ಚಿತ್ರ ಕೃಪೆ :kcn ಮತ್ತು ಮನೋಜ್ ಕುಂಬ್ಳೆ
ತುಳುವರ ಭೂತಾರಾಧನೆ ಒಂದು ಅನನ್ಯ ಸಂಸ್ಕೃತಿ ,ಇಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ .ಅದಕ್ಕೆ ಜಾತಿ ಧರ್ಮ ದೇಶದ ಗಡಿ ಕೂಡ ಇಲ್ಲ
ಅನೇಕ ಅಧಿಕಾರಿಗಳು ಕೂಡ ಇಲ್ಲಿ ದೈವತ್ವ ಪಡೆದಿರುವುದು ಅಲ್ಲಲ್ಲಿ ಕಂಡು ಬಂರುತ್ತದೆ .ಮಂಜೇಶ್ವರ ದ ಮೀಯ ಪದವು ಸಮೀಪದ ಪೊಳ್ಳ ಕಜೆ ಎಂಬಲ್ಲಿ ಬ್ರಿಟಿಶ್ ಸುಭೇದಾರನೊಬ್ಬ ದೈವತ್ವ ಪಡೆದು ಕನ್ನಡ ಬೀರ ಎಂಬ ದೈವವಾಗಿ ನೆಲೆ ನಿಂತಿದ್ದಾನೆ ,
ಅಂತೆಯೇ ಉಡುಪಿ -ಕಾಪಿನಲ್ಲಿ ಗುರಿಕ್ಕಾರ ಸೇನವ ಪಟೇಲ ,ಪೋಲಿಸ್ ,ಕಳ್ಳ ಭೂತಗಳಿಗೆ ಆರಾಧನೆ ಇದೆ ,
ಕಾಸರಗೋಡು ಪರಿಸರದಲ್ಲಿ ಒಂದು ಪೋಲಿಸ್ ಭೂತಕ್ಕೆ ಆರಾಧನೆ ಇದೆ .ಇದು ಮಲಯಾಳ ಪರಿಸರದಲ್ಲಿ ಆರಾಧನೆ ಗೊಳ್ಳುತ್ತಿದ್ದು ಈ ದೈವವನ್ನು ಪೋಲಿಸ್ ತೆಯ್ಯಂ ಎಂದು ಕರೆದಿದ್ದಾರೆ ತುಳುವರ ದೈವ ಪದ ಮಲಯಾಳದಲ್ಲಿ ತೆಯ್ಯಂ ಎಂದು ಬಳಕೆಯಾಗುತ್ತದೆ ,
ಕಾಸರಗೋಡು ಸಮೀಪದಲ್ಲಿರುವ ಪದನ್ನಕ್ಕಡ್ ಪಾನುಕ್ತಾಯತ್ ತರವಾಡು ಕುಟುಂಬದಲ್ಲಿ ಕರಿ ಚಾಮುಂಡಿ ದೈವದ ಆರಾಧನೆ ಸಮಯದಲ್ಲಿ ಪೋಲಿಸ್ ತೆಯ್ಯಂ ಗೆ ಆರಾಧನೆ ಮಾಡುತ್ತಾರೆ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಈ ಮನೆತನಕ್ಕೆ ಸೇರಿದ ಹಿರಿಯರಾದ ಎಡಚೇರಿ ಕಾರ್ನವೆರ್ ಕರಿಚಾಮುಂಡಿ ದೈವದ ಕಳಿಯಾಟ (ಮಲಯಾಳದಲ್ಲಿ ಭಗವತಿ ಹಾಗು ಇತರ ದೈವಗಳಿಗೆ ನಡೆಸುವ ವೈಭವದ ಕೋಲ /ನೇಮದ ಒಂದು ಪ್ರಕಾರ ಕಳಿಯಾಟ ) ನೋಡಲು ಹೋಗುತ್ತಾರೆ .ಅಲ್ಲಿನ ಭಕ್ತಿ ವೈಭವವನ್ನು ನೋಡಿ ಅವರು "ತಮ್ಮ ತರವಾಡಿನಲ್ಲಿ ಕೂಡ ಇಂಥಹ ಒಂದು ಕಳಿಯಾಟ ಉತ್ಸವ ನಡೆಯಬೇಕು ಎಂದು ಕರಿ ಚಾಮುಂಡಿ ದೈವದಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ .
ಅಲ್ಲಿಂದ ದೈವಗಳ ಅನುಗ್ರಹ ಪಡೆದು ತಮ್ಮ ಮನೆಗೆ ಹಿಂದಿರುಗುತ್ತಾರೆ .
ಹಿಂತಿರುಗಿ ಬರುವ ದಾರಿಯಲ್ಲಿ ನಾಯನ್ಮಾರೆರ್ ನಡುವೆ ಯಾವುದೊ ಕಾರಣಕ್ಕೆ ವಿವಾದ ಉಂಟಾಗಿ ಹೊಡೆದಾಟ ಆಗುತ್ತದೆ .ಅದನ್ನು ಬಿಡಿಸಲೆಂದು ಬಂದ ಪೋಲಿಸ್ ಒಬ್ಬಾತನಿಗೆ ಕತ್ತಿಯ ಏಟು ಬಿದ್ದು ಆಟ ನೆಲದಲ್ಲಿ ಬಿದ್ದು ಹೊರಳಾಡುತ್ತಿರುತ್ತಾನೆ.ಅವನನ್ನು ತನ್ನ ಮಡಿಲಲ್ಲಿ ಮಲಗಿಸಿ ನೀರು ಕುಡಿಸಿ ಉಪಚಾರ ಮಾಡುತಾರೆ ದಯಾಳುವಾದ ಎಡಚೇರಿ ಕಾರ್ನವೆರ್.ಅವರು ನೀಡಿದ ನೀರನು ಕುಡಿದು ಆ ಪೋಲಿಸ್ ಅಲ್ಲಿಯೇ ಸಾವನ್ನಪ್ಪುತ್ತಾನೆ.
ಅಲ್ಲಿನದ ಅವರು ತಮ್ಮ ತರವಾಡು ಮನೆಗೆ ಬರುತ್ತಾರೆ.
ಅಲ್ಲಿ ಅವರಿಗೆ ಕರಿಚಾಮುಂಡಿ ದೈವದ ಸಾನ್ನಿಧ್ಯ ದ ಅರಿವಾಗುತ್ತದೆ.ಜೊತೆಗೆ ಪೋಲಿಸ್ ಕೂಡ ದೈವತ್ವ ಪಡೆದು ದೈವವಾಗಿ ಕರಿಚಮುಂಡಿ ಸೇರಿಗೆಯಲ್ಲಿರುವುದು ಅವರಿಗೆ ತಿಳಿದು ಬರುತ್ತದೆ .
ಅವರು ಕರಿಚಾಮುಂದಿಗೆ ಕಳಿಯಾಟ ಮೂಲಕ ಆರಧಿಸುವಾಗ ಪೋಲಿಸ್ ತೆಯ್ಯಂ ಗೆ ಕೂಡ ಕೋಲ ಕೊಟ್ಟು ಆರಾಧಿಸುತ್ತಾರೆ.
ಮುಂದೆ ಅವರ ಕುಟುಂಬದವರು ಈ ಪರಂಪರೆಯನ್ನು ಮುಂದುವರಿಸಿದರು
ಪೋಲಿಸ್ ತೆಯ್ಯಂ ತನ್ನ ಮೂಲ ವೃತ್ತಿಗೆ ಅನುಗುಣವಾಗಿ ಬೀಡಿ ಸೇದಿದವರನ್ನು ಹಿಡಿದು ಶಿಕ್ಷಿಸುವುದು ,ಜನ ಗುಂಪು ಸೇರಿದಾಗ ಅವರನ್ನುಚದುರಿಸಿ ಓಡಿಸಿ ದೂರ ಮಾಡುವುದೇ ಮೊದಲಾದ ಅಭಿನಯವನ್ನು ಮಾಡುತ್ತದೆ ,ಪೂರ್ತಿಯಾಗಿ ಪೋಲಿಸ್ ra ವೇಷ ಭೂಷಣ ಈ ದೈವಕ್ಕೆ ಇರುತ್ತದೆcopy rights reserved - -ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ .kasaragodunews internet portal
http://kasaragodchannel.com/%E0%B4%AA%E0%B5%8B%E0%B4%B2%E0%B5%80%E0%B4%B8%E0%B5%8D-%E0%B4%A4%E0%B5%86%E0%B4%AF%E0%B5%8D%E0%B4%AF%E0%B4%82-%E0%B4%85%E0%B4%B0%E0%B4%99%E0%B5%8D%E0%B4%99%E0%B4%BF%E0%B4%B2%E0%B5%86%E0%B4%A4%E0%B5%8D/
ಕನ್ನಡಕ್ಕೆ ಸಂಗ್ರಹಾನುವಾದ ಮಾಡಿ ಕೊಟ್ಟ ಶ್ರೀ ಶಂಕರ್ ಕುಂಜತ್ತೂರು ಇವರಿಗೆ ಕೃತಜ್ಞತೆಗಳು
No comments:
Post a Comment