ಒಂದೇ ದೈವ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಆರಾಧನೆ ಹೊಂದುತ್ತದೆ ಎಂಬುದು ಒಂದು ಸಾಮಾನ್ಯವಾದ ವಾದ .ಆದರೆ ಹೆಸರು ಒಂದೇ ಇದ್ದರೂ ಅರಧಿಸಲ್ಪಡುವ ದೈವಗಳು ಬೇರೆ ಬೇರೆ ಆಗಿರುವ ಬಗ್ಗೆ ಅನೇಕ ಕಡೆ ಮಾಹಿತಿಗಳು ಸಿಗುತ್ತವೆ ,ಉದರ ಚಾಮುಂಡಿ ಗುಡ ಚಾಮುಂಡಿ ಕೆರೆ ಚಾಮುಂಡಿ ಕರಿ ಚಾಮುಂಡಿ ಎಲ್ಲವೂ ಒಂದೇ ದೈವದ ಬೇರೆ ಬೇರೆ ಹೆಸರುಗಳಲ್ಲ .ಹೆಸರು ಒಂದೇ ಆಗಿದ್ದರೂ ಇವುಗಳು ಬೇರೆ ಬೇರೆ ದೈವತಗಳಾಗಿವೆ .ಹೆಸರು ಒಂದೇ ಇದ್ದರೂ ಬೇರೆ ಬೇರೆ ಶಕ್ತಿಗಳ ಆರಾಧನೆ ತುಳುನಾಡಿನಲ್ಲಿ ಇರುವ ಬಗ್ಗೆ ಅನೇಕ ಆಧಾರಗಳು ನಿದರ್ಶನಗಳು ಸಿಕ್ಕಿವೆ . ಇದಕ್ಕೆ ಒಂದು ನಿದರ್ಶನ ಕಮಲ ಶಿಲೆಯ ಮುಂಡಂತ್ತಾಯ ದೈವದ ಆರಾಧನೆ .
ತುಳುನಾಡಿನಲ್ಲಿ ಮುಡದೇರ್ ಕಾಲ ಭೈರವ ,ಮುಂಡತ್ತಾಯ,ಹೆಸರಿನ ದೈವ ಬಹಳ ಪ್ರಸಿದ್ಧವಾದುದು .ಮೂಡು ದಿಕ್ಕಿನಿಂದ ಇಳಿದ ಬಂದ ಕಾರಣ ಮುಂಡತ್ತಾಯ ಎಂಬ ಹೆಸರು ಬಂತು ಶಿವನ ಹಣೆಯಿಂದ ಎಂದರೆ ಮುಂಡದಿನದ ಉದಿಸಿದ ಕರಣ ಮುಂಡತ್ತಾಯ ಎಂಬ ಹೆಸರು ಬಂತು ಇತ್ಯಾದಿಯಾಗಿ ಅನೇಕ ಅಭಿಪ್ರಾಯಗಳಿವೆ ,
ಆದರೆ ಕಮಲಶಿಲೆಯ ದೇವಾಲಯದಲ್ಲಿ ಆರಾಧಿಸಲ್ಪಡುವ ಮುಂಡಂತಾಯ ಮುಂಡತ್ತಾಯ ದೈವವಲ್ಲ ಇದು ಬೇರೆಯೇ ಒಂದು ದೈವ .(C).ಡಾ.ಲಕ್ಷ್ಮೀ ಜಿ ಪ್ರಸಾದ
"ಈತ ಮೂಲತ ಓರ್ವ ಮಲಯಾಳ ತಂತ್ರಿ .ದೇವಿಯ ಅನುಗ್ರಹವನ್ನು ಪಡೆದಿರುತ್ತಾನೆ.ಮುಂದೆ ದೈವತ್ವ ಪಡೆದು ಅಲ್ಲಿ ಆರಾಧಿಸಲ್ಪಡುತ್ತಾನೆ"ಎಂಬ ಮಾಹಿತಿಯನ್ನು ಶ್ರೀಯುತ ರವೀಶ ಆಚಾರ್ಯ ಅವರು ನೀಡಿದ್ದಾರೆ .
ಸಾಮಾನ್ಯವಾಗಿ ದೇವರ ಅನುಗ್ರಹಕ್ಕೆ ಪಾತ್ರರಾದವರು ದೇವಾಲಯ ಕಟ್ಟಿಸಿದವರು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ಅನೇಕ ಕಡೆ ಕಾಣಿಸಿಕೊಂಡಿದೆ ,ಕಾನಲ್ತಾಯ ಕೂಡ ಮೂಲತ ಓರ್ವ ಬ್ರಾಹ್ಮಣ ಮಂತ್ರವಾದಿ ಕಾಳಿಕಾಂಬೆಯ ಅನುಗ್ರಹ ಪಡೆದು ದೈವತ್ವ ಪಡೆದು ಆರಾಧಿಸಲ್ಪಡುವ ದೈವತ
ಅಂತೆಯೇ ಕಮಲಾ ಶಿಲೆಯ ದೇವಿಯ ಅನುಗ್ರಹ ಪಡೆದ ಮಲಯಾಳ ತಂತ್ರಿ ದೈವತ್ವ ಪಡೆದು ಆರಧಿಸಲ್ಪತ್ತಿರುವ ಸಾಧ್ಯತೆ ಇದೆ
ಕಮಲ ಶಿಲೆ ದೇವಾಲಯದಲ್ಲಿ ಮುಂಡಂತಾಯ ನ ಒಂದು ಮೂರ್ತಿ ಇದೆ ಇದು ಕುದುರೆ ಏರಿದ ವೀರನಂತೆ ಕಾಣಿಸುತ್ತದೆ .ಒಂದು ಕೈಯಲ್ಲಿ ನವಿಲು ಗಿರಿಯ ಕಟ್ಟನ್ನು,ಇನ್ನೊಂದು ಕೈಯಲ್ಲಿ ಮಂತ್ರ ದಂಡವನ್ನು ಹಿಡಿದ ಕುದುರೆ ಏರಿದ ಮೂರ್ತಿ ಇದು'ಕುದುರೆ ಏರಿರುವುದು ಈತ ಮೂಲತ ಅರಸು ಆಗಿದ್ದನೆ ?ಎಂಬ ಸಂಶಯ ಉಂಟುಮಾಡುತ್ತದೆ .
ಸಾಮಾನ್ಯವಾಗಿ ದೇವಾಲಯವನ್ನು ಕಟ್ಟಿಸಿದ ಅರಸುಗಳ ಒಂದು ವಿಗ್ರಹವನ್ನು ದೇವಾಲಯದ ಒಂದು ಕಡೆಪ್ರತಿಷ್ಟಾಪಿಸಿ ದೈವದ ನೆಲೆಯಲ್ಲಿ ಆರಾಧಿಸುವುದುಕಂಡುಬರುತ್ತದೆ ,ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಬ್ರಾಹ್ಮ ಕಾರಿಂಜೆತ್ತಾಯ ಎಂಬ ದೈವವಾಗಿ ಅಲ್ಲಿ ಆರಧಿಸಲ್ಪದುತ್ತಾ ಇದ್ದಾನೆ ಅಂತೆಯೇ ಸುಳ್ಯ ಚೆನ್ನ ಕೇಶವ ದೇವಾಲಯವನ್ನು ಕಟ್ಟಿದ ಬಲ್ಲಾಳ ಅರಸು ಚೆನ್ನಿಗರಾಯ ನಿಗೆ ಅಲ್ಲಿ ಆರಾಧನೆ ಇದೆ(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಾಗೆಯೇ ಕಮಲಾ ಶಿಲೆಯ ದೇವಾಲಯವನ್ನು ಕಟ್ಟಿಸಿದಾತನೆ ಮುಂಡತ್ತಾಯ/ಮುಂಡಂತಾಯ ಎಂಬಹೆಸರಿನಲ್ಲಿದೈವತ್ವಪಡೆದುಆರಾಧಿಸಲ್ಪಡುವ ಸಾಧ್ಯತೆ ಇದೆ
ಈಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ
ಮಾಹಿತಿ ಮತ್ತು ಚಿತ್ರವನ್ನು ನೀಡಿದ ರವೀಶ ಆಚಾರ್ಯ ಅವರಿಗೆ ಧನ್ಯವಾದಗಳು
No comments:
Post a Comment