Tuesday 28 November 2023

ಕೋಣನ‌ ಮೇಲೆ ಕುಳಿತು ಬರುವ ಯಮನನ್ನು ಯಾರಾದರೂ ನೋಡಿದರಿದ್ದಾರೆಯೇ ?ಹೌದು ಇದ್ದಾರೆ .ಯಾರದು ? - ಡಾ.ಲಕ್ಷ್ಮೀ ಜಿ‌ ಪ್ರಸಾದ್

 ಕೋಣನ‌ ಮೇಲೆ ಕುಳಿತು ಬರುವ ಯಮನನ್ನು ಯಾರಾದರೂ ನೋಡಿದರಿದ್ದಾರೆಯೇ ?ಹೌದು ಇದ್ದಾರೆ .ಯಾರದು ? - ಡಾ.ಲಕ್ಷ್ಮೀ ಜಿ‌ ಪ್ರಸಾದ್ 

ಯಮನೆಲ್ಲಿ ಕಾಣನೆಂದು ಹೇಳಬೇಡ..ದುರುಳ ರಾವಣನಿಗೆ ಶ್ರೀರಾಮನೇ ಯಮನು

ದುಷ್ಟ ಕಂಸನಿಗೆ ಶ್ರೀಕೃಷ್ಣ ನೇ ಯಮನು ಎಂಬ ಹಾಡನ್ನು ಎಲ್ಲರೂ ಕೇಳಿರ್ತಾರೆ 

ಆದರೆ ಕೋಣನ‌ ಮೇಲೆ ಕುಳಿತು ಬರುವ ಯಮನನ್ನು ಯಾರಾದರೂ ನೋಡಿದರಿದ್ದಾರೆಯೇ ?.

ಈ ಪ್ರಶ್ನೆಗೆ ನನ್ನ ಉತ್ತರ ದೃಡವಾದ  ಹೌದು‌‌ ನೋಡಿದವರಿದ್ದಾರೆ ಎಂದು..

ಯಾರು ? ಎಲ್ಲಿ ?
ಇದು ನಡೆದದ್ದು ನಮ್ಮ ಮನೆಯಲ್ಲಿ

ನಂಬಿದರೂ ನಂಬದಿದ್ದರೂ ಇದು ನಿಜಕ್ಕೂ ಸತ್ಯವಾದ ವಿಚಾರ
ಸುಮಾರು ನಲುವತ್ತ ಮೂರು ವರ್ಷಗಳ ಹಿಂದೆ ನಡೆದ ಘಟನೆ ಇದು.ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ ಕೋಳ್ಯೂರಿನಲ್ಲಿದೆ.ನಮ್ಮ ಮನೆ ಅಂಗಳಕ್ಕೆ ಸೇರಿಕೊಂಡು ಕಲ್ಲೂರಾಯರ ಮನೆ ಮತ್ತು ಎಂಟು ಹತ್ತು ಸೆನ್ಸ್ ಜಾಗ ಇತ್ತು.ಕಲ್ಲೂರಾಯರು ಆ ಮನೆ ಜಾಗ ಬಿಟ್ಟು ಬೇರೆ ಕಡೆ ನೆಲೆಸಿದ್ದರು.ಮನೆ ಬಿದ್ದು ಹೋಗಿ ಅಡಿಪಾಯ ಸೇರಿದಂತೆ ಸಣ್ಣ ಪುಟ್ಟ ಅವಶೇಷಗಳಿದ್ದವು.ನನ್ನ ತಂದೆ ತಾಯಿ ಹೊಸ ಮನೆ ಕಟ್ಟಿದಾಗ ಹಸು ಕಟ್ಟಲು ಜಾಗ ಇರಲಿಲ್ಲ ಆಗ ನಮ್ಮ ಮನೆ ಅಂಗಳಕ್ಕೆ ಹೊಂದಿಕೊಂಡಿದ್ದ ಕಲ್ಲೂರಾಯರ ಮನೆಯ ಅಂಗಳದಲ್ಲಿ ನಮ್ಮ ಹಸು ಮತ್ತು ಕೋಣಗಳನ್ನು ಕಟ್ಟುತ್ತಿದ್ದರು.ನಂತರ ಆ ಜಾಗವನ್ನು ನನ್ನ ತಂದೆಯವರೇ ಖರೀದಿಸಿದ್ದರು.

ಆ ಮನೆಯ ಎದುರು ಭಾಗದಲ್ಲಿ ಕಲ್ಲೂರಾಯರು ಉಪಯೋಗಿಸುತ್ತಿದ್ದ ಬಾವಿ ಇತ್ತು.ಅದು ತುಂಬಾ ಆಳದ ಬಾವಿಯಲ್ಲ.‌ಬೇಸಿಗೆಯಲ್ಲಿ ನೀರೂ ಇರುತ್ತಿರಲಿಲ್ಲ. ನಾವದನ್ನು ಪೊಟ್ಟು ಬಾವಿ ಎನ್ನುತ್ತಿದ್ದೆವು.ಅದರ ಉಪಯೋಗವನ್ನು ನಾವು ಮಾಡುತ್ತಿರಲಿಲ್ಲ.ಅದರ ನಿರ್ವಹಣೆಯೂ ಮಾಡಿರದ ಕಾರಣವೋ ಇನ್ನೇನು ಕಾರಣವೋ ಗೊತ್ತಿಲ್ಲ ಅದರ ಕಟ್ಟೆ ಎಲ್ಲ ಜರಿದು ಬಿದ್ದು ಹೋಗಿತ್ತು

ಸುಮಾರು 1981 ರ ಮಳೆಗಾಲ ಇರಬೇಕು.ನನ್ನ ಸಣ್ಣ ತಮ್ಮ  ಎರಡು ಎರಡೂವರೆ  ವರ್ಷದ ಸಣ್ಣ ಮಗು ಗಣೇಶ ಬೇಗನೆ ಮಾತನಾಡಲು ಕಲಿತಿದ್ದ.ಸಣ್ಣಾಗಿದ್ದಲೇ ಆಶುಕವಿಯಾಗಿದ್ದ .ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ  ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ ಹಾಡನ್ನು ಅನುಸರಿಸಿ ಬಾನ ದಾರಿಯಲ್ಲಿ ಮೀನು ಜಾರಿ ಹೋದ ಕಪ್ಪೆ ಮೇಲೆ ಬಂದ ಎಂದು ಹಾಡುತ್ತಿದ್ದ.
ಒಂದು ದಿನ ಜೋರಾಗಿ ಮಳೆ ಬಂದು ನಿಂತಿತ್ತು.

ಸಣ್ಣ ಮಗು ಗಣೇಶ ಮನೆಯಲ್ಲಿ ಕಾಣಿಸಲಿಲ್ಲ ಎಲ್ಲಿ ಹೋದ ಎಂದು ನೋಡುವಾಗ ಕಲ್ಲೂರಾಯರ ಜಾಗದಲ್ಲಿದ್ದ ಪೊಟ್ಟು ಬಾವಿಯ ಕರೆಯಲ್ಲಿ ತುರ್ಕಾಲಿನಲ್ಲಿ ಕುಳಿತು ಗಣೇಶ  ಒಂದೊಂದೇ ಕಲ್ಲನ್ನು ಆ ನೀರು ತುಂಬಿದ ಆ  ಪೊಟ್ಟು ಬಾವಿಗೆ ಎಸೆಯುತ್ತಾ 'ಬಾನದಾರಿಯಲ್ಲಿ ಮೀನು ಜಾರಿ ಹೋದ ಕಪ್ಪೆ ಮೇಲೆ ಬಂದ 'ಎಂದು ಹಾಡುತ್ತಿದ್ದ


.ಅವನು ಕುಳಿತಿದ್ದ ಜಾಗದ ಅಡಿಭಾಗದ ಮಣ್ಣು ಕುಸಿದು ಬೀಳ್ತಾ ಇರುವುದು ಅಮ್ಮನಿಗೆ ಕಾಣಿಸ್ತಾ ಇತ್ತು ಕರೆದರೆ ಇವನು ಎದ್ದು ತಿರುಗಿದರೆ ಇವನೂ ಬಾವಿಗೆ ಬೀಳುವ ಅಪಾಯವಿತ್ತು‌.ಹಾಗಾಗಿ ಅಮ್ಮ ಓಡಿ ಬಂದು ಇವನನ್ನು ಎತ್ತಿ ಕೊಂಡರು.ಅಮ್ಮ ಇವನನ್ನು ಎತ್ತಿಕೊಳ್ಳುದೂ ಇವನು ಕೂತಿದ್ದ ಜಾಗದ ಮಣ್ಣು ಬಾವಿಗೆ ಕುಸಿದು ಬೀಳುದೂ ಒಟ್ಟೊಟ್ಟಿಗೆ ನಡೆದಿತ್ತು.

ಅಮ್ಮ ಎತ್ತಿಕೊಳ್ಳುದು ಒಂದು ಕ್ಷಣ ತಡವಾಗಿದ್ದರೂ ತಮ್ಮ ನೀರಿಗೆ ಬಿದ್ದಾಗಿರುತ್ತಿತ್ತು.ತಕ್ಷಣವೇ ಎತ್ತಲು ಅಲ್ಲಿ ಸಾಧ್ಯವೂ ಇರಲಿಲ್ಲ..ಏನೋ ದೇವರು ಕಾದ ಎಂದು ಅಮ್ಮ ದೇವರಿಗೆ ಮನದಲ್ಲಿಯೇ ನಮಿಸಿದರು.

ಅಷ್ಟರಲ್ಲಿ ನನ್ನ  ತಮ್ಮ  ಪುಟ್ಟ ಮಗು ಗಣೇಶ ಅಮ್ಮ‌‌.ನೋಡಿಲ್ಲಿ..ನಮ್ಮ ಮೋಡೆ ( ನಮ್ಮ‌ ಸಾಕಿದ ಉಳುಮೆ ಕೋಣದ ಹೆಸರು ಮೋಡೆ) ಮೇಲೆ ಕೂದುಕೊಂಡು ಆರೋ ಬಂದದು.ನೋಡು ( ನಮ್ಮ‌ಕೋಣ ಮೋಡೆಯ ಮೇಲೆ ಯಾರೋ ಕುಳಿತು ಕೊಂಡು ಬಂದದ್ದು ನೋಡು) .ಎಂದ.

ಆಗ ಎಲ್ಲಿ ಎಲ್ಲಿ‌ಮಗ ? ಎಂದು ಅಮ್ಮ‌ಕೇಳಿದಾಗ ಇಲ್ಲಿಯೇ ಈಗ ಹೋದರು ಎಂದ..ಆಗ ಅಮ್ಮ ಎಲ್ಲಿ ಹೋದರು ಎಂದು ಕೇಳಿದಾಗ ಅಲ್ಲಿಯೇ ಎದುರಿನ ನಮ್ಮ‌ಗದ್ದೆಯ ಕಟ್ಟಪ್ಪುಣಿ ಕಡೆ ಕೈ  ತೋರಿಸಿ ಇಲ್ಲಿಯೇ ಗೋವಿಂದಣ್ಣನ ಮನೆಗೆ ಹೀಗೆ  ಹೋದರು ಎಂದು ಹೇಳಿದ..

ಮೆಟ್ಟುಕುಂಡೆ ಗೋವಿಂದ ಭಟ್  ನಮಗೆಲ್ಲ ಬಹಳ ಆತ್ಮೀಯರಾಗಿದ್ದವರು‌.ಅವರ ಮನೆಗೆ  ನಮ್ಮ ಗದ್ದೆಯ ಕಟ್ಟಪ್ಪುಣಿಯ ಮೂಲಕ ಹೋಗುವ ದಾರಿ ಇತ್ತು.ಗೋವಿಂದಣ್ಣ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು‌.ಹಾಗಾಗಿ ಅವರ ಮನೆಗೆ ಕಟ್ಟಪ್ಪುಣಿ ಮೂಲಕ ಹೋಗುವ ದಾರಿ ಇರುವದ್ದು ತಮ್ಮನಿಗೆ ಗೊತ್ತಿದ್ದಿರಬಹುದು.


ಆದರೆ ಕೋಣನ ಮೇಲೆ ಬಂದವರು  ಗೋವಿಂದಣ್ಣನ‌ ಮನೆಗೆ ಹೋದರು ಎಂಬ ಸಣ್ಣ ಹುಡುಗನ ಮಾತು ಅಮ್ಮನಿಗೆ ಅಚ್ಚರಿ ತಂದಿತ್ತು

ವಾಚಾಳಿಯಾಗಿರುವ ಇವನು ಏನೋ  ಹೇಳಿದ್ದಾನೆ ಎಂದು ಕೊಂಡು ಇವನನ್ನು ಎತ್ತಿಕೊಂಡು ಅಮ್ಮ ಮನೆಗೆ ಬಂದರು
ಅಮ್ಮ ಮನೆಗೆ ಬಂದು ಹತ್ತು ನಿಮಿಷ ಆಗುವಷ್ಟರಲ್ಲಿ ಗೋವಿಂದಣ್ಣನ ಮನೆಯಿಂದ ನಮ್ಮ‌ ಮನೆಗೆ ಯಾರೋ ಬಂದರು.ಗೋವಿಂದಣ್ಣನ ತಾಯಿಯವರು ತೀರಿ ಹೋಗಿದ್ದಾರೆ ಎಂಬ ಸುದ್ದಿಯನ್ನು ಹೇಳಿ ಪುರೋಹಿತರಾಗಿದ್ದ ನಮ್ಮ ತಂದೆಯವರನ್ನು ಕರೆದುಕೊಂಡು ಹೋದರು
ಆಗ ಗಣೇಶ ಹೇಳಿದ್ದು ಅಮ್ಮನಿಗೆ ನೆನಪಾಗಿ ಅಬ್ಬಾ! ಎನಿಸಿತು

ನಮ್ಮ ನಂಬಿಕೆಯಂತೆ ಯಮರಾಜನ ವಾಹನ‌ ಕೋಣ,ಕೋಣನ‌ಮೇಲೆ ಅವನು‌ ಕುಳಿತುಕೊಂಡು ಬಂದು ತನ್ನ‌ ಪಾಶವನ್ನು ಹಾಕಿ ಜೀವವನ್ನು ಎಳೆದುಕೊಂಡು ಹೋಗುತ್ತಾನೆ.

ನನ್ನ ಸಣ್ಣ ತಮ್ಮ ಗಣೇಶನಿಗೆ ಎರಡು ಎರಡುವರೆ ವರ್ಷ ಪ್ರಾಯ.ಆ ಸಣ್ಣ ವಯಸ್ಸಿಗೆ ಅವನಿಗೆ ಯಮನ ಬಗ್ಗೆಯಾಗಲೀ ಯಮ ಕೋಣನ ಮೇಲೆ ಬರುತ್ತಾನೆ ಎಂಬ ಐತಿಹ್ಯವಾಗಲೀ ಗೊತ್ತಿರಲು ಸಾಧ್ಯವೇ ಇಲ್ಲ.

ಹಾಗಾದರೆ ಅವನಿಗೆ ಕೋಣನ‌ಮೇಲೆ ಕುಳಿತುಕೊಂಡು ಕಾಣಿಸಿದ್ದು ಯಾರು ? ಪೊಟ್ಟು ಬಾವಿಯ ಬಳಿಯಿಂದ ಗದ್ದೆಯ ಕಟ್ಟಪ್ಪುಣಿಯಲ್ಲಿ ಹೋದಂತೆ ಕಂಡದ್ದು ಏನು ? ಹೆಚ್ಚು‌ಕಡಿಮೆ ಅದೇ ಸಮಯದಲ್ಲಿ ಗೋವಿಂದಣ್ಣನ ವೃದ್ಧ ತಾಯಯಿವರ ಜೀವ ಹೋದದ್ದು ಕಾಕತಾಳೀಯವೇ ?


ನಿಜಕ್ಕೂ ಯಮರಾಜ ಸಮೀಪ ಬಂದು 'ಇವನಿನ್ನೂ ಬಾಳಿ ಬದುಕುವ ಎಳೆಯ ಇವ ಬೇಡ' ಎಂದು ಇವನನ್ನು ಬಿಟ್ಟು ಗೋವಿಂದಣ್ಣನ ಮನೆಗೆ ನಡೆದನೇ? ಅಲ್ಲಿದ್ದ ಹಿರಿಯ ಜೀವವನ್ನು ಸೆಳೆದುಕೊಂಡು ಹೋದನೇ ?


ಎರಡು ವರ್ಷದ ಸಣ್ಣ ಮಗುವಂತೂ ಕಥೆ ಕಟ್ಟಿ ಹೇಳಿರಲು ಸಾಧ್ಯವೇ ಇಲ್ಲ..ಅಮ್ಮ ಓಡಿ ಹೋಗಿ ಅವನನ್ನು ಎತ್ತಿಕೊಳ್ಳುವುದು ಒಂದು ಅರೆ ಕ್ಷಣ ತಡವಾಗಿದ್ದರೂ ಇವನು ಬದುಕಿ ಉಳಿಯುತ್ತಿರಲಿಲ್ಲ.ಯಮರಾಜ ಇವನ ಬಳಿಗೆ ಬಂದೂ ಕನಿಕರಿಸಿ ಬಿಟ್ಡು ಹೋದದ್ದಿರಬೇಕು..


"ಯಮರಾಜ ಹೇಗೂ ಬಿಟ್ಟು ಹೋಗಿರುವೆ..ಇವನು ತನ್ನ‌ಮಗಳಂದಿರನ್ನು‌ಮದುವೆ ಮಾಡಿ ಕೊಟ್ಟು ಜವಾಬ್ದಾರಿ ಕಳೆಯುವ ತನಕ ಇನ್ನು ಅವನ ಕಡೆ ಬರಬೇಡ‌‌‌.ಇವನಿಗೆ ದೀರ್ಘಾಯುಸ್ಸು ಕರುಣಿಸು .ನಿನಗೆ ನಮಸ್ಕಾರ 'ಎನ್ನುತ್ತಾ ಈ ಹಿಂದೆ ನಡೆದ ನಿಜ ಘಟನೆಯನ್ನು ಅಮ್ಮ ಹೇಳಿರುವಂತೆ ನಿಮ್ಮ ಎದುರು ಬಿತ್ತರಿಸಿರುವೆ.ಇದರಲ್ಲಿ ಒಂದು ಪದ ಕೂಡ ಕಾಲ್ಪನಿಕವಲ್ಲ..ನಿಜಕ್ಕೂ ನಡೆದ ಘಟನೆ ಇದು..

ಈ ವಿಚಾರದ ಬಗ್ಗೆ ಅಮ್ಮ ಮತ್ತು ನಾನು ಅನೇಕ ಬಾರಿ ಮಾತಾಡಿದ್ದೇವೆ..ಈಗ್ಗೆ ಎರಡು ದಿನಗಳ ಹಿಂದೆಯೂ ಈ ಬಗ್ಗೆ ಮಾತನಾಡಿದ್ದೇನೆ..

ಆ ದಿನ ಸಣ್ಣ ಮಗು ಗಣೇಶನಿಗೆ ಕಾಣಿಸಿದ್ದು ಕೋಣನ‌ಮೇಲೆ ಬಂದ ಯಮರಾಜನೇ ? ಇವನನ್ನು ಬಿಟ್ಟು ಕಟ್ಟಪುಣಿಯ ದಾರಿಯಲ್ಲಿ ಸಾಗಿ  ಮೆಟ್ಟುಕುಂಡೆ ಗೋವಿಂದಣ್ಣನ ವೃದ್ದ ತಾಯಿಯವರ ಜೀವವನ್ನು ತೆಗೆದುಕೊಂಡು ಹೋದನೇ ? ಇಂದಿಗೂ ನಮಗೆ ಇದಮಿತ್ಥಂ ಎಂಬ ಉತ್ತರ ಸಿಗದ ಪ್ರಶ್ನೆಯೂ ಆಗಿದೆ.ಮರೆಯಲಾಗದ ಅಚ್ಚರಿಯೂ ಆಗಿದೆ.


ಇತ್ತೀಚೆಗೆ ಅನಂತಪುರ ದೇವಾಲಯದ ಕೆರೆಯಲ್ಲಿ ಹೊಸ ಮೊಸಳೆ ಬಬಿಯ ಕಾಣಿಸಿಕೊಂಡಾಗ ಇದು ಸಾಧ್ಯವೇ? ಯಾರೋ ತಂದು ಹಾಕದೆ ಮೊಸಳೆ ಮರಿ ಬರಲು ಹೇಗೆ ಸಾಧ್ಯ ? ಎಂದು ನನ್ನಲ್ಲಿ ಕೇಳಿದವರಿಗೆ ' ಈ ಜಗತ್ತಿನಲ್ಲಿ ನಮಗೆ ತಿಳಿಯದೇ ಇರುವ ವಿಚಾರ ತುಂಬಾ ಇದೆ.ನಮಗೆ ಗೊತ್ತಿಲ್ಲದೇ ಇದ್ದರೆ ಅದು ಇಲ್ಲವೆಂದು ಅರ್ಥವಲ್ಲ‌.ನಮಗೆ ಗೊತ್ತಿಲ್ಲ ಎಂದು ಮಾತ್ರ ಅರ್ಥ.ಎಂದಿದ್ದೆ.
ನಮ್ಮ‌ಮನೆಯಲ್ಲೊ  ನಡೆದ ಈ ವಿಚಾರದ ಬಗ್ಗೆ ಕೂಡ ನನ್ನ ನಿಲುವು ಇದೇ ಆಗಿದೆ
.ತೇನ ವಿನಾ ತೃಣಮಪಿ ನ ಚಲತಿ..ಭಗವಂತನ ಲೀಲೆಯನ್ನು ಪೂರ್ಣವಾಗಿ  ಅರಿತವರಿಲ್ಲ.🙏
- ಡಾ.ಲಕ್ಷ್ಮೀ ಜಿ ಪ್ರಸಾದ್, ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು ಬೆಂಗಳೂರು 

Monday 20 November 2023

ನನ್ನ ಧ್ವನಿ ಉಡುಗಿದೆ..ಯಾಕೆ ಗೊತ್ತೇ ? - ಡಾ‌.ಲಕ್ಷ್ಮೀ ಜಿ ಪ್ರಸಾದ್

 




ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ಎದುರಿಸಬಲ್ಲೆ ಆದರೆ ನಮ್ಮ ಬಡ ಪ್ರತಿಭಾವಂತ ಯುವಕರಿಗೆ ಅನ್ಯಾಯವಾಗುವುದನ್ನು ಸಹಿಸಲಾಗದು.ಇದಕ್ಕೊಂದು ಅಂತಿಮ ಪರಿಹಾರ ಬೇಕೇ ಬೇಕು..ನಿಮಗಿದು ಸರಿ ಎನಿಸಿದರೆ ಶೇರ್ ಮಾಡಿ..ಒಂದಷ್ಟಾದರೂ ಜಾಗೃತಿ ಮೂಡಲಿ‌


ನನ್ನ ಧ್ವನಿ ಉಡುಗಿದೆ..


ಸುತ್ತ ಮುತ್ತ ಎತ್ತ ನೋಡಿದರೂ ಭ್ರಷ್ಟಾಚಾರದ ಕಂಬಂಧ ಬಾಹುಗಳು ಎಲ್ಲೆಡೆ ಹರಡಿ ಅಟ್ಟಹಾಸ ಮಾಡುತ್ತಿವೆ.ಎಫಡಿಎ  ಹಿಡಿದು ಯೂನಿವರ್ಸಿಟಿ ತನಕದ ಎಲ್ಲ ಹುದ್ದೆಗಳು 30-80 ಲಕ್ಷಗಳಿಗೆ ಬಿಕರಿಯಾಗಿದೆ.

ನಮ್ಮ‌ಬಡಮಕ್ಕಳು ಊಟ ತಿಂಡಿಯ ಪರಿವೆಯಿಲ್ಲದೆ ಓದುತ್ತಿದ್ದಾರೆ.ಯಾಕೆಂದರೆ ಚೆನ್ನಾಗಿ ಓದಿ ಮಕ್ಕಳೇ..ಉತ್ತಮ‌ಅಂಕ ಪಡೆದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ ,ಸರ್ಕಾರಿ ಉದ್ಯೋಗ ಭದ್ರತೆಯನ್ನು ಕೊಡುತ್ತದೆ ಎಂಬ ಭರವಸೆಯನ್ನುಬಣ್ಣ ಬಣ್ಣದ ಕನಸನ್ನು  ನಾವು ಸದಾ ತುಂಬುತ್ತಿರುತ್ತೇವೆ

ಮೊದ ಮೊದಲು ಈ ಮಾತು ಹೇಳುವಾಗ ನನಗೂ ಈ ಬಗ್ಗೆ ತುಂಬಾ ಭರವಸೆಯಿತ್ತು

ಯಾಕೆಂದರೆ 2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಯಾವುದೇ ದುಡ್ಡು ವಶೀಲಿ ಇಲ್ಲದೆ ಕೇವಲ ಅರ್ಹತೆಯಿಂದಲೇ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆಯನ್ನು ಪಡೆದವಳು ನಾನು.

ಈ ನನ್ನ ಮಕ್ಕಳಂತೆಯೇ ನಾನೂ ಕೆಲಸದ ಜೊತೆಗೆ ಹಗಲು ರಾತ್ರಿ ಅಧ್ಯಯನ ಮಾಡುತ್ತಿದ್ದೆ.ನನಗೊಂದು ಕನಸಿತ್ತು.ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ದೊಡ್ಡದಾದ ಕನಸು ಕಾಣಿರಿ ಎಂದಿದ್ದರಲ್ಲ.ಅಂತೆಯೇ ನನ್ನ‌ ಮಂಗಳೂರು  ಯೂನಿವರ್ಸಿಟಿ ಪ್ರೊಫೆಸರಾಗುವ  ಕನಸೂ ಕೂಡ ನನ್ನ ಪಾಲಿಗೆ ದೊಡ್ಡದೇ ಇರಬೇಕು.ಹಾಗಾಗಿಯೇ ಡಾ.ಅಮೃತ ಸೋಮೇಶ್ವರರರಂತಹ ಹಿರಿಯರೂ ನನಗೆ ಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದು ಹಿತ ನುಡಿದಿದ್ದರು.ಬಹುಶಃ ಅದಾಗಲೇ ಯೂನಿವರ್ಸಿಟಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಅವರಿಗೆ ಅವರಿವಿದ್ದಿರಬಹುದೋ ಏನೋ.ಇರುವ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಹುದ್ದೆಯಲ್ಲಿಯೇ ತೃಪ್ತಿ ಪಡುವುದು ಒಳ್ಳೆಯದೆಂದು ಹೇಳಿರಬಹುದು.ಈ ಮಾತು ನಾನು ಮಾತ್ರ ವಲ್ಲ ನನ್ನ ಸ್ನೇಹಿತರಾದ ನನ್ನ ಜೊತೆಗೆ ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಹುದ್ದೆಯನ್ನು ಪಡೆದ ಬಹುಮುಖೀ ಪ್ರತಿಭಾವಂತ ಡಾ.ಶ್ರೀಧರ ಹೆಗಡೆ ಭದ್ರನ್ ಅವರೂ ಕೇಳಿದ್ದರು‌ಅವರ ಹಿತೈಷಿಗಳು ಯಾರೋ ಅವರಿಗೆಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದಿದ್ದ ಬಗ್ಗೆ ಮಾತಿನ ನಡುವೆ ನನ್ನಲ್ಲಿ ಒಮ್ಮೆ ಅವರು ಹೇಳಿದ್ದರು

ಪ್ರಾಧ್ಯಾಪಕರಿಗೆ ಬೇಕಾದ  ಎಲ್ಲ ಅರ್ಹತೆಯನ್ನು ಪಡೆದ ನಂತರ ಅದನ್ನು ಬಯಸುವುದು ಮಹತ್ವಾಕಾಂಕ್ಷೆ ಆಗುತ್ತದಾ ? ಏನೋ ನನಗೆ ಗೊತ್ತಿಲ್ಲ.ನನಗೆ ಅದು ಈಗಲೂ ತಪ್ಪೆನಿಸಿಲ್ಲ

2009 ರಲ್ಲಿ ಸರ್ಕಾರಿ ಉದ್ಯೋಗಕ್ಕೆನಾನು ಸೇರುವಾಗ ನನ್ನ‌ಮೊದಲ ಡಾಕ್ಟರೇಟ್ ಅಧ್ಯಯನದ ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಿ ಆಗಿತ್ತು.ಮತ್ತೆ ಸ್ವಲ್ಪ ಸಮಯದ ಒಳಗೆ ಡಾಕ್ಟರೇಟ್ ಪದವಿಯನ್ನು ಪಡೆದೆ.

ನಾನು ಬೆಳ್ಳಾರೆ ಕಾಲೇಜಿಗೆ ಸೇರಿದಾಗ ಅದು ಸುವರ್ಣ ಮಹೋತ್ಸವವನ್ನು ಆಚರಿಸುತ್ತಾ ಇತ್ತು.ಆ ಐವತ್ತು ವರ್ಷಗಳಲ್ಲಿ ಆ ಕಾಲೇಜಿನ ಮೊದಲ ಡಾಕ್ಟರೇಟ್ ಪದವಿ ಪಡೆದ ಮೊದಲ ಉಪನ್ಯಾಸಕಿ ನಾನಾಗಿದ್ದೆ.

.ಪಿಯು ಇಲಾಖೆಯಲ್ಲಿ ಉನ್ನತ ಶಿಕ್ಷಣಕ್ಕೆ ಯಾವುದೇ ಮನ್ನಣೆ ಇಲ್ಲ.ಹೆಚ್ಚಾಗಿ ಪ್ರೌಢಶಾಲೆಯಿಂದ ಭಡ್ತಿ ಬಂದ ಉಪನ್ಯಾಸಕರೇ ಇರುತ್ತಾರೆ.ಹಾಗಾಗಿ ಆಗ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕರ ಸಂಖ್ಯೆ ತೀರ ಕಡಿಮೆ ಇತ್ತು.2009 ರ ಬ್ಯಾಚ್ ನಲ್ಲಿ ಆಯ್ಕೆ ಆದವರಲ್ಲಿ  ಅನೇಕರು ಪಿಎಚ್ ಡಿ ಪದವಿಧರರಿದ್ದರು

ಇರಲಿ

ಮೊದಲ ಡಾಕ್ಟರೇಟ್ ನ‌  ಅಧ್ಯಯನ ಕನಿಷ್ಠ ಅವಧಿ  ಎರಡೂವರೆ ವರ್ಷ ಮುಗಿದ ಕೂಡಲೇ ನಾನು ಎರಡನೆಯ ಡಾಕ್ಟರೇಟ್ ಅಧ್ಯಯನಕ್ಕಾಗಿ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅದೂ ಪ್ರಬಂಧ ಸಿದ್ದವಾಗಿತ್ತು.2012 ರಲ್ಲಿಯೇ ಪ್ರಬಂಧ ಸಲ್ಲಿಸಿದ್ದರೂ ಮೌಲ್ಯ ಮಾಪಕರ ಹಾಗೂ ಮಾರ್ಗ ದರ್ಶಕರ  ನಿರ್ಲಕ್ಷ್ಯದಿಂದಾಗಿ  ಬಹಳ‌ ತಡವಾಗಿ 2015 ರಲ್ಲಿ ಎರಡನೆಯ ಡಾಕ್ಟರೇಟ್ ಪದವಿಯನ್ನೂ ಪಡೆದೆ

ಈ ನಡುವೆ 2013 ರಲ್ಲಿ ಮಂಗಳೂರು ಯೂನಿವರ್ಸಿಟಿ ವಿವಿಧ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು ನಾನೂ ಅರ್ಜಿ ಸಲ್ಲಿಸಿದ್ದೆ

ಈ ಬಾರಿ ನಾನು ಖಂಡಿತಾ ಆಯ್ಕೆ ಆಗುವೆನೆಂಬ ಆತ್ಮ ವಿಶ್ವಾಸ ನನಗಿತ್ತು.ಯಾಕೆಂದರೆ ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚು ಅಕಾಡೆಮಿಕ್ ಫರ್ಪಾಮೆನ್ಸ್ ಇಂಡಿಕೇಟರ್ ನನಗಿತ್ತು.ನನಗೆ 1157 accademi performance indication ಪಾಯಿಂಟುಗಳಿದ್ದವುಅಲ್ಲಿ ಪ್ರೊಫೆಸರಾಗಿ ಆಯ್ಕೆ ಆದವರಿಗೆ ಕೂಡ 530 ರಷ್ಟು ಮಾತ್ರ ಇತ್ತು.ಅದಕ್ಕಿಂತ ಎರಡು ಪಟ್ಟು ಹೆಚ್ಚು ಅರ್ಹತೆ ನನಗಿತ್ತು.ನಾನು ಅರ್ಜಿ ಸಲ್ಲಿಸಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ...

ನಾನು ಅದಾಗಲೇ ಎಂಎ( ಕನ್ನಡ)  73.7% - ನಾಲ್ಕನೆಯ ರ‌್ಯಾಂಕ್,ಎಂಎ( ಹಿಂದಿ) ಎಂಎ( ಸಂಸ್ಕೃತ)- ಮೊದಲ ರ‌್ಯಾಂಕ್ ,ಎಂಫಿಲ್ ಪಿಎಚ್ ಡಿ ಪದವಿ ಗಳಿಸಿದ್ದು ಎರಡನೆಯ ಪಿಎಚ್ ಡಿ ಪದವಿಗೆ ಪ್ರಬಂಧ ಸಲ್ಲಿಕೆ ಆಗಿತ್ತು.

ಅ ಸಮಯಕ್ಕಾಗುವಾಗಲೇ ನನ್ನ ಹದಿನೇಳು ಸಂಶೋಧಾನಾ ಕೃತಿಗಳು ನೂರರಷ್ಟು ಸಂಶೋಧನಾ ಬರಹಗಳು,ಮುನ್ನೂರರಷ್ಟು ಇತರ ವೈಚಾರಿಕ ಬರಹಗಳು ಪ್ರಕಟವಾಗಿದ್ದವು

ಸುಮಾರು ಇನ್ನೂರೈವತ್ತು ಅಂತರಾಷ್ಟ್ರೀಯ,ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದೆ

ಯುಜಿಸಿ ನಿಯಮಾವಳಿಗಳಂತೆ ಅಂಕಗಳನ್ನು ನೀಡಿದರೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಖಂಡಿತವಾಗಿಯೂ ಸಿಗುತ್ತಿತ್ತು.ಆದರೆ ದುಡ್ಡು ಇನ್ಪ್ಲೂಯೆನ್ಸ್ ಗೆ ಒಳಗಾದ ವೀಸಿ ಯನ್ನೊಳಗೊಂಡ ಆಯ್ಕೆ ಸಮಿತಿ ಯುಜಿಸಿ ನಿಯಮಗಳನ್ನು ಮೀರಿ ತಮಗೆ ಬೇಕಾದ ಅಭ್ಯರ್ಥಿಗಳು ಕಡಿಮೆ ಅರ್ಹತೆ ಹೊಂದಿದ್ದರೂ ಅವರನ್ನೇ ಆಯ್ಕೆ ಮಾಡಿದ್ದರು.

ಕನ್ನಡ ವಿಭಾಗದಲ್ಲಿ ಜೆನರಲ್ ಮೆರಿಟ್ ಗೆ ಒಂದು ಹುದ್ದೆ ಇತ್ತು.ಅದಕ್ಕೆ ಒಂದು ಕನ್ನಡ( ಎಂಎ)66% ಎರಡು ಸಂಶೋಧನಾ ಕೃತಿ( ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧ) ಗಳನ್ನು ಪ್ರಕಟಿಸಿದ ಧನಂಜಯ ಕುಂಬಳೆ ಆಯ್ಕೆ ಆದರು.

ಇಲ್ಲಿ ಒಟ್ಟು ನೂರು ಅಂಕಗಳ ಸಂದರ್ಶನದಲ್ಲಿ 20 ಅಂಕಗಳು ರಿಸರ್ಚ್ ಫರ್ಫಾರ್ಮೆನ್ಸ್ ಗೆ ಮೀಸಲಾಗಿವೆ.ಇಲ್ಲಿ ಒಂದು ಸಂಶೋಧನಾ ಕೃತಿಗೆ ಐದು ಅಂತ ಮತ್ತು ಅಂತ ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಎರಡು ಅಂಕ,ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಇದರ ಹೊರತಾಗಿ ಈ ವಿಭಾಗದಲ್ಲಿ ಅಂಕಗಳನ್ನು ಕೊಡುವಂತಿಲ್ಲ ಎಂದು ಯುಜಿಸಿ ಸ್ಪಷ್ಟವಾಗಿ ತಿಳಿಸಿದೆ.ಇಲ್ಲಿ ಗರಿಷ್ಠ ಅಂಕಗಳು 20

ನನ್ನದು 17 ಸಂಶೋಧನಾ ಕೃತಿಗಳು ಪ್ರಕಟವಾದ ಕಾರಣ ಗರಿಷ್ಠ 20 ಅಂಕಗಳು ಲಭಿಸಿದ್ದವು.

ಆದರೆ ಇಲ್ಲಿ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರ ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವಂತೆ ಕೇವಲ ಎರಡು ಸಂಶೋಧನಾ ಕೃತಿಗಳು ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಇನ್ನೊಂದು ಅಕಾಡೆಮಿಕ್ ವಿಭಾಗದಲ್ಲಿ ಅಂಕಗಳು ನೀಡಲ್ಪಟ್ಟಿದೆ

ಹಾಗಾಗಿ ಇಲ್ಲಿ ಅವರು ಅವರ ಒಂದು ಪುಸ್ತಕಕ್ಕೆ 5 ಅಂಕಗಳನ್ನು ಮಾತ್ರ ಪಡೆಯಲು‌ಅರ್ಹರಾಗಿದ್ದರು.ಇದನ್ನು ಪ್ರಾಥಮಿಕ ಶಾಲೆಯ ಬಾಲಕ ಕೂಡ ಲೆಕ್ಕ ಹಾಕಬಲ್ಲ. 

ಆದರೆ ಇಲ್ಲಿ ಆಯ್ಕೆ ಸಮಿತಿಯವರು ಹೆಚ್ಚಿನ ಅಂಕ ನೀಡಲು ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹೆಚ್ಚುವರಿಯಾಗಿ ಹದಿನೈದು ಅಂಕ ನೀಡಿ ಗರಿಷ್ಟ 20 ಅಂಕ ನೀಡಿದ್ದರು.

ಇಲ್ಲಿ ಅರ್ಹತೆ ಇಲ್ಲದೆ ಇದ್ದಾಗಲೂ ಅವರನ್ನು ಆಯ್ಕೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ ನೀಡಿದ 15 ಅಂಗಳನ್ಮು ಅವರು ಸಂದರ್ಶನದಲ್ಲಿ ಗಳಿಸಿದ ಒಟ್ಟು ಅಂಕ‌69.4 ರಿಂದ ಕಳೆದರೆ ಅವರಿಗೆ ಸಿಗಬೆಕಾಗಿದ್ದ ಅಂಕ‌54.4% 

ನನಗೆ ಸಿಕ್ಕ ಒಟ್ಟು ಅಂಕ 63.9 ಹಾಗೆಯೇ ಇರುತ್ತದೆ.ಹಾಗಾಗಿ ನಾನೇ ಹೆಚ್ಚು ಅರ್ಹಳು ಆದರೆ ದುಡ್ಡು ವಶೀಲೊಗೊಳಗಾಗಿ ಆಯ್ಕೆಸಮಿತಿ ಅಕ್ರಮವಾಗಿ ರಿಸೃಚ್ ಫರ್ಫಾರ್ಮೆನ್ಸ್ ವಿಭಾಗದಲ್ಲಿ ಅವರಿಗೆ ಹದಿನೈದು ಅಂಕ‌ ನೀಡಿದ ಕಾರಣ ನನಗೆ ಅನ್ಯಾಯ ಆಗಿದೆ

ಹಾಗೆ ಸುಪ್ರೀಂ ಕೋರ್ಟ್ ತನಕ ಹೋಗಿ ಹೋರಾಡಿದರೂ ಗೆಲ್ಲಾಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ  ಇಲ್ಲ ಎಂದಿಲ್ಲ‌ .ಬದಲಿಗೆ ಅರ್ಹತೆಯನ್ನು ನಿರ್ಧರಿಸುವುದು ಆಯ್ಕೆ ಸಮಿತಿ‌ ಅದರಲ್ಲಿ ತಲೆಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುತ್ತದೆ

ಕಾನೂನಿನ ಈ ಪರಿಮಿತಿಯನ್ನು ತಿಳಿದೇ ಆಯ್ಕೆ ಸಮಿತಿಯವರು ಅಕ್ರಮ ಎಸಗಿ ತಮಗೆ ಬೇಕಾದವರನ್ನು ಬೇಕಾ ಬಿಟ್ಟಿ ಆಯ್ಕೆ ಮಾಡುತ್ತಾರೆ

ಆಯ್ಕೆ ಸಮಿತಿಯವರೇ ಯುಜಿಸಿ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ‌ ದುಡ್ಡು ವಶೀಲಿಗೆ ಒಳಗಾಗಿ ಅನರ್ಹರನ್ನು ಆಯ್ಕೆ ಮಾಡಿದರೆ ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು ? ಇದಕ್ಕೇನು ಪರಿಹಾರ? ಇದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ಈ ಬಗ್ಗೆ ಸರ್ಕಾರ ಸಿಐಡಿ ಗೆ ವಹಿಸಿ ಸರಿಯಾದ ತನಿಖೆ ಮಾಡಿ ಅಕ್ರಮ ಎಸಗಿದವರ ಮೇಲೆ ಸರಿಯಾದ ಕ್ರಮ‌ತೆಗೆದುಕೊಂಡರೆ ಸರಿ ಹೋಗಬಹುದು.

2013 ರಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ರಿಜಿಸ್್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯಲ್ಲಿ ವೀಸಿಗಳಾಗಿರುವ ಡಾ.ಪಿಎಸ್ ಎಡಪಡಿತ್ತಾಯರು 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಅಕ್ರಮ ನಡೆದ ಬಗ್ಗೆ ಒಪ್ಪಿಕೊಳ್ಳುತ್ತಾರೆ.ಅದಕ್ಕಾಗಿಯೇ  ನೇಮಕಾತಿ ಪ್ರಕ್ರಿಯೆಯಿಂದ ಆಗಿನ ವೀಸಿಗಳಾದ ಶಿವಶಂಕರಮೂರ್ತಿಗಳು   ರಿಜಿಸ್ಟ್ರಾರ್ ಆಗಿದ್ದ ಡಾ.ಪಿಎಸ್ ಎಡಪಡಿತ್ತಾಯರನ್ನು ಹೊರಗಿರಿಸಿ ನಡೆಸಿದ ಬಗ್ಗೆಯೂ ಹೇಳಿದ್ದಾರೆ.ಆಗಿನ ವೀಸಿಗಳು ಕೆಲವು ಕ್ಲರ್ಕ್ ಹಾಗೂ ಒಬ್ಬಿಬ್ಬರು ಪ್ರಾಧ್ಯಾಪಕರನ್ನು ಇಟ್ಟುಕೊಂಡು ಅಕ್ರಮ‌ಎಸಗಿದ್ದರಂತೆ.ಅಂದಿನ ನೇಮಕಾತಿಗಳಲ್ಲಿ ಎರಡು ಕೋರ್ಟಿನಲ್ಲಿ ರದ್ದಾಗಿವೆ.ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿವೆ ಎಂದವರು ತಿಳಿಸಿದ್ದಾರೆ.

ಅಂದ ಹಾಗೆ ಅಂದಿನ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ‌ಡಾ.ಚಿನ್ನಪ್ಪ ಗೌಡ ಮತ್ತು ಡಾ.ಸಬೀಹಾ ಭೂಮಿ ಗೌಡ ಮತ್ತಿತರರು ಇದ್ದರು


ನನ್ನ ವಿಷಯದಲ್ಲಿಯೇ ಇಷ್ಟು ಅನ್ಯಾಯವಾದಾಗ ಓದಿ ಕಲಿಯಿರಿ ಮಕ್ಕಳೇ ಒಳ್ಳೆಯ ಭವಿಷ್ಯ ಇದೆ ಎನ್ನುವಾಗ ನನ್ನ ಧ್ವನಿ ನಡುಗದೆ ಇರಲು ಸಾಧ್ಯವೇ ? ಆದರೂ ನಾನಿದನ್ನು ಮಕ್ಕಳ ಜೊತೆ ಹಂಚಿಕೊಳ್ಳುವುದಿಲ್ಲ.ಅವರ ಆತ್ಮ ವಿಶ್ವಾಸಕ್ಕೆ ಧಕ್ಕೆ ಬಂದು ನಿರಾಸೆ ಮೂಡೀತು ಎಂಬ ಆತಂಕ ನನಗೆ‌

ಇಷ್ಟರ ತನಕ ಸಂದರ್ಶನ ಇರುವಲ್ಲಿ ಮಾತ್ರ ದುಡ್ಡು ವಶೀಲಿ‌ ನಡೆಯುತ್ತದೆ ಎಂಬ ಭಾವ ಇತ್ತು.ಈಗ ಲಿಖಿತ ಪರೀಕ್ಷೆ ಇರುವಲ್ಲಿನಡೆದ ಅಕ್ರಮ ನೋಡಿ ಆಘಾತವಾಗಿದೆ.ನಮ್ಮ‌ಬಡ ಪ್ರತಿಭಾವಂತ ಮಕ್ಕಳ ಪಾಡೇನು ಎಂಬ ಆತಂಕ ಉಂಟಾಗಿದೆ


ನನಗೇನೋ ಬದುಕಲೊಂದು ಗೌರವದ ಉದ್ಯೋಗವಿದೆ.ಮಂಗಳೂರು ಯೂನಿವರ್ಸಿಟಿಗೆ ಅರ್ಜಿ ಅಲ್ಲಿಸುವ ಮೊದಲೇ ನಾನು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾಗಿದ್ದೆ.ಆದರೆ ಉದ್ಯೋಗವಿಲ್ಲದ ಬಡ ಪ್ರತಿಭಾವಂತರ ಬಗ್ಗೆಯೇ ನನ್ನ ಕಾಳಜಿ..

ಈಗ ಸರ್ಕಾರ ಎಲ್ಲ‌ ಅಕ್ರಮಗಳ ಬಗ್ಗೆ ಸರಿಯಾದ ತನಿಖೆ ನಡೆಸಿ ಅದಕ್ಕೆ ಕಾರಣರಾದವ ಮೇಲೆಬಲವಾದ ಕ್ರಮ ತೆಗೆದುಕೊಂಡರೆ ಸ್ವಲ್ಪ ಪ್ರಯೋಜನವಾಗಬಹುದು 


ಇದರ ನಡುವೆ ಒಂದು ಗಮ್ಮತ್ತಿನ ವಿಚಾರ ಹೇಳಲು ಮರೆತು ಹೋಯಿತು.ಕಳೆದ ವಾರ ಮಂಗಳೂರು ಯೂನಿವರ್ಸಿಟಿಯ ಈಗಿನ ರಿಜಿಸ್ಟ್ರಾರ್( ಅವರ್ಯಾರೆಂದು ನನಗೆ ಗೊತ್ತಿಲ್ಲ) ಅವರಿಂದ ಲಾಯರ್ ಅರುಣ ಶ್ಯಾಮ್ ಅಸೋಸಿಯೇಟ್ ನ ಸುಯೋಗ ಹೇರಳೆ ಎಂಬವರ ಮೂಲಕ ಒಂದು ಲೀಗಲ್ ನೋಟೀಸ್ ಬಂದಿದೆ.ಮೇಲೆ ಹೇಳಿದ ಮಂಗಳೂರು ಯೂನಿವರ್ಸಿಯಲ್ಲಿ 2013 ರಲ್ಲಿನ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ,ನನಗೆ ಅನ್ಯಾಯವಾದ ಬಗ್ಗೆ ನನ್ನ ನೋವಿನ ಬಗ್ಗೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಮನದಾಳದ ಮಾತಿನಲ್ಲಿ ಹಂಚಿಕೊಂಡಿದ್ದೆ.ಇದು ಅವರಿಗೆ ಅವಮಾನ ಆಗಿದೆಯಂತೆ.2013 ರಲ್ಲಿ ರಿಜಿಸ್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯ ವೀಸಿಗಳಾದ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರು ಆಗ ನಡೆದ ಅಕ್ರಮ ಅನ್ಯಾಯಗಳನ್ನು ಮುಕ್ತವಾಗಿ ಹೇಳಿದ್ದಾರೆ.ಆದರೆ ಈಗಿನ ರಿಜಿಸ್ಟ್ರಾರಿಗೆ ಆಗ ನಡೆದದ್ದನ್ನು ಹೇಳಿದ್ದು ಅವಮಾನ ಎನಿಸಿದೆಯಂತೆ.ಬಹುಶಃ ಅವರು ಇತ್ತೀಚೆಗೆ ರಿಜಿಸ್ಟ್ರಾರ್ ಆಗಿದ್ದು ಆಗ 2013 ರಲ್ಲಿ ನಡೆದ ಅವ್ಯವಹಾರ ಅಕ್ರಮಗಳ ಬಗ್ಗೆ ಅವರಿಗೆ ತಿಳಿದಿರಲಾರರು.ಹಾಗಾಗಿ ಅವರಿಗೆ ಇರುವ ವಿಚಾರವನ್ನು ಲೀಗಲ್ ನೋಟೀಸಿನ ಉತ್ತರದಲ್ಲಿ ತಿಳಿಸಿರುವೆ.ಇನ್ನು ಇಲ್ಲಿನ ನಡೆದ ಅಕ್ರಮ ಅವ್ಯವಹಾರ ಭ್ರಷ್ಟಾಚಾರದ ಬಗ್ಗೆ ನನಗಿಂತ ಹೆಚ್ಚು ಅಧಿಕೃತವಾಗಿ ತಿಳಿದವರು ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಪಿ ಎಸ್ ಎಡಪಡಿತ್ತಾಯರು.ಹಾಗಾಗಿ ಅವರಲ್ಲಿ ಮಾಹಿತಿ ಪಡೆಯುವಂತೆ ಸೂಚಿಸಿರುವೆ..ಅನ್ಯಾಯ ಅಕ್ರಮಮಾಡಬಹುದು..ಹೇಳಬಾರದು ಎಂದರೆ ಹೇಗೆ ?  

ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ನಾನು ಎದುರಿಸಬಲ್ಲೆ ಆದರೆ ಪ್ರಾಮಾಣಿಕವಾಗಿ ಶೆಡ್ಡಿನಲ್ಲಿ ಚಿಮಿಣಿ ದೀಪದಲ್ಲಿ ಕಚ್ಚುವ ಸೊಳ್ಳೆಗಳ ಕಾಟದ ನಡುವೆಯೂ ಓದುವ ಕಲಿಯುವ ನಮ್ಮ‌ಬಡ ಮಕ್ಕಳಿಗೆ ಉದ್ಯೋಗ ಸಿಗದೆ ಅವೆಲ್ಲವೂ ಭ್ರಷ್ಟರ ಪಾಲಾದರೆ ಎಂಬ ಆತಂಕ ನನ್ನನ್ನು ನಡುಗಿಸುತ್ತಿದೆ.ನಮ್ಮ‌ ಪ್ರತಿಭಾವಂತ ಮಕ್ಕಳ ಮುಖ ನೋಡುವಾಗ ಇವರಿಗೊಂದು ಒಳ್ಳೆಯ ಕೆಲಸ ದೊರೆಯಲಿ ದೇವರೇ ಎಂದು ಪ್ರಾರ್ಥಿಸುವಂತಾಗುತ್ತಿದೆ.ಮೊದಲೆಲ್ಲ ಈ ಆತಂಕ ನನಗಿರಲಿಲ್ಲ.ನಾನು ಲಿಖಿತ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದೆನಲ್ಲ.ಹಾಗೆಯೇ ಇವರೂ ಗೆಲ್ಲವರು ಎಂಬ ದೃಢ ನಂಬಿಕೆ ನನಗಿತ್ತು.ಆದರೆ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ.ಇದನ್ನು ಬುಡ ಸಹಿತ ಕತ್ತರಿಸಿದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ 

ಡಾ.ಲಕ್ಷ್ಮೀ ಜಿ ಪ್ರಸಾದ್ ,ಕನ್ನಡ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು,ಬ್ಯಾಟರಾಯನಪುರ,ಬೆಂಗಳೂರು

Tuesday 14 November 2023

ರಾಧು- ಡಾ.ಲಕ್ಷ್ಮೀ ಜಿ ಪ್ರಸಾದ್

 ರಾದು


ತುಳುನಾಡು ಹೆಣ್ಣು ಮಕ್ಕಳ ದಿಟ್ಟತನಕ್ಕೆಸಾಕ್ಷಿಯಾಗಿ ನಿಲ್ಲುವ ಪಾತ್ರ ರಾದುವಿನದು. ಶಾರದಾ ಜಿ. ಬಂಗೇರ ನಿರೂಪಿಸಿದ ಚಿಕ್ಕದೊಂದು ತುಳು ಕವಿತೆ ರಾದು.


ಹಾಡಿನಲ್ಲಿ ಹೇಳಿರುವಂತೆ ರಾದು ಬಹಳ ಒಳ್ಳೆಯ ಹೆಣ್ಣು ರಾದು ಅತ್ತೆಗೆ ಮೆಚ್ಚಿನ ಸೊಸೆ ಕೂಡ ನಾವು ಹೋಗುತ್ತೇವೆ’ ಎಂದು ರಾದು ಕೇಳಿದಾಗ ಹಾಗೆ ಯಾಕೆ ಹೇಳುತ್ತಿ ಮಗ ಎಂದುಅತ್ತೇ ಕೇಳುತ್ತಾರೆ. ಆಗ ಅವಳು ``ನಿಮ್ಮ ಮೊಮ್ಮಗ ಅಚ್ಯುತನಿಗೆ ಆಟವಾಡಲೆಂದು ಬುಗುರಿ ತರಲು ಹೋಗುವಾಗ ವಾಸ ಇಲ್ಲದ ಮನೆಯಲ್ಲಿ ನಿಮ್ಮ ಮಗ ಬಂಗೇರ ಮತ್ತು ನಡೆತೆಗೆಟ್ಟ ಹೆಣ್ಣು ಒಟ್ಟಿಗೆ ಇದ್ದರು. ನಾನು ಅಲ್ಲಿಗೆ ಹೋದದಕ್ಕೆ ನಿಮ್ಮ ಮಗ ಕೈಸೋಲುವಷ್ಟು ಹೊಡೆದರು. ಕಾಲು ಸೋಲುವಷ್ಟು ತುಳಿದರು. ಆದ್ದರಿಂದ ನಾನು ಮತ್ತು ಮಗ ಅಚ್ಯುತ ನನ್ನ ತವರಿಗೆ ಹೋಗುತ್ತೇನೆ’ ಎಂದು ಹೇಳುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಇಲ್ಲಿ ರಾದುವಿನ ದೃಢನಿರ್ಧಾರ ಪ್ರಕಟವಾಗುತ್ತದೆ. ತವರಿಗೆ ಹೊರಟ ಸೊಸೆಯಲ್ಲಿ ಅತ್ತೆ `ಹಾಗೆ ಹೋದರೆ ರಾದು ನೀನು ಮತ್ತೆ ಯಾವಾಗ ಬರುವೆ?’ ಎಂದು ಕೇಳುತ್ತಾರೆ. ಆಗ `ನಿಮ್ಮ ಮಗ ಸತ್ತಾಗ ಬಾರದಿದ್ದರೆ ಬೊಜ್ಜುಕ್ಕಾದರೂ ಬರುತ್ತೇನೆ’ ಎಂದು ಹೇಳುತ್ತಾರೆ ರಾದು. ಆದರೆ ಆ ಕ್ಷಣಕ್ಕೆ ಅವಳ ಕಣ್ಣಿನಲ್ಲಿ ನೀರು ಬರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ತನ್ನ ಸಂಸಾರ ಹಾಳಾದ ಬಗ್ಗೆ ರಾದುವಿಗೆ ದುಃಖವಾಗುತ್ತದೆ. ಆದರೂ ಬೇರೆ ಹೆಣ್ಣಿನ ಸಹವಾಸ ಮಾಡಿದ್ದಲ್ಲದೆ ಅದನ್ನು ನೋಡಿದ್ದಕ್ಕಾಗಿ ಹೊಡೆದ ತುಳಿದ ಗಂಡನ ಜೊತೆ ಸಂಸಾರ ಮಾಡಲು ಅವಳ ಸ್ವಾಭಿಮಾನ ಒಪ್ಪುವುದಿಲ್ಲ. ಮಗನ ಕೈ ಹಿಡಿದು ಇಳಿದು ಹೋಗಿಯೇ ಬಿಡುತ್ತಾಳೆ ರಾದು. ಗಂಡನಾದವನು ಮಾಡುವ ಶೋಷಣೆಯ ಚಿತ್ರಣ ಇಲ್ಲಿದೆ. ತಪ್ಪುದಾರಿ ಹಿಡಿದು ತನ್ನ ಮೇಲೆ ದೌರ್ಜನ್ಯವೆಸಗಿದ ಗಂಡನನ್ನು ತಿರಸ್ಕರಿಸಿ ಹೊರ ನಡೆಯುವ ಧೈರ್ಯವನ್ನು ತೋರುತ್ತಾಳೆ ರಾದು.


ತುಳು ಜನಪದಕವಿತೆಗಳ ಕನ್ನಡ ಅನುವಾದಿತ ರೂಪ ಇಲ್ಲಿ ನೀಡಿರುವೆ 

4. ರಾದು




ನಾವು ಹೋಗುತ್ತೇವೆ ಅತ್ತೆ ಸೊಸೆ ಬರುವಳು


ಕಪ್ಪುರೂಪದಲ್ಲಿ ಒಳ್ಳೆ ಹೆಣ್ಣು ರಾಧು

 ಬಟ್ಟೆಯ ಗಂಟು ಕೊಡಿರಿ ಅತ್ತೆ


ಕುಟುಂಬದ ಮನೆಗೆ ಹೋಗುವೆ ನಾನು


ಹಾಗೆ ಯಾಕೆ ಹೇಳುತ್ತಿ ಮಗಳು ಆ ರಾದು 

ಎಂದು ಕೇಳುವಳು ಅತ್ತೆ


ನಿಮ್ಮ ಮೊಮ್ಮಗ ಅಚ್ಯುತನಿಗೆ ಆಡಲೆಂದು


ಎರಡು ಬುಗರಿ ತೆಗೆದುಕೊಂಡು ಬರುವಾಗ ಅತ್ತೆ


ಒಕ್ಕಲು ಇಲ್ಲದ ಮನೆಯಲ್ಲಿ ಅತ್ತೆಯವರೆ


ನಡತೆಗೆಟ್ಟ ಸರಸದಿಂದ ಇದ್ದರು


ವೀಳ ಎಲೆ ಅಡಿಕೆ ತಿನ್ನುತ್ತಿದ್ದರು ಅತ್ತೆಯವರೆ


ನಾನು ಅಲ್ಲಿಗೆ ಹೋದೆ  ಅತ್ತೆ


ನೋಡುವಾಗ ಅತ್ತೆಯವರ ಕೈ ಸುಸ್ತಾಗುವಷ್ಟು ಹೊಡೆದರು 

ಕಾಲು ಸೋಲುವಷ್ಟು ತುಳಿದರು ಅತ್ತೆ © ಡಾ.ಲಕ್ಷ್ಮೀ ಜಿ ಪ್ರಸಾದ್ 


ಅದÀಕ್ಕಾಗಿಯೇ ನಾನು ಹೋಗುವೆ ಹೋಗುವೆ ಅತ್ತೆ


ಎಂದು ಹೇಳಿದಳು ರಾದು


ಹಾಗೆ ಹೋದರÉ ರಾದುಹೋಗಿ ಇಂದು ಹೋದ ರಾದು ಮಗಳೇ


ಇನ್ನು ಯಾವಾಗ ಬರುವಿ ಮಗಳ ಎಂದು ಕೇಳಿದರು ಅತ್ತೆಯವರು


ನಿಮ್ಮ ಮಗ ಸತ್ತಾಗೊಂದು ಸಾವಿಗೆ ಬರದಿದ್ದರೆ ಇರುವ ಬೊಜ್ಜಕ್ಕೆ 


ಬರುವೆ ಎಂದು ಕಣ್ಣನೀರು ಸುರಿಸಿದಳು ಇಳಿದು ಹೋದಳು ರಾದು

© ಡಾ.ಲಕ್ಷ್ಮೀ ಜಿ ಪ್ರಸಾದ್ 

*****

ಬಂಗಾರಾಳ್ವಾಗ - ಡಾ.ಲಕ್ಷ್ಮೀ ಜಿ ಪ್ರಸಾದ್

 ರಾಧು ಮತ್ತು ಬಂಗಾರಾಳ್ವಾಗ ಶಾರದಾ ಜಿ ಬಂಗೇರರು ಹಾಡಿದ ಎರಡು ತುಳು ಜನಪದ ಕವಿತೆಗಳ ನಾಯಕಿಯರು.ಇಬ್ಬರೂ ಬಹಳ ದಿಟ್ಟೆಯರು.ಕಷ್ಟದ ಪರಿಸ್ಥಿತಿ ಯನ್ಮು ಎದುರಿಸಿದ ಅನ್ಯಾಯದ ವಿರುದ್ಧ ಸೆಟೆದು ನಿಂತವರು.ಇವರಲ್ಲಿ ಬಂಗಾರಾಳ್ವಾಗಳದು ನೇರ ಪ್ರತಿಭಟಣೆಯಾದರೆ ಸಾತ್ವಿಕ ಹೆಣ್ಣು ಮಗಳು ರಾಧುವಿನದು ಅಪರೋಕ್ಷ ಪ್ರತಿಭಟಣೆ  © ಡಾ.ಲಕ್ಷ್ಮೀ ಜಿ ಪ್ರಸಾದ್



ಬಂಗರಾಳ್ವಾಗ


ನೀರಿಗೆಂದು ಹೋಗುವ ಹೆಣ್ಣು ಮಗಳಿಗೆ ದಾರಿಯಲ್ಲಿ ಕಾಮುಕನೊಬ್ಬ ಸಿಕ್ಕಿತೊಂದರೆ ಕೊಟ್ಟಾಗ, ಆತನಿಗೆರಡೇಟು ಕೊಟ್ಟು ಓಡಿಸುವ ಧೈರ್ಯ ಸಾಹಸವನ್ನು ತೋರುವ ಕಥಾನಕ ಬಂಗರಾಳ್ವಾಗ ಎಂಬ ಸಣ್ಣ ತುಳು ಕವಿತೆಯಲ್ಲಿದೆ.


``ಬಂಗರಾಳ್ವಾಗ’’ ಎಂಬ ಧೈರ್ಯಸ್ಥ ಹುಡುಗಿ ನೀರು ತರಲೆಂದು ಹೋಗುತ್ತಾಳೆ. ದಾರಿಯಲ್ಲಿ ಒಂದು ಬೇಲಿಯ ದ್ವಾರದಲ್ಲಿ ದೇರೆ ಮುಂಡೋರಿ ಎಂಬಾತ ಅಡ್ಡಗಟ್ಟುತ್ತಾನೆ. ಆಗ ಅವಳು `ದಾರಿ ಬಿಡು ತಡಮೆಯನ್ನು ತೊಲಗಿಸು ದೇರೆ ಮುಂಡೋರಿ’ ಎಂದು ಹೇಳುತ್ತಾಳೆ. `ದಾರಿ ಬಿಡಲು ತಡಮೆ ತೆಗೆಯಲು ನಿನ್ನ ಹತ್ತಿರ ಒಂದು ಮಾತನಾಡಬೇಕು’ ಎಂದು ದೇರೆ ಮುಂಡೋರಿ ಹೇಳುತ್ತಾನೆ. ಅವನಿಂದ ಹೇಗೋ ತಪ್ಪಿಸಿಕೊಂಡು ಹೋಗಿ ನೀರು ತರುತ್ತಾಳೆ. ಬಂಗರಾಳ್ವಾಗ ನೀರು ತೆಗೆದುಕೊಂಡು ಹಿಂದೆ ಬರುವಾಗ ಅವನು ಪುನಃ ದಾರಿಗಡ್ಡ ನಿಂತು ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೇಳುತ್ತಾನೆ. ಆಗಲೂ ಹೇಗೋ ತಪ್ಪಿಸಿಕೊಂಡು ಹೋಗುತ್ತಾಳೆ ಬಂಗರಾಳ್ವಾಗ. ಮರುದಿನ ಅವಳು ನೀರಿಗೆ ಹೋದಾಗ ಪುನಃ ಅದೇ ದೇರೆ ಮುಂಡೋರಿ ದಾರಿಗಡ್ಡ ನಿಂತು `ನಿನ್ನೆ ಹೇಳಿದ ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ’ ಎಂದು ಹೇಳುತ್ತಾನೆ. ಆಗ ಬಂಗರಾಳ್ವಾಗ `ನಾನೀಗ ಬೊಬ್ಬೆ ಹಾಕುತ್ತೇನೆ’ ಎಂದು ಹೆದರಿಸುತ್ತಾಳೆ. © ಡಾ.ಲಕ್ಷ್ಮೀ ಜಿ ಪ್ರಸಾದ್

ಆಗಲೂ ದೇರೆ ಮುಂಡೋರಿ ದಾರಿ ಬಿಡುವುದಿಲ್ಲ. ಆಗ ಅವನು ಅವಳ ಕೈ ಹಿಡಿದು ಬಳೆ ಒಡೆದು ಹಾಕುತ್ತಾನೆ. `ನಿನ್ನನ್ನು ಬಿಟ್ಟರೆ ನನಗೆ  ಬೇರೆ ಹೆಣ್ಣು ಸಿಗುವುದಿಲ್ಲ’ ಎಂದುಹೇಳುತ್ತಾನೆ. ಆಗ ಬಂಗರಾಳ್ವಾಗ ಬೊಬ್ಬೆ ಹಾಕುತ್ತಾಳೆ. ಅವಳ ಬೊಬ್ಬೆ ಕೇಳಿ ಊರಿನ ಜನರೆಲ್ಲ ಓಡಿ ಬಂದು ದೇರೆ ಮುಂಡೋರಿಗೆ ಏಟು ಹಾಕಿ ಅವನನ್ನು ಓಡಿಸುತ್ತಾರೆ. ಆದರೆ ಮರುದಿವಸ ಪುನಃ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ತೊಂದರೆ ಮಾಡುತ್ತಾನೆ. ದೇರೆ ಮುಂಡೋರಿ, ಇನ್ನು ರಕ್ಷಣೆಗಾಗಿ ಬೇರೆಯವರನ್ನು ನಂಬಿ ಪ್ರಯೋಜನವಿಲ್ಲ ಎಂದರಿತ ಬಂಗರಾಳ್ವಾಗ `ದಾರಿ  ಬಿಡು ತಡಮೆ ತೊಲಗಿಸು’ ಎಂದವಳೇ ತಾನು ಹಿಡಿದ ಕೊಡವನ್ನು ಎತ್ತಿ ಅವನ ಮೇಲೆ ಹೊಡೆಯುತ್ತಾಳೆ. ಆಗ ಓಡಿಹೋಗುತ್ತಾನೆ ದೇರೆ ಮುಂಡೋರಿ, `ಊರಿಗೆ ಬಂದ ಮಾರಿ ಅತ್ತ ಹೋಯಿತು’ ಎಂದು ಹೇಳಿ ಬಂಗರಾಳ್ವಾಗ ಮನೆಗೆ ಬರುತ್ತಾಳೆ. ಮುಂದೆಂದೂ ಬೇರೆ ಮುಂಡೋರಿ ಅವಳ ಸುದ್ದಿಗೆ ಬರುವುದಿಲ್ಲ.


ತೊಂದರೆ ಕೊಟ್ಟವನಿಗೆ ಎರಡೇಟು ಕೊಟ್ಟು ಓಡಿಸುವ ಧೈರ್ಯವನ್ನು ತೋರುವ ತುಳು ನಾಡಿನ ಹೆಣ್ಣು ಮಗಳು ಬಂಗರಾಳ್ವಾನ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


 


3.ಬಂಗರಾಳ್ವಾಗ


ನೀರುಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದುಹೋಗುವಾಗ ದಾರಿ ಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿ ದೇರೆ ಮುಂಡೋರಿ


ದಾರಿ ಬಿಡಲು ತಡಮೆ ಸರಿಸಲು


ನನಗೊಂದು ಮಾತುಹೇಳಬೇಕೆಂದನು ದೇರೆ ಮುಂಡೋರಿ


ನೀರು ತೆಗೆದುಕೊಂಡು ಬರುವಾಗ ದಾರಿಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ಬೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿಸು


ನಿನಗೊಂದು ಮಾತು ನಾಳೆ ಹೇಳುವೆ ಎಂದು ಅವಳು ಹೇಳಿದಳು


ದಾರಿಬಿಟ್ಟು ತಡಮೆ ಸರಿಸಿ ನಿಂತನು ದೇರೆ ಮುಂಡೋರಿ


ಆ ದಿನ ಹೋಯಿತಪ್ಪ ಬಂಗರಾಳ್ವಾಗನಿಗೆ




ಮರುದಿನ ಬಂದಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಾಗ ನಿನ್ನೆ ಹೇಳಿದ


ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ


ಎಂದು ಹೇಳವನು ದೇರೆ ಮುಂಡೋರಿ




ದಾರಿ ಬಿಡದಿದ್ದರೆ ತಡಮೆ ಸರಿಸದಿದ್ದರೆ


ನಾನು ಈಗ ಬೊಬ್ಬೆ ಹಾಕುವೆ ಎಂದು ಅವಳು ಹೇಳಿದಳು


ಬೊಬ್ಬೆ ಹಾಕಿ ಕರೆಯುವರು ಒಂದು ಮಾಡುವರು

© ಡಾ.ಲಕ್ಷ್ಮೀ ಜಿ ಪ್ರಸಾದ್



ನಿನ್ನನ್ನು ಬಿಟ್ಟು ಬೇರೆ ನನಗೆ ಸಿಗುವುದಿಲ್ಲ


ಕೈಯಲ್ಲಿ ಹಿಡಿದು ಬಳೆ ಒಡೆಯುತ್ತಾನೆ ದೇರೆ ಮುಂಡೋರಿ


ಹಿಡಿದು ನಾಲ್ಕು ಏಟು ಇಕ್ಕುತ್ತಾರವರು ದೇರ ಮುಂಡೋರಿ




ಹಾದಿ ಬಿಟ್ಟು ತಡಮೆ ಸರಿಸಿದ ದೇರೆ ಮುಂಡೋರಿ


ನೀರು ತೆಗೆದುಕೊಂಡು ಹೋದಳವಳು ಬಂಗರಾಳ್ವಾಗ




ರಾತ್ರಿಯ ಹೊತ್ತಿನಲ್ಲಿ ಸ್ನಾನಕ್ಕೆ ಹೋಗುವಾಗ


ದಾರಿಗಡ್ಡ ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ


ದಾರಿಬಿಡು ತಡಮ್ಮೆ ಸರಿಸು ಎಂದಳು




ಹಿಡಿದ ಕೊಡವನ್ನು ಎತ್ತಿ ಒಂದು ಏಟು ಹಾಕುತ್ತಾಳೆ


ಓಡಿಕೊಂಡು ಹೋದನಾತ ದೇರೆ ಮುಂಡೋರಿ




ಅಷ್ಟು ಹೊತ್ತಿಗೆ ಹೇಳುತ್ತಾಳವಳು ಬಂಗರಾಳ್ವಾಗ


ಊರಿಗೆ ಬಂದ ಮಾರಿ ಆ ಕಡೆ ಹೋಯಿತು


ಎಂದು ಹೇಳಿದಳು ಬಂಗರಾಳ್ವಾಗ


© ಡಾ‌.ಲಕ್ಷ್ಮೀ ಜಿ ಪ್ರಸಾದ್ 






ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ - ಡಾ.ನಾ ಮೊಗಸಾಲೆ




 ಹಿರಿಯ ವಿದ್ವಾಂಸರಾದ ಡಾ.ನಾ ಮೊಗಸಾಲೆಯವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಚಂದದ ಬೆನ್ಙುಡಿ ಬರೆದುಕೊಟ್ಟಿದ್ದು."ಇದೊಂದು ಆಚಾರ್ಯ ಕೃತಿ,ತುಳು ಸಂಸ್ಕೃತಿಯಹೊನ್ನ ಕಿರೀಟಕ್ಕೆ ಇಟ್ಟ ನವಿಲುಗರಿ " ಎಂದಿದ್ದರು

ಪುಸ್ತಕ ತಲುಪಿದಾಗ ಮತ್ತೊಮ್ಮೆ ಇದು ನಿಜಕ್ಕೂ ಆಚಾರ್ಯ ಕೃತಿ ಎಂದು ಮೆಚ್ಚಿದ್ದಾರೆ

ಈ ಕೃತಿ ರಿಯಾಯತಿ ದರದಲ್ಲಿ ಲಭ್ಯವಿದ್ದು ಬೇಕಾದವರು 9480516684 ಗೆ ವಾಟ್ಸಪ್ ಮೆಸೇಜ್ ಅಥವಾ ಕರೆ ಮಾಡಿ


ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

- ಡಾ.ನಾ ಮೊಗಸಾಲೆ 


ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 


ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.


ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.


ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 


ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 

ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 


ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.


ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.


 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಎಂಟು   ದೈವ(1228)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 


ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.


ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.


ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ

 ದಿ: 01.08.2021          ಕನ್ನಡ ಸಂಘ, ಕಾಂತಾವರ


 ಕರಾವಳಿಯ ಸಾವಿರದೊಂದು ದೈವಗಳು

ಅನುಕ್ರಮಣಿಕೆ 315  ಅಧ್ಯಾಯಗಳು

1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು

7 ಅಗ್ನಿ ಕೊರತಿ

8-13  ಅಗ್ನಿ ಭೈರವನ್ ಮತ್ತು ಪರಿವಾರ 

13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ

15-17 ಅಜ್ಜಮ್ಮ ದೇವರು ಮತ್ತು ಪರಿವಾರ 

18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

27  ಅಜ್ಜಿ ಬೆರೆಂತೊಲು

28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

30 ಅಡ್ಯಲಾಯ

31   ಅಡ್ಯಂತಾಯ

32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ

34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

36-37  ಅಣ್ಣೋಡಿ ಕುಮಾರ- ಕಿನ್ಯಂಬು

38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

39 -40 ಅರಬ್ಬಿ ಮತ್ತು ಬ್ರಾಂದಿ 

41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

45 ಅಸುರಾಳನ್/ ಅಸುಳಾನುಂ ಮಕ್ಕಳು

46-47 ಅಂಗಕ್ಕಾರನ್ ಮರುಟೋಳನ್

48 ಅಂಗಾರ ಬಾಕುಡ

49 ಅಂಮಣ ಬನ್ನಾಯ

50-51 ಅಂಕೆ- ಉಮ್ಮಯ

52  ಆಚಾರಿ ಭೂತ

53 ಆಟಕಾರ್ತಿ

54  ಆಟಿ ಕಳೆಂಜ

55-57 ಆದಿ ವೇಡನ್ ಮತ್ತು ಪರಿವಾರ 

58 ಇಷ್ಟಜಾವದೆ 

59 ಉಗ್ಗೆದಲ್ತಾಯ 

60 ಉಮ್ಮಲ್ತಿ 

61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರುಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ

113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ

115  ಕನ್ನಡ ಕಲ್ಕುಡ

116  ಕನ್ನಡ ಬೀರ

117 ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121  ಕಪ್ಪಣ್ಣಣಿಕ/ ಕಾರ್ಯಸ್ಥನ್ 

 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 

125 ಕರಿಯ ಮಲ್ಲಯ್ಯ

  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 

191 ಕುಡಿ ವೀರನ್ 

192 ಕುದುರೆತ್ತಾಯ / ಕುದುರೆ ಮುಖ ದೈವ

‌ 193-194 ಕುರವ ಮತ್ತು ಸತ್ಯಂಗಳದ ಕೊರತಿ

195 ಕುರುವಾಯಿ ದೈವ

‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌204   ಕುಂಞಮ್ಮ ಆಚಾರ್ದಿ

‌205  ಕುಂಞಾಳ್ವ ಬಂಟ

‌206 ಕುಂಞಿ ಭೂತ

‌207 ಕುಂಞಿ ರಾಮ ಕುರಿಕ್ಕಳ್

208 - 212 ಕುಂಜಿರಾಯ ದೈವಗಳು

213-214 ಕುಂಜಿ ಮತ್ತು ಅಂಗಾರ ದೈವಗಳು 

215  ಕುಂಜೂರಂಗಾರ

‌216 ಕುಂಟಲ್ದಾಯ

‌217 ಕುಂಟುಕಾನ ಕೊರವ

‌218-219 ಕುಂಡ - ಮಲ್ಲು ದೈವಗಳು 

220  ಕುಂಡೋದರ

221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

225-226 ಕೇಚ ರಾವುತ ಮತ್ತು ರೇವಂತ 

‌227   ಕೇತುರ್ಲಾಯ

228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

 232 ಕೊಟ್ಟೆದಲ್ತಾಯ

‌233 ಕೊನ್ನೊಟ್ಟು ಕಡ್ತ

‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 

‌235 ಕೊರತಿ 

‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

240 ಅಪ್ರತಿಮ ವೀರ ಕೋಚು ಮಲ್ಲಿ 

241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು

‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌245 ಕೋಟ್ರ ಗುತ್ತಿನ ಬಬ್ಬು 

‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

248 ಕೋರಚ್ಚನ್ 

‌249 ಕೋಲು ಭಂಡಾರಿ

250   ಕೋಳೆಯಾರ ಮಾಮ

251ಗಣಪತಿ ಕೋಲ

252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

255-256 ಗಂಧರ್ವ ದೈವಗಳು

257   ಗಿಳಿರಾಮ

258  ಗಿಡಿರಾವಂತ

259 -260 ಗಿರಾವು ಮತ್ತು ಕೊಡೆಕಲ್ಲಾಯ

261 ಗುರು ಕಾರ್ನವೆರ್ 

262 ಗುರುನಾಥನ್ 

263-275 ಗುಳಿಗ ಮತ್ತು ಸೇರಿಗೆ  ದೈವಗಳು

( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 

 276-300 ಚಾಮುಂಡಿ ಮತ್ತು ಸೇರಿಗೆದೈವಗಳು 

ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 315 ಚಿನಿಕಾರ/ ಚೀನೀ ಬೂತಗಳು

316 ಚೆನ್ನಿಗರಾಯ

317-319 ಚೆಮ್ಮರತಿ,ಪಡುವೀರನ್ ದೈವಗಳು

320 ಚೆಂಬರ್ಪುನ್ನಾಯ

321-322 ಜಟಾಧಾರಿ ಮತ್ತು  ಶಾಂತ ದುರ್ಗೆ 

323 -334'  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339-340  ಜಾನು ನಾಯ್ಕ ಮತ್ತು ಬಂಡಿರಾಮ 

341  ಜಾರಂದಾಯ

342  ಜಾಲ ಬೈಕಾಡ್ತಿ

343   ಪನ್ನೆ ಬೀಡಿನ ಜಾಲ್ಸೂರಾಯ

344 ಜೋಕುಲು ದೈವೊಲು

345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 

347 ತಪ್ಪೇದಿ

348 ತನ್ನಿಮಾಣಿಗ 

 349-351 ತಂತ್ರಿಗಣಗಳು

352 ತಿಮ್ಮಣ್ಣ ನಾಯಕ

353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

356 ತೋಡ ಕುಕ್ಕಿನಾರ್ 

357 ದಾರಮ್ಮ ಬಳ್ಳಾಲ್ತಿ 

358-361 ದಾರು ಕುಂದಯ ದೈವಗಳು 

362   ದೀಪದ ಮಾಣಿ

363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

364  ದೂಮ

365 ದೂಧುರ್ಮ / ದೂರ್ದುಮ 

366-367 ದೆಸಿಲು ಮತ್ತು ಕಿಲಮರತ್ತಾಯ

368 ದೇಬೆ ದೈವ,

369-370  ದೇರೆ ಮತ್ತು  ಮಾನಿ ದೈವಗಳು

371ದೇವಾನು ಪಂಬೆದಿಯಮ್ಮ

372 ದೇಯಿ ಬೈದೆತಿ

373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

379  ದೈವಂತಿ

380-400 ಧೂಮಾವತಿ ಮತ್ತು ಸೇರಿಗೆ ದೈವಗಳು 

ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 

401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 

405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

409 ನಂದಿಗೆನ್ನಾಯ

410-412  ನಾಗ ಕನ್ನಿಕೆ  ಮತ್ತು ನಾಗರಾಜರು 

413 ನಾಗ ದೈವ/ಭೂತ

414   ನಾಗ ಬ್ರಹ್ಮ 

415   ನಾಗ ಬ್ರಹ್ಮ ಮಂಡಲದ ದೈವಗಳು

416-417 ನಾರಳ್ತಾಯ ಮತ್ತು ಭೂತರಾಜ 

418 ನಾಲ್ಕೈತಾಯ

419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

423-424  ನೆತ್ತರು ಮುಗುಳಿ ಮತ್ತು ಭೈರವ 

425   ನೇರಳತ್ತಾಯ

426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436:ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು

ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 

ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌

ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ

ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ

ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ

ದೆಂದೂರ ಪಂಜುರ್ಲಿ

ದೇವರ ಪೂಜಾರಿ ಪಂಜುರ್ಲಿ 

ಪಂಜಣತ್ತಾಯ ಪಂಜುರ್ಲಿ‌

ಬಗ್ಗು ಪಂಜುರ್ಲಿ,

ಬಗ್ಗು ಮೊಯ್ಲಿದಿ 

ವರ್ಣಾರ ಪಂಜುರ್ಲಿ 

ಸೇಮಿಕಲ್ಲ ಪಂಜುರ್ಲಿ 

468 ಪಾಣರಾಟ

469 ಪಿಲಿ ಭೂತ 

470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-500ತುಳುನಾಡಿನ ಪುರುಷ ಭೂತಗಳು 

501  ಪುಲಂದಾಯ ಬಂಟ

502 ಪುಲಿಮರಂಞ ತೊಂಡನ್ 

503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

511  ಪೆರಿಯಾಟ್ ಕಂಡನ್ 

512  ಪೆರುಂಬಳಯಚ್ಚನ್

513  ಪೊಟ್ಟನ್ 

514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

521 ಪೊನ್ವಾನ್ ತೊಂಡಚ್ಚನ್

522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ

562 ಬಾಕುಡತಿ

563 ಬಾಲೆ ಕನ್ಯಾಪು

564 -605 ಬ್ರಾಹ್ಮಣ ಮೂಲದ ದೈವಗಳು

606 ಬಿರ್ಮಣಾಚಾರಿ 

607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು

609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

610  ಬೀರ್ನಾಚಾರಿ

611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ ಅಮ್ಮ

708- 726 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727-730 ಮಲೆರಾಯ ಮತ್ತು ಪರಿವಾರ 

 731 ಮಲೆಸಾವಿರ ದೈವ

732-733:ಮಂಗಳೆರ್ ಮತ್ತು  ಗುರು ಮಂಗೞೆರ್ 

734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

737 ಮಂದ್ರಾಯ

738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು

740-745 ಮಾಯಂದಾಲ್ ಮತ್ತು ಪರಿವಾರ  

746-747 ಮಾಯೊಲು ಮಾಯೊಲಜ್ಜಿ.

748-760 ಮಾರಿ ಭೂತಗಳು

761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

764 ಮಾಸ್ತಿಯಮ್ಮ 

765-766 ಮಿತ್ತೂರು ನಾಯರ್ ದೈವಗಳು


768-782 ಮುಗೇರ ದೈವಗಳು 

783 ಮುಡದೇರ್ ಕಾಳ ಭೈರವ 

784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

787  ಮುತ್ತು ಮಾರಿಯಮ್ಮ  

788 ಮುನಿಸ್ವಾಮಿ ದೈವ

789 ಮುವ್ವೆ ಮೂವ,ಮೂವಿಗೆ ವಾತೆ 

790 - 816ಮುಸ್ಲಿಂ ಮೂಲದ ದೈವಗಳು 

817 ಮೂಜಿಲ್ನಾಯ 

818-819 ಮೂಡೊಟ್ನಾರ್,ಪಡುವೆಟ್ನಾರ್ 

820 ಮೂರಿಲು

821 ಮೂರ್ತಿಲ್ಲಾಯ

822- 900 ಮೂಲ ಪುರುಷ ದೈವಗಳು 

901 ಮೆಕ್ಕೆ ಕಟ್ಟಿನ ಉರುಗಳು 

902-903  ಮೇರ ಮೇತಿಯರು

904 ಮೇಲಂಟಾಯ 

905 ಮೈಯೊಂದಿ

906  ಮೈಸಂದಾಯ

907 ಮೋಂದಿ ಕೋಲ‌

908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

909 -910  ರಕ್ತೇಶ್ವರಿ ಮತ್ತು ಬವನೊ

911 ರಾಜನ್ ದೈವಗಳು

912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

915 ವಡ್ಡಮರಾಯ

916 ವಿದೇಶೀ ಕಾಫ್ರೀ ದೈವಗಳು

917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

919 - 920 ವೀರಭದ್ರ/ ವೈರಜಾತ್,ವೀರನ್ 

921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

925 ವೆಳ್ಳು ಕುರಿಕ್ಕಳ್

926 ವೇಟಕ್ಕೊರುಮಗನ್

927 ವೈದ್ಯಾಚಾರ್ಯ/ ವೈದ್ಯರಾಜನ್ 

928 ಶಗ್ರಿತ್ತಾಯ ದೈವ 

929 ಶಂಕರ ಬಡವಣ

930 -932 ಶಾಸ್ತಾವು,ಕರಿ ಭೂತ,ಕೋಮಾಳಿ

933 ಶಿರಾಡಿ ಭೂತ.

934 ಶಿವರಾಯ 

935 ಶ್ರೀಮಂತಿ ದೈವ

936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

938 -942 ಬಾಕುಡರ ಸರ್ಪಕೋಲದ ದೈವಗಳು

943 ಸರ್ಪಂಕಳಿ

944 ಸರ್ಪಂತುಳ್ಳಲ್

945 ಸಂನ್ಯಾಸಿ ಮಂತ್ರ ದೇವತೆ

946 ಸಾದಿಕರಾಯ ಮತ್ತು ಹಾದಿಕಾರಾಯ 

947 ಸಾರ ಮಾಂಕಾಳಿ

948 ಸ್ವಾಮಿ ದೈವ 

949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

957: ಸುಬ್ಬರಾಯ

958 ಸೋಣದ ಜೋಗಿ

959 ಹನುಮಂತ/ ಸಾರ ಪುಲ್ಲಿದಾರ್ ದೈವ

960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 

962 ಹಳೆಯಮ್ಮ

963 -973 ಹಾಯ್ಗುಳಿ ಮತ್ತು ಪರಿವಾರ 

ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )

974 -995 ಹಿರಿಯಾಯ ದೈವಗಳು

( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );

996-997 ಹುಲಿ ಮತ್ತು ಹಸರ ತಿಮ್ಮ 

998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ

1001 ಹೌಟಲ್ದಾಯ ಮತ್ತು ಮಾಳದ ಕೊರಗ 

ಅಧ್ಯಯನಾತ್ಮಕ ಮಾಹಿತಿ  ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್

Aravinda Bhat  Govinda Prasad  Na Mogasale  Janardana Bhat  Udayagowri Birmukaje  Chandra

ಕಾಪು ಪಿಲಿಚಂಡಿ ಜೊತೆಗೆ ಆರಾಧಿಸಲ್ಪಡುವ ಪೋಲೀಸ್ ಭೂತ - ಡಾ.ಲಕ್ಷ್ಮೀ ಜಿ ಪ್ರಸಾದ್

 

Police Bhuta (c)Dr Lakshmi g prasad


 ಚಿತ್ರ ಕೃಪೆ ,ಮನೋಹರ್ ಕುಂದರ್
Police Bhutac)Dr Lakshmi g prasad



The formality of Tuluva worship is totally special when compared to that of others. Here many personalities like  Mudda, Kalala, Koti and Chennaya have been worshipped .
In the same way many people who were Chinese, Arabians,
Christians and Muslims are also worshipped here.
In the same way a British Subedar (a chief native officer of a company of Indian soldiers in British service) is worshipped with the name Kannada Beera.
Police and Thief are also familiar in worshipping as a deity this is very auspicious in Tulunad .    
Before that what they were and why they become worshipped it’s all are not of big issues but after they are worshipped they are powerful deities with equality and devotion. This is the culture of Tulunad. (c)Dr Lakshmi g prasad
This (culture) is ocean which cannot be researched fully.
In Udupi dist there is a place called Kaapu where Pili(Tiger) Kola is famous and known to all. But there with Pilichamundi and other Butha’s there are Police Bhuta, Kalla(Thief )Bhuta, Senava(a village accountant),Patler Buta,Tigamaarer, Balaaimaarer,Madimaya and Madimalu Bhuta. And other worships are not known to people. When  the Manager of the temple Sri.P.Sundar  gave me the details heartfully (As I was not able to go there due to some ill health.) (c)Dr Lakshmi g prasad
Kapu’s Pilichamundi and other deities to take a holy bath they go to Ganga River while they go whoever come in front of them they goes disappear as here the two officers Patler and Senava were talking about the taxes where Patler said all are escaping to pay the taxes and what are you doing?.
So Senava says I use Police to do this and collect tax.Then there Tigamaarer (Honey lender) and Balaaimarer who lends Beaten rice) also gives tax later while going they find a troop of thieves and captured them and handled to Patler these all are vanished due to the power of god and now worshipped.
This shows the administration of that time. In Tulunad irrespective of caste ,creed they are worshipped as a deity.
A special Thanks to Sri.P Sundar ,Prakash Marpady,Muralidhar Upadhyaya Hiriadka and Manohar Kundar for helping in collecting the details.

 Dr Lakshmi G Prasadcopy rights reserved  (c)Dr Lakshmi g prasad



     )

                                     copy rights reserved


ತುಳುವರ ಭೂತಾರಾಧನೆ ಬಹಳ ವಿಶಿಷ್ಟವಾದುದು.ಇಲ್ಲಿ ಮುದ್ದ, ಕಳಲ ,ಕೋಟಿ ಚೆನ್ನಯರಂತ ಅನೇಕ ಸಾಂಸ್ಕೃತಿಕ ವೀರರು ದೈವಗಳಾಗಿದ್ದಾರೆ ,ಅರಬ್ ಚೀನೀ ವ್ಯಕ್ತಿಗಳೂ ಭೂತಗಳಾಗಿದ್ದಾರೆ ಬ್ರಾಹ್ಮಣ ಜೈನ .ಮುಸ್ಲಿಂ ಕ್ರೈಸ್ತರೂ ಭೂತಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.

‌ಅಂತೆಯೇ ಬ್ರಿಟಿಷ್ ಸುಭೆದಾರನೊಬ್ಬ ಕನ್ನಡ ಬೀರ ಎಂಬ ಹೆಸರಿನ ದೈವವಾಗಿ ಆರಾಧನೆ ಹೊಂದುತ್ತಿದ್ದಾನೆ .ಅಂತೆಯೇ ಪೊಲೀಸರೂ, ಕಳ್ಳರೂ ,ಪಟ್ಲೆರ್, ಸೇನವ ಮೊದಲಾದವರೂ ಕೂಡಾ ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನ ವೈಶಿಷ್ಟ್ಯ .


ಮೊದಲು ಇವರು ಏನಾಗಿದ್ದರು ?ಯಾಕಾಗಿ ದೈವಗಳಾದರು ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ .ದೈವತ್ವ ಪ್ರಾಪ್ತಿಗೆ ಮೊದಲು ಏನೇ ಆಗಿರಲಿ ನಂತರ ಅವರು ನಮ್ಮನ್ನು ಕಾಯುವ ಸತ್ಯಗಳು .ಎಲ್ಲರೂ ಸಮಾನ ಎಲ್ಲರಿಗೂ ಒಂದೇ ರೀತಿಯ ಭಕ್ತಿಯ ನೆಲೆ .ಇದು ತುಳುನಾಡಿನ ಸಂಸ್ಕೃತಿಯ ಗರಿಮೆ ಕೂಡಾ !
ಇದೊಂದು ಅಧ್ಯಯನ ಮಾಡಿದಷ್ಟೂ ಮುಗಿಯದ ದೊಡ್ಡ ಜ್ಞಾನ ಸಂಸ್ಕೃತಿಯ ಸಾಗರ ,ಮೊಗೆದಷ್ಟೂ ಮುಗಿಯದ ರಸಭಾವಿ !


ಉಡುಪಿ ಜಿಲ್ಲೆಯ ಕಾಪುವಿನ ಪಡುಗ್ರಾಮದಲ್ಲಿನ ಮುಗೇರ ದೇವಸ್ಥಾನದ ಪಿಲಿ ಕೋಲ ಬಹಳ ಪ್ರಸಿದ್ಧವಾದುದು .ಅದು ಎಲ್ಲರಿಗೆ ತಿಳಿದಿರುವ ವಿಚಾರ ಕೂಡ !.copy rights reserved  (c)Dr Lakshmi g prasad

ಆದರೆ ಅಲ್ಲಿ ಪಿಲಿಚಾಮುಂಡಿ ಹಾಗೂ ಇತರ ದೈವಗಳ ಸೇರಿಗೆಯಲ್ಲಿ ಸಂದು ಪೋಲಿಸ್ ಭೂತ ,ಕಳ್ಳ ಭೂತ ,ಸೇನವ ಭೂತ ,ಪಟ್ಲೆರ್ ಭೂತ, ತಿಗಮಾರೆರ್ ,ಬಲಾಯಿಮಾರೆರ್ ಮದಿಮಾಯ ಮದಿಮಾಲ್ ಮೊದಲಾದ ಅನೇಕ ಅಪರೂಪದ ಭೂತಗಳಿಗೆ ಆರಾಧನೆ ಇರುವುದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ .

   ಕಾಪು ವಿನ ಮುಗೇರ ಸ್ಥಾನದ ಗುರಿಕ್ಕಾರ ರಾಗಿರುವ ಕುಂದಾಪುರದ ತಹಶೀಲ್ದಾರ ಆಗಿರುವ ಶ್ರೀಯುತ ಪಿ ಸುಂದರ ಅವರನ್ನು ಕಳೆದವಾರ ಸಂಪರ್ಕಿಸಿದಾಗ ಅವರು ಬಹಳ ಪ್ರೀತಿಯಿಂದ  ಈ ಬಗ್ಗೆ ಮಾಹಿತಿ ನೀಡಿದರು .(ಅಲ್ಲಿಗೆ ಬರುವಂತೆ ಆದರದಿಂದ ಆಹ್ವಾನಿಸಿದರು ,ನನಗೆ ಹೋಗಿ ರೆಕಾರ್ಡ್ ಮಾಡಲು ಆಸಕ್ತಿ ಇತ್ತು ,ಕೂಡಾ ಆದರೆ ತುಸು ಅರೋಗ್ಯ ಸಮಸ್ಯೆ ಕಾಡಿದ ಕಾರಣ ಹೋಗಲಾಗಲಿಲ್ಲ )


ಕಾಪು ವಿನ ಪಿಲಿಚಾಂಡಿ ಸೇರಿದಂತೆ ಎಲ್ಲ ದೈವಗಳು ಮಾವಡಿತೀರ್ಥಕ್ಕೆ ಗಂಗಾ ಸ್ನಾನಕ್ಕೆ ಹೋಗುವಾಗ ಎದುರಾದ ಅನೇಕರನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿ ಕೊಳ್ಳುತ್ತಾರೆ .


ಇವರು ಹೋಗುವಾಗ ದಾರಿ ಮಧ್ಯದಲ್ಲಿ ಸೇನವ ಮತ್ತು ಪಟ್ಲೆರ್ ಎಂಬ ಅಧಿಕಾರಿ ವರ್ಗದವರು ಎದುರಾಗುತ್ತಾರೆ .ಪಟ್ಲೆರ್ ಸೇನವನಲ್ಲಿ ಎಲ್ಲ ಕಡೆ ಜನರು ಸುಂಕ ತಪ್ಪಿಸುತ್ತಾ ಇದ್ದಾರೆ ಸುಂಕ ವಸೂಲಿ ಆಗುತ್ತಾ ಇಲ್ಲ ಏನು ಮಾಡುತ್ತಿರುವಿ ಎಂದು ವಿಚಾರಿಸಿದಾಗ ಸೇನವ ಜನರು ಯಾರು ಸುಂಕ ಕೊಡುತ್ತಾ ಇಲ್ಲ ಎಂದು ಹೇಳುತ್ತಾನೆ ಆಗ ಪಟ್ಲೆರ್ ಪೊಲೀಸರನ್ನು ಸಹಾಯಕ್ಕೆ ಕರೆದು ಕೊಂಡು ಹೋಗಿ ಎಲ್ಲಡೆ ಸುಂಕ ವಸೂಲಿ ಮಾಡಲುಆಜ್ಞಾಪಿಸುತ್ತಾರೆcopy rights reserved  (c)Dr Lakshmi g prasad

ಹಾಗೆ ಸೇನವ ಪೊಲೀಸರನ್ನು ಕರೆದುಕೊಂಡು ಅವರ ಸಹಾಯದಿಂದ ಸುಂಕ ವಸೂಲಿ ಮಾಡುತ್ತಾನೆ .ಅಲ್ಲಿ ಆಗ ಬಂದ ತಿಗ ಮಾರೆರ್ ಎಂದರೆ ಜೇನು ಮಾರಾಟ ಗಾರರಿಂದ ಸುಂಕ ವಸೂಲಿ ಮಾಡುತ್ತಾನೆ .ಅದೇ ರೀತಿ ಅಲ್ಲಿ ಅವಲಕ್ಕಿ ಮಾರಾಟ ಮಾಡುತ್ತಿದ್ದ ಬಲಾಯಿ ಮಾರೆರ್ ಕೈನ್ದಲೂ ಸುಂಕ ವಸೂಲಿ ಆಗುತ್ತದೆ .ಮುಂದೆ ದರೋಡೆ ಮಾಡಿ ಕೊಳ್ಳೆ ಹೊಡೆದು ಬರುತ್ತಿದ್ದ ಕಳ್ಳರ ಗುಂಪೊಂದು ಎದುರಾಗುತ್ತದೆ ,ಆ ಕಳ್ಳರನ್ನು  ಹಿಡಿದು ಪೋಲಿಸರು ಪಟ್ಲೆರ್ ಗೆ ಒಪ್ಪಿಸುತ್ತಾರೆ .ಇವರೆಲ್ಲರನ್ನೂ ತಮ್ಮ ಸೇರಿಗೆಗೆ ದೈವಗಳು ಸಂದಾಯ ಮಾಡುತ್ತಾರೆ .ಇಲ್ಲಿ ಕಡೆಂಜಿ ಬಂಟ ಎಂಬ ದೈವಕ್ಕೂ ಆರಾಧನೆ ಇದೆ .
copy rights reserved  (c)Dr Lakshmi g prasad
ಇದೊಂದು ದೈವಗಳ ಕಾರಣಿಕದೊಂದಿಗೆ ಆಗಿನ ಕಾಲದ ರೀತಿ ರಿವಾಜುಗಳು ಆಡಳಿತ ಪದ್ಧತಿಯನ್ನೂ ಕೂಡಾ ತಿಳಿಸುತ್ತದೆ .

ತುಳುವರ ದೈವರಾಧನೆ ಜಾತಿ  ಧರ್ಮ, ಅಧಿಕಾರ  ಸ್ಥಾನಗಳನ್ನೂ ಮೀರಿದ್ದು ಎಂದು ಇಲ್ಲಿ ಸ್ಪಷ್ಟವಾಗುತ್ತದೆ .



ಮಾಹಿತಿ ನೀಡಿದ ಶ್ರೀ ಪಿ ಸುಂದರ (ಮಾರ ಗುರಿಕ್ಕಾರ )ಹಾಗೂ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಪ್ರಕಾಶ್ ಮಾರ್ಪಾಡಿ ,ಮುರಳೀಧರ ಉಪಾಧ್ಯ ಹಿರಿಯಡ್ಕ ಮತ್ತು ಮನೋಹರ ಕುಂದರ್ ಇವರಿಗೆ ಮನಃ ಪೂರ್ವಕ ಕೃತಜ್ಞತೆಗಳು


4 comments:

  1. ಇಷ್ಟೊಂದು ಅಧ್ಯಯನ ಒಬ್ಬರಿಂದಲೇ ಎನ್ನುವುದೇ ಒಂದು ಪವಾಡವಾಗಿದೆ. ಆಶ್ಚರ್ಯ ಮತ್ತು ಹೆಮ್ಮೆ ಎರಡೂ ಉಂಟಾಯಿತು. ಮಾತು ದೈವಗಳೂ ಮಾತಾಡಿದವು.

    ReplyDelete

ನೆತ್ತೆರ್ ಮುಗುಳಿ ( ಪಾಪೆಲು ಚಾಮುಂಡಿ ) - ಡಾ.ಲಕ್ಷೀ ಜಿ ಪ್ರಸಾದ್

 ಪಾಪೆಲು ಚಾಮುಂಡಿ : 

       ಪಾಪೆಲು ಚಾಮುಂಡಿ ಅನ್ಯಾಯ ಮಾಡಿದವನನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ. ಆದ್ದರಿಂದ ಪಾಪೆಲು ಚಾಮುಂಡಿ ದೈವವು ನೆತ್ತರ ಮುಗುಳಿ ಎಂದೇ ಪ್ರಸಿದ್ಧವಾಗಿದೆ. ಪಾಪೆಲು ಚಾಮುಂಡಿ ದೈವದ ಪಾಡ್ದನದ ಪ್ರಕಾರ ಸಾವಿರ ವರ್ಷಗಳ ಹಿಂದೆ ಘಟ್ಟದ ಮೇಲಿನಿಂದ ಚಾರ್ಮಾಡಿ (ಬಂಗಾಡಿ) ಘಾಟಿಯ ಮೂಲಕ ವ್ಯಾಘ್ರವಾಹಿನಿ ರಕ್ತ ಚಾಮುಂಡಿ ದೈವವು ಇಳಿದು ಬರುತ್ತದೆ. ಲಿಂಗಾಯತ ಮತಕ್ಕೆ ಸೇರಿದ್ದ ರಾಮಸೆಟ್ಟಿ ಎಂಬುವರು ರುದ್ರಾಂಶ ಸಂಭೂತರಾಗಿದ್ದರು. ಅವರ ಜೊತೆಗೆ ವ್ಯಾಘ್ರವಾಹಿನಿ ರಕ್ತ ಚಾಮುಂಡಿಯು ಕಾವು ತ್ರಿಮೂರ್ತಿ ದೇವಸ್ಥಾನಕ್ಕೆ ಬಂದು ತ್ರಿಮೂರ್ತಿಗಳಲ್ಲಿ ತನಗೆ ನೆಲೆಸಲು ಯಾವ ಸ್ಥಳ ಯೋಗ್ಯವಾದುದುಎಂದು ಕೇಳುತ್ತದೆ. ಆ ಕಾಲದಲ್ಲಿ ಅಪ್ಪೆಟ್ಟಿ ಈರೆಟ್ಟಿ ಒಡೆಯರುಗಳು ಧರ್ಮಿಷ್ಠರಾಗಿದ್ದುಸತ್ಯ-ಧರ್ಮ-ನ್ಯಾಯ ನೀತಿಗಳ ಸಾಕಾರ ಮೂರ್ತಿಗಳಾಗಿದ್ದರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684  ಆದ್ದರಿಂದ ದೇವರು ವ್ಯಾಘ್ರವಾಹಿನಿ ರಕ್ತಚಾಮುಂಡಿಗೆ ಅಪ್ಪೆಟ್ಟಿ ಒಡೆಯರುಗಳಿಂದ ಕಟ್ಟೆ ಗುಡಿಗಳನ್ನು ನಿರ್ಮಿಸಿಕೊಂಡು ಕಾವು ದೇವರುಗಳಿಗೆ ಪ್ರಧಾನ ಬಂಟರಂತೆ ಇದ್ದು ಗ್ರಾಮಕ್ಕೆ ಗ್ರಾಮಾಧಿ ದೇವತೆ ಎನಿಸಿಕೊಂಡಿರಲು ಆದೇಶವೀಯುತ್ತಾರೆ. © ಡಾ.ಲಕ್ಷ್ಮೀ ಜಿ ಪ್ರಸಾದ್ 
ವ್ಯಾಘ್ರವಾಹಿನಿ ರಕ್ತಚಾಮುಂಡಿಯ ಜೊತೆಗೆ ಬಂದ ದೈವಾಂಶ ಸಂಭೂತರಾದ ರಾಮಸೆಟ್ಟಿ ತಮ್ಮ ಯೋಗ ಶಕ್ತಿಯಿಂದ ಮನುಷ್ಯ ರೂಪವನ್ನು ಬಿಟ್ಟು ಬೈರವ ದೇವತೆಯಾಗಿ ವ್ಯಾಘ್ರವಾಹಿನಿ ರಕ್ತಚಾಮುಂಡಿ ದೈವದೊಂದಿಗೆ ಸೇರುತ್ತಾರೆ. ರಾಮಶೆಟ್ಟಿ ಭೈರವ ದೇವತೆಯಾಗಿ ರಕ್ತಚಾಮುಂಡಿ ಸೇರಿಗೆಗೆ ಸಂದು ಪಾಪೆಲು ಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ. ಕೊಕ್ಕಡ, ಕಾವು, ಬೆಳ್ತಂಗಡಿ, ಪರಿಸರದಲ್ಲಿ ಪಾಪೆಲು ಚಾಮುಂಡಿ (ನೆತ್ತರು ಮುಗುಳಿ) ದೈವಕ್ಕೆ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಹೆಚ್ಚಿನ ಮಾಹಿತಿಗಾಗಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ನೋಡಬಹುದು 

ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ ಗ್ರಂಥ- ಶ್ರೀನಿಧಿ ರಾವ್




ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ  ಗ್ರಂಥ- ಶ್ರೀನಿಧಿ ರಾವ್ 


 ಸಿಗಬೇಕಿರುವುದು ಸಿಕ್ಕೇ ಸಿಗುತ್ತದೆ. ಆಗಬೇಕಿರುವುದು ಆಗೇ ಆಗುತ್ತದೆ. 


ಡಾ. ಲಕ್ಷ್ಮಿ ವಿ. ಅವರ ಐತಿಹಾಸಿಕ ಗ್ರಂಥದ ಕರಡು ಬರಹ ಓದುವ ಸೌಭಾಗ್ಯ ಮೊದಲಿಗೆ  ದೇವರು ಕರುಣಿಸಿದ್ದು ಯಾಕಿರಬಹುದು ಅಂತ ಇನ್ನು ಯೋಚಿಸ್ತಾ ಇದ್ದೀನಿ. 


ಗ್ರಂಥ ರೆಡಿ ಆಗಿ ಅವರಿಗೆ ಸಿಕ್ಕಾಗ ತುಂಬಾ ಖುಷಿ ಆಗಿತ್ತು.  .. ಆದರೆ  ಅಯ್ಯಾ.. ನಾನು ಪುಸ್ತಕ ಹಿಡಿದು ಓದಲು ಇನ್ನು ಎಷ್ಟು ಸಮಯ ಕಾಯಬೇಕು ಅನ್ನಿಸಿತ್ತು. ಯಾರು ಬರುವವರು ಇದ್ದಾರೆ? ಸ್ವಲ್ಪ ಯೋಚಿಸಿದೆ. ಒಂದೆರಡು ಹೆಸರು ತಲೆಗೆ ಬಂದ್ರೂ ಕೇಳೋಕೆ ಹೋಗಲಿಲ್ಲ. 


ಮೊನ್ನೆ ಮಂಗಳವಾರ ಅಚಾನಕ್ಕಾಗಿ Jevitha Rodrigues    ಜೊತೆ ಮಾತಾಡಿದಾಗ ಹೊಸ ಬೆಳಕು ಮೂಡಿ ಇವತ್ತು ಕೈಗೆ ಪುಸ್ತಕ ಸಿಕ್ಕಿತು. ಗ್ರಂಥವನ್ನು ಹೊತ್ತು ತಂದು ಕೊಟ್ಟ ಉಮಾಶಂಕರ್ ಅವರಿಗೆ ವಂದನೆಗಳು .


ನಿಜಕ್ಕೂ ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ  ಗ್ರಂಥ.


ನಾನು ಲಕ್ಷ್ಮಿ ಅಕ್ಕ ಹೇಗೆ ಪರಿಚಯ ಆದೆವು. ನಮ್ಮ ಪರಿಚಯದ ಹಿಂದೆ  ದೇವರು ಅದೆಂತಹ ಉನ್ನತವಾದ ಕಾರಣ ಇಟ್ಟಿದ್ದ. ಮೂಲತಃ ನಾನು ಸೋಮಾರಿ ಯಾವುದನ್ನು ತಾನಾಗಿ ಕೈಗೆ ತಗೊಂಡು ಮಾಡುವ ಕತೆ ಇಲ್ಲ. ಹೇಗೋ ಇದೊಂದು ಕಾರ್ಯ ನಾನು ನಂಬುವ ದೈವ ದೇವರು ಮಾಡಿಸಿದರು .


 🙏🙏🙏

Monday 13 November 2023

ಕರಾವಳಿಯ ಸಾವಿರದೊಂದು ದೈವಗಳು- ಉದಯ ಬಿರ್ಮುಕಜೆ ಪೆರ್ಲಂಪಾಡಿ

 



ಕರಾವಳಿಯ ಸಾವಿರದೊಂದು ದೈವಗಳು  - ಉದಯ ಗೌರಿ ಬಿರ್ಮುಕಜೆ ,ಪೆರ್ಲಂಪಾಡಿ 


ಡಾ.ಲಕ್ಷ್ಮೀ ಜಿ.ಪ್ರಸಾದ್ ರವರು ಸಂಪಾದಿಸಿದ 'ಕರಾವಳಿಯ ಸಾವಿರದೊಂದು ದೈವಗಳು' ಕೃತಿಯನ್ನು ಲೇಖಕಿಯವರು ಕಳುಹಿಸಿಕೊಟ್ಟಿದ್ದು ಇಂದು( 21-09-2021) ಕೈ ಸೇರಿತು.ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು,ಕನ್ನಡ,ಮಲಯಾಳ,ಕೊಡವ ಪರಿಸರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಅಪರೂಪದಲ್ಲಿ ಅಪರೂಪವೆನಿಸುವ ಕೃತಿ ಇದಾಗಿದೆ. ವೃತ್ತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರು ಸಂಸ್ಕ್ರತ, ಕನ್ನಡ,ಹಿಂದಿ ಭಾ಼ಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ಎಂ.ಫೀಲ್,ಎರಡು ಪಿ ಹೆಚ್.ಡಿ ಪಡೆದವರು.ಬಿ.ಎಸ್ಸಿ,ಬಿ.ಇಡಿ,ಲಿಪಿ ಶಾಸ್ತ್ರ ದಲ್ಲಿ ಡಿಪ್ಲೊಮ ಹೀಗೆ ಹಲವು ಶೈಕ್ಷಣಿಕ ಅರ್ಹತೆಯನ್ನು ಹೊಂದಿದವರು.ಬುದ್ಧಿ ಬಂದಾಗಿನಿಂದ ಬರೀ ಓದು,ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಟ್ಟಿಗಿತ್ತಿ .ಹೀಗೆ ಅವರ ಬಗ್ಗೆ ಬರೆಯುವುದು ಬಹಳಷ್ಟಿದೆ.ಅಂತಹ ಅಪ್ರತಿಮ ಫ್ರತಿಭೆ ಸರಳ ಸಜ್ಜನರಾದ ಲಕ್ಷ್ಮೀ ಜಿ.ಪ್ರಸಾದ್ ರವರ ಇಪ್ಪತ್ತು ವರ್ಷ ಗಳ ಅವಿರತ ಪರಿಶ್ರಮದ ಫಲವನ್ನು ಸಮಾಜದ ಮುಂದಿಟ್ಟಿದ್ದಾರೆ. ರಾಮಚಂದ್ರಾಪುರ ಮಠದ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಕೃತಿ ಅತ್ಯಂತ ಸುಂದರವಾಗಿದೆ ಮೂಡಿ ಬಂದಿದೆ.130 gsm art paper ಬಳಸಲಾಗಿದೆ.ವರ್ಣ ಚಿತ್ರಗಳು ಮತ್ತು ಕಪ್ಪಬಿಳುಪು ಚಿತ್ರಗಳು ಅತ್ಯಂತ ಸ್ಪಷ್ಟವಾಗಿ ಬಂದಿವೆ.                     ಕರಾವಳಿಗರ ಪ್ರತಿ ಮನೆಯಲ್ಲೂ ಇರಲೇ ಬೇಕಾದ ಸಂಗ್ರಹಯೋಗ್ಯ ಕೃತಿ.ದೈವಗಳ ಆರಾಧಕರು ನಾವಾಗಿದ್ದರೂ ನಸವು ಆರಾಧಿಸುವ ದೈವಗಳ ಮಾಹಿತಿ ನಮಗೆ ಸ್ಪಷ್ಟವಾಗಿರುವುದಿಲ್ಲ ಅದಕ್ಕೆ ಪರಿಹಾರ ಕೃತಿ. ಜಾಸ್ತಿ ಬರೆಯುವುದಿಲ್ಲ ವನಿತೆಯೊಬ್ಬಳ ಸಾಹಸಕ್ಕೆ ಎಲ್ಲರೂ ಕೈ ಜೋಡಿಸಿ ಅವರ ಶ್ರಮವನ್ನು ಸಾರ್ಥಕಗೊಳಿಸೋಣ. ಈ ಕೃತಿಯನ್ನು ಕೊಂಡು ಓದೋಣ.ನಮ್ಮ ದೈವಗಳ ಬಗ್ಗೆ ತಿಳಿದುಕೊಳ್ಳೋಣ.ಭಕ್ತಿಯ ದೀವಟಿಕೆಗೆ ಮತ್ತಷ್ಟು ತೈಲ ಎರೆಯುವ ಕಾರ್ಯವಾಗಲಿ.                             ಈ ಕೃತಿಗಾಗಿ ಲಕ್ಷ್ಮೀ ಜಿ.ಪ್ರಸಾದ್ ರವರನ್ನು ಸಂಪರ್ಕಿಸಿ. ಮೊ.ಸಂಖ್ಯೆ.9480516684.

ಕರಿ ಚಾಮುಂಡಿ - ಡಾ.ಲಕ್ಷ್ಮೀ ಜಿ ಪ್ರಸಾದ್

 ಕರಿಚಾಮುಂಡಿ :

     ಕರಿಚಾಮುಂಡಿ ದೈವವನ್ನು ಕರಿಚಾಂಡಿ ಎಂದೂ ಕರೆಯುತ್ತಾರೆ. ಕರಿಚಾಮುಂಡಿ ಯಾರೆಂಬ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆದರೆ ಮಡಪ್ಪಾಡಿಯಲ್ಲಿ ಕರಿಚಾಮುಂಡಿ ಭೂತಕ್ಕೆ ನೇಮ ಆಗುವಾಗ ಹೇಳಿದ ಪಾಡ್ದನದ ಕೆಲವು ಸಾಲುಗಳಲ್ಲಿ ಕರಿಚಾಮುಂಡಿಯ ತಂದೆ ಕಾನಕಲ್ಲಟೆ ದೇವರೆಂದೂತಾಯಿ ನೆಲವುಲ್ಲ ಸಂಖ್ಯೆಎಂದೂ ಹೇಳಿದೆ. ಕೊರಗ ತನಿಯ ತಾಯಿ ಮೈರೆಯ ತಂದೆ ತಾಯಿಯನ್ನು ಕಾನಕಲ್ಲಟೆ ದೇವರುನೆಲವುಲ್ಲ ಸಂಖ್ಯೆ ಎಂದು ಕೊರಗ ತನಿಯ ಪಾಡ್ದನದಲ್ಲಿ ಹೇಳಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್  ಕಾಸರಗೋಡುಬಂಟ್ವಾಳ ಪರಿಸರದಲ್ಲಿ ಒಂಜಿ ಕುಂದ ನಲ್ಪ ದೈವೊಳ ನೇಮದಲ್ಲಿ ಪುದ ಎಂಬ ಭೂತಕ್ಕೆ ಆರಾಧನೆ ಇದೆ. ಕೊರಗ ತನಿಯನ ತಾಯಿ ಮೊದಲು ಪಾರಿವಾಳವಾಗಿದ್ದು ನಂತರ ಹೆಣ್ಣಾದವಳು ಎಂದು ಒಂದು ಪಾಡ್ದನದಲ್ಲಿ ಹೇಳಿರುವ ಬಗೆ ಡಾ. ಅಮೃತ ಸೋಮೇಶ್ವರರು ತಿಳಿಸಿದ್ದಾರೆ. ಆದ್ದರಿಂದ ಕೊರಗ ತನಿಯನ ತಾಯಿ ಮೈರೆಯೇ ಪುದ ಎಂದೂಕರಿಚಾಮುಂಡಿ ಎಂದೂ ಆರಾಧನೆ ಹೊಂದಿರುವ ಸಾಧ್ಯತೆ ಇದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 

ಪಾಡ್ದನದ ಕಥೆಗಳು : ಚಾಮುಂಡಿ ದೈವದ ಹುಟ್ಟಿನ ಕಥೆ - ಡಾ.ಲಕ್ಷ್ಮೀ ಜಿ‌ ಪ್ರಸಾದ್

 ಚಾಮುಂಡಿ ಪಾಡ್ದನ


 


ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ, ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ? ಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ. ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕರ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.


ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ.ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. ಈ ಪಾಡ್ದನದಲ್ಲಿ ಎಡದಲ್ಲಿ ಎಡಮಲೆ, ಬಲದಲ್ಲಿ ಬಲಮಲೆ, ನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮರಾಯ ಭಟ್ಟರು ಸ್ನಾನಕ್ಕೆಂದುಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿಒಂದು ಬಿಳಿಯ ತಾವರೆ ಹೂ ಭೀಮರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದುದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣು ಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷ ವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಬೀಮುರಾಯ ಭಟ್ಟರ ಮಗಳು ಚಾಮುಂಡಿ ಗೆ ದಾಯಾದಿಯಾಗಿರುವ ಗಣಪತಿ ಭಟ್ಟ ಎಂಬಾತ ದ್ರೋಹ ಎಸಗುತ್ತಾನೆ.ಆಗ ಕತ್ತಲೆಕಾನದ ಗುಳಿಗ ಆತನನ್ನು ಸಂಹರಿಸುತ್ತದೆ.ನಂತರ ಚಾಮುಂಡಿಯ ಸೇರಿಗೆಗೆ ಸಂದು ಗಣಪತಿ ಭಟ್ಟ ಜತ್ತಿಂಗ/ ಜಟ್ಡಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಚಾಮುಂಡಿ ದೈವದ ಜೊತೆಗೆ ಜತ್ತಿಂಗ ಮತ್ತು ಕತ್ತಲೆ ಕಾನದ ಗುಳಿಗನಿಗೂ ಆರಾಧನೆ ಇರುತ್ತದೆ 


ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ 


ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಜಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ.© ಡಾ.ಲಕ್ಷ್ಮೀ ಜಿ ಪ್ರಸಾದ್

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ - ಡಾ.ನಾ ಮೊಗಸಾಲೆ

 

ನಮಸ್ಕಾರ 
ನಾನು ಡಾ.ಲಕ್ಷ್ಮೀ ಜಿ ಪ್ರಸಾದ್ ಕನ್ನಡ ಉಪನ್ಯಾಸಕಿ    ಸರ್ಕಾರಿ  ಪಿಯು ಕಾಲೇಜು ಬ್ಯಾಟರಾಯನಪುರ    ಬೆಂಗಳೂರು  ಮೊಬೈಲ್ 9480516684 
ಕಾಸರಗೋಡಿನ ಪುಟ್ಟ ಗ್ರಾಮ ಕೊಳ್ಯೂರು ನನ್ನ ಊರು 
ಚಿಕ್ಕಂದಿನಿಂದಲೇ ದೈವಾರಾಧನೆ ಬಗ್ಗೆ ಆಸಕ್ತಿ ಹೊಂದಿದ್ದು,ಎಂಎ(ಸಂಸ್ಕೃತ)  ಮೊದಲ ರ‌್ಯಾಂಕ್  ಎಂಎ ( ಹಿಂದಿ)   ಎಂಎ( ಕನ್ನಡ)ಮೂರನೆಯ ರ‌್ಯಾಂಕಿನೊಂದಿಗೆ  ಮೂರು ಸ್ನಾತಕೋತ್ತರ ಪದವಿಗಳನ್ನು  ಗಳಿಸಿ ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ   ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಿರುವೆ.25 ಪುಸ್ತಕಗಳು ಹಾಗೂ ಆರುನೂರಕ್ಕಿಂತ ಹೆಚ್ಚಿನ ಬರಹಗಳು ಪ್ರಕಟವಾಗಿದೆ
ಇದರಲ್ಲಿ ಇತ್ತೀಚೆಗೆ ಪ್ರಕಟಿತವಾಗಿ ಬಹಳ ಖ್ಯಾತಿಯನ್ನು ಗಳಿಸಿರುವ  ಕರಾವಳಿಯ ಸಾವಿರದೊಂದು ದೈವಗಳು ಎಂಬ 1036 ಪುಟಗಳ A4 ಗಾತ್ರದ ಬೃಹತ್ ಗ್ರಂಥದಲ್ಲಿ  ಕಾರವಾರದಿಂದ ಹಿಡಿದು ಕಣ್ಣಾನ್ನೂರು ತನಕ ಆರಾಧನೆಗೊಳ್ಳುವ ಕನ್ನಡ ತುಳು ಕೊಡವ ಮಲೆಯಾಳ ಪರಿಸರದ 1253 ದೈವಗಳ ಮಾಹಿತಿ ಇದೆ  
ಅದನ್ನು ತೆರೆದಾಗಲೆಲ್ಲ  ನನಗನಿಸುವದ್ದು ಇದೇ ಭಾವ..ಈ ಪುಸ್ತಕವನ್ನು ನಾನು ಬರೆದೆನೇ ? ಎಂದು ಸೋಜಿಗ ಆಗುತ್ತದೆ.
ಇಲ್ಲ..ನನ್ನಂಥಹ ಸಾಮಾನ್ಯ ಮಹಿಳೆಗೆ ಯಾವುದೇ ಸಂಘ ಸಂಸ್ಥೆಗಳ ಅಕಾಡೆಮಿಯ ಯೂನಿವರ್ಸಿಟಿಯ ಅನುದಾನ ಸಹಾಯವಿಲ್ಲದೆ 1253 ದೈವಗಳ ಮಾಹಿತಿ ಸಂಗ್ರಹ ,ವಿಶ್ಲೇಷಣೆ ಅಸಾಧ್ಯವಾದ ವಿಚಾರ..ದೈವ ದೇವರುಗಳೇ ಮಾಹಿತಿ ಒದಗಿಸಿ ವಿಚಕ್ಷಣಾ ಬುದ್ಧಿಯನ್ನು ಕೊಟ್ಟು ಕೈ ಹಿಡಿದು ಬರೆಸಿದ್ದಾರೆ ಎಂದಷ್ಟೇ ಹೇಳಬಲ್ಲೆ.ಇದರಲ್ಲಿ ಅನೇಕರ ಸಹಕಾರ  ಇದೆ .ಅದನ್ನೆಂದಿಗೂ ಮರೆಯಲಾರೆ 

ಈ ಗ್ರಂಥದ ಮಾಹಿತಿಯನ್ನು ಡಾ.ನಾ ಮೊಗಸಾಲೆ ಅವರ ಮಾತಿನೊಂದಿಗೆ ಕೆಳಗೆ ನೀಡಿರುವೆ
ಇದನ್ನು ನೀವು ತಮ್ಮ ವೈಯುಕ್ತಿಕ ಬಳಕೆಗೆ ಹಾಗೂ ಗಣ್ಯರಿಗೆ ಉಡುಗೊರ ದಶಕಗಳ ಕಾಲ ಕ್ಷೇತ್ರ ಕಾರ್ಯ ಅಧ್ಯಯನ ಹಾಗೂ ಪ್ರಕಟಣೆಗೆ ನನಗೆ ಅರುವತ್ತು- ಎಪ್ಪತ್ತು  ಲಕ್ಷಕ್ಕಿಂತ ಹೆಚ್ಚು ದುಡ್ಡು ಖರ್ಚಾಗಿದೆ  . ,ನಾನು ಇದನ್ನು ನನ್ನ ಸ್ವಂತ ದುಡ್ಡಿನಲ್ಲಿ ಮಾಡಿರುವೆ.ಯಾವುದೇ ಸಂಘ ಸಂಸ್ಥೆಗಳ ಯೂನಿವರ್ಸಿಟಿಯ ಅನುದಾನ ನನಗೆ ಲಭಿಸಿರುವುದಿಲ್ಲ .ಹಾಗಾಗಿ ಗೌರವ ಪ್ರತಿ ನೀಡಲು ಅಸಾಧ್ಯ .ಆದರೆ ನಿಮ್ಮಂತಹವರು ಈ ಪುಸ್ತಕ ಓದಬೇಕು  ಎಲ್ಲೆಡೆ ಈ ಪುಸ್ತಕ ಜನರಿಗೆ  ಮಾಹಿತಿಗಾಗಿ ಲಭ್ಯವಾಗಬೇಕು ಎಂಬ ಆಶಯ ನನಗಿದೆ  ಹಾಗಾಗಿ ಪುಸ್ತಕದ ಪ್ರತಿಗಳನ್ನು ತಮ್ಮ ವೈಯಕ್ತಿಕ ಬಳಕೆ ಹಾಗೂ ಗ್ರಂಥಾಲಯಕ್ಕಾಗಿ  ಖರೀದಿಸುವಂತೆ ಮನವಿ ಮಾಡಿರುವೆ .ಡಾ.ವೀರೇಂದ್ರ ಹೆಗ್ಗಡೆ, ಬೆಂಗಳೂರು ಯೂನಿವರ್ಸಿಟಿ ಪ್ರೊಫೆಸರ್.ರಾಜಪ್ಪ ದಳವಾಯಿ ,ಕ್ರೈಸ್ಟ್ ಕಾಲೇಜು ,, ಮಂಗಳೂರು ಯೂನಿವರ್ಸಿಟಿ





ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ
- ಡಾ.ನಾ ಮೊಗಸಾಲೆ

 
ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 
ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 

ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.

ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.

 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಐವತ್ತಮೂರು   ದೈವ(1253)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 

ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.

ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ
 ದಿ: 01.08.2021          ಕನ್ನಡ ಸಂಘ, ಕಾಂತಾವರ

 ಕರಾವಳಿಯ ಸಾವಿರದೊಂದು ದೈವಗಳು
ಅನುಕ್ರಮಣಿಕೆ 315  ಅಧ್ಯಾಯಗಳು
1 ಅಕ್ಕಚ್ಚು
2- ಅಕ್ಕ ಬೋಳಾರಿಗೆ
3-4ಅಕ್ಕೆರ್ಲು- ಅಂಬೆರ್ಲು
5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು
7 ಅಗ್ನಿ ಕೊರತಿ
8-13  ಅಗ್ನಿ ಭೈರವನ್ ಮತ್ತು ಪರಿವಾರ 
13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ
15-17 ಅಜ್ಜಮ್ಮ ದೇವರು ಮತ್ತು ಪರಿವಾರ 
18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು
27  ಅಜ್ಜಿ ಬೆರೆಂತೊಲು
28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ
30 ಅಡ್ಯಲಾಯ
31   ಅಡ್ಯಂತಾಯ
32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ
34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು
36-37  ಅಣ್ಣೋಡಿ ಕುಮಾರ- ಕಿನ್ಯಂಬು
38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ
39 -40 ಅರಬ್ಬಿ ಮತ್ತು ಬ್ರಾಂದಿ 
41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು
45 ಅಸುರಾಳನ್/ ಅಸುಳಾನುಂ ಮಕ್ಕಳು
46-47 ಅಂಗಕ್ಕಾರನ್ ಮರುಟೋಳನ್
48 ಅಂಗಾರ ಬಾಕುಡ
49 ಅಂಮಣ ಬನ್ನಾಯ
50-51 ಅಂಕೆ- ಉಮ್ಮಯ
52  ಆಚಾರಿ ಭೂತ
53 ಆಟಕಾರ್ತಿ
54  ಆಟಿ ಕಳೆಂಜ
55-57 ಆದಿ ವೇಡನ್ ಮತ್ತು ಪರಿವಾರ 
58 ಇಷ್ಟಜಾವದೆ 
59 ಉಗ್ಗೆದಲ್ತಾಯ 
60 ಉಮ್ಮಲ್ತಿ 
61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ
63-64 ಉರವ ಎರುಬಂಟ
65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು
89-90 ಎರು ಶೆಟ್ಟಿ( ಮಲೆ ಮುದ್ದ)
91-92  ಎಂಬ್ರಾನ್ ದೇವ- ಐಪ್ಪಳ್ಳಿ
93-99 ಏಲುವೆರ್ ಸಿರಿಕುಲು
100 ಒಕ್ಕು ಬಲ್ಲಾಳ
101-102 ಒರುಬಾಣಿಯೆತ್ತಿ ,ನೆಲ್ಲೂರಾಯ 
 103- 105 ಓಣಂ ದೈವಗಳು
106 ಓಟೆಚರಾಯ
107: ಕಟ್ಟು ಎಡ್ತುನ್ ಕುಟ್ಟಿ
‌108 ಕಟ್ಟದಲ್ತಾಯ
‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ
111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ
113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ
115  ಕನ್ನಡ ಕಲ್ಕುಡ
116  ಕನ್ನಡ ಬೀರ
117 ಕನ್ನಡ ಭೂತ
118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ
120 ಕನಿಯತಿ
121  ಕಪ್ಪಣ್ಣಣಿಕ/ ಕಾರ್ಯಸ್ಥನ್ 
 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 
125 ಕರಿಯ ಮಲ್ಲಯ್ಯ
  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 
134 -135 ಕರ್ನಗೆ ಮತ್ತು ಮಲಾರ್ ಜುಮಾದಿ
136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು
138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 
140  ಕಂಡನಾರ ಕೇಳನ್
141  ಕಂರ್ಭಿ ಬೈದ್ಯೆದಿ
142  ಕಾಜಿಗಾರ್ತಿ
143-153  ಕಾಡ್ಯನಾಟದ ದೈವಗಳು 
154- 155  ಕಾಡೆದಿ  ಮತ್ತು ಕಾಡ್ತಿಯಮ್ನ
156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು
158-160 ಕಾನಲ್ತಾಯ ಮತ್ತು ಪರಿವಾರ ದೈವಗಳು
161-162 ಕಾಯರ್ತಾಯ ಮಾದ್ರಿತ್ತಾಯ
163-167 ಕಾರಿ ಕಬಿಲ ದೈವಗಳು 
168 ಕಾಳರಾತ್ರಿ 
169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 
173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 
 179 ಕಾಂತು ನೆಕ್ರಿ ಭೂತ
180  ಕಿನ್ನಿದಾರು
181 ಕೀಳು ದೈವ
183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 
184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು
186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 
191 ಕುಡಿ ವೀರನ್ 
192 ಕುದುರೆತ್ತಾಯ / ಕುದುರೆ ಮುಖ ದೈವ
‌ 193-194 ಕುರವ ಮತ್ತು ಸತ್ಯಂಗಳದ ಕೊರತಿ
195 ಕುರುವಾಯಿ ದೈವ
‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು
‌204   ಕುಂಞಮ್ಮ ಆಚಾರ್ದಿ
‌205  ಕುಂಞಾಳ್ವ ಬಂಟ
‌206 ಕುಂಞಿ ಭೂತ
‌207 ಕುಂಞಿ ರಾಮ ಕುರಿಕ್ಕಳ್
208 - 212 ಕುಂಜಿರಾಯ ದೈವಗಳು
213-214 ಕುಂಜಿ ಮತ್ತು ಅಂಗಾರ ದೈವಗಳು 
215  ಕುಂಜೂರಂಗಾರ
‌216 ಕುಂಟಲ್ದಾಯ
‌217 ಕುಂಟುಕಾನ ಕೊರವ
‌218-219 ಕುಂಡ - ಮಲ್ಲು ದೈವಗಳು 
220  ಕುಂಡೋದರ
221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ
225-226 ಕೇಚ ರಾವುತ ಮತ್ತು ರೇವಂತ 
‌227   ಕೇತುರ್ಲಾಯ
228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು
 232 ಕೊಟ್ಟೆದಲ್ತಾಯ
‌233 ಕೊನ್ನೊಟ್ಟು ಕಡ್ತ
‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 
‌235 ಕೊರತಿ 
‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ
238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ
240 ಅಪ್ರತಿಮ ವೀರ ಕೋಚು ಮಲ್ಲಿ 
241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು
‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ
‌245 ಕೋಟ್ರ ಗುತ್ತಿನ ಬಬ್ಬು 
‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು
248 ಕೋರಚ್ಚನ್ 
‌249 ಕೋಲು ಭಂಡಾರಿ
250   ಕೋಳೆಯಾರ ಮಾಮ
251ಗಣಪತಿ ಕೋಲ
252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)
253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 
255-256 ಗಂಧರ್ವ ದೈವಗಳು
257   ಗಿಳಿರಾಮ
258  ಗಿಡಿರಾವಂತ
259 -260 ಗಿರಾವು ಮತ್ತು ಕೊಡೆಕಲ್ಲಾಯ
261 ಗುರು ಕಾರ್ನವೆರ್ 
262 ಗುರುನಾಥನ್ 
263-275 ಗುಳಿಗ ಮತ್ತು ಸೇರಿಗೆ  ದೈವಗಳು
( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 
 276-300 ಚಾಮುಂಡಿ ಮತ್ತು ಸೇರಿಗೆದೈವಗಳು 
ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)
301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 
303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು
 315 ಚಿನಿಕಾರ/ ಚೀನೀ ಬೂತಗಳು
316 ಚೆನ್ನಿಗರಾಯ
317-319 ಚೆಮ್ಮರತಿ,ಪಡುವೀರನ್ ದೈವಗಳು
320 ಚೆಂಬರ್ಪುನ್ನಾಯ
321-322 ಜಟಾಧಾರಿ ಮತ್ತು  ಶಾಂತ ದುರ್ಗೆ 
323 -334'  ಜಟ್ಟಿಗ  ದೈವಗಳು
(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 
335-337 ಜಮೆಯ- ಜಮಯತಿ ,ಬಡೆದಿ ದೈವಗಳು
338  ಜಂಗ ಬಂಟ
339-340  ಜಾನು ನಾಯ್ಕ ಮತ್ತು ಬಂಡಿರಾಮ 
341  ಜಾರಂದಾಯ
342  ಜಾಲ ಬೈಕಾಡ್ತಿ
343   ಪನ್ನೆ ಬೀಡಿನ ಜಾಲ್ಸೂರಾಯ
344 ಜೋಕುಲು ದೈವೊಲು
345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 
347 ತಪ್ಪೇದಿ
348 ತನ್ನಿಮಾಣಿಗ 
 349-351 ತಂತ್ರಿಗಣಗಳು
352 ತಿಮ್ಮಣ್ಣ ನಾಯಕ
353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ
356 ತೋಡ ಕುಕ್ಕಿನಾರ್ 
357 ದಾರಮ್ಮ ಬಳ್ಳಾಲ್ತಿ 
358-361 ದಾರು ಕುಂದಯ ದೈವಗಳು 
362   ದೀಪದ ಮಾಣಿ
363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 
364  ದೂಮ
365 ದೂಧುರ್ಮ / ದೂರ್ದುಮ 
366-367 ದೆಸಿಲು ಮತ್ತು ಕಿಲಮರತ್ತಾಯ
368 ದೇಬೆ ದೈವ,
369-370  ದೇರೆ ಮತ್ತು  ಮಾನಿ ದೈವಗಳು
371ದೇವಾನು ಪಂಬೆದಿಯಮ್ಮ
372 ದೇಯಿ ಬೈದೆತಿ
373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್
 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ
379  ದೈವಂತಿ
380-400 ಧೂಮಾವತಿ ಮತ್ತು ಸೇರಿಗೆ ದೈವಗಳು 
ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 
401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 
405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 
409 ನಂದಿಗೆನ್ನಾಯ
410-412  ನಾಗ ಕನ್ನಿಕೆ  ಮತ್ತು ನಾಗರಾಜರು 
413 ನಾಗ ದೈವ/ಭೂತ
414   ನಾಗ ಬ್ರಹ್ಮ 
415   ನಾಗ ಬ್ರಹ್ಮ ಮಂಡಲದ ದೈವಗಳು
416-417 ನಾರಳ್ತಾಯ ಮತ್ತು ಭೂತರಾಜ 
418 ನಾಲ್ಕೈತಾಯ
419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 
421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 
423-424  ನೆತ್ತರು ಮುಗುಳಿ ಮತ್ತು ಭೈರವ 
425   ನೇರಳತ್ತಾಯ
426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು
429 ಪಟ್ಟಾರ್ ತೆಯ್ಯಂ
430 ಪಟ್ಟೋರಿತ್ತಾಯ
431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 
432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ
434 ಪತ್ತೊಕ್ಕೆಲು ಜನನಂದ ದೈವ
435-436:ಪನಯಾರ್  ಮತ್ತು ಸಂಪ್ರದಾಯ ದೈವ
437:ಪಯ್ಯ ಬೈದ್ಯ
438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ
444-445  ಪರವ  ಮತ್ತು ಪರಿವಾರ ನಾಯಕ
446 ಪಂಜಿ ಭೂತ
 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು
ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 
ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌
ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ
ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ
ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ
ದೆಂದೂರ ಪಂಜುರ್ಲಿ
ದೇವರ ಪೂಜಾರಿ ಪಂಜುರ್ಲಿ 
ಪಂಜಣತ್ತಾಯ ಪಂಜುರ್ಲಿ‌
ಬಗ್ಗು ಪಂಜುರ್ಲಿ,
ಬಗ್ಗು ಮೊಯ್ಲಿದಿ 
ವರ್ಣಾರ ಪಂಜುರ್ಲಿ 
ಸೇಮಿಕಲ್ಲ ಪಂಜುರ್ಲಿ 
468 ಪಾಣರಾಟ
469 ಪಿಲಿ ಭೂತ 
470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು
472  ಪುದ  ಮತ್ತು ಪೋತಾಳ
473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು
491-500ತುಳುನಾಡಿನ ಪುರುಷ ಭೂತಗಳು 
501  ಪುಲಂದಾಯ ಬಂಟ
502 ಪುಲಿಮರಂಞ ತೊಂಡನ್ 
503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು
511  ಪೆರಿಯಾಟ್ ಕಂಡನ್ 
512  ಪೆರುಂಬಳಯಚ್ಚನ್
513  ಪೊಟ್ಟನ್ 
514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು
521 ಪೊನ್ವಾನ್ ತೊಂಡಚ್ಚನ್
522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 
526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು
537 ಪೋಲೀಸ್ ತೆಯ್ಯಂ
 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌
540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 
545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ
549  ಬಲ್ಲ ಮಂಜತ್ತಾಯ
550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು
556 ಬಲೀಂದ್ರ 
557  ಬಸ್ತಿನಾಯಕ
558 ಬಂಕಿ ನಾಯ್ಕ 
559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ
562 ಬಾಕುಡತಿ
563 ಬಾಲೆ ಕನ್ಯಾಪು
564 -605 ಬ್ರಾಹ್ಮಣ ಮೂಲದ ದೈವಗಳು
606 ಬಿರ್ಮಣಾಚಾರಿ 
607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು
609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ
610  ಬೀರ್ನಾಚಾರಿ
611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು
 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 
617-618 ಬೆಲೆಟಂಗರಜ್ಜ ಮತ್ತು ತಂಗಡಿ
619-620 ಬೇಡವ ಮತ್ತು ಬೇಟೆಗಾರ ದೈವಗಳು
621 ಬೊಟ್ಟಿ ಭೂತ
622 -625:ಬೋವ ದೈವಗಳು .
626 ಬೈನಾಟಿ 
627   ಬೈಸು ನಾಯಕ
628-690 ಭಗವತಿ ದೈವಗಳು
 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ
695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 
697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌
699 ಮಡಿಕತ್ತಾಯ
700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು
702-703'  ಮದಂಗಲ್ಲಾಯ ಕಡಂಗಲ್ಲಾಯ 
704-705 ಮದಿಮಾಯ ಮದಿಮಾಲ್
706ಮನಕ್ಕಡನ್ ಗುರುಕ್ಕಳ್ 
707 ಮನಕ್ಕೊಟ್ಟ ಅಮ್ಮ
708- 726 ಮನ್ಸರ  ದೈವಗಳು
717 ಮರಾಂಗಣೆ
718;ಮರುತಿಯೋಡನ್ ಕುರಿಕ್ಕಳ್
719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 
721 ಮಲರಾಯ
722  ಮಲೆಕುಡಿಯರ ಅಯ್ಯಪ್ಪ 
723-726: ಮಲೆ ತಮ್ಮಚ್ಚ ಮತ್ತು ಪರಿವಾರ 
727-730 ಮಲೆರಾಯ ಮತ್ತು ಪರಿವಾರ 
 731 ಮಲೆಸಾವಿರ ದೈವ
732-733:ಮಂಗಳೆರ್ ಮತ್ತು  ಗುರು ಮಂಗೞೆರ್ 
734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು
737 ಮಂದ್ರಾಯ
738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು
740-745 ಮಾಯಂದಾಲ್ ಮತ್ತು ಪರಿವಾರ  
746-747 ಮಾಯೊಲು ಮಾಯೊಲಜ್ಜಿ.
748-760 ಮಾರಿ ಭೂತಗಳು
761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌
764 ಮಾಸ್ತಿಯಮ್ಮ 
765-766 ಮಿತ್ತೂರು ನಾಯರ್ ದೈವಗಳು

768-782 ಮುಗೇರ ದೈವಗಳು 
783 ಮುಡದೇರ್ ಕಾಳ ಭೈರವ 
784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ
787  ಮುತ್ತು ಮಾರಿಯಮ್ಮ  
788 ಮುನಿಸ್ವಾಮಿ ದೈವ
789 ಮುವ್ವೆ ಮೂವ,ಮೂವಿಗೆ ವಾತೆ 
790 - 816ಮುಸ್ಲಿಂ ಮೂಲದ ದೈವಗಳು 
817 ಮೂಜಿಲ್ನಾಯ 
818-819 ಮೂಡೊಟ್ನಾರ್,ಪಡುವೆಟ್ನಾರ್ 
820 ಮೂರಿಲು
821 ಮೂರ್ತಿಲ್ಲಾಯ
822- 900 ಮೂಲ ಪುರುಷ ದೈವಗಳು 
901 ಮೆಕ್ಕೆ ಕಟ್ಟಿನ ಉರುಗಳು 
902-903  ಮೇರ ಮೇತಿಯರು
904 ಮೇಲಂಟಾಯ 
905 ಮೈಯೊಂದಿ
906  ಮೈಸಂದಾಯ
907 ಮೋಂದಿ ಕೋಲ‌
908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 
909 -910  ರಕ್ತೇಶ್ವರಿ ಮತ್ತು ಬವನೊ
911 ರಾಜನ್ ದೈವಗಳು
912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 
915 ವಡ್ಡಮರಾಯ
916 ವಿದೇಶೀ ಕಾಫ್ರೀ ದೈವಗಳು
917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್
919 - 920 ವೀರಭದ್ರ/ ವೈರಜಾತ್,ವೀರನ್ 
921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್
925 ವೆಳ್ಳು ಕುರಿಕ್ಕಳ್
926 ವೇಟಕ್ಕೊರುಮಗನ್
927 ವೈದ್ಯಾಚಾರ್ಯ/ ವೈದ್ಯರಾಜನ್ 
928 ಶಗ್ರಿತ್ತಾಯ ದೈವ 
929 ಶಂಕರ ಬಡವಣ
930 -932 ಶಾಸ್ತಾವು,ಕರಿ ಭೂತ,ಕೋಮಾಳಿ
933 ಶಿರಾಡಿ ಭೂತ.
934 ಶಿವರಾಯ 
935 ಶ್ರೀಮಂತಿ ದೈವ
936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 
938 -942 ಬಾಕುಡರ ಸರ್ಪಕೋಲದ ದೈವಗಳು
943 ಸರ್ಪಂಕಳಿ
944 ಸರ್ಪಂತುಳ್ಳಲ್
945 ಸಂನ್ಯಾಸಿ ಮಂತ್ರ ದೇವತೆ
946 ಸಾದಿಕರಾಯ ಮತ್ತು ಹಾದಿಕಾರಾಯ 
947 ಸಾರ ಮಾಂಕಾಳಿ
948 ಸ್ವಾಮಿ ದೈವ 
949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ
957: ಸುಬ್ಬರಾಯ
958 ಸೋಣದ ಜೋಗಿ
959 ಹನುಮಂತ/ ಸಾರ ಪುಲ್ಲಿದಾರ್ ದೈವ
960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 
962 ಹಳೆಯಮ್ಮ
963 -973 ಹಾಯ್ಗುಳಿ ಮತ್ತು ಪರಿವಾರ 
ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )
974 -995 ಹಿರಿಯಾಯ ದೈವಗಳು
( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );
996-997 ಹುಲಿ ಮತ್ತು ಹಸರ ತಿಮ್ಮ 
998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ
1001 ಹೌಟಲ್ದಾಯ ಮತ್ತು ಮಾಳದ ಕೊರಗ 
ಅಧ್ಯಯನಾತ್ಮಕ ಗ್ರಂಥ   ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್
mobile 9480516684