Sunday, 10 December 2023

ಕರಾವಳಿಯ ಸಾವಿರದೊಂದು ದೈವಗಳು‌: ಶೂರ ಯೋಧ ಕಮಾಂಡರ್ ಶ್ಯಾಮ ರಾಜ್


ನನ್ನ ಪರಿಶ್ರಮ ಸಾರ್ಥಕ ಎಂದೆನಿಸಿದ ಕ್ಷಣ..


ದೇಶ ಕಾವ ಯೋಧ ಶ್ಯಾಮರಾಜ್ ಅವರ ಕೈಯಲ್ಲಿ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ನನಗೆ ಚಿಕ್ಕಂದಿನಿಂದಲೂ ಮಿಲಿಟರಿಯವರ ಬಗ್ಗೆ ವಿಶೇಷ ಗೌರವ ಪ್ರೀತಿ.ಇವರೆಲ್ಲರು ಪ್ರಾಣದ ಹಂಗನ್ನು ತೊರೆದು ದೇಶದ ರಕ್ಷಣೆ ಮಾಡುವ ಕಾರಣ ನಾವು ದುಡಿದು ಎರಡು ತುತ್ತು ಉಂಡು ನೆಮ್ಮದಿಯಿಂದ ಮಲಗಲು ಸಾಧ್ಯವಾಗಿದೆ ಎಂಬುದನ್ನು ನಾವೆಂದಿಗೂ ಮರೆಯಬಾರದು.ಹಾಗಾಗಿ ಮಿಲಿಟರಿಯವರ ಬಗ್ಗೆ ನನಗೆ ವಿಶೇಷ ಪ್ರೀತಿ ಕೃತಜ್ಞತೆ.

 

ಶ್ಯಾಮರಾಜ್ ಅವರ ಜೀವನಗಾಥೆಯನ್ನು ವರ್ಷದ ಮೊದಲು ಪತ್ರಿಕೆಯಲ್ಲಿ ಓದಿದ್ದೆ

ಯುದ್ದದಲ್ಲಿ ಏಟಾಗಿಬಕಾಲಿನ ಬಲವನ್ನು ಕಳೆದುಕೊಂಡಿದ್ದರೂ ಅತುಲ ಜೀವನೋತ್ಸಾಹದಿಂದ ಪತ್ನಿ ಮತ್ತು ಮಗಳೊಡನೆ ಸಂತಸದಿಂದ   ಬಾಳುವ ಅವರು ನಿಜಕ್ಕೂ ಸಮಾಜಕ್ಕೊಂದು ಮಾದರಿ.ಮಿಲಿಟರಿಯಲ್ಲಿರುವ ಅವರ ಮಡದಿ ಶಿವಲೀಲಾ ಕೂಡ ಪ್ರಶಂಸಾರ್ಹರು.


ಇವರ ಮಾತನ್ನು ಕ್ಲಬ್ ಹೌಸಿನಲ್ಲಿ ಕೇಳಿದ್ದೆ.fb ಸ್ನೆಹಿತರಾದ ಕಾದಂಬರಿಗಾರ್ತಿ ಪ್ರಸನ್ನ ಚೆಕ್ಕೆಮನೆಯವರ  Prasanna Venkatakrishna Chekkemane ಬಾಲ್ಯದ ಸಹಪಾಠಿಯಾಗಿರುವ   ಶ್ಯಾಮರಾಜ್ ಅವರನ್ನೊಮ್ಮೆ ಭೇಟಿ ಮಾಡಿ ಮಾತನಾಡಬೇಕೆಂದುಕೊಂಡಿದ್ದೆ


ಕೆಲ ದಿನಗಳ ಹಿಂದೆ ಪುಸ್ತಕಕ್ಕಾಗಿ ಅವರ ಕರೆ ಬಂದಾಗ ದೇವರ ದ್ವನಿ ಕೇಳಿಸಿದಷ್ಟೇ ಸಂಭ್ರಮಗೊಂಡಿದ್ದೆ

ತಕ್ಷಣವೇ ಪುಸ್ತಕ ಕಳುಹಿಸಿದ್ದೆ.ಪುಸ್ತಕ ಅವರ ಕೈಯಲ್ಲಿ ನೋಡಿ ನನ್ನ ಪರಿಶ್ರಮ ಸಾರ್ಥಕ ಎನಿಸಿತು


.ಓರ್ವ ಬರಹಗಾರ್ತಿಗೆ ಇನ್ನೇನು ಬೇಕು..ಸಹೃದಯ ಓದುಗರೇ ನಮಗೆ ದೊಡ್ಡ ಸಂಪತ್ತು ಅಲ್ವೇ ?


ಇವರ ಬದುಕಿನಲ್ಲಿ ತಂಗಾಳಿಯಾಗಿ ಬಂದ ಮಡದಿ ಶಿವಪ್ರಿಯಾರ ಕುರಿತು ಸ್ನೆಹಿತರಾದ ಪ್ರಸನ್ನ ಚೆಕ್ಕೆಮನೆಯವರ. ಬರಹ ಪ್ರಜಾವಣಿಯಲ್ಲಿ ಪ್ರಕಟವಾಗಿದ್ದು ಅದನ್ನು ಇಲ್ಲಿನ ಕೊಂಡಿ ಮೂಲಕ ಓದಬಹುದು

https://www.prajavani.net/news/article/2018/04/07/564398.html


ಇವರ ಸಾಹಸೀ ಬದುಕಿನ ಬಗ್ಗೆ ಇಲ್ಲಿದೆ ಮಾಹಿತಿ


https://youtu.be/RrHBe6XzIwA


https://youtu.be/k6FldRA7-Xo

 

No comments:

Post a Comment