ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಶಕ್ತಿಗಳು: ಡಾ.ಲಕ್ಷ್ಮೀ ಜಿ ಪ್ರಸಾದ
ಬೆರ್ಮೆರ್ ತುಳುನಾಡಿನ ಅಧಿದೈವ ಆದ್ದರಿಂದಲೇ ತುಳುನಾಡಿನ ಆರಾಧನಾ ಸಂಕೀರ್ಣ ಗಳಾದ ಗರಡಿಗಳಲ್ಲಿ ಮುಗೇರ್ಕಳ ತಾಣಗಳಲ್ಲಿ ಆಲಡೆಗಳಲ್ಲಿ ಬೆರ್ಮೆರ್ ಗೆ ಆರಾಧನೆ ಇದೆ.
ಹಿರಿಯ/ಪೆರಿಯ ಎಂಬ ಶಬ್ದ ಕಾಲಾಂತರದಲ್ಲಿ ಬೆರ್ಮೆರ್/ಬೆರ್ಮೆರ್ ಆಗಿದೆ .ಸುಬ್ರಹ್ಮಣ್ಯ ನಿಗೆ ಮಲೆಯಾಳದಲ್ಲಿ ಹಿರಿಯ ಎಂಬರ್ಥ ಕೊಡುವ ಪೆರುಮಾಳ ಎಂದು ಕರೆಯುತ್ತಾರೆ. ಬೆರ್ಮೆರ್ ಶಬ್ದ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಯಿತು .ಶೈವಾರಾಧನೆಯ ಪ್ರಭಾವ ದಿಂದ ಬ್ರಹ್ಮ ಲಿಂಗೇಶ್ವರ ಆಯಿತು - ಡಾ.ಲಕ್ಷ್ಮೀ ಜಿ ಪ್ರಸಾದ್
.ನಾಗಾರಾಧನೆ ವಿಶ್ವದ ಎಲ್ಲೆಡೆ ಇದೆ.ಕಾಡಿನಲ್ಲಿ ಬೆರ್ಮೆರ ತಾಣ/ಬ್ರಹ್ಮ ಸ್ಥಾನ ದಲ್ಲಿ ನಾಗನ ಆರಾಧನೆ ಯೂ ಆರಂಭವಾಯಿತು.ಕಾಲಾಂತರದಲ್ಲಿ ನಾಗ ಮತ್ತು ಬ್ರಹ್ಮ ರ ಸಮನ್ವಯವಾಗಿ ಈ ಎರಡೂ ಶಕ್ತಿ ಗಳನ್ನು ಒಟ್ಟಾಗಿ ಆರಾಧಿಸುವ ಸಂಪ್ರದಾಯ ಬೆಳೆಯಿತು- ಡಾ.ಲಕ್ಷ್ಮೀ ಜಿ ಪ್ರಸಾದ್
ಪೆರುಮಾಳ, ಬೆರ್ಮೆರ್ ಪದಗಳ ರೂಪಾಂತರಗಳನ್ನು ಓದಿ ಖುಶಿಯಾಯಿತು.
ReplyDelete