ದನು

© ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ,ಲೇ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684:

ಆಗ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯದೆ ಜನರ ಆದಾಯ ಕಡಿಮೆಯಾಯಿತು.ಪ್ರಜಾನುರಾಗಿಯಾದ ಅರಸ ಬಲವಂತವಾಗಿ ರಾಯ ಸಂಗ್ರಹಿಸಲಿಲ್ಲ.ಇದರಿಂದಾಗಿ ಬೊಕ್ಕಸ ಬರಿದಾಗಿ ಇಕ್ಕೇರಿಯ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸಲು ಸಾಧ್ಯವಾಗಲಿಲ್ಲ.ಇದರಿಂದಾಗಿ ಇಕ್ಕೇರಿಯ ಅರಸರು ವಿಟ್ಲದ ಅರಸರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದಳವಾಯಿ ಈಶ್ವರಯ್ಯನವರಿಗೆ ಸೆರೆಮನೆಯ ವಿಭಾಗದ ಜವಾಬ್ದಾರಿಯನ್ನು ಇಕ್ಕೆರಿಯ ಅರಸರು ವಹಿಸಿದ್ದರು.ಇಕ್ಕೇರಿಗೆ ನಿಷ್ಟರಾಗಿದ್ದ ವಿಟ್ಕ ಅರಸರು ಸೆರೆಮನೆಯಲ್ಲಿರುವುದು ತಿಳಿದು ಈಶ್ವರಯ್ಯನವರಿಗೆ ಬಹಳ ಸಂತಾಪವಾಯಿತು.ಪ್ರಧಾನಿ ನಿರ್ವಾಣ ಶೆಟ್ಟಿ ಅವರ ಸಹೋದರ ಗುರುವಪ್ಪನವರ ಜೊತೆ ಮಾತನಾಡಿದರು‌ಮಹಾರಾಜರಿಗೆ ಒಪ್ಪಿಸಲು ಸಾವಿರ ಹೊನ್ನಿನ ವ್ಯವಸ್ಥೆ ಮಾಡಿದರು ಉಳಿದ ಕಪ್ಒದ ಹಣವನ್ನು ಸಲ್ಲಿಸಲು ಕಾಲಾವಕಾಶ ಒದಗಿಸಿ ಅರಸರನ್ನು ಸ್ವತಂತ್ರರನ್ನಾಗಿ ಮಾಡಿದರು.ಕೊಡಬೇಕಾದ ಕಪ್ಪದ ಹಣದಲ್ಕಿ ಅರ್ಧದಷ್ಟು ರಿಯಾಯತಿ ನೀಡಿಸಿದರು.

ಹಾಗಾಗಿ ವಿಟ್ಲದ ಅರಸರು ದಳವಾಯಿ ಈಶ್ವರಯ್ಯನವರ ಬಗ್ಗೆ ಅಪಾರವಾದ ಗೌರವ ಅಭಿಮಾನಗಳನ್ನು ಹೊಂದಿದ್ದರು.ಹಾಗಾಗಿ ವಿಟ್ಲದ ಪಾರ್ಥಂಪಾಡಿ ಚಾವಡಿಯಲ್ಲಿ ಈಶ್ವರಯ್ಯನವರಿಗೆ ವಿಶೇಷವಾದ ಸ್ಥಾನ ಇತ್ತು‌

ತನ್ನನ್ನು ಸೆರೆಮನೆಯಿಂದ ಬಿಡಿಸಿ ಮತ್ತೆ ಅರಸೊತ್ತಿಗೆ ಸಿಗುವಂತೆ ಮಾಡಿ ಮಾನವನ್ನುಳಿಸಿದ ನಿರ್ವಾಣ ಶೆಟ್ಟಿಗೆ ತನ್ನ ಅಧೀನದ ಕಾಡುಮಠದಲ್ಲಿಯೂ, ದಳವಾಯಿ ಈಶ್ವರಯ್ಯನಿಗೆ ಪುಣಚೆ ಗ್ರಾಮದಲ್ಲಿಯೂ ಭೂಮಿಯನ್ನು ಉಂಬಳಿ ಬಿಟ್ಟರು

ಈ ಬಗ್ಗೆ ಶಾಸನವಿದ್ದು ಗಣಪತಿರಾವ್ ಐಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ವಿಟ್ಲ ರಾಜ್ಯದ ಕಾಡುಮಠದ ವೀರಶೈವ ರಾದ ರಾಮಯ್ಯ ಶೆಟ್ರಲ್ಲಿರುವ ಶಾ. ಶ. 1641ನೇ (ಕ್ರಿ, ಶ. 1719)ನೆಯ ಶಾಸನದಲ್ಲಿ ವಿಟ್ಟಿ ದ ಡೊಂಬಹೆಗಡೆಯು ಇಕ್ಕೇರಿ ಆಸ್ಥಾನಕ್ಕೆ ಹೊಡ ತಕ್ಕ ಕಪ್ಪವನ್ನು ಕೊಡದೆ ಇದ್ದುದಕ್ಕಾಗಿ ಆ ಹೆಗಡೆಯನ್ನು ಸೆರೆಹಿಡಿದು ನಗರಕ್ಕೆ ಕೊಂಡುಹೋದಾಗ ನಗರ ಸಂಸ್ಥಾನದಲ್ಲಿ ಪ್ರಧಾನಿಯಾಗಿದ್ದ ಸಂಗಪ್ಪ ಶೆಟ್ಟಿಯ ಮಗ ನಿರ್ವಾಣ ಶೆಶ್ಚಿಯು ಆ ಹಣಕ್ಕೆ ಜಾಮೂನು ನಿಂತದ್ದ ಕ್ಕಾಗಿ ಅರಸೆನಾದ' ನರಸಿಂಹರಸೆ ಡೊಂಬಹೆಗಡೆಯು ಅದೇ ಮೋಜಿಗೆ ನಿರ್ವಾಣ ಶೆಟ್ಟಿಗೆ ಕೊಲ್ನಾಡು ಮತ್ತು ವಿಟ್ಲಿ ಗ್ರಾಮ ಗಳಲ್ಲಿ ಚಂದಪ್ಪಾಡಿ, ಕಾಡುಮರ, ನರ್ಕಳ ಈ ಮೂರು ಕಡೆ ಉಂಬಳಿ ಬಿಟ್ಟಿನೆಂದು ಕಾಣುತ್ತದೆ. ಆ ಆಸ್ತಿಯನ್ನು ಈಗಲೂ ಕಾಡುಮಠ ದವರು ಅನುಭವಿಸಿಕೊಂಡು ಬರುತ್ತಾರೆ. ಈ ಶಾಸನದಿಂದ ಕ್ರಿ. ಶ. 1719ರಲ್ಲಿ ನರಸಿಂಹ ಅರಸೆನಾದ ಡೊಂಬಹೆಗಡೆಯು ಆಳುತ್ತಿದ್ದನೆಂದು ಕಾಣುತ್ತದೆ.

" ಈಶ್ವರಯ್ಯನು ದಳವಾಯಿ ಪದವಿಯಿಂದ ನಿವೃತ್ತನಾದ ಮೇಲೆ ಈ ಮಾನ್ಯದ ಭೂಮಿಯಲ್ಲಿ ಮಹಿಷಿಮರ್ದಿನಿಯ ಪಾದತಲದಲ್ಲಿ ನೆಲೆಗೊಂಡನು" ಎಂದು ಬೇಕಲ ರಾಮನಾಯಕರು ಹೇಳಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದೇವರ ಪದತಲದಲ್ಲಿ ನೆಲೆಗೊಂಡನು ಎಂಬಲ್ಲಿ ಈಶ್ವರಯ್ಯ ದೈವತ್ವ ಪಡೆದುದರ ಸೂಚನೆ ಇದೆ.ಪುಣಚ ಮಹಿಷ ಮರ್ಧಿನಿ ದೇವಾಲಯದ ಪ್ರಧಾನ ದೈವ ಜಟಾಧಾರಿ..ಜಟಾಧಾರಿ ದೈವದ ಪೂರ್ವದ ಹೆಸರು ಪಾರ್ಥಂಪಾಡಿ ದೈವ ಎಂದು.ಬಾಡೂರಿಗೆ ಬಂದ ನಂತರ ಪಾರ್ಥಂಪಾಡಿ ದೈವವನ್ನು ಜಟಾಧಾರಿ ಎಂದು ಕರೆದರು ಎಂದು ತಂತ್ರಿಗಳಾದ ಲಕ್ಷ್ಮೀನಾರಾಯಣ ಭಟ್ಟರು ಮಾಹಿತಿ ನೀಡಿದ್ದಾರೆ.

ಪಾರ್ಥಂಪಾಡಿ ಚಾವಡಿಯಲ್ಲಿ ಬಹುಮಾನ್ಯರಾಗಿಧದ ಈಶ್ವರಯ್ಯನವರೇ ದೈವತ್ವ ಪಡೆದು ಪಾರ್ಥಂಪಾಡಿ ದೈವ ಎಂಬ ಹೆಸರಿನಲ್ಲಿ ಆರಾದಿಸಲ್ಪಟ್ಟಿರಯವ ಸಾಧ್ಯತೆ ಇದೆ.

ವಿಟ್ಲದ ಪಟ್ಟದ ದೈವ ಈಗ ಜಟಾಧಾರಿ ಎಂದು ಕರೆಯಲ್ಪಡುತ್ತಿರುವ ಪಾರ್ಥಂಪಾಡಿ ದೈವವಾಗಿದೆ.

ಅರಸರ ಮಾನ ಉಳಿಸಿದ ಕಳೆದು ಹೋದ ಅರಸೊತ್ತಿಗೆ ಮರಳಿ ಸಿಗುವಂತೆ ಮಾಡಿದ ವೀರ ಪಟ್ಡದ ಚಾವಡಿ ದೈವವಾಗಿ ಆರಾಧನೆ ಪಡೆಯುವದ್ದರಲ್ಲಿ ಅಚ್ಚರಿಯ ವಿಚಾರವೇನೂ ಇಲ್ಲ© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಕುಂಬಳೆ ಅರಸರ ಸೇನಾನಿಯಾಗಿದ್ದ ಬೀರಣ್ಣಾಳ್ವ ಎಂಬ ವೀರ ದೈವತ್ವ ಪಡೆದು ಕುಂಳೆ ಅರಮನೆಯ ಪಟ್ಡದ ದೈವವಾಗಿ ಆರಾಧಿಸಲ್ಪಡುತ್ತಿದ್ದಾನೆ..ಅಂತೆಯೇ ವಿಟ್ಲದ ಅರಮನೆಯ ಪಾರ್ಥಂಪಾಡಿ ಚಾವಡಿಯಲ್ಲಿ ದಳವಾಯಿ ಈಶ್ವರಯ್ಯನವರೇದೈವತ್ವ ಪಡೆದು ಪಾರ್ಥಂಪಾಡಿ ದೈವವಾಗಿ ಮುಂದೆ ಜಟಾಧಾರಿ ಎಂಬ ಹೆಸರಿನಲ್ಲಿ ಶಿವಾಂಸ ಸಂಭೂತನಾಗಿ ಆರಾಧಿಸಲಪಡುತ್ತಿರಬಹುದು.

ಜಟಾಧಾರಿ ದೈವದ ದೊಡ್ಡದಾದ ಮೀಸೆ ಇ ದೈವ ಮೂಲತಃ ಓರ್ವ ವೀರ ದಳವಾಯಿಯಾಗಿರುವುದನ್ನು ದ್ಯೋತಿಸುತ್ತದೆ.

ಈ ಬಗ್ಗೆ ಇದು ಹೀಗೆಯೇ ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ‌,ಈ ಬಗ್ಗೆ ಹೆಚ್ವಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ಸಿಗಬಹುದು.

© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684