ವೇಟಕ್ಕೊರುಮಗನ್ ದೈವಕ್ಕೆ ಪೆರಾಜೆಯಲ್ಲಿ ಆರಾಧನೆ ಇದೆ .ಈ ದೈವ ಎಂಟು ದಿಕ್ಕಿನಲ್ಲಿ ಬಾಣ ಪ್ರಯೋಗ ಮಾಡುವ ಸಂಪ್ರದಾಯವಿದೆ.ಕಾಸರಗೋಡು ಹಾಗೂ ಕಾಸರಗೋಡಿನ ಉತ್ತರದ ಪ್ರದೇಶಗಳಲ್ಲಿ ವೇಟಕ್ಕೊರುಮಗನ್ ತೆಯ್ಯಂ ಗೆ ಆರಾಧನೆ ಮಾಡುತ್ತಾರೆ.
ಈ ದೈವ ದ ಕಥೆ ಪುರಾಣ ಕಥೆಯೊಂದಿಗೆ ಥಳುಕು ಹಾಕಿಕೊಂಡಿದೆ
ಅರ್ಜುನ ಪಾಶುಪತಾಸ್ತ್ರ ಪಡೆಯಲು ಶಿವನ ಕುರಿತು ತಪಸ್ಸು ಮಾಡುತ್ತಾನೆ.ಆಗ ಶಿವ ಪಾರ್ವತಿಯರು ಗ ಬೇಟೆಗಾರರ ವೇಷ ಧರಿಸಿ ಅರ್ಜುನನ್ನು ಪರೀಕ್ಷಿಸಲು ಬರುತ್ತಾರೆ.
ಆಗ ಪಾರ್ವತಿ ದೇವಿ ಗರ್ಭ ಧರಿಸಿ ಓರ್ವ ಮಗನನ್ನು ಪ್ರಸವಿಸುತ್ತಾಳೆ.ಆ ಮಗನಿಗೆ ವೇಟಕ್ಕೊರುಮಗನ್ ಎಂದು ಹೆಸರಿಟ್ಟು ಸಾಕುತ್ತಾರೆ. ಆತ ತುಂಬಾ ಸಾಹಸಿ ಯಾಗಿದ್ದನು.ತನ್ನ ಶಕ್ತಿಯಿಂದ ಎಲ್ಲರಿಗೂ ಉಪಟಳ ಕೊಡುತ್ತಿದ್ದನು.ಇವನ ಉಪಟಳದಿಂದ ದೇವತೆಗಳು ಕೂಡ ಕಂಗಾಲಾಗಿದ್ದರು.ಆದ್ದರಿಂದ ಶಿವ ಪಾರ್ವತಿಯರು ಅವನನ್ನು ಭೂಲೋಕಕ್ಕೆ ಕಳಹಿಸುತ್ತಾರೆ.ಅವನು ಬಲುಸ್ಸೆರಿ ಕೋಟೆಗೆ ಬರುತ್ತಾನೆ.ಅಲ್ಲಿನ ಅರಸನಿಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಸಹಾಯ ಮಾಡುತ್ತಾನೆ.ವೀರನಾದ ಅವನಿಗೆ ಅರಸ ತನ್ನ ರಾಜ್ಯದ ಕೆಲವು ಪ್ರದೇಶಗಳನ್ನು ನೀಡುತ್ತಾನೆ.ಅಲ್ಲಿ ನೆಲೆಸುವ ವೇಟಕ್ಕೊರುಮಗನ್ ಕ್ಷೇತ್ರಪಾಲನೊಡನೆ ಸ್ನೇಹ ಗಳಿಸುತ್ತಾನೆ.ಮುಂದೆ ದೈವವಾಗಿ ಆರಾಧನೆ ಪಡೆಯುತ್ತಾನೆ
ಆಧಾರ :ತೆಯ್ಯಂ ಕ್ಯಾಲೆಂಡರ್

No comments:
Post a Comment