ದೈವತ್ವ ಪಡೆದು ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ.ಇಲ್ಲಿ ಯಾರು ಯಾವಾಗ ಯಾಗೆ ಹೇಗೆ ದೈವತ್ವ ಪಡೆಯುತ್ತಾರೆಂದು ಹೇಳುವುದಕ್ಕೆ ಇದಮಿತ್ಥಂ ಎಂಬ ಸಿದ್ದಾಂತವಿಲ್ಲ.
ಸಾಮಾನ್ಯವಾಗಿ ಮಾನವರಾಗಿ ಹುಟ್ಟಿ ಅತಿ ಮಾನುಷ ಸಾಹಸಮೆರೆದವರು ,ಅನ್ಯಾಯವನ್ನು ಪ್ರಶ್ನಿಸಿದವರು ವಿಧಿ ನಿಷೇಧ ಗಳನ್ನು ಮೀರಿ ದುರಂತವನ್ನಪ್ಪಿದವರು ದೈವತ್ವ ಪಡೆದು ದೈವಗಳಾಗಿ ನೆಲೆ ನಿಂತು ಆರಾಧನೆ ಪಡೆಯುತ್ತಾರೆ .ಪ್ರಧಾನ ಭೂತಗಳ ಅನುಗ್ರಹಕ್ಕೆ ಪಾತ್ರರಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವುದು ಅನೇಕ ಕಡೆಗಳಲ್ಲಿ ಕಾಣಿಸುತ್ತದೆ.ಅಂತೆಯೇ ದೈವಕ್ಕೆ ದ್ರೋಹ ಮಾಡಿ ದುರಂತವನ್ನಪ್ಪಿದವರೂ ಅದೇ ದೈವದ ಸೇರಿಗೆಗೆ ಸಂದು ದೈವಗಳಾಗಿ ನೆಲೆ ನಿಂತಿರುವ ವಿಶಿಷ್ಟ ವಿದ್ಯಮಾನ ಕೆಲವೆಡೆ ನಡೆದಿರುವುದು ಕಂಡು ಬರುತ್ತಿದೆ .
ಕಾರ್ಯಸ್ಥನ್ / ಕರಣಿಕ ದೈವ ಕೂಡಾ ಈ ರೀತಿಯಲ್ಲಿ ದೈವತ್ವ ಪಡೆದ ಶಕ್ತಿ .
ಕಾರ್ಯಸ್ಥನ ಮೂಲತಃ ನಂಬೂದಿರಿ ಬ್ರಾಹ್ಮಣ.ದೈವಸ್ಥಾನದಲ್ಲಿ ಕರಣಿಕನಾಗಿ ಕೆಲಸ ಮಾಡುತ್ತಿರುತ್ತಾನೆ .ಒಂದು ದಿನ ಸುಳ್ಳು ಲೆಕ್ಕ ಬರೆದು ವಂಚನೆ ಮಾಡುತ್ತಾನೆ .ಆಗ ದೈವವು ಮುನಿದು ಆತನನ್ನು ಮಾಯ ಮಾಡುತ್ತದೆ.ನಂತರ ಆತ ದೈವದ ಸೇರಿಗೆಗೆ ಸಂದು ಕರಣಿಕ/ ಕಾರ್ಯಸ್ಥನ್ ದೈವವಾಗಿ ಆರಾಧನೆ ಪಡೆಯುತ್ತಾನೆ ಆ ದೈವ ತೆಂಗಿನ ಒಲಿಯಲ್ಲಿ ಲೆಕ್ಕ ಬರೆಯುವ ಅಭಿನಯವನ್ನು ಮಾಡುತ್ತಿದ್ದು ಆತ ಮೂಲತಃ ಕರಣಿಕನಾಗಿದ್ದು ಅತನ ವೃತ್ತಿಯನ್ನು ಸೂಚಿಸುತ್ತದೆ .ಈ ದೈವಕ್ಕೆ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಆರಾಧನೆ ಇದೆ ವೇಟಕರಿಮುಗನ್ ದೈವದ ಜೊತೆ ಆರಾಧನೆ ಇದೆ ©ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ಶ್ರೀಮತಿ ಪ್ರೇಮಲತಾ ಹಾಗೂ ಸುಕ್ಅತ ಫೋಟೋ ನೀಡಿದ ಮನೋಜ್ ಕುಂಬಳೆ ಅ
ವರಿಗೆ ಹೃತ್ಪೂರ್ವಕ ಧನ್ಯವಾದಗಳು

No comments:
Post a Comment