Friday, 1 November 2013

ತುಳುವರ ಬಲಿಯೇಂದ್ರ ಯಾರು ?(c)ಡಾ.ಲಕ್ಷ್ಮೀ ಜಿ ಪ್ರಸಾದ




ತುಳುನಾಡಿನಲ್ಲಿ ಆದಿ ಒಡೆಯ ಭೂಮಿಪುತ್ರಎಂಬ ಉಕ್ತಿ ಪ್ರಚಲಿತವಿದೆ. ಆದಿ ಒಡೆಯ ಎಂದು ಬಲಿಯೇಂದ್ರನಿಗೂ, ನಾಗನಿಗೂ ಹೇಳುತ್ತಾರೆ. ಬಲಿಯೇಂದ್ರನನ್ನು ಭೂಮಿಪುತ್ರ ಎಂದೂ ಹೇಳುತ್ತಾರೆ. ಈ ನುಡಿಯ ಪ್ರಕಾರ ತುಳುನಾಡಿನ ಮೂಲಪುರುಷ ಬಲಿಯೇಂದ್ರ ಎಂದು ಸ್ಪಷ್ಟವಾಗುತ್ತದೆ. ಆತನನ್ನು ಒಡೆಯ ಎಂದು ಸ್ವೀಕರಿಸಲಾಗಿದೆ. ಉಲ್ಲಾಯ ಎಂಬುದು ಒಡೆಯ ಎಂಬ ಅರ್ಥವನ್ನೇ ಸೂಚಿಸುತ್ತದೆ. ಬೆರ್ಮರನ್ನು ಉಲ್ಲಾಯ, ಉಳ್ಳಾಕುಲು ಎಂದೇ ಸಂಬೋಧಿಸಲಾಗಿದೆ. ಬಲಿಯೇಂದ್ರನ ಆಯುಧ, ವಾಹನ ರೂಪ, ಆಚರಣೆಗಳು ಮೊದಲಾದವುಗಳು ಬಲಿಯೇಂದ್ರನೇ ತುಳುನಾಡಿನ ಹಿರಿಯ ಎಂಬರ್ಥದಲ್ಲಿ ಬೆರ್ಮರ್ಆಗಿ ಆರಾಧಿಸಲ್ಪಡುವ ಸಾಧ್ಯತೆಯನ್ನು ತೋರಿಸುತ್ತವೆ.    (c)ಡಾ.ಲಕ್ಷ್ಮೀ ಜಿ ಪ್ರಸಾದ   ನಾಗಾರಾಧನೆಯ ಒಂದು ಪದ್ಧತಿಯಾಗಿರುವ ಕಂಬಳದಲ್ಲಿ ಪೂಕರೆ ಹಾಕುವಾಗ ಬಲೀಂದ್ರನಿಗಾಗಿ ದೀಪ ಬೆಳಗಿ ಇಡುತ್ತಾರೆ. ಪೂಕರೆ ಕಂಬ ನೆಡುವಾಗ ಕೂಹಾಕುತ್ತಾರೆ. ಕಂಬಳ ಕೋರಿಯ ನೇಮದ ಭೂತನರ್ತಕನು ದೈವ ಆಯುಧಗಳನ್ನು ಬಲೀಂದ್ರನ ಸಂಕೇತವಾಗಿರುವ ಬಲಿಕಿ ಮರದ ಬುಡದಲ್ಲಿ ಇಟ್ಟು ಪೂಜಿಸಿ, ತೆಗೆದುಕೊಳ್ಳುವ ಸಂಪ್ರದಾಯ ಚೌಕೌರುಗುತ್ತು ಮೊದಲಾಡೆಗಳ ಪ್ರಚಲಿತವಿದೆ. ಆದ್ದರಿಂದ ಬಲೀಂದ್ರನ ಆರಾಧನೆಯು ನಾಗಾರಾಧನೆಯೊಂದಿಗೆ ಸೇರಿದಾಗ ನಾಗಬೆರ್ಮರ್ಎಂಬ ಸ್ವರೂಪವನ್ನು ಪಡೆದಿರುವ ಸಾಧ್ಯತೆ ಇಲ್ಲದಿಲ್ಲ. ಧರಣೇಂದ್ರ ಯಕ್ಷನಿಗೆ ವಾಮನಎಂಬ ಹೆಸರು ಕೂಡ ಇದೆ. ಬಲಿಯನ್ನು ಸೋಲಿಸಿದ ವಾಮನಕೂಡ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾನೆ. ಪರಸ್ಪರ ಸಂಸ್ಕ್ರತಿಯ ಸ್ವೀಕಾರ ಸಾಮಾನ್ಯವಾದ ವಿಚಾರವೇ ಆಗಿದೆ.
ತುಳುನಾಡು ಹಾಗೂ ತುಳುನಾಡಿಗೆ ಹೊಂದಿಕೊಂಡಿರುವ ಕೇರಳದ ಪ್ರದೇಶಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಆರಾಧನಾ ಪದ್ಧತಿ ಬಲೀಂದ್ರ ಆರಾಧನೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಲಿಯೇಂದ್ರ ತುಳುನಾಡನ್ನು ಆಳಿದ ಜನಾನುರಾಗಿ ರಾಜ. ಪುರಾಣದ ಪ್ರಕಾರ ಬಲಿ ಪ್ರಹ್ಲಾದನ ಮೊಮ್ಮಗ. ಅಪ್ರತಿಮವೀರ. ತನ್ನ ಶೌರ್ಯದಿಂದ ಇಂದ್ರನ ಗದ್ದುಗೆಯನ್ನು ವಶಪಡಿಸಿಕೊಂಡಿರುತ್ತಾನೆ. ಇಂದ್ರಾದಿ ದೇವತೆಗಳ ಪ್ರಾರ್ಥನೆಯಂತೆ. ವಿಷ್ಣು ವಾಮನಾವತಾರಿಯಾಗಿ, ಬ್ರಾಹ್ಮಣ ವಟುವಿನ ರೂಪದಲ್ಲಿ ಬಂದು ಬಲಿಯಲ್ಲಿ ಮೂರಡಿ ಜಾಗವನ್ನು ಯಾಚಿಸುತ್ತಾನೆ. ಮೊದಲ ಹೆಜ್ಜೆಯಲ್ಲಿ ಇಡೀ ಭೂಮಿಯನ್ನು ಎರಡನೇ ಹೆಜ್ಜೆಯಲ್ಲಿ ಮೂರೂ ಲೋಕವನ್ನು ವ್ಯಾಪಿಸುತ್ತಾನೆ. ವಾಮನಾವತಾರಿ ವಿಷ್ಣು. ಮೂರನೆಯ ಹೆಜ್ಜೆ ಇಡಲು ಜಾಗವಿಲ್ಲದಾಗುತ್ತದೆ. ಆಗ ಬಲಿ ತನ್ನ ತಲೆಯ ಮೇಲಿಡಲು ಹೇಳುತ್ತಾನೆ. ವಾಮನ ಅವನನ್ನು ಪಾತಾಳಲೋಕಕ್ಕೆ ತಳ್ಳುತ್ತಾನೆ. ವರ್ಷದಲ್ಲಿ ಒಂದು ಬಾರಿ ಭೂಮಿಗೆ ಬರುವಂತೆ ವರವನ್ನು ನೀಡುತ್ತಾನೆ ಎಂಬ ಕಥೆ ಪುರಾಣದಲ್ಲಿ ಇದೆ.
ಆದರೆ ತುಳುನಾಡಿನಲ್ಲಿ ಪ್ರಚಲಿತವಿರುವ ಬಲೀಂದ್ರ ಪಾಡ್ದನದಲ್ಲಿ ವಾಮನಾವತಾರದ ಸುಳಿವಿಲ್ಲ. ಇಬ್ಬರು ಬಾಲಬ್ರಹ್ಮಚಾರಿಗಳು ಬರುತ್ತಾರೆ. ದಾನ ಕೇಳುತ್ತಾರೆ ಎಂದು ಮಾತ್ರ ಇದೆ. ಅನಂತರ ಬಲಿಯನ್ನು ಒಡಕು ದೋಣಿಯಲ್ಲಿ ಕೂರಿಸಿ ಸಮುದ್ರದಲ್ಲಿ ನೂಕಿ ಬಿಟ್ಟ ಕಥೆ ಬಲೀಂದ್ರ ಪಾಡ್ದನದಲ್ಲಿದೆ.
ತುಳುನಾಡಿನ ಬಲೀಂದ್ರ ಆಚರಣೆಯಲ್ಲಿ ಬಲೀಂದ್ರನನ್ನು ಕೂಹಾಕಿ ಕರೆಯುತ್ತಾರೆ. ಇದನ್ನು ಬಲೀಂದ್ರ ಲೆಪ್ಪುಎನ್ನುತ್ತಾರೆ. ಅದೇ ರೀತಿ ಆ ದಿನ ಮನೆಯ ಮೂಲೆ ಮೂಲೆ, ಗುಡ್ಡದ ತುದಿಗೆ, ತೋಟ ಗದ್ದೆಯ ಮೂಲೆ ಮೂಲೆಯಲ್ಲಿ ದೀಪ ಹಿಡಿಯುವ ಪದ್ಧತಿ ಇದೆ. ಈ ಆಚರಣೆಯ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ ಬಲಿ ಚಕ್ರವರ್ತಿ ಮೋಸ ಹೋಗಿ ರಾಜ್ಯ ಕಳೆದುಕೊಂಡು ದಿಕ್ಕುತಪ್ಪಿ ಅಲೆಯುತ್ತಿರುವಾಗ, ಅವನ ಮೇಲಿನ ಪ್ರೀತಿಯಿಂದ ಪ್ರಜೆಗಳು ಕತ್ತಲಾದ ನಂತರ ಅವನನ್ನು ಹುಡುಕಿ ಅವನಿಗೆ ಅನ್ನಾಹಾರಗಳನ್ನು ನೀಡುತ್ತಿದ್ದರು. ಅದರ ಪ್ರತೀಕವಾಗಿ ಈಗ ಕೂಡ ಈ ಆಚರಣೆ ಇದೆ ಎಂದು ಅನೇಕ ಹಿರಿಯರು ಹೇಳುತ್ತಾರೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಆಲಡೆ, ಗರಡಿಗಳಲ್ಲಿ ಬಲಿಗೆ ದೀಪ ಇಡುತ್ತಾರೆ. ಬಹುತೇಕ ಶಿವ, ಸುಬ್ರಹ್ಮಣ್ಯ ಹಾಗೂ ನಾಗಬ್ರಹ್ಮ ದೈವಸ್ಥಾನಗಳಲ್ಲಿ ಬಲಿಯ ಬಲಿಕ್ಕಿ ಮರಇರುತ್ತದೆ. (ಚಿತ್ರ 85) ಉಜಿರೆಯ ಅನಂತನಾಥ ಬಸದಿಯಲ್ಲಿ ಕೂಡ ಬಲಿಗೆ ದೀಪ ಇಡುವ ಪದ್ಧತಿ ಇದೆ. ಇಲ್ಲಿ ಯಕ್ಷ ಬ್ರಹ್ಮ ಇರುವ ಕಾರಣ ಬಲಿಕ್ಕಿ ಮರ ಇದೆ ಎಂದು ಅಲ್ಲಿನ ಇಂದ್ರರು ಹೇಳುತ್ತಾರೆ.
ಕಂಬಳಕೋರಿಯಂದು ಗದ್ದೆ ಬದಿಯಲ್ಲಿ ಬಲಿಗೆ ದೀಪ ಇಡುತ್ತಾರೆ. ಉರವ ದೈವವನ್ನು ಬಲಿಯ ದೂತನೆಂದೂ ಹೇಳುತ್ತಾರೆ. ಉರವ ನಾಗಬ್ರಹ್ಮ ಸೇರಿಗೆಯ ದೈವವಾಗಿ ಕಾಣಿಸುತ್ತಾನೆ.
ಬಲಿ ಮೋಸ ಹೋಗಿ ಕಾಡುಮೇಡುಗಳಲ್ಲಿ ಅಲೆದಾಡಿದ್ದಾನೆ. ಅವನ ಪ್ರೀತಿಯೆ ಪ್ರಜೆಗಳು ಅವನನ್ನು ಹುಡುಕಿಕೊಂಡು ಹೋಗಿ ಅನ್ನಾಹಾರಗಳನ್ನು ನೀಡುತ್ತಿದ್ದರು ಎಂಬುದು ಬಲೀಂದ್ರನನ್ನು ಕೂ ಹಾಕಿ ಕರೆಯುವುದರಲ್ಲಿ ಸ್ಪಷ್ಟವಾಗುತ್ತದೆ. ದೂರದಲ್ಲಿ ಎಲ್ಲೋ ಅಡಗಿ ಕುಳಿತಿರುವ ಬಲೀಂದ್ರನನ್ನು ಕೂ ಹಾಕಿ ಹುಡುಕಿರಬಹುದು. ತುಳುನಾಡಿನ ಯಾರೋ ಒಬ್ಬ ಜನಾನುರಾಗಿ ರಾಜನಿಗೆ ಹೀಗಾಗಿರಬಹುದು. ಅದು ಬಲೀಂದ್ರ ಆಚರಣೆಯಲ್ಲಿ ವ್ಯಕ್ತವಾಗಿರಬಹುದು.
ಪೂಕರೆ ಹಾಕುವಾಗ ಕೂಡ ಕೂಹಾಕುವ ಪದ್ಧತಿ ಇದೆ.
ಆ ರಾಜ ಬೆರ್ಮೆರ್ಇರಬಹುದು ಬೆರ್ಮೆರ ಸ್ಥಾನಗಳು ಗುಡ್ಡಗಳಲ್ಲಿ ದಟ್ಟಕಾಡಿನಲ್ಲಿ ಇರುವುದು ಈ ಊಹೆಗೆ ಎಡೆ ಮಾಡಿಕೊಡುತ್ತದೆ.
ತುಳುನಾಡಿನ ಜನಾನುರಾಗಿ ಆ ರಾಜ ಉಳಿದುಕೊಂಡಿರುವ ಪ್ರದೇಶಗಳು ಬೆರ್ಮೆರ ತಾಣಗಳೆಂದು ಪೂಜಿಸಲ್ಪಟ್ಟವು ಎಂದು ಊಹಿಸಲು ಸಾಧ್ಯವಿದೆ. ಬೆರ್ಮೆರ್ ಎಂಬುದಕ್ಕೆ ಪೆರಿಯರ್ (ಹಿರಿಯರು) ಎಂಬ ಅರ್ಥವೂ ಇದೆ. ಸುಬ್ರಹ್ಮಣ್ಯನನ್ನು ಮಳೆಯಾಳದಲ್ಲಿ ಪೆರುಮಾಳ ಎಂದು ಕರೆಯುತ್ತಾರೆ. ಪೆರುಮಾಳ ಎಂದರೆ ಹಿರಿಯ ಎಂದರ್ಥ.
ಹಿರಿಯ ಅರ್ಥಾತ್ ಮೂಲ ರಾಜನ ಸ್ಥಾನ ಎಂಬರ್ಥದಲ್ಲಿ ಬೆರ್ಮೆರ್ ತಾಣಎಂಬುದು ಮೂಲಸ್ಥಾನ ಎಂದು ಪರಿಕಲ್ಪಿಸಲು ಸಾಧ್ಯವಿದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಈ ನಿಟ್ಟಿನಲ್ಲಿ ಯೋಚಿಸಿದಾಗ ತುಳುನಾಡಿನ ಮೂಲಪುರುಷ-ಜನಾನುರಾಗಿ ಅರಸು ದುರಂತಕ್ಕೀಡಾಗಿ ನಂತರ ದೈವತ್ವಕ್ಕೇರಿ ಬೆರ್ಮೆರ್ಆಗಿ ಆರಾಧನೆ ಪಡೆಯುತ್ತಿರಬಹುದು ಎಂದು ಊಹಿಸಬಹುದು.
ತುಳುನಾಡಿನ ಭೂತಾಳ ಪಾಂಡ್ಯನ ಐತಿಹ್ಯದಲ್ಲಿ ಮೊತ್ತ ಮೊದಲ ಬಾರಿಗೆ ಕುಂಡೋದರನೆಂಬ ಭೂತದ ವಿಷಯ ಬರುತ್ತದೆ. ದೇವಪಾಂಡ್ಯನ ಹಡಗಿನ ನಿರ್ಮಾಣ ಸಮಯದಲ್ಲಿ ಕಡಿದ ಮರಗಳಲ್ಲಿ ಒಂದರಲ್ಲಿ ಕುಂಡೋದರನೆಂಬ ಭೂತ ನೆಲೆಯಾಗಿತ್ತು. ಈ ಬಗ್ಗೆ ತಿಳಿಯದೆ ಮರ ಕಡಿದು ಹಡಗು ನಿರ್ಮಿಸಿದ್ದರು. ಆದರೆ ಏನೂ ಮಾಡಿದರೂ ಹಡಗನ್ನು ನೀರಿಗಿಳಿಸಲು ಸಾಧ್ಯವಾಗುವುದಿಲ್ಲ. ಆಗ ಹಡಗಿನೊಳಗಿನಿಂದ ಒಂದು ಭಯಂಕರವಾದ ಘರ್ಜನೆ ಕೇಳಿಸಿತು. ಹಡಗಿನೊಳಗಿನಿಂದ ನಾನು ಕುಂಡೋದರನೆಂಬ ದೈವ, ನನಗೆ ನರಬಲಿ ಬೇಕುಎಂದು ಧ್ವನಿ ಕೇಳಿಸುತ್ತದೆ. ಮಕ್ಕಳನ್ನು ಬಲಿ ಕೊಡಲು ಒಪ್ಪದ ದೇವಪಾಂಡ್ಯನ ಮಡದಿ ಮಕ್ಕಳೊಂದಿಗೆ ತವರು ಮನೆಗೆ ಹೋಗುತ್ತಾಳೆ. ದೇವಪಾಂಡ್ಯನ ತಂಗಿ ತನ್ನ ಮಗ ಜಯಪಾಂಡ್ಯನನ್ನು ಬಲಿ ಕೊಡಲು ಸಿದ್ಧವಾಗುತ್ತಾಳೆ. ಆಗ ಪ್ರಸನ್ನವಾದ ದೈವ ನರಬಲಿ ಬೇಡ ಎಂದು ಹೇಳುತ್ತದೆ. ನಂತರ ಜಯಪಾಂಡ್ಯನೇ ಮುಂದೆ ಭೂತಾಳಪಾಂಡ್ಯನೆಂಬ ಹೆಸರು ಪಡೆದು, ಕುಂಡೋದರ ದೈವ ಅನುಗ್ರಹದಿಂದ ರಾಜನಾಗಿ ವೈಭವದಿಂದ ಬಾಳುತ್ತಾನೆ. ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ.15 ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು. ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಇನ್ನು ಕುಂಡೋದರ ಎನ್ನುವ ದೈವದ ಆರಾಧನೆ ತುಳುನಾಡಿನಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಕುಂಡೋದರಆವಿರ್ಭಾವಗೊಂಡ ಸ್ಥಾನ ಎಂದು ಹೇಳಲಾಗುವ ಬಾರಕೂರಿನಲ್ಲಿ ಅಥವಾ ಕಂಡೇವು ಬೀಡಿನಲ್ಲಿ ಕುಂಡೋದರಎಂಬ ಹೆಸರಿನ ದೈವದ ಆರಾಧನೆ ಇಲ್ಲ. ಅದರೆ ಬಾರಕೂರಿನಲ್ಲಿ ಒಂದು ಮಹಿಷೇಶ್ವರ ದೇವಾಲಯವಿದೆ. ಹೆಸರು ಮಹಿಷೇಶ್ವರನೆಂದಾದರೂ ಗುಡಿಯಲ್ಲಿ ಕುದುರೆ ಏರಿರುವ ಬೆರ್ಮೆರ್ ಮೂರ್ತಿ ಇದೆ. ಸ್ವಲ್ಪ ದೂರದಲ್ಲಿ ಪಾಳು ಬಿದ್ದ ಭೂತಗುಡಿಯೊಳಗೆ ಮೂರಡಿ ಎತ್ತರದ ಲಿಂಗಾಕಾರದ ಕಲ್ಲು ಇದ್ದ ಬಗ್ಗೆ ಲೀಲಾ ಭಟ್ ತಿಳಿಸಿದ್ದಾರೆ.16 ಮಹೀಶಾಸುರ ಎಂದರೆ ಭೂಮಿಯ ಒಡೆಯನಾಗಿರುವ ಅಸುರ ಎಂಬುದೇ ಕಾಲಾಂತರದಲ್ಲಿ ಮಹಿಷಾಸುರ ಎಂದಾಗಿರುವ ಸಾಧ್ಯತೆ ಇದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬಾರಕೂರು ಅರಸರ ವಂಶಜರು ಇರುವ ಕಂಡೇವು ಬೀಡಿನಲ್ಲಿ ಕೂಡ ಕುಂಡೋದರ ಎಂಬ ಹೆಸರಿನ ದೈವಕ್ಕೆ ಸ್ಥಾನವಿಲ್ಲ. ಆದರೆ ಇಲ್ಲಿ ಬೆರ್ಮೆರ್ ಹಾಗೂ ಉಳ್ಳಾಯನ ಆರಾಧನೆ ಇದೆ. ಬೆರ್ಮೆರ್ಎಂಬ ಪದಕ್ಕೆ ಪೆರಿಯರ್, ಅಂದರೆ ಹಿರಿಯ ಎಂಬ ಅರ್ಥವೂ ಇದೆ. ಅಸುರ ಕುಲದ ಹಿರಿಯ ಎಂಬ ಅರ್ಥದಲ್ಲಿ ಬಲಿಯೇಂದ್ರನೇ ಬೆರ್ಮೆರ್ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರ್‍ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ಬೆರ್ಮೆರ್ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ಬ್ರಹ್ಮನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ಬೆರ್ಮೆರ್ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ಬೆರ್ಮೆರ್ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.(c)ಡಾ.ಲಕ್ಷ್ಮೀ ಜಿ ಪ್ರಸಾದ
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ಬೆರ್ಮೆರ್ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.
ಪುರಾಣ ಹಾಗೂ ಜನಪದ ನಂಬಿಕೆಯ ಪ್ರಕಾರ ಬಲಿಯೇಂದ್ರನ ಆಯುಧ ಬಿಲ್ಲು-ಬಾಣ. ಕೇರಳದ ಓಣಂ ಸಂದರ್ಭದಲ್ಲಿ ಚಿತ್ರಿಸುವ ಬಲಿಯೇಂದ್ರನಿಗೆ ನವಿಲು ವಾಹನವಾಗಿರುತ್ತದೆ. ಕೇರಳದ ಪೂಕ್ಕಳಂನ ಬಲಿಯೇಂದ್ರನ ಚಿತ್ರವು ನಾಗಮಂಡಲ ಢಕ್ಕೆಬಲಿಗಳಲ್ಲಿ ವೈದ್ಯರು ಬರೆಯುವ ಬ್ರಹ್ಮಯಕ್ಷನನ್ನು ಹೋಲುತ್ತದೆ.
ಬೆರ್ಮೆರ್ ಕುಲದೈವವಾಗಿರುವ ಮುಗೇರ ದೈವಗಳ ಆಯುಧವನ್ನು ಬಲಿಯ ಮರದ ಬುಡದಿಂದ ತೆಗೆದುಕೊಳ್ಳುತ್ತಾರೆ. ಎಲ್ಲ ಸುಬ್ರಹ್ಮಣ್ಯ ದೇವಾಲಯಗಳಲ್ಲಿ, ನಾಗಾಲಯಗಳಲ್ಲಿ ಬ್ರಹ್ಮಲಿಂಗೇಶ್ವರ ದೇವಾಲಯಗಳಲ್ಲಿ ಗರಡಿಗಳಲ್ಲಿ ಆಲಡೆಗಳಲ್ಲಿ ಹಾಗೂ ಬ್ರಹ್ಮಯಕ್ಷನ ಸಾನ್ನಿಧ್ಯವಿರುವ ಬಸದಿಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಬಲಿಯ ಮರವನ್ನು ಇಟ್ಟು, ಬಲೀಂದ್ರ ಲೆಪ್ಪು ಮೂಲಕ ಬಲಿಯೇಂದ್ರನನ್ನು ಆರಾಧಿಸುತ್ತಾರೆ.
ಪ್ರಳಯದ ನಂತರ ಬೆರ್ಮೆರ್ ಉದಿಸಿ ಬರುವ ಕಾಲದಲ್ಲಿ ನೆಕ್ಕಿಯಡಿಯಲ್ಲಿ ಆಟ ತುಂಬೆಯಡಿಯಲ್ಲಿ ಕೂಟವಾಗುತ್ತದೆ ಎಂದು ಬೆರ್ಮರ ಬೀರ ಪಾಡ್ದನದಲ್ಲಿ ಹೇಳಿದೆ. ಅ(c)ಡಾ.ಲಕ್ಷ್ಮೀ ಜಿ ಪ್ರಸಾದದೇ ರೀತಿ ತೆಂಕದಿಕ್ಕಿನಲ್ಲಿ ಸೆಲ್ಯೇಂದ್ರ ಕುಮಾರ ಹುಟ್ಟಿದ ಎಂದೂ ಪಾಡ್ದನ ತಿಳಿಸುತ್ತದೆ. ಬಲಿಯೇಂದ್ರನನ್ನೇ ಸೆಲ್ಯೇಂದ್ರ ಎಂದು ಹೇಳುತ್ತಾರೆ.
ಬಲಿಯೇಂದ್ರ ಲೆಪ್ಪಿನ ಕೊನೆಯಲ್ಲಿ ನೆಕ್ಕಿಯಡಿಯಲ್ಲಿ ಆಟ, ತುಂಬೆಯಡಿಯಲ್ಲಿ ಕೂಟ ಆಗುವಾಗ ಭೂಮಿಗೆ ಹಿಂತಿರುಗಿ ಬಾ ಎಂದು ಹೇಳಲಾಗಿದೆ. ಈ ಎಲ್ಲ ಸಾಮ್ಯತೆಗಳು ಕಾಕತಾಳೀಯವಲ್ಲ.ತುಳುವರ ಹಿರಿಯ ರಾಜ ಬೆರ್ಮೆರ್ ಮತ್ತು ಬಲೀಂದ್ರ ಒಬ್ಬನೇ ಎಂಬ ಸಾಧ್ಯತೆಯತ್ತ ಇವು ಬೊಟ್ಟು ಮಾಡುತ್ತವೆ(c)ಡಾ.ಲಕ್ಷ್ಮೀ ಜಿ ಪ್ರಸಾದ

 ಬಲೀಂದ್ರ ಲೆಪ್ಪು
                                ಕರ್ಗಲ್ಲ್ ಕಾಯಾನಗಾ, ಬೊಲ್ಗಲ್ಲ್ ಪೂವಾನಗಾ
                                ಉರ್ದು ಮದ್ದೊಲಿ ಆನಗಾ, ಗೊಡ್ಡೆರ್ಮೆ ಗೋಣೆ ಆನಗಾ
                                ಉಪ್ಪು ಕರ್ಪೂರಾನಗಾ, ಜಾಲ್‍ಪಾದೆ ಆನಗಾ
                                ತುಂಬೆದಡಿಟ್ಟ್ ಕೂಟ ಆನಗಾ, ನೆಕ್ಕಿದಡಿಟ್ಟ್ ಆಟ ಆನಗಾ
                                ದಂಬೆಲ್‍ಗ್ ಪಾಂಪು ಪಾಡ್ನಗಾ, ಅಲೆಟ್ಪ್ ಬೊಲ್ಯನೈ ಮುರ್ಕುನಗಾ
                                ಎರು ದಡ್ಡೆ ಆನಗಾ ಗುರುಗುಂಜಿದ ಕಲೆ ಮಾಜಿನಗಾ
                                ಮಂಜೊಲ್ ಪಕ್ಕಿ ಮೈ ಪಾಡ್ನಗ, ಕೊಟ್ರುಂಞ ಕೊಡಿ ಯೇರ್ನಗಾ
                                ದಂಟೆದಜ್ಜಿ ಮದ್ಮಲಾನಗ, ಕಲ್ಲಕೋರಿ ಕೆಲೆಪುನಗಾ
                                ನಂದಿಕೋಲು, ಮುಕ್ಕುರು ದಕ್‍ನಗಾ
                                ಬೊಲ್ಲ ಮಲೆ, ಸಲ್ಲ ಮಲೆ ಒಂಜಾನಗಾ
                                ಮೂಜಿ ದಿನತ ಉಚ್ಚಯ ಮೂಜಿ ದಿನತ ಬಲಿ
                                ಕಂಡ ಕಂಡ ತುಡಾರ್ ತೂವರೆ ಆಜಿ ದಿನತ ಪೊಲಿ ಕೊನವರೆ
                                ಆವೂರ ಬಲಿಕನಲ ಈ ಊರ ಪೊಲಿ ಕೊನೊಲ ಬಲೀಂದ್ರ
                                ಅರಕ್‍ದ ಒಟ್ಟೆ ಓಡೊಡು ಮಯಣದ ಮೋಂಟು ಜಲ್ಲೊಡು
                                ಪೊಟ್ಟು ಗಟ್ಟಿ ಪೊಡಿ ಬಜಿಲ ಪೊಲಿ ಕೊನೊವೊರೆ
                                ಕೊಟ್ಟುಗು ಗೊಂಡೆ ಪೂ ಕಟ್‍ದ್ ಬಲ ಬಲೀಂದ್ರ
ಎಂದು ಕರೆದಾಗ ಕೂ ..... ಕೂ ..... ಕೂಎಂದು ಸೇರಿದವರು ಮೂರು ಸಲ ಕೂಹಾಕುತ್ತಾರೆ.
                ಕಪ್ಪು ಕಲ್ಲು ಕಾಯಿ ಆಗುವಾಗ ಬಿಳಿ ಕಲ್ಲು ಹೂ ಆಗುವಾಗ ಉದ್ದು ಮದ್ದಳೆ ಆಗುವಾಗ, ಗೊಡ್ಡು ಎಮ್ಮೆ ಕೋಣ ಆಗುವಾಗ, ಉಪ್ಪು ಕರ್ಪೂರ ಆಗುವಾಗ, ಅಂಗಳ ಪಾದೆ ಆಗುವಾಗ, ತುಂಬೆ ಗಿಡದ ಅಡಿಯಲ್ಲಿ ಕೂಟ ಆಗುವಾಗ, ನೆಕ್ಕಿಯ ಗಿಡದಡಿಯಲ್ಲಿ ಆಟ ಆಗುವಾಗ, ಗದ್ದೆಯ ಸೀಳು ಪಾಪು ಹಾಕುವಷ್ಟು ದೊಡ್ಡದಾಗುವಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ, ಕೋಣ ದಡ್ಡ ಆಗುವಾಗ, ಗುರುಗುಂಜಿಯ ಕಪ್ಪು ಕಲೆ ಮಾಡುವಾಗ (ಮೈ ಅಂದರೆ ಕಪ್ಪು) ಕೊಟ್ರುಂಞ ದೇವರಿಗೆ ಧ್ವಜಾರೋಹಣ ಆಗುವಾಗ, ದಂಟೆ ಹಿಡಿಯುವಂತಹಾ ಮುಪ್ಪಿನ ಮುದುಕಿ ಮದುಮಗಳಾಗುವಾಗ, ಕಲ್ಲಿನ ಕೋಳಿ ಕೂಗುವಾಗ, ನಂದಿಕೋಲು ಬುಸುಗುಡುವಾಗ, ಬೊಲ್ಲ ಮಲೆ ಸಲ್ಲ ಮಲೆಗಳು ಒಂದಾಗುವಾಗ, ಮೂರು ದಿನದ ಉತ್ಸವ ಮೂರು ದಿನದ ಬಲಿ, ಗದ್ದೆ ಗದ್ದೆ ಸೊಡರು ನೋಡಲು ಆರು ದಿನದ ಪೊಲಿ ಕೊಂಡು ಹೋಗಲು ಬಾ. ಆ ಊರ ಬಲಿ ಕೊಂಡು ಬಾ, ಈ ಊರ ಪೊಲಿ ಕೊಂಡು ಹೋಗು.
                ಅರಗಿನ ಟೊಳ್ಳು ದೋಣಿಯಲ್ಲಿ ಮೇಣದ ದೊಂಕು ಜಲ್ಲೆಯಲ್ಲಿ
                ಪೊಟ್ಟು ಗಟ್ಟಿ ಹುಡಿ ಅವಲಕ್ಕಿಯ ಪೊಲಿ ಕೊಂಡು ಹೋಗಲು
                ದೋಣಿಯ ಮೂಲೆಗೆ ಗೊಂಡೆ ಹೂ ಕಟ್ಟಿಕೊಂಡು ಬಾ ಬಲಿಯೇಂದ್ರಾ
                                                                                                                ಕೂ ... ಕೂ ... ಕೂ ...
Copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

13 comments:

  1. ಒಟ್ಟಿನಲ್ಲಿ ಲೇಖನದ ವಾದವೇನು?

    ReplyDelete
    Replies
    1. ನಿಮ್ಮ ಆಸಕ್ತಿಗೆ,ಕುತೂಹಲಕ್ಕೆ ಅಭಿನಂದನೆಗಳು ಸಂತೋಷ್ ಶೆಟ್ಟಿ ಅವರೇ ,ತುಳುವರ ಬಲೀಂದ್ರ ಪುರಾಣದ ಬಲೀಂದ್ರನಲ್ಲ ,ತುಳುವರ ಅಧಿ ದೈವ ಬೆರ್ಮೆರ್ ಮಾತು ತುಳುವರ ಬಲೀಂದ್ರ ಇಬ್ಬರೂ ಒಬ್ಬನೇ.ಬೆರ್ಮೆರ್ ಎಂದರೆ ಹಿರಿಯ ಎಂದರ್ಥ .ತುಳುವರ ಹಿರಿಯ ಜನಾನುರಾಗಿ ರಾಜ ಯಾವುದೋ ಮೋಸಕ್ಕೆ ಒಳಗಾಗಿ ರಾಜ್ಯವನ್ನು ಕಳೆದು ಕೊಂಡು ಕಾಡು ಮೇಡು ಅಲೆದಾಡಿದ್ದಾನೆ..ಆತನ ಕಥೆ ಪುರಾಣದ ಬಲೀನ್ದ್ರನ ಕಥೆಯೊಂದಿಗೆ ಸೇರಿ ಹೋಗಿದೆ.ತುಳುವರ ಬಲಿಂದ್ರ ಮತ್ತು ಬೆರ್ಮೆರ್ ಒಂದೇ ಶಕ್ತಿ/ವ್ಯಕ್ತಿ ಆಗಿರುವ ಸಾಧ್ಯತೆ ಇದೆ ಎಂಬುದು ನನ್ನ ಅಭಿಪ್ರಾಯ .ಇದು ನನ್ನ PhD ಮಹಾ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನದ ಒಂದು ಸಣ್ಣ ತುಣುಕು ಹೆಚ್ಚಿನ ಮಾಹಿತಿ ನನ್ನ ಥೀಸಿಸ್ ನಲ್ಲಿದೆ ,ಈಗ ಅದು ಪ್ರಕಟಣೆಗೆಯಾಗುತ್ತಿದೆ ,ನಿಮ್ಮ ಬೆಂಬಲ ಪ್ರೋತ್ಸಾಹ ಸದಾ ಇರಲಿ ,ಧನ್ಯವಾದಗಳು

      Delete
  2. ಉತ್ತಮವಾದ ಲೇಖನ. ಇಲ್ಲಿ ಕೆಲವೊಂದು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಪುರಾಣದ ಬಲೀಂದ್ರನ ಕಥೆಗೂ, ಜನಪದೀಯ ಬಲೀಂದ್ರನ ಕಥೆಗೂ ಸಾಮ್ಯತೆಗಳಿರುವುದನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಇಬ್ಬರೂ ಬೇರೆ ಬೇರೆಯೇ ಆಗಿದ್ದಲ್ಲಿ, ಜನ ತಮ್ಮ ನೆಚ್ಚಿನ ರಾಜನನ್ನು ಅಸುರನೊಂದಿಗೆ ಸಮೀಕರಿಸಿದ್ದಾದರೂ ಏಕೆ? ಆರ್ಯ ದ್ರಾವಿಡರ, ದೇವ ದಾನವರ ಕಿತ್ತಾಟದ ಮುಂದುವರಿದ ಭಾಗ ಇದಾಗಿರಬಹುದೇ? ಅದೇ ರೀತಿ, ಜನ ’ಕೂ’ ಹಾಕುವ ಪದ್ದತಿ ಏಕಿದೆ? ಬಲಿಗೆ ಬಹಿಷ್ಕಾರ ಹಾಕಿದ ಮಂದಿಗೆ ತಿಳಿಯದಂತೆ ಸಂಕೇತ ರೂಪದಲ್ಲಿ ಆತನನ್ನು ಕದ್ದು ಕರೆಯುತ್ತಿದ್ದರಬಹುದೆ? ಇನ್ನಷ್ಟು ಒಳಸುಳಿಗಳು ಸಿಗುವುದಂತೂ ಸ್ಪಷ್ಟ!

    ReplyDelete
  3. ಆಸಕ್ತಿಯಿಂದ ಓದಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು LATHISH PALDANE,
    ಕೂ ಹಾಕುವ ಪದ್ಧತಿ ನೀವು ಹೇಳಿದಂತೆ ಸಂಕೇತ ರೂಪದಲ್ಲಿ ಆತನನ್ನು ಕರೆಯುತ್ತಿದ್ದುದು ಇರಬಹುದು ಎಂದು ನನಗೆ ಅನಿಸುತ್ತದೆ ,ಆರ್ಯ ದ್ರಾವಿಡರ ಸಂಘರ್ಷದ ಚಿತ್ರಣ ಇದು ಇರಬಹುದು ಬಲಿ/ಬೆರ್ಮೆರ್ ದ್ರಾವಿಡರ ಹಿರಿಯ ರಾಜ ಇದ್ದೀರಬಹುದು ,ತುಳುವರು ಬಲಿಯನ್ನು ಅಸುರ ಎಂಬ ಭಾವದಿಂದ ಕಂಡಿಲ್ಲ ,ಆತನನ್ನು ಭೂಮಿ ಪುತ್ರ ಆದಿ ಒಡೆಯ ಎಂದು ಕರೆದಿದ್ದಾರೆ .ಇದು ನನ್ನ PhD ಮಹಾ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನದ ಒಂದು ಸಣ್ಣ ತುಣುಕು ಹೆಚ್ಚಿನ ಮಾಹಿತಿ ನನ್ನ ಥೀಸಿಸ್ ನಲ್ಲಿದೆ ,ಈಗ ಅದನ್ನು ಬೆಂಗಳೂರಿನ ಪ್ರಚೇತ ಬುಕ್ ಹೌಸ್ ಇವರು ಪ್ರಕಟಣೆ ಮಾಡುತ್ತಿದ್ದಾರೆ ,ಸದ್ಯದಲಿಯೇ ಬಿಡುಗಡೆಗೊಳ್ಳಲಿದೆ
    ,ನಿಮ್ಮ ಬೆಂಬಲ ಪ್ರೋತ್ಸಾಹ ಸದಾ ಇರಲಿ ,ಧನ್ಯವಾದಗಳು

    ReplyDelete
  4. ಇದೇ ಲೇಖನವನ್ನು ಮೊನ್ನೆ ಉದಯವಾಣಿಯಲ್ಲಿ ಓದಿದ ನೆನಪು. ಆದರೆ ಬರೆದವರು ಗಣೇಶ್ ಅಮೀನ್ ಸಂಕಮಾರ್ ಅಂತ ಇದ್ದ ಹಾಗಿತ್ತು..?!

    ReplyDelete
    Replies
    1. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ,ಬಲಿಯ ಕುರಿತಾದ ಲೇಖನ ಇರಬುಹುದು ಇದರ ಡಿಟ್ಟೋ ಕಾಪಿ ಇರಲಾರದು .ಇದು ಎಲ್ಲೂ ಈ ತನಕ ಪಬ್ಲಿಶ್ ಆಗಿಲ್ಲ ,ಇದು2008 ರಲ್ಲಿ ಹಂಪಿ ವಿಶ್ವ ವಿದ್ಯಾಲಯಕ್ಕೆ ಸಲ್ಲ್ಲಿಸಲಾದ ನನ್ನ ph D ಮಹಾ ಪ್ರಬಂಧದ ಬೆರ್ಮೆರ್ ಮತ್ತು ಬಲೀಂದ್ರ ಕುರಿತು ಇರುವ ಸಣ್ಣ ಭಾಗ .ಇದು ಈಗ ಪ್ರಕಟವಾಗುತ್ತಿದೆ ಗಣೇಶ ಅಮೀನ್ ಸಂಕಮಾರು ನನಗೆ ಆತ್ಮೀಯರಾದ ಕೂಡ ಜಾನಪದ ವಿದ್ವಾಂಸರು
      ಬಲೀಂದ್ರ ಲೆಪ್ಪು ಆಚರಣೆಗಳು ಆತಾ ಮೋಸ ಹೋದ ತುಳುವರ ಹಿರಿಯ ಅರಸ ಇರಬಹುದು ಎನ್ನುವ ವಿಚಾರ ಈಗಾಗಲೇ ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ಚರ್ಚೆಗೆ ಒಳಗಾದ ವಿಚಾರ ,ಬೆರ್ಮೆರ್ ಆರಾಧನೆ ಮತ್ತು ಬಲೀನ್ದ್ರನ ಸಮನ್ವಯ ಮಾತ್ರ ನನ್ನ ಚಿಂತನೆ ಸಂಶೋಧನೆ ಇದು ನನ್ನ ಥೀಸಿಸ್ ಬಿಟ್ಟರೆ ಬೇರೆಲ್ಲೂ ಇಲ್ಲ. ಸಾಧ್ಯವಾದರೆ ನಾನು ಅವರ ಲೇಖನ ಓದುತ್ತೇನೆ
      ನಿಮ್ಮ ಬೆಂಬಲಕ್ಕೆ ಧನ್ಯವಾದಗಳು

      Delete
  5. ,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ,ಬಲಿಯ ಕುರಿತಾದ ಲೇಖನ ಇರಬುಹುದು ಇದರ ಡಿಟ್ಟೋ ಕಾಪಿ ಇರಲಾರದು .ಇದು ಎಲ್ಲೂ ಈ ತನಕ ಪಬ್ಲಿಶ್ ಆಗಿಲ್ಲ ,ಇದು2008 ರಲ್ಲಿ ಹಂಪಿ ವಿಶ್ವ ವಿದ್ಯಾಲಯಕ್ಕೆ ಸಲ್ಲ್ಲಿಸಲಾದ ನನ್ನ ph D ಮಹಾ ಪ್ರಬಂಧದ ಬೆರ್ಮೆರ್ ಮತ್ತು ಬಲೀಂದ್ರ ಕುರಿತು ಇರುವ ಸಣ್ಣ ಭಾಗ .ಇದು ಈಗ ಪ್ರಕಟವಾಗುತ್ತಿದೆ ಗಣೇಶ ಅಮೀನ್ ಸಂಕಮಾರು ನನಗೆ ಆತ್ಮೀಯರಾದ ಕೂಡ ಜಾನಪದ ವಿದ್ವಾಂಸರು
    ಬಲೀಂದ್ರ ಲೆಪ್ಪು ಆಚರಣೆಗಳು ಆತಾ ಮೋಸ ಹೋದ ತುಳುವರ ಹಿರಿಯ ಅರಸ ಇರಬಹುದು ಎನ್ನುವ ವಿಚಾರ ಈಗಾಗಲೇ ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ಚರ್ಚೆಗೆ ಒಳಗಾದ ವಿಚಾರ ,ಬೆರ್ಮೆರ್ ಆರಾಧನೆ ಮತ್ತು ಬಲೀನ್ದ್ರನ ಸಮನ್ವಯ ಮಾತ್ರ ನನ್ನ ಚಿಂತನೆ ಸಂಶೋಧನೆ ಇದು ನನ್ನ ಥೀಸಿಸ್ ಬಿಟ್ಟರೆ ಬೇರೆಲ್ಲೂ ಇಲ್ಲ. ಸಾಧ್ಯವಾದರೆ ನಾನು ಅವರ ಲೇಖನ ಓದುತ್ತೇನೆ
    ನಿಮ್ಮ ಬೆಂಬಲಕ್ಕೆ ಧನ್ಯವಾದಗಳು

    ReplyDelete
  6. Nange dodda dvandva, Subramanya mathu naaga bemmer obbareya?? Tulu naadina ella kade,lekkesiri, bemmer, naaga anta poojistaare, aadre elliyu subramanya kaana sigodila

    ReplyDelete
    Replies
    1. ಸುಬ್ರಹ್ಮಣ್ಯ ಮತ್ತು ನಾಗ ಬೇರೆ ಬೇರೆ,ಈ ಬಗ್ಗೆ ನನ್ನ ಮೊದಲ ಪಿಎಚ್ ಡಿ ಮಹಾಪ್ರಬಂಧ " ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ಕೃತಿಯಲ್ಲಿ ಇದೆ,ಧನ್ಯವಾದಗಳು

      Delete
  7. ತುಳುನಾಡಿನಲ್ಲಿ ಬಲೀಂದ್ರ ಅಲಂಕಾರಕ್ಕೆ ಬಳಸುವ ಕಾಯಿಗಳು ಮತ್ತು ಪುಷ್ಪಗಳ ಬಗ್ಗೆ ಒಂದಿಷ್ಟು ಮಾಹಿತಿ ಕೊಡಬಹುದ??

    ReplyDelete
  8. ತುಳುನಾಡಿನಲ್ಲಿ ಬಲೀಂದ್ರ ಅಲಂಕಾರಕ್ಕೆ ಬಳಸುವ ಕಾಯಿಗಳು ಮತ್ತು ಪುಷ್ಪಗಳ ಬಗ್ಗೆ ಒಂದಿಷ್ಟು ಮಾಹಿತಿ ಕೊಡಬಹುದ??

    ReplyDelete
  9. ಇಲ್ಲಿ ನಾವು ಬಲಿ ಲೆಪ್ಪು ಸರಿಯಾಗಿ ಗಮನಿಸಿದರೆ ಆ ಲೆಪ್ಪಿನ ಒಳ ಅಂಶ ಬಲಿ ಪುನಃ ತನ್ನ ನಾಡಿಗೆ ವಾಪಸ್ ಬರಬಾರದು ಎನ್ನುವ ಹಾಗೆ ಇದೆ. ಕರ್ಗಲ್ಲ್ ಕಾಯಾನಗಾ, ಬೊಲ್ಗಲ್ಲ್ ಪೂವಾನಗಾ
    ಉರ್ದು ಮದ್ದೊಲಿ ಆನಗಾ, ಗೊಡ್ಡೆರ್ಮೆ ಗೋಣೆ ಆನಗಾ
    ಉಪ್ಪು ಕರ್ಪೂರಾನಗಾ, ಜಾಲ್‍ಪಾದೆ ಆನಗಾ. ಹೀಗೆ ಅವನು e ರೀತಿ ಆಗುವಾಗ ಬಲಿಯೇಂದ್ರ ಪೊಟ್ಟು ಗಟ್ಟಿ ಪೊಡಿ ಬಜಿಲ ಪೊಲಿ ಕೊನೊವೊರೆ
    ಕೊಟ್ಟುಗು ಗೊಂಡೆ ಪೂ ಕಟ್‍ದ್ ಬಲ ಬಲೀಂದ್ರ” ಎಂದು ತಿಳಿಸಿದ್ದಾರೆ. ಯಾಕೆಂದರೆ ಇದು ಆಗುವುದು ಸುಲಭದ ಮಾತು ಅಲ್ಲ. ಇದು ನೋಡಿದ್ರೆ ಬಲಿ ವಾಪಸ್ ಬರುವುದು ಇಷ್ಟ ವಿಲ್ಲದ ಹಾಗೆ ಇದೆ. ತಾವು ಇದರ ಬಗ್ಗೆ ಸರಿಯಾಗಿ ತಿಳಿಸಿದರೆ ಉಪಯೋಗವಾಗಬಹುದು.

    ReplyDelete
    Replies
    1. ನಾನು ತಿಳಿದ ಪ್ರಕಾರ ಅವನಿಗೆ ಆಟಿದ ಅಮಾವಾಸ್ಯೆ , ಸೋಣದ ಸಂಕ್ರಾಂತಿ, ಬೊಂತೆಲ್ದ ಕೊಡಿ ಪರ್ಬೋಗ್ ಮೂಜಿ ದಿನತ ಬಲಿ ಆಜಿ ದಿನತಾ ಪೊಲಿ ಕೊನೋಲ ಬಲಿಯೇಂದ್ರ. ಈ ರೀತಿ ಬಾ ಎನ್ನುವ ಹಾಗೆ ವಿವರಿಸಿದರೆ. ಲೆಪ್ಪೂ ವಿನಲ್ಲಿ ತಿಳಿಸಿದ ಹಾಗೆ ನಡೆದ ದಿನ ಅವನು ಪುನಃ ತನ್ನ ರಾಜ್ಯವನ್ನು ವಾಪಸ್ ಪಡೆಯುವ ಎನ್ನುವ ಹಾಗೆ ಆರ್ಥ ಬರುತ್ತದೆ.

      Delete