ಬಳ್ಳಿ ಕಾಳ ಬೆಳ್ಳಿ ಕಾದಂಬರಿಯ ಪ್ರಮುಖ ಪಾತ್ರವಾಗಿ ಭೂತಾರಾಧನೆಯ ಲಕ್ಷ್ಮೀ - ಡಾ. ಕೆ ಎನ್ ಗಣೇಶಯ್ಯ
ನಗರ ಬಸದಿ ಕೇರಿಯಲ್ಲಿರುವ ಜಟ್ಟಿಗರ ಪೂಜಾ ಮಂಟಪದ ಬಳಿ ನಡೆಯುವ ಪೂಜೆಯನ್ನು ಕಾದಂಬರಿಯ ಒಂದು ಪ್ರಮುಖ ವಸ್ತುವನ್ನಾಗಿಸಿಕೊಳ್ಳುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದರು ಬರೆದಿದ್ದ ಬ್ಲಾಗ್ ನಲ್ಲಿ ದೊರೆತ ಜಟ್ಟಿಗರ ಭೂತಾರಾಧನೆಯ ಬಗೆಗಿನ ವಿವರಗಳು ನಾನು ಕಲ್ಪಿಸಿಕೊಂಡಿದ್ದ ಕೊಂಡಿ ಕೇವಲ ಕಲ್ಪನೆಯಲ್ಲ ಸತ್ಯ ಎನ್ನುವುದಕ್ಕೆ ಪ್ರಮುಖ ಆಧಾರ ಒದಗಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಉಪಯೋಗಿಸಲು ಅನುವು ಮಾಡಿಕೊಟ್ಟವು ಕೂಡ.
ತಕ್ಷಣವೇ ಭೂತಾರಾಧನೆಯ ಬಗ್ಗೆಯೇ ಎರಡರೆಡು ಪಿಎಚ್ ಡಿ ಮಾಡಿ ಹಲವು ಪುಸ್ತಕಗಳನ್ನೂ,ಅನೇಕ ಪ್ರಬಂಧಗಳನ್ನೂ ಬರೆದು ' ಭೂತಾರಾಧನೆಯ ಲಕ್ಷ್ಮೀ' ಎಂದೇ ಗುರುತಿಸಿಕೊಂಡಿರುವ ಡಾ.ಲಕ್ಷ್ಮೀ ಜಿ ಪ್ರಸಾದ ಅವರನ್ನು ಸಂಪರ್ಕಿಸಿ,ಹೆಚ್ಚಿನ ವಿವರಗಳನ್ನು ಚರ್ಚಿಸಲು ವಿವರ ಕೋರಿದಾಗ,ತಾವಾಗಿ ಮನೆಗೆ ಬಂದು ಸುಮಾರು ಮೂರು ಗಂಟೆಗಳ ಕಾಲ ನಮ್ಮ ಕುಟುಂಬದೊಂದಿಗೆ ಜೊತೆ ಬೆರೆತು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು, ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖವಾಗಿ ಪಾತ್ರವಾಗಿ ರೂಪುಗೊಳ್ಳಗಿದ್ದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪ್ರಸಾದ್ ಅವರ ಆಕರಗಳನ್ನು ಕಾದಂಬರಿಯಲ್ಲಿ ಲಕ್ಷ್ಮೀ ಪೊದ್ದಾರ್ ಉದಾಹರಿಸುವುದು ಓದುಗರಿಗೆ ವಿಚಿತ್ರವಾಗಿ ಕಾಣಬಹುದು. ನಂತರ ಅವರು ಹಲವಾರು ಸಲಹೆಗಳನ್ನು ,ಪಾಡ್ದನಗಳ ತುಳು ಮತ್ತು ಕನ್ನಡದ ಭಾಷಾಂತರವನ್ನೂ,ನೇತ್ರಾಣಿ ಜಟ್ಟಿಗನ ಚಿತ್ರವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು. ಬಳ್ಳಿ ಕಾಳ ಕರಿ ಮೆಣಸು ಸಂಪೂರ್ಣವಾಗಿ ಪರಿಷ್ಕರಣೆ ಹೊಂದಿ ಬಿಳಿಯ ಮೆಣಸಾಯಿತು.
(ಕೃಪೆ : ಡಾ.ಕೆ ಎನ್ ಗಣೇಶಯ್ಯ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ ಕೊನೆಯಲ್ಲಿ ಅವರು ಬರೆದುಕೊಂಡ ಬರಹ )