Saturday, 30 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:225 ಗುದ್ದೊಲಿ ಮೀರಾ (ಗದ್ದುಗೆ ಬೀರೆ )(c)ಡಾ.ಲಕ್ಷ್ಮೀ ಜಿ ಪ್ರಸಾದ

           
 ಚಿತ್ರ ಕೃಪೆ :ಮಹೇಶ್ ಮೈಸೆ
©boloorgarodi@gmail.com
 ನೀರೆ ಗರೊಡಿಯಲ್ಲಿ ಮಾಯಂದಾಲ್ ಪಕ್ಕ ಇರುವ ಬಾಲಕನ ಮೂರ್ತಿಗೆ ಗುದ್ದೊಲಿ ಮೀರಾ ಎಂದು ಹೆಸರು ಇದೆ .ಇಲ್ಲಿ ಆರಾಧಿಸಲ್ಪಡುವ ಗುದ್ದೊಲಿ ಮೀರಾ ಎಂಬ ಆರಾಧ್ಯ ಶಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .ತುಳುನಾಡಿನ ಗರೊಡಿಗಳ ಬಗ್ಗೆ ಸಚಿತ್ರ ಮಾಹಿತಿ ಸಂಗ್ರಹಿಸಿರುವ ಮಹೇಶ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ
 "ನೀರೆ ಬೈಲೂರಿನ ಗರೋಡಿಯಲ್ಲಿ ಮಯಾಂದಾಲ್ ಮೂರ್ತಿಯ ಎಡಬದಿಯಲ್ಲಿ ಗುದ್ದೊಲಿ ಮೀರಾಎಂದು ಇಲ್ಲಿನ ಜನರು ಕರೆಯುವ, ನಿಂತ ಭಂಗಿಯಲ್ಲಿ ಬಾಲಕನ ಮರದ ಮೂರ್ತಿ ಇದೆ. ಇದು ಇತರ ಕಡೆ ಕುಮಾರಎಂಬ ನಾಮದಿಂದ ಕರೆಯಲ್ಪಡುತ್ತದೆ. ಕಳೆದುಹೋದ ವಸ್ತುಗಳನ್ನು ಹಾಗೂ ತಾನು ಮರೆತು ಹೋಗಿ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ಎಂಬುದು ಗೊತ್ತಾಗದೆ ಇದ್ದಾಗ ಇಲ್ಲಿಯ ಜನರು ಗುದ್ದೆಲ್ ಮೀರಾನ ಕೈಯಲ್ಲಿ ಬಾಳೆಹಣ್ಣು ಕೊಡುತ್ತೇನೆ, ಹುಡುಕಿಕೊಡು ಎಂದು ಹರಕೆ ಹೇಳುವ ಪದ್ದತಿ ಇಲ್ಲಿದೆ. (ಮಾಹಿತಿ ಕೃಪೆ: ನೀರೆ ಗರಡಿ ಇತಿಹಾಸ. ಸಂ: ಪ್ರೋ. ಕೆ ನಾರಾಯಣ ಶೆಟ್ಟಿ) -ಚಿತ್ರ: ಮಹೇಶ್- ಮೈಸೆ ©boloorgarodi@gmail.com"

ತುಳುನಾಡಿನ ಗರೊಡಿಗಳಲ್ಲಿ ಮಾಯಂದಾಲ್ ಎಂಬ ಸ್ತ್ರೀ ದೈವತಕ್ಕೆ ಆರಾಧನೆ ಇದೆ .ಅವಳ ಒಂದು ಮೂರ್ತಿ ಕೂಡ ಗರೊಡಿಗಳಲ್ಲಿ ಇವೆ 
.ಮಾಯಂದಾಲ್ ಎಂದರೆ ಮಾಯವಾದವಳು ಎಂದರ್ಥ. ಪಾಂಗುಲ್ಲ ಬನ್ನಾರರ ಬೀಡಿಗೆ ಒಂದು ದೈವ ಬಂದು ಕೋಲತಜುಮಾದಿ ಎಂದು ಆರಾಧನೆ ಪಡೆಯುತ್ತದೆ. ಆಗ ಪಾಂಗುಲ್ಲ ಬನ್ನಾರರು ದೈವಕ್ಕೆ ಕೊಡಬೇಕಾದ ಸಿರಿ ಬಾಳೆ,ಸೀಯಾಳಗಳನ್ನು ಕೊಡುವುದಿಲ್ಲ copy rights reserved (c)Dr.Laxmi g Prasad. ಆಗ
ಪಾಂಗುಲ್ಲ ಬನ್ನಾರರ ಸೋದರ ಸೊಸೆ ಹತ್ತುದಿನದ ಬಾಣಂತಿಯಗಿದ್ದಳು .

ಆಗ ಕೋಪಿಸಿಕೊಂಡ ದೈವ .ಕೋಲತ ಜುಮಾದಿ ಅವಳಿರುವಲ್ಲಿಗೆ ಬಂದು ಅವಳನ್ನು, ಅವಳ ಮಗುವನ್ನು ಮಾಯ ಮಾಡುತ್ತದೆ. ಮಾಯವಾದ ಅವಳು ಗರಡಿಮನೆಯ ಬ್ರಹ್ಮನ ಸೇರಿಗೆಗೆ ಸಂದು, ದೈವವಾಗಿ ಆರಾಧನೆ ಹೊಂದುತ್ತಾಳೆ. ಮಾಯಂದಾಲ್ ಕೋಟಿಚೆನ್ನಯರ ಭಾವನಾತ್ಮಕ  ತಂಗಿ ಎಂಬ ನಂಬುಗೆಯೂ ಇದೆ. ಪ್ರಸವದ ಸಮಯದಲ್ಲಿ ಈ ದೈವಕ್ಕೆ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಹರಿಕೆ ಕೊಟ್ಟು ಆರಾಧಿಸುತ್ತಾರೆcopy rights reserved (c)Dr.Laxmi g Prasad. 



ಇನ್ನೊಂದು ಪಾಡ್ದನ  ಪಾಠದ ಪ್ರಕಾರ ಮಾಣಿಬಾಲೆಯನ್ನು ಸೋದರ ಮಾವನಾದ ಆಲಿಬಾಲಿ ನಾಯಕನು ರಜಪತಿ ಬೈದ್ಯನ ಮಗನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಕೆಲವು ವರ್ಷ ಕಳೆದರೂ ಸಂತಾನ ಭಾಗ್ಯ ಒದಗದಿರಲು ಬೆರ್ಮರಿಗೆ ಹರಕೆ ಹೇಳಿದ ಮೇರೆಗೆ ಆಕೆ ಗರ್ಭವತಿಯಾಗುತ್ತಾಳೆ. ಸಂಭ್ರಮದ ಸೀಮಂತ ನಡೆದ ಬಳಿಕ ಆಕೆ ಹೆರಿಗೆಗಾಗಿ ತನ್ನ ಸೋದರ ಮಾವನಾದ ಆಲಿಬಾಲಿ ನಾಯಕನ ಮನೆಗೆ ಬರುತ್ತಾಳೆ. ನವ ಮಾಸ ತುಂಬಿದ ಮಾಣಿಬಾಲೆ ಗಂಡು ಮಗುವಿಗೆ ಜನ್ಮ ನೀಡು‍ತ್ತಾಳೆ. ಅದೇ  ಮಾಗಣೆಗೆ  ಸೇರಿದ  ಗುಡ್ಡೆಯ  ಮೂಡಂದಾಲ  ಪಟ್ಟದ  ಬೀಡಿನ  ಪಾಂಗೊಲ್ಲ  ಬನ್ನಾರ  ಎಂಬ  ಜೈನ  ಜಮೀನ್ದಾರನು  ಜುಮಾದಿ  ಭೂತವನ್ನು   ನಂಬಿಕೊಂಡು  ಅದಕ್ಕೆ  ಗುಡಿ  ನಿರ್ಮಿಸಿ  ಕೋಲಕ್ಕೆ  ದಿನ  ನಿಗದಿಪಡಿಸುತ್ತಾನೆ.  ಊರಿನ  ಜನರಿಂದ  ಕೋಲಕ್ಕಾಗಿ ಸಿರಿ  ಸೀಯಾಳ ಕೊಡಲು ಆಲಿ ಬಾಲಿ ನಾಯಕನಿಗೆ ಹೇಳಿ ಕಳುಹಿಸುತ್ತಾನೆ. ಆಲಿ ಬಾಲಿ ನಾಯಕ ಕೊಡುವುದಿಲ್ಲ ದಕ್ಕೆ ದೈವ ಅವನ ಸೊಸೆ ಮಾತು ಮಗುವನ್ನು ಮಾಯ ಮಾಡುತ್ತದೆ.ಮಾಯ ವಾದ ಅವರು ದೈವಗಳಗಿ ನೆಲೆ ನಿಲ್ಲುತ್ತಾರೆ
ತಮಗೆ ಸಲ್ಲ ಬೇಕಾದ ಸೇವೆಯನ್ನು ಸಲ್ಲಿಸದೆ  ಇದ್ದಾಗ ದೈವಗಳು ಕೊಪಿಸ್ಕೊಂದು ಶಿಕ್ಷಿಸುವ ವಿಚಾರ ಅನೇಕ ಪಾದ್ದನಗಳಲ್ಲಿದೆ .ಇಲ್ಲಿ ಕೂಡ ಪಾಂಗುಲ್ಲ ಬಂನಾರಣ ಮೇಲಿನ ಕೋಪದಿಂದ ಅವನನ್ನು ಶಿಕ್ಷಿಸುವ ಸಲುವಾಗಿ ಅವನ ಸೋದರ ಸೊಸೆಯನ್ನು ಮಗುವನ್ನು ದೈವ ಮಾಡಿರಬಹುದು .copy rights reserved (c)Dr.Laxmi g Prasad. 
ವಾಸ್ತವಿಕತೆಯ ನೆಲೆ ಗತ್ತಿನಲ್ಲಿ ಯೋಚಿಸಿದಾಗ ಬಾಣಂತಿ ಮಗು ಆಕಸ್ಮಿಕವಾಗಿ ಮರನವನ್ನ್ನಪ್ಪಿರಬಹುದು ಅದಕ್ಕೆ ದೈವದ ಕಾರಣಿಕದ ಕಥಾನಕ ಸೇರಿ, ಅವಳ ಮಗು ಮತ್ತು ಅವಳು ಕೂಡ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು
ಮಾಯಂದಾಲ್ ದೈವಕ್ಕೆ ಸ್ತ್ರೀ ಸಹಜ ವೇಷದಲ್ಲಿ ಭೂತ ಕಟ್ಟಿ ಕೋಲ ನೀಡುತ್ತಾರೆ .ತಾಯಿಯೊಂದಿಗೆ ಮಗುವಿಗೆ ಸಾಂಕೇತಿಕವಾಗಿ ಕೋಲ ನೀಡುತ್ತಾರೆ.ಈ ಮಗುವಿಗೆ ಗದ್ದುಗೆ ವೀರ(ಗದ್ದುಗೆ ಬೀರೆ) ಎಂದು ಹೆಸರಿದ್ದ ಬಗ್ಗೆ ಪಾದ್ದನಗಾರ್ತಿ ವಾರಿಜ ಅವರು ಹೇಳಿದ್ದಾರೆ .ಅಳಿಯ ಕಟ್ಟು ಇರುವಲ್ಲಿ ಮಾವನ ಗುತ್ತಿ ಯ ಅಧಿಕಾರ ಸೊಸೆಯ ಮಗನಿಗೆ ಬರುವುದು ಸಹಜವೇ .ಆ ಅರ್ಥದಲ್ಲಿ ಆತನಿಗೆ ಗದ್ದುಗೆ ಬೀರೆ ಎಂದು ಕರೆದಿರಬಹುದು .copy rights reserved (c)Dr.Laxmi g Prasad. 
 ಆದರೆ ಮಾಯಂದಾಲ್ ಮಗು ಮತ್ತು ಗುದ್ದೊಲಿ ಮೀರಾ ಒಂದೇ ಶಕ್ತಿಯೇ ಅಥವಾ ಬೇರೆ ಬೇರೆಯೇ ಎಂದು ತಿಳಿದು ಬಂದಿಲ್ಲ ,ಗದ್ದುಗೆ ವೀರ (ಗದ್ದುಗೆ ಬೀರೆ) ಎಂಬುದು ಆಡುಮಾತಿನಲ್ಲಿ ಗುದ್ದೊಲಿ ಮೀರಾ ಆಗಿರಬಹುದೇ ?ಅಥವಾ ಸ್ಥಳೀಯ ವೀರನೊಬ್ಬ ಆರಾಧನೆ ಹೊಂದಿ ಮಾಯಂದಾಲ್ ಮಗುವಿನೊಂದಿಗೆ ಗುದ್ದೊಲಿ ಮೀರಾ ಎಂಬ ಹೆಸರಿನಲ್ಲಿ ಸಮೀಕರಿಸಲ್ಪತ್ತಿರುವ ಸಾಧ್ಯತೆ ಕೂಡ ಇಲ್ಲದಿಲ್ಲ.ಬೇರೆಯೇ ಒಂದು ಶಕ್ತಿ ಇರಲೂ ಬಹುದು
ಈತನಿಗೆ ಬಾಳೆ ಹಣ್ಣು ಹರಿಕೆಯಾಗಿ ಅರ್ಪಿಸುವ ಕಾರಣ ಈತ ಮೂಲತಃ ವೀರ ಬಾಲಕನೇ ಆಗಿದ್ದಿರುವ ಸಾಧ್ಯತೆ ಇದೆ .ಈ ಬಗೆ ಹೆಚ್ಚಿನ ಅಧ್ಯಯನ ನಡೆದರೆ ವಾಸ್ತವ ಸಂಗತಿ ತಿಳಿದು ಬರಬಹುದುcopy rights reserved (c)Dr.Laxmi g Prasad. 

ಗುದ್ದೊಲಿ ಮೀರಾ ನ ಬಗ್ಗೆ ಸಚಿತ್ರ ಮಾಹಿತಿ ನೀಡಿದ ಮಹೇಶ್ ಅವರಿಗೆ ಕೃತಜ್ಞತೆಗಳು

Thursday, 28 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 220:ಬಗ್ಗ ಪೂಜಾರಿ (c) ಡಾ.ಲಕ್ಷ್ಮೀ ಜಿ ಪ್ರಸಾದ


ಕೇಂಜ ಗರೋಡಿ:ಚಿತ್ರ ಕೃಪೆ :ತುಳುನಾಡಿನ ಗರೋಡಿಗಳು

ದೇವಸ್ಥಾನ ,ದೈವಸ್ಥಾನ ಗಳನ್ನ ಕಟ್ಟಿಸಿದವರು, ದೈವಗಳನ್ನು ನೆಲೆಗೊಳಿಸಲು ಕಾರಣರಾದವರು ,ದೈವಗಳ ಅನನ್ಯ ಭಕ್ತರು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಾದ್ಯಂತ ಅಲ್ಲಲ್ಲಿ  ಕಂಡು ಬರುವ ವಿಶಿಷ್ಟ ವಿಚಾರವಾಗಿದೆ .
ಹಿರಿಯಡಕದಲ್ಲಿ ವೀರ ಭದ್ರ ನನ್ನು ನೆಲೆ ಗೊಳಿಸಿದ ಅದ್ಕತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವತ್ವ ಪಡೆದು ಆರಾಧಿಸಲ್ಪದುತ್ತಿದ್ದಾನೆ .ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿನ್ಜತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವವಾಗಿ ನೆಲೆ ಗೊಂಡಿದ್ದಾನೆ. ಮಣಿಕ್ಕರದಲ್ಲಿ ವಿಷ್ಣು ಮೂರ್ತಿಯ ದೇವಾಲಯ ಕಟ್ಟಿಸಿದ ಪಾಲ್ತಾಡು ಬೀಡಿನ ಅಚ್ಚು ಬಂಗೆತಿ ದೈವತ್ವವನ್ನು ಪಡೆದಿದ್ದಾಳೆ .

ಅಂತೆಯೇ ಉಡುಪಿ ತಾಲೂಕಿನ ಕುತ್ಯಾರು ಕೇಂಜದಲ್ಲಿ ಕೋಟಿ ಚೆನ್ನಯರ ಗರೋಡಿ ಸ್ಥಾಪನೆಗೆ ಕಾರಣ ಕರ್ತರಾದ  ಮೈಂದ ಪೂಜಾರಿ ದೈವತ್ವ ಪಡೆದು ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ಆರಾಧನೆ ಹೊಂದುವ ವಿಚಾರ ಅಲ್ಲಿನ ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ.
ಕೋಟಿ ಚೆನ್ನಯರು ತಮ್ಮ ಕಾರಣಿಕ ತೋರುವುದಕ್ಕಾಗಿ ಕುತ್ಯಾರಿನ ಅರಸು ಕುಂದ ಹೆಗ್ಗಡೆಯನ್ನು ಹುಡುಕುತ್ತ ಬರುತ್ತಾರೆ .ದಾರಿಯಲ್ಲಿ ಮುಲ್ಕಿ ಸೀಮೆಯ  ಮದ್ಯ ಬೀಡಿಗೆ ತಲುಪಿದಾಗ ಅಲ್ಲಿ ಕಾಂತ ಬಾರೆ ಬೂದಾ ಬಾರೆ ತಡೆಯುತ್ತಾರೆ ಅಲ್ಲಿ ಅವರಿಗೆ ಯುದ್ಧವಾದಾಗ ಬಪ್ಪನಾಡು ದೇವಿ ದುರ್ಗೆ ಪ್ರತ್ಯಕ್ಷಳಾಗಿ ರಾಜಿ ಮಾಡಿಸಿ ಮುಲ್ಕಿ ಒಂಬತ್ತು ಗ್ರಾಮ ಕಾಂತಾ ಬಾರೆ ಬುದಾ ಬಾರೆಯರಿಗೆ ಉಳಿದ ತುಳುನಾಡಿನಲ್ಲಿ ಕೋಟಿ ಚೆನ್ನಯರಿಗೆ ಸ್ಥಾನ ಎಂದು ಸಮಾಧಾನ ಹೇಳಿ ಕಳುಹಿಸುತ್ತಾಳೆ.ಅಲ್ಲಿಂದ ಅವರು ಎಲ್ಲೂರು ದೇವರ ದರ್ಶನಕ್ಕೆ ಬಂದಾಗ ಅಲ್ಲಿ ಕೋಟೆದ ಬಬ್ಬು ದೈವ  ಯುದ್ಧಕ್ಕೆ ಬರುತ್ತದೆ ಕೊನೆಗೆ ಆಟ ಸೋತು ಕೋಟಿ ಚೆನ್ನಯರಿಗೆ ಶರಣಾಗುತ್ತಾನೆ.ದೇವರನ್ನು ಭೇಟಿ ಮಾಡಲು ಬಿಡುತ್ತದೆ   ದೇವರು ಅವರಿಗೆ ಕುತ್ಯಾರು ಕುಂದ ಹೆಗ್ಗಡೆಯಲ್ಲಿಗೆ ಹೋಗಲು ತಿಳಿಸುತ್ತಾನೆ .ಆಗ ಅವರು ಹೆಗ್ಗಡೆಯಲ್ಲಿಗೆ  ಬಂದು ತಮಗೆ ಸ್ಥಾನ ಕಟ್ಟಿಸಬೇಕು ಎಂದು ಹೇಳುತ್ತಾರೆ.ಆಗ ಆತ "ಇಂಥ ಸಾವಿರಾರು ದೈವಗಳು ಬಂದು ಜಾಗ ಕೇಳುತ್ತಾರೆ ಎಲ್ಲರಿಗೂ ಜಗ ಕೊಡಲು ಸಾಧ್ಯವಿಲ್ಲ ,ನಿಮ್ಮ ಕರಣಿಕ ತೋರಿಸಿ: ಎನ್ನುತ್ತಾನೆ.
ಆಗ ಕೋಟಿ ಚೆನ್ನಯರು ಅಲ್ಲಿನ ದೈವ ನಿಷ್ಠ ನಾದ ಮೈಂದ ಪೂಜಾರಿ ಮೇಲೆ ದೃಷ್ಟಿ ಬೀರುತ್ತಾರೆ .ಅವನು ತಾಳೆ ಮರದ ತುದಿಯಲ್ಲಿ ಇದ್ದಾಗ ಅವನಷ್ಟು ಎತ್ತರಕ್ಕೆ ಬೆಳೆದು ಅವನ ಕಿವಿಯಲ್ಲಿ ತಾವು ಬಂದ ಕಾರ್ಯವನ್ನು ತಿಳಿಸಿ ಅರಸರಿಗೆ ಹೇಳಲು ಸೂಚಿತ್ತಾರೆ .
ಅವನು ಅರಸನಲ್ಲಿ ಹೇಳಲು ಭಯ ಪಟ್ಟು  ಹಿಂಜರಿದಾಗ ನಿನಗೇನಾದರೂ ಆದರೆ ನಮ್ಮಿಬ್ಬರಲ್ಲಿ ಒಬ್ಬನಾಗಿ ಸೇರಿಸಿಕೊಳ್ಳುತ್ತೇವೆ"ಎಂಬ ಭರವಸೆ ನೀಡುತ್ತಾರೆ.ಮತ್ತೆ ಪುನಃ ಅವನ ಕನಸಿನಲ್ಲಿ ಬಂದು ಹೇಳುತ್ತಾರೆ.
ಹಾಗೆ ಅದನ್ನು ಮೈಂದ ಪೂಜಾರಿ ಅರಸನಲ್ಲಿ ಹೇಳಿದಾಗ ಅರಸು "ಇದನ್ನು ನೀನು ಸತ್ಯ ಪ್ರಮಾಣ ಮಾಡಿ ಹೇಳಬೇಕು ,ಏಳು ರಾತ್ರಿ ಎಂಟು ಹಗಲು ಕುದಿಯುತ್ತಿರುವ ಎಣ್ಣೆಯ ಬಾಣಲೆಯಲ್ಲಿ ಮಿಂದು ಏಳಬೇಕು" ಎಂದು ಹೇಳುತ್ತಾರೆ.
ಆತ ಸ್ನಾನ ಮಾಡಿ ಬಂದು ಕೋಟಿ ಚೆನ್ನಯರನ್ನು ನೆನೆದು ಅವರು ಕೊಟ್ಟ ಗಂಧ ವೀಳ್ಯ ಎಲೆಯನ್ನು  ಕುದಿಯುವ ಎಣ್ಣೆಗೆ ಹಾಕಿ ಮೂರು ಬರಿ ಮುಳುಗಿ ಏಳುತ್ತಾನೆ .ಎದ್ದು ಒದ್ದೆ ಕೂದಲನ್ನು ಕೊಡವಿದಾಗ ಅದರ ಬಿಸಿಗೆ ಅರಸು ಹಾಗೂ ಮನೆ ಮಂದಿ ಹೆದರುತ್ತಾರೆ.
ಹೀಗೆ ಕೋಟಿ ಚೆನ್ನಯರ ಕಾರಣಿಕವನ್ನು ಕಣ್ಣಾರೆ ಕಂಡ ಅರಸು ಕುತ್ಯಾರು ಕೇಂಜ ಅವರಿಗೆ ಗರೋಡಿಯನ್ನು ಕಟ್ಟಿಸುತ್ತಾನೆ.
ಮೈಂದ ಪೂಜಾರಿಗೆ ನೂರಾರು ಎಕರೆ ಜಾಗವನ್ನು ಉಂಬಳಿ ಕೊಟ್ಟು ತನ್ನ ಆಸ್ಥಾನದಲ್ಲಿ ಗೌರವದ ಸ್ಥಾನ ಕೊಡುತ್ತಾನೆ.
ಮುಂದೆ ಎಲ್ಲೂರು ಸೀಮೆಯ ಆರು ಮಾಗಣೆಯ ಎಲ್ಲೂರು ಕುತ್ಯಾರು ಕೊಳಚ್ಚೂರು ,ಕಳತ್ತೂರು ಕಣಿಯೂರು,ನಂದಿಕೂರು ಭಿಲ್ಲವ ಪ್ರಮುಖನಾಗಿ ಗರೋಡಿ ನೇಮದಲ್ಲಿ ಮುಖ್ಯಸ್ಥನಾಗಿರುವ ಆತ ಮುಂದೆ  ಮದುಮಗನಂತೆ ಜರಿ ಪೇಟ ,ಕಚ್ಚೆ ಧರಿಸಿ ಅಲಂಕಾರವಾಗಿ ಮುಕ್ಕಾಲಿಗೆಯಲ್ಲಿ  ತೋಟ ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ನೆಲೆಯಾಗುತ್ತಾನೆ .
ಕೋಟಿ ಚೆನ್ನಯರ ಗರೋಡಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸತ್ಯ ಪ್ರಮಾಣದಂಥ ಅತಿಮಾನುಷ ಸಾಹಸ ಮೆರೆದ ಮೈಂದ ಪೂಜಾರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಸಹಜವಾದುದೇ ಆಗಿದೆ.ಕುತ್ಯಾರು ಕೇಂಜ ಗರೋಡಿಯಲ್ಲಿ ತೋಟ ಬಗ್ಗ ಪೂಜಾರಿಗೆ ದೈವಿಕ ನೆಲೆಯಲ್ಲಿ ಆರಾಧನೆ ಇದೆ .
ಮಾಹಿತಿ ಮೂಲ :http://www.kotichennaya.com/kenjagarodi
ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕುತ್ಯಾರು ಕೇಂಜ,ಉಡುಪಿ

Wednesday, 20 May 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು:216 ಬಸ್ತಿ ನಾಯಕ (ಬಾಲ ಬಂಟ ಬಸಪ್ಪ ನಾಯಕ )(c)ಡಾ.ಲಕ್ಷ್ಮೀ ಜಿ ಪ್ರಸಾದ



             
   
               ಚಿತ್ರ ಕೃಪೆ :ಧರ್ಮ ದೈವ
copy rights reservedತುಳುವರ  ಪಾಡ್ದನ ಹಾಗೂ ಭೂತಾರಾಧನೆಯಲ್ಲಿ ಅನೇಕ ಇತಿಹಾಸದ ಎಳೆಗಳು ಅಡಕವಾಗಿವೆ ಅಂತೆಯೇ ಬಸ್ತಿನಾಯಕ ದೈವ ಕಥಾನಕವು ಕೆಳದಿಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ ಬಸ್ತಿ ನಾಯಕ ಸಾಕಷ್ಟು ಪ್ರಸಿದ್ಧ ದೈವತ .copy rights reserved (c) Dr.Laxmi g Prasad ಈ ದೈವ ಕನ್ನಡದಲ್ಲಿ ನುಡಿ ಕೊಡುವುದು ಈ ದೈವ ಮೂಲತ ಕನ್ನಡಿಗ ಎಂಬುದನು ಸಮರ್ಥಿಸುತ್ತದೆ .ಈ ದೈವ ನುಡಿಯಲ್ಲಿ ತನ್ನನ್ನು ತಾನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದುಕೊಳ್ಳುತ್ತದೆ.ಬಸಪ್ಪನಾಯಕ ಎಂಬುದೇ ಆಡು ಮಾತಿನಲ್ಲಿ ಬಸ್ತಿ ನಾಯಕ ಆಗಿದೆcopy rights reserved (c) Dr.Laxmi g Prasad 
ಈತನೋರ್ವಅರಸು ಆಗಿದ್ದ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ .ತಾನು ಮಂಗಳೂರು ಸೀಮೆಯನ್ನು ಹಿಡಿದು ಕೊಂಡೆ ಕಾಲ ಮೇಲೆ ಕಾಲು ಕೈ ಮೇಲೆ ಕೈ ಮೀಸೆ ಮೇಲೆ ಕೈ ಹಾಕಿ ಕೊಂಡೆ ಎಂಬಲ್ಲಿ ಇದು copy rights reserved (c) Dr.Laxmi g Prasad ಸ್ಪಷ್ಟವಾಗುತ್ತದೆ /
ತುಳುನಾಡನ್ನು ಆಳಿದ ಕೆಳದಿ ಸಂಸ್ಥಾನದಲ್ಲಿ ಬಸಪ್ಪ ನಾಯಕ ,ಇಮ್ಮಡಿ ಬಸಪ್ಪ ನಾಯಕ ಮತ್ತು ಚೆನ್ನ ಬಸವ ನಾಯಕ ಎಂಬ ಅರಸುಗಳು ಇದ್ದ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ ಈ ಬಗ್ಗೆ ಅರಿಯಲು ಕೆಳದಿಯ ಇತಿಹಾಸವನ್ನು ಗಮನಿಸಬೇಕಾಗುತ್ತದೆ .copy rights reserved
ಶಿವಮೊಗ್ಗ ಜಿಲ್ಲೆಯ ಸಾಗರದಿಂದ  ಸುಮಾರು  8 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಕೆಳದಿ ಸಂಸ್ಥಾನವಾಗಿ ಬೆಳೆದ ಪರಿ ಅನನ್ಯವಾದುದು .ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ.


 ಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತಿದ್ದು ಅದರ ಸಹಾಯದಿಂದ ಅಥವ ತನ್ನ ಸ್ವ ಸಾಮರ್ಥ್ಯದಿಂದ  ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.160೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು.copy rights reserved (c) Dr.Laxmi g Prasad 

ಚೌಡಗೌಡನ ಕಾಲ  ಸುಮಾರು ಕ್ರಿಸ್ತಶಕ 1500ರಿಂದ 1530.ಇವನ ನಂತರ ಇವನ ಹಿರಿಯ ಮಗ ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು ವರುಷಗಳ ರಾಜ್ಯಭಾರ ಮಾಡುತ್ತಾರೆ.ಶಿವಪ್ಪ ನಾಯಕ ವೆಂಕಪ್ಪ ನಾಯಕ ಎರಡನೇ ವೆಂಕಪ್ಪ ನಾಯಕ ಮೊದಲಾದವರು ಸಂಸ್ಥಾನವನ್ನು ಗಟ್ಟಿ ಗೊಳಿಸುತ್ತಾರೆ

ಮುಂದೆ ಇವರ ವಂಶದ ಹಿರಿಯ ಸೋಮಶೇಖರ ನಾಯಕ ಆಳ್ವಿಕೆ ನಡೆಸುತ್ತಾನೆ ಆತನ ಮಡದಿ ಚನ್ನಮ್ಮ ದಿಟ್ಟ ರಾಣಿ ಶಿವಾಜಿಯ ಮಗ ಸಂಭಾಜಿಗೆ ಆಶ್ರಯ ಕೊಟ್ಟ ಕಾರಣ ಔರಂಗ ಜೇಬನ ವಿರೋಧ ಎದುರಾಗಿ ಆತ ದಾಳಿ ಮಾಡುತ್ತಾನೆ copy rights reserved (c) Dr.Laxmi g Prasad ಆತನ ದಾಳಿಯನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುತ್ತಾಳೆ ಅವಳು .’ಇದಾಗಿ ಸ್ವಲ್ಪ ಸಮಯದಲ್ಲೇ ಬಿಜಾಪುರದ ಸುಲ್ತಾನನು ಕೆಳದಿಗೆ ಮುತ್ತಿಗೆ ಹಾಕಲು ಬಂದನುಶತ್ರುಗಳು ರಾಜ್ಯವನ್ನು ಸುತ್ತುವರಿದಿದ್ದರು ರಾಣಿಗೆ ಯಾವುದೇ ದಾರಿ ತೋಚದೆ ತಾನೆ ಖುದ್ದಾಗಿ ನಿಂತು ಖಡ್ಗವನ್ನು ಹಿಡಿದು ಸೇನೆ ಮುನ್ನೆಡೆಸುವ ಸಂದರ್ಭ ಬಂದಾಗ ಅವರ ರಾಜ್ಯದವರೇ ಅದ ಹಲವರ ವಿರೋಧ ಎದುರಿಸಬೇಕಾಯಿತು.

ಹಲವರು ನಾವು ಹೇಳಿದ ವ್ಯಕ್ತಿಯನ್ನೇ ಪಟ್ಟಕ್ಕೆ ತರಬೇಕು, ಇಲ್ಲವಾದರೆ ನಾವೇ ಜನರನ್ನು ನಿಮ್ಮ ವಿರುದ್ದ ದಂಗೆ ಎಬ್ಬಿಸುತ್ತೇವೆ ಎಂದು ಎಚ್ಚರಿಸಿದರು. copy rights reserved (c) Dr.Laxmi g Prasad ಅತ್ತ ಕಡೆ ಧರಿ ಇತ್ತ ಕಡೆ ಪುಲಿ ಎರಡು ಅಪಾಯವೇ ಸರಿ ಎಂದು ಯೋಚಿಸಿ ತಮಗೆ ಮಕ್ಕಳು ಇಲ್ಲದೆ ಇದ್ದುದರಿಂದ ಬಸಪ್ಪ ನಾಯಕ ಎಂಬ ಹುಡುಗನನ್ನು ದತ್ತು ತಗೆದು ಕೊಂಡಳು.

ಚೆನ್ನಮ್ಮ ತನ್ನ ಜನರನ್ನು ಉದ್ದೇಶಿಸಿ ವೀರ ಕನ್ನಡಿಗರೇ, ಶೂರ ಸೈನಿಕರೇ ಇಂದು ಈ ರಾಜ್ಯದ ಅಳಿವು ಉಳಿವು ನಿಮ್ಮ ಕೈಯಲ್ಲಿದೆ.  ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಎಂಬ ಅಮರವಾಣಿಯೊಂದಿಗೆ  ಹುರಿದುಂಬಿಸಿದಳು. ಬಿಜಾಪುರದ ಸೈನ್ಯದ ಮೇಲೆ ಶೌರ್ಯದಿಂದ ಹೋರಾಡಿದರು ಜಯ ಲಭಿಸಲಾರದು ಎಂದು ಚೆನ್ನಮ್ಮ ಬಿದನೂರನ್ನು ಬಿಡಬೇಕಾಯಿತು. ಬೇರೆ ಮಾರ್ಗವಿಲ್ಲದೆ, ರಾಜ್ಯ ಭಂಡಾರದ ಸಂಪತ್ತನ್ನು, ಬೆಲೆಯುಳ್ಳ ವಸ್ತುಗಳನ್ನು ಭುವನಗಿರಿಗೆ ಸಾಗಿಸಿದಳು  ಶತ್ರುಗಳು ಬಂದಾಗ ಅವರು ಖಾಲಿಯಾದ ಭಂಡಾರವನ್ನು ಕಂಡು ನಿರಾಸೆಯಾದರು.copy rights reserved (c) Dr.Laxmi g Prasad 

ದತ್ತು ಪ್ರಕರಣದ ಸಮಯದಲ್ಲಿ ರಾಣಿಗೂ ಅವರ ಪ್ರಧಾನಿಗೂ ವಿರಸವಾಗಿ ಪ್ರಧಾನಿ ತಿಮ್ಮಣ್ಣ ನಾಯಕ ರಾಣಿಯನ್ನು ಬಿಟ್ಟು ಹೋಗಿದ್ದನು. ಬಿದನೂರು ಸುಲ್ತಾನ ವಶವಾಯಿತು ಎಂದು ಅರಿತ ದೇಶಾಭಿಮಾನಿ ತಿಮ್ಮಣ್ಣ ರಾಣಿಯನ್ನು ಭೇಟಿ ಮಾಡಿ  ತನ್ನ ತಪ್ಪನ್ನು ಮನ್ನಿಸಬೇಕೆಂದು ಬಿನ್ನಹವಿತ್ತು ರಾಣಿಯ ಜೊತೆ ಕೊಡಿಕೊಂಡು ಮತ್ತೆ ಬಿದನೂರು ಕೋಟೆಗೆ ಮುತ್ತಿಗೆ ಹಾಕಿದರು. ದಟ್ಟವಾದ ಕಾಡಿನಲ್ಲಿ ಚೆನ್ನಮ್ಮನ ಕೈಗೆ ಸಿಕ್ಕ ಸುಲ್ತಾನನ ಸೈನ್ಯ ನುಚ್ಚು ನೊರಾಯಿತು. ಬಿದನೂರು ಮತ್ತೆ ಚೆನ್ನಮ್ಮರ ವಶವಾಯಿತು. ಸರ್ವಾನುಮತದಿಂದ ಕೆಳದಿಯ ಪ್ರಜೆಗಳು ರಾಣಿಯ ಆಡಳಿತವನ್ನು ಒಪ್ಪಿಕೊಂಡರು

ಹೀಗೆ 1670ರಿಂದ 1696ರವರೆಗೆ ಧರ್ಮದಿಂದ ದಕ್ಷತೆಯಿಂದ ರಾಜ್ಯವಾಳಿ, ಕೀರ್ತಿ ವೈಭವಗಳಿಂದ ಬಾಳಿ  ಕಡೆಗೆ ರಾಜ್ಯವನ್ನು ದತ್ತು ಪುತ್ರನಿಗೆ ಒಪ್ಪಿಸಿ  ಶಿವ ಚಿಂತನೆಯಲ್ಲಿ ತೊಡಗಿದರು.ಇಲ್ಲಿಂದ ಮುಂದೆ ಕೆಳದಿ ಸಂಸ್ಥಾನವನ್ನು ಮುನ್ನಡೆಸಿದವನು ಬಸವಪ್ಪ ನಾಯಕ copy rights reserved

ಇವನು ಮಂಗಳೂರು ಸೀಮೆ ಸೇರಿದಂತೆ ಕೆಳದಿಯ ಅಲ್ಲ ಪ್ರದೇಶಗಳ ಆಳ್ವಿಕೆಯನ್ನು ದಕ್ಷವಾಗಿ ಮಾಡಿದ್ದನು .

ಕೆಳದಿಯನ್ನು ಆಳಿದ ಕೊನೆಯ ರಾಣಿ ವೀರಮ್ಮಾಜಿ. ಅವಳ ದತ್ತು ಪುತ್ರ ಚೆನ್ನ ಬಸವ .ಆತನಿಗೆ ಆಕೆ ಪಟ್ಟ ಕಟ್ಟದೆ ಅಧಿಕಾರ ಕೊಡದೆ ಸತಾಯಿಸಿದಳು ಎಂಬ ಅಭಿಪ್ರಾಯವೂ ಇದೆ .ಆತನೊಂದಿಗೆ ಸೇರಿಕೊಂಡು ಆತನಿಗೆ ಕೆಳದಿ ರಾಜ್ಯ ಕೊಡಿಸುತ್ತೇನೆಂದು ಹೇಳಿ ಆತನ ಸಹಾಯದಿಂದ ಮದಕರಿ ನಾಯಕ ಹಾಗೂ ಹೈದರಾಲಿ ಕೆಳದಿಯನ್ನು ವಶಪಡಿಸಲು ಯತ್ನಿಸಿದರೆಂದೂ ಐತಿಹ್ಯವಿದೆcopy rights reserved (c) Dr.Laxmi g Prasad 

.

     ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ 14ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:

ಇರುತಿರುತುಂ ತದ್ಧರಣೀ

ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ

ತರದೊಳ್ ಪರಿಣಯಮಿಲ್ಲದೆ

ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)

     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ.copy rights reserved (c) Dr.Laxmi g Prasad 

ಒಟ್ಟಿನಲ್ಲಿ ಕೆಳದಿಯ ಇತಿಹಾಸದಲ್ಲಿ ಚೆನ್ನ ಬಸವನಾಯಕ ಓರ್ವ ದುರಂತ ನಾಯಕನಾಗಿ ಕಂಡು ಬರುತ್ತಾನೆ

ಇಲ್ಲಿ ಇಬ್ಬರು ಬಸವಪ್ಪ ನಾಯಕರು ಒಬ್ಬ ಚೆನ್ನ ಬಸವನಾಯಕ ರೂ ಆಳ್ವಿಕೆ ನಡೆಸಿರುವುದು ಕಂಡು ಬರುತ್ತದೆ

ಬಸ್ತಿ ನಾಯಕ ನೇಮದಲ್ಲಿ ದೈವವು ತನ್ನನ್ನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದು ಕೊಳ್ಳುತ್ತದೆ.ತಾನು ಮಂಗಳೂರು ಸೀಮೆ ಹಿಡಿದು ಕೊಂಡೆ ಎಂದೂ ಹೇಳುತ್ತದೆ.   

ಸಾಮಾನ್ಯವಾಗಿ ಮೊದಲ ಅರಸ ಅಥವಾ ಕೊನೆಯ ಅರಸು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಕಂಡು ಬರುತ್ತದೆ.ಅಲ್ಲದೆ ದುರಂತ ಮತ್ತು ದೈವತ್ವ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. copy rights reserved (c) Dr.Laxmi g Prasad ಇಲ್ಲಿ ಬಸವಪ್ಪ ನಾಯಕ ಮೊದಲ ಅರಸನಲ್ಲ.

ಚೆನ್ನ ಬಸವ ಕೆಳದಿಯ ಕೊನೆಯಅರಸ ಜೊತೆಗೆ ತಾಯಿಯಿಂದಲೇ ಕಿರುಕುಳಕ್ಕೆ ಒಳಗಾದವನು .ಕೇವಲ ಹದಿನಾಲ್ಕು ಅಥವಾ ಹತ್ತೊಂಬತ್ತು ವರ್ಷಕ್ಕೆ ಮರಣವಪ್ಪಿದವನು.ಹಾಗಾಗಿ ಈತ ಬಾಲಕನೇ ಆಗಿರುವುದರಿಂದ ಬಾಲ ಬಂಟ ಬಸಪ್ಪ ನಾಯಕ ಎಂದು ಕರೆಸಿಕೊಳ್ಳುವ ಬಸ್ತಿ ನಾಯಕ ಹೆಸರಿನ ದೈವ ಮೂಲತ ಈತನೇ ಆಗಿರಬಹುದು.ಈ ದೈವದ ಕೈಯಲ್ಲಿನ ಕಟ್ಟಿ ಗುರಾಣಿ ಕಿರೀಟವನ್ನು ಹೋಲುವ ತಲೆ ಪಟ್ಟ ಮೀಸೆ ಗಾಂಭೀರ್ಯಗಳು ಈತನ ಅರಸು ಮೂಲವನ್ನು ಸಮರ್ಥಿಸುತ್ತದೆ ಅದೇ ರೀತಿ ಆಡುವ ಭಾಷೆ ಕನ್ನಡವಾಗಿದ್ದು ಈತ ಮೂಲತ ತುಳುಭಾಷಿಗನಲ್ಲ ಎಂದು ತಿಳಿಸುತ್ತದೆ .ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಇದಮಿತ್ಥಂ ಎಂದು ಹೇಳಲು ಸಾಧ್ಯವಾಗಬಹುದು copy rights reserved

Tuesday, 12 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 206-207 :ಕಲೆಂಬಿತ್ತಾಯಮತ್ತು ಭಟ್ರು ನಾಯಕ (c)ಡಾ.ಲಕ್ಷ್ಮೀ ಜಿ ಪ್ರಸಾದ


                    
                                                    ಚಿತ್ರ ;ಅಂತರ್ಜಾಲ
ಪುತ್ತೂರು ತಾಲೂಕಿನ ರಾಮಕುಂಜೇಶ್ವರ ದೇವಾಲಯದಲ್ಲಿ ಆರಾಧನೆಗೊಳ್ಳುವ ಕಲೆಂಬಿತ್ತಾಯ ಮತ್ತು ಭಟ್ರು ನಾಯಕ ಅಪರೂಪದ ಎರಡು ಭೂತಗಳು'
ಈ ದೈವಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ .ಶ್ರೀಯುತ ವೆಂಕರಮಣ ಉಪಾಧ್ಯಾಯರು "ಕಲೆಂಬಿ ತ್ತಾಯ ನೂರಿತ್ತಾಯ ಕುಟುಂಬದವರ ಮನೆ ದೈವ ಎಂದು ಹೇಳಿದ್ದಾರೆ .ಇದು ಅವರ ಧರ್ಮ ದೈವ ಎಂದು ಕುಟ್ಟಿ ಪರವ ಅವರು ಹೇಳಿದ್ದಾರೆ.
ನೂರಿತ್ತಾಯ ಅವರ ಕ್ತುಮ್ಬದ ಹಿರಿಯರು ಏಳು ಗಂಗೆ ಗೆ ಅವರ ಹಿರಿಯರ ಸಂಸ್ಕಾರಕ್ಕಾಗಿ ಹೋಗಿ ಬರುವಾಗ ಈ ದೈವ ಅವರೊಂದಿಗೆ ಹಿಂಬಾಲಿಸಿ ಬಂದು ಅವರ ಮನೆ ದೇವರ ಬಲಭಾಗದಲ್ಲಿ ನೆಲೆ ನಿಲ್ಲುತ್ತದೆ .
ಕಲೆಂಬಿ ತ್ತಾಯ ಎಂಬುದು ಶಿವಳ್ಳಿ ಬ್ರಾಹ್ಮಣರ ಒಂದು ಉಪನಾಮ ಕೂಡ .ಓರ್ವ ಕಲೆಂಬಿತ್ತಾಯ ಉಪನಾಮವಿರುವ ಬ್ರಾಹ್ಮಣ ಯಾವುದೊ ಕಾರಣಕ್ಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಭಟ್ರು ನಾಯಕ ಎನ್ನುವ ದೈವದ ಅಬಗ್ಗೆ ಕೂಡ ಯಾವುದೊಂದು ಮಾಹಿತಿ ಲಭ್ಯವಾಗಿಲ್ಲ.ಈ  ಬಗ್ಗೆ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

Sunday, 26 April 2015

ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ "ಗಣ್ಯ ಲೇಖಕಿ "ಪುರಸ್ಕಾರ

 ಇಂದು ದಿನಾಂಕ 26/04 /2015 ರಂದು ಬೆಳಗ್ಗೆ ಬೆಂಗಳೂರಿನ ಎನ್ ಆರ್ ಕಾಲೋನಿ ಯಲ್ಲಿರುವ ಬಿ.ಎಂ ಶ್ರೀ ಪ್ರತಿಷ್ಠಾನದ ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ ಗಣ್ಯ ಲೇಖಕಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು .ಖ್ಯಾತ ಕತೆಗಾರ್ತಿ ಸುನಂದಾ ಕಡಮೆಯರಿಗೆ ಗಣ್ಯ ಲೇಖಕಿ ಪುರಸ್ಕಾರವನ್ನು ಚೆನ್ನೈ ದೂರ ದರ್ಶನ  ಕೇಂದ್ರದ ನಿರ್ದೇಶಕರಾಗಿರುವ ಸಿ ಎನ್ ರಾಮ ಚಂದ್ರ ಅವರು ನೀಡಿದರು .
ವಿಮರ್ಶಕ ರಾಮ ರಾವ್ ಕುಲಕರ್ಣಿ ಅವರು ಸುನಂದಾ ಕಡಮೆಯವರ ಕೃತಿಗಳ ಬಗ್ಗೆ ಮಾತನಾಡಿದರು ,ವಿಜಯ ಸುಬ್ಬರಾಜ್ ಅವರು ಎಲೆ ಮರೆಯ ಕಾಯಿಯಂತೆ ಇದ್ದು ಮಹತ್ತರ ಸಾಹಿತ್ಯ ಸಂಶೋಧನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಇರುವವರನ್ನು ಗುರುತಿಸುವುದು ತಮ್ಮ ಉದ್ದೇಶ ಎಂದು ತಾವು ದತ್ತು ನಿಧಿ ಸ್ಥಾಪಿಸಿದುದರ ಬಗ್ಗೆ ತಮ್ಮ ಆಶಯವನ್ನು ತಿಳಿಸಿದರು.
ಸಿ ಎನ್ ರಾಮಚಂದ್ರ ಅವರು ಸುನಂದಾ ಕಡಮೆಯವರ ಕೃತಿಗಳನ್ನು ವಿಮರ್ಶಿಸುತ್ತಾ ,ಪುರಸ್ಕಾರದ ಅಗತ್ಯ ಹಾಗೂ ಮಹತ್ವದ ಬಗ್ಗೆ ಮಾತನಾಡಿದರು.
ಬಿ ಎಂ ಶ್ರೀ ಪ್ರತಿಷ್ಥಾನದ ಅಧ್ಯಕ್ಷರಾಗಿರುವ ಪಿ ವಿ ನಾರಾಯಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು,ಕಾರ್ಯದರ್ಶಿಗಳಾದ ರವೀಂದ್ರ ಅವರು ಧನ್ಯವಾದ ಅರ್ಪಿಸಿದರು .ಇನ್ನೋರ್ವ ಕಾರ್ಯದರ್ಶಿಗಳಾದ ಪ್ರೊ.ಅಬ್ದುಲ್ ಬಷೀರ್ ಅವರು ಕಾರ್ಯಕ್ರಮ ನಿರ್ವಹಿಸಿದರು

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ನೋಂದಣಿಗೊಂಡಿರುವ ಬಿ ಎಂ ಶ್ರೀ ಪ್ರತಿಷ್ಠಾನ ,ಎಂ ವಿ ಸೀ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಮೂಲಕ ನಾನು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ನನ್ನ ಮೊದಲ ಪಿಎಚ್ ಡಿ ಪದವಿಯನ್ನು ಪಡೆದಿದ್ದು ,ಈ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಹಾಗೂ ಸದಸ್ಯೆ ಕೂಡ ಆಗಿರುತ್ತೇನೆ ,ನನ್ನ ಸಂಶೋಧನಾ ಅಧ್ಯಯನ ಹಾಗೂ ಮೌಖಿಕ ಪರೀಕ್ಷೆ ಸಂದರ್ಭದಲ್ಲಿ ಡಾ.ವಿಜಯ ಸುಬ್ಬರಾಜ್ ಅವರು ನಮಗೆ ಪೂರ್ಣ ಬೆಂಬಲ ನೀಡಿ ಆತ್ಮ ವಿಶ್ವಾಸ ತುಂಬಿದ್ದನ್ನು ನಾನು ಮರೆಯಲಾರೆ .

ಎಲ್ಲರ ಮಾತುಗಳನ್ನು ಆಲಿಸಲು ಕೆಳಗೆ ಕ್ಲಿಕ್ ಮಾಡಿ
Vocaroo Voice Message



-ಲಕ್ಷ್ಮೀ ಜಿ ಪ್ರಸಾದ ,
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ,ದ.ಕ ಜಿಲ್ಲೆ









Tuesday, 21 April 2015

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿ...: ಹೆ ಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣ...

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...

 


  ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...: ಹೆ ಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ  ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣ...
http://vkkadaba.blogspot.in/2015/03/laxmigprasad.html?spref=tw