Wednesday, 20 August 2014

see and say ಸರಣಿ -13 ಭೂತಾರಾಧನೆ -ಅಪರೂಪದ ಭೂತ ಕುಂಟಲ್ದಾಯ:ಡಾ.ಲಕ್ಷ್ಮೀ ಜಿ ಪ್ರಸಾದ



ಚಿತ್ರ ಕೃಪೆ :ಧರ್ಮ ಚಾವಡಿ ನಮ್ಮ ತುಳುನಾಡು
ಮಾನವ ಸಹಜ ಅಲಂಕಾರದಲ್ಲಿರುವ ಕುಂಟಲ್ದಾಯ ಬಹಳ ಅಪರೂಪದ ದೈವತ .ಎಲ್ಲ ಭೂತಗಳಿಗೆ ಇರುವಂತೆ ತೆಂಗಿನ ತಿರಿಯ ಅಲಂಕಾರವಾಗಲಿ ಮುಡಿ ಜಕ್ಕೆಲಣಿ ಗಳಾಗಲಿ ಈ ದೈವಕ್ಕೆ ಇರುವುದಿಲ್ಲ .ಮುಗವೂ ಇಲ್ಲ .ಆಯುಧ ಇರುಸುವ ಭಂಡಾರ ,ಮಾಡ ಕೂಡಾ ಇಲ್ಲ .ಬೇರೆ ಪ್ರಧಾನ ದೈವದ ಸೇರಿಗೆ ದೈವವಾಗಿ ಆರಾಧನೆ ಹೊಂದುವುದಾದರು ಬಹಳ ಕಾರಣಿಕ ಎಂಬ ನಂಬಿಕೆ ಜನರದ್ದು
(C).ಡಾ.ಲಕ್ಷ್ಮೀ ಜಿ ಪ್ರಸಾದ
ಈ ದೈವಕ್ಕೆ ಮೂರ್ತೆದಾರರ ಕತ್ತಿಯೇ ಆಯುಧ .ಇದು ಆತನ ಮಾನವ ಮೂಲದ ವೃತ್ತಿಯನ್ನು ಸೂಚಿಸುತ್ತದೆ.ಮೂಲತಃ ಈತ ಮೂರ್ತೆದಾರ ಎಂದರೆ ಬೈದ್ಯ ಸಮುದಾಯಕ್ಕೆ ಸೇರಿದ ಅನಾಥ ಬಾಲಕ

ಸಾಮನ್ಯವಾಗಿ ವಾರ್ಷಿಕ ಕೋಲ ಈತನಿಗೆ ಎಲ್ಲೂ ಇರುವುದಿಲ್ಲ .ಕೆಲವೆಡೆ ಈತನನ್ನು ಹನ್ನೆರಡು ವರ್ಷಗಳಿಗೊಮ್ಮೆ ಕೋಲ ಕೊಟ್ಟು ಆರಾಧಿಸಿದರೆ ಕೆಲವೆಡೆ ಐದು ವರ್ಷಕ್ಕೊಮ್ಮೆ ಆರಾಧನೆ ಇದೆ ಬಂಟ್ವಾಳ ,ಪುತ್ತೂರು ತಾಲೂಕುಗಳಲ್ಲಿ ಒಂದೆರಡು ಕಡೆ ಮಾತ್ರ ಈತನಿಗೆ ಆರಾಧನೆ ಇದೆ
ಈತನ ಕೋಲದಲ್ಲಿ ದೈವವು ಕತ್ತಿಯಲ್ಲಿ ಕೈಕಾಲು ಮೈಗೆ ಕಡಿದು ಕೊಂಡು ಮೈಯಿಡೀ ಗಾಯ ಮಾಡಿಕೊಳ್ಳುವ ಸಂಪ್ರದಾಯವಿದೆ .ಇದು ಮೂಲತಃ ಸಾತ್ರ ನಾಡು ಎಂಬ ಅನಾಥ ಬಾಲಕನಿಗೆ ಆತನ ಅತ್ತೆ ಮಾವ ಬಡಿದು ಹೊಡೆದು ಹಿಂಸೆ ಕೊಟ್ಟಿರುವುದರ ಪ್ರತೀಕ
ತಂದೆ ತಾಯಿಯ ರನ್ನು ಕಳೆದು ಕೊಂಡ ಅನಾಥ ಮಗು ಸಾತ್ರ ನಾಡುವನ್ನು ಸೋದರ ಮಾವ ಪ್ರೀತಿಯಿಂದಲೇ ಸಾಕುತ್ತಾನೆ .ಆದರೆ ಹೆಂಡತಿಯ ಚಾಡಿ ಮಾತುಗಳನ್ನು ಕೇಳಿದ ಮಾವ ಒಂದಿನ ಮರ ಹತ್ತಿದ ಅಳಿಯ ಸಾತ್ರ ನಾಡುವನ್ನು ಹಿಡಿದು ಕೆಳಗೆಳೆದು ಕೆಡವುತ್ತಾನೆ .ಹೀಗೆ ದುರಂತವನ್ನಪ್ಪಿದ ಸಾತ್ರ ನಾಡು ಮುಂದೆ  ದೈವತ್ವ ಪಡೆದು ಕುಂಟಲ್ದಾಯ ದೈವವಾಗಿ ನೆಲೆ ನಿಲ್ಲುತ್ತಾನೆ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಅನಾಥ ಮಕ್ಕಳ ಬಗ್ಗೆ ಈ  ದೈವಕ್ಕೆ ಅಪಾರ ಕರುಣೆ .ಬಿದ್ದು ಕೈಕಾಲು ಮುರಿದು ,ಉಳುಕು ಬಿದ್ದವರು ಈ ದೈವಕ್ಕೆ ಜಾರಿಕೆ ಹೇಳಿಕೊಂಡರೆ ಬೇಗ ಗುಣವಾಗುತ್ತದೆ ಎಂಬ ನಂಬಿಕೆ ಇದೆ ಅದೇ ರೀತಿ ವಾತ, ಪಕ್ಷವಾತ ಆದಾಗ ಕೂಡ ಈ ದೈವಕ್ಕೆ ಹರಿಕೆ ಹೇಳಿ ನಡೆದು ಕೊಳ್ಳುತ್ತಾರೆ

ಈತ ಮರ ಹತ್ತಿದಾಗ ಎಳೆದು ಹಾಕಿರುವುದರ ಸೂಚಕವಾಗಿ ಇಂದಿಗೂ ಈ ದೈವ ಒಂದು ತಾಳೆ  ಮರ ಹತ್ತುವ ಸಂಪ್ರದಾಯ ವಿದೆ
ಈ ಬಗ್ಗೆ ನವೀನ ಕುಮಾರ್ ಮರಿಕೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದು ಈ ದೈವದ ಪೂರ್ಣ ಪಾಡ್ದನ ಸಂಗ್ರಹ ಮಾಡಿದ್ದಾರೆ ,ಅವರ ಕತ್ತಲಿನಿಂದ ಎಂಬ ಕೃತಿಯಲ್ಲಿ ಈ ದೈವದ ಬಗ್ಗೆ ವಿಸ್ತೃತ ಮಾಹಿತಿ ಇದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಸಂಶೋಧಕರು ಮತ್ತು ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್, ಬೆಳ್ಳಾರೆ
ಸುಳ್ಯ ತಾ ,ದಕ್ಷಿಣ ಕನ್ನಡ ಜಿಲ್ಲೆ

Friday, 15 August 2014

ಗರಿಗೆದರಿದ ಸಿಹಿ ನೆನಪು






ಇಂದು ಸ್ವಾತಂತ್ರೋತ್ಸವ ನಿಮಿತ್ತ ಚಂದ್ರ ಲೇ ಔಟ್ ನ ವಿಶ್ವ ಚೇತನ ಪ್ರೌಢ ಶಾಲೆಯ ಎಂಟನೇ ತರಗತಿಯ ಮಕ್ಕಳು ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ರಚಿಸಿ ಅಭಿನಯಿಸಿ ಬಹುಮಾನ ಗಿಟ್ಟಿಸಿಕೊಂಡ ಸುಬ್ಬಿ ಇಂಗ್ಲಿಷು ಕಲ್ತದು ನಾಟಕವನ್ನು ಅಭಿನಯಿಸಿದರು .ಎಳೆಯ ಮಕ್ಕಳಾದರೂ ಪ್ರೌಢ ಅಭಿನಯ ನೀಡಿದ್ದು ನೋಡಿ ತುಂಬಾ ಕುಶಿ ಆಯಿತು

ನನ್ನ ಬಾಲ್ಯದ ನೆನಪು ನನ್ನ ಕಣ್ಣಿಗೆ ಕಟ್ಟಿ ಬಂತು .ನಾನು ಈ ನಾಟಕವನ್ನು ರಚಿಸಿ ಅಭಿನಯಿಸಿದಾಗ ಈ ಮಕ್ಕಳ ವಯಸ್ಸು ನನಗೆ ಆಗ ..
ನಾವು ಹೇಗೆ ಅಭಿನಯಿಸಿದ್ದೆವು ಹೇಳುವುದು ನನಗೆ ಈಗಲೂ ನೆನಪಿದೆ .
ಸುಬ್ಬಿ ಪಾತ್ರವನ್ನು ನನ್ನ ಸ್ನೇಹಿತೆ ಶೋಭಾ ಮಾಡಲು ತಯಾರಾಗಿದ್ದಳು ನಾನು ಸುಬ್ಬನ ಪಾತ್ರ ವಹಿಸಿದ್ದೆ ಇನ್ನೊಬ್ಬ ಸ್ನೇಹಿತೆ ಹೇಮಾವತಿ ಸ್ನೇಹಿತನ ಪಾತ್ರವಹಿಸಲು ಸಿದ್ಧವಾಗಿದ್ದಳು.
ನಾಟಕ ಸ್ಪರ್ಧೆಗೆ ಎರಡು ದಿವಸ ಇರುವಾಗ ಸುಬ್ಬಿ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಗೆಳತಿ ಶೋಭಾಳಿಗೆ ಜ್ವರ ಬಂದು ಮೈಯಲ್ಲಿ ಬಿತ್ತು.ಆಗ ಏನು ಮಾಡುವುದು ಎಂದು ದಿಗಿಲಾಯಿತು .
ಅದೃಷ್ಟವಶಾತ್ ನಾಟಕ ಅಭ್ಯಾಸ ಮಾಡುವಾಗ ಕೇಳಿ ಕೇಳಿ ಹೇಮಾವತಿಗೆ ಸುಬ್ಬಿ ಪಾತ್ರದ ಎಲ್ಲ ಸಂಭಾಷಣೆ ಬಾಯಿ ಪಾಠ ಆಗಿತ್ತು .ಹಾಗಾಗಿ ಹೇಮಾವತಿ ಗೆ ಸುಬ್ಬಿ ಪಾತ್ರ ಕೊಟ್ಟು ತ್ರಿವೇಣಿ ಮತ್ತು ಇನ್ನೊಬ್ಬಳನ್ನು (ಹೆಸರು ಮರೆತು ಹೋಗಿದೆ ) ಸ್ನೇಹಿತರ ಪಾತ್ರಕ್ಕೆ ತಯಾರು ಮಾಡಿದೆ.
ಇಲ್ಲೆಲ್ಲಾ ಅಭಿನಯ ತರಬೇತಿಯನ್ನು ನಾವು ಶಿಕ್ಷಕರ ಸಹಾಯವಿಲ್ಲದೆ ನಾವು ನಾವೇ ಮಾಡಿಕೊಂಡಿದ್ದೆವು

ಇಬ್ಬರು ಸ್ನೇಹಿತರು ಮನೆಗೆ ಬಂದಾಗ ಕುಳಿತುಕೊಳ್ಳಲು ಅಲ್ಲಿ ಒಂದೇ ಕುರ್ಚಿ ಇತ್ತು .ಸುಬ್ಬಿಯ ಗಂಡನ ಪಾತ್ರ ವಹಿಸಿದ್ದ ನಾನು ಆ ಸ್ನೇಹಿತರನ್ನು welcome my friends welcome please be seated ಎಂದಾಗ ಅವರಿಬ್ಬರೂ ಒಂದೇ ಕುರ್ಚಿಯಲ್ಲಿ ಕುಳಿತರು .ಸಭೆ ಇಡೀ ಗೊಳ್ಳನೆ ನಕ್ಕಾಗ ಇವರಿಗೆ ಏಳಲು ಆಗುತ್ತಾ ಇಲ್ಲ .ಇಬ್ಬರು ಕುಳಿತಾಗ ಕುರ್ಚಿ ಅಷ್ಟು ಬಿಗಿಯಾಗಿತ್ತು .ಅಲ್ಲಿಂದ ಅವರು ನಗಾಡುತ್ತಿದ್ದರು ಬೇರೆ !
ನನಗೆ ಏನು ಮಾಡುವುದು ಅಂತ ಆ ಕ್ಷಣಕ್ಕೆ ಗೊತ್ತಾಗಲಿಲ್ಲ ನಾಟಕ ಹಾಳಾದ ಸಿಟ್ಟು,ಏನೂ ಮಾಡಲಾಗದ ಅಸಹಾಯಕತೆ ,ದುಃಖ ಜೊತೆಗೆ ಅವರ ಪರಿಸ್ಥಿತಿ ನೋಡಿ ಅದರೆಡೆಯಲ್ಲಿಯೂ ನಗು !
.ಆದರೂ ಕುರ್ಚಿಯನ್ನು ಹಿಂದಿನಿಂದ ಹಿಡಿದು ಇಬ್ಬರ ಬೆನ್ನಿಗೂ ಕುಟ್ಟಿ ಎಬ್ಬಿಸಿದೆ !
ಅಂತೂ ಇಂತೂ ನಾಟಕ ಮುಂದುವರಿದು ಪ್ರಥಮ ಬಹುಮಾನ ಸ್ವೀಕರಿಸುವಾಗ ನಮ್ಮಗಳ ಸಂತಸ ಮೇರೆ ಮೀರಿತ್ತು !
ಬಹುಮಾನ ವಿತರಿಸಿ ಶುಭ ನುಡಿದ ಹಿಂದಿ ಶಿಕ್ಷಕರಾದ ವಿಶ್ವೇಶ್ವರ ಭಟ್ ಅವರು ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯವಿದೆ ಎಂದಾಗ ನನಗೆ ಸ್ವರ್ಗಕ್ಕೆ ಮೂರು ಗೇಣು ಮಾತ್ರ ಇತ್ತು !


ವಿಶ್ವ ಚೇತನ ಶಾಲೆಯ ಮಕ್ಕಳು ಅಭಿನಯಿಸಿದ ಸುಬ್ಬಿ ಇಂಗ್ಲೀಷು ಕಲ್ತದು ನಾಟಕದ ದೃಶ್ಯಗಳು

Thursday, 14 August 2014

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ (ಕನ್ನಡ ಪ್ರಭ 15 ಅಗಸ್ಟ್ 2014)-ಡಾ.ಲಕ್ಷ್ಮೀ ಜಿ ಪ್ರಸಾದ

    
1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ. ಬ್ರಿಟಿಷ್ ಗವರ್ನರ್ ಜನರಲ್ ಡಾಲ್‍ಹೌಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು.  ಡಾಲ್‍ಹೌಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.
ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರನನ್ನು ದುರಾಡಳಿತದ ನೆಪ ಹಿಡಿದು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು  ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ. ಕೊಡಗರಸರ ಕಾಲದಲ್ಲಿ ಭತ್ತ, ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದಿನ ರೂಪದಲ್ಲಿ ಕೊಡಬೇಕೆಂದು ನಿಯಮ ತಂದರು. ಇದರಿಂದಾಗಿ ಸುಳ್ಯದ ರೈತಾಪಿಜನರು ತೀವ್ರವಾಗಿ ಅಸಮಾಧಾನಗೊಂಡರು. ಸುಳ್ಯದ ಜನರು ಬ್ರಿಟಿಷರನ್ನು ತೊಲಗಿಸಿ ಕೊಡಗನ್ನು ವಶಪಡಿಸಿಕೊಂಡು ಕೊಡಗಿನ ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು.
ಇದರ ಫಲವಾಗಿ ಸುಳ್ಯ ಬೆಳ್ಳಾರೆ ಪರಿಸರದಲ್ಲಿ ಒಂದು ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5ರಂದು ಮಂಗಳೂರಿನ ಕಲೆಕ್ಟರನ ಆಫೀಸಿನ ಎದುರು ಸ್ವತಂತ್ರ ಧ್ವಜವನ್ನುಹಾರಿಸಿದರು , ಹದಿಮೂರು ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶವು ಸ್ವಾತಂತ್ಯದ ಸಿಹಿಯನ್ನು ಅನುಭವಿಸಿತು. ಇದರ ಫಲವಾಗಿ ಸ್ವತಂತ್ರ ನೆಲಕ್ಕಾಗಿ, ತಾಯ್ನಾಡಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು.
ಡಿ. ಎನ್. ಕೃಷ್ಣಯ್ಯನವರು ಹೇಳುವ ಪ್ರಕಾರ 1833ರಲ್ಲಿ ಅಪರಂಪರನೆಂಬ ಜಂಗಮನೊಬ್ಬ ತಾನು ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡಾಗ ಕೊಡಗಿನ ಜನರು ಅದನ್ನು ನಂಬುತ್ತಾರೆ. ಆದರೆ ಬ್ರಿಟಿಷರು ಆತನು ರಾಜವಂಶದವನಲ್ಲವೆಂದು ತಿಳಿದು 1835ರಲ್ಲಿ ಆತನನ್ನು ಬಂಧಿಸುತ್ತಾರೆ.
ಅಪರಂಪರನನ್ನು ಬಂಧಿಸಿದಾಗ ಕಲ್ಯಾಣಸ್ವಾಮಿ ಎಂಬಾತನು ತಾನು ಅಪ್ಪಾಜಿಯ ಎರಡನೇ ಮಗ ನಂಜುಂಡಪ್ಪ ಎಂದು ಹೇಳಿಕೊಂಡು ಸುಳ್ಯದಲ್ಲಿ ಜನರು ದಂಗೆ ಏಳುವ ಲಕ್ಷಣ ಕಾಣಿಸಿಕೊಂಡಾಗ ಅವನು ಕೊಡಗಿನವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದನು.ಬ್ರಿಟಿಷರಿಗೆ ಇದು ತಿಳಿದು ಆತನನ್ನು 1837ರಲ್ಲಿ ಬಂಧಿಸಿದರು.
ಸುಳ್ಯದ ರೈತಾಪಿ ಜನರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಹೇಳಿ ನಂಬಿಸಿ ಕೆದಂಬಾಡಿ ರಾಮಗೌಡರ ಮನೆಗೆ ಕರೆತಂದು ಆತನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಿದರು. ರಾಮಗೌಡರಿಗೆ ಓರ್ವ ಬ್ರಿಟಿಷ್ ಅಮಲ್ದಾರನೊಡನೆ ದ್ವೇಷವಿದ್ದು ಆತನನ್ನು ರಾಮಗೌಡರು ಕೊಲ್ಲುತ್ತಾರೆ. ಇದನ್ನೇ ಮಹತ್ಕಾರ್ಯವೆಂದು ಭಾವಿಸಿದ ಸುಳ್ಯದ ಜನರು ದಂಗೆಯೇಳುವುದಕ್ಕೆ ಬೆಂಬಲಿಸಿದರು 1837 ಮಾರ್ಚ್ 30ರಂದು ಹೋರಾಟ ಆರಂಭವಾಯಿತು. ರಾಮಗೌಡರಿಗೆ ಕೂಜಗೋಡು ಮಲ್ಲಪ್ಪಗೌಡರ ಬೆಂಬಲ ದೊರೆಯಿತು. ಇಡೀ ಗೌಡ ಸಮುದಾಯ ಹೋರಾಟಕ್ಕೆ ಬೆಂಬಲ ನೀಡಿತು.
1837ರ ಮಾರ್ಚ್ 30ರಂದು ರಾಮಗೌಡರು ಬೆಳ್ಳಾರೆಗೆ ಕಲ್ಯಾಣಸ್ವಾಮಿಯನ್ನು (ಪುಟ್ಟ ಬಸಪ್ಪ) ಕರೆ ತರುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು.ಅಲ್ಲಿ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸುತ್ತ್ತಾರೆ .
 ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ  ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು.
ಶ್ರೀ. ಕೆ.ಆರ್. ವಿದ್ಯಾಧರ ಮಡಿಕೇರಿ ಅವರು ಕಂಚುಡ್ಕ ರಾಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು. ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದುಅಭಿಪ್ರಾಯ ಪಟ್ಟಿದ್ದಾರೆ.
ಡಿ.ಎನ್. ಕೃಷ್ಣಯನವರ ಪ್ರಕಾರ ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು. ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು. ಇಲ್ಲಿ 13 ದಿನ ಆಡಳಿತ ನಡೆಸಿದರು.
ಕೊಡಗಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಹೋರಾಟಕ್ಕೆ ಬೆಂಬಲ ನೀಡಿದರಾದರೂ ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಇತರರಿಂದ ಬೆಂಬಲ ಸಿಗಲಿಲ್ಲ. ಜೊತೆಗೆ ತಲಚೇರಿ-ಕಣ್ಣನ್ನೂರುಗಳಿಂದ ಬ್ರಿಟಿಷ್ ಸೈನ್ಯ ಮಂಗಳೂರು ತಲುಪಿತು. ಕ್ರಾಂತಿಕಾರರಲ್ಲಿ ಸಾವಿರಾರು ಜನರು ಇದ್ದರೂ ಕೂಡ ಕೋವಿಯಂಥ ಮಾರಕಾಯುಧಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. . ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟಿಷ್ ಪರವಾದ ಹಿಂದುಗಳೇ ಇದ್ದ ಸೈನ್ಯವನ್ನು ಎದುರಿಸಲು ಆಗದೆ ಸೋಲಬೇಕಾಯಿತು .ಆದ್ದರಿಂದ ಕಲ್ಯಾಣಸ್ವಾಮಿ ತಪ್ಪಿಸಿಕೊಂಡು ಕಡಬದತ್ತ ಸಾಗಿದನು. ನಾಲ್ಕು ನಾಡಿನ ಉತ್ತು, ಶಾಂತಳ್ಳಿ ಮಲ್ಲಯ್ಯ ಗುಡ್ಡೆಮನೆ ಅಪ್ಪಯ್ಯ, ಚೆಟ್ಟಿಕುಡಿಯ, ಕುರ್ತುಕುಡಿಯ, ಲಕ್ಷ್ಮಣ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು.
1837 ಮೇ ತಿಂಗಳ ಎರಡನೇ ವಾರದಲ್ಲಿ ಕಲ್ಯಾಣಸ್ವಾಮಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ಆತನನ್ನು ಮಡಿಕೇರಿಗೆ ಕರೆತರುತ್ತಾರೆ ಬ್ರಿಟಿಷರು ಕಲ್ಯಾಣಸ್ವಾಮಿ(ಪುಟ್ಟ ಬಸಪ್ಪ) ಮತ್ತು ಲಕ್ಷ್ಮಪ್ಪ ಬಂಗರಸ ಇವರನ್ನು ಮಂಗಳೂರಿನ ಬಿಕರ್ನಕಟ್ಟೆ/ಬೀರ್ನ ಕಟ್ಟೆ ಯಲ್ಲಿ ಗಲ್ಲಿಗೇರಿಸಿದರು. ಗುಡ್ಡೆ ಮನೆ ಅಪ್ಪಯ್ಯರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ ಮತ್ತು ಕೃಷ್ಣಯ್ಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಾಂತಯ್ಯ ಮಲ್ಲಳ್ಳಿ ಮೊದಲಾದವರಿಗೆ 7-14 ವರ್ಷಗಳ ತನಕ ಸೆರೆಮನೆವಾಸದ ಶಿಕ್ಷೆಯಾಯಿತು. ಡಾ ಪ್ರಭಾಕರ ಶಿಶಿಲರು ಹೇಳಿದಂತೆ ``ಸ್ವಾತಂತ್ರ್ಯ ಸಂಗ್ರಾಮವೆಂದಾಗ ಬೇಕಿದ್ದ ಈ ಹೋರಾಟವನ್ನು ಕಲ್ಯಾಣಪ್ಪನ ಕಾಟುಕಾಯಿ(ದರೋಡೆ) ಎಂದು ಬ್ರಿಟಿಷರು ಕರೆದರು.
ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಬೇರೆ ಯಾರ ಸಂಪತ್ತನ್ನು ಈ ಹೋರಾಟಗಾರರ ಗುಂಪು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ.
ಇವರುಗಳು ಜಾತ್ರೆಯ ಸಂದರ್ಭವನ್ನು ಉಪಯೋಗಿಸಿಕೊಂಡು ಸಂದೇಶ ಕಳುಹಿಸಿ ಸಂಘಟನೆಯನ್ನು ಮಾಡಿದ್ದರಿಂದ ಬ್ರಿಟಿಷರಿಗೆ ಹೀಗೊಂದು  ಕ್ರಾಂತಿ ವ್ಯೂಹ ರಚನೆಯಾದದ್ದರ ಸೂಚನೆ ಸಿಗಲಿಲ್ಲ..
ಬೆಳ್ಳಾರೆಯ ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು.
ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು.
ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ.ಕಲ್ಯಾಣ ಸ್ವಾಮಿಯ ಸಮಾಧಿ ಎಂದು ನಂಬಿಕೆ ಇರುವ ಒಂದು ದೂಪೆ ಕೋಟೆಯ ಹಿಂಬಾಗದ ಬೀಡಿನ ಗದ್ದೆಯಲ್ಲಿ ಇತ್ತೀಚೆಗಿನ ವರೆಗೆ ಇತ್ತು .ಈಗ ಅದನ್ನು ನೆಲ ಸಮ ಮಾಡಲಾಗಿದೆ.
 ಬೆಳ್ಳಾರೆಯ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಸೇರಿಕೊಂಡು ಬೆಳ್ಳಾರೆಯ ಕೋಟೆ ಇದೆ. ಈ ಪ್ರದೇಶವನ್ನು ಈಗ ಬಂಗ್ಲೆಗುಡ್ಡೆ ಎಂದು ಕರೆಯುತ್ತಾರೆ. ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂ ಬ ಹೆಸರು ಬಂದಿದೆ.
1837 ರಲ್ಲಿಯೇ  ಭಾರತದ ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .ಜೊತೆಗೆ ಇಲ್ಲಿ ಸ್ವತಂತ್ರ ಧ್ವಜ ಹಾರಿಸಿದ ನೆನಪಿಗಾಗಿ ಇದೇ ಜಾಗದಲ್ಲಿ ಪ್ರತಿ ಸ್ವಾತಂ ತ್ರ್ಯ  ದಿನಾಚರಣೆಯಂದು ಇಲ್ಲಿ ನಮ್ಮ ದೇಶದ ಧ್ವಜವನ್ನು ಹಾರಿಸಿ ಈ ಸ್ವಾತಂತ್ರ್ಯ ಹೋರಾಟವನ್ನು ಮತ್ತು ಹುತಾತ್ಮರಾದ ಕಲ್ಯಾಣ ಸ್ವಾಮಿ ಹಾಗು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸೂಚಿಸುವ ಕಾರ್ಯ ಅಗತ್ಯವಾಗಿ ಆಗ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು
ಬೆಳ್ಳಾರೆ ,ಸುಳ್ಯ ,ದ.ಕ ಜಿಲ್ಲೆ
samagramahiti@gmail.com


Saturday, 9 August 2014

ಸಂಸ್ಕೃತವೆಂದರೆ ಬರಿಯ ಭಾಷೆಯಲ್ಲ -ಡಾ ಲಕ್ಷ್ಮೀ ಜಿ ಪ್ರಸಾದ

ಹೌದು ನನ್ನ ಪಾಲಿಗೆ ಸಂಸ್ಕೃತವೆಂದರೆ ಬರಿಯ ಭಾಷೆಯಲ್ಲ ,ನನಗೆ ಬದುಕಿಗೆ ಪ್ರೇರಣೆ ,ನನ್ನದೇ ಆದ ಸಿದ್ಧಾಂತಗಳೊಂದಿಗೆ ಬದುಕಲು ಅಡಿಪಾಯ ಹಾಕಿ ಕೊಟ್ಟ ಸಂಸ್ಕೃತವನ್ನು ನಾನೆಂತು ಮರೆಯಲಿ ?
ಇಂದು ಕನ್ನಡ ಉಪನ್ಯಾಸಕಿಯಾಗಿದ್ದರೂ ಶುದ್ಧ ಭಾಷಾ ಜ್ಞಾನ ,ವ್ಯಾಕರಣ ಜ್ಞಾನ ,ಛಂದಸ್ ,ಕಾವ್ಯ ಶಾಸ್ತ್ರಗಳ ಜ್ಞಾನ ವನ್ನು ನಾನು ಸಂಸ್ಕೃತದಿಂದಲೇ ಪಡೆದೆ.ಒಳ್ಳೆಯ ವಾಗ್ಮಿಯಾಗಲೂ ಸಂಸ್ಕೃತವೇ ಕಾರಣ ಎಲ್ಲಕ್ಕಿಂತ ಹೆಚ್ಚಾಗಿ ಬದುಕಿಗೆ ಮಾರ್ಗ ದರ್ಶನ ಮಾಡುವ ಸಂಸ್ಕೃತವನ್ನು ಹೇಗೆ ಮರೆಯಲಿ


 ಸ್ಕಾಲರ್ ಶಿಪ್ ಕೊಟ್ಟು ಸಂಸ್ಕೃತ ಎಂ ಎ ಗೆ ಕಟೀಲಿನ ಸಂಸ್ಕೃತ ಕಾಲೇಜಿನಲ್ಲಿ  ಅಡ್ಮಿಷನ್ ಮಾಡಿಕೊಂಡ ಪ್ರಿನ್ಸಿಪಾಲ ರಾದ ಡಾ.ಜಿ ಎನ್ ಭಟ್ ರ ಆತ್ಮೀಯತೆ ಹಾಗೂ  ಗುರಿಯೆಡೆಗೆ ಸಾಗುವ ಅಚಲ ನಿರ್ಧಾರ , ಜ್ಞಾನ ಭಂಡಾರವಾಗಿದ್ದ ಡಾ.ಕೆ ನಾರಾಯಣ ಭಟ್ಟರ ಕಂಚಿನ ಕಂಠದ ಪಾಠ ಕಷ್ಟ ಕಾಲದಲ್ಲಿ ನೆರವಾದ ಅವರ ಸಹೃದಯತೆ .ಪದ್ಮನಾಭ ಮರಾಟೆಯವರು ಆಗಿನ್ನೂ ಅನನುಭವಿಗಳಾಗಿದ್ದರೂ ಮಾಡಿದ ವಿದ್ವತ್ ಪೂರ್ಣ ಪಾಠ ,ಎರಡು ವರ್ಷ ಇರಲು ಸೂರು ಕೊಟ್ಟ ಎಕ್ಕಾರಿನ ನಾಗವೇಣಿ ಅಮ್ಮ .ಎರಡು ವರ್ಷ ಪುಷ್ಕಳವಾಗಿ ಉಂಡ  ಕಟೀಲು ಭ್ರಮರಾಂಭ ದೇವಿಯ ಪ್ರಸಾದ ರೂಪದ ಊಟ ..ಜೊತೆಗೆ ಅಲ್ಲಿ ನ ಪಕ್ಷಪಾತ ಧೋರಣೆ ,ಗುಂಪು ಗಾರಿಕೆ.. ಕೊನೆಗೂ ಪ್ರಥಮ ರಾಂಕ್ ತೆಗೆದು ವಿಜಯದ ನಗು ಬೀರಿದ ಕ್ಷಣಗಳು ,ಚಿನ್ನದ ಪದಕಗಳನ್ನು ಸ್ವೀಕರಿಸಿದ ಸುವರ್ಣ ಗಳಿಗೆ ..
ಇವನ್ನೆಲ್ಲ ಹೇಗೆ ಮರೆಯಲಿ ..
ಇರಲಿ ಇಂದು ಸಂಸ್ಕೃತ ದಿನ  (ಶ್ರಾವಣ ಪಕ್ಷ ಹುಣ್ಣಿಮೆ )
2003ರಲ್ಲಿ ಮಂಗಳೂರು ಸಂಸ್ಕೃತ ಸಂಘದ ರಜತ ಮಹೋತ್ಸವನಡೆದಿದ್ದು ಆ ಸಂದರ್ಭದಲ್ಲಿ ಪ್ರಕಟಿಸಿದ ಸ್ಮರಣ ಸಂಚಿಕೆಯಲ್ಲಿ ನನ್ನ ಒಂದು ಲೇಖನ ಸೇರಿದಂತೆ ಅನೇಕರ ಅತ್ಯಪೂರ್ವ ಲೇಖನಗಳಿವೆ
ಅದರ scan copy ಯನ್ನು ಹಾಕಿದ್ದೇನೆ
ಸಂಸ್ಕೃತ ಅಭಿಮಾನಿಗಳು ಓದಬೇಕಾಗಿ ವಿನಂತಿ
















Rani Abbakka Chowta- Queen of Ullal





Queen Abbakka.jpg
Pietro Della Valle meets Queen Abbakka Rani
Reign 1525 – ?? 1570s
Predecessor Tirumala Raya Chowta
Consort Banga Lakshmappa Arasa
Royal house Chowta
Religious beliefs Jain,
Kshatriya,
Bunt

( information from wikipedia )
Rani Abbakka Chowta was the Queen of Ullal who fought the Portuguese in the latter half of the 16th century. She belonged to the Chowta dynasty who ruled over parts of coastal Karnataka (Tulu Nadu), India. Their capital was Puttige. The port town of Ullal served as their subsidiary capital. The Portuguese made several attempts to capture Ullal as it was strategically placed. But Abbakka repulsed each of their attacks for over four decades. For her bravery, she came to be known as Abhaya Rani (The fearless queen).[1][2] She was also one of the earliest Indians to fight the colonial powers and is sometimes regarded as the 'first woman freedom fighter of India'
The Chowtas who were Jain Digambara followed the system of matrilineal inheritance (Aliyasantana) by which Tirumala Raya, Abbakka's uncle, crowned her the queen of Ullal. He also forged a matrimonial alliance for Abbakka with Lakshmappa Arasa, the powerful king of neighbouring Mangalore. This alliance was to later prove a source of worry for the Portuguese. Tirumala Raya also trained Abbakka in the different aspects of warfare and military strategy. The marriage, however was short lived and Abbakka returned to Ullal. Her husband thus longed for revenge against Abbakka and was to later join the Portuguese in their fight against Abbakka.

Battles against the Portuguese

The Portuguese, clearly upset by Abbakka's tactics, demanded that she pay them tribute but Abbakka refused to yield. In 1555, the Portuguese sent Admiral Dom Álvaro da Silveira to fight her after she refused to pay them tribute.[6] In the battle that followed, Rani Abbakka once again managed to hold her own and repulsed the attack successfully.
In 1557, the Portuguese plundered Mangalore and laid waste to it. In 1568, they turned their attention to Ullal but Abbakka Rani resisted them yet again. João Peixoto, a Portuguese general and a fleet of soldiers were sent by the Portuguese Viceroy António Noronha. They managed to capture the city of Ullal and also entered the royal court. Abbakka Rani, however, escaped and took refuge in a mosque. The same night, she gathered around 200 of her soldiers and mounted an attack on the Portuguese. In the battle that ensued, General Peixoto was killed,[7] seventy Portuguese soldiers were taken prisoners and many of the Portuguese retreated. In further attacks, Abbakka Rani and her supporters killed Admiral Mascarenhas and the Portuguese were also forced to vacate the Mangalore fort.
In 1569 however, the Portuguese not only regained the Mangalore fort but also captured Kundapur (Basrur). Despite these gains, Abbakka Rani continued to remain a source of threat. With the help of the queen's estranged husband, they mounted attacks on Ullal. Furious battles followed but Abbakka Rani held her own. In 1570, she formed an alliance with the Bijapur Sultan of Ahmed Nagar and the Zamorine of Calicut, who were also opposing the Portuguese. Kutty Pokar Markar, the Zamorine's general fought on behalf of Abbakka and destroyed the Portuguese fort at Mangalore but while returning he was killed by the Portuguese. Following these losses and her husband's treachery, Abbakka lost the war, was arrested and jailed. However, even in prison she revolted and died fighting.

Folklore and legend

According to traditional accounts, she was an immensely popular queen and this is also attested by the fact that she is even today a part of folklore. The queen's story has been retold from generation to generation through folk songs and Yakshagana, a popular folk theatre in [Coastal Karnataka]. In Bhuta Kola, a local ritual dance, the persona in trance recounts the great deeds of Abbakka Mahadevi. Abbakka is portrayed as dark and good looking, always dressed in simple clothes like a commoner. She is portrayed as a caring queen who worked late into the night dispensing justice. Legends also claim that Abbakka was the last known person to have the used the Agnivana (fire-arrow) in her fight against the Portuguese. Some accounts also claim that she had two equally valiant daughters who fought alongside her in her wars against the Portuguese. Tradition however treats all three - mother and two daughters as the same person.

Memory

Abbakka's memory is much cherished in her home town of Ullal. The "Veera Rani Abbakka Utsava" is an annual celebration held in her memory. The Veera Rani Abbakka Prashasti(award) is awarded to distinguished women on the occasion.[8] On January 15, 2003, the Indian postal department issued a special cover on Rani Abbakka. There have been calls to name the Bajpe airport and a naval vessel after the queen.[9] A bronze statue of the queen has been erected in Ullal and another in Bangalore.[10] The Karnataka Itihasa Academy has called for renaming the Queen's road in the state capital as 'Rani Abbakka Devi road'.[11] India's First Inshore Patrol Vessel ICGS Rani Abbakka is named after the Queen. The Vessel was commissioned in Visakhapatnam on January 20, 2012, and will be based in Chennai.[
( information from wikipedia )


Sunday, 3 August 2014

ಕಿತ್ತೂರ ರಾಣಿ ಚನ್ನಮ್ಮ -ಡಾ.ಲಕ್ಷ್ಮೀ ಜಿ ಪ್ರಸಾದ




ಕನ್ನಡ  ನಾಡಿನ ವೀರ ಮಹಿಳೆ ,ಸ್ವಾತಂತ್ರ್ಯ ಹೋರಾಟಗಾರ್ತಿ  ಕಿತ್ತೂರು ರಾಣಿ ಚನ್ನಮ್ಮ , 
 ಬೆಳಗಾವಿ ಯಿಂದ ಉತ್ತರಕ್ಕೆ ಸುಮಾರು 6  ಕಿ.ಮಿ. ದೂರದಲ್ಲಿರುವ ಕಾಕತಿ ಯಲಿ ಕ್ರಿ.ಶ.1779 ರಲ್ಲಿ ಚನ್ನಮ್ಮ ಹುಟ್ಟಿದಳು ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳುಕಿ

ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ  ಮಲ್ಲ ಸರ್ಜನ ಸಾವಿನ ನಂತರ ತಾನೆ ಕಿತ್ತೂರು ರಾಜ್ಯದ ಆಡಲಿತವನ್ನು ಮಾಡುತ್ತಾಳೆ .ಪ್ರಸ್ತುತ ಕಿತ್ತೂರು ಬೆಳಗಾವಿ ಜಿಲ್ಲೆಗೆ ಸೇರಿಕೊಂಡಿದೆ . .ಪರದೇಶಿಗಳಾದ ಬ್ರಿಟಿಷರಿಗೆ ತಲೆಬಾಗಿ ತನ್ನ ನಾಡನ್ನು ಒಪ್ಪಿಸಲು ಒಪ್ಪದೆ ತನ್ನ ನಾಡಿಗಾಗಿ ಬ್ರಿಟಿಷರ ವಿರುದ್ಧ ಸಮರವನ್ನು ಸಾರಿದ ದಿಟ್ಟತನವನ್ನು ತೋರಿ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡ ಧೀರ ಮಹಿಳೆ ರಾಣಿ ಚನ್ನಮ್ಮ .

ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆ, ಮನ್ರೋ ಹಾಗೂ ಚಾಪ್ಲಿನನಿಗೆ ಅನುಸಂಧಾನಕ್ಕಾಗಿ ಪತ್ರ ಬರೆದಳು. ಆದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೇ ಅಪೇಕ್ಷಿಸಿದಾಗ, ಚೆನ್ನಮ್ಮ ಮುಂದಾಲೋಚನೆ ಮಾಡಿ  ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರ ವ್ಯವಹಾರ ಮಾಡಿದಳು.21 

ಅಕ್ಟೋಬರ್  1824 ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಇದಾಗಿ ಮೂರನೆಯ ದಿನ, ಅಂದರೆ ಅಕ್ಟೋಬರ್ 23  ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟನು. ಥಟ್ಟನೆ ತೆರೆದ ಕೋಟೆಯ ಬಾಗಿಲಿನಿಂದ ಕಿತ್ತೂರಿನ ಸಾವಿರಾರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು.

ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದನು, ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳುಗಳಾದರು. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಮುಂತಾದವರೂ ಬಲಿಯಾದರು.
ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಪುನಃ ಪತ್ರವ್ಯವಹಾರ ನಡೆಯಿತು. 1824 ಡಿಸೆಂಬರ್ 2 ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಯಿತು. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ 3 ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸಿದರು

ಬ್ರಿಟಿಷರ ಆಮಿಷಕ್ಕೆ ಒಳಗಾಗಿ ಕಿತ್ತೂರಿನ ವರೇ ಕೆಲವು ದ್ರೋಹಿಗಳು ಮದ್ದು ಗುಂಡುಗಳಿಗೆ ಸೆಗಣಿ ಮಣ್ಣು ಬೆರೆಸಿ ಇಟ್ಟ ಕಾರಣ ಬ್ರಿಟಿಷರ ಸೈನ್ಯ ಬಂದಾಗ  ತೋಪು ಸ್ಪೋಟಿಸಲಿಲ್ಲ.ಕೊವಿಗಳಿಂದ ಗುಂಡು ಸಿಡಿಯಲಿಲ್ಲ ..ತನ್ನವರು ಮಾಡಿದ ಮೊಸದಿಂದಾಗಿ ಯುದ್ಧದಲ್ಲಿ ರಾಣಿ ಚನ್ನಮ್ಮ ಬ್ರಿಟಿಷರಿಗೆ ಸೆರೆ ಸಿಕ್ಕು ಬೈಲ ಹೊಂಗಲದ ಸೆರೆಮನೆಯಲ್ಲಿ  2 ಫೆಬ್ರುವರಿ 1829 ರಂದು ಸಾವನ್ನಪ್ಪುತ್ತಾಳೆ .

ರಾಣಿ ಚನ್ನಮ್ಮನ ವೈಭವ ಸಾಹಸಕ್ಕೆ ಸಾಕ್ಷಿಯಾಗಿ ಕಿತ್ತೂರಿನ ಅರಮನೆಯ ಅವಶೇಷಗಳು ,ಕೋಟೆ ,ಕೋಟೆಯನ್ನು ಸ್ಪೋಟಿಸಿ ಬ್ರಿಟಿಷರು ಒಳನುಗ್ಗಿದ ಕೋಟೆಯ ಭಾಗ ಎಲ್ಲವೂ ಈಗ ಕೂಡ ಅಲ್ಲಿದೆ.ಅರಮನೆಯಲ್ಲಿದ್ದ ಒಂದು ಧ್ರುವ ವ ನಕ್ಷತ್ರ ವೀಕ್ಷಣಾಲಯ ಕೂಡ ಈಗಲೂ ಅಲ್ಲಿದೆ . 


ಎರಡು ವರ್ಷಗಳ ಹಿಂದೆ ಬೆಳಗಾವಿ ವಿಶ್ವ ವಿದ್ಯಾಲಯದಲ್ಲಿನ ಅಸಿಸ್ಟೆಂಟ್ ಪ್ರೊಫೆಸ್ಸರ್ ಹುದ್ದೆಗೆ ಸಂದರ್ಶಕ್ಕೆ ಹೋಗಿದ್ದಾಗ ಅಲ್ಲಿಗೆ ಸಮೀಪದ ಕಿತ್ತೂರು ಗೆ ಹೋಗಿ ರಾಣಿ ಚನ್ನಮ್ಮನ ಅರಮನೆಯ ಅವಶೇಷ ,ಕೋಟೆಗಳನ್ನು ನೋಡಿ ಚನ್ನಮ್ಮನ ಸಾಹಸವನ್ನು ನೆನಪಿಸಿಕೊಂಡು ರೋಮಾಚಂಚನ ಗೊಂಡು  ಬಂದಿದ್ದೆ