Thursday, 13 April 2017

ಸಾವಿರದೊಂದು ಗುರಿಯೆಡೆಗೆ 341-342 ಕರೊಟ್ಟಿ ಮತ್ತು ಕುಂಮಲುನ್ನಿ © ಡಾ.ಲಕ್ಷ್ಮೀ ಜಿ ಪ್ರಸಾದ



ತುಳುನಾಡಿನ ದೈವಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದಾರೆ.ಕೋಟಿ ಚೆನ್ನಯರು,ಮುದ್ದ ಕಳಲ,ಬಸ್ತಿ ನಾಯಕ, ತಿಮ್ಮಣ್ಣ ನಾಯಕ,ಬಚ್ಚನಾಯಕ ಕೋಟಿನಾಯಕ,ಕೋಟೆದ ಬಬ್ಬು,ಕೊರಗತನಿಯ ಮೊದಲಾದವರು ಅಸಾಧಾರಣ ಸಾಹಸ ಮೆರೆದು ಕಾಲಾಂತರದಲ್ಲಿ ದೈವತ್ವ ಪಡೆದ ಐತಿಹಾಸಿಕ ಪುರುಷರೇ ಆಗಿದ್ದಾರೆ .ಇಂತಹ ಮಾನವ ಮೂಲ ದೈವಗಳಲ್ಲಿ ಅನೇಕ ಬ್ರಾಹ್ಮಣ ಮೂಲದ ವ್ಯಕ್ತಿಗಳು ಇದ್ದಾರೆ.ಬ್ರಾಹ್ಮಣತಿ ಭೂತ,ಮುಕಾಂಬಿ ಗುಳಿಗ,ಕೆರೆ ಚಾಮುಂಡಿ, ಮುಂಡೆ ಬ್ರಾಂದಿ,ಇಲ್ಲತ್ತಮ್ಮ ಕುಮಾರಿ,ನಾರಳತ್ತಾಯ,ಕಾರಿಂಜೆತ್ತಾಯ,ಅಡ್ಕತ್ತಾಯ ,ನಾರಾಯಣ ಮಾಣಿಲು,ಅಯ್ಯರ ಕೋಲ ಮೊದಲಾದವರು ಬ್ರಾಹ್ಮಣ ಮೂಲದ ದೈವಗಳು.
ಒಂದು ಕುಂದ ನಲವತ್ತು ಭೂತಗಳು,ನೂರೊಂದು ಮಲೆ ಭೂತಗಳು ,ಸಾವಿರದೊಂದು ಭೂತಗಳು ಮೊದಲಾಗಿ ಸಮೂಹ ಆರಾಧನೆ ನಡೆಯುವಲ್ಲಿ ನಡು ನಡುವೆ ಹಾಸ್ಯವನ್ನು ಅಭಿವ್ಯಕ್ತಿ ಮಾಡಿ ನಗಿಸುವ ವಿದೂಷಕ ನನ್ನು ಹೋಲುವ ದೈವಗಳಿವೆ ನಾರಾಯಣ ಮಾಣಿಲು,ಎರು ಶೆಟ್ಟಿ ,ಬ್ರಾಣ ಭೂತ ಮತ್ತು ಮಾಣಿ ಭೂತ ಅಯ್ಯರ ಕೋಲ ಮೊದಲಾದವುಗಳಲ್ಲಿ ಹಾಸ್ಯವಿದೆ .ಇದು‌ ಮಲೆಯಾಳ ಪರಂಪರೆಯ ಭೂತಾರಾಧನೆ ತೆಯ್ಯಂ ನಲ್ಲಿ ಕೂಡ ಇದೆ ಪೀಯಾಯಿ ತೆಯ್ಯಂ ಹಾಸ್ಯಕ್ಕೆ ಪ್ರಸಿದ್ಧಿ ಪಡೆದಿದೆ.
ಇದೇ ರೀತಿ ಕೆಲವೆಡೆ ಕರೊಟ್ಟಿ ಮತ್ತು ಕುಮ್ಮುಲುನ್ನಿ ಎಂಬ ಎರಡು ಬ್ರಾಹ್ಮಣ ತೆಯ್ಯಂ ಗಳಿಗೆ ಆರಾಧನೆ ಇರುವ ಬಗ್ಗೆ ಮನೋಜ್ ಕುಂಬಳೆ ಅವರು ಮಾಹಿತಿ ನೀಡಿದ್ದಾರೆ..ಬ್ರಾಹ್ಮಣನೊಬ್ಬ ಹಾಸ್ಯ ಮಾಡಿಕೊಂಡು ಊಟ ಮಾಡುವ ಅಭಿನಯವನ್ನು ಕುಮ್ಮುಲುನ್ನಿ ದೈವ ಮಾಡುತ್ತದೆ .ಊಟ ಕೇಳಿಕೊಂಡು ಬರುವ ಅಭಿನಯವನ್ನು ಕರೊಟ್ಟಿ ದೈವ ಮಾಡುತ್ತದೆ .ಈ ದೈವಗಳ ವೇಷ ಭೂಷಣ ಬ್ರಾಹ್ಮಣ ರನ್ನು ಹೋಲುತ್ತದೆ .ಅವರಾಡುವ ಮಾತು ಕೂಡ ಮಲೆಯಾಳ ಬ್ರಾಹ್ಮಣರ ಆಡು ಭಾಷೆ ಎಂದು ಮನೋಜ್ ಅವರು ತಿಳಿಸಿದ್ದಾರೆ

No comments:

Post a Comment