ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ
ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ,ಫೋನ್ ಮೂಲಕ ವಾಟ್ಸಪ್ ಕೇಳುವ ಎಲ್ಲರಿಗೆ ಉತ್ತರಿಸಲು ಸಮಯದ ಸಮಸ್ಯೆ ಉಂಟಾಗಿದೆ ಅಲ್ಲದೆ ಹೆಚ್ಚಿನ ವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ .ಹಾಗಾಗಿ ಬ್ಲಾಗ್ ಬರಹವನ್ನು ಪೂರ್ಣವಾಗಿ ಕಾಪಿ ಮಾಡಿ ಹಾಕಿರುವೆ ,ಓದಿ ಇಷ್ಟ ವಾದರೆ ಬೇರೆಡೆ ಹಂಚಿರಿ
ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ಎಂಬ ಸತ್ಯವನ್ನು ಮುಚ್ಚಿಟ್ಡು ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ .
ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿ ಗೆ ಇಲ್ಲಿ ಓದಿ
ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ
ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ ಆದರೆ ಇದು ಪ್ರಸ್ತುತ ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ ಇದರಲ್ಲಿ ತುಳು ಭಾಷೆಯಲ್ಲಿರುವ ಹ್ರಸ್ವ. ಎಒಗಳು ಇಲ್ಲ ಆದ್ದರಿಂದಾಗಿ ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹೀಗೆ ಬಳಸಿದರೆ ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ
ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನಕೆಲವು ಬ್ರಾಹ್ಮಣ ಸಮುದಾಯಗಳು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ ಅಕ್ಷರಗಳು ಇಲ್ಲ ಮತ್ತು ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯ ಏಳು ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ
1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು
2 ಈ ಲಿಪಿ ಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚಿನ ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳು ಆಗಿವೆ,ಕೇವಲ ಏಳು ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ
3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ ತತುಳುವಿನ ಎಲ್ಲ ಅಕ್ಷಗಳುಇಲ್ಲ ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ
5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು
6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ
7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11 ಇದರಲ್ಲಿ ತುಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ ಮತ್ತು ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆ ಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಏಳು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಏಳು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಏಳು ಮಾತ್ರ ಒಂದೊಮ್ಮೆ ಇದುರಲ್ಲಿ ತುಳು ಭಾಷೆಯ ಬರವಣಿಗೆ ಇರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ ತುಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ ಬರವಣಿಗೆ ಇಲ್ಲದೆ ಇದ್ದಾಗ ಲಿಪಿ ಇರುವ ಸಾಧ್ಯತೆ ಇಲ್ಲವೇ ಇಲ್ಲ .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
17 ಈ ಎಲ್ಲಾ ಆಧಾರಗಳು ತಿಗಳಾರಿ ಮತ್ತು ತುಲು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಗಳಲ್ಲೂ ಸಿಕ್ಕಿವೆ ತುಳು ಬ್ರಾಹ್ಮಣರ ಬರೆದವುಗಳೂ ಇವೆ ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ
20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು.
ಆದರೆ ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಲು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ ©ಡಾ.ಲಕ್ಷ್ಮೀ ಜಿ ಪ್ರಸಾದ
(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ ವಿದ್ಯಾ ಅವರಿಗೆ ನೀಡಿದ ಸೂಚನೆಗಳು--
Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)