ಒಂದು ಕೋಣ ತನ್ನನ್ನು ಮಗನಂತೆ
ಪೊರೆದ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ
?ಆದರೆ ಇದು ನಿಜ !
1985ರಲ್ಲಿ ಹುಟ್ಟಿ ಜೂನ್ 6,
2009 ರ ವರೆಗೆ ಓಡುತ್ತಲೇ ಬದುಕಿದ ಕಂಬಳ ಓಟದ ರಾಜ ನಾಗರಾಜ ತನ್ನನ್ನು ಪೊರೆದ ಒಡೆಯನಿಗೆ
ರಾಜ್ಯೋತ್ಸವ ಪ್ರಶಸ್ತಿಯನ್ನೂ ತಂದು ಕೊಟ್ಟಿದ್ದಾನೆ! .ನಾಗರಾಜನ ಒಡೆಯ ಪಯ್ಯೊಟ್ಟು ಸದಾಶಿವ
ಸಾಲಿಯಾನ್ ಅವರಿಗೆ ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ -2013 ಲಭಿಸಿದೆ
1988 ರಲ್ಲಿ ಪಲ್ಯೊಟ್ಟು ಮನೆಗೆ
ಸೇರಿದ ನಾಗರಾಜ ತನ್ನ ನಾಲ್ಕನೇ ವಯಸ್ಸಿನಿಂದ 500 ಕ್ಕೂ ಹೆಚ್ಚು ಬಾರಿ ಕಂಬಳ ಕೋಣಗಳ
ಸ್ಪರ್ಧೆಯಲ್ಲಿ ಭಾಗವಹಿಸಿ 115 ಬಾರಿ ಗೆದ್ದು ಬಂಗಾರದ ಪದಕಗಳನ್ನು ಪಡೆದಿದ್ದಾನೆ.ಕಂಬಳ ಕೋಣಗಳ
ಅನಭಿಷಿಕ್ತ ದೊರೆ ಈತ ಶರವೇಗದ ಸರದಾರ.ಇವನ ಓಟದ ವೇಗ 100 ಮೀಟರ್ 12 ಸೆಕೆಂಡ್ಸ್ (ಉಸೇನ್ ಬೋಲ್ಟ್ 100 ಮೀಟರ್ಸ್ 10 ಸೆಕೆಂಡ್ಸ್ ).ಕಂಬಳ ಓಟದಲ್ಲ್ಲಿ ಇವನ ರೆಕಾರ್ಡ್ ಇದು !ಈ ಕೋಣದ ಅದ್ಭುತ ಸಾಧನೆಯನ್ನು ಗೌರವಿಸಿದ ಕೇಂದ್ರ ಸರಕಾರದ
ಅಂಚೆ ಇಲಾಖೆ ಈತನ ಚಿತ್ರದೊಂದಿಗೆ ಅಂಚೆ
ಚೀಟಿಯನ್ನುಕೂಡಾ ಹೊರ ತಂದಿದೆ .
ನಾಗರಾಜ ಕಂಬಳ ಓಟದ ಕೋಣ ವಾಗಿದ್ದರೂ ಪಯ್ಯೊಟ್ಟು ಸದಾಶಿವ ಸಾಲ್ಯಾನರ ಮನೆಯಲ್ಲಿ ಮನೆ ಪ್ರೀತಿಯಿಂದ ಮಗನಂತೆ ಬೆಳೆದಿದೆ .24 ವರ್ಷ ಕಾಲ ಬದುಕಿದ ಈ ಕೋಣ ತನ್ನ ನಾಲ್ಕನೇ ವರ್ಷದಿಂದ 20 ವರ್ಷ ತನಕ 500 ಕ್ಕೂ ಹೆಚ್ಚು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನನ್ನು ಮಗನಂತೆ ಸಲಹಿದ ಒಡೆಯನಿಗೆ ಚಿನ್ನದ ಪದಕಗಳ ಸುರಿಮಳೆಯನ್ನೇ ತಂದು ಕೊಟ್ಟಿದ್ದಾನೆ.ಕಳೆದ 50 ವರ್ಷಗಳಿಂದ ಕಂಬಳ ಕ್ರೀಡೆಯಲ್ಲಿ ಪಯ್ಯೊಟ್ಟು ಮನೆತನ ಸಕ್ರಿಯವಾಗಿ ಭಾಗವಹಿಸಿದೆ.
ಕಳೆದ 20 ವರ್ಷಗಳಿಂದ ನಾಗರಾಜನ ಕಾರಣಕ್ಕೆ ಇನ್ನಷ್ಟು ಸ್ಪೂರ್ತಿಯಿಂದ ಭಾಗವಹಿಸಿ ಈ ಕ್ರೀಡೆಯನ್ನು ಪ್ರೋತ್ಸಹಿಸಿದ್ದಲ್ಲದೆ ನೂರಾ ಹದಿನೈದು ಪದಕಗಳನ್ನು ಗೆದ್ದಿದ್ದಾರೆ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಅವರು .ಈ ಕಾರಣಕ್ಕೆ ಅವರಿಗೆ ಈ ಭಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ

ನಾಗರಾಜ ಈಗಿಲ್ಲವಾದರೂ ಆತನ ಕೀರ್ತಿ ಶಾಶ್ವತವಾಗಿದೆ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕೋಣ ನಾಗರಾಜನಿಗೂ ,ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪಡೆದ ನಾಗರಾಜನ ಒಡೆಯ ಪಯ್ಯೊಟ್ಟು ಸದಾಶಿವ ಸಾಲಿಯಾನ್ ಅವರಿಗೂ ಹಾರ್ದಿಕ ಅಭಿನಂದನೆಗಳು (ಮಾಹಿತಿ ಮತ್ತು ಚಿತ್ರ ಒದಗಿಸಿ ಕೊಟ್ಟವರು –ಶ್ರೀ ಮಧುಸೂದನ ಶೆಟ್ಟಿ ,ಮಂಗಳೂರು ಇವರಿಗೆ ಕೃತಜ್ಞತೆಗಳು )ಚಿತ್ರ ಕೃಪೆ: ರೋನ್ಸ್ ಬಂಟ್ವಾಳ ಇವರಿಗೂ ಹೃತ್ಪೂರ್ವಕ ಕೃತಜ್ಞತೆಗಳು
like ur information
ReplyDeleteಅಭಿಮಾನದಿಂದ ಓದಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು
Delete